17th TO 24th NOVEMBER-WEEKLY CURRENT AFFAIRS IN BRIEF

 

 

ಪರಿವಿಡಿ

INDIAN POLITY-ಭಾರತದ ಸಂವಿಧಾನ

1. ನ್ಯಾಯಾಂಗಕ್ಕೆ ಮೂಲಸೌಕರ್ಯಗಳ ಹೆಚ್ಚಳ
2. ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆಯ ಕುರಿತ ಯೋಜನೆಯನ್ನು ಮುಂದುವರಿಸಲು ಸಂಪುಟದ ಅನುಮೋದನೆ
3. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನಕ್ಕೆ ಸಂಪುಟದ ಅನುಮೋದನೆ
4. ಆಸ್ಪತ್ರೆಗಳ ಲೂಟಿಗೆ ಬ್ರೇಕ್‌: ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚನೆ
5. ಗೋದಾವರಿ-ಕಾವೇರಿ ನದಿ ಜೋಡಣೆಗೆ ಕೇಂದ್ರ ಯೋಜನೆ.
6. ಹಿಂದುಳಿದ 115 ಜಿಲ್ಲೆಗಳಲ್ಲಿ ಮಹಿಳಾ ಶಕ್ತಿ ಕೇಂದ್ರ
7. ವಿಶೇಷ ಮಕ್ಕಳಿಗೆ 18ರ ವರೆಗೆ ಉಚಿತ ಶಿಕ್ಷಣ
8. ಕಂಬಳ ಸುಗ್ರೀವಾಜ್ಞೆಗೆ ತಡೆ ಸಾಧ್ಯವಿಲ್ಲ: ತ್ರಿಸದಸ್ಯ ಪೀಠ

ECONOMY-ಅರ್ಥಶಾಸ್ತ್ರ

1. ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರ ಸ್ಥಾಪನೆಗೆ ಸಂಪುಟದ ಅನುಮೋದನೆ
2. ಭಾರತದ ಕ್ರೆಡಿಟ್ ರೇಟಿಂಗನ್ನು ‘Baa3’ನಿಂದ ’Baa2 ನೀಡಿದ ಮೂಡಿಸ್
3. ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧ ತೆರವು -ಕೇಂದ್ರ ಸರಕಾರ
4. ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಬ್ಯಾಂಕ್ ನಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ
5 .ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ-(South Asia Regional Training and Technical Assistance Center) (SARTTAC)
6. 5ನೇ ಹಣಕಾಸು ಆಯೋಗದ ರಚನೆಗೆ ಸಂಪುಟದ ಅನುಮೋದನೆ
7. ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಕಾರ್ಮಿಕರಿಗಾಗಿ 8ನೇ ಸುತ್ತಿನ ವೇತನ ಹೆಚ್ಚಳ ನೀತಿಗೆ ಸಂಪುಟದ ಅನುಮೋದನೆ
8. ದಿವಾಳಿ ಮಸೂದೆ(ಎನ್ಪಿಎ) ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

INTER NATIONAL RELATIONS-ಅಂತಾರಾಷ್ಟ್ರೀಯ ಸಂಬಂಧಗಳು

 

1. ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಸೇನಾ ಸಮರಾಭ್ಯಾಸ -ಸಂಪ್ರಿತಿ 2017
2. ಚೀನಾ ಹೊಸ ಅಸ್ತ್ರ ಹೈಟೆಕ್ ವಿಮಾನ
3. ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ – ರಷ್ಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ
4. ಐಸಿಜೆಗೆ ಭಾರತದ ದಲ್ವೀರ್ ಭಂಡಾರಿ ಮರುಆಯ್ಕೆ
5. ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ
6. ಭಾರತಕ್ಕೆ ಆಸಿಯಾನ್‌ ಕೂಟ ಬಲ
7. ದ್ವಿಪಕ್ಷೀಯ ಸಂಬಂಧ ದೃಢಗೊಳಿಸಿದ ಫ್ರೆಂಚ್ ವಿದೇಶಾಂಗ ಸಚಿವರ ಭೇಟಿ
8. ದಕ್ಷಿಣ ಏಷ್ಯಾವನ್ನು ಚಿಂತೆಗೆ ದೂಡಿದ ಲೆಬನಾನ್ ಬಿಕ್ಕಟ್ಟು
9. ಚೀನಾ ಜತೆಗಿನ ವಿದ್ಯುತ್ ಯೋಜನೆ ರದ್ದುಗೊಳಿಸಿದ ನೇಪಾಳ

SCIENCE AND TECHNOLOGY – ವಿಜ್ಞಾನ ಮತ್ತು ತಂತ್ರಜ್ಞಾನ

1. ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ)
2. ಕೈಗಾರಿಕೆಗಳಲ್ಲಿ ಪೆಟ್ರೋಲಿಯಂ ಕೋಕ್ ಮತ್ತು ಕುಲುಮೆ ಎಣ್ಣೆ ತೈಲದ ಬಳಕೆ ನಿಷೇಧಿಸಲು ಸುಪ್ರೀಂ ಕೋರ್ಟ್ ನಿರ್ದೇಶನ
3. ಮೂರೇ ದಿನಗಳಲ್ಲಿ ರಾಕೆಟ್-ಇಸ್ರೋ
4. ವಿಶ್ವದ ಅತ್ಯಂತ ವೇಗದ ಬ್ರಹ್ಮೋಸ್ ಕ್ಷಿಪಣಿ
5. ಇನ್ನು ಬಿದಿರು ಕಾಡಿನಲ್ಲಿ ಮಾತ್ರ ಮರ, ನಾಡಿನಲ್ಲಿ ಅಲ್ಲ
6. ಭಾರತ್ ಸ್ಟೇಜ್- VI ಗೆ ಹೆಜ್ಜೆ ಹಾಕಿದ ದೆಹಲಿ
7. ಮೀನುಗಾರಿಕೆಗೆ ಸಿಎಂಎಫ್‌ಆರ್‌ಐ-ಇಸ್ರೊ ನೆರವು
8. ಬ್ಲೂವೇಲ್ ಗೇಮ್‌ ನಿಷೇಧ ಮಾಡಲು ಸಾಧ್ಯವಿಲ್ಲ: ಕೇಂದ್ರ ಸರಕಾರ
9. 20 ವರ್ಷಗಳಲ್ಲಿ ಭೂಮಿ ಹೇಗೆಲ್ಲ ಬದಲಾಗಿದೆ- ಅಮೆರಿಕದ ನಾಸಾ
10. ಗ್ಲೋಬಲ್‌ ಕಾನ್ಫರೆನ್ಸ್‌ ಆನ್‌ ಸೈಬರ್‌ ಸ್ಪೇಸ್‌
11. ಉಮಂಗ್‌ (UMANG –Unified Mobile Application for New-age Governance) ಲೋಕಾರ್ಪಣೆ

 

OTHERS-ಇತರೆ ವಿಷಯಗಳು

1. ಮಾನುಷಿ ಛಿಲ್ಲರ್ ವಿಶ್ವಸುಂದರಿ-2017
2. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ
3. ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲಟ್‌ ನೇಮಕ
4. ದೇಶದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿ
5. 48ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

 

 

 

 

 

ಭಾರತದ ಸಂವಿಧಾನ INDIAN POLITY

1. ನ್ಯಾಯಾಂಗಕ್ಕೆ ಮೂಲಸೌಕರ್ಯಗಳ ಹೆಚ್ಚಳ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನ್ಯಾಯಾಂಗದ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ದಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.)ಯನ್ನು 12ನೇ ಪಂಚ ವಾರ್ಷಿಕ ಯೋಜನೆಯ ನಂತರವೂ ಅಂದರೆ 2017 ರಿಂದ 2020ರವರೆಗೆ, ಅಭಿಯಾನದೋಪಾದಿಯಲ್ಲಿ ಅಂದಾಜು 3,320 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ರಾಷ್ಟ್ರೀಯ ನ್ಯಾಯದಾನ ಮತ್ತು ಕಾನೂನು ಸುಧಾರಣೆ ಅಭಿಯಾನದ ಮೂಲಕ ಅನುಷ್ಠಾನಗೊಳಿಸಲು ತನ್ನ ಸಮ್ಮತಿ ನೀಡಿದೆ
  • ಭವಿಷ್ಯದ ಯೋಜನೆಗಳು ಮತ್ತು ಉತ್ತಮ ಆಸ್ತಿ ನಿರ್ವಹಣೆ ಮತ್ತು ನಿಯಮಾವಳಿಗಳ ರಚನೆ ಸೇರಿದಂತೆ ದೇಶದಲ್ಲಿ ಭವಿಷ್ಯದಲ್ಲಿ ಈ ಯೋಜನೆಯಡಿ ನಿರ್ಮಾಣ ಮಾಡಬೇಕಾದ ಕೋರ್ಟ್ ಹಾಲ್ ಗಳ ಮತ್ತು ವಸತಿ ಘಟಕಗಳ ವಿವರಗಳು ಮತ್ತು ಕೋರ್ಟ್ ಹಾಲ್ ಗಳ ಕಾಮಗಾರಿ ಪ್ರಗತಿ, ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಘಟಕಗಳ ಕುರಿತಂತೆ ದತ್ತಾಂಶ ಸಂಗ್ರಹಣೆಗಾಗಿ ನ್ಯಾಯ ಇಲಾಖೆಯಿಂದ ಭೂ-ಸಂಪರ್ಕದೊಂದಿಗೆ ಆನ್ ಲೈನ್ ನಿಗಾ ವ್ಯವಸ್ಥೆ ಸ್ಥಾಪಿಸಲು ಸಂಪುಟವು ತನ್ನ ಅನುಮೋದನೆ ನೀಡಿದೆ.

 

ಯೋಜನೆಯಿಂದಾಗುವ ಲಾಭಗಳು:

  • ಈ ಯೋಜನೆಯು ಸುಸ್ಥಿರ ಸೂಕ್ತ ಸಂಖ್ಯೆಯ ಕೋರ್ಟ್ ಹಾಲ್ ಗಳ ಲಭ್ಯತೆ ಮತ್ತು ನ್ಯಾಯಾಧೀಶರಿಗೆ / ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲೆ, ಉಪ ಜಿಲ್ಲೆ, ತಾಲೂಕು, ತಹಶೀಲ್ ಮತ್ತು ಗ್ರಾಮ ಪಂಚಾಯ್ತಿ ಮತ್ತು ಗ್ರಾಮಮಟ್ಟದಲ್ಲಿ ವಸತಿ ಸೌಕರ್ಯ ಹೆಚ್ಚಿಸಲಿದೆ.
  • ಇದು ದೇಶಾದ್ಯಂತ ನ್ಯಾಯಾಂಗದ ಕಾರ್ಯಾಚರಣೆ ಮತ್ತು ಪ್ರದರ್ಶನವನ್ನು ಸುಧಾರಿಸಿ ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ಮಾಡಲು ನೆರವಾಗುತ್ತದೆ.

ಆರ್ಥಿಕ ನೆರವು:

  • ರಾಜ್ಯಸರ್ಕಾರಗಳಿಗೆ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್.ಎಸ್.) ಅಡಿಯಲ್ಲಿ ಕೋರ್ಟ್ ಹಾಲ್ ಮತ್ತು ನ್ಯಾಯಾಧಿಶರಿಗೆ/ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ವಸತಿ ಸೌಲಭ್ಯ ಒದಗಿಸುವುದು ಸೇರಿದಂತೆ ನ್ಯಾಯಾಂಗಕ್ಕೆ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನು ಒದಗಿಸಲಾಗುತ್ತದೆ.
  • ಕೇಂದ್ರ ಮತ್ತು ರಾಜ್ಯದ ನಿಧಿ ಹಂಚಿಕೆಯು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳನ್ನು ಹೊರತಾಗಿ ಇತರ ರಾಜ್ಯಗಳಿಗೆ 60:40 ಆಗಿದೆ.ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಈ ನಿಧಿ ಹಂಚಿಕೆಯ ಪ್ರಮಾಣ 90:10 ಆಗಿದೆ; ಮತ್ತು ಕೇಂದ್ರಾಂಡಳಿತ ಪ್ರದೇಶಗಳಿಗೆ ಶೇ.100 ಆಗಿದೆ.
  • ಇಂದು ಹಾಲಿ ನಡೆಯುತ್ತಿರುವ 3000 ಕೋರ್ಟ್ ಹಾಲ್ ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗಾಗಿ ನಿರ್ಮಾಣ ಮಾಡುತ್ತಿರುವ 1800 ವಸತಿ ಘಟಕಗಳ ಯೋಜನೆಗಳ ಜಾರಿಗೆ ನೆರವಾಗುತ್ತದೆ.

