31st AUGUST
1.ವಿಮಾ ನಿಯಂತ್ರಣ ವಲಯದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ತಿಳಿವಳಿಕೆಯ ಒಪ್ಪಂದಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಅವಲೋಕಿಸಿ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ)ಹಾಗೂ ಅಮೆರಿಕದ ಫೆಡರಲ್ ಇನ್ಷುರೆನ್ಸ್ ಕಚೇರಿ ನಡುವಿನ ತಿಳಿವಳಿಕೆಯ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಮುಖ್ಯ ಅಂಶಗಳು
ಇದರಿಂದ ಬೀರುವ ಪರಿಣಾಮಗಳು:
- ಈ ಒಪ್ಪಂದವು ಎರಡೂ ಸಂಸ್ಥೆಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ರೂಪಿಸುವುದಕ್ಕಾಗಿ ಒಂದು ನೀತಿ ಚೌಕಟ್ಟನ್ನು ಒದಗಿಸಿಕೊಡುತ್ತದೆ. ಅಲ್ಲದೇ ಪ್ರತಿ ಪ್ರಾಧಿಕಾರದ ಅವಲೋಕನ ಮತ್ತು ಕಾನೂನು ಬದ್ಧವಾದ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಸಂಶೋಧನಾ ನೆರವನ್ನು ಕಲ್ಪಿಸಿಕೊಡಲು ಇದು ಅವಕಾಶವನ್ನು ಮಾಡಿಕೊಡುತ್ತದೆ.
- ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಹಲವು ನಿಯಂತ್ರಣಾ ಕಾರ್ಯ ವಿಧಾನಗಳ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ತರಬೇತಿ ಚಟುವಟಿಕೆಗಳಿಗೂ ಪರಸ್ಪರ ಸಹಕಾರ ನೀಡಲಿವೆ.
- ಭಾರತ ಮತ್ತು ಅಮೆರಿಕ ದೇಶಗಳು ಅಂತಾರಾಷ್ಟ್ರೀಯ ಗುಣಮಟ್ಟ ನಿಗದೀಕರಣ, ಆರ್ಥಿಕ ಸ್ಥಿರತೆ ಮತ್ತು ಗ್ರಾಹಕರ ಹಿತರಕ್ಷಣೆಯನ್ನು ರಕ್ಷಣೆ ಮಾಡುವ ಕ್ರಮಗಳನ್ನು ಅಭಿವೃದ್ಧಿಪಡಿಸಿ ಜಾರಿಗೆ ತರುವಂತಹ ನಿಟ್ಟಿನಲ್ಲಿ ಪರಸ್ಪರ ಪೂರಕವಾಗಿ ಕೆಲಸಮಾಡುತ್ತಿವೆ. ವಿಶೇಷವಾಗಿ ವಿಮಾ ವಲಯದಲ್ಲಿ ವಿವೇಚನಾತ್ಮಕವಾದ ಜವಾಬ್ದಾರಿಗಳನ್ನು ನಿಭಾಯಿಸುತ್ತಿವೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಬಗ್ಗೆ
- ಐಆರ್ ಡಿಎಐಯನ್ನು 1999ರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿಯಲ್ಲಿ ರೂಪಿಸಲಾಗಿದೆ. ನಿಯಂತ್ರಿಸು, ಉತ್ತೇಜಿಸು ಮತ್ತು ವಿಮೆ ಹಾಗೂ ಮರು ವಿಮಾ ವ್ಯವಹಾರವನ್ನು ಭಾರತದಲ್ಲಿ ಬೆಳವಣಿಗೆ ಮಾಡುವ ದೃಷ್ಟಿಯಿಂದ ಇದು ರಚನೆಯಾಗಿದ್ದಾಗಿದೆ.
- ಇದೇ ರೀತಿ ಅಮೆರಿಕದಲ್ಲಿ ಫೆಡರಲ್ ಇನ್ಷುರೆನ್ಸ್ ಆಫೀಸ್ (ಎಫ್ ಐಒ) ವಿಮಾ ವಲಯದ ಎಲ್ಲಾ ಆಯಾಮಗಳನ್ನೂ ನಿರ್ವಹಣೆ ಮಾಡುತ್ತಾ ,ಅಂತಾರಾಷ್ಟ್ರಿಯ ಮಟ್ಟದಲ್ಲಿ ವಿವೇಕಾತ್ಮಕವಾಗಿ ವಿಮಾ ಕ್ಷೇತ್ರದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿದೆ.
- ಭಾರತ ಮತ್ತು ಅಮೆರಿಕ ದೇಶಗಳು ಗಟ್ಟಿಯಾದಂತಹ ವ್ಯವಹಾರ ಸಂಬಂಧವನ್ನು ಹೊಂದಿವೆ. ರಾಜಕೀಯ ಮತ್ತು ಅಧಿಕಾರಿ ಮಟ್ಟದಲ್ಲಿ ನಿರಂತರವಾಗಿ ಉಭಯ ದೇಶಗಳೂ ಚರ್ಚೆ ಮಾಡುತ್ತಿವೆ.
- ಭಾರತ-ಅಮೆರಿಕಾ ದೇಶಗಳ ಬಹು ವಲಯದ ವಿಚಾರಗಳಲ್ಲಿ ಎರಡೂ ದೇಶಗಳ ಸಂಸ್ಥೆಗಳು ಪರಸ್ಪರ ಸಹಕಾರ ಭಾವನೆಯಿಂದಲೇ ಚರ್ಚೆ ಮಾಡಿ ನಿರ್ಧಾರಗಳಿಗೆ ಬರುತ್ತಿವೆ.
- ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಎ)ಯಲ್ಲಿ ಅಮೆರಿಕವು ದೊಡ್ಡ ಕೊಡುಗೆ ನೀಡುತ್ತಿರುವ ದೇಶಗಳಲ್ಲಿ ಒಂದಾಗಿದೆ ಅಮೆರಿಕ ಮೂಲದ ವಿಮಾ ಕಂಪನಿಗಳ ಜತೆ ಭಾರತದ ಹಲವು ವಿಮಾ ಕಂಪನಿಗಳು ಜಂಟಿ ಸಹಭಾಗಿತ್ವವನ್ನೂ ಮಾಡಿಕೊಂಡಿವೆ. ವಿದೇಶಿ ಹೂಡಿಕೆ ಮಿತಿಯನ್ನು ಶೇ 49ಕ್ಕೆ ಹೆಚ್ಚಳ ಮಾಡಿದ ನಂತರ ಭಾರತದ ವಿಮಾ ಕಂಪನಿಗಳ ಹೂಡಿಕೆಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ.
- ಅಮೆರಿಕದ ಮೂಲದ ಕಂಪನಿಗಳು ಹೆಚ್ಚು ಹೂಡಿಕೆಯಲ್ಲಿ ತೊಡಗಿಸಿಕೊಳ್ಳುತ್ತಿವೆ. ಭಾರತದ ಐಆರ್ ಡಿಎಐ ಮತ್ತು ಅಮೆರಿಕದ ಎಫ್ ಐಒ ಜತೆ ಒಪ್ಪಂದ ಮಾಡಿಕೊಂಡ ನಂತರ ಎರಡೂ ದೇಶಗಳ ವ್ಯವಹಾರದಲ್ಲಿ ಇನ್ನಷ್ಟು ಸಾಮರ್ಥ್ಯ ಹೆಚ್ಚಿದಂತಾಗಿದೆ….CLICK HERE TO READ MORE