15th NOVEMBER-DAILY CURRENT AFFAIRS BRIEF

15th NOVEMBER

 

 

1.ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿ ಯೋಜನೆಯ ಪುನರ್ ವಿನ್ಯಾಸ ಮತ್ತು ಮುಂದುವರಿಕೆಗೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ (ಎನ್.ಆರ್.ಡಿ.ಡಬ್ಲ್ಯು.ಪಿ) ವನ್ನು ಮುಂದುವರಿಸಲು ಮತ್ತು ಫಲಶ್ರುತಿ ಆಧಾರಿತ, ಸ್ಪರ್ಧಾತ್ಮಕ ಹಾಗೂ ಸುಸ್ಥಿರತೆ (ಕಾರ್ಯನಿರ್ವಹಣೆ)ಯ ಮೇಲೆ ಹೆಚ್ಚಿನ ಗಮನದೊಂದಿಗೆ ನಿಗಾ ಇಡಲು ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಪೂರೈಕೆಯ ಖಾತ್ರಿಗಾಗಿ ಅದನ್ನು ಪುನರ್ ವಿನ್ಯಾಸಗೊಳಿಸಲು ತನ್ನ ಅನುಮೋದನೆ ನೀಡಿದೆ.

 

  • ಹದಿನಾಲ್ಕನೇ ಹಣಕಾಸು ಆಯೋಗದ (ಎಫ್.ಎಫ್.ಸಿ.) ಅವಧಿಯಲ್ಲಿ 2017-18ರಿಂದ 2019-20ರವರೆಗೆ 23,050 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯು ದೇಶದ ಎಲ್ಲ ಗ್ರಾಮೀಣ ಜನಸಂಖ್ಯೆಯನ್ನೂ ತಲುಪಲಿದೆ. ಪುನರ್ ವಿನ್ಯಾಸವು ಕಾರ್ಯಕ್ರಮವನ್ನು ಹೆಚ್ಚು ನಮ್ಯ, ಫಲಿತಾಂಶ ಆಧಾರಿತ, ಸ್ಪರ್ಧಾತ್ಮಕಗೊಳಿಸಲಿದೆ ಮತ್ತು ಕೊಳವೆಯ ಮೂಲಕ ಸುಸ್ಥಿರ ನೀರು ಪೂರೈಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಚಿವಾಲಯದ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ.

ನಿರ್ಣಯದ ವಿವರಗಳು

  • ಹದಿನಾಲ್ಕನೇ ಹಣಕಾಸು ಆಯೋಗದ ಆವರ್ತನದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ (ಎನ್ಆರ್.ಡಿ.ಡಬ್ಲ್ಯೂಪಿ)ವನ್ನು ಮಾರ್ಚ್ 2020 ರವರೆಗೆ ಮುಂದುವರೆಸುವುದು.
  • ಎನ್ಆರ್.ಡಿ.ಡಬ್ಲ್ಯೂಪಿ ಪುನರ್ ವಿನ್ಯಾಸದೊಂದಿಗೆ, ಶೇ.2ರಷ್ಟು ನಿಧಿ ಜಪಾನ್ ನ ಮೆದುಳಿನ ಉರಿಯೂತ (ಜೆಇ) / ತೀವ್ರ ಮೆದುಳು ಉರಿಯೂತ ಸಿಂಡ್ರೋಮ್ (ಎಇಎಸ್) ಬಾಧಿತ ಪ್ರದೇಶಗಳಿಗೆ ಮೀಸಲಿಡಲಾಗುತ್ತದೆ.
  • ಎನ್ಆರ್.ಡಿ.ಡಬ್ಲ್ಯೂಪಿ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ 2017ರ ಫೆಬ್ರವರಿಯಲ್ಲಿ ಆರಂಭಿಸಿರುವ ಹೊಸ ಉಪ ಕಾರ್ಯಕ್ರಮವಾದ ರಾಷ್ಟ್ರೀಯ ಜಲ ಗುಣಮಟ್ಟ ಉಪ ಅಭಿಯಾನ (ಎನ್.ಡಬ್ಲ್ಯು.ಕ್ಯು.ಎಸ್.ಎಂ.) ವು ತುರ್ತು ಅಗತ್ಯ ಇರುವ 28,000 ಆರ್ಸಾನಿಕ್ ಮತ್ತು ಫ್ಲೋರೈಡ್ ಬಾಧಿತ ಜನವಸತಿ (ಈಗಾಗಲೇ ಗುರುತಿಸಿರುವ) ಗಳ ಸಮಸ್ಯೆ ನಿವಾರಿಸಲಿದೆ.
  • ಇದಕ್ಕೆ 4 ವರ್ಷದ ಅವಧಿಗೆ ಅಂದರೆ 2021ರ ಮಾರ್ಚ್ ವರೆಗೆ ಕೇಂದ್ರ ಸರ್ಕಾರದ ಪಾಲು 12,500 ಕೋಟಿ ರೂಪಾಯಿಗಳ ಅಗತ್ಯವಿದೆ. ಇದನ್ನು ಎನ್.ಆರ್.ಡಿ.ಡಬ್ಲ್ಯು.ಪಿ. ಹಂಚಿಕೆಯಡಿಯಲ್ಲಿ ನೀಡಲಾಗುತ್ತದೆ.
  • ಒಪ್ಪಿದ ಯೋಜನೆಗಳಿಗೆ, ಎರಡನೇ ಕಂತಿನ ಮೊತ್ತದ ಅರ್ಧದಷ್ಟನ್ನು ಮುಂಗಡವಾಗಿ, ರಾಜ್ಯ ಸರ್ಕಾರಗಳು ಪಾವತಿಸಲಿವೆ, ನಂತರ ಕೇಂದ್ರ ಸರ್ಕಾರದ ನಿಧಿಯಿಂದ ಈ ಹಣವನ್ನು ಮರುಪಾವತಿ ಮಾಡುತ್ತದೆ. ರಾಜ್ಯ(ಗಳು) ಹಣಕಾಸು ವರ್ಷದ ನವೆಂಬರ್ 30ರೊಳಗೆ ಈ ಹಣವನ್ನು ಕೇಳುವಲ್ಲಿ ವಿಫಲವಾದರೆ, ಆಗ, ಈ ಮೊತ್ತವು ಕಾಮನ್ ಪೂಲ್ ನ ಭಾಗವಾಗಿ ಹೋಗುತ್ತದೆ, ಇದನ್ನು ಉನ್ನತವಾಗಿ ಕಾರ್ಯ ಪ್ರದರ್ಶಿಸುತ್ತಿರುವ ಮತ್ತು ಈಗಾಗಲೇ ಕೇಂದ್ರ ಸರ್ಕಾರದ ಅಗತ್ಯದಂತೆ ಮುಂಗಡವಾಗಿ ತನ್ನ ಪಾಲನ್ನು ನೀಡಿದ ರಾಜ್ಯಗಳಿಗೆ ಮೊದಲ ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
  • ಎರಡನೇ ಕಂತಿನ ನಿಧಿಯ ಉಳಿದ ಅರ್ಧ ಭಾಗವನ್ನು ರಾಜ್ಯಗಳಿಗೆ ಅವುಗಳು ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಯೋಜನೆಗಾಗಿ ಮಾಡಿದ ಕಾರ್ಯನಿರ್ವಹಣೆಯ ಸ್ಥಿತಿ ಆಧರಿಸಿ ಬಿಡುಗಡೆ ಮಾಡಲಾಗುತ್ತದೆ, ಇದನ್ನು ಮೂರನೇ ವ್ಯಕ್ತಿಯಿಂದ ಮೌಲ್ಯ ಮಾಪನ ಮಾಡಿಸಲಾಗುತ್ತದೆ.
  • ಸಂಪುಟವು ಎಫ್.ಎಫ್.ಸಿ. ಕಾರ್ಯಕ್ರಮಕ್ಕೆ 2017-18 ರಿಂದ 2019-20ನೇ ಸಾಲಿಗಾಗಿ 23,050 ಕೋಟಿ ರೂಪಾಯಿ ಮೊತ್ತಕ್ಕೆ ಅನುಮೋದನೆ ನೀಡಿದೆ.
  • ಎನ್.ಡಬ್ಲ್ಯು.ಕ್ಯು.ಎಸ್.ಎಂ. ಆರ್ಸಾನಿಕ್ / ಪ್ಲೋರೈಡ್ ಬಾಧಿತ ಜನವಸತಿಗ ಎಲ್ಲ ಗ್ರಾಮೀಣ ಜನಸಂಖ್ಯೆಗೆ 2021ರ ಮಾರ್ಚ್ ಅಂತ್ಯದೊಳಗೆ ಸುಸ್ಥಿರ ಆಧಾರದಲ್ಲಿ ಶುದ್ಧ ಕುಡಿಸುವ ನೀರು ತಲುಪಿಸುವ ಗುರಿಯನ್ನು ಹೊಂದಿದೆ. ಎನ್.ಆರ್.ಡಿ.ಡಬ್ಲ್ಯು.ಪಿ. ನಿಧಿಯನ್ನು ಬಳಕೆ ಮಾಡಿಕೊಳ್ಳಲು ಕಾರ್ಯಕ್ರಮದ ಅಡಿಯಲ್ಲಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸಲಾಗಿದೆ.

