ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ
ಜನರ ಪ್ರಾತಿನಿಧ್ಯ ತಿದ್ದುಪಡಿ ಮಸೂದೆ –2017
SOURCE-THE HINDU http://www.thehindu.com/opinion/op-ed/overseas-votes/article22176971.ece
ಸನ್ನಿವೇಶ
- ಜನರ ಪ್ರಾತಿನಿಧ್ಯ ತಿದ್ದುಪಡಿ ’ ಮಸೂದೆಯನ್ನು ಸರ್ಕಾರವು ಸಂಸತ್ತಿನಲ್ಲಿ ಅನುಮೋದಿಸಿದೆ.
ಮಸೂದೆಯ ಪ್ರಮುಖ ಅಂಶಗಳು
- ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20(ಎ) ಅನ್ವಯ ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಕಾರಣಗಳಿಂದಾಗಿ ವಿದೇಶಗಳಿಗೆ ತೆರಳಿರುವ ಅನಿವಾಸಿ ಭಾರತೀಯರು ತಮ್ಮ ವ್ಯಾಪ್ತಿಯ ಕ್ಷೇತ್ರದ ಮತದಾರರಾಗಿದ್ದಾರೆ ಚುನಾವಣೆಯ ದಿನ ಮತಗಟ್ಟೆಯಲ್ಲಿ ಭೌತಿಕವಾಗಿ ಹಾಜರಾಗಿ ಪಾಸ್‌ಪೋರ್ಟ್ ಮತ್ತು ವೀಸಾದಳ್ಳಿ ಇರುವ ವಿಳಾಸದ ಆಧಾರದ ಮೇಲೆ ಮತದಾನ ಮಾಡಲು ಅವಕಾಶವಿತ್ತು .
- ಈಗ ಇದಕ್ಕೆ ತಿದ್ದುಪಡಿ ಮಂಡಿಸಿದ್ದು ಅನಿವಾಸಿ ಭಾರತೀಯರು ಭೌತಿಕವಾಗಿ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಅವರ ಬದಲಿಗೆ (ಪ್ರಾಕ್ಸಿ )ಇನ್ನೊಬ್ಬರು ಮತದಾನ ಚಲಾಯಿಸಬಹುದಾಗಿದೆ .
- ಈ ತಿದ್ದುಪಡಿಯು ಅನಿವಾಸಿ ಭಾರತೀಯರಿಗೆ (NRIs) ದೇಶಾದ್ಯಂತ ಚುನಾವಣಾ ರಾಜಕೀಯದಲ್ಲಿ ತಮ್ಮದೇ ಆದ ನಿಬಂಧನೆಯಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿಸುವ ಉದ್ದೇಶವನ್ನು ಹೊಂದಿದೆ.
ಮತದಾನದ ಹಕ್ಕು ಯಾರಿಗೆ?
- ಭಾರತದ ಪ್ರಜೆಯಾಗಿದ್ದು, 18 ವರ್ಷ ಪೂರೈಸಿರಬೇಕು. ಅರ್ಥಾತ್, ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವೇಳೆಗೆ ಆಯಾ ವರ್ಷದ ಜನವರಿ ವೇಳಗೆ 18 ತುಂಬಿರಬೇಕು.
- ಇಲ್ಲದಿದ್ದರೆ, ಮತದಾರ ಪಟ್ಟಿ ಸೇರಲು ಅನರ್ಹ. ತಮ್ಮ ಸ್ವವಿಳಾಸ ಮಾಹಿತಿ ಆಧರಿಸಿ ಮತದಾನ ಪಟ್ಟಿಗೆ ನೋಂದಣಿಯಾಗಿ ಗುರುತಿನ ಚೀಟಿ ಹೊಂದಿದ್ದರೆ ಮತದಾನ ಹಕ್ಕು ಲಭ್ಯ.
ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕಿದೆಯೇ?
- ಹೌದು. ಪ್ರಜಾ ಪ್ರಾತಿನಿಧ್ಯ ಕಾಯ್ದೆ (ತಿದ್ದುಪಡಿ) 2010 ಅನ್ವಯ ವಿದೇಶದಲ್ಲಿ ನೆಲೆಸಿರುವ, ಅಲ್ಲಿನ ಪೌರತ್ವ ಹೊಂದದೇ ಇರುವ ಭಾರತೀಯರಿಗೆ ಮತದಾನ ಹಕ್ಕಿದೆ. ಇದಕ್ಕಾಗಿ ಮತದಾರ ಪಟ್ಟಿಯಲ್ಲಿ ಹೆಸರಿರಬೇಕು.
