3rd OCTOBER MLP-MODEL ANSWERS.

3nd OCTOBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

1. Despite a change in laws relating to Rape, it is the characterisation of victims that causes significant agony. Comment.       (200 Words)

(ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆಗಳ ಹೊರತಾಗಿಯೂ, ಸಂತ್ರಸ್ತರಿಗೆ ಗಮನಾರ್ಹವಾದ ಸಂಕಟವನ್ನು ಉಂಟುಮಾಡುತ್ತಿದೆ ವ್ಯಾಖ್ಯೆಸಿ).               (200 ಪದಗಳು)

 

ಸಮಾಜದಲ್ಲಿ ಅಸಮಾನತೆಯ ವಾಸ್ತವತೆಗಳು ಅತ್ಯಾಚಾರ ಮತ್ತು ಕಿರುಕುಳದಂತಹ ಕೆಟ್ಟ ಅಪರಾಧಗಳಿಗೆ ಕಾರಣವಾಗಿತ್ತಿವೆ .

ನಮ್ಮ ದೇಶದ ಬಹಳಷ್ಟು ಕಾನೂನು ಮತ್ತ ಕಾಯಿದೆಗಳು ಶೋಷಿತರ, ಮಹಿಳೆಯರ ಪರವಾಗಿ ಇವೆ  ಅವೆಲ್ಲಾ ಕಾಗದದ ಮೇಲಿನ  ಹುಲಿಗಳಾಗಿ ಉಳಿದುಕೊಂಡಿವೆ . ಸಂವಿಧಾನ ಜಾರಿಗೆ  ಬಂದು ಇಷ್ಟು ವರ್ಷ  ಆದರು  ಮಹಿಳೆಗೆ ಮಿಸಲಾತಿ ಅವಶ್ಯವಾಗಿದ್ದು ಅದನ್ನ ಒದಗಿಸಿಕೊಡಲಿಕ್ಕೆ ವ್ಯವಸ್ಥೆ ಯೋಚಿಸಿದರೆ  ನೋಡಿದ್ರ, ಸಮಾನತೆ, ಸಬಲೀಕರಣ ಅನ್ನೊ ಮಾತುಗಳು ಬರೆ ಕಾಗದದ  ಮೇಲಿನ  ಭಾಷೆಯಾಗಿ ಉಳಿದುಕೊಳ್ಳುತ್ತವೆ .

 

ಅತ್ಯಾಚಾರದಂತಹ ಪ್ರಕರಣಗಳಲ್ಲಿ ನಮ್ಮ ದೇಶ 7ನೇಯ ಸ್ಥಾನದಲ್ಲಿದೆ, ಚೀನಾ ಮೊದಲ ಸ್ಥಾನದಲ್ಲಿದೆ. ಹೀಗೆ ಪ್ರಕರಣಗಳು ನಡೆಯುತ್ತಾ ಸಾಗಿದರೆ ನಮ್ಮ ದೇಶ ಮೊದಲ ಸ್ಥಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ. ನಮ್ಮ ದೇಶದ ಕಾನೂನು ವ್ಯವಸ್ಥೆ, ನಿಯಮಗಳು ಬಿಗಿಯಾಗಿಲ್ಲದಿರುವುದೇ ಇದಕ್ಕೆಲ್ಲಾ ಮೂಲ ಕಾರಣ. ಇದರ ಜೊತೆಗೆ ಪುರುಷರ ಮನಸ್ಥಿತಿಯೂ ಬದಲಾಗಬೇಕಿದೆ. ನಮ್ಮ ದೇಶದಲ್ಲಿ, ಈ ಬಲಾತ್ಕಾರ ಪ್ರಕರಣಗಳ ಅಂಕಿ ಅಂಶಗಳನ್ನು ನೋಡುತ್ತಾ ಸಾಗಿದರೆ, ಒಮ್ಮೆ ಬೆಚ್ಚಿ ಬೀಳಲೇಬೇಕು. ಅಷ್ಟೊಂದು ತೀವ್ರತರವಾಗಿದೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಬಲಾತ್ಕಾರಗಳು. ಇಷ್ಟೊಂದು ಬಲಾತ್ಕಾರಗಳು ನಡೆಯುತ್ತಿದ್ದರೂ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ನೀಡಲು ನಮ್ಮ ಸರ್ಕಾರ ವಿಫಲವಾಗುತ್ತಿದೆ. . ಇದರಿಂದಾಗಿಯೇ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ, ಅತ್ಯಾಚಾರದಂತಹ ಪ್ರಕರಣಗಳು ಜಾಸ್ತಿಯಾಗುತ್ತಿರುವುದು. ಮಾನವ ಹಕ್ಕು ಆಯೋಗದ ಒಂದು ಸರ್ವೇಯ ಪ್ರಕಾರ ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಸುಮಾರು 7200 ಅಪ್ರಾಪ್ತೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದು ಕೇವಲ ದಾಖಲಾದ ಪ್ರಕರಣಗಳ ಸಂಖ್ಯೆ, ದಾಖಲಾಗದೇ ಮೂಲೆ ಸೇರಿದ ಪ್ರಕರಣಗಳು ಇವೆ

