WEEK-8 ESSAY WRITING MODEL ANSWER

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯಾ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

ತಂತ್ರಜ್ಞಾನ  ಹವಾಮಾನ ಬದಲಾವಣೆಗೆ ವರವೇ ಅಥವಾ  ಶಾಪವೇ … ??

(Is Technology Boon or a bane to climate change? )

ಪೀಠಿಕೆ
ಇತ್ತೀಚಿನಲ್ಲಿ ಆದ ಬಿಹಾರದ ಪ್ರವಾಹದಲ್ಲಿ ರಾಮಚಂದ್ರ ಎಂಬ ವ್ಯಕ್ತಿಯ ತನ್ನ ಕುಟುಂಬದಿಂದ ಬೇರ್ಪಡಿಸಿತು . ಅವನು ನೀರಿನಲ್ಲಿ ಸಿಲುಕಿ ಮರವನ್ನು ಗಟ್ಟಿಯಾಗಿ ಅಂಟಿಕೊಂಡು ಮತ್ತು ತನ್ನ ಜೀವವನ್ನು ರಕ್ಷಿಸಲು ದೇವರಿಗೆ ಪ್ರಾರ್ಥಿಸುತ್ತಿದ್ದನು. ಅವನು ತನ್ನ ಮೊಬೈಲ್ ಅನ್ನು ಸಹ ನೀರಿನ ಪ್ರವಾಹದಲ್ಲಿ ಕಳೆದುಕೊಂಡಿದ್ದಾನೆ ಮತ್ತು ತನ್ನ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಆ ಸಮಯದಲ್ಲಿ ಅವನ ಬಳಿ ಯಾವುದೇ ಸಂಪನ್ಮೂಲಗಳನ್ನು ಹೊಂದಿಲ್ಲ. ಅವನ ಜೋರಾದ ಕೋಗಿನಿನಿಂದ ಮತ್ತು ಪ್ರಾರ್ಥನೆಯಿಂದ ಅಲ್ಲಿಯೇ ಸಮೀಪದಲ್ಲಿದ್ದ ದೋಣಿಯನ್ನು ಹೊಂದಿರುವ ಮನುಷ್ಯ ಮರದ ಬಳಿಗೆ ಬಂದು ಅಲ್ಲಿಂದ ಅವನನ್ನು ರಕ್ಷಿಸಿದನು. ತನ್ನ ದೋಣಿಯನ್ನು ಹೊಂದಿರುವ ಈ ಉದಾರ ಮನಸ್ಸಿನ ಮನುಷ್ಯನು ತನ್ನ ಪ್ರದೇಶದಲ್ಲಿ ಸಿಕ್ಕಿಬಿದ್ದ ಅಂತಹ ಅಪರಿಚಿತರನ್ನು ರಕ್ಷಿಸುತ್ತಿದ್ದನು.ಅಲ್ಲಿಯೇ ಉಪಸ್ಥಿತರಿದ್ದ ಸ್ವಯಂಸೇವಕರ ಅವನು ಸಹಾಯ ಮಾಡಿದ ರಾಮಚಂದ್ರ ಅವರನ್ನು ಹತ್ತಿರದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಸ್ವಯಂಸೇವಕರು ರಾಮಚಂದ್ರರವರಿಗೆ ಟವಲ್, ಆಹಾರ ನೀಡಿದರು ಜೊತೆಗೆ ತಮ್ಮ ಕುಟುಂಬವು ಸುರಕ್ಷಿತವೆಂಬುದನ್ನು ತಿಳಿದುಕೊಳ್ಳಲು ಮೊಬೈಲ್ ಕರೆ ಮೂಲಕ ರಾಮಚಂದ್ರ ಅವರಿಗೆ ಸಹಾಯ ಮಾಡಿದರು .

ಇನ್ನೊಬ್ಬ ವ್ಯಕ್ತಿ ರಾಹುಲ್ ಎನ್ನುವರು ಮುಂಬಯಿಯ ಪ್ರವಾಹ ರಸ್ತೆಯಲ್ಲೆ ನಡೆದುಕೊಂಡು ಹೋಗುತ್ತಿದ್ದನು ಹೇಗೊ ಕ್ಯಾಬ್ ಅನ್ನು ಕಂಡುಕೊಂಡನು ಮತ್ತು ಅವನ ಮನೆಯವರೆಗೆ ಆತನನ್ನು ಬಿಡಲು ಕ್ಯಾಬ್ ಚಾಲಕನಿಗೆ ಮನವಿ ಮಾಡಿದನು .ಅದಕ್ಕಾಗಿ ಕ್ಯಾಬ್ ಚಾಲಕನು 2000ರೂ ಚಾರ್ಜ್ ಆಗುತ್ತದೆ ಎಂದು ಹೇಳಿದನು ತಿಳಿಸಿದನು. 2 ಕಿಮೀ ಪ್ರಯಾಣಕ್ಕಾಗಿ ಅಷ್ಟೊಂದು ಹಣವನ್ನು ಪಾವತಿಸಲು ರಾಹುಲ್ ಮನಸ್ಸು ತುಂಬ ಆಲೋಚಿಸುತ್ತಿತ್ತು ಆದರೆ ಸುರಕ್ಷತೆಗಾಗಿ ಅವನು ಚಾಲಕನಿಗೆ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡನು .
ಈಗ ಎರಡೂ ಕಥೆ ಬಿಕ್ಕಟ್ಟಿನ ಕಾಲದಲ್ಲಿ ತಂತ್ರಜ್ಞಾನ ಮತ್ತು  ಹವಾಮಾನ ಬದಲಾವಣೆ ಎರಡು ಮುಖಗಳನ್ನು ತೋರಿಸುತ್ತದೆ.