 

  • ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಮಗ್ರ ನಿರ್ವಹಣಾ ಮಾಹಿತಿ ವ್ಯವಸ್ಥೆ (ಐಎಂಐಎಸ್) ರೀತ್ಯ, ಭಾರತದ ಸುಮಾರು ಶೇ.77ರಷ್ಟು ಗ್ರಾಮೀಣ ಜನವಸತಿಗಳು ಸಂಪೂರ್ಣ ವ್ಯಾಪ್ತಿಯ (ಎಫ್.ಸಿ) ಸ್ಥಾನ (ಪ್ರತಿಯೊಬ್ಬರಿಗೂ ನಿತ್ಯ 40 ಲೀಟರ್ ನೀರು) ಗುರಿಯನ್ನು ಸಾಧಿಸಿವೆ ಮತ್ತು ಶೇ.56ರಷ್ಟು ಗ್ರಾಮೀಣ ಜನಸಂಖ್ಯೆ ಸಾರ್ವಜನಿಕ ಸ್ಟಾಂಡ್ ಪೋಸ್ಟ್ ಗಳ ಮೂಲಕ ಕೊಳಾಯಿ ನೀರು ಪಡೆಯುತ್ತಿವೆ, ಇದು ಶೇ.7ರಷ್ಟು ವಸತಿ ಸಂಪರ್ಕದೊಳಗೆ ಬರುತ್ತದೆ.

ಹಿನ್ನೆಲೆ:

  • ಕುಡಿಯಲು ಯೋಗ್ಯವಾದ, ಯಥೇಚ್ಛ,ಅನುಕೂಲಕರವಾದ, ಕೈಗೆಟಕುವಂತೆ ದುಬಾರಿಯಲ್ಲ ಮತ್ತು ಈಕ್ವಿಟಿಯ ಆಧಾರದಲ್ಲಿ ನೀರಿನ ಸುಸ್ಥಿರ (ಮೂಲ)ತೆ ಖಾತರಿಪಡಿಸುದಕ್ಕೆ ಪ್ರಮುಖ ಒತ್ತು ನೀಡಿ ಎನ್.ಆರ್.ಡಿ.ಡಬ್ಲ್ಯು.ಪಿ.ಯನ್ನು 2009ರಲ್ಲಿ ಆರಂಭಿಸಲಾಯಿತು.
  • ಎನ್.ಆರ್.ಡಿ.ಡಬ್ಲ್ಯು.ಪಿ. ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 50-50ರಷ್ಟು ಹಣ ಒದಗಿಸುತ್ತವೆ. ಎನ್.ಆರ್.ಡಿ.ಡಬ್ಲ್ಯು.ಪಿ.ಯ ಅನುಷ್ಠಾನದ ವೇಳೆ ಮಾಡಲಾದ ಸಾಧನೆ ಮತ್ತು ನ್ಯೂನತೆಯಿಂದ ಕಲಿತ ಪಾಠದಿಂದ ಕಾರ್ಯಕ್ರಮವನ್ನು ಹೆಚ್ಚು ಫಲಶ್ರುತಿ ಆಧಾರಿತ ಮತ್ತು ಸ್ಪರ್ಧಾತ್ಮಕಗೊಳಿಸಲು ಹಾಲಿ ಇರುವ ಮಾರ್ಗಸೂಚಿ ಮತ್ತು ರಾಜ್ಯಗಳಿಗೆ ಹಣ ಬಿಡುಗಡೆಯ ಪ್ರಕ್ರಿಯೆಯಲ್ಲಿ ಕೆಲವು ಮಾರ್ಪಾಡು ಮಾಡುವುದು ಅಗತ್ಯವಾಗಿದೆ.

 

