4th OCTOBER MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು’ ‘ಮಾದರಿ ಉತ್ತರಗಳು’ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
1.Choice and Consent are the pillars for women rights. With reference to abortion rights, explain how both these pillars need to be protected.
( ಮಹಿಳೆಯರಿಗೆ ಆಯ್ಕೆ ಮತ್ತು ಒಪ್ಪಿಗೆ ಇವೆರಡು ಅವರ ಹಕ್ಕಿಗೆ ಆಧಾರ ಸ್ಥ೦ಭಗಳು . ಗರ್ಭಪಾತ ಹಕ್ಕುಗಳ ಆಧಾರದ ಮೇಲೆ ಈ ಸ್ತಂಭಗಳೆರಡೂ ಹೇಗೆ ರಕ್ಷಣೆ ಪಡೆಯಬಹುದೆಂಬುದನ್ನು ವಿವರಿಸಿ) (200 ಪದಗಳು)
ಇತ್ತೀಚಿನ ದಿನಗಳಲ್ಲಿ, ಸುಪ್ರೀಂ ಕೋರ್ಟಿನಲ್ಲಿ, ಗರ್ಭಧಾರಣೆಯಾದ ಇಪ್ಪತ್ತು ವಾರಗಳ ನಂತರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರುತ್ತಾ ಸಾಲುಸಾಲು ಅಹವಾಲುಗಳು ದಾಖಲಾಗುತ್ತಿವೆ. ಇದು ‘ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್-1971’ (ವೈದ್ಯಕೀಯವಾಗಿ ಬಸಿರನ್ನು ಕೊನೆಗೊಳಿಸಿಕೊಳ್ಳುವ ಕಾಯ್ದೆ-1971)ಗೆ ತುರ್ತಾಗಿ ತಿದ್ದುಪಡಿಗಳು ಆಗಲೇಬೇಕಿರುವುದನ್ನು ಸೂಚಿಸುತ್ತದೆ. ಈಗಿರುವ ಕಾನೂನು ಗರ್ಭವತಿಯ ಜೀವಕ್ಕೆ ಅಪಾಯವಾಗುವಂತಿದ್ದರೆ ಮಾತ್ರ ಇಪ್ಪತ್ತು ವಾರಗಳ ನಂತರವೂ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಆದ್ದರಿಂದಲೇ ಇಂತಹ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ.
ಈಗಿರುವ ಕಾನೂನು ತಾಯಿಗರ್ಭದಲ್ಲಿರುವ ಭ್ರೂಣದ ಅಸಹಜ ಬೆಳವಣಿಗೆಯನ್ನಾಗಲಿ ಅಥವಾ ಅದನ್ನು ಇಪ್ಪತ್ತು ವಾರಗಳ ನಂತರದಲ್ಲಿ ಪತ್ತೆ ಹಚ್ಚಬಹುದೆನ್ನುವ ವಾಸ್ತವವನ್ನಾಗಲಿ, ಅಥವಾ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗಬಹುದಾದ ಅಪಾಯವನ್ನಾಗಲಿ ಗರ್ಭಪಾತಕ್ಕೆ ಅನುಮತಿ ನೀಡಲು ಕಾರಣಗಳನ್ನಾಗಿ ಪರಿಗಣಿಸುವುದಿಲ್ಲ. ಆದ್ದರಿಂದಲೇ ಅವುಗಳು ಕೋರ್ಟಿನ ಮುಂದೆ ಬರುತ್ತವೆ. ಮತ್ತು ಕೋರ್ಟುಗಳು ಪ್ರತಿಯೊಂದು ಪ್ರಕರಣವನ್ನು ಬಿಡಿಬಿಡಿಯಾಗಿಯೇ ಪರಿಗಣಿಸಿ ವೈದ್ಯರ ತಂಡದ ಶಿಫಾರಸುಗಳ ಆಧರಿಸಿ ಆದೇಶವನ್ನು ನೀಡಬೇಕಾಗುತ್ತದೆ. ಆದರೆ ಈ ಕಾಯ್ದೆಗೆ ಸೂಚಿಸಲಾಗಿರುವ ತಿದ್ದುಪಡಿಗಳು ತಾಯಿಗರ್ಭದಲ್ಲಿರುವ ಭ್ರೂಣದ ಅಸ್ವಾಭಾವಿಕ ಬೆಳವಣಿಗೆ ಗಂಭೀರವಾದ ಪ್ರಮಾಣದಲ್ಲಿದ್ದರೆ (ಇದು ಕಾಯ್ದೆಯ ನಿಯಮಗಳಲ್ಲಿ ಪಟ್ಟಿಯಾಗಬೇಕು) ಮತ್ತು ಗರ್ಭವತಿ ಮಹಿಳೆಯ ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಗರ್ಭಪಾತ ಮಾಡಲು ಗರ್ಭದ ಕಾಲಾವಧಿಯನ್ನು ಮಾನದಂಡವನ್ನಾಗಿಸುವುದಿಲ್ಲ.
ಅಸುರಕ್ಷಿತ ಗರ್ಭಪಾತದಿಂದಾಗಿ ಭಾರತದಲ್ಲಿ ಸರಾಸರಿ ಪ್ರತಿದಿನ ಹತ್ತು ಮಹಿಳೆಯರು ಸಾಯುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಾಗುವ ಮೂರನೆ ಎರಡು ಭಾಗದಷ್ಟು ಗರ್ಭಪಾತಗಳು ಅಸುರಕ್ಷಿತವಾದವು. ಹಾಗೂ ಅವು ಅಧಿಕೃತ ಮತ್ತು ನಿಯಂತ್ರಣಕ್ಕೊಳಪಟ್ಟ ಆಸ್ಪತ್ರೆ ಅಥವಾ ಇತರ ದವಾಖಾನೆಗಳಲ್ಲಿ ಆಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನೊಂದಾಯಿತ ಆರೋಗ್ಯ ಸೇವಾ ದಾತರ ಸೇವೆ ಎಟುಕದಿರುವುದು ಅಥವಾ ಅಂತವರು ಗರ್ಭಪಾತ ಮಾಡಲು ನಿರಾಕರಿಸುವುದು ಒಂದು ಬಗೆಯ ಕಾರಣವಾಗಿದ್ದರೆ, ಕುಟುಂಬಗಳಿಂದ ಒತ್ತಡ ಅಥವಾ ಅಸಹಕಾರ, ಕಳಂಕಿತರಾಗುವ ಭಯ, ಹಣಕಾಸಿನ ಮುಗ್ಗಟ್ಟು ಮತ್ತು…CLICK HERE TO READ MORE