29th SEPTEMBER- DAILY CURRENT AFFAIRS BRIEF

29th SEPTEMBER

 

1.ರಫೆಲ್ ಯುದ್ಧ ವಿಮಾನ ಒಪ್ಪಂದದ ವಿವಾದ

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ರಫೇಲ್ ವಿಮಾನ ಖರೀದಿ ಒಪ್ಪಂದದ ಬಗ್ಗೆ  ಈ ಒಪ್ಪಂದ ಫ್ರಾನ್ಸ್ ಮತ್ತು ಭಾರತಕ್ಕೆ ಎಷ್ಟು ಮುಖ್ಯ? ಇದರಲ್ಲಿ ಸಂಸತ್ತಿನ ಕಾರ್ಯವಿಧಾನವೇನು?

ಪ್ರಮುಖ ಸುದ್ದಿ

  • ರಫೆಲ್ ವಿಮಾನ ಖರೀದಿ ಪಾರದರ್ಶಕವಾಗಿದ್ದು, ಈ ಒಪ್ಪಂದವನ್ನು ರದ್ದುಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ರಫೆಲ್ ಖರೀದಿ ಒಪ್ಪಂದದಲ್ಲಿ ಭಾರೀ ಅವ್ಯವಹಾರಗಳು ನಡೆದಿರುವ ಬಗ್ಗೆ ಪ್ರತಿಪಕ್ಷ ಗಳು , ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
  • ರಫೆಲ್ ಯುದ್ಧ ವಿಮಾನಗಳನ್ನು ಹೆಚ್ಚಿನ ದರ ನೀಡಿ ಖರೀದಿ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಈ ಬಗ್ಗೆ ಮಹಾಲೇಖಪಾಲರು ನೀಡುವ ವರದಿಗೆ ಕಾಯುತ್ತಿದ್ದೇವೆ. ಕೇವಲ ಆರೋಪಗಳು ಕೇಳಿಬಂದ ತಕ್ಷಣ ರಫೆಲ್ ಒಪ್ಪಂದವನ್ನು ರದ್ದುಮಾಡುವುದಿಲ್ಲ ಎಂದು ಹೇಳಿದರು.
  • ರಫೆಲ್ ಯುದ್ದ ವಿಮಾನವನ್ನು ಯುಪಿಎ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ದರದಲ್ಲಿ ಖರೀದಿಸಲಾಗಿದೆ. ಈ ಎಲ್ಲ ವಿಷಯಗಳನ್ನು ಸಿಎಜಿ ವರದಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅಂಶಗಳು

 ಏನಿದು ರಫೇಲ್ ಜೆಟ್ಸ್?

  • ರಫೇಲ್ ಜೆಟ್ಸ್ ಅಂದರೆ ಫ್ರಾನ್ಸ್ ನ ಡಿಅಸಾಲ್ಟ್ ಏವಿಯೇಷನ್ ಸಂಸ್ಥೆಯು ರೂಪಿಸುವ ಎರಡು ಎಂಜಿನ್ ನ ಮೀಡಿಯಂ ಮಲ್ಟಿ- ರೋಲ್ ಕಂಬ್ಯಾಟ್ ಏರ್ ಕ್ರಾಫ್ಟ್. ಈ ಜೆಟ್ ಗಳಿಗೆ ವಿಶೇಷ ಗುಣಗಳಿವೆ. ಎರಡು ಎಂಜಿನ್ ಹೊಂದಿರುವ, ಬಹುಮುಖಿ ಕಾರ್ಯಗಳನ್ನು ಮಾಡುವ ಯುದ್ಧ ವಿಮಾನ ರಫೇಲ್.
  • ಇವುಗಳನ್ನು ತಯಾರಿಸುವುದು ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಶನ್ ಕಂಪನಿ. ಅತ್ಯಂತ ಕರಾರುವಾಕ್ಕಾಗಿ ಭೂಮಿ ಹಾಗೂ ಸಮುದ್ರದ ಮೇಲಿನ ಗುರಿಗಳ ಮೇಲೆ ಇವು ಕ್ಷಿಪಣಿ, ಬಾಂಬ್ ದಾಳಿಗಳನ್ನು ನಡೆಸಬಲ್ಲವು.
  • ಇವು ಅಣ್ವಸ್ತ್ರ ದಾಳಿಗೂ ಜಗ್ಗದ ಶಕ್ತಿಶಾಲಿ ವಿಮಾನಗಳು. ಜಗತ್ತಿನ ಬಲಶಾಲಿ ಸೇನಾಪಡೆಗಳಲ್ಲಿ ಒಂದಾಗಿರುವ ಫ್ರಾನ್ಸ್‌ನಲ್ಲಿ 100ಕ್ಕೂ ಹೆಚ್ಚು ರಫೇಲ್ ರಫೆಲ್ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
  • ಜಗತ್ತಿನ ಪ್ರಸಿದ್ಧ ಯುದ್ಧ ವಿಮಾನಗಳ ಪೈಕಿ ಅತ್ಯಂತ ಆಧುನಿಕ ಹಾಗೂ ಬಹೂಪಯೋಗಿ ರಫೆಲ್ ಯುದ್ಧ ವಿಮಾನ ಗಳಲ್ಲಿ ರಫೇಲ್ ಕೂಡ ಒಂದೆನಿಸಿದೆ. ನೋಡಲು ಸಣ್ಣ ಗಾತ್ರದ್ದಾಗಿದ್ದರೂ ಇವುಗಳ ಸರ್ವೇಕ್ಷಣಾ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದ್ದು, ಬರಿಗಣ್ಣಿಗೆ ಕಾಣಿಸದ ಶತ್ರುಗಳ ವಾಹನ ಹಾಗೂ ಪಡೆಗಳ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವುದೇ ಮಾದರಿಯ ಭೂಗುಣಕ್ಕೂ ಹೊಂದಿಕೊಳ್ಳುವುದು ಈ ವಿಮಾನಗಳ ಇನ್ನೊಂದು ವಿಶೇಷತೆ.