- ಅಂದರೆ ಈ ಹೆಸರು, ಅನಿವಾಸಿ ಭಾರತೀಯರಿಗೆ ನೀಡಲಾಗಿದ್ದ ವಿಳಾಸದಲ್ಲೇ ಇರತಕ್ಕದ್ದು. ಹೊರತು ಬೇರೆ ವಿಳಾಸದಲ್ಲಿದ್ದರೆ ಸಾಧ್ಯವಿಲ್ಲ. ಮತದಾನ ಸಂದರ್ಭದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರಿದ್ದರೆ, ಆ ವಿಳಾಸಕ್ಕೆ ಬಂದೇ ಮತದಾನ ಮಾಡಬೇಕು.
ಮತದಾರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ..?
- ಬೇರೆ ಬೇರೆ ಕಡೆ ಹೆಸರಿದ್ದ ಪಕ್ಷದಲ್ಲಿ ಅದು ಕಾನೂನು ಪ್ರಕಾರ ದಂಡನಾರ್ಹವಾಗುತ್ತದೆ. 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17ರ ಅನ್ವಯ ಓರ್ವ ವ್ಯಕ್ತಿಯ ಹೆಸರು ಒಂದೇ ಸ್ಥಳದಲ್ಲಿ ಮತದಾರ ಪಟ್ಟಿಯಲ್ಲಿರಬೇಕು.
- ಅಲ್ಲದೇ ಒಂದಕ್ಕಿಂತ ಹೆಚ್ಚು ಕಡೆ ಹೆಸರನ್ನು ನೋಂದಾಯಿಸುವಂತಿಲ್ಲ.
ಸದ್ಯ ಅನಿವಾಸಿ ಭಾರತೀಯರು ಹೆಸರು ನೋಂದಾಯಿಸುವ ವಿಧಾನ ಹೇಗಿದೆ?
- ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಚ್ಚಿಸುವ ಅನಿವಾಸಿ ಭಾರತೀಯರು, ಭಾರತೀಯ ಚುನಾವಣಾ ಆಯೋಗದ ನಿರ್ದಿಷ್ಟ ಫಾರಂ (6ಎ) ಅನ್ವಯ, ಅದನ್ನು ತುಂಬಿ ತಮ್ಮ ಚುನಾವಣಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು.
- ಈ ಫಾರಂನಲ್ಲಿರುವ ವಿಳಾಸ, ಅನಿವಾಸಿ ಭಾರತೀಯರ ಪಾಸ್‌ಪೋರ್ಟ್‌ನಲ್ಲಿರುವ ವಿಳಾಸಕ್ಕೆ ತಾಳೆಯಾಗಬೇಕಿದ್ದು, ಅದೇ ವಿಳಾಸದಿಂದ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಲ್ಲದೇ ಈ ಫಾರಂನೊಂದಿಗೆ ದೃಢೀಕರಿಸಿದ ಪಾರ್ಸ್ ಪೋರ್ಟ್ ಕಾಪಿಯನ್ನೂ ಲಗತ್ತಿಸಿರಬೇಕು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾದ ಬಗ್ಗೆ ಗೊತ್ತಾಗೋದು ಹೇಗೆ?
- ಅನಿವಾಸಿ ಭಾರತೀಯರು ಸಲ್ಲಿಸಿದ ಫಾರಂ ನಂ6ಎ ಸ್ವೀಕೃತವಾಗಿ ಹೆಸರು ಸೇರ್ಪಡೆಯಾದರೆ, ಅರ್ಜಿಯಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಸಂದೇಶ ಬರುತ್ತದೆ.
- ಅಲ್ಲದೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ಇರುತ್ತದೆ.
ಸಾಮಾನ್ಯ ಮತದಾರರ ಹೆಸರುಗಳೊಂದಿಗೆ ಇಲ್ಲ.?
- ಮತದಾರ ಪಟ್ಟಿಗೆ ನೋಂದಣಿಯಾದ ಅನಿವಾಸಿ ಭಾರತೀಯರ ಹೆಸರುಗಳು ಸಾಮಾನ್ಯ ಭಾರತೀಯ ನಾಗರಿಕರ ಹೆಸರುಗಳೊಂದಿಗೆ ಇರುವುದಿಲ್ಲ. ಬದಲಿಗೆ ಪ್ರತ್ಯೇಕವಾಗಿ ಅನಿವಾಸಿ ಭಾರತೀಯರು ಎಂಬ ಪಟ್ಟಿಯಲ್ಲಿ ಹೆಸರುಗಳು ನಮೂದಾಗಿರುತ್ತವೆ.
- ಇದು ಪಾಸ್‌ಪೋರ್ಟ್‌ನಲ್ಲಿರುವ ವಿಳಾಸದಲ್ಲೇ ಇರುತ್ತವೆ. ಅಲ್ಲದೇ ದಾಖಲೆಗಳಲ್ಲಿ ಏನಾದರೂ ದೋಷವಿದ್ದರೆ, ತಿದ್ದುಪಡಿಗಾಗಿ ಫಾರಂ ನಂ.8 ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
ವಾಪಸ್ ತವರಿಗೆ ಬಂದರೆ..?
