23rd October
1.SOURCE-THE HINDU EDITORIAL
http://www.thehindu.com/opinion/op-ed/do-all-women-have-a-right-to-enter-sabarimala/article19883956.ece
ಶಬರಿಮಲೆ ದೇವಸ್ಥಾನದ ಮಹಿಳೆಯರ ಪ್ರವೇಶ ನಿಷೇದ ಪ್ರಕರಣ : ಧಾರ್ಮಿಕ ನಂಬಿಕೆ V/S ಲಿಂಗ ಸಮಾನತೆ
(Do all women have a right to enter Sabarimala?)
ಈ ಆರ್ಟಿಕಲ್ ನಿಂದ UPSC/KAS ಪರೀಕ್ಷೆಗಾಗಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ಅಂಶಗಳೆಂದರೆ
ಪ್ರಮುಖ ಸುದ್ದಿ
ಶಬರಿಮಲೆ ದೇವಸ್ಥಾನದ ಪ್ರಾಮುಖ್ಯತೆ ಏನು?
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಿಸುವುದನ್ನು ಏಕೆ ನಿಷೇದಿಸಲಾಗಿದೆ ?
ಇಲ್ಲಿಯವರೆಗೆ ನಡೆದು ಬಂದದು ಏನು ?
ಈ ನಿಷೇದವು ಭಾರತದ ಸಂವಿಧಾನದ ಮೂಲಭೂತ ಹಕ್ಕಿಗೆ ಹೇಗೆ ವಿರೋಧವಾಗಿದೆ ?
ಮುಂದಿನ ಹಾದಿ
ಪ್ರಮುಖ ಸುದ್ದಿ
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡುವ ಬಗ್ಗೆ ಹಲವು ವರ್ಷಗಳಿಂದ ನಡೆಯುತ್ತಿರುವ ವಾದ ಈಗ ಇನ್ನೊಂದು ಹಂತ ತಲುಪಿದೆ. ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತಿರುವಾಂಕೂರು ದೇವಸ್ವಂ ಮಂಡಳಿಯಂಥ ಶಾಸನಾತ್ಮಕ ಮಂಡಳಿಗೆ ಅವಕಾಶವಿದೆಯೇ ಹಾಗೂ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನದ 25, 26ನೇ ಪರಿಚ್ಛೇದವನ್ನು ಇದು ಉಲ್ಲಂಘೀಸುತ್ತದೆಯೇ ಎಂಬ ಅಂಶಗಳನ್ನು ಸಾಂವಿಧಾನಿಕ ಪೀಠ ಚರ್ಚಿಸಲಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಈಗ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ಶಬರಿಮಲೆ ದೇವಸ್ಥಾನದ ಪ್ರಾಮುಖ್ಯತೆ ಏನು?
- ಇಸ್ಲಾಮಿಕ್ ಧರ್ಮದ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ನಂತರ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಎರಡನೇ ಅತಿದೊಡ್ಡ ಯಾತ್ರಾ ಸ್ಥಳವಾಗಿದೆ.
- ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.
- ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರು ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳು ಪ್ರತಿ ವರ್ಷ ಸೆಳೆಯುತ್ತದೆ.
- ಪರ್ವತಗಳನ್ನು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶಃ ಕೇರಳದೆ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ ಆಗಿದೆ.
- ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ . ದೇವಾಲಯದ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಕಳೆದ ವರ್ಷ ಅಂದಾಜು 3.5 ಕೋಟಿ ಹಿಂದೂ ಯಾತ್ರಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಿಸುವುದನ್ನು ಏಕೆ ನಿಷೇದಿಸಲಾಗಿದೆ ?
- ಶಬರಿಮಲೆ ದೇವಸ್ಥಾನಕ್ಕೆ ಋತುಸ್ರಾವವಾದ ಮಹಿಳೆಯರ ಪ್ರವೇಶವನ್ನು ಮಾತ್ರ ನಿರ್ಬಂಧಿಸಿದೆ .
- 10 ಮತ್ತು 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇಗುಲದೊಳಗೆ ಪ್ರವೇಶ ನಿಷಿದ್ಧ. ಮಹಿಳೆಯರು..CLICK HERE TO READ MORE ARTICLES