ಯೋಜನೆಯ ನಿಗಾ

  • ಉತ್ತಮ ಆಸ್ತಿ ನಿರ್ವಹಣೆ ಜೊತೆಗೆ ಕೋರ್ಟ್ ಹಾಲ್ ಗಳ ಕಾಮಗಾರಿ ಪ್ರಗತಿ, ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಘಟಕಗಳ ಕುರಿತಂತೆ ದತ್ತಾಂಶ ಸಂಗ್ರಹಣೆಗಾಗಿ ನ್ಯಾಯ ಇಲಾಖೆಯಿಂದ ಆನ್ ಲೈನ್ ನಿಗಾ ವ್ಯವಸ್ಥೆ ಸ್ಥಾಪಿಸಲಾಗುವುದು.
  • ನಿಗಾ ಸಮಿತಿಯು ತ್ವರಿತ ಮತ್ತು ಉತ್ತಮ ನಿರ್ಮಾಣಕ್ಕಾಗಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ನಿಯಮಿತ ಸಭೆಗಳನ್ನು ಏರ್ಪಡಿಸಬಹುದಾಗಿದೆ.
  • ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಹಣ ವಿಳಂಬವಿಲ್ಲದೆ ರಾಜ್ಯ ಸರ್ಕಾರಗಳಿಂದ ಪಿಡ್ಲ್ಯುಡಿಗೆ ಬಿಡುಗಡೆ ಆಗಿದೆಯೇ ಎಂಬ ಬಗ್ಗೆಯೂ ಅದು ನಿಗಾ ಇಡಬಹುದಾಗಿದೆ.

 

 

 

 

ಹಿನ್ನೆಲೆ:

  • ಈ ನಿಟ್ಟಿನಲ್ಲಿ ನ್ಯಾಯಾಂಗ ಮೂಲ ಸೌಕರ್ಯ ಅಭಿವೃದ್ಧಿಗಾಗಿ 1993-94ರಿಂದ ಜಾರಿಗೊಳಿಸಿರುವ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಮೂಲಕ ರಾಜ್ಯ ಸರ್ಕಾರಗಳ ಸಂಪನ್ಮೂಲವನ್ನು ಕೇಂದ್ರ ಸರ್ಕಾರವು ಹೆಚ್ಚಿಸಲಿದೆ.
  • ಕೇಂದ್ರದ ನೆರವನ್ನು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಯೋಜನೆಯಡಿ ಕೋರ್ಟ್ ಹಾಲ್ ಗಳ ನಿರ್ಮಾಣ ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧಿಶರು/ನ್ಯಾಯಾಂಗ ಅಧಿಕಾರಿಗಳ ವಸತಿ ಘಟಕಗಳ ನಿರ್ಣಾಣಕ್ಕೆ ಒದಗಿಸಲಿದೆ.

MLP ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

The Cabinet has recently approved  boost judicial infrastructure. What are the benefits  from  this? What can be done with this project? how  it can be   useful for   filling the  vacancies of  judge? comment

(ನ್ಯಾಯಾಂಗಕ್ಕೆ ಮೂಲಸೌಕರ್ಯಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಕೇಂದ್ರ ಸಂಪುಟ ಸಚಿವ ತನ್ನ ಅನುಮೋದನೆಯನ್ನು ನೀಡಿದೆ . ಇದರ ಆಧಾರದ ಮೇಲೆ ಇದರಿಂದ ಆಗುವ ಲಾಭಗಳೇನು ನ್ಯಾಯಾಧೀಶರ  ನೇಮಕಾತಿ ಪ್ರಕ್ರಿಯೆಯಲ್ಲಿರುವ ಕೊರತೆಗಳನ್ನು ತುಂಬಲು ಯಾವರೀತಿ ಅನುಕೂಲವಾಗುತ್ತದೆ ?ವ್ಯಾಖ್ಯೆಸಿ)

 

 

2. ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆಯ ಕುರಿತ ಯೋಜನೆಯನ್ನು ಮುಂದುವರಿಸಲು ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರಅಧ್ಯಕ್ಷತೆಯಲ್ಲಿಂದುನಡೆದಕೇಂದ್ರಸಚಿವಸಂಪುಟಸಭೆ, ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆ (ಐಐಸಿಎ)ಯ ಕುರಿತ ಯೋಜನೆಯನ್ನು ಮತ್ತೆ ಮೂರು ಆರ್ಥಿಕ ವರ್ಷಗಳ ಕಾಲ (2017-18ರಿಂದ 2019-20ರ ವಿತ್ತೀಯ ವರ್ಷ) ಮುಂದುವರಿಸಲು ಮತ್ತು ಸಂಸ್ಥೆಗೆ 18 ಕೋಟಿ ರೂಪಾಯಿಗಳ ಅನುದಾನ ಒದಗಿಸಲು ತನ್ನ ಅನುಮೋದನೆ ನೀಡಿದೆ. ಇದು 2019-20ರ ಆರ್ಥಿಕ ವರ್ಷದ ಹೊತ್ತಿಗೆ ಸಂಸ್ಥೆಯನ್ನು ಸ್ವಾವಲಂಬಿಯನ್ನಾಗಿಸಲಿದೆ.

ಪರಿಣಾಮ:

  • ಸಂಸ್ಥೆಯು ಸಾಂಸ್ಥಿಕ ಆಡಳಿತದ ಸ್ಥಾಪಿತ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರಿಕೆಯೊಂದಿಗೆ ಏರ್ಪಡಿಸುವ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳು, ಸಂಶೋಧನಾ ಚಟುವಟಿಕೆಗಳು ಕೌಶಲವನ್ನು ವರ್ಧಿಸಲಿದ್ದು, ಇದು ವಿದ್ಯಾರ್ಥಿಗಳ ಮತ್ತು ವೃತ್ತಿಪರರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.
  • ತನ್ನ ಸಂಪನ್ಮೂಲ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಂಸ್ಥೆಯು ಸಾಂಸ್ಥಿಕ ಕಾನೂನುಗಳ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿದೆ.
  • ಐಐಸಿಎ ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿದ್ದು, ಆ ಮೂಲಕ ಹೆಚ್ಚಿನ ಆರ್ಥಿಕ ಚಟುವಟಿಕೆಯೊಂದಿಗೆ ಪ್ರಗತಿಯ ಚಾಲಕ ಶಕ್ತಿಯಾಗಿ ಹೊರಹೊಮ್ಮಿದೆ.
  • ಸಾಗರೋತ್ತರ ಅವಕಾಶಗಳೂ ಸೇರಿದಂತೆ ಕ್ಷೇತ್ರದಲ್ಲಿ ಹೊರಹೊಮ್ಮುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ವೃತ್ತಿಪರರಿಗೆ ಸಂಸ್ಥೆಯ ವೃತ್ತಿಪರ ಸ್ಪರ್ಧೆಯಲ್ಲಿನ ಸುಧಾರಣೆಯೂ ಸಹಕಾರಿಯಾಗಿದೆ.

ಹಿನ್ನೆಲೆ:

  • ಐಐಸಿಎಯಲ್ಲಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕುರಿತ ರಾಷ್ಟ್ರೀಯ ಪ್ರತಿಷ್ಠಾನ (ಎನ್.ಎಫ್.ಸಿ.ಎಸ್.ಆರ್.)ವು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಸಿಎಸ್.ಆರ್) ಉಪಕ್ರಮಗಳಿಗೆ ಜವಾಬ್ದಾರಿಯಾಗಿರುತ್ತದೆ.
  • ಈ ಪ್ರತಿಷ್ಠಾನವನ್ನು ಕಂಪನಿಗಳ ಕಾಯಿದೆ 2013ರ ಹೊಸ ನಿಯಮಾವಳಿಗಳ ರೀತ್ಯ ರೂಪಿಸಲಾಗಿದೆ. ಎನ್.ಎಫ್.ಸಿ.ಎಸ್.ಆರ್. ಸಾಮಾಜಿಕ ಸೇರ್ಪಡೆಗಾಗಿ ಸಾಂಸ್ಥಿಕ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಸಿ.ಎಸ್.ಆರ್. ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತದೆ.
  • ಐಐಸಿಎ, ಸಾಂಸ್ಥಿಕ ವಲಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ನೀತಿ ನಿರೂಪಕರು, ನಿಯಂತ್ರಕರು ಮತ್ತು ಇತರ ಬಾಧ್ಯಸ್ಥರಿಗೆ ವಿಚಾರಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲು ಬೆಂಬಲ ನೀಡುವ ಚಿಂತಕರ ಚಾವಡಿ ಮತ್ತು ದತ್ತಾಂಶ ಹಾಗೂ ಜ್ಞಾನದ ಭಂಡಾರವಾಗಿದೆ.
  • ಸಾಂಸ್ಥಿಕ ಕಾನೂನು, ಸಾಂಸ್ಥಿಕ ಆಡಳಿತ, ಸಿಎಸ್.ಆರ್, ಲೆಕ್ಕದ ಗುಣಮಟ್ಟ, ಹೂಡಿಕೆದಾರರ ಶಿಕ್ಷಣ ಇತ್ಯಾದಿ ರಂಗದಲ್ಲಿನ ಬಾಧ್ಯಸ್ಥರಿಗೆ ಇದು ಸೇವೆಯನ್ನು ಒದಗಿಸುತ್ತದೆ. ವ್ಯವಸ್ಥಾಪನೆ, ಕಾನೂನು, ಲೆಕ್ಕಪತ್ರ ಇತ್ಯಾದಿಯಲ್ಲಿ ತಾವೇ ಸ್ವಯಂ ಪ್ರತ್ಯೇಕ ತಜ್ಞರನ್ನು ನೇಮಿಸಿಕೊಳ್ಳಲು ಶಕ್ತರಲ್ಲದ ಮೊದಲ ಪೀಳಿಗೆಯ ಉದ್ದಿಮೆದಾರರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಐಐಸಿಎಯ ವಿವಿಧ ಚಟುವಟಿಕೆಗಳು ಬಹುಶ್ರುತವಾದ ಕೌಶಲವನ್ನು ಪಡೆದುಕೊಳ್ಳಲು ನೆರವಾಗುತ್ತವೆ.

3. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ಹಾಗೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳ ನಿವೃತ್ತ ನ್ಯಾಯಮೂರ್ತಿಗಳ ವೇತನ, ಗ್ರಾಚ್ಯುಯಿಟಿ,ಭತ್ಯೆಗಳು ಮತ್ತು ಪಿಂಚಣಿ ಇತ್ಯಾದಿಗಳ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ. ನಾಗರಿಕ ಸೇವೆಯಲ್ಲಿರುವವರಿಗೆ 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ ಬಳಿಕ ಈ ಅನುಮೋದನೆ ನೀಡಲಾಗಿದೆ.
  • ಈ ಅನುಮೋದನೆಯು, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳು ಮತ್ತು ಎಲ್ಲ ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ನಿರ್ವಹಿಸುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಾವಳಿಗಳು) ಕಾಯಿದೆ 1958 ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಗಳು) ಕಾಯಿದೆ 1954, ಈ ಎರಡು ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರಲು ಅವಕಾಶ ಕಲ್ಪಿಸುತ್ತದೆ.
  • ಭಾರತದ ಸುಪ್ರೀಂ ಕೋರ್ಟ್ ನ 31 (ಮುಖ್ಯ ನ್ಯಾಯಮೂರ್ತಿ ಸೇರಿದಂತೆ) ಮತ್ತು ಹೈಕೋರ್ಟ್ ಗಳ 1079 ನ್ಯಾಯಮೂರ್ತಿಗಳ (ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ) ವೇತನ ಮತ್ತು ಭತ್ಯೆ ಇತ್ಯಾದಿಗಳನ್ನು ಹೆಚ್ಚಳ ಮಾಡುತ್ತದೆ. ಜೊತೆಗೆ ಸುಮಾರು 2500 ನಿವೃತ್ತ ನ್ಯಾಯಮೂರ್ತಿಗಳು ಈ ಪರಿಷ್ಕರಣೆಯಿಂದ ಪಿಂಚಣಿ/ಗ್ರಾಚ್ಯುಯಿಟಿ ಇತ್ಯಾದಿ ಪ್ರಯೋಜನ ಪಡೆಯಲಿದ್ದಾರೆ.
  • 2016ರಿಂದ ಅನ್ವಯವಾಗುವಂತೆ ವೇತನ, ಗ್ರಾಚ್ಯುಯಿಟಿ, ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಣೆಯಿಂದ ಬರಬೇಕಾದ ಬಾಕಿಯನ್ನು ಒಂದು ಬಾರಿಗೆ ನೀಡಲಾಗುತ್ತದೆ.