  • ಎನ್.ಆರ್.ಡಿ.ಡಬ್ಲ್ಯೂಪಿ ಹೆಚ್ಚು ಫಲಿತಾಂಶ-ಆಧಾರಿತವಾಗಿದ್ದು, ಸುಸ್ಥಿರತೆಯ ಮೇಲೆ ಗಮನ ಹರಿಸಿ ರಾಜ್ಯಗಳ ನಡುವೆ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತದೆ, ಈ ನಿಟ್ಟಿನಲ್ಲಿ ರಾಜ್ಯಗಳು, ವಿವಿಧ ಬಾಧ್ಯಸ್ಥರು / ವಿಷಯ ತಜ್ಞರು / ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನೀತಿ ಆಯೋಗದೊಂದಿಗೆ ಸರಣಿ ಸಮಾಲೋಚನೆಗಳನ್ನು ನಡೆಸಿ,ಕಾರ್ಯಕ್ರಮಕ್ಕೆ ಕೆಲವು ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ.
  • ಇದು ಕಾರ್ಯಕ್ರಮದಡಿಯಲ್ಲಿ ಹಲವು ಅಂಶಗಳನ್ನು ಇಳಿಕೆ ಮಾಡುವ ಮೂಲಕ ಎನ್.ಆರ್.ಡಿ.ಡಬ್ಲ್ಯುಪಿ ನಿಧಿಯ ಬಳಕೆಗೆ ರಾಜ್ಯಗಳಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ.
  • ಕೊಳವೆ ಮೂಲಕ ನೀರು ಪೂರೈಕೆಗೆ ಗಮನ, ಸೇವೆಯ ಪೂರೈಕೆಯ ಮಟ್ಟದ ಹೆಚ್ಚಳ, ನೀರಿನ ಗುಣಮಟ್ಟ ಬಾಧಿತ ಜನವಸತಿಗಳಿಗೆ (ಆರ್ಸಾನಿಕ್ ಮತ್ತು ಫ್ಲೋರೈಡ್ ಬಾಧಿತ ಜನವಸತಿಗಳು, ಜೆಇ/ಎಇಎಸ್ ಪ್ರದೇಶಗಳ ಸಮಸ್ಯೆ ಎದುರಿಸಲು ರಾಷ್ಟ್ರೀಯ ಜಲ ಗುಣಮಟ್ಟ ಉಪ ಅಭಿಯಾನದಡಿ) ನೀರು ಪೂರೈಕೆ, ಬಯಲು ಶೌಚ ಮುಕ್ತ ಗ್ರಾಮಗಳ ಘೋಷಣೆ (ಓಡಿಎಫ್), ಎಸ್.ಎ.ಜಿ.ವೈ. ಜಿಪಿಗಳು, ಗಂಗಾ ಜಿಪಿಗಳು, ಸಮಗ್ರ ಕ್ರಿಯಾ ಯೋಜನೆ (ಐಎಪಿ) ಜಿಲ್ಲೆಗಳು, ಗಡಿ ಹೊರ ಠಾಣೆ (ಬಿಓಪಿ)ಗಳಿಗೆ ಕೊಳವೆ ನೀರು ಪೂರೈಕೆ ಮತ್ತು ಸೂಕ್ತ ಓ ಮತ್ತು ಎಂ ನೀರು ಪೂರೈಕೆ ಆಸ್ತಿ ಇತ್ಯಾದಿ ಸ್ಥಾಪನೆಯನ್ನು ಪರಿಚಯಿಸಲಾಗಿದೆ.

 SOURCE-PIB

2.ಪ್ರಾಜೆಕ್ಟ್ ಸಾಕ್ ಶ್ಯಾಮ್ ಯೋಜನೆ

 

  • ಏನಿದು ? – ರೈಲ್ವೆ ಸಿಬ್ಬಂದಿಯ ದಕ್ಷತೆ ಹೆಚ್ಚಿಸುವ ಉದ್ದೇಶ ಹೊಂದಿರುವ . ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಯೋಜನೆ
  • ಜಾರಿಗೆ ತಂದವರು ? ಭಾರತೀಯ ರೈಲ್ವೆ ಇಲಾಖೆ
  • ಕಾರಣ ?
  • ಭಾರತೀಯ ರೈಲ್ವೆ ಸಾಮಾನ್ಯವಾಗಿ ರೈಲು ಹಳಿತಪ್ಪುವುದು, ಅಪಘಾತಗಳು, ಕಳಪೆ ಸೇವೆ ಮತ್ತು ಸಿಬ್ಬಂದಿಯ ಅದಕ್ಷತೆಗೆ ಕುಖ್ಯಾತ. ಈ ಸಮೂಕ ಕೌಶಲ ಅಭಿವೃದ್ಧಿ ಕಾರ್ಯಾಚರಣೆ
  • ಮೂಲಕ ಭಾರತೀಯ ರೈಲ್ವೆಯ ಉತ್ಪಾದಕತೆ ಹಾಗೂ ಸಿಬ್ಬಂದಿಯ ದಕ್ಷತೆ ಹೆಚ್ಛಿಸುವುದಕ್ಕೆ

 

ಇದರ ಮುಖ್ಯ ಅಂಶಗಳು 

 

  • 12 ಲಕ್ಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಬೃಹತ್ ಯೋಜನೆ
  • 2018ರ ಜನವರಿಮದ 2018ರ ಸೆಪ್ಟೆಂಬರ್ ಅವಧಿಯಲ್ಲಿ ಈ ತರಬೇತಿ ನೀಡಲಾಗುತ್ತಿದೆ.

 

  • ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ಪದ್ಧತಿಗಳ ಬಗ್ಗೆ ತರಬೇತಿ ಒದಗಿಸಲಾಗುತ್ತದೆ.
  • ಆಯಾ ಕ್ಷೇತ್ರದಲ್ಲಿ ಅವರಿಗೆ ಅಗತ್ಯವಾದ ತರಬೇತಿ ಒದಗಿಸಲಾಗುತ್ತದೆ.
  • ಈ ತರಬೇತಿ ಯು ಜವಾನನಿಂದ ಹಿಡಿದು, ಉನ್ನತಾಧಿಕಾರಿವರೆಗೆ ಪ್ರತಿಯೊಬ್ಬರಿಗೂ ಕಡ್ಡಾಯ.

 SOURCE-THE HINDU

 

3.ಯೋಗ ಕಲಿಕೆಗೆ ಅನುಮತಿ ನೀಡಿದ ಸೌದಿ ಅರೇಬಿಯಾ ಸರ್ಕಾರ

ಪ್ರಮುಖ ಸುದ್ದಿ

 

  • ಮಹತ್ವದ ಬೆಳವಣಿಯೊಂದರಲ್ಲಿ ಸೌದಿ ಅರೇಬಿಯಾ ಸರ್ಕಾರವು ಯೋಗ ಕಲಿಕೆ ಮತ್ತು ಬೋಧನೆಗೆ ಸಮ್ಮತಿ ನೀಡಿದೆ. ಈ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಪ್ರಮುಖ ಅಂಶಗಳು

 

  • ಸೌದಿ ಅರೇಬಿಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಯೋಗವನ್ನು ಕ್ರೀಡಾ ಚಟುವಟಿಕೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಯಾರು ಬೇಕಾದರೂ ಲೈಸನ್ಸ್​ ಪಡೆದು ಯೋಗವನ್ನು ಕಲಿಯಬಹುದು ಮತ್ತು ಕಲಿಸಬಹುದಾಗಿದೆ.

 

  • ಸೌದಿ ಅರೇಬಿಯಾ ಯೋಗಕ್ಕೆ ಮಾನ್ಯತೆ ನೀಡುವಲ್ಲಿ ಸೌದಿಯ ಮಹಿಳೆ ನೌಫಾ ಮಾರ್ವಾಯಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಗ ಶಿಕ್ಷಕಿಯಾಗಿರುವ ಮಾರ್ವಾಯಿ ಅವರು ಯೋಗ ಹಾಗೂ ಧರ್ಮದ ನಡುವೆ ಯಾವುದೇ ಸಂಘರ್ಷಗಳಿಲ್ಲ ಎಂದು ನಂಬಿದ್ದಾರೆ. ನೌಫಾ ಸೌದಿ ಅರೇಬಿಯಾದಿಂದ ಪ್ರಮಾಣೀಕರಿಸಲಾದ ಮೊದಲ ಯೋಗ ಶಿಕ್ಷಕಿ ಎಂಬ ಹೆಮ್ಮೆಗೂ ಪಾತ್ರರಾಗಿದ್ದಾರೆ.

