4th SEPTEMBER- DAILY CURRENT AFFAIRS BRIEF

4th SEPTEMBER

 

 

1.ಇಫಾರ್ಮಸಿಗೆ ಕರಡು ನಿಯಮದಿಂದ ಹೊರಬಂದ ಕೇಂದ್ರ ಆರೋಗ್ಯ ಸಚಿವಾಲಯ.(Draft rules for E Pharmacies)

SOURCE https://timesofindia.indiatimes.com/india/dgci-issues-draft-rules-for-e-pharmacies-rs-3000-crore-industry-to-be-regularised/articleshow/65645654.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿಕರಡು ನಿಯಮದ ಪ್ರಮುಖ ಅಂಶಗಳು

ಮುಖ್ಯ ಪರೀಕ್ಷೆಗಾಗಿ–    ಇಫಾರ್ಮಸಿ   ಪ್ರಾಮುಖ್ಯತೆ ಹಾಗು ನಿಯಂತ್ರಣ ಅಗತ್ಯತೆ

 

ಪ್ರಮುಖ ಸುದ್ದಿ

  • ಆನ್‌ಲೈನ್‌ನಲ್ಲಿ ಔಷಧ ಮಾರಾಟ ವ್ಯವಸ್ಥೆಯ ಜನಪ್ರಿಯತೆಯನ್ನು ಮನಗಂಡ ಕೇಂದ್ರ ಸರ್ಕಾರ ‘ಇ–ಫಾರ್ಮಸಿ’ಗಳನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ.

 

  • ಇ–ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಲು ‘ಔಷಧ ಮತ್ತು ಸೌಂದರ್ಯವರ್ಧಕ ನಿಯಂತ್ರಣ ಕಾಯ್ದೆ(1945)’ಗೆ ತಿದ್ದುಪಡಿ ತರಲು ಸಿದ್ಧವಾಗಿದೆ. ಸದ್ಯ ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವುದು ಕಾನೂನುಬದ್ಧವಲ್ಲ.

 

ಮುಖ್ಯ ಅಂಶಗಳು

  • ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಕಾನೂನುಬದ್ಧಗೊಳಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಕಾಯ್ದೆ ತಿದ್ದುಪಡಿಗೆ ಕರಡು ನಿಯಮಾವಳಿಗಳನ್ನೂ ಬಿಡುಗಡೆ ಮಾಡಿದೆ.

 

  • ಆನ್‌ಲೈನ್‌ ತಾಣದಲ್ಲಿ ಔಷಧ ಮಾರಾಟ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿತ್ತು.

 

ಹೊಸ ವ್ಯಾಖ್ಯಾನ:

 

  • ‘ಆನ್‌ಲೈನ್, ವೆಬ್‌ ಪೋರ್ಟಲ್‌ ಅಥವಾ ಇನ್ನಿತರ ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ಔಷಧ ಮಾರಾಟ, ವಿತರಣೆ, ಸಂಗ್ರಹ, ಸರಬರಾಜು ವಹಿವಾಟು ನಡೆಸುವ ತಾಣ’ ಎಂದು ಇ–ಫಾರ್ಮಸಿಯನ್ನು ವ್ಯಾಖ್ಯಾನಿಸಲಾಗಿದೆ.

 

  • ಒಂದು ವೇಳೆ ಆನ್‌ಲೈನ್‌ ತಾಣಗಳು ಕಳಪೆ ದರ್ಜೆ ಅಥವಾ ಕಲಬೆರಕೆ ಔಷಧಗಳನ್ನು ಮಾರಾಟ ಮಾಡಿದರೆ ಗ್ರಾಹಕರು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಿ, ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

 

ಅಧಿಸೂಚನೆಯಲ್ಲಿ ಏನಿದೆ ?

 

  • ಇ–ಫಾರ್ಮಸಿಯಲ್ಲಿ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ ಔಷಧಗಳ ಮಾರಾಟಕ್ಕೆ ಅವಕಾಶ ಇಲ್ಲ

 

  • ಶೆಡ್ಯೂಲ್‌ 10 ಪಟ್ಟಿಯಲ್ಲಿ ಸೂಚಿಸಲಾಗಿರುವ ಉಪಶಮನಕಾರಿ, ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಮಾತ್ರೆಗಳ ಮಾರಾಟಕ್ಕೆ ನಿರ್ಬಂಧ

 

  • ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ವೈದ್ಯರ ಸಲಹಾ ಚೀಟಿಯನ್ನು ದಾಖಲೆಯಂತೆ ಕಾಪಾಡುವುದು ಕಡ್ಡಾಯ

 

  • ವೈದ್ಯರ ಚೀಟಿ, ವೈದ್ಯರು ಮತ್ತು ರೋಗಿಯ ಮಾಹಿತಿಗಳನ್ನು ಪರಿಶೀಲಿಸುವ ಹೊಣೆ ಆನ್‌ಲೈನ್‌ ಔಷಧ ಮಾರಾಟ ಸಂಸ್ಥೆಗಳದ್ದಾಗಿರುತ್ತದೆ

 

  • ಔಷಧ ಮಾರಾಟದ ಸಮಗ್ರ ಮಾಹಿತಿಯನ್ನು ಇ–ಫಾರ್ಮಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ

 

ಇದರ  ಮಹತ್ವ:

 

  • ಭಾರತದಲ್ಲಿ ಇ–ಫಾರ್ಮಸಿ ಇನ್ನೂ ಬಾಲಾವಸ್ಥೆಯಲ್ಲಿದೆ. ಬರುವ ವರ್ಷಗಳಲ್ಲಿ ದೇಶದ ಔಷಧ ವಹಿವಾಟು ವಲಯದ ಶೇ 5–15ರಷ್ಟು ಆನ್‌ಲೈನ್‌ ಮೂಲಕ ನಡೆಯುವ ನಿರೀಕ್ಷೆ ಇದೆ.
  • ರೋಗಿಗಳು ಪ್ರಿಸ್ಕ್ರಿಪ್ಷನ್ ಅನ್ನು ಅಪ್ಲೋಡ್ ಮಾಡುವ ಮೂಲಕ ಔಷಧಿಗಳನ್ನು ಆದೇಶಿಸಬಹುದು, ಮತ್ತು ಅವರು ಮನೆ ಬಾಗಿಲಿಗೆ ಔಷಧಾಲಯಗಳ ಮೂಲಕ ಔಷಧಿಯನ್ನು   ವಿತರಿಸುತ್ತಾರೆ.  ಇದರಲ್ಲಿ ಯಾವುದೇ   ವಿತರಣಾ ವೆಚ್ಚಗಳಿಲ್ಲ ಮತ್ತು ಇ ಔಷಧಾಲಯಗಳು ತಯಾರಕರಿಂದ  ನೇರವಾಗಿ ಖರೀದಿಸಿರುವುದರಿಂದ, ಬೆಲೆಯು ಶೇ  20 ರಿಂದ 30%  ರಷ್ಟು  ಇಳಿಯಬಹುದು.
  • ಎಲ್ಲಾ ವಹಿವಾಟುಗಳನ್ನು ಅನ್ಲೈನ್ ನಲ್ಲೆ ಮಾಡಲಾಗುತ್ತದೆ, ಅದು ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸುತ್ತದೆ…..CLICK HERE TO READ MORE
Share