ಹಿನ್ನೆಲೆ:

  • ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ವೇತನ, ಗ್ರಾಚ್ಯುಯಿಟಿ, ಪಿಂಚಣಿ, ಭತ್ಯೆ ಇತ್ಯಾದಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಾವಳಿಗಳು) ಕಾಯಿದೆ 1958 ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ವೇತನ ಇತ್ಯಾದಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಗಳು) ಕಾಯಿದೆ 1954 ನಿರ್ವಹಿಸುತ್ತದೆ.
  • ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ವೇತನ/ಪಿಂಚಣಿ, ಗ್ರಾಚ್ಯುಯಿಟಿ, ಭತ್ಯೆ ಇತ್ಯಾದಿ ಪರಿಷ್ಕರಣೆಯ ಯಾವುದೇ ಪ್ರಸ್ತಾಪ ಬಂದಾಗ ಅದಕ್ಕೆ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ, ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿ ತರಲು ಮಸೂದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿದೆ.

4.   ಆಸ್ಪತ್ರೆಗಳ ಲೂಟಿಗೆ ಬ್ರೇಕ್‌: ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚನೆ

ಪ್ರಮುಖ ಸುದ್ದಿ

 

  • ರೋಗಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಸೇರಿದಂತೆ ಅಕ್ರಮಗಳನ್ನು ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲ ವೈದ್ಯಕೀಯ ಸಂಸ್ಥೆಗಳಿಗೆ ಕಠಿಣ ಎಚ್ಚರಿಕೆ ನೀಡುವಂತೆ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ.

ಮುಖ್ಯ ಅಂಶಗಳು

  • ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಏಳು ವರ್ಷದ ಬಾಲಕಿ ಆದ್ಯಾಳ ಡೆಂಗೆ ಚಿಕಿತ್ಸೆಗೆ 15 ದಿನದಲ್ಲಿ 16 ಲಕ್ಷ ರೂ. ಬಿಲ್‌ ಮಾಡಿದ ಮತ್ತು ಆಕೆಯ ಶವ ಮೇಲಿನ ಗೌನಿಗೂ ಹಣ ವಸೂಲಿ ಮಾಡಿದ ವಿದ್ಯಮಾನ ಭಾರಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಸೂಚನೆ ಹೊರಬಿದ್ದಿದೆ.

 

  • ಫೋರ್ಟಿಸ್‌ ಪ್ರಕರಣ ನಡೆಯುವ ಕರ್ನಾಟಕ ದಲ್ಲಿ ಖಾಸಗಿ ಆಸ್ಪತ್ರೆಗಳ ಅಕ್ರಮ ತಡೆಯುವ ಉದ್ದೇಶ ಹೊಂದಿರುವ ಕೆಪಿಎಂಇ ತಿದ್ದುಪಡಿ ವಿಧೇಯಕ ಮಂಡಿಸಲಾಗಿತ್ತು. ಆದರೆ, ವೈದ್ಯರ ಮುಷ್ಕರಕ್ಕೆ ಮಣಿದು ಅದನ್ನು ದುರ್ಬಲಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದೀಗ ಕೇಂದ್ರ ಸರಕಾರದ ಸೂಚನೆ ಹೊಸ ಭರವಸೆ ಮೂಡಿಸಿದೆ.

 

  • ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್‌ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಆಸ್ಪತ್ರೆಗಳು ಅಕ್ರಮ ನಡೆಸುವುದರಿಂದ ರೋಗಿಯ ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಂತಾಗುತ್ತದೆ. ಜತೆಗೆ ಆರೋಗ್ಯ ರಕ್ಷಣೆ ವೆಚ್ಚಗಳ ಉತ್ತರದಾಯಿತ್ವದ ಬಗ್ಗೆಯೂ ಕಳವಳ ಮೂಡಿಸುತ್ತದೆ ಎಂದಿದ್ದಾರೆ.
  • ”ಫೋರ್ಟಿಸ್‌ನಂಥ ಘಟನೆಗಳಿಂದ ಪಾಠ ಕಲಿಯಲು ಇದು ಸಕಾಲ. ಹಾಗಾಗಿ, ಖಾಸಗಿಯೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎಲ್ಲ ಸಂಸ್ಥೆಗಳ ಸಭೆ ಕರೆದು ಇಂಥ ಅಕ್ರಮ ಕೃತ್ಯಗಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡಬೇಕು ಮತ್ತು ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಬೇಕು,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

 

 

ಅಕ್ರಮಗಳೇನು?

  • ವಿಪರೀತ ಬಿಲ್‌ ವಸೂಲಿ, ಸೇವೆಗಳಲ್ಲಿ ನ್ಯೂನತೆ, ಗುಣಮಟ್ಟದ ಚಿಕಿತ್ಸಾ ವಿಧಾನಗಳನ್ನು ಪಾಲಿಸದಿರುವುದು, ಆರೋಗ್ಯ ವೆಚ್ಚದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡದೆ ಇರುವುದೇ ಮೊದಲಾದ ಅಕ್ರಮಗಳನ್ನು ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ.
  • ಇಂಥ ಕೃತ್ಯಗಳು ದೇಶದ ಆರೋಗ್ಯ ಸುರಕ್ಷತಾ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆ ಕುಸಿಯುವಂತೆ ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಧೇಯಕದಲ್ಲಿ ಏನಿದೆ?

  • 2010ರ ವಿಧೇಯಕದಲ್ಲಿ ಡೆಂಗೆ, ಚಿಕೂನ್‌ಗುನ್ಯ ಮತ್ತು ಮಲೇರಿಯ ಸೇರಿದಂತೆ 227 ರೋಗಗಳ ಚಿಕಿತ್ಸಾ ಮಾರ್ಗದರ್ಶಿಗಳನ್ನು ನಮೂದಿಸಲಾಗಿದೆ. ಆಸ್ಪತ್ರೆಗಳು ಮೂಲಸೌಕರ್ಯ, ಸೇವೆ, ಸಿಬ್ಬಂದಿ, ಸಲಕರಣೆಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ.
  • ರೋಗಗಳ ಚಿಕಿತ್ಸೆಗೆ ವಿಧಿಸಬಹುದಾದ ದರ ಮತ್ತು ವಿಧಾನಗಳನ್ನು ನಿಗದಿಪಡಿಸಲು ಒಂದು ತಾಂತ್ರಿಕ ಸಮಿತಿಯನ್ನು ನೇಮಿಸಬೇಕಾಗುತ್ತದೆ.
  • ಇದುವರೆಗೆ ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಅಸ್ಸಾಂಗಳಲ್ಲಿ ಮಾತ್ರ ಈ ವಿಧೇಯಕ ಅನುಷ್ಠಾನವಾಗಿದೆ. ಸಿಕ್ಕಿಂ, ಮಿಝೋರಾಂ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಇದನ್ನು ಅಂಗೀಕರಿಸಿದ್ದರೂ ಜಾರಿಯಾಗಿಲ್ಲ.

 

 

ಕಡಿವಾಣಕ್ಕೆ ಸೂತ್ರಗಳು

  • ಎಲ್ಲ ರಾಜ್ಯ ಸರಕಾರಗಳು ಆರೋಗ್ಯ ರಕ್ಷಣಾ ಸಂಸ್ಥೆಗಳ (ನೋಂದಣಿ ಮತ್ತು ನಿಯಂತ್ರಣ) ವಿಧೇಯಕ 2010ನ್ನು ಜಾರಿಗೊಳಿಸಿ ಎಲ್ಲ ಆಸ್ಪತ್ರೆಗಳಿಗೆ ಕಡಿವಾಣ ಹಾಕಬೇಕು.
  • ಆಸ್ಪತ್ರೆಗಳ ಸಭೆ ಕರೆದು ಎಚ್ಚರಿಕೆ ನೀಡಬೇಕು, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಬೇಕು.

5. ಗೋದಾವರಿ-ಕಾವೇರಿ ನದಿ ಜೋಡಣೆಗೆ ಕೇಂದ್ರ ಯೋಜನೆ.

ಪ್ರಮುಖ ಸುದ್ದಿ

  • ಸಮುದ್ರ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ ನೀರಿನ ಸದ್ಬಳಕೆಗೆ ಕೇಂದ್ರ ಸರಕಾರ ಯೋಜನೆ ಸಿದ್ಧಪಡಿಸಿದೆ. ಸಮುದ್ರ ಸೇರುವ ಬದಲು ಅದೇ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಯೋಜನೆ ಸಾಕಾರಕ್ಕೆ ಕೇಂದ್ರ ಸಿದ್ಧತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧ ಫಲಾನುಭವಿ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳ ಸಭೆ ಕರೆಯಲಿದೆ.

ಮುಖ್ಯ ಅಂಶಗಳು

  • ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರಿವರ್‌ ಲಿಂಕಿಂಗ್‌ ಪ್ರಾಜೆಕ್ಟ್‌ ನ ಭಾಗವಾಗಿ ಗೋದಾವರಿ-ಕಾವೇರಿ ನದಿ ಜೋಡಣೆ ನಡೆಯಲಿದ್ದು, ಶೇಕಡ 90ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಉಳಿದ ಶೇಕಡ 10ರಷ್ಟು ಮೊತ್ತವನ್ನು ರಾಜ್ಯ ಸರಕಾರಗಳು ಭರಿಸಲಿವೆ.
  • ಸದ್ಯ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು.
  • ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಸಿ,ಅಲ್ಲಿಂದೆ ಮುಂದೆ ಪೆನ್ನಾರ್‌(ಉತ್ತರ ಪಿನಾಕಿನಿ) ನದಿಯಿಂದ ಕಾವೇರಿ ನದಿಗೆ ಹರಿಸುವ ಎರಡು ಯೋಜನೆಗಳು ನದಿ ಜೋಡಣೆಯ ಭಾಗವಾಗಿರುವ ಕಾರಣ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ಆಸಕ್ತಿ ತಳೆದಿದೆ ಎಂದಿರುವ ಸಚಿವರು, ಮುಂದಿನ ದಿನಗಳಲ್ಲಿ ಇದು ನೀರಾವರಿ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ.
  • ಮೊದಲ ಯೋಜನೆ: ಪ್ರಾರಂಭಿಕ ಹಂತದಲ್ಲಿ 300 ಟಿಎಂಸಿ ಗೋದಾವರಿ ನದಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್‌ ಮೂಲಕ ಪೋಲಾವರಂ ಯೋಜನೆಗೆ ಬೆಸೆದು ಬಳಿಕ ಕೃಷ್ಣಾ ನದಿಗೆ ತರುವುದು.
  • ಅಲ್ಲಿಂದ ಮುಂದೆ ಪೆನ್ನಾರ್‌ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ, ಅದನ್ನು ಮುಂದೆ ಗ್ರ್ಯಾಂಡ್‌ ಅನೈಕಟ್‌ ಡ್ಯಾಮ್‌ ಮೂಲಕ ಕಾವೇರಿ ನದಿಗೆ ಸೇರಿಸುವುದು. ಈ ಇಡೀ ಯೋಜನೆಯಲ್ಲಿ ಸ್ಟೀಲ್‌ ಕೊಳವೆ ಮಾರ್ಗದ ಮೂಲಕವೇ ನೀರು ಹರಿದುಬರಲಿದೆ. ಈ ಪ್ರಾಜೆಕ್ಟ್ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು, ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗಲಿದೆ

 

 

  • ಎರಡನೇ ಯೋಜನೆ: ಗೋದಾವರಿಯ ಉಪನದಿಯಾಗಿರುವ ಇಂದ್ರಾವತಿ ನದಿ (ಮಧ್ಯ ಭಾರತ) ನೀರನ್ನು ನಾಗರ್ಜುನ ಡ್ಯಾಮ್‌ಗೆ ತಂದು, ಅಲ್ಲಿಂದೆ ಮುಂದೆ ಮತ್ತೆ ಸೋಮಸಿಲಾ ಅಣೆಕಟ್ಟೆಗೆ ಸಂಪರ್ಕಿಸಿ, ಬಳಿಕ ಅದನ್ನು ಕರ್ನಾಟಕದ ಸಂಪರ್ಕಕ್ಕೆ ಬಾರದೇ ನೇರವಾಗಿ ಕಾವೇರಿ ನದಿಗೆ ಜೋಡಿಸುವುದು ಎರಡನೇ ಯೋಜನೆ. ಇದರಿಂದ ತಮಿಳುನಾಡಿನ ಹಲವು ಭಾಗದ ರೈತರಿಗೆ ಅನುಕೂಲವಾಗಲಿದೆ.