ತಂತ್ರಜ್ಞಾನವು ಶ್ರೇಷ್ಠ ಶಿಕ್ಷಕರನ್ನು ಬದಲಿಸುವುದಿಲ್ಲ ಆದರೆ ಉತ್ತಮ ಶಿಕ್ಷಕರ ಕೈಯಲ್ಲಿ ತಂತ್ರಜ್ಞಾನ ರೂಪಾಂತರಗೊಳ್ಳುತ್ತದೆ ‘ಎನ್ನುತ್ತಾರೆ.

ಈ ಆಧುನಿಕ ಯುಗದಲ್ಲಿ, ತಂತ್ರಜ್ಞಾನದ ಬಳಕೆಯು ನಮ್ಮ  ದಿನನಿತ್ಯದ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳು, ಸ್ವಯಂ ಡ್ರೈವಿಂಗ್ ಕಾರುಗಳು, ಫ್ಲೈಯಿಂಗ್ ಡ್ರೋನ್ಸ್ ಮುಂತಾದ ದೈನಂದಿನ ಸುದ್ದಿಗಳ ವಿಷಯವಾಗಿ ಮಾರ್ಪಟ್ಟಿದೆ .  ಮಾನವ ತನ್ನ  ಜೀವನವನ್ನು  ಸರಳ ಮತ್ತು ಸುಲಭವಾಗಿಸಲು ತಂತ್ರಜ್ಞಾನದ ಅಗತ್ಯತೆ ಇದೆ . ಆದರೆ ಪ್ರಸ್ತುತ ಸನ್ನಿವೇಶದಲ್ಲಿ, ತಾಂತ್ರಿಕ ಬದಲಾವಣೆಗಳು ಮಾನವ ಪ್ರಯತ್ನಗಳನ್ನು ಅತಿಕ್ರಮಿಸುತ್ತಿವೆ ಎಂದು ಗಮನಿಸಲಾಗಿದೆ. ಮಾನವ ಜೀವನವನ್ನು ಶಾಂತಿಯುತವಾಗಿ ಮತ್ತು ಸಂತೋಷಪಡಿಸಿದರೂ, ತಂತ್ರಜ್ಞಾನವು ತಮ್ಮ ಏಕೈಕ ಬ್ರೆಡ್ ಮತ್ತು ಬೆಣ್ಣೆಯನ್ನು ಕಸಿದುಕೊಂಡು ಹೋಗುತ್ತದೆ ಅಂದರೆ   ಉದ್ಯೋಗಗಳು ಎಂದರ್ಥ . ಹಾಗಾಗಿ, ಜೀವನವನ್ನು ಸರಳಗೊಳಿಸುವ ಬದಲು ತಂತ್ರಜ್ಞಾನವು ಒಬ್ಬರ ಜೀವನದಲ್ಲಿ ಹೆಚ್ಚು ಸಂಕೀರ್ಣತೆಗಳನ್ನು ಸೃಷ್ಟಿಸಿದೆ ಎಂದು ತೋರುತ್ತದೆ.

ವಿವರಣೆ
1780 ರ ಕೈಗಾರಿಕಾ ಕ್ರಾಂತಿ ನಂತರ  ತಂತ್ರಜ್ಞಾನದಿಂದ ಆಗುತ್ತಿರುವ ಅನುಕೂಲ ಮತ್ತು ಅನಾನುಕೂಲಗಳು    ಸಾರ್ವಜನಿಕವಾಗಿ ಚರ್ಚಾ ವಿಷಯವಾಗಿದೆ. ತಂತ್ರಜ್ಞಾನದ ಅಭಿವೃದ್ದಿಯು ಕ್ರಾಂತಿಕಾರಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ತರುವ ಸಾಮರ್ಥ್ಯವಿದೆ.

ಇತಿಹಾಸವನ್ನು ಅವಲೋಕಿಸಿದಾಗ ನಮಗೆ ತಿಲಿಯುವುದೇನೆಂದರೆ ತಂತ್ರಜ್ಞಾನವು ಯಾವುದೇ ಒಂದು ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಆದರೆ ದೀರ್ಘಾವಧಿಯಲ್ಲಿ ಕೆಲಸಗಾರರ ಸಂಖ್ಯೆಯನ್ನು ಕಡಿಮೆಮಾಡಿ , ಇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತವೆ . ಇಡೀ ಕಾರಣದಿಂದ 19 ನೇ ಶತಮಾನವು ಕ್ಷಿಪ್ರ ಉದ್ಯೋಗಗಳ  ಹೆಚ್ಚಳವಾಗಿದ್ದು , ತಂತ್ರಜ್ಞಾನವು ಕುಶಲಕರ್ಮಿಗಳನ್ನು  ಕಾರ್ಖಾನೆಗಳಲ್ಲಿ … CLICK HERE TO READ MORE

Share