ಏನಿದು ರಫೇಲ್ ವಿಮಾನ ಖರೀದಿ ಒಪ್ಪಂದ ?

  • 2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿತ್ತು. ಅದಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಿ, ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿ ಈ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಬಳಿಕ ರಫೇಲ್ ಯುದ್ಧ ವಿಮಾನದ ತಾಂತ್ರಿಕ ಪರಿಶೀಲನೆಯನ್ನು ಭಾರತಿಯ ವಾಯುಪಡೆ ಕೈಗೊಂಡಿತ್ತು.
  • 2011ರವರೆಗೂ ಈ ಪ್ರಕ್ರಿಯೆ ನಡೆಯಿತು. ರಫೇಲ್ ವಿಮಾನ ಭಾರತಿಯ ವಾಯುಪಡೆಗೆ ಸೇರಲು ಅರ್ಹ ಎಂದು 2012ರಲ್ಲಿ ನಿರ್ಧರಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು.
  • ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿ, ರಫೇಲ್ ಯುದ್ಧ ವಿಮಾನ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡರು.
  • ಆ ಒಪ್ಪಂದವೇ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡುವುದು. ಮೋದಿ ಸರ್ಕಾರ 36 ಯುದ್ಧ ವಿಮಾನ ಖರೀದಿಗೆ ಹೊಸಒಪ್ಪಂದ ಮಾಡಿಕೊಂಡ ಬಳಿಕ ಡಸಾಲ್ಟ್ ಕಂಪನಿ ಈ ಹಿಂದಿನ ಯುಪಿಎ ಸರ್ಕಾರದೊಂದಿಗಿನ ಒಪ್ಪಂದವನ್ನು 2015ರಲ್ಲಿ ರದ್ದು ಮಾಡಿತ್ತು.
  • ನಂತರ 2016ರಲ್ಲಿ ಭಾರತ ಸರ್ಕಾರ ಡಸಾಲ್ಟ್ ಕಂಪನಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಆ ಒಪ್ಪಂದದ ಪ್ರಕಾರ 36 ರಫೇಲ್ ಯುದ್ಧ ವಿಮಾನಗಳನ್ನು 59,000 ಕೋಟಿ ರು.ಗಳಿಗೆ ಖರೀದಿಸಲು ತೀರ್ಮಾನಿಸಲಾಗಿದೆ.
  • ಮೋದಿ ಸರ್ಕಾರದಲ್ಲಿ ಫೈನಲ್ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಪ್ರಕ್ರಿಯೆ 2007ರಲ್ಲಿಯೇ ಶುರುವಾಗಿತ್ತು. ಸುದೀರ್ಘ ಸಂಧಾನ, ಸಮಾಲೋಚನೆಗಳ ಬಳಿಕ ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಯಂಟನಿ, ಅಂತಿಮ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಗುತ್ತಿಗೆ ಸಂಧಾನ ಸಮಿತಿಯ ಅಭಿಪ್ರಾಯ ಕೇಳಿದ್ದರು.
  • ಹಲವು ಸುತ್ತಿನ ಸಮಾಲೋಚನೆಗಳ ಹೊರತಾಗಿಯೂ ಯುಪಿಎ ಸರ್ಕಾರಕ್ಕೆ ರಫೆಲ್ ಖರೀದಿ ಒಪ್ಪಂದವನ್ನು ಅಖೈರುಗೊಳಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ವರ್ಷವೇ ಈ ಪ್ರಕ್ರಿಯೆಗೆ ಮರು ಚಾಲನೆ ನೀಡಲಾಗಿತ್ತು. 2016ರಲ್ಲಿ ಭಾರತ-ಫ್ರಾನ್ಸ್ ಸರ್ಕಾರಗಳ ನಡುವೆ ಒಪ್ಪಂದ ಕುದುರಿತ್ತು. ಆ ಪ್ರಕಾರವಾಗಿ 36 ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ನಡೆದಿದ್ದು, 2019ರ ವೇಳೆಗೆ ಯುದ್ಧ ವಿಮಾನಗಳು ಭಾರತವನ್ನು…CLICK HERE TO READ MORE
Share