25th SEPTEMBER
1.ರಾಜಕಾರಣದಿಂದ ಅಪರಾಧಿಗಳನ್ನು ದೂರ ಇಡಲು ಸಂಸತ್ತು ಕಾನೂನು ಮಾಡಲಿ: ಸುಪ್ರಿಂಕೋರ್ಟ್
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಜನ ಪ್ರತಿನಿಧಿ ಕಾಯಿದೆ ಬಗ್ಗೆ, ರಾಜಕೀಯದ ಅಪರಾಧೀಕರಣ- ಕಾಳಜಿ, ಸವಾಲುಗಳು ಮತ್ತು ಪರಿಹಾರಗಳು.
ಪ್ರಮುಖ ಸುದ್ದಿ
- ಗಂಭೀರಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಶಾಸನಸಭೆಗಳಿಗೆ ಪ್ರವೇಶಿಸಿ ಕಾನೂನು ರೂಪಿಸುವ ಪ್ರಕ್ರಿಯೆಗಳಿಂದ ದೂರ ಇರಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯ ಅಂಶಗಳು
- ಶಾಸಕರು ಹಾಗೂ ಸಂಸದರ ಮೇಲಿನ ಕ್ರಿಮಿನಲ್ ಆರೋಪಗಳು ಸಾಬೀತಾಗಿ ಶಿಕ್ಷೆಗೊಳಗಾಗುವುದಕ್ಕೂ ಮೊದಲೇ ಅವರನ್ನು ಅನರ್ಹಗೊಳಿಸಬೇಕು. ಈ ಮೂಲಕ ರಾಜಕೀಯ ಕ್ಷೇತ್ರದ ಅಪರಾಧೀಕರಣಕ್ಕೆ ಕಡಿವಾಣ ಹಾಕಬೇಕು.ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಇಂದು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
- “ಭ್ರಷ್ಟಾಚಾರ ಮತ್ತು ಅಪರಾಧೀಕರಣ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಬೇರುಗಳ ಮೇಲೆ ದಾಳಿ ನಡೆಸುತ್ತಿದೆ. ಇದನ್ನು ತೊಡೆದು ಹಾಕಲು ಸಂಸತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನಗಿರುವ ಲಕ್ಷ್ಮಣ ರೇಖೆಯನ್ನು ಮೀರುವುದಿಲ್ಲ. ಶಾಸಕಾಂಗದ ಅಧಿಕಾರ ವ್ಯಾಪ್ತಿಗೆ ನ್ಯಾಯಾಂಗ ಪ್ರವೇಶಿಸುವುದಿಲ್ಲ,” ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಸ್ಪಷ್ಟಪಡಿಸಿದೆ.
- ಇದರ ಜತೆಗೆ, ” ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಕೇಸುಗಳ ಪೂರ್ವಾಪರವನ್ನು ತಾವು ಚುನಾವಣೆ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್ನಲ್ಲಿ ದಪ್ಪ ಅಕ್ಷರಗಳಲ್ಲಿ ಉಲ್ಲೇಖಿಸಬೇಕು. ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್ ಕೇಸುಗಳ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸ್ಥಳೀಯ ಮಾಧ್ಯಮಗಳಲ್ಲಿ (ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ) ವ್ಯಾಪಕ ಪ್ರಚಾರ ನೀಡಬೇಕು. ಅಲ್ಲದೆ, ಅಭ್ಯರ್ಥಿಗಳ ಪೂರ್ವಾಪರವನ್ನು ಪಕ್ಷಗಳು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಈ ಮೂಲಕ ಮತದಾರರು ಸೂಕ್ತವಾದವರನ್ನು ಆಯ್ಕೆ ಮಾಡಲು ಸಹಕರಿಸಬೇಕು” ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
- ಸದ್ಯ ಪ್ರಜಾಪ್ರತಿನಿಧಿ ಕಾಯಿದೆಯ ಪ್ರಕಾರ ಕ್ರಿಮಿನಲ್ ಅಪರಾಧ ಸಾಬೀತಾಗಿ ಅಪರಾಧಿ ಎಂದು ಘೋಷಣೆಯಾದ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
- ಪ್ರಕರಣದ ವಿಚಾರಣೆ ವೇಳೆ ಈ ಹಿಂದೆ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ ದೇಶದ ಜನಪ್ರತಿನಿಧಿಗಳ ಪೈಕಿ ಶೇ.36 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿತ್ತು.
- ದೇಶದ ಸಂಸತ್ತು ಮತ್ತು ವಿಧಾನಸಭೆಗಳಲ್ಲಿನ ಒಟ್ಟು 4,896 ಜನಪ್ರತಿನಿಧಿಗಳ ಪೈಕಿ 1,765 ಮಂದಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ತನ್ನ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು….CLICK HERE TO READ MORE