29th AUGUST MLP-MODEL ANSWERS

29th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ1)

1.How did the early peasant rebellions differ from the later peasant rebellions in India’s Struggle for freedom? Examine.

(ಭಾರತದ  ಸ್ವಾತಂತ್ರ್ಯ  ಹೋರಾಟದಲ್ಲಿ   ಆರಂಭಿಕ ರೈತರ ದಂಗೆಗಳು ತದನಂತರದ ನಂತರ ರೈತರ ದಂಗೆಗಳಿಗಿಂತ  ಹೇಗೆ ಭಿನ್ನವಾಗಿವೆ ಎಂಬುದನ್ನು ಪರೀಕ್ಷಿಸಿಸಿ)

 

150 ಪದಗಳು

ಭಾರತದಲ್ಲಿ ರೈತರ ದಂಗೆಗಳು  ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ. ಮೊಗಲರ ಕಾಲದಿಂದ  ಭಾರತದಲ್ಲಿ ಇಲ್ಲಿಯವರೆಗೆ ಸುಮಾರು ನೂರು ರೈತ ಚಳವಳಿಗಳು ನಡೆದಿವೆ ಎಂದು ಅಂದಾಜುಮಾಡಲಾಗಿದೆ.

 

ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕಷ್ಟಪಟ್ಟು ದುಡಿಯುವ ರೈತರ ಬವಣೆ ಮಾತ್ರ ಹೇಳತೀರದಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಜನ ಇನ್ನಾದರೂ ನಮ್ಮ ಬದುಕು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ ಅಲ್ಲಿಯೂ ರೈತರಿಗೆ ಸಿಕ್ಕಿದ್ದು ಲಾಠಿಯ ಹೊಡೆತ, ತುಪಾಕಿಯ ಗುಂಡೇಟು. ಇಂತಹ ಸಂದರ್ಭದಲ್ಲಿ ರೈತ ಸಂಘದ ಮೂಲಕ ರೈತರು ಜಾಥಾದಂತಹ ಹೋರಾಟಗಳನ್ನು ರೂಪಿಸಿದರು.

 

ಸ್ವಾತಂತ್ರ್ಯ  ಹೋರಾಟದಲ್ಲಿ   ಆರಂಭಿಕ ರೈತರ ದಂಗೆಗಳು

  • ಸ್ವಾತಂತ್ರ್ಯಪೂರ್ವದ ರೈತ ಹೋರಾಟಗಳು ಪ್ರಾದೇಶಿಕವಾದುವು; ಅವುಗಳ ಉದ್ದೇಶಕೂಡ ಸೀಮಿತವಾಗಿರುತ್ತಿತ್ತು. ಸದ್ಯದ ನೋವಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ ಅಪೇಕ್ಷೆಯಾಗಿತ್ತು. ಶತ್ರುಗಳನ್ನೂ ಸಮಸ್ಯೆಗಳನ್ನೂ ಸ್ಪಷ್ಟವಾಗಿ ಗುರುತಿಸಿ ಹೋರಾಡುವ ಭೂಮಿಕೆ ಇನ್ನೂ ಸಿದ್ಧವಾಗಿರಲಿಲ್ಲ. ಬಹಳ ಮುಖ್ಯವಾಗಿ ಈ ಹೋರಾಟಗಳು ತಮ್ಮ ಪೂರ್ವಾಶ್ರಮ ಜೀವತತ್ತ್ವ ಹಾಗೂ ವರ್ಗಗಳಿಂದ ಹೊರಗೆ ಬರಲು ಇಚ್ಛಿಸಲಿಲ್ಲ. ಆದುದರಿಂದಲೆ ಈ ರೈತ ಹೋರಾಟಗಳ ಜೊತೆಗೆ ಮತ, ಧರ್ಮ ಮುಂತಾದ ನಿರ್ಬಂಧಗಳು ಹೇರಿಕೊಂಡಿದ್ದವು. ಈ ಸನ್ನಿವೇಶದಲ್ಲಿ ಕಂಡು ಬಂದ ಮುಖ್ಯ ನೆಲೆಯ ಹೋರಾಟಗಳಿವು:

 

  • 1772-80 ಸಂನ್ಯಾಸಿ – ಫಕೀರರ ದಂಗೆಗಳು
  • 1855ರ ಸಂತಾಲ ದಂಗೆ
  • 1860ರ ನೀಲಿ ಬೆಳೆಗಾರರ ಚಳವಳಿ
  • 1875ರ ದಕ್ಷಿಣದ ದಂಗೆಗಳು
  • 1836-1931ರ ಮಾಪಿಳ್ಳೆ ದಂಗೆಗಳು
  • 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ
  • 1945-46ರ ವಾರಲಿ ಆದಿವಾಸಿಗಳ ಹೋರಾಟ ಹಾಗೂ
  • 1946-47ರ ತೇಭಾಗ ಚಳವಳಿ

