6th SEPTEMBER
1.ಸೆಕ್ಷನ್ 377ಕ್ಕೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್
SOURCE-https://www.thehindubusinessline.com/news/national/homosexuality-decriminalised/article24879339.ece
ವಿಧ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಸೆಕ್ಷನ್ 377 ಬಗ್ಗೆ
ಮುಖ್ಯ ಪರೀಕ್ಷೆಗಾಗಿ -ಸೆಕ್ಷನ್ 377 ರದ್ದುಪಡಿಸಿರುವ ಸುಪ್ರೀಂ ಕೋರ್ಟನ ತೀರ್ಪು ಸಮಂಜಸವೇ ? ಅವಲೋಕಿಸಿ.
ಪ್ರಮುಖ ಸುದ್ದಿ
- ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು ಎಂದು ಹೇಳುವ ಮೂಲಕ ಸಲಿಂಗ ಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
- ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸಲಿಂಗ ಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ತನ್ನ ಅಂತಿಮ ತೀರ್ವು ನೀಡಿದ ಸುಪ್ರೀಂ ಕೋರ್ಟ್, ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು. ಇಷ್ಟು ದಿನ ಅವರ ಹಕ್ಕನ್ನು ಕಸಿಯಲಾಗಿತ್ತು. ಲೈಂಗಿಕ ದೃಷ್ಟಿಕೋನ ವೈಯುಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ತಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದಂತೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಮುಖ್ಯ ಅಂಶಗಳು
ಸುಪ್ರೀಂ ಕೋರ್ಟ್ ಹೇಳಿದ್ದೇನು?
- ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸುವ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂಬ ತನ್ನ ಅವಿರೋಧ ತೀರ್ಪು ನೀಡಿತು.
- ಈ ವೇಳೆ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು. ಇಷ್ಟು ದಿನ ಅವರ ಹಕ್ಕನ್ನು ಕಸಿಯಲಾಗಿತ್ತು. ಲೈಂಗಿಕ ದೃಷ್ಟಿಕೋನ ವೈಯುಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ತಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದಂತೆ. ದೇಶದ ನಾಗರಿಕನಿಗಿರುವ ಪ್ರತೀಯೊಂದು ಹಕ್ಕು ಕೂಡ ಸಲಿಂಗಗಳಿಗಿದೆ. ಪರಸ್ಪರರ ಹಕ್ಕುಗಳನ್ನು ನಾವು ಗೌರವಿಸಬೇಕು.
- ಸಲಿಂಗಕಾಮ ಅಪರಾಧ ಎಂಬ ಚರ್ಚೆಯೇ ತರ್ಕಕ್ಕೆ ವಿರುದ್ಧವಾದುದಾಗಿದ್ದು, ಸಲಿಂಗಕಾಮನ್ನು ಅಪರಾಧ ಎನ್ನುವ ಐಪಿಸಿ ಸೆಕ್ಷೆನ್ 377 ಸಂವಿಧಾನದ ಕಲಂ 14 (ಧರ್ಮ, ಜಾತಿ, ಲಿಂಗ, ಪ್ರದೇಶದ ಹೆಸರಲ್ಲಿ ದೌರ್ಜನ್ಯ ನಡೆಸುವುದರ ವಿರುದ್ಧ ಹೋರಾಡುವ ಹಕ್ಕು)ರ ಉಲ್ಲಂಘನೆಯಾಗುತ್ತದೆ. ಸಾಂವಿಧಾನಿಕ ನಿಬಂಧನೆಗಳನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
- ಐಪಿಸಿ ಸೆಕ್ಷನ್ 377 ಅನ್ವಯ ಸಲಿಂಗಕಾಮ ಅಪರಾಧವಾಗಿದ್ದು, ಈ ಕಾನೂನಿನ ಅನ್ವಯ ಸಲಿಂಗಕಾಮದ ಕುರಿತ ಸಹಾನುಭೂತಿ ಕೂಡ ಅಪರಾಧ ಎಂದಾಗಿತ್ತು. ಆದರೆ ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಅವಿರೋಧವಾಗಿ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ್ದು, ಆ ಮೂಲಕ 156 ವರ್ಷಗಳ ಹಳೆಯ ಕಾನೂನು ರದ್ದಾದಂತಾಗಿದೆ.
- ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಜುಲೈನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಸೆಕ್ಷನ್ 377 ಏನೆನ್ನುತ್ತದೆ?
- ಸೆಕ್ಷನ್ 377, ನಿಸರ್ಗ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ನಿಸರ್ಗ ವಿರುದ್ಧವಾಗಿ ಸ್ವಯಂಪ್ರೇರಣೆಯಿಂದ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಈ ಸೆಕ್ಷನ್ ಹೇಳುತ್ತದೆ. ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.
ಸೆಕ್ಷನ್ ವಿರುದ್ಧದ ವಾದ ಏನು?
- ಸಂವಿಧಾನದ 15ನೇ ವಿಧಿ (ಲಿಂಗಾಧಾರಿತ ತಾರತಮ್ಯ), 14ನೇ ವಿಧಿ (ಸಮಾನತೆ), 19ನೇ ವಿಧಿಯ (ಸ್ವಾತಂತ್ರ್ಯ) ಉಲ್ಲಂಘನೆ…CLICK HERE TO READ MORE