27th SEPTEMBER
1.ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ – ಸುಪ್ರೀಂ ಕೋರ್ಟ್ ತೀರ್ಪು
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಸೆಕ್ಷನ್ 497, ಸೆಕ್ಷನ್ 198 ಬಗ್ಗೆ ಮತ್ತು ಸುಪ್ರೀಮ್ ಕೋರ್ಟ್ ತೀರ್ಪಿನ ಸಂಪೂರ್ಣ ಅವಲೋಕನ ಮತ್ತು
ಪ್ರಮುಖ ಸುದ್ದಿ
- ಅನೈತಿಕ ಸಂಬಂಧ ಇನ್ನು ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ. ಮಹಿಳೆ, ಪುರುಷ ಇಬ್ಬರೂ ಸಮಾನರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ಎಂದು ಸುಪ್ರೀಂ ಕೋರ್ಟ್ ನ ನಾಲ್ಕು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡಿದ್ದಾರೆ.
ಮುಖ್ಯ ಅಂಶಗಳು
- ಈ ಮೂಲಕ 150 ವರ್ಷಗಳ ಹಳೆಯ ಕಾನೂನನ್ನು ಅಸಾಂವಿಧಾನಿಕ ಎಂದಿದೆ ಕೋರ್ಟ್. ಪತ್ನಿಗೆ ಪತಿಯೇ ಮಾಲೀಕನಲ್ಲ ಎಂದಿದೆ ನ್ಯಾಯಪೀಠ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪೀಠ ಸೆಕ್ಷನ್ 497 ಮತ್ತು ಸಿಆರ್ಪಿಸಿಯ ಸೆಕ್ಷನ್ 198 ಅಸಾಂವಿಧಾನಿಕ ಎಂದಿದೆ.
ತೀರ್ಪಿನ ಕೆಲವು ಮುಖ್ಯಾಂಶಗಳು:
- ಅನೈತಿಕತೆ ಎಂಬುದು ವಿಚ್ಛೇದನಕ್ಕೆ ದಾರಿಯಾಗಬಹುದು ಆದರೆ ಕ್ರಿಮಿನಲ್ ಅಪರಾಧವಲ್ಲ ಎಂದಿದ್ದಾರೆ.
- ಅನೈತಿಕತೆ ಅಪರಾಧವಲ್ಲ, ಆದರೆ ಅನೈತಿಕತೆ ಸಂಬಂಧದ ಕಾರಣದಿಂದ ಅನ್ಯಾಯಕ್ಕೊಳಗಾದ ಪತಿ/ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ, ಸಾಕ್ಷ್ಯಾಧಾರ ಹಾಜರುಪಡಿಸಿದರೆ, ಅದನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗುತ್ತದೆ.
- ಸಂವಿಧಾನದಲ್ಲಿ “the I, me and you” ಒಳಗೊಂಡಿದೆ.
- ಪತಿ ಪತ್ನಿಯ ಯಜಮಾನ ಅಲ್ಲ.
- ಅನೈತಿಕತೆ ಅತೃಪ್ತ ಮದುವೆಗೆ ಕಾರಣವಲ್ಲ, ಇದರ ಪರಿಣಾಮದಿಂದಾಗಿ ಅಸಂತೋಷಕ್ಕೆ ಮದುವೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- ಸೆಕ್ಷನ್ 497 ಪುರಾತನ ಸೌಲಭ್ಯವಾಗಿದ್ದು, ಇದು ಅಸಾಂವಿಧಾನಿಕ ಎಂದು ಸಿಜೆಐ ಮಿಶ್ರಾ ಮತ್ತು ನ್ಯಾಯಮೂರ್ತಿ ಖಾನ್ವಿಲ್ಕರ್ ಅವರೊಂದಿಗೆ ಧ್ವನಿಗೂಡಿಸಿದ್ದಾರೆ.
ಸೆಕ್ಷನ್ 497 ಹೇಳುವುದೇನು?
- ಮಹಿಳೆಯು ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂದು ಗೊತ್ತಿದ್ದೂ, ಆತನ ಒಪ್ಪಿಗೆ ಇಲ್ಲದೆಯೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅದು ಅತ್ಯಾಚಾರ ಎಂದು ಪರಿಗಣಿತವಾಗುವುದಿಲ್ಲ. ಬದಲಾಗಿ, ಸಂಬಂಧ ಹೊಂದಿದ ವ್ಯಕ್ತಿಯನ್ನು ವ್ಯಭಿಚಾರದ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
ಕೋರ್ಟ್ ಏನು ಹೇಳುತ್ತದೆ?
- ಇದರಲ್ಲಿ ವೈವಾಹಿಕ ಪಾವಿತ್ರ್ಯತೆಯ ಅಂಶವಿದೆಯಾದರೂ, ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ಕ್ರಿಮಿನಲ್ ಕಾನೂನು ಲಿಂಗ ಸಮಾನತೆ-ತಟಸ್ಥ ಧೋರಣೆ ಹೊಂದಿರಬೇಕು. ಗಂಡ ತನ್ನ ಹೆಂಡತಿಯ ಜತೆ ಇನ್ನೊಬ್ಬನ ಸಂಬಂಧಕ್ಕೆ ಒಪ್ಪಿದರೆ ಆಕೆಯನ್ನು ‘ವಸ್ತುವಾಗಿ’ ಬಳಸಿಕೊಂಡಂತಾಯಿತು. ಇದು ವ್ಯಭಿಚಾರದ ವ್ಯಾಪ್ತಿಗೆ ಬರುವುದಿಲ್ಲ…..CLICK HERE TO READ MORE