ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ
ಸರ್ದಾರ್ ಸರೋವರ್ ಅಣೆಕಟ್ಟು ಮಾರಕವೇ? ಅಥವಾ ಪೂರಕವೇ?
ಸಂದರ್ಭ:
ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ತಮ್ಮ 67 ನೇ ಹುಟ್ಟುಹಬ್ಬದಂದು ಗುಜರಾತ್ ನ ಸರ್ದಾರ್ ಸರೋವರ್ ಅಣೆಕಟ್ಟುನ್ನು ಉದ್ಘಾಟಿಸಿದರು. ಈ ಅಣೆಕಟ್ಟು ಇಂಜಿನಿಯರಿಂಗ್ ವಿಸ್ಮಯ., ಪ್ರತಿಯೊಬ್ಬ ಇಂಜಿನಿ ಯರಿಂಗ್ ವಿದ್ಯಾರ್ಥಿಯ ಅಧ್ಯಯನಕ್ಕೆ ಸೂಕ್ತ ಯೋಜನೆಯೂ ಹೌದು ಎಂದು ಪ್ರಧಾನಿ ತಿಳಿಸಿದರು.ಈ ಯೋಜನೆ ವಿರುದ್ಧ ಭಾರಿ ಅಪಪ್ರಚಾರ ಆರಂಭವಾದ ಪರಿಣಾಮ, ಇದಕ್ಕೆ ಹಣ ನೀಡಲು ಒಪ್ಪಿಕೊಂಡಿದ್ದ ವಿಶ್ವ ಬ್ಯಾಂಕ್ ಕೂಡ ಹಿಂದೆ ಸರಿಯಿತು. ಆದಾಗ್ಯೂ, ಯೋಜನೆ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೆವು.ಈ ಯೋಜನೆ ಇಂಜಿನಿಯರಿಂಗ್ನ ಅದ್ಭುತ‘ ಎಂದು ಅವರು ಬಣ್ಣಿಸಿದರು.
ಏಪ್ರಿಲ್ 5 ,1961ರಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ್ ಅಣೆಕಟ್ಟೆ ನಿರ್ಮಿಸುವ ಯೋಜನೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಶಂಕುಸ್ಥಾಪನೆ ನೆರವೇರಿಸಿದ್ದರು.ಆದರೆ 1987 ರಲ್ಲಿ ಮಾತ್ರ ನಿರ್ಮಾಣ ಆರಂಭವಾಯಿತು. ಸರ್ದಾರ್ ಸರೋವರ್ ಅಣೆಕಟ್ಟನ್ನು ಭಾರತದ ಹೊಸ ಮತ್ತು ಉದಯೋನ್ಮುಖ ಶಕ್ತಿಗಳ ಸಂಕೇತವೆಂದು ಪ್ರಧಾನಿ ಹೇಳಿದರು.
ಇದು ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಅಣೆಕಟ್ಟೆ ಎನಿಸಿಕೊಂಡಿದೆ. ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ಈ ಡ್ಯಾಮ್ ಅಗಾಧತೆಯ ವಿಷಯದಲ್ಲಿ ಅಮೆರಿಕದ ಗ್ರ್ಯಾಂಡ್ ಕೌಲೀ ಡ್ಯಾಮ್ ನಂತರದ ಸ್ಥಾನ ಪಡೆದುಕೊಂಡಿದೆ.
ಸರ್ದಾರ್ ಸರೋವರ್ ಅಣೆಕಟ್ಟು ಭಾರತದ ಗುಜರಾತಿನ ನವಗಮ್ ಬಳಿಯ ನರ್ಮದಾ ನದಿಯ ಮೇಲೆ ಕಟ್ಟಿರುವ ಗುರುತ್ವ ಅಣೆಕಟ್ಟು. ಇದು ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಿಗೆ ನೀರುಣಿಸಲಿದೆ. ಈ ಯೋಜನೆಯಿಂದ ಸುಮಾರು 10 ಲಕ್ಷ ಕೃಷಿಕರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು…….. CLICK HERE TO READ MORE
ಸರ್ದಾರ್ ಸರೋವರ್ ಯೋಜನೆ ಬೆಳೆದು ಬಂದ ಹಾದಿ
ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯು ಗುಜರಾತ್ ಬರ–ಪೀಡಿತ ಪ್ರದೇಶಗಳಿಗೆ ಹೇಗೆ ಜೀವಸೆಲೆ ಯಾಗುತ್ತದೆ ?
ಸರ್ದಾರ್ ಸರೋವರ ಅಣೆಕಟ್ಟು ಯೋಜನೆಗಳ ನ್ಯೂನತೆಗಳು ಯಾವುವು?