6. ಹಿಂದುಳಿದ 115 ಜಿಲ್ಲೆಗಳಲ್ಲಿ ಮಹಿಳಾ ಶಕ್ತಿ ಕೇಂದ್ರ

ಪ್ರಮುಖ ಸುದ್ದಿ

  • ದೇಶದ ಅತ್ಯಂತ ಹಿಂದುಳಿದ 115 ಜಿಲ್ಲೆಗಳಲ್ಲಿ ‘ಮಹಿಳಾ ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಮುಖ್ಯ ಅಂಶಗಳು

  • ಗ್ರಾಮೀಣ ಪ್ರದೇಶಗಳ ಮಹಿಳೆಯರ ಕೌಶಲ ಅಭಿವೃದ್ಧಿ, ಉದ್ಯೋಗ, ಡಿಜಿಟಲ್‌ ಸಾಕ್ಷರತೆ ಮತ್ತು ಆರೋಗ್ಯ ಸುಧಾರಣೆ ‘ಮಹಿಳಾ ಶಕ್ತಿ ಕೇಂದ್ರ’ಗಳ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ.

 

  • ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 14 ಅಂಗನವಾಡಿ ಕೇಂದ್ರಗಳಲ್ಲಿ ‘ಮಹಿಳಾ ಶಕ್ತಿ ಕೇಂದ್ರ’ ಸ್ಥಾಪಿಸುವ ಬಗ್ಗೆ ಘೋಷಿಸಿದ್ದರು. ಇದಕ್ಕಾಗಿ ಪ್ರಸಕ್ತ ಬಜೆಟ್‌ನಲ್ಲಿ ₹ 500 ಕೋಟಿ ನೀಡಿದ್ದರು.
  • ಅತ್ಯಂತ ಹಿಂದುಳಿದ 115 ಜಿಲ್ಲೆಗಳಲ್ಲಿ ಬ್ಲಾಕ್‌ ಮಟ್ಟದಲ್ಲಿ 920 ‘ಮಹಿಳಾ ಶಕ್ತಿ ಕೇಂದ್ರ’ ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಸ್ಥಳೀಯ ಕಾಲೇಜುಗಳ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಎನ್‌ಎಸ್‌ಎಸ್‌ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳನ್ನೂ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆಯನ್ನು 161ರಿಂದ 640 ಜಿಲ್ಲೆಗಳಿಗೆ ವಿಸ್ತರಿಸಲು ಕೇಂದ್ರ ಒಪ್ಪಿದೆ. ಲೈಂಗಿಕ ಕಿರುಕುಳಕ್ಕೆ ಗುರಿಯಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯಗಳನ್ನು ನೀಡುವ ಇನ್ನೂ 150 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

7. ವಿಶೇಷ ಮಕ್ಕಳಿಗೆ 18ರ ವರೆಗೆ ಉಚಿತ ಶಿಕ್ಷಣ

ಪ್ರಮುಖ ಸುದ್ದಿ

  • ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ವಿಶೇಷ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಉಚಿತ ಶಿಕ್ಷಣ ನೀಡುವಂತೆ ಕೇಂದ್ರ ಸರ್ಕಾರ ಬುಧವಾರ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

 

 

ಮುಖ್ಯ ಅಂಶಗಳು

  • ಇಂಥ ಮಕ್ಕಳು ಇನ್ನುಳಿದ ಸಾಮಾನ್ಯ ಮಕ್ಕಳೊಂದಿಗೆ ಬೆರೆತು ಕಲಿಯಲು ಅನುಕೂಲವಾಗುವ ಪರಿಸರ ಮತ್ತು ತರಗತಿಗಳು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿರಬೇಕು. ಆಯಾ ರಾಜ್ಯಗಳ ಶಿಕ್ಷಣ ಇಲಾಖೆ ಮುಖ್ಯಸ್ಥರು ನೇರ ನಿಗಾ ಇಡಬೇಕು ಎಂದು ಕೇಂದ್ರ ಹೇಳಿದೆ.
  • ವಿಶೇಷ ಕಾಳಜಿ, ಆರೈಕೆ ಅಗತ್ಯವಿರುವ ಮಕ್ಕಳ ಬುದ್ಧಿ ಮತ್ತು ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯ ಮತ್ತು ಪರೀಕ್ಷಾ ವಿಧಾನಗಳಲ್ಲಿ ಅಗತ್ಯ ಮಾರ್ಪಾಡು ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಇದೇ ಮೊದಲ ಬಾರಿಗೆ ಸೂಚಿಸಿದೆ.
  • ಇಂಥ ಮಕ್ಕಳಿಗೆ ಶಾಲೆ, ಪಠ್ಯ ಮತ್ತು ಪರೀಕ್ಷಾ ವಿಧಾನದಲ್ಲಿ ವಿಶೇಷ ವಿನಾಯಿತಿ ನೀಡುವಂತೆಯೂ ಸಲಹೆ ಮಾಡಿದೆ. ಪರೀಕ್ಷೆ ಬರೆಯಲು ಸಹಾಯಕರ ನೇಮಕ, ಹೆಚ್ಚಿನ ಸಮಯಾವಕಾಶ, ಎರಡು ಮತ್ತು ಮೂರನೇ ಭಾಷೆ ಕಲಿಕೆಯಿಂದ ವಿನಾಯಿತಿ ನೀಡುವುದು ಸೇರಿದಂತೆ ಅನೇಕ ಶಿಫಾರಸು ಮಾಡಿದೆ.
  • ಇದೇ ಏಪ್ರಿಲ್‌ 19ರಂದು ಜಾರಿಯಾದ ‘ಮಾನಸಿಕ, ದೈಹಿಕ ನ್ಯೂನತೆಯುಳ್ಳ ವ್ಯಕ್ತಿಗಳ ಹಕ್ಕು ರಕ್ಷಣಾ ಪರಿಷ್ಕೃತ ಕಾಯಿದೆ (ಆರ್‌ಪಿಡಬ್ಲ್ಯುಡಿ)–2016’ ಇಂಥ ಮಕ್ಕಳ ಶೈಕ್ಷಣಿಕ ಸೌಲಭ್ಯ ಮತ್ತು ವಿನಾಯಿತಿ ಕುರಿತು ಸ್ಪಷ್ಟ ನಿಯಮಗಳನ್ನು ಹೊಂದಿದೆ.

 

  • ಆದರೂ, ದೇಶದ ಹೆಚ್ಚಿನ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಪ್ರವೇಶ ನೀಡಲು ನಿರಾಕರಿಸುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಕಾರಣ ಈ ಸೂಚನೆ ಹೊರಡಿಸಲಾಗಿದೆ ಎಚ್ಆರ್‌ಡಿ ಹೇಳಿದೆ.

ಆರ್‌ಪಿಡಬ್ಲ್ಯುಡಿ  ಪರಿಷ್ಕೃತ ಕಾಯಿದೆ –2016 ಹೇಳುವುದೇನು?

  • ವಿಶೇಷ ಸಾಮರ್ಥ್ಯದ ಮಕ್ಕಳ ಕಲಿಕೆಗೆ ಶಾಲೆಯಲ್ಲಿ ಪೂರಕ ವಾತಾವರಣ ನಿರ್ಮಾಣ
  • ಸಂಜ್ಞೆ, ಬ್ರೈಲ್‌ ಲಿಪಿ, ಶ್ರವಣ ಮತ್ತು ವಾಕ್‌ ದೋಷ ಕೌಶಲಗಳ ಕಲಿಕೆಗೆ ವಿಶೇಷ ಶಿಕ್ಷಕರ ನೇಮಕ
  • ವಿಶೇಷ ಕಲಿಕಾ ಕೌಶಲ ಬೋಧಿಸುವ ಶಿಕ್ಷಕರ ತರಬೇತಿ ಕೇಂದ್ರಗಳ ಸ್ಥಾಪನೆ
  • ಉಚಿತವಾಗಿ ಪಠ್ಯ ಪುಸ್ತಕ, ಕಲಿಕಾ ಸಾಮಗ್ರಿ, ನೆರವು ಸಾಧನ ಪೂರೈಕೆ
  • ಹೆಚ್ಚಿನ ನ್ಯೂನತೆಯುಳ್ಳ ಮಕ್ಕಳಿಗೆ ವಿದ್ಯಾರ್ಥಿವೇತನ

 

8. ಕಂಬಳ ಸುಗ್ರೀವಾಜ್ಞೆಗೆ ತಡೆ ಸಾಧ್ಯವಿಲ್ಲ: ತ್ರಿಸದಸ್ಯ ಪೀಠ

 ಪ್ರಮುಖ ಸುದ್ದಿ

  • ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಪೇಟಾಕ್ಕೆ ಸುಪ್ರೀಕೋರ್ಟ್‌ ತ್ರಿಸದಸ್ಯ ಪೀಠ ಹೇಳುವ ಮೂಲಕ ಕಂಬಳಕ್ಕಿರುವ ಸದ್ಯದ ಆತಂಕ ದೂರವಾಗಿದೆ. ಸುಗ್ರೀವಾಜ್ಞೆ ದಾವೆಗೆ ಸಂಬಂಧಿತ ವಿಚಾರಣೆ ಶುಕ್ರವಾರ ನಡೆದು ಮುಂದಿನ ವಿಚಾರಣೆ ಮತ್ತೆ ಡಿ.12ಕ್ಕೆ ಮುಂದೂಡಿಕೆಯಾಗಿದೆ.

ಪ್ರಮುಖ ಸಂಗತಿಗಳು

  • ವಿಚಾರಣೆ ವೇಳೆ ಕಂಬಳ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಬೇಕೆಂದು ಪೇಟಾ ಸಂಘಟನೆ ಮತ್ತೆ ವಾದ ಮಂಡಿಸಿದ್ದು, ಇದನ್ನು ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಚಂದ್ರಬೋರ್ಡೆ, ಕಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ತಿರಸ್ಕರಿಸಿ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ. ಶುಕ್ರವಾರ ಸುಮಾರು ಮಧ್ಯಾಹ್ನ 15ರಿಂದ 12.25ರವರೆಗೆ ವಿಚಾರಣೆ ನಡೆಯಿತು.

 

  • ಕಂಬಳ ಹಾಗೂ ಎತ್ತಿನಗಾಡಿ ಓಟಕ್ಕೆ ರಾಷ್ಟ್ರಪತಿ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡಿರುವ ಕ್ರಮವನ್ನು ವಿರೋಧಿಸಿ ಪ್ರಾಣಿ ದಯಾ ಸಂಘ (ಪೇಟಾ) ಅ.23ರಂದು ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿತು.

ಕಂಬಳದ ಬಗ್ಗೆ

  • ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ.