 

  • ಇತ್ತೀಚೆಗೆ ಜಾರ್ಖಂಡ್​ನಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ವಿರುದ್ಧ ಯೋಗಾಭ್ಯಾಸ ಮಾಡದಂತೆ ಫತ್ವಾ ಹೊರಡಿಸಲಾಗಿತ್ತು. ಜತೆಗೆ ಕೆಲವರು ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸೌದಿ ಸರ್ಕಾರ ಯೋಗಾಭ್ಯಾಸಕ್ಕೆ ಮನ್ನಣೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

 

 SOURCE-IE

 

4.ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ರಚಿಸಲು ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ಭಾರತೀಯ ಸೊಸೈಟಿಗಳ ನೋಂದಣಿ ಕಾಯಿದೆ 1860ರ ಅಡಿಯಲ್ಲಿ ಸೊಸೈಟಿಯಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮತ್ತು ಸ್ವಾಯತ್ತ ಹಾಗೂ ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಸ್ಥೆಯಾಗಿ ರೂಪಿಸಲು ತನ್ನ ಅನುಮೋದನೆ ನೀಡಿದೆ.

ವೈಶಿಷ್ಟ್ಯಗಳು:

 

  • ಎನ್.ಟಿ.ಎ. ಪ್ರಾರಂಭದಲ್ಲಿ ಪ್ರಸ್ತುತ ಸಿಬಿಎಸ್.ಇ. ನಡೆಸುತ್ತಿರುವ ಪ್ರವೇಶ ಪರೀಕ್ಷೆಗಳನ್ನು ತಾನು ನಡೆಸಲಿದೆ.
  • ಎನ್.ಟಿ.ಎ. ಸಂಪೂರ್ಣವಾಗಿ ಸಜ್ಜಾದ ಬಳಿಕ ಇತರ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳಲಿದೆ.
  • ವರ್ಷದಲ್ಲಿ ಎರಡು ಬಾರಿ ಆನ್ ಲೈನ್ ಸ್ವರೂಪದಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ, ಆ ಮೂಲಕ ಅಭ್ಯರ್ಥಿಗಳಿಗೆ ತಮ್ಮ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ಕಲ್ಪಿಸುತ್ತದೆ.
  • ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸುವ ಸಲುವಾಗಿ, ಕೇಂದ್ರಗಳನ್ನು ಉಪ ಜಿಲ್ಲೆ/ಜಿಲ್ಲಾ ಮಟ್ಟದಲ್ಲಿ ರೂಪಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ತರಬೇತಿಯನ್ನೂ ನೀಡಲಾಗುತ್ತದೆ.

ಯಾರು ಯಾರನ್ನು ಒಳಗೊಂಡಿರುತ್ತದೆ ?

  • ಎನ್.ಟಿ.ಎ.ಯ ಅಧ್ಯಕ್ಷತೆಯನ್ನು ಎಂಎಚ್.ಆರ್.ಡಿ. ನೇಮಕ ಮಾಡುವ ಹೆಸರಾಂತ ಶಿಕ್ಷಣತಜ್ಞರು ವಹಿಸಲಿದ್ದಾರೆ.
  • ಸಿಇಓ ಮಹಾ ನಿರ್ದೇಶಕರಾಗಿರಲಿದ್ದು, ಸರ್ಕಾರದಿಂದ ನೇಮಕಗೊಳ್ಳುತ್ತಾರೆ.
  • ಬಳಕೆದಾರ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯೂ ಇರುತ್ತದೆ.
  • ಮಹಾ ನಿರ್ದೇಶಕರಿಗೆ ತಜ್ಞರು/ಶಿಕ್ಷಣವೇತ್ತರನ್ನೊಳಗೊಂಡ 9 ಸದಸ್ಯರ ತಂಡ ನೋರವಾಗಲಿದೆ.
  • ಎನ್.ಟಿ.ಎ.ಗೆ ಮೊದಲ ವರ್ಷದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಒಂದು ಬಾರಿಯ ಅನುದಾನವಾಗಿ 25 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ನೀಡುತ್ತದೆ. ತರುವಾಯ, ಅದು ಆರ್ಥಿಕವಾಗಿ ಸ್ವಾವಲಂಬಿಯಾಗಲಿದೆ.

ಪರಿಣಾಮ:

  • ವಿವಿಧ ಪ್ರವೇಶ ಪರೀಕ್ಷೆಗಳಿಗೆ 40 ಲಕ್ಷ ವಿದ್ಯಾರ್ಥಿಗಳಿಗೆ ಎನ್.ಟಿ.ಎ. ಸ್ಥಾಪನೆಯಿಂದ ಅನುಕೂಲವಾಗಲಿದೆ.
  • ಇಂಥ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯಿಂದ ಸಿಬಿಎಸ್.ಇ., ಎ.ಐ.ಸಿ.ಟಿ.ಇ.ಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಇದು ಮುಕ್ತಿ ನೀಡಲಿದೆ, ಮತ್ತು ವಿದ್ಯಾರ್ಥಿಗಳ ಬುದ್ಧಿವಂತಿಕೆ ಮತ್ತು ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಅಳೆಯುವ ಮೂಲಕ ಹೆಚ್ಚಿನ ವಿಶ್ವಾಸಾರ್ಹತೆ, ಗುಣಮಟ್ಟದ ಕ್ಲಿಷ್ಟಕರ ಮಟ್ಟದ ಯೋಗ್ಯತಾ ನಿರ್ಣಯ ತರುತ್ತದೆ.

ಹಿನ್ನೆಲೆ:

  • ಮುಂದುವರಿದ ದೇಶಗಳ ರೀತಿಯಲ್ಲಿ ಭಾರತದಲ್ಲಿ ವಿಶೇಷವಾದ ಕಾಯದ ಅಗತ್ಯವನ್ನು ಮನಗಂಡು, ಹಣಕಾಸು ಸಚಿವರು 2017-18ನೇ ಸಾಲಿನ ತಮ್ಮ ಆಯವ್ಯಯ ಭಾಷಣದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ಪ್ರವೇಶ ಪರೀಕ್ಷೆಗಳನ್ನೂ ನಡೆಸಲು ಸ್ವಾಯತ್ತ ಮತ್ತು ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಘಟನೆಯಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಸ್ಥಾಪಿಸುವ ಪ್ರಕಟಿಸಿದ್ದರು.

 SOURCE-PIB

 

5.ಹೌಸ್ಲಾ 2017

ಏನಿದು ?

  • 2017ರ ನವೆಂಬರ್ 14ರಿಂದ 20ರವರೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಕ್ಕಳ ಹಕ್ಕುಗಳ ಸಪ್ತಾಹ ವನ್ನುಆಚರಿಸುತ್ತಿದೆ.