 

  • ರೈತರು ತಮ್ಮ ಹಿಂಸೆಗೆ ಸಂನ್ಯಾಸಿ, ಫಕೀರರ ವೇಷದಲ್ಲಿ ಸಂಘಟನೆ ಗೊಂಡು ಪ್ರತಿಕ್ರಿಯಿಸಿದ ರೀತಿಯೇ ಸಂನ್ಯಾಸಿ-ಫಕೀರರ ದಂಗೆ. ಇವು ರೈತಾಪಿ ಜನರ ಪ್ರಥಮ ಪ್ರತಿಭಟನೆಗಳು, ಬ್ರಿಟಿಷರ ವಿರುದ್ಧದ ಮೊದಲ ಯುದ್ಧಗಳು. ಬ್ರಿಟಿಷರ ಆಡಳಿತ ಹಾಗೂ ಕಂದಾಯ ನೀತಿಯನ್ನು ಪ್ರತಿಭಟಿಸಿದಾಗ ಬ್ರಿಟಿಷ್ ಸೈನ್ಯ ಹಳ್ಳಿ ಹಳ್ಳಿಗಳನ್ನೇ ನಾಶಮಾಡುತ್ತಿತ್ತು. ಈ ಘಟನೆಗಳಿಂದ ನೆಲೆ ಕಳೆದುಕೊಂಡವರು ಸಂಘಟಿತರಾಗಿ ಬ್ರಿಟಿಷರ ಪರವಾಗಿದ್ದ ಭೂಮಾಲೀಕರನ್ನೂ ಆಡಳಿತಗಾರರನ್ನೂ ಅವರ ಸೇವಕರನ್ನೂ ಹಿಡಿದು ಬಡಿಯುತ್ತಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಸೇರಬೇಕಾದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು. ಬಿಹಾರ, ಬಂಗಾಲ ಹಾಗೂ ಪೂರ್ವ-ಈಶಾನ್ಯ ಭಾರತದ ಹಲವು ಪ್ರದೇಶಗಳಿಗೆ ಈ ದಂಗೆಗಳು ಹರಡಿದ್ದವು.

 

  • ಸಂತಾಲರ ದಂಗೆ ಭಾರತದ ಆರ್ಥಿಕ ಹಾಗೂ ಸಾಂಸ್ಕøತಿಕ ಇತಿಹಾಸದ ಮೇಲೆ ಬ್ರಿಟಿಷರು ಹಾಕಿದ ಒಂದು ದೊಡ್ಡ ಬರೆ. ಸಂತಾಲರು ನಿಜವಾದ ಬೇಸಾಯಗಾರರು. ಇವರದು ಬೇಸಾಯವನ್ನು ಆಧರಿಸಿದ ರಾಜ್ಯ ಪದ್ಧತಿ ಹಾಗೂ ಸಾಂಸ್ಕøತಿಕ ಜೀವನ. ಬ್ರಿಟಿಷರ ಹೊಸ ಭೂ ಹಂಚಿಕೆ ಹಾಗೂ ಬಡತನದ ಕಾರಣವಾಗಿ ಇವರು ಹೊಸ ಭೂಮಾಲೀಕರಿಗೆ ತಮ್ಮ ಜಮೀನಿನ ಒಡೆತನ ಬಿಟ್ಟುಕೊಟ್ಟು ಅವರಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುವ ಕೂಲಿಕಾರರಾಗಬೇಕಾಯಿತು. ನೆಲಬಿಡಿ ಇಲ್ಲವೆ ಗೇಣಿಕೊಡಿ ಎಂದು ಹೊಸ ಮಾಲೀಕರು ಇವರಿಗೆ ತಾಕೀತು ಮಾಡಿದರು. ಜಮೀನುದಾರರ, ಪೊಲೀಸರ, ಅಧಿಕಾರಿಗಳ ಮತ್ತು ಸಾಲಗಾರರ ಹಿಂಸೆ, ಹೆಂಡತಿ ಮಕ್ಕಳ ಮೇಲಿನ ದೌರ್ಜನ್ಯ, ತೂಕ ಮತ್ತು ಮಾರಾಟದಲ್ಲಿ ಮೋಸ – ಈ ಕಾರಣಗಳಿಂದಾಗಿ ಮುಗ್ಧರಾದ ಈ ಬುಡಕಟ್ಟು ಜನ ತತ್ತರಿಸಿ ಹೋದರು. ಬದುಕುವ ಕೊನೆಯ ಆಸೆಯಾಗಿ ಹೋರಾಟಕ್ಕೆ ನಿಂತರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಘಟಿತರಾಗಿ ಹಿಂಸೆಯ ಮಾರ್ಗ ಹಿಡಿದು ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೊರಟರು. ಬ್ರಿಟಿಷ್ ಸೈನ್ಯ ಸಂತಾಲ ಸಮುದಾಯ ವನ್ನು ಸದೆ ಬಡಿಯಿತು. ಸಂತಾಲರು ತಮ್ಮ ಬಿಲ್ಲು ಬಾಣ ಮತ್ತು ದೈಹಿಕ ಶಕ್ತಿಗಳಿಂದಲೇ ನೈತಿಕ ಹೋರಾಟವನ್ನು ಮುಂದುವರಿಸಿದರು. ಈ ದಂಗೆಯಲ್ಲಿ ಸುಮಾರು 25 ಸಾವಿರ ಸಂತಾಲರು ಸತ್ತರೆಂದು ವರದಿ.

