31st JULY.-DAILY CURRENT AFFAIRS BRIEF

31st JULY

 

1. ಅಪರಾಧ ಕಾನೂನು ತಿದ್ದುಪಡಿ ವಿಧೇಯಕ-2018(Criminal Law (Amendment) Bill, 2018)

 

ವಿದ್ಯಾರ್ಥಿಗಳ ಗಮನಕ್ಕೆ   

 ಪ್ರಿಲಿಮ್ಸ್  ಪರೀಕ್ಷೆಗಾಗಿ  :- ಈ ವಿದೇಯಕದಲ್ಲಿ ಮಾಡಲಾಗಿರುವ ಪ್ರಮುಖ ಬದಲಾವಣೆಗಳ ಬಗ್ಗೆ 

ಮುಖ್ಯ ಪರೀಕ್ಷೆ ಗಾಗಿ  :- ಪ್ರಸ್ತುತ ಇರುವ ಅಪರಾಧ ಕಾನೂನು ತಿದ್ದುಪಡಿ ವಿಧೇಯಕವನ್ನು  ಪರಿಶೀಲಿಸಿ ಹಾಗು ಅದರಲ್ಲಿನ  ಸಮಸ್ಯೆಗಳನ್ನು ವ್ಯಾಖ್ಯೆಸಿಸಿ  .

 

ಪ್ರಮುಖ ಸುದ್ದಿ

 

  • ಲೋಕಸಭೆಯು ‘ಅಪರಾಧ ಕಾನೂನು ತಿದ್ದುಪಡಿ ವಿಧೇಯಕ-2018 ಕ್ಕೆ ಅಂಗೀಕಾರವನ್ನು ನೀಡಿದ್ದು . ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್  ಪ್ರೊಸೀಜರ್  ಕೋಡ್ (ಸಿಆರ್ಪಿಸಿ) ಮತ್ತು ಪೋಕ್ಸೊ ಕಾಯ್ದೆಯಡಿ (POCSO) ಮರಣದಂಡನೆ  ಶಿಕ್ಷೆ ವಿಧಿಸಲು ಹೊಸ ನಿಬಂಧನೆಯನ್ನು ಪರಿಚಯಿಸಲು ಈ  ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ .

 

ಮುಖ್ಯ ಅಂಶಗಳು

 

ಹೊಸ ವಿಧೇಯಕದಲ್ಲಿ ಏನೇನಿದೆ?

  • ಎಲ್ಲಾ ರೀತಿಯ ಅತ್ಯಾಚಾರ ಪ್ರಕರಣಗಳ ತನಿಖೆಯ ವಿಚಾರಣೆ 2 ತಿಂಗಳ ಒಳಗಾಗಿ ಇತ್ಯರ್ಥವಾಗಬೇಕು. ಹಾಗು ಅತ್ಯಾಚಾರ ಪ್ರಕರಣದ ಮೇಲ್ಮನವಿ ಇತ್ಯರ್ಥಕ್ಕೆ 6 ತಿಂಗಳ ಗಡುವು ನೀಡಲಾಗಿದೆ.
  • 16 ವರ್ಷಕ್ಕಿಂತ ಕಿರಿಯ ಬಾಲಕಿಯ ಮೇಲೆ ಅತ್ಯಾಚಾರ ನಡೆದರೆ ಅಂತಹ ಅತ್ಯಾಚಾರಿ ಅಥವಾ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಇಲ್ಲ.
  • 16 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದವರಿಗೆ ಕನಿಷ್ಠ 10ರಿಂದ 20 ವರ್ಷ ಶಿಕ್ಷೆ ಹೆಚ್ಚಳ ಮಾಡಲಾಗಿದೆ.
  • 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಕ್ಕೆ ಕನಿಷ್ಠ 20 ವರ್ಷ ಜೈಲು, ಜೀವಾವಧಿ ಅಥವಾ ಗಲ್ಲು ಶಿಕ್ಷೆ ವಿಧಿಸಲಾಗುವುದು. ಸಾಮೂಹಿಕ ಅತ್ಯಾಚಾರ ಮಾಡಿದವರಿಗೆ ಆಜೀವ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುವುದು.
  • ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರೆ 7 ವರ್ಷದ ಬದಲಾಗಿ 10 ವರ್ಷ ಕಠಿಣ ಶಿಕ್ಷೆ, ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

 

ಪ್ರಸ್ತುತ ಇದ್ದ ಕಾನೂನನ್ನು ಏಕೆ ತಿದ್ದುಪಡಿ ಮಾಡಲಾಗಿದೆ ?

  • ಸದ್ಯಕ್ಕೆ ಇರುವ ಕಾನೂನಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ನೀಡಬೇಕೆಂಬ ಉಲ್ಲೇಖ...CLICK HERE TO READ MORE
Share