ಹಿನ್ನಲೆ

  • ಎರಡು ಘಟನೆಗಳ ನಡುವಿನ ದಿನವನ್ನು ಮಕ್ಕಳ ಹಕ್ಕುಗಳ ಸಪ್ತಾಹವಾಗಿ ಆಚರಿಸಲಾಗುತ್ತಿದೆ. ಅವುಗಳೆಂದರೆ
  • ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್ 14ರಂದು ಆಚರಿಸಲಾಗುತ್ತದೆ
  • ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನವನ್ನು ಪ್ರತಿ ವರ್ಷದ ನವೆಂಬರ್ 20ರಂದು ಆಚರಿಸಲಾಗುತ್ತದೆ.

ಪ್ರಮುಖ ಸಂಗತಿಗಳು

 

  • ಇದನ್ನು ಹಬ್ಬದ ರೂಪದಲ್ಲಿ ಆಚರಿಸಲಾಗುತ್ತಿದ್ದು, ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ದೇಶಾದ್ಯಂತ ವೇದಿಕೆ ಕಲ್ಪಿಸಿವೆ.
  • ತಮ್ಮ ಕನಸು ಮತ್ತು ಆಕಾಂಕ್ಷೆಗಳನ್ನು ಅಭಿವ್ಯಕ್ತಪಡಿಸಲೂ ಇದು ಅವಕಾಶ ಕಲ್ಪಿಸಿದೆ.
  • ಇದರಲ್ಲಿ ಮಕ್ಕಳು ಹಲವು ಕಾರ್ಯಕ್ರಮಗಳಾದ ಬಾಲಸಂಸತ್, ಅಥ್ಲೆಟಿಕ್ ಕೂಟಗಳು, ಚಿತ್ರಕಲಾ ಸ್ಪರ್ಧೆ, ಫುಟ್‍ಬಾಲ್, ಮತ್ತು ಭಾಷಣ ಹಾಗೂ ಲೇಖನದಂಥ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ.

  SOURCE-THE HINDU

 

6.ನವದೆಹಲಿಯ ದ್ವಾರಕಾದಲ್ಲಿ ವಸ್ತುಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ ಅಭಿವೃದ್ಧಿಪಡಿಸಲು ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಗೆ ಸೇರಿದ ಈ ಕೆಳಕಂಡ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ:

 

(ಅ)  ವಸ್ತು ಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ (ಇಸಿಸಿ), ದ್ವಾರಕ ಮತ್ತು ಪೂರಕ ಮೂಲಸೌಕರ್ಯವನ್ನು ಪಿಪಿಪಿ ಮತ್ತು ಪಿಪಿಪಿಯೇತರ ಮಾದರಿಯಲ್ಲಿ (ವಸ್ತುಪ್ರದರ್ಶನ ಮತ್ತು ಸಮ್ಮೇಳನಕ್ಕೆ ಜಾಗ, ಆಸನ ಸಹಿತ ಸಾರ್ವಜನಿಕ ಕಾರ್ಯಕ್ರಮ ಪ್ರದೇಶ (ಅರೇನಾ), ಟ್ರಂಕ್ – ಮೂಲಸೌಕರ್ಯ, ಮೆಟ್ರೋ/ಎನ್.ಎಚ್.ಎ.ಐ. ಸಂಪರ್ಕ, ಹೊಟೆಲ್, ಕಚೇರಿ ಮತ್ತು ಚಿಲ್ಲರೆ ಪ್ರದೇಶ ಇತ್ಯಾದಿ.) 2025ರೊಳಗೆ ಅಂದಾಜು 25,703 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲು.

 

(ಆ) ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಶೇ.100ರಷ್ಟು ಈಕ್ವಿಟಿಯೊಂದಿಗೆ ಯೋಜನೆಗಳ ಅಭಿವೃದ್ಧಿ ಮತ್ತು ಜಾರಿಗಾಗಿ ವಿಶೇಷ ಉದ್ದೇಶದ ವಾಹಕವಾಗಿ (ಸ್ಪೆಷಲ್ ಪರ್ಪಸ್ ವೆಹಿಕಲ್ – ಎಸ್.ಪಿವಿ.) ಹೊಸ ಸರ್ಕಾರಿ ಕಂಪನಿ ಸ್ಥಾಪನೆ.  ಭಾರತ ಸರ್ಕಾರವು 2037.39 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು ಈ ಎಸ್.ಪಿ.ವಿ.ಗೆ ಈಕ್ವಿಟಿಯ ರೂಪದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಡಿಡಿಎಯಿಂದ ಭೂಮಿ ಮತ್ತು ವೆಚ್ಚ, ನೀರು ಮತ್ತು ಒಳಚರಂಡಿ ಮೂಲಸೌಕರ್ಯ, ಮೆಟ್ರೋ ಸಂಪರ್ಕಕ್ಕಾಗಿ ರೈಲ್ವೆ ಭೂಮಿ ಮತ್ತು ಪಿಪಿಪಿಯೇತರ ಇತರ ವೆಚ್ಚಗಳು ಸೇರಿದಂತೆ ಟ್ರಂಕ್ ಮೂಲಸೌಕರ್ಯ, ವಸ್ತುಪ್ರದರ್ಶನ ಕೇಂದ್ರದ ಭಾಗ, ವಿಶ್ರಾಂತಿ ಕೊಠಡಿ, ಸಮ್ಮೇಳನ ಕೇಂದ್ರ, ಮೆಟ್ರೋ ಸಂಪರ್ಕ, ಎನ್ಎಚ್ಎಐ ರಸ್ತೆ ಸಂಪರ್ಕಕ್ಕಾಗಿ ಒದಗಿಸಲಿದೆ.

 

(ಇ)    ಸರಕಾರವು ಖಾತರಿಯೊಂದಿಗೆ ಮಾರುಕಟ್ಟೆಯಿಂದ ರೂ. 1,381 ಕೋಟಿ ರೂ. ಸಾಲ ಮತ್ತು ಸರ್ಕಾರಿ ಸ್ವಾಮ್ಯದ ಭೂಮಿ ಬಳಕೆಯ ಆದಾಯ ಮತ್ತು ಎಸ್ಪಿವಿಯ ವಾರ್ಷಿಕ ಯೋಜನಾ ಆದಾಯದ ಮೂಲಕ 4,000 ಕೋಟಿ ರೂ. ಕ್ರೋಡೀಕರಣಕ್ಕಾಗಿ. ಭೂಮಿಯ ಬಳಕೆಯ ಆದಾಯ ಮತ್ತು ಎಸ್.ಪಿ.ವಿ.ಯಿಂದ ಪಡೆವ ವಾರ್ಷಿಕ ಆದಾಯವನ್ನು ಯೋಜನೆಯ ಪಿಪಿಪಿಯೇತರ ಅಂಶಗಳಿಗೆ ಹಣ ಒದಗಿಸಲು ಬಳಸಲಾಗುವುದು.

