Daily Current Affairs 4th October

4th OCTOBER

1.SOURCE-PIB http://pib.nic.in/newsite/PrintRelease.aspx?relid=171372

 

ರೈಲು ವಲಯದಲ್ಲಿನ ತಾಂತ್ರಿಕ ಸಹಕಾರಕ್ಕಾಗಿ ಸ್ವಿಜರ್ಲ್ಯಾಂಡ್ ಮತ್ತು ಭಾರತ ನಡುವೆ  ಒಪ್ಪಂದ

 

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಮತ್ತು ಸ್ವಿಸ್ ಒಕ್ಕೂಟದ ಪರಿಸರ, ಸಾರಿಗೆ, ಇಂಧನ ಮತ್ತು ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಸಂವಹನಗಳ ಒಕ್ಕೂಟ ಇಲಾಖೆ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ಕ್ಕೆ ಆಗಸ್ಟ್ 31ರಂದು ಅಂಕಿತ ಹಾಕಲಾಗಿತ್ತು.

 

ಈ ಎಂ.ಓ.ಯು. ಈ ಕೆಳಕಂಡ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕೆ ಅವಕಾಶ ಮಾಡಿಕೊಡಲಿದೆ

ಎ) ಟ್ರ್ಯಾಕ್ಷನ್ ರೋಲಿಂಗ್ ಸರಕು.

ಬಿ) ಇಎಂಯು ಮತ್ತು ರೈಲು ಜೋಡಿಗಳು

ಸಿ). ಸೆಳೆಯುವ ಸಂಚಾಲನಾ ಉಪಕರಣಗಳು

ಡಿ)ಸರಕು ಮತ್ತು ಪ್ರಯಾಣಿಕ ಕಾರುಗಳು

ಇ). ಟಿಲ್ಟಿಂಗ್ ರೈಲುಗಳು

ಎಫ್) ರೈಲ್ವೆ ವಿದ್ಯುದೀಕರಣ ಸಲಕರಣೆಗಳು

ಜಿ). ರೈಲು ವೇಳಾಪಟ್ಟಿ ಮತ್ತು ಕಾರ್ಯಾಚರಣೆಯ ಸುಧಾರಣೆ

ಎಚ್)ರೈಲು ನಿಲ್ದಾಣಗಳ ಆಧುನೀಕರಣ

ಐ). ಬಹು ಮಾದರಿ ಸಾರಿಗೆ

ಜೆ) ಸುರಂಗಮಾರ್ಗ ತಂತ್ರಜ್ಞಾನ

 

ಹಿನ್ನೆಲೆ:

  • ರೈಲ್ವೆ ಸಚಿವಾಲಯವು ರೈಲು ವಲಯದಲ್ಲಿನ ತಾಂತ್ರಿಕ ಸಹಕಾರಕ್ಕಾಗಿ ವಿದೇಶಿ ಸರ್ಕಾರಗಳು ಮತ್ತು ರಾಷ್ಟ್ರೀಯ ರೈಲ್ವೆಯೊಂದಿಗೆ ಹಲವು ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಿದೆ.
  • ಗುರುತಿಸಲಾಗಿರುವ ಕ್ಷೇತ್ರಗಳಲ್ಲಿ ಅತಿ ವೇಗದ ಕಾರಿಡಾರ್, ಹಾಲಿ ಇರುವ ಮಾರ್ಗಗಳಲ್ಲಿ ವೇಗ ವರ್ಧನೆ, ವಿಶ್ವದರ್ಜೆಯ ನಿಲ್ದಾಣಗಳ ಅಭಿವೃದ್ಧಿ, ಭಾರಿ ಪ್ರಯಾಣದ ಕಾರ್ಯಾಚರಣೆಗಳು ಮತ್ತು…CLICK HERE TO READ MORE
Share