- ಅನಿವಾಸಿ ಭಾರತೀಯರು, ಖಾಯಂ ಆಗಿ ತವರಿಗೇ ಬಂದು ನೆಲೆಸಿದಲ್ಲಿ, ಆ ಸಂದರ್ಭ ಅವರು ನೆಲೆಸಿದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕಿರುತ್ತದೆ. ಈ ವೇಳೆ ಅನಿವಾಸಿ ಭಾರತೀಯರ ಪಟ್ಟಿಯಲ್ಲಿದ್ದ ಅವರ ಹೆಸರನ್ನು ತೆಗೆದು, ಸಾಮಾನ್ಯ ಮತದಾರರ ಪಟ್ಟಿಗೆ ಬದಲಾಯಿಸಲಾಗುತ್ತದೆ.
ಏನಿದು ಪ್ರಾಕ್ಸಿ ವೋಟ್?
- ಭಾರತದಲ್ಲಿಮತದಾನ ಹಕ್ಕು ಹೊಂದಿ ವಿದೇಶದಲ್ಲಿ ನೆಲೆ ಕಂಡುಕೊಂಡಿರುವ ಭಾರತೀಯ ತನ್ನ ಪರವಾಗಿ ಪ್ರತಿನಿಧಿಯೊಬ್ಬರ ಮೂಲಕ ಮತ ಹಕ್ಕನ್ನು ಚಲಾಯಿಸುವುದೇ ಪ್ರಾತಿನಿಧಿಕ ಮತದಾನವಾಗಿದೆ.
ಪ್ರಾಕ್ಸಿ ಮತದಾನದಿಂದ ಸಂಭವನೀಯ ನ್ಯೂನತೆಗಳು ಯಾವುವು?
- ಪ್ರಜಾಪ್ರಭುತ್ವದ ಅತ್ಯಂತ ಮುಖ್ಯವಾದ ವಿಶೇಷ ಹಕ್ಕನ್ನು ಇದು ಅಪಾಯಕ್ಕೆ ತರುತ್ತದೆ.
- ಪ್ರಾಕ್ಸಿ ಮತದಾರರು ಮೇಲ್ವಿಚಾರಣೆ ಮಾಡದ ಅಭ್ಯರ್ಥಿಗೆ ಮತ ಚಲಾಯಿಸಬಹುದು.
- ಎನ್ಆರ್ಐ ಮತದಾರರ ಯಾವುದೇ ಭರವಸೆಯಿಲ್ಲದೆ ಅವರ ಮತವನ್ನು ಉಚಿತ ಮತ್ತು ನ್ಯಾಯೋಚಿತವಲ್ಲದ ರೀತಿಯಲ್ಲಿ ಬಳಸಿಕೊಳ್ಳಬಹುದು, ಏಕೆಂದರೆ ಉದ್ಯೋಗದಾತರಿಂದ ದಬ್ಬಾಳಿಕೆಯ ಅಥವಾ ಪ್ರೇರಣೆಗೆ ಯಾವುದೇ ಪರಿಶೀಲನೆಯಿಲ್ಲ.
- ಮತಗಳು ಪ್ರಾಕ್ಸಿ ಮೂಲಕ ಚಲಾಯಿಸುತ್ತವೆ ಎಂದು ಯಾವುದೇ ಗ್ಯಾರಂಟಿ ಇಲ್ಲ.
- ಚುನಾವಣೆಯಲ್ಲಿ ಎಷ್ಟು ಪ್ರಾಕ್ಸಿ ಮತದಾನ ಮಾಡಬಹುದು ಎಂಬುವುದು ಸ್ಪಷ್ಟನೆಯಿಲ್ಲ
ಇದರ ಮಹತ್ವ
- ಮತದಾರರು ತಮ್ಮ ಪರವಾಗಿ ತಮ್ಮ ಮತಗಳನ್ನು ಚಲಾಯಿಸಲು 1961 ರ ಚುನಾವಣಾ ನಿಯಮಗಳ ಮೂಲಕ ಪ್ರಾಕ್ಸಿ ಅನ್ನು ಗಳನ್ನೂ ನೇಮಿಸಬಹುದು. ಇದು ಕೆಲವು , ಷರತ್ತುಗಳಿಗಳನ್ನು ಒಳಗೊಂಡಿದೆ .
- ಇದು ಪ್ರಸ್ತುತ ವಿದೇಶಿ ಮತದಾರರು ಎದುರಿಸುತ್ತಿರುವ ತೊಂದರೆಗಳನ್ನು ಗಣನೀಯವಾಗಿ ತಗ್ಗಿಸುತ್ತದೆ.
- ಜೊತೆಗೆ ಮತದಾನ ಪ್ರಮಾಣ ಹೆಚ್ಚಲಿದೆ.