3rd AUGUST MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.What do you understand by secularism? The concept of secularism in India is very different compared to practice in Western countries. Critically discuss.
(ಜಾತ್ಯತೀತತೆ ಎಂದರೆ ನೀವು ಏನನ್ನು ಅರ್ಥಮಾಡಿಕೊಳ್ಳುತ್ತೀರಿ? ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಜಾತ್ಯತೀತತೆ( ಸೆಕ್ಯುಲರಿಸಮ್) ಪರಿಕಲ್ಪನೆ ತುಂಬಾ ವಿಭಿನ್ನವಾಗಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ. )
250 ಪದಗಳು
ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.
‘ಸೆಕ್ಯುಲರಿಸಂ’ ಎಂಬ ಪರಿಕಲ್ಪನೆಗೆ ಸೂಕ್ತವಾದ ವ್ಯಾಖ್ಯೆ/ವಿವರಣೆ ಇಲ್ಲದಿರುವುದು ಈ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಯೆನ್ನಬೇಕು. ಕಾರಣ, ಜಾತ್ಯತೀತತೆ ಅಥವಾ ಸೆಕ್ಯುಲರಿಸಂ ಎಂಬುದು ಬದಲಾಗುತ್ತಲೇ ಹೋಗುವ ಅಥವಾ ವ್ಯತ್ಯಯಸಾಧ್ಯವಾದ ಒಂದು ಪರಿಕಲ್ಪನೆ; ಹೀಗಾಗಿ ಒಂದು ಕರಾರುವಾಕ್ಕಾದ, ನಿರ್ದಿಷ್ಟ ಅರ್ಥನಿರೂಪಣೆ ನೀಡುವ ಎಲ್ಲ ಯತ್ನಗಳನ್ನೂ ಅದು ಅಸಾಧ್ಯವಾಗಿಸುತ್ತದೆ ಇಲ್ಲವೆ ತಡೆಯೊಡ್ಡುತ್ತದೆ ಎನ್ನಲಡ್ಡಿಯಿಲ್ಲ. ‘
ಸೆಕ್ಯುಲರಿಸಂ ಎಂಬ ಪರಿಭಾಷೆಯ ಅರ್ಥವನ್ನು ಸಮರ್ಥವಾಗಿ ಗ್ರಹಿಸುವುದಕ್ಕಾಗಿ, ಸೆಕ್ಯುಲರಿಸಂನ 2 ಸಂಭಾವ್ಯ ಮಾದರಿಗಳ ಉಲ್ಲೇಖ ಸಮಂಜಸ ವಾಗಬಲ್ಲದು. ಮೊದಲ ಮಾದರಿಯಲ್ಲಿ, ಧರ್ಮ (ರಿಲಿಜನ್) ಮತ್ತು ಸರ್ಕಾರ ಎಂಬ ಪರಿಕಲ್ಪನೆಗಳ ನಡುವೆ ಅದೆಷ್ಟರಮಟ್ಟಿಗಿನ ಪ್ರತ್ಯೇಕತೆಯಿದೆಯೆಂದರೆ, ಧಾರ್ವಿುಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಖಂಡಿತ ಇರುವುದಿಲ್ಲ ಮತ್ತು ಸರ್ಕಾರಿ ವಿಷಯ ಗಳಲ್ಲಿಯೂ ಧರ್ಮದ ಹಸ್ತಕ್ಷೇಪ ಇರುವುದಿಲ್ಲ.
ಎರಡನೇ ಮಾದರಿ ಬಹು-ಧಾರ್ವಿುಕ ಸಮಾಜಗಳಿಗೆ ಸಂಬಂಧಿಸಿರುವಂಥದ್ದು; ಅಂದರೆ ಸರ್ಕಾರವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಪರಿಗಣಿಸಬೇಕು ಮತ್ತು ಎಲ್ಲ ಧರ್ಮಗಳಿಂದಲೂ ಸಮಾನ ಅಂತರ ಕಾಯ್ದುಕೊಳ್ಳಬೇಕು ಎಂದರ್ಥ. ಮೊದಲ ಮಾದರಿಗೆ ತದ್ವಿರುದ್ಧವಾಗಿ, ಎರಡನೇ ಮಾದರಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಕಾರಣಗಳನ್ನು ಮುಂದುಮಾಡಿಕೊಂಡು ಸರ್ಕಾರದ ಮಧ್ಯಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ.