 

(ಈ)   ಡಿ.ಎಂ.ಐ.ಸಿ.ಡಿ.ಸಿ. ಆರಂಭದಲ್ಲಿ 10 ವರ್ಷಗಳ ಅವಧಿಗೆ ವಾರ್ಷಿಕ ಕನಿಷ್ಠ 5 ಕೋಟಿ ರೂಪಾಯಿ ಮತ್ತು ಗರಿಷ್ಠ 10 ಕೋಟಿ ರೂಪಾಯಿಗಳಿಗೆ ಒಳಪಟ್ಟು ಆಂತರಿಕ ಆರ್ಥಿಕ ಸಂಚಯದ ಶೇಕಡ 1ರ ವಾರ್ಷಿಕ ಶುಲ್ಕ ಪಾವತಿಯೊಂದಿಗೆ  ಜ್ಞಾನ ಪಾಲುದಾರನಂತೆ ಕಾರ್ಯ ನಿರ್ವಹಿಸಲಿದೆ.

 

(ಉ)    ಯೋಜನೆಯ ವಿವಿಧ ಹಂತಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ, ಒಟ್ಟಾರೆ ಅನುಮೋದಿತ ಹಣಕಾಸಿನ ಮಿತಿಗಳಲ್ಲಿ .ವಿವರವಾದ ವೆಚ್ಚದ ಅಂದಾಜುಗಳ ಪರಿಷ್ಕರಣೆ, ಯೋಜನೆಯ ಘಟಕಗಳ ಪ್ರಮಾಣದ ನಿರ್ದಿಷ್ಟ ಭಾಗದ ನಿರ್ಧರಣೆ,ಯೋಜನೆಯನ್ನು ಮುಂದೂಡುವ, ವ್ಯಾಪ್ತಿಯಲ್ಲಿ ಬದಲಾವಣೆ ತರುವುದು ಇತ್ಯಾದಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಎಸ್.ಪಿ.ವಿ ಮಂಡಳಿ ಹೊಂದಿರುತ್ತದೆ.

 

  • ಟ್ರಂಕ್ ಮೂಲಸೌಕರ್ಯ ಒಳಗೊಂಡ ವಸ್ತು ಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ ಯೋಜನೆಯ ಪ್ರಥಮ ಹಂತವನ್ನು ಅನುಷ್ಠಾನಗೊಳಿಸಿ 2019ರ ಡಿಸೆಂಬರ್ ನೊಳಗೆ ಕಾರ್ಯಾರಂಭಿಸಲಾಗುವುದು.
  • ಇವುಗಳನ್ನು ಪಿಪಿಪಿಯೇತರ ಅಂಗವಾಗಿ ಅನುಷ್ಠಾನ ಮಾಡಲಾಗುವುದು. ಉಳಿದ ವಸ್ತು ಪ್ರದರ್ಶನ ಪ್ರದೇಶವನ್ನೊಳಗೊಂಡ ಎರಡನೇ ಹಂತದ ಯೋಜನೆಯು 2025ರ ವೇಳೆಗೆ ಅನುಷ್ಠಾನಗೊಳ್ಳಲಿದೆ. ಹೊಟೆಲ್, ರಿಟೈಲ್ ಪ್ರದೇಶ ಮತ್ತು ಕಚೇರಿಗಳನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
  • ಪ್ರಸ್ತಾವಿತ ಇಸಿಸಿ ಸೌಲಭ್ಯವು ಒಮ್ಮೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ, ವಾರ್ಷಿಕವಾಗಿ 100 ಕ್ಕಿಂತ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಪ್ರದರ್ಶನ ಕಾರ್ಯಕ್ರಮಗಳ ಬೇಡಿಕೆಯನ್ನು ಪೂರೈಸಲಿದೆ ಎಂದು ಅಂದಾಜಿಸಲಾಗಿದೆ.
  • ವಾರ್ಷಿಕವಾಗಿ ಪ್ರದರ್ಶನ ಸೌಲಭ್ಯಕ್ಕೆ ಭೇಟಿ ನೀಡುವ ವ್ಯಕ್ತಿಗಳ ಸಂಖ್ಯೆ (ಪಾವತಿಸುವ ಸಂದರ್ಶಕರು) ಮೊದಲ ಹಂತದಲ್ಲಿ (2019-20) 10 ದಶಲಕ್ಷಕ್ಕಿಂತ ಹೆಚ್ಚು ಮತ್ತು ಎರಡನೇ ಹಂತ (2025) ಪೂರ್ಣಗೊಂಡ ನಂತರ 23 ದಶಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಎರಡನೇ ಹಂತದ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಸಮಾವೇಶ ಆಧಾರಿತ ಪ್ರತಿನಿಧಿಗಳ ಹಾಜರಿಯು ವಾರ್ಷಿಕ 5 ದಶಲಕ್ಷ ದಾಟಲಿದೆ ಎಂದೂ ಅಂದಾಜಿಸಲಾಗಿದೆ.
  • ಈ ಯೋಜನೆಯು 5 ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಉದ್ಯೋಗ ಸೃಷ್ಟಿಯು ಪ್ರಮುಖ ಇಸಿಸಿ ಸೌಲಭ್ಯಗಳಲ್ಲಿ ಮತ್ತು ಇಸಿಸಿ ಬೆಂಬಲಿತ ಅಂದರೆ ರಿಟೈಲ್ ನಂಥ ಭೂ ಬಳಕೆ, ಕಚೇರಿ ಮತ್ತು ಆತಿಥ್ಯ ಸೌಲಭ್ಯದಲ್ಲಿ ಸೃಷ್ಟಿಯಾಗಲಿದೆ.

 

ಹಿನ್ನೆಲೆ:

  • ಜಾಗತಿಕ ಖರೀದಿದಾರರೊಂದಿಗೆ ಸ್ಥಳೀಯ ಉತ್ಪಾದಕರ ಸಂಪರ್ಕ ಕಲ್ಪಿಸಲು ಮತ್ತು ವಾಣಿಜ್ಯ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಮ್ಮೇಳನಗಳು ಹಾಗೂ ವಸ್ತು ಪ್ರದರ್ಶನಗಳು ಪ್ರಮುಖ ಕೊಂಡಿಯಾಗಿವೆ.
  • ದೊಡ್ಡ ಪ್ರಮಾಣದಲ್ಲಿಜಾಗತಿಕ ವಸ್ತುಪ್ರದರ್ಶನ ಸಹಿತ ಸಮ್ಮೇಳನ ಆಯೋಜಿಸಿ ನಿರ್ವಹಿಸಲು, ಸ್ಥಳಾವಕಾಶ, ಯೋಜನಾ ಸೌಕರ್ಯ, ಸಾರಿಗೆಯ ಸಂಪರ್ಕ ಇತ್ಯಾದಿ. ಒಳಗೊಂಡ ಜಾಗತಿಕ ಮಟ್ಟದ ಸಮಗ್ರ ಸೌಕರ್ಯದ ಕೊರತೆಯನ್ನು ಭಾರತ ಎದುರಿಸುತ್ತಿದೆ.
  • ಸೂಕ್ತ ಪೂರಕ ಸೌಕರ್ಯಗಳೊಂದಿಗೆ ದ್ವಾರಕಾದಲ್ಲಿ ಇಸಿಸಿಯ ಅಭಿವೃದ್ಧಿಯಿಂದ ಮತ್ತು ಅದು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾದರೆ, ಅದು ವಸ್ತು ಪ್ರದರ್ಶನ ಮಾರುಕಟ್ಟೆಯಲ್ಲಿ ಹಾಂಕಾಂಗ್, ಸಿಂಗಾಪುರ ಮತ್ತು ಶಾಂಘೈ ಸಾಲಿಗೆ ದೆಹಲಿಯನ್ನೂ ತರಲಿದೆ.