 

  • ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.
  • ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರಿಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದಿಶ್ಯ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು
  • ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯುತ್ತದೆ. ಇದನ್ನು ನೋಡಿದರೆ ಕೃಷಿಕರಿಗೆ ಮನರಂಜನೆ ಒದಗಿಸುವ ಸಾಧನವಾಗಿಯೂ ಕಂಬಳ ಕಾಣುತ್ತದೆ. ಕರಾವಳಿಯಲ್ಲಿ ಯಕ್ಷಗಾನ ಬಯಲಾಟಗಳು ಹೆಚ್ಚಾಗಿ ನಡೆಯುವುದೂ ಇದೇ ಸಮಯದಲ್ಲಿ. ಕಂಬಳದ ಕೋಣಗಳನ್ನು ಸಾಕುವುದೂ, ಸ್ಪರ್ಧಿಸುವುದೂ, ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೂ ಹೌದು

 

 

ಅರ್ಥಶಾಸ್ತ್ರ ECONOMY

1. ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮೂಹಿಕವಾಗಿ ಬಳಸುವ ದೊಡ್ಡ ಸಂಖ್ಯೆಯ ಪದಾರ್ಥಗಳ ಮೇಲಿನ ಜಿಎಸ್ಟಿ ದರಗಳನ್ನು ನಿನ್ನೆಯಿಂದ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ತತ್ ಕ್ಷಣದಿಂದ ಅದರ ಅನುಸರಣೆಗಾಗಿ

ಮುಖ್ಯ ಅಂಶಗಳು

 

  • ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರ (ಎನ್.ಎ.ಎ.)ದ ಅಧ್ಯಕ್ಷರು ಮತ್ತು ತಾಂತ್ರಿಕ ಸದಸ್ಯ ಹುದ್ದೆ ಸೃಷ್ಟಿಗೆ ತನ್ನ ಅನುಮೋದನೆ ನೀಡಿದೆ.
  • ಇದು ಈ ಸರ್ವೋಚ್ಚ ಕಾಯವನ್ನು ತತ್ ಕ್ಷಣವೇ ಸ್ಥಾಪಿಸಲು ದಾರಿ ಮಾಡಿಕೊಡಲಿದ್ದು, ಸರಕು ಅಥವಾ ಸೇವೆಗಳಲ್ಲಿ ಕಡಿತ ಮಾಡಿರುವ ಜಿಎಸ್ಟಿ ದರದ ಲಾಭ ಕಟ್ಟ ಕಡೆಯ ಗ್ರಾಹಕನಿಗೆ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲಿದೆ.

 

  • ಸ್ಥಾಪನೆಯಾಗಲಿರುವ ಎನ್.ಎ.ಎ.ಯ ನೇತೃತ್ವವನ್ನು ಭಾರತ ಸರ್ಕಾರದ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿ ವಹಿಸಲಿದ್ದು, ಕೇಂದ್ರ ಮತ್ತು/ಅಥವಾ ರಾಜ್ಯಗಳ ನಾಲ್ವರು ತಾಂತ್ರಿಕ ಸದಸ್ಯರಿರುತ್ತಾರೆ, ಜಿಎಸ್ಟಿಯ ಜಾರಿಯಿಂದ ಸರಕು ಮತ್ತು ಸೇವೆಗಳ ದರ ಇಳಿಕೆಯ ಲಾಭ ಗ್ರಾಹಕರಿಗೆ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಲು ಸರ್ಕಾರ ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿರುವ ನಿಟ್ಟಿನಲ್ಲಿ ಮತ್ತೊಂದು ಕ್ರಮವಾಗಿದೆ.
  • 2017ರ ನವೆಂಬರ್ 14ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 178 ಸರಕುಗಳ ಮೇಲಿದ್ದ ಶೇ.28ರಷ್ಟು ಜಿ.ಎಸ್.ಟಿ.ದರವನ್ನು ಶೇ.18ಕ್ಕೆ ಇಳಿಕೆ ಮಾಡಲಾಗಿದೆ ಎಂಬುದನ್ನು ಸ್ಮರಿಸಬಹುದು.
  • ಇದರೊಂದಿಗೆ ಈಗ ಕೇವಲ 50 ಸರಕುಗಳು ಮಾತ್ರವೇ ಶೇ.28ರ ಜಿಎಸ್ಟಿ ವ್ಯಾಪ್ತಿಯಲ್ಲಿವೆ. ಅದೇ ರೀತಿ ದೊಡ್ಡ ಸಂಖ್ಯೆಯ ವಸ್ತುಗಳ ಜಿಎಸ್ಟಿ ದರವನ್ನು ಶೇ.18ರಿಂದ 12ಕ್ಕೆಇಳಿಕೆಯನ್ನು ಕಂಡಿವೆ ಮತ್ತು ಕೆಲವು ವಸ್ತುಗಳು ಜಿಎಸ್ಟಿಯಿಂದ ವಿನಾಯತಿ ಪಡೆದಿವೆ.
  • ಲಾಭಕೋರತನ ವಿರೋಧಿ ಕ್ರಮಗಳು ಜಿಎಸ್ಟಿ ಕಾನೂನಿನಲ್ಲಿ ಅಳವಡಿಸಲಾಗಿದ್ದು, ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಮತ್ತು ಜಿಎಸ್ಟಿ ದರ ಕಡಿತದ ಸಂಪೂರ್ಣ ಲಾಭ ಸರಕು ಅಥವಾ ಸೇವೆಯ ಹರಿವಿನಲ್ಲಿ ಗ್ರಾಹಕರಿಗೆ ದೊರಕಿಸುವುದನ್ನು ಖಾತ್ರಿಪಡಿಸಲು ಅದಕ್ಕೆ ಸಾಂಸ್ಥಿಕ ಸ್ವರೂಪ ನೀಡಲಾಗಿದೆ.
  • ಎನ್.ಎ.ಎ.ಯ ಈ ಸಾಂಸ್ಥಿಕ ಚೌಕಟ್ಟು, ಒಂದು ಸ್ಥಾಯಿ ಸಮಿತಿ, ಪ್ರತಿ ರಾಜ್ಯದಲ್ಲೂ ಸ್ಕ್ರೀನಿಂಗ್ ಸಮಿತಿ ಮತ್ತು ಅಬಕಾರಿ ಮತ್ತು ಸೀಮಾ ಸುಂಕ ಕುರಿತ ಕೇಂದ್ರೀಯ ಮಂಡಳಿಯಲ್ಲಿ (ಸಿಬಿಇಸಿ) ಸಂರಕ್ಷಣೆ ಕುರಿತ ಮಹಾ ನಿರ್ದೇಶನಾಲಯವನ್ನು ಒಳಗೊಂಡಿರುತ್ತದೆ.

 

  • ಬಾಧಿತ ಗ್ರಾಹಕರಿಗೆ, ತಾವು ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಿದಾಗ, ಕಡಿತಗೊಳಿಸಲಾದ ದರದ ಲಾಭ ತಮಗೆ ಸಿಗಲಿಲ್ಲ ಎಂದು ಅನಿಸಿದಲ್ಲಿ, ಅವರು, ಆಯಾ ರಾಜ್ಯದ ಸ್ಕ್ರೀನಿಂಗ್ ಸಮಿತಿಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

 

  • ಆದಾಗ್ಯೂ,ಲಾಭಕೋರತನ ಘಟನೆಯು ‘ಅಖಿಲ ಭಾರತ’ ವಿಘಟನೆಯೊಂದಿಗೆ ಸಾಮೂಹಿಕ ಪ್ರಭಾವದ ವಿಷಯಕ್ಕೆ ಸಂಬಂಧಿಸಿದ್ದಾದರೆ, ಆಗ ಅರ್ಜಿಯನ್ನು ನೇರವಾಗಿ ಸ್ಥಾಯಿ ಸಮಿತಿಗೆ ನೀಡಬಹುದು
  • ಮೇಲ್ನೋಟಕ್ಕೆ ಲಾಭಕೋರತನ ಗೋಚರಿಸಿದರೆ, ಸ್ಥಾಯಿ ಸಮಿತಿಯು, ವಿವರವಾದ ತನಿಖೆಗಾಗಿ ಸಂರಕ್ಷಣೆ ಕುರಿತ ಮಹಾ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಬಹುದು, ಅದು ತನ್ನ ಅಭಿಪ್ರಾಯಗಳನ್ನು ಎನ್.ಎ.ಎ.ಗೆ ತಿಳಿಸುತ್ತದೆ.
  • ಎನ್.ಎ.ಎ. ಲಾಭಕೋರತನ ನಿಗ್ರಹಕ್ಕೆ ಕ್ರಮ ಅಗತ್ಯ ಎಂದು ಖಾತ್ರಿಪಡಿಸಿದಲ್ಲಿ, ಆಗ ಸರಕು ಅಥವಾ ಸೇವೆ ಪಡೆದ ಅರ್ಜಿದಾರನಿಗೆ ವಿತರಕರು/ಸಂಬಂಧಿತ ವಾಣಿಜ್ಯವು ತಾನು ಪಡೆದ ಅನಗತ್ಯ ಲಾಭದ ಹಣವನ್ನು ಬಡ್ಡಿ ಸಹಿತ ಹಿಂತಿರುಗಿಸಲು ಅಥವಾ ದರ ಇಳಿಕೆ ಮಾಡುವಂತೆ ಅದಕ್ಕೆ ಸೂಚಿಸಬಹುದು.
  • ಅನಗತ್ಯ ಲಾಭವನ್ನು ಗ್ರಾಹಕನಿಗೆ ವರ್ಗಾಯಿಸಲು ಆಗದಿದ್ದಲ್ಲಿ, ಗ್ರಾಹಕ ಕಲ್ಯಾಣ ನಿಧಿಗೆ ಅದನ್ನು ಠೇವಣಿ ಮಾಡಲೂ ಆದೇಶಿಸಬಹುದು.
  • ವಿಶೇಷ ಪ್ರಕರಣಗಳಲ್ಲಿ, ತಪ್ಪೆಸಗಿದ ವಾಣಿಜ್ಯ ಕಾಯಗಳಿಗೆ ದಂಡ ವಿಧಿಸಲು ಮತ್ತು ಜಿಎಸ್ಟಿ ಅಡಿಯಲ್ಲಿ ಅದರ ನೋಂದಣಿಯನ್ನು ರದ್ದುಗೊಳಿಸಲು ಆದೇಶಿಸುವ ಅಧಿಕಾರ ಎನ್.ಎ.ಎ.ಗೆ ಇದೆ.
  • ಎನ್.ಎ.ಎ. ಸ್ಥಾಪನೆಯು, ಇತ್ತೀಚಿನ ಜಿಎಸ್ಟಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಅವರಲ್ಲಿ ಜಿಎಸ್ಟಿ ಬಗ್ಗೆ ವಿಶ್ವಾಸವನ್ನು ವೃದ್ಧಿಸುತ್ತದೆ.
  • MLP ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

Examine the mandate of GST’s National Anti-profiteering Authority and the concerns expressed against its mandate and powers.

(ಜಿಎಸ್ಟಿ ಅಡಿಯಲ್ಲಿ ಸ್ಥಾಪಿಸಿರುವ  ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರದ ಆದೇಶ  ಮತ್ತು ಅಧಿಕಾರವನ್ನು  ಪರಿಶೀಲಿಸಿ)

 2. ಭಾರತದ ಕ್ರೆಡಿಟ್ ರೇಟಿಂಗನ್ನು ‘Baa3’ನಿಂದ ’Baa2 ನೀಡಿದ   ಮೂಡಿಸ್

ಪ್ರಮುಖ ಸುದ್ದಿ

  • ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡಿಸ್ ಇನ್​ವೆಸ್ಟರ್ ಸರ್ವೀಸಸ್ ಭಾರತದ ಕ್ರೆಡಿಟ್ ರೇಟಿಂಗನ್ನು ‘Baa3’ನಿಂದ ’Baa2’ಕ್ಕೆ ಏರಿಸಿದೆ.
  • ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಜಾರಿಗೊಳಿಸಿದ ಆರ್ಥಿಕ ಕಾರ್ಯಕ್ರಮಗಳು, ಸಾಂಸ್ಥಿಕ ಅಥವಾ ವ್ಯವಸ್ಥೆಯ ಸುಧಾರಣಾ ಕ್ರಮ, ಅವುಗಳ ಪರಿಣಾಮಗಳನ್ನು ಗಮನಿಸಿ ಮೂಡಿಸ್ ಭಾರತದ ಕ್ರೆಡಿಟ್ ರೇಟಿಂಗ್ ಪರಿಷ್ಕರಿಸಿದೆ. ಇದರೊಂದಿಗೆ ಭಾರತದ ರೇಟಿಂಗನ್ನು ಧನಾತ್ಮಕ ದಿಂದ ಸ್ಥಿರತೆ ಕಡೆಗೆ ಒಯ್ದಂತಾಗಿದೆ.