ಭಾರತದಲ್ಲಿ ಜಾತ್ಯತೀತತೆ( ಸೆಕ್ಯುಲರಿಸಮ್) ಪರಿಕಲ್ಪನೆ ತುಂಬಾ ವಿಭಿನ್ನವಾಗಿದೆ
- ಸೆಕ್ಯುಲರಿಸಂ” ಎಂಬ ಪರಿಕಲ್ಪನೆಯು ಮೂಲತಃ ಯುರೋಪಿನದ್ದು. ಅದು ಭಾರತದಲ್ಲಿ ಅನುಷ್ಠಾನಗೊಂಡ ಬಗೆ ಬೇರೆಯೇ ಆಗಿದೆ. ವಸಾಹತು ಆಡಳಿತಕ್ಕಿಂತ ಪೂರ್ವದಲ್ಲಿ ಅಥವಾ ಸ್ವಾತಂತ್ರ್ಯ ಸಿಗುವವರೆಗೂ ಭಾರತದಲ್ಲಿ ಒಂದು ಮಟ್ಟದ ಸಹಬಾಳ್ವೆ ಇತ್ತಾದರೂ ಆಗ ಪ್ರಭುತ್ವ ನಿರ್ದೇಶಿತ ಸೆಕ್ಯುಲರಿಸಂ ಇರಲಿಲ್ಲ. ನೆಹರೂ ಕಾಲದಿಂದಲೇ ಸೆಕ್ಯುಲರಿಸಂ ಎಂಬುದನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಜೊತೆಗೆ ತಳಕು ಹಾಕಲಾಯಿತು. ಆ ಮೂಲಕ ಎಲ್ಲ ಮತಧರ್ಮಗಳನ್ನು ಸಮಾನವಾಗಿ ಕಾಣುವುದು ಅಥವಾ ಸಮಾನ ದೂರವನ್ನು ಕಾಯ್ದುಕೊಳ್ಳುವುದು ಎಂಬಂಥ ಮೇಲು ಸ್ತರದ ಕಲ್ಪನೆಯ ಜೊತೆಗೇ ವಿವಿಧ ಧರ್ಮಗಳಿಗೆ ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ, ಪ್ರತ್ಯೇಕ ರೀತಿಯ ಅವಕಾಶ ಹಾಗೂ ಸ್ಥಾನಮಾನಗಳನ್ನು ನೀಡಲಾಯಿತು. ಸೆಕ್ಯುಲರ್ ಎಂಬ ಪದವನ್ನು ಸಂವಿಧಾನದಲ್ಲಿ ಆನಂತರ ಸೇರಿಸಲಾಯಿತಾದರೂ ಹಾಗೆ ಸೇರಿಸುವುದಕ್ಕೆ ಮೊದಲು ಇಲ್ಲಿ ಇದ್ದುದು ಕೂಡ ಈಗಿರುವಂಥದ್ದೇ ಜಾತ್ಯತೀತ ಪ್ರಜಾಪ್ರಭುತ್ವ. ಒಟ್ಟಿನಲ್ಲಿ ಕಳೆದ ಆರು ದಶಕಗಳಿಂದಲೂ ಪ್ರಜಾಪ್ರಭುತ್ವವು ಭಾರತದಲ್ಲಿ ಯಶಸ್ವಿಯಾಗಿ ಅಸ್ತಿತ್ವದಲ್ಲಿದ್ದರೂ ಸೆಕ್ಯುಲರ್ ಅನ್ನುವ ನೆಲೆಯಲ್ಲಿ ಅದು ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆದಿಲ್ಲ ಎನ್ನುವುದು ಸ್ಪಷ್ಟ. ಯಾಕೆಂದರೆ ನಮ್ಮ ದೇಶದಲ್ಲಿ ಕೋಮುವಾದ, ಕೋಮುಗಲಭೆಗಳು, ಕೋಮುವಾದೀ ರಾಜಕರಣ ಇವೆಲ್ಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಕೋಮುವಾದಿ ಎನ್ನಲಾಗುವ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುತ್ತವೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಹೀಗೆ ಜಾತ್ಯತೀತತೆ ಸೋಲುತ್ತಿರುವುದು ಯಾಕೆ ಎಂದು ಚಿಂತಿಸುವುದು ಅಗತ್ಯ.
- ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಚರಣೆಯಲ್ಲಿರುವ ಪರಿಪಾಠಕ್ಕೆ ಹೋಲಿಸಿದಾಗ, ಭಾರತದಲ್ಲಿನ ಸೆಕ್ಯುಲರಿಸಂ ಪರಿಕಲ್ಪನೆ ತೀರಾ ಭಿನ್ನವಾಗಿದೆ. ಉದಾಹರಣೆಗೆ, ಅಮೆರಿಕದಲ್ಲಿ ಸೆಕ್ಯುಲರಿಸಂ ಎಂಬುದು ಧಾರ್ವಿುಕ ವಿಷಯಗಳಲ್ಲಿನ ಸಮಾನತೆ ಮತ್ತು ಕ್ರಿಯಾಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸೂಚಿಸುತ್ತದೆ. ಪ್ರತಿ ವ್ಯಕ್ತಿಯೂ ತನ್ನ ಯುಕ್ತಾಯುಕ್ತ ಪರಿಜ್ಞಾನದ ಅನುಸಾರ ಧಾರ್ವಿುಕ ಪರಿಪಾಠ ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ ಎಂಬುದನ್ನು ಇದು…..CLICK HERE TO READ MORE