 

 

ನಮ್ಮ ದೇಶದಲ್ಲಿ ಬಲತ್ಕಾರದ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಅದನ್ನು ನೋಡಿದ ಮೇಲೆ ನಮ್ಮ ದೇಶದ ಕಾನೂನು ಎಷ್ಟೊಂದು ದುರ್ಬಲ ಮತ್ತು ಕೆಲಸಕ್ಕೆ ಬಾರದ ನಿಯಮಗಳೇ ಅದರಲ್ಲಿ ತುಂಬಿದೆ ಎಂಬುದನ್ನು. ಇಂಡಿಯನ್ ಎಕ್ಸಪ್ರೆಸ್ ಮತ್ತು ನ್ಯಾಷನಲ್ ಕ್ರೈಮ್ ರೆಕಾರ್ಡ ಬ್ಯೂರೋ ಇದರ ವರದಿಯ ಪ್ರಕಾರ, ಕೇವಲ ದೆಹಲಿಯಲ್ಲಿ ಪ್ರತಿ ದಿನ ಕನಿಷ್ಠ 6 ಬಲಾತ್ಕಾರ ಪ್ರಕರಣಗಳು ದಾಖಲಾಗುತ್ತಿವೆ. ಇವರ ಅಂಕಿ ಅಂಶದ ಪ್ರಕಾರ ನಮ್ಮ ದೇಶದಲ್ಲೇ ಅತಿ ಹೆಚ್ಚು ಬಲಾತ್ಕಾರ ಪ್ರಕರಣಗಳು ನಡೆಯುವುದು ದೆಹಲಿಯಲ್ಲಿ. ಇವರು 2012 ರಿಂದ 2015 ರವರೆಗಿನ ದೆಹಲಿಯಲ್ಲಿ ನಡೆದ ಬಲಾತ್ಕಾರ ಪ್ರಕರಣಗಳ ವರದಿಯನ್ನೂ ಸಹ ಕೊಡುತ್ತಾರೆ. 2012ರಲ್ಲಿ 706 ಪ್ರಕರಣಗಳು ದಾಖಲಾಗಿದ್ದರೆ, 2013ರಲ್ಲಿ 1636 ಪ್ರಕರಣಗಳು ದಾಖಲಾಯಿತು, 2014 ರ ವೇಳೆಗೆ ಇದರ ಪ್ರಮಾಣ 2085 ಕ್ಕೇರಿದರೆ 2015 ರ ಹೊತ್ತಿಗೆ 2095 ಕ್ಕೇರಿತು. ಈ ಅಂಕಿ ಅಂಶಗಳು, ಹೀಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಲಾತ್ಕಾರ ಪ್ರಕರಣಗಳನ್ನು ನೋಡುತ್ತಿದ್ದರೆ, ನಮ್ಮ ಕಾನೂನು ವ್ಯವಸ್ಥೆ, ಅದರ ನಿಯಮಗಳು ಹೇಡಿತನದ ಪರಮಾವಧಿಯೇ ಹೊರತು, ಆ ನಿಯಮಗಳು ಅಪರಾಧಿಯನ್ನು ಶಿಕ್ಷಿಸಲು ವಿಫಲ ಎಂಬುದು ಸ್ಪಷ್ಟ. ಏಕೆಂದರೆ ಇಷ್ಟೊಂದು ಪ್ರಕರಣಗಳು….CLICK HERE TO READ MORE

Share