ಮುಖ್ಯ ಅಂಶಗಳು

  • ಭಾರತದ ದೀರ್ಘಾವಧಿಯ ವಿದೇಶಿ ಕರೆನ್ಸಿ ಬಾಂಡ್ ಸೀಲಿಂಗನ್ನು ’ಆಚಚ2’ನಿಂದ ’ಆಚಚ1’ಕ್ಕೆ ಏರಿಸಿದೆ. ದೀರ್ಘಾವಧಿಯ ವಿದೇಶಿ ಬ್ಯಾಂಕ್ ಠೇವಣಿ ಸೀಲಿಂಗನ್ನು ‘Baa3’ನಿಂದ ‘Baa2’ ಕ್ಕೆ ಏರಿಸಿದೆ.
  • ಇನ್ನುಳಿದಂತೆ, ಅಲ್ಪಾವಧಿ ವಿದೇಶಿ ಕರೆನ್ಸಿ ಬಾಂಡ್ ಸೀಲಿಂಗ್(ಕ)ನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಪಾವಧಿ ವಿದೇಶಿ ಕರೆನ್ಸಿ ಬ್ಯಾಂಕ್ ಠೇವಣಿ ಸೀಲಿಂಗನ್ನು ಕನಿಂದ ಕಕ್ಕೆ ಏರಿಸಲಾಗಿದೆ. ಇನ್ನು ದೀರ್ಘಾವಧಿ ಸ್ಥಳೀಯ ಕರೆನ್ಸಿ ಠೇವಣಿ ಮತ್ತು ಬಾಂಡ್ ಸೀಲಿಂಗ್(ಅ1)ನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲದೆ, ಭಾರತದ ಸ್ಥಳೀಯ ಕರೆನ್ಸಿ ಅನ್​ಸೆಕ್ಯೂರ್ಡ್ ರೇಟಿಂಗನ್ನು ‘Baa3’ ನಿಂದ ‘Baa2’ಕ್ಕೆ ಏರಿಸಿದೆ. ಅಲ್ಪಾವಧಿ ಸ್ಥಳೀಯ ಕರೆನ್ಸಿ ರೇಟಿಂಗನ್ನು ಕ ನಿಂದ ಕಕ್ಕೆ ಏರಿಸಲಾಗಿದೆ.
  • ವಿಶ್ವಬ್ಯಾಂಕ್​ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಬಡ್ತಿ ಪಡೆಯುವ ಮೂಲಕ ಇತ್ತೀಚೆಗಷ್ಟೇ ಜಾಗತಿಕವಾಗಿ ಗಮನ ಸೆಳೆದಿದ್ದ ಭಾರತದ ಸಾಧನೆಗೀಗ ಮೂಡಿಸ್ ಗರಿ ಸೇರ್ಪಡೆ ಆಗಿದೆ.
  • ವಿಶ್ವದ ಅರ್ಥವ್ಯವಸ್ಥೆ ಆಧಾರದ ಮೇಲೆ ವಿವಿಧ ರಾಷ್ಟ್ರಗಳಿಗೆ ಸ್ಥಾನ (ರೇಟಿಂಗ್) ನೀಡುವ ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ ಮೂಡಿಸ್, ಅಭಿವೃದ್ಧಿ ಕಾಣುತ್ತಿರುವ ಆರ್ಥಿಕತೆಯ ಸ್ಥಿತಿಗತಿ ಪರಿಗಣಿಸಿ ಭಾರತದ ಸ್ಥಾನವನ್ನು ಉನ್ನತೀಕರಿಸುವ ಮೂಲಕ ಬಿಎಎ2 ರೇಟಿಂಗ್ ನೀಡಿದೆ.
  • ಜಿಡಿಪಿ ಬೆಳವಣಿಗೆ ಜತೆಗೆ ನೋಟು ಅಮಾನ್ಯೀಕರಣ, ಜಿಎಸ್​ಟಿ ಮುಂತಾದ ಹೆಜ್ಜೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಕಾರಣ ಎಂಬ ವಿಶ್ವಬ್ಯಾಂಕ್ ವರದಿಯನ್ನೇ ಮೂಡಿಸ್ ಕೂಡ ಉಲ್ಲೇಖಿಸಿರುವುದು ವಿಶೇಷ.

ಯಾಕಿಷ್ಟು ಮಹತ್ವ?

  • ಮೂಡಿಸ್ ಭಾರತದ ರೇಟಿಂಗ್ ಪರಿಷ್ಕರಿಸಿ 13 ವರ್ಷಗಳೇ ಆಗಿದ್ದವು. 2004ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ಭಾರತಕ್ಕೆ ‘ಬಿಎಎ3’ ರೇಟಿಂಗ್ ದೊರೆತಿತ್ತು. ಈಗ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳು ಮತ್ತು ವ್ಯವಸ್ಥೆಗೆ ಕಾಯಕಲ್ಪ ನೀಡುವ ಕ್ರಮಗಳ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಣಾಮಗಳನ್ನು ಪರಿಗಣಿಸಿ ಈ ಸ್ಥಾನ ದೊರೆತಿರುವುದರಿಂದ ಸರ್ಕಾರದ ನಡೆಗಳನ್ನು ಟೀಕಿಸುತ್ತಿರುವ ವಿಪಕ್ಷಗಳ ಬಾಯಿ ಮುಚ್ಚಿಸಲು ಹಾಗೂ ಭವಿಷ್ಯದಲ್ಲಿ ಯೋಜನೆ ವಿಸ್ತರಿಸಲು ಕೇಂದ್ರ್ರ ಸರ್ಕಾರಕ್ಕೆ ಅನುವಾಗಲಿದೆ.

ಏನಿದು ಬಿಎಎ2?

  • ಮೂಡಿಸ್ ರೇಟಿಂಗ್​ನಲ್ಲಿ ಬಿಎಎ2 ಎಂದರೆ ಮಧ್ಯಮ ಪ್ರಮಾಣದ ಅರ್ಥಿಕ ಅಭಿವೃದ್ಧಿಯ ದರ್ಜೆ. ಆರ್ಥಿಕ ಹಾಗೂ ಸಾಂಸ್ಥಿಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡ ಕಾರಣ ಉಂಟಾದ ಪರಿಣಾಮಗಳನ್ನು ಪರಿಗಣಿಸಿ ರೇಟಿಂಗ್ ಪರಿಷ್ಕರಿಸಲಾಗುತ್ತದೆ.

ಮೂಡಿಸ್ ಎಂದರೆನು ?

  • ಮೂಡಿಸ್ ಇನ್​ವೆಸ್ಟರ್ ಸರ್ವೀಸಸ್ 1909ರಲ್ಲಿ ಸ್ಥಾಪಿಸಲ್ಪಟ್ಟಿತು. ಜಾನ್ ಮೂಡಿ ಇದರ ಸಂಸ್ಥಾಪಕ. ಷೇರು, ಬಾಂಡ್ ಮತ್ತು ಬಾಂಡ್ ರೇಟಿಂಗ್ ಕುರಿತ ಸಾಂಖ್ಯಿಕ ದತ್ತಾಂಶಗಳನ್ನು ದಾಖಲಿಸುವ ಉದ್ದೇಶ ಇದರದ್ದು.
  • 1975ರಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಕಮಿಷನ್ ಈ ಕಂಪನಿಯನ್ನು ನ್ಯಾಷನಲಿ ರೆಕಗ್ನೈಸ್ಡ್ ಸ್ಟಾಟಿಸ್ಟಿಕಲ್ ರೇಟಿಂಗ್ ಆರ್ಗನೈಸೇಷನ್(ಎನ್​ಆರ್​ಎಸ್​ಆರ್​ಒ) ಎಂದು ಗುರುತಿಸಿತು.
  • ಇದಾಗಿ ಕೆಲವು ದಶಕ ಕಾಲ ಈ ಕಂಪನಿಯ ಮಾಲೀಕತ್ವವನ್ನು ಡನ್ ಆಂಡ್ ಬ್ರಾಡ್​ಸ್ಟ್ರೀಟ್ ಹೊಂದಿತ್ತು. 2000ನೇ ಇಸವಿಯಲ್ಲಿ ಮೂಡಿಸ್ ಇನ್​ವೆಸ್ಟರ್ ಸರ್ವಿಸಸ್ ಎಂಬ ಪ್ರತ್ಯೇಕ ಕಂಪನಿಯಾಗಿ ರೂಪುಗೊಂಡಿತು. ಮೂಡಿಸ್ ಕಾರ್ಪೆರೇಷನ್ ಎಂಬುದು ಹೋಲ್ಡಿಂಗ್ ಕಂಪನಿಯಾಗಿ ಚಾಲ್ತಿಯಲ್ಲಿದೆ.

ಯಾವ ಆಧಾರದಲ್ಲಿ ರೇಟಿಂಗ್?

  • ಭಾರತದ ಒಟ್ಟಾರೆ ಆರ್ಥಿಕತೆ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗೆ ಅನುಗುಣವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾಡಿ ರೇಟಿಂಗ್ ಅಥವಾ ರ‍್ಯಾಂಕಿಂಗ್ ಕೊಡುವ ವಿಧಾನವನ್ನು ಮೂಡಿಸ್ ಅಳವಡಿಸಿಕೊಂಡಿದೆ.
  • ಇದರಿಂದಾಗಿ ದೇಶದ ಸಾಲ ಪಡೆಯುವ ಸಾಮರ್ಥ್ಯ, ಸಾಲ ಬಾಧ್ಯತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಇದೇ ಸಂಕೇತಗಳ ಮೌಲ್ಯಮಾಪನದ ಮೂಲಕ ಮಾಡುತ್ತಿದೆ. ಉನ್ನತ ಕ್ರೆಡಿಟ್ ರೇಟಿಂಗ್ ಅಂದರೆ ಅತ್ಯಧಿಕ ಸಾಲ ಪಡೆದುಕೊಂಡು ಯಾವುದೇ ಅಡ್ಡಿ ಆತಂಕವಿಲ್ಲದೇ ಅದನ್ನು ಮರುಪಾವತಿಸುವ ಸಾಮರ್ಥ್ಯ ಆ ದೇಶಕ್ಕಿದೆ ಎಂದರ್ಥ. ಕಳಪೆ ಕ್ರೆಡಿಟ್ ರೇಟಿಂಗ್ ಅಂದರೆ, ಸಾಲ ಮರುಪಾವತಿ ಸಾಮರ್ಥ್ಯ ಇಲ್ಲ ಎಂದರ್ಥ.
  • MLP ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

The new improvement in India’s rating can be seen as a positive effect of the GST and other reforms implemented by the government. comment 

(ಭಾರತಕ್ಕೆ ನೀಡಿರುವ  ರೇಟಿಂಗ್ ನ  ಆಧಾರದ ಮೇಲೆ  ಹೊಸ ಸುಧಾರಣೆ GST ಮತ್ತು ಸರ್ಕಾರದ  ಇತರ ಸುಧಾರಣೆಗಳ  ಅನುಷ್ಠಾನವನ್ನು  ಧನಾತ್ಮಕ ಪರಿಣಾಮವಾಗಿ ಕಾಣಬಹುದೆ ?.  ವ್ಯಾಖ್ಯೆಸಿ)

3. ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧ ತೆರವು -ಕೇಂದ್ರ ಸರಕಾರ

ಪ್ರಮುಖ ಸುದ್ದಿ

 

  • ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆರವುಗೊಳಿಸಿದೆ. ರೈತರು ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಪಡೆಯಬೇಕು ಎನ್ನುವ ಉದ್ದೇಶಕ್ಕೆ ಈ ನಿರ್ಬಂಧ ರದ್ದುಪಡಿಸಲಾಗಿದೆ.ಆರ್ಥಿಕ ವ್ಯವಹಾರ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.‘ಎಲ್ಲ ಬಗೆಯ ಬೇಳೆಕಾಳುಗಳ ರಫ್ತಿಗೆ ಮುಕ್ತ ಅವಕಾಶ ಮಾಡಿಕೊಡುವುದರಿಂದ ರೈತರು ತನ್ನ ಫಸಲಿಗೆ ನ್ಯಾಯಯುತ ಬೆಲೆ ಪಡೆಯಲು ಮತ್ತು ಬೇಳೆಕಾಳು ಬೆಳೆಯುವ ಪ್ರದೇಶ ವಿಸ್ತರಿಸಲು ಉತ್ತೇಜನ ದೊರೆಯಲಿದೆ.