 

  • ಬಂಗಾಲ, ಬಿಹಾರ ಪ್ರದೇಶದ ನೀಲಿ ಬೆಳೆಗಾರರೆಂದರೆ ಆ ಕಾಲದ ಬ್ರಿಟಿಷ್ ಹಾಗೂ ಬ್ರಿಟಿಷ್ ಪರ ಭೂಮಾಲೀಕರು, ಗುಲಾಮರು ಎಂದೇ ಹೇಳಬೇಕು. ತಮ್ಮ ಹೊಟ್ಟೆಗೆ ಅನ್ನ ಬೆಳೆದುಕೊಳ್ಳುವುದಕ್ಕೆ ಅವಕಾಶವಿಲ್ಲದೆ ಆಳುವ ಪ್ರಭುಗಳ ಬಟ್ಟೆಗೆ ಬೇಕಾದ ನೀಲಿ ಬಣ್ಣಕೊಡುವ ಬೆಳೆ ಬೆಳೆದು ಕೊಡುವ ಕೈದಿಗಳಂತೆ ಇವರು ದುಡಿದರು. ಇವರ ಮೇಲಿನ ಹಿಂಸೆ ಹೇಳಲಸದಳ. ಬದುಕು ತೀರ ಕಷ್ಟ. ನೀಲಿ ಬೆಳೆಗಾರರಾದ ಹಿಂದು ಮುಸ್ಲಿಮ್ ನೌಕರರು ತಮ್ಮ ಶೋಷಣೆಯನ್ನು ಪ್ರತಿಭಟಿಸಿದರು. ಶೋಷಕರಿಗೆ ಮುತ್ತಿಗೆ ಹಾಕಿದರು. ಸರ್ಕಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಪರಿಹಾರವನ್ನೂ ಪಡೆದರು.

 

  • ದಖನ್ ದಂಗೆಯ ಮೂಲಸ್ಥಾನ ಮುಂಬಯಿ ಪ್ರಾಂತದ ಪುಣೆ ಮತ್ತು ಅಹಮದ್‍ನಗರ ಪ್ರದೇಶಗಳು. ಇವು ರೈತವಾರಿ ಜಿಲ್ಲೆಗಳಾಗಿದ್ದವು. ಮುಂಬಯಿ ಸರ್ಕಾರ ಕಂದಾಯ ಹೆಚ್ಚಿಸುತ್ತಹೋಯಿತು. ಸ್ಥಳೀಯ ಸಾಹುಕಾರರ ಬಡ್ಡಿ ವ್ಯವಹಾರ ಜನರ ಮೈಮೇಲೆ ಅಮರಿಕೊಂಡಿತು. ಇದರಿಂದಾಗಿ ಚಿಕ್ಕ ಪುಟ್ಟ ರೈತರೆಲ್ಲ ಜಮೀನು ಕಳೆದುಕೊಳ್ಳುತ್ತ ಹೋದರು. ಸಿಟ್ಟುಗೊಂಡ ಅವರು ಸಂಘಟಿತರಾಗಿ ಬಡ್ಡಿ ವ್ಯಾಪಾರಿಗಳಿಗೆ ಮುತ್ತಿಗೆ ಹಾಕಿದರು. ಸಾಲ ಪತ್ರಗಳನ್ನು ಕಿತ್ತು ಸುಟ್ಟುಹಾಕಿದರು. ದಂಗೆ ಅಡಗಿಸಲು ಸೈನ್ಯ ಬಂತು. ಸೆರೆಸಿಕ್ಕವರಿಗೆ ಹಿಂಸೆಯ ಜೊತೆಗೆ ಪುಂಡುಗಂದಾಯ ಹಾಕಲಾಯಿತು.