 SOURCE-PIB

7.ಕೋಬೋಟ್ಸ್

ಪ್ರಮುಖ ಸುದ್ದಿ 

 

  • ಡ್ಯಾನಿಶ್ ರೋಬೋಟ್ ಉತ್ಪಾದಕ ಸಂಸ್ಥೆ ಯೂನಿವರ್ಸಲ್ ರೋಬೋಟ್ಸ್ ರೂಪಿಸಿದ ಸಹಯೋಗಿ ರೋಬೋಟ್ ಗಳನ್ನು ಭಾರತಕ್ಕೆ ಪರಿಚಯಿಸಲಾಗಿದೆ.
  • ಮಾನವ-ರೋಬೋಟ್ ಸಹಯೋಗದ (ಕೋಬೋಟ್ಸ್ ಎಂದು ಕರೆಯಲಾಗಿದೆ) ಸದ್ಯದ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಮಾನವರ ಜತೆಗೆ ಕೆಲಸ ಮಾಡುತ್ತಾ ಅವರಿಗೆ ವಿವಿಧ ಕೆಲಸಗಳಲ್ಲಿ ಇದು ಸಹಾಯ ಮಾಡಲಿದೆ.

ಕೋಬೋಟ್ಸ್ ಬಗ್ಗೆ

  • ಕೋಬೋಟ್ಸ್ ಪುನರಾವರ್ತಿತ ಮತ್ತು ಅಸುರಕ್ಷಿತ ಪ್ರಕ್ರಿಯೆಗಳನ್ನು ಸ್ವಯಂಚಾಲಿತವಾಗಿ ಮಾಡುತ್ತದೆ ಮತ್ತು ಉತ್ಪಾದಕತೆ ಹಾಗೂ ದಕ್ಷತೆ ಹೆಚ್ಚಿಸುವುದರ ಜತೆ ಕೆಲಸದ ವಾತಾವರಣವನ್ನು ಸುರಕ್ಷಿತವಾಗಿಸುತ್ತದೆ.
  • ಈ ಅನುಕೂಲಗಳಿಂದಾಗಿ, ಸಣ್ಣ ಹಾಗೂ ಮಧ್ಯಮ ಗಾತ್ರ ಉದ್ಯಮಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಎಂಐಟಿ ಸಂಶೋಧಕರು ಬಿಎಂಟಬ್ಲೂೃ ಫ್ಯಾಕ್ಟರಿಯಲ್ಲಿ ಮಾನವ-ಯಂತ್ರ ಅಧ್ಯಯನ ನಡೆಸಿದಾಗ ಮಾನವರು ಮತ್ತು ರೋಬೋಟ್‍ಗಳ ಸಹಯೋಗದಿಂದ ಉತ್ಪಾದಕತೆ ಶೇ.85ರಷ್ಟು ಹೆಚ್ಚಾಗಿದೆ ಎಂದು ಕಂಡು ಬಂದಿದೆ.
  • ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೂ ರೊಬೋಟ್ ತಂತ್ರಜ್ಞಾನ ಲಭ್ಯವಾಗಿಸುವ ಉದ್ದೇಶದಿಂದ, ಯೂನಿವರ್ಸಲ್ ರೋಬೋಟ್ ಸರಳ, ಫ್ಲೆಕ್ಸಿಬಲ್ ಹಾಗೂ ಕೈಗೆಟುಕುವ ರೀತಿಯಲ್ಲಿ ರೋಬೋಟ್ ನಿರ್ಮಿಸಲಾಗಿದೆ.

 SOURCE-THE HINDU

 

8.ತಾಲೂಕಿಗೊಂದು ಮೂತ್ರ ಬ್ಯಾಂಕ್-ಕೇಂದ್ರ ಸರ್ಕಾರ

ಪ್ರಮುಖ ಸುದ್ದಿ

 

  • ರೈತರನ್ನು ಕಾಡುತ್ತಿರುವ ಯೂರಿಯಾ ಕೊರತೆ ಸಮಸ್ಯೆಗೆ ಶಾಶ್ವತ ತೆರೆ ಎಳೆಯುವ ಯತ್ನವಾಗಿ ಕೇಂದ್ರ ಸರ್ಕಾರ ‘ಮಾನವ ಮೂತ್ರ ಬ್ಯಾಂಕ್’ ಯೋಜನೆ ಸಿದ್ಧಪಡಿಸುತ್ತಿದೆ.
  • ಭೂಮಿಯ ಫಲವತ್ತತೆ ಹೆಚ್ಚಿಸುವ ತಂತ್ರಗಾರಿಕೆಯಾಗಿ ಸ್ಥಳೀಯ ಮಟ್ಟದಲ್ಲೇ ಯೂರಿಯಾ ಉತ್ಪಾದಿಸಲು ತಾಲೂಕಿಗೊಂದು ಮೂತ್ರ ಬ್ಯಾಂಕ್ ಸ್ಥಾಪಿಸುವುದು ಯೋಜನೆಯ ಉದ್ದೇಶವಾಗಿದೆ.

ಮುಖ್ಯ ಅಂಶಗಳು

 

  • ಮೂತ್ರಬ್ಯಾಂಕ್ ಯೋಜನೆ ಭಾರತಕ್ಕೆ ಹೊಸತಾದರೂ ಈ ಪ್ರಯೋಗ ಸ್ವೀಡನ್​ನಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಅಲ್ಲಿನ ವಿಜ್ಞಾನಿಗಳ ಸಹಕಾರ ಪಡೆಯುವ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

 

  • ನಾವು ಸೇವಿಸುವ ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು ಶೋಧಿಸಿ, ದೇಹಕ್ಕೆ ಅಗತ್ಯವಾದಷ್ಟನ್ನು ಪೂರೈಸುವ ಜೀರ್ಣಾಂಗ ವ್ಯವಸ್ಥೆ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಮಲ-ಮೂತ್ರ ರೂಪದಲ್ಲಿ ದೇಹದಿಂದ ಹೊರಹಾಕುತ್ತದೆ. ಹಾಗೆ ಹೊರಹಾಕಲ್ಪಟ್ಟ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಸಾರಜನಕ (ನೈಟ್ರೋಜನ್) ಇರುತ್ತದೆ. ಇದು ಯೂರಿಯಾಗಿಂತಲೂ ಹೆಚ್ಚು ಫಲವತ್ತತೆ ಹೊಂದಿರುತ್ತದೆ ಎಂಬುದು ವಿಜ್ಞಾನಿಗಳ ಅನಿಸಿಕೆ.
  • ಮೂತ್ರ ಬ್ಯಾಂಕ್ ಯೋಜನೆಯನ್ನು ಕೇಂದ್ರ ಸರ್ಕಾರ ನಾಗ್ಪುರದ ಧಾಪೇವಾಡ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿ ಗೊಳಿಸುತ್ತಿದೆ. ಬ್ಯಾಂಕ್​ಗೆ ನೀಡುವ ಪ್ರತಿ ಲೀಟರ್ ಮೂತ್ರಕ್ಕೆ 1 ರೂ.ನಂತೆ ರೈತರಿಗೆ ಹಣವೂ ಪಾವತಿಯಾಗಲಿದೆ.