 

 

ಮುಖ್ಯ ಅಂಶಗಳು

  • ‘ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ವ್ಯಾಪಕ ಅವಕಾಶಗಳನ್ನು ಒದಗಿಸಿಕೊಡಲು ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧ ರದ್ದುಪಡಿಸಲಾಗಿದೆ. ಬೇಳೆಕಾಳುಗಳ ಆಮದು ಮತ್ತು ರಫ್ತು ಕುರಿತು ಕಾಲ ಕಾಲಕ್ಕೆ ಸೂಕ್ತ ನಿರ್ಧಾರಕ್ಕೆ ಬರಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ನೇತೃತ್ವದಲ್ಲಿನ ಸಮಿತಿಗೆ ಅಧಿಕಾರ ನೀಡಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ತೀರ್ಮಾನಿಸಿದೆ.

 

  • ಸಂಯೋಜಿತ ಮಕ್ಕಳ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂಗನವಾಡಿ ಕೇಂದ್ರ, ಹರೆಯದ ಬಾಲಕಿಯರಿಗೆ ಸೂಕ್ತ ಯೋಜನೆ ಹಾಗೂ ಮಕ್ಕಳ ರಕ್ಷಣೆ ಮತ್ತು ರಾಷ್ಟ್ರೀಯ ಬಾಲ ವಿಹಾರ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

 

  • ಶೋಷಿತ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸೇರಿದಂತೆ ಸುಮಾರು ೧೧ ಕೋಟಿ ಮಂದಿಗೆ ಈ ಯೋಜನೆಯಿಂದ ಲಾಭವಾಗಲಿದೆ. ಈ ಯೋಜನೆಗೆ ೪೧ ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

 

  • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ತೀರ್ಮಾನಿಸಲಾಗಿದ್ದು, ಮಧ್ಯಮ ವೇತನ ಗುಂಪು – ಎಂಐಜಿಯ ಫಲಾನುಭವಿಗಳಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
  • ರಾಷ್ಟ್ರೀಯ ನ್ಯಾಯ ಹಾಗೂ ಕಾನೂನು ಸುಧಾರಣೆ ಯೋಜನೆಯಡಿ ನ್ಯಾಯಾಂಗ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಂಪುಟ ಹಸಿರು ನಿಶಾನೆ ನೀಡಿದೆ.
  • MLP ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

How can be India competitive in cereals, pulses and oilseeds? Discuss the measures that government should implement in this regard.

(ದವಸ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಲ್ಲಿ ಪ್ರಪಂಚದಲ್ಲಿ  ಭಾರತ ಹೇಗೆ ಸ್ಪರ್ಧಾತ್ಮಕವಾಗಿರುತ್ತದೆ? ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಗತಗೊಳಿಸಬೇಕಾದ ಕ್ರಮಗಳನ್ನು ಚರ್ಚಿಸಿ.)

4.  ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಬ್ಯಾಂಕ್ ನಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುನರ್ನಿರ್ಮಾಣ ಮತ್ತು ಅಭಿವೃದ್ಧಿ (ಇಬಿಆರ್.ಡಿ) ಕುರಿತ ಐರೋಪ್ಯ ಬ್ಯಾಂಕ್ ನ ಭಾರತೀಯ ಸದಸ್ಯತ್ವಕ್ಕೆ ತನ್ನ ಅನುಮೋದನೆ ನೀಡಿದೆ.
  • ಇಬಿಆರ್.ಡಿಯ ಸದಸ್ಯತ್ವ ಪಡೆಯಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

 

ಪರಿಣಾಮ:

  • ಇಬಿಆರ್.ಡಿಯಲ್ಲಿನ ಸದಸ್ಯತ್ವವು ಭಾರತದ ಅಂತಾರಾಷ್ಟ್ರೀಯ ಚಿತ್ರಣವನ್ನು ಹೆಚ್ಚಿಸಲಿದೆ ಮತ್ತು ಅದರ ಆರ್ಥಿಕ ಹಿತಗಳನ್ನು ಉತ್ತೇಜಿಸಲಿದೆ. ಇಬಿಆರ್.ಡಿಯಲ್ಲಿ ವ್ಯವಹರಿಸುವ ರಾಷ್ಟ್ರಗಳೊಂದಿಗೆ ಮತ್ತು ವಲಯದ ಜ್ಞಾನದ ಪ್ರವೇಶ ಲಭಿಸಲಿದೆ.
  • ಭಾರತದ ಹೂಡಿಕೆಯ ಅವಕಾಶಗಳನ್ನು ಚೈತನ್ಯ ಪಡೆಯಲಿವೆ.
  • ಉತ್ಪಾದನೆ, ಸೇವೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರದಲ್ಲಿ ಸಹ ಹಣಕಾಸು ಹೂಡಿಕೆ ಮೂಲಕ ಇದು ಭಾರತ ಮತ್ತು ಇಬಿಆರ್.ಡಿ ನಡುವಿನ ಸಹಕಾರದ ಸ್ವರೂಪವನ್ನು ಹೆಚ್ಚಿಸಲಿದೆ.
  • ಇಬಿಆರ್ ಡಿಯ ಮುಖ್ಯ ಕಾರ್ಯಾಚರಣೆಗಳು ಅದರ ರಾಷ್ಟ್ರಗಳ ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ಅಭಿವೃದ್ಧಿಗೆ ಸಂಬಂಧಿಸಿದೆ. ಭಾರತದ ಸದಸ್ಯತ್ವವು ಖಾಸಗಿ ವಲಯದ ಅಭಿವೃದ್ಧಿಗೆ ಬ್ಯಾಂಕ್ ನ ತಾಂತ್ರಿಕ ನೆರವು ಮತ್ತು ವಲಯ ಜ್ಞಾನವನ್ನು ಪಡೆಯಲು ನೆರವಾಗುತ್ತದೆ.
  • ಇದು ದೇಶದಲ್ಲಿ ಸುಧಾರಣೆಯ ಹೂಡಿಕೆಯ ವಾತಾವರಣವನ್ನು ತರಲು ಕೊಡುಗೆ ನೀಡುತ್ತದೆ.
  • ಇಬಿಆರ್.ಡಿಯ ಸದಸ್ಯತ್ವವು ಭಾರತೀಯ ಸಂಸ್ಥೆಗಳ ಸ್ಪರ್ಧಾತ್ಮಕ ಬಲವನ್ನು ಹೆಚ್ಚಿಸುತ್ತದೆ ಮತ್ತು ವಾಣಿಜ್ಯಾವಕಾಶ, ದಾಸ್ತಾನು ಚಟುವಟಿಕೆ, ಸಮಾಲೋಚನಾ ಕಾರ್ಯಕ್ರಮ ಇತ್ಯಾದಿಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಾವಕಾಶ ಹೆಚ್ಚಿಸುತ್ತದೆ.
  • ಒಂದು ಕಡೆ ಇದು ಭಾರತೀಯ ವೃತ್ತಿನಿರತರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಮತ್ತು ಮತ್ತೊಂದೆಡೆ ಭಾರತೀಯ ರಫ್ತುದಾರರಿಗೆ ಚೈತನ್ಯ ತುಂಬುತ್ತದೆ.
  • ಆರ್ಥಿಕ ಚಟುವಟಿಕೆಗಳ ಹೆಚ್ಚಳವು ಉದ್ಯೋಗಾವಕಾಶ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿದೆ.
  • ಇದು ಭಾರತೀಯ ಪ್ರಜೆಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಅವಕಾಶ ನೀಡುತ್ತದೆ.

 

 

ಹಣಕಾಸು ಪರಿಣಾಮಗಳು:

  • ಇಬಿಆರ್.ಡಿ.ಯ ಸದಸ್ಯತ್ವಕ್ಕೆ ಪ್ರಾಥಮಿಕ ಕನಿಷ್ಠ ಹೂಡಿಕೆಯು ಸುಮಾರು €1 ದಶಲಕ್ಷ ಆಗಿರುತ್ತದೆ. ಆದಾಗ್ಯೂ, ಈ ಕಲ್ಪಿತ ಮೊತ್ತ ಸದಸ್ಯತ್ವ ಪಡೆಯಲು ಅಗತ್ಯವಾದ ಕನಿಷ್ಠ ಸಂಖ್ಯೆಯ ಶೇರು (100) ಖರೀದಿಸುವ ಭಾರತದ ನಿರ್ಧಾರವನ್ನು ಆಧರಿಸಿರುತ್ತದೆ. ಒಂದೊಮ್ಮೆ ಭಾರತವು ಹೆಚ್ಚಿನ ಸಂಖ್ಯೆ ಬ್ಯಾಂಕ್ ಶೇರು ಖರೀದಿಸುವುದಾದರೆ, ಹಣಕಾಸಿನ ಹೊರೆಯೂ ಹೆಚ್ಚಳವಾಗುತ್ತದೆ. ಈ ಹಂತದಲ್ಲಿ ಸಂಪುಟದ ತಾತ್ವಿಕ ಒಪ್ಪಿಗೆಯು ಬ್ಯಾಂಕ್ ಸೇರ್ಪಡೆಗೆ ಸಂಬಂಧಿಸಿರುತ್ತದೆ.

ಹಿನ್ನೆಲೆ

  • ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯೂರೋಪಿಯನ್ ಬ್ಯಾಂಕ್ (ಇಬಿಆರ್.ಡಿ)ನಲ್ಲಿ ಸದಸ್ಯತ್ವ ಪಡೆಯುವುದು ಸರ್ಕಾರದ ಪರಿಗಣನೆಯಲ್ಲಿದೆ. ಕೆಲವು ವರ್ಷಗಳಿಂದ ದೇಶದ ಪ್ರಭಾವಿತ ಆರ್ಥಿಕ ಪ್ರಗತಿ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಘನತೆಯ ಹೆಚ್ಚಳವು ಭಾರತ ಜಾಗತಿಕ ಅಭಿವೃದ್ಧಿ ಭೂರಮೆಯಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ (ಎಂಡಿಬಿ)ಗಳು ಅಂದರೆ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಗಳ ನಂಟಿನ ಹೊರತಾಗಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದು ಸೂಕ್ತ ಎಂಬುದನ್ನು ಪರಿಗಣಿಸಲಾಗಿದೆ.
  • ಈ ಹಿನ್ನೆಲೆಯಲ್ಲಿ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ (ಎನ್.ಡಿ.ಬಿ.) ಸೇರುವ ನಿರ್ಧಾರವನ್ನು ಈ ಹಿಂದೆ ಕೈಗೊಳ್ಳಲಾಗಿತ್ತು.

5 .ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ-(South Asia Regional Training and Technical Assistance Center) (SARTTAC)

 

ಪ್ರಮುಖ ಸುದ್ದಿ

  • ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ನ ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ (ಎಸ್‍ಎಆರ್‍ಟಿಟಿಎಸಿ) ಚಾಲನಾ ಸಮಿತಿಯ ಮಧ್ಯಂತರ ಸಭೆ ನವದೆಹಲಿಯಲ್ಲಿ ನಡೆಯಿತು.
  • ಎಸ್‍ಎಆರ್‍ಟಿಟಿಎಸಿಯ ಆರು ಸದಸ್ಯದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಇದರ ಜತೆಗೆ ಯೂರೋಪಿಯನ್ ಒಕ್ಕೂಟ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಯುಎಸ್‍ಎಐಡಿ ಅಭಿವೃದ್ಧಿ ಪಾಲುದಾರ ಪ್ರತಿನಿಧಿಗಳು, ಐಎಂಎಫ್ ಸಿಬ್ಬಂದಿ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.

