30th AUGUST
1.ನವಲೇಖಾ ಯೋಜನೆ (Project Navlekha)
SOURCE-THE HINDU https://www.thehindubusinessline.com/info-tech/googles-project-navlekha-to-help-regional-publications-go-online/article24799483.ece
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ– ಏನಿದು ನವಲೇಖಾ ಯೋಜನೆ ?
ಮುಖ್ಯ ಪರೀಕ್ಷೆಗಾಗಿ–ಈ ಯೋಜನೆಯ ಪ್ರಮುಖ ಲಕ್ಷಣಗಳು ಮತ್ತು ಮಹತ್ವ.
ಪ್ರಮುಖ ಸುದ್ದಿ
- ಇಂಗ್ಲಿಷ್ ಭಾಷಾ ಜ್ಞಾನದ ಕೊರತೆ ಹಿನ್ನೆಲೆಯಲ್ಲಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಡೊಮೈನ್ ನೇಮ್ ಬರಲಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು.
- ಇದೀಗ ಇಂಟರ್‌ನೆಟ್ ಸರ್ಚ್ ದೈತ್ಯ ಗೂಗಲ್ ಭಾರತಕ್ಕಾಗಿಯೇ ಹಲವು ವಿಶೇಷ ಘೋಷಣೆಗಳನ್ನು ಮಾಡಿದೆ. ಪ್ರಾದೇಶಿಕ ಭಾಷೆಗಳಲ್ಲಿನ ಪತ್ರಿಕೆ ಮತ್ತು ನಿಯತಕಾಲಿಕೆಗಳಿಗಾಗಿ “ನವಲೇಖಾ ಯೋಜನೆ’ (ನವಲೇಖಾ ಪ್ರಾಜೆಕ್ಟ್) ಪ್ರಕಟಿಸಿದೆ.
ಮುಖ್ಯ ಅಂಶಗಳು
ಏನಿದು ನವಲೇಖಾ ಯೋಜನೆ ?
- ಈ ಯೋಜನೆಯಿಂದಾಗಿ ಆಫ್ಲೈನ್‌ನಲ್ಲಿರುವ ವಿಚಾರಗಳನ್ನು ಪಿಡಿಎಫ್ ಫೈಲ್ ಮೂಲಕ ಆನ್‌ಲೈನ್‌ನಲ್ಲಿ ತಪ್ಪಿಲ್ಲದೆ ಓದಲು ಸಾಧ್ಯವಾಗಲಿದೆ. ಅಲ್ಲದೆ, ಪ್ರಾದೇಶಿಕ ಭಾಷೆಗಳಲ್ಲಿರುವ ಪತ್ರಿಕೆಗಳು, ನಿಯತಕಾಲಿಕೆಗಳಿಗೆ ಈ ಯೋಜನೆಯಿಂದ ನೆರವಾಗಲಿದೆ.
- ಬಹು ಭಾಷೆಗಳಿಗೆ ಅನ್ವಯವಾಗುವಂತೆ ಮಾಹಿತಿಯನ್ನು ವ್ಯವಸ್ಥೆಗೊಳಿಸುವುದರಿಂದ ಸರಳವಾಗಿ ಮಾಹಿತಿ ಓದಲು ಸಾಧ್ಯವಾಗಲಿದೆ. ಓದಲು ಮಾತ್ರವಲ್ಲದೆ, ಅದನ್ನು ಆಲಿಸುವಂಥ ವ್ಯವಸ್ಥೆಯೂ ಇರಲಿದೆ. ಜತೆಗೆ ಟೈಪ್ ಮಾಡಲೂ ನೆರವಾಗಲಿದೆ.
- ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಮೊಬೈಲ್ ಮೂಲಕ ಜಾಲತಾಣಗಳ ಸರ್ಚ್ ನಡೆಸುತ್ತಿದ್ದಾರೆ. ಅವರಿಗೆ ಪ್ರಾದೇಶಿಕ ಭಾಷೆಗಳಲ್ಲಿನ ಮಾಹಿತಿ ಕೊರತೆ ಕಾಡುತ್ತದೆ .
- ಈ ಯೋಜನೆಯು 135,000 ಸ್ಥಳೀಯ ಭಾಷೆಯ ಪ್ರಕಾಶಕರನ್ನು ಆನ್ಲೈನ್ನಲ್ಲಿ ಸರಳವಾಗಿ ಹೋಸ್ಟಿಂಗ್ ಮಾಡುವ ಮೂಲಕ ತರಲು ಉದ್ದೇಶಿಸಿದೆ.
- ಈ ಯೋಜನೆಯು ಸ್ಥಳೀಯ ಭಾಷಾ ದಿನಪತ್ರಿಕೆಗಳಿಗೆ ಮತ್ತು ಕಂಪೆನಿಗಳಿಗೆ ಈ ಯೋಜನೆಯು ಸೂಕ್ತವಾದ ಆನ್ಲೈನ್ ಪ್ರಕಾಶನ ಸಾಧನವನ್ನು ಒದಗಿಸುತ್ತದೆ.
ಈ ಯೋಜನೆಯ ಮಹತ್ವ
- ಪ್ರಸ್ತುತ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಆನ್ಲೈನ್ ವಿಷಯವು ಇಂಗ್ಲಿಷ್ ಗೆ ಹೋಲಿಸಿದರೆ ಕೇವಲ 1% ಮಾತ್ರ ಲಭ್ಯವಿದೆ. . ಗೂಗಲ್ ಗೆ ಭಾರತದ ಇಂಟರ್ನೆಟ್ ಬಳಕೆದಾರರುರು ತುಂಬಾ ಮುಖ್ಯವಾಗಿದೆ . ವಿಶ್ವದ ಎರಡನೇ ಅತಿ ಹೆಚ್ಚು ಜನ ಇಂಟರ್ನೆಟ್ ಬಳಕೆದಾರರನ್ನು ಭಾರತದಿಂದ ಹೊಂದಿದೆ . ಹಾಗಾಗಿ, ಹೊಸ ಪ್ರಾಜೆಕ್ಟ್ನೊಂದಿಗೆ ಸ್ಥಳೀಯ ಭಾಷೆಗಳಲ್ಲಿ ಭಾರತೀಯರಿಗೆ ಲಭ್ಯವಿರುವ ಸಂಪನ್ಮೂಲಗಳ ಪ್ರಮಾಣ ಹೆಚ್ಚಾಗುತ್ತದೆ….CLICK HERE TO READ MORE