ಏನಿದು ಮೂತ್ರ ಬ್ಯಾಂಕ್?

  • ರೈತರು ನೀರಿನಲ್ಲಿ ಬೆರೆಯದ ಮೂತ್ರವನ್ನು 10 ಲೀಟರ್ ಕ್ಯಾನ್​ನಲ್ಲಿ ಶೇಖರಿಸಿ ಬಳಿಕ ಅದನ್ನು ತಾಲೂಕು ಕೇಂದ್ರಗಳ ಮೂತ್ರ ಬ್ಯಾಂಕ್​ಗಳಿಗೆ ನೀಡಿದರೆ ಲೀಟರ್​ಗೆ 1 ರೂ. ದೊರೆಯಲಿದೆ.
  • ಹೀಗೆ ಪಡೆದ ಮೂತ್ರವನ್ನು ಭಟ್ಟಿ ಇಳಿಸಿ(ಡಿಸ್ಟಿಲೇಷನ್) ಶುದ್ಧವಾದ ಸಾರಜನಕ ಭರಿತ ಸಾವಯವ ಯೂರಿಯವನ್ನು ಮೂತ್ರ ಬ್ಯಾಂಕ್​ಗಳು ರೈತರಿಗೆ ನೀಡಲಿವೆ.

ಪ್ರಕ್ರಿಯೆ ಹೇಗೆ?

 

  • ಫಾಸ್ಪರಸ್(ಪಿ) ಮತ್ತು ಪೊಟ್ಯಾಷಿಯಂ(ಕೆ)ಗೆ ಈಗಾಗಲೇ ಪರ್ಯಾಯ ಲಭ್ಯ ಇದೆ. ಅವುಗಳೊಂದಿಗೆ ಮೂತ್ರದಿಂದ ಬೇರ್ಪಡಿಸಿದ ಸಾರಜನಕ(ಎನ್) ಸೇರಿಸಿ ಯೂರಿಯಾ (ಎನ್​ಪಿಎ) ತಯಾರಿಸಲಾಗುತ್ತದೆ.
  • ಇದರಿಂದ, ದುಬಾರಿ ಬೆಲೆಯ ಯೂರಿಯಾ ಖರೀದಿಸುವ, ವಿದೇಶದಿಂದ ಆಮದು ಮಾಡಿಕೊಳ್ಳುವ ತಾಪತ್ರಯವೂ ತಪ್ಪುತ್ತದೆ . ಜತೆಗೆ, ಜಲಮೂಲಗಳ ಮಾಲಿನ್ಯ ನಿಯಂತ್ರಿಸಬಹುದು.

SOURCEhttps://timesofindia.indiatimes.com/india/set-up-urine-banks-produce-urea-nitin-gadkari/articleshow/61636165.cms

 

9.2028ಕ್ಕೆ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಭಾರತ

ಪ್ರಮುಖ ಸುದ್ದಿ

 

  • 21 ನೇ ಶತಮಾನದಲ್ಲಿ ಭಾರತ ರಾರಾಜಿಸಲಿದೆ ಎಂಬ ಮಾತಿಗೆ ಮತ್ತೊಂದು ಪುಷ್ಠಿ ಸಿಕ್ಕಿದೆ. 2028ರ ವೇಳೆಗೆ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕದ ಮೆರಿ ಲಿಂಚ್ ಎಜೆನ್ಸಿ ವರದಿ ನೀಡಿದೆ.
  • ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಅರ್ಥ ವ್ಯವಸ್ಥೆ ರಷ್ಯಾ ಹಾಗೂ ಬ್ರೆಜಿಲ್ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಬ್ರಿಕ್ಸ್ ರಾಷ್ಟ್ರಗಳ ಸಾಲಿನಲ್ಲಿ ಅಭಿವೃದ್ಧಿ ರಾಷ್ಟ್ರಗಳ ಪೈಕಿ ಚೀನಾ ಮುಂಚೂಣಿ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಭಾರತ ಪಡೆದಿದೆ.
  • ಭಾರತದ ಆರ್ಥಿಕ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆ, ದಿನೇ ದಿನೇ ಹೆಚ್ಚುತ್ತಿರುವ ಆದಾಯ, ಅರ್ಥ ವ್ಯವಸ್ಥೆ ನಿರ್ದಿಷ್ಠ ಹಾದಿಯಲ್ಲಿ ಸಾಗುತ್ತಿರುವ ಅಂಶವನ್ನು ಪರಿಗಣಿಸಿ ಅಮೆರಿಕದ ಬ್ಯಾಂಕ್ ಈ ವರದಿ ನೀಡಿದೆ.

 SOURCE- IE

 

10.ರಸಗುಲ್ಲಾ ಸಿಹಿ-ಭೌಗೋಳಿಕ ಮಾನ್ಯತೆ

 ಪ್ರಮುಖ ಸುದ್ದಿ

  • ರಸಗುಲ್ಲಾದ ಭೌಗೋಳಿಕ ಮಾನ್ಯತೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮಧ್ಯೆ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೊಂಡಿದೆ.
  • ಈ ಸಿಹಿ ತಿನಿಸಿನ ಬಗ್ಗೆ ನಡೆದ ಕಾನೂನು ಹೋರಾಟದಲ್ಲಿ ಪಶ್ಚಿಮ ಬಂಗಾಳಕ್ಕೆ ಜಯ ಒಲಿದಿದೆ.

ಮುಖ್ಯ ಅಂಶಗಳು

  • ಚೀಸ್‌ ಬಳಸಿ ತಯಾರಿಸುವ ರಸಗುಲ್ಲಾಕ್ಕೆ ಭೌಗೋಳಿಕ ಮಾನ್ಯತೆಗಾಗಿ ಎರಡೂ ರಾಜ್ಯಗಳು 2015ರಿಂದ ಕಾನೂನು ಹೋರಾಟಕ್ಕಿಳಿದಿದ್ದವು. ಅದರ ಸಿಹಿ ಸುದ್ದಿ ಈಗ ಬಂಗಾಳಿಗಳಿಗೆ ದಕ್ಕಿದೆ.
  • ಉತ್ಪನ್ನದ ಮೂಲ ಸ್ಥಳ ಆಧರಿಸಿ, ವರ್ಲ್ಡ್ ಟ್ರೇಡ್‌ ಆರ್ಗನೈಸೇಷನ್‌ ಅಡಿ ಭೌಗೋಳಿಕ ಮಾನ್ಯತೆ ನೀಡಲಾಗುತ್ತದೆ.

 SOURCE-IE

 

 

Share