 

  • ಮಾಪಿಳ್ಳೆಗಳ ದಂಗೆ ಆರ್ಥಿಕ ಸ್ವರೂಪದಲ್ಲಿ ಕಾಣಿಸಿಕೊಂಡರೂ ಅದರ ಅಂತರಂಗ ಅವರ ಧಾರ್ಮಿಕ ಅಸ್ತಿತ್ವದಲ್ಲಿದೆ. ಅರಬ್ ದೇಶಗಳಿಂದ ಬಂದ ವ್ಯಾಪಾರಿಗಳು ಹಾಗೂ ಕೇರಳದ ಸ್ಥಳೀಯ ಹೆಣ್ಣುಗಳ ವೈವಾಹಿಕ ಸಂಬಂಧದಿಂದ ಹುಟ್ಟಿದವರು ಮಾಪಿಳ್ಳೆಗಳು. ಇವರು ಕೇರಳದ ಆ ಕಾಲದ ಭೂಒಡೆಯರಾದ ನಂಬೂದರಿಗಳು ಹಾಗೂ ಅವರ ಸಹವಾಸಿಗಳಾದ ನಾಯರ್‍ಗಳಲ್ಲಿ ಕೃಷಿಕೂಲಿಗಾಗಿ ಕೆಲಸ ಮಾಡುತ್ತಿದ್ದರು. ಇವರು ಹೆಚ್ಚಿನ ಗೇಣಿ ಕೊಡಬೇಕಿತ್ತು, ಕೊಡದಿದ್ದರೆ ಒಕ್ಕಲೆಬ್ಬಿಸುತ್ತಿದ್ದರು. ಸಾಮಾಜಿಕವಾಗಿ ಹೀನವಾಗಿ ನೋಡಿಕೊಳ್ಳುತ್ತಿದ್ದರು. ಬಹಳಕಾಲದ ಈ ಹಿಂಸೆಯಿಂದಾಗಿ ಅವರು ಸಿಡಿದೆದ್ದರು. 1863ರಿಂದ 1921ರ ವರೆಗೆ ಸುಮಾರು ಐವತ್ತು ದಂಗೆಗಳಾದವು. ಅನೇಕ ಹಿಂಸಾಕೃತ್ಯಗಳು ನಡೆದವು. ಸಾವಿರಾರು ಮಾಪಿಳ್ಳೆಗಳು ಸತ್ತರು. ಈ ಎಲ್ಲದಕ್ಕೆ ಅವರ ಧಾರ್ಮಿಕ ಗುರುಗಳ ಬೆಂಬಲವೂ ಇತ್ತು. ಒಂದು ಕಡೆ ತಮ್ಮ ಭೂ ಮಾಲೀಕರ ವಿರುದ್ಧ ಹೋರಾಡಿದರು. ಮತ್ತೊಂದು ಕಡೆ ಹಿಂದೂ ಧರ್ಮದವರಿಂದ ಬಹಿಷ್ಕøತರಾಗಿ ದೂರವಿರಿಸಲ್ಪಟ್ಟ ಜನರೊಂದಿಗೆ ಸ್ನೇಹ-ವೈವಾಹಿಕ ಸಂಬಂಧ ಬೆಳೆಸಿಕೊಂಡು ತಮ್ಮ ಜನಸಂಖ್ಯೆಯನ್ನು ವೃದ್ಧಿಸಿಕೊಂಡರು. ಕೊನೆಗೆ ಒಂದು ರಾಜಕೀಯ ಬಲವಾಗಿ ರೂಪುಗೊಂಡರು.
  • 1857 ರ ದಂಗೆಯ  ನಂತರ ಬ್ರಿಟಿಷರು  ಸ್ಥಳೀಯ ರಾಜಕುಮಾರರನ್ನು ಮತ್ತು ಜಮೀನ್ದಾರರನ್ನು ಹತ್ತಿಕ್ಕಿತು. ಆದ್ದರಿಂದ ರೈತರು ತಾವು ಆಂದೋಲನಗಳ ಪ್ರಮುಖ ಶಕ್ತಿಯಾಗಿ ಮಾರ್ಪಟ್ಟರು.
  • ಕೆಲವು ಬಾರಿ ಸರ್ಕಾರ, , ಕೆಲವೊಮ್ಮೆ ಜಮೀನುದಾರ / ಜಮೀನ್ದಾರರನ್ನು ಟಾರ್ಗೆಟ್ ಮಾಡುತ್ತಿದ್ದರು
  • ಅದು ಕೇವಲ ಪ್ರಾದೇಶಿಕ ವ್ಯಾಪ್ತಿಯು ಸೀಮಿತವಾಗಿತ್ತು ಮತ್ತು ಸಮೂಹ ಪ್ರಮಾಣದಲ್ಲಿ ಸಂಘಟಿಸಲ್ಪಟ್ಟಿರಲಿಲ್ಲ….CLICK HERE TO READ MORE
Share