ಎಸ್‍ಎಆರ್‍ಟಿಟಿಎಸಿ ಚಾಲನಾ ಸಮಿತಿ ಬಗ್ಗೆ

  • ಈ ಚಾಲನಾ ಸಮಿತಿಯ ಸಭೆಯಲ್ಲಿ 2018ನೇ ಹಣಕಾಸು ವರ್ಷದ ಕ್ರಿಯಾಯೋಜನೆಯನ್ನು ಅನುಮೋದಿಸಲಾಯಿತು ಹಾಗೂ ಸರ್ಕಾರಿ ಹಣಕಾಸು ಮತ್ತು ಸಾರ್ವಜನಿಕ ಸಾಲ ಅಂಕಿ ಅಂಶಗಳ ಹೊಸ ಕಾರ್ಯಕ್ಷೇತ್ರವನ್ನು ಕೂಡಾ ಅನುಮೋದಿಸಲಾಯಿತು.
  • ಎಸ್‍ಎಆರ್‍ಟಿಟಿಎಸಿನ ಮೊದಲ ಐದು ವರ್ಷಗಳ ಅವಧಿಗೆ (2017-2022) ಶೇಕಡ 90ರಷ್ಟು ಹಣಕಾಸು ನೆರವು ಬಂದಿರುವುದನ್ನು ಸಭೆ ಸ್ವಾಗತಿಸಿತು.
  • ಇದು ಸರ್ಕಾರಿ ಹಣಕಾಸು ಮತ್ತು ಸಾರ್ವಜನಿಕ ಸಾಲ ಅಂಕಿ ಅಂಶಗಳ ಹೊಸ ಕಾರ್ಯಕ್ಷೇತ್ರವನ್ನು ಕೂಡಾ ಅನುಮೋದಿಸಿತು.
  • ಈ ಕ್ಷೇತ್ರದಲ್ಲಿ ಭವಿಷ್ಯದ ಕಾರ್ಯಯೋಜನೆಗಳಿಗೆ ತಾಂತ್ರಿಕ ನೆರವು ಮತ್ತು ತರಬೇತಿಯನ್ನು ನೀಡುವ ಬಗ್ಗೆ ಪ್ರಬಲವಾದ ಬೇಡಿಕೆ ಸದಸ್ಯರಿಂದ ಕೇಳಿಬಂತು. ಚಾಲನಾ ಸಮಿತಿಯ ಮುಂದಿನ ಸಭೆ 2018ರ ಮೇ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿದೆ.

ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ

  • ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ (ಎಸ್‍ಎಆರ್‍ಟಿಟಿಎಸಿ)ವನ್ನು 2017ರ ಫೆಬ್ರವರಿಯಲ್ಲಿ ಉದ್ಘಾಟಿಸಲಾಯಿತು.
  • ಇದು ಐಎಂಎಫ್‍ನ ಮೊಟ್ಟಮೊದಲ ಪ್ರಾದೇಶಿಕ ಸಾಮಥ್ರ್ಯ ಅಭಿವೃದ್ಧಿ ಕೇಂದ್ರವಾಗಿದ್ದು, ಸಂಪೂರ್ಣವಾಗಿ ತರಬೇತಿ ಮತ್ತು ತಾಂತ್ರಿಕ ನೆರವನ್ನು ನೀಡುವ ಚಟುವಟಿಕೆಗಳನ್ನು ಇದು ನಿರ್ವಹಿಸುತ್ತದೆ. ಇದು ನವದೆಹಲಿಯಲ್ಲಿದೆ.
  • ಇದು ಭಾರತದ ಜತೆಗೆ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಹಾಗೂ ಶ್ರೀಲಂಕಾಗಳಿಗೆ ಕೂಡಾ ನೆರವಾಗುತ್ತದೆ.
  • ಸದಸ್ಯದೇಶಗಳು ತಮ್ಮ ದಕ್ಷಿಣ ಏಷ್ಯಾ ತರಬೇತಿ ಮತ್ತು ತಾಂತ್ರಿಕ ನೆರವು ಕೇಂದ್ರ (ಎಸ್‍ಎಆರ್‍ಟಿಟಿಎಸಿ) ಬಜೆಟ್‍ನ ಮೂರನೇ ಎರಡರಷ್ಟು ಭಾಗವನ್ನು ಭರಿಸುತ್ತವೆ. ಉಳಿದ ಹಣವನ್ನು ಯೂರೋಪಿಯನ್ ಯೂನಿಯನ್, ಕೊರಿಯಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ದೇಶಗಳು ನೀಡುತ್ತವೆ.

 

  • ಇದರ ಮುಖ್ಯ ಉದ್ದೇಶವೆಂದರೆ, ಸದಸ್ಯ ದೇಶಗಳು ತಮ್ಮ ಸಾಂಸ್ಥಿಕ ಹಾಗೂ ಮಾನವ ಸಂಪನ್ಮೂಲದ ಸಾಮಥ್ರ್ಯವನ್ನು ವೃದ್ಧಿಸುವುದು ಹಾಗೂ ವಿಸ್ತøತ ಮಟ್ಟದಲ್ಲಿ ಯೋಜನೆಗಳನ್ನು ವಿನ್ಯಾಸಗೊಳಿಸುವುದು ಹಾಗೂ ಅನುಷ್ಠಾನಗೊಳಿಸುವುದು.
  • ಪ್ರಗತಿಗೆ ಪೂರಕವಾದ ಹಣಕಾಸು ನೀತಿಗಳನ್ನು ರೂಪಿಸುವ ಜತೆಗೆ ಬಡತನವನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಇದು ಸರ್ಕಾರಗಳು ತಮ್ಮ ಆರ್ಥಿಕ ನೀತಿಗಳನ್ನು ಮತ್ತು ಸಂಸ್ಥೆಗಳನ್ನು ಆಧುನೀಕರಿಸಲು ಕೂಡಾ ಅವಕಾಶ ನೀಡುತ್ತದೆ.

6. 5ನೇ ಹಣಕಾಸು ಆಯೋಗದ ರಚನೆಗೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಂವಿಧಾನಾತ್ಮಕ ಹೊಣೆಗಾರಿಕೆಯಲ್ಲಿ ಸಂವಿಧಾನದ ವಿಧಿ 280(1) ಅಡಿಯಲ್ಲಿ 15ನೇ ಹಣಕಾಸು ಆಯೋಗದ ರಚನೆಗೆ ತನ್ನ ಅನುಮೋದನೆ ನೀಡಿದೆ. 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳನ್ನು ಸೂಕ್ತ ಸಮಯದಲ್ಲಿ ಅಧಿಸೂಚಿಸಲಾಗುವುದು.

 

 

 

ಹಿನ್ನೆಲೆ:

  • ಸಂವಿಧಾನದ 280 (1) ಪರಿಚ್ಛೇದವು ಹಣಕಾಸು ಆಯೋಗ (ಎಫ್.ಸಿ.) ಅನ್ನು ರಚಿಸಬೇಕು ಎಂದು … ” ಈ ಸಂವಿಧಾನದ ಜಾರಿಗೆ ಬಂದ ಎರಡು ವರ್ಷಗಳಲ್ಲಿ ಆರಂಭಿಸಬೇಕು ಮತ್ತು ನಂತರ ಪ್ರತಿ ಐದನೇ ವರ್ಷ ಮುಕ್ತಾಯದ ಹೊತ್ತಿಗೆ ಅಥವಾ ರಾಷ್ಟ್ರಪತಿಯವರು ಸೂಕ್ತವೆಂದು ಪರಿಗಣಿಸುವ ಮುಂಚಿನ ಅವಧಿಯಲ್ಲಿ… ” ಎಂದು ಉಲ್ಲೇಖಿಸುತ್ತದೆ.
  • ಈ ಅಗತ್ಯನ್ನು ಗಮನದಲ್ಲಿಟ್ಟುಕೊಂಡು, ಹಿಂದಿನ ಹಣಕಾಸು ಆಯೋಗದ ರಚನೆಯಾದ ಐದು ವರ್ಷಗಳ ಅವಧಿಯೊಳಗೆ ಮುಂದಿನ ಹಣಕಾಸು ಆಯೋಗ ರಚಿಸುವ ಪರಿಪಾಠ ಬೆಳೆದುಬಂದಿದೆ.
  • ಹದಿನಾಲ್ಕು (14) ಹಣಕಾಸು ಆಯೋಗಗಳನ್ನು ಈ ಹಿಂದೆ ರಚಿಸಲಾಗಿದೆ. 14ನೇ ಹಣಕಾಸು ಆಯೋಗವನ್ನು 2015ರ ಏಪ್ರಿಲ್ 1ರಿಂದ ಆರಂಭವಾಗುವಂತೆ ಮುಂದಿನ 5 ವರ್ಷಗಳಿಗೆ ಶಿಫಾರಸು ಮಾಡಲು ದಿನಾಂಕ 2013ರಂದು ರಚಿಸಲಾಗಿತ್ತು. ಈ ಆಯೋಗವು 2014ರ ಡಿಸೆಂಬರ್ 15ರಂದು ತನ್ನ ವರದಿ ಸಲ್ಲಿಸಿತ್ತು.
  • 14ನೇ ಹಣಕಾಸು ಆಯೋಗದ ಶಿಫಾರಸುಗಳು 2019-20ರ ಹಣಕಾಸು ವರ್ಷದವರೆಗೆ ಸಿಂಧುವಾಗಿರುತ್ತವೆ. ಸಂವಿಧಾನದ ನಿಯಮಾವಳಿಗಳ ರೀತ್ಯ 15ನೇ ಹಣಕಾಸು ಆಯೋಗದ ರಚನೆಯು ಏಪ್ರಿಲ್ 1, 2020ರಿಂದ ಮುಂದಿನ ಅವಧಿಗೆ ಶಿಫಾರಸು ಮಾಡಲಿದ್ದು, ಅದು ಈಗ ಆಗಬೇಕಿದೆ.

7. ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಕಾರ್ಮಿಕರಿಗಾಗಿ 8ನೇ ಸುತ್ತಿನ ವೇತನ ಹೆಚ್ಚಳ ನೀತಿಗೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್.ಇ.ಗಳು) ಕಾರ್ಮಿಕರ ವೇತನ ಹೆಚ್ಚಳದ 8ನೇ ಸುತ್ತಿನ ಮಾತುಕತೆಗಾಗಿ ವೇತನ ನೀತಿಗೆ ತನ್ನ ಅನುಮೋದನೆ ನೀಡಿದೆ.

ಮುಖ್ಯಾಂಶಗಳು:

  • ಸಾಮಾನ್ಯವಾಗಿ .2016ಕ್ಕೆ ವೇತನ ಪರಿಷ್ಕರಣೆಯಾಗಿ ಐದು ವರ್ಷ ಅಥವಾ 10 ವರ್ಷಗಳ ಅವಧಿ ಮುಗಿದಿರುವ ಅಂಥ ಸಿಪಿಎಸ್.ಇ.ಗಳ ಆರ್ಥಿಕ ಸುಸ್ಥಿರತೆ ಮತ್ತು ಅದರ ಹೊರೆ ಭರಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಿಪಿಎಸ್.ಇ.ಗಳ ಆಡಳಿತ ಮಂಡಳಿಗಳಿಗೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡಲು ಮುಕ್ತವಾಗಿ ಮಾತುಕತೆ ನಡೆಸಬಹುದಾಗಿದೆ.
  • ಯಾವುದೇ ವೇತನ ಹೆಚ್ಚಳಕ್ಕೆ ಸರ್ಕಾರದಿಂದ ಆಯವ್ಯಯದ ಬೆಂಬಲವನ್ನು ನೀಡಲಾಗುವುದಿಲ್ಲ. ಸಂಪೂರ್ಣವಾಗಿ ಹಣಕಾಸಿನ ಹೊರೆಯನ್ನು ಆಯಾ ಸಿಪಿಎಸ್.ಇ.ಗಳೇ ತಮ್ಮ ಆಂತರಿಕ ಸಂಪನ್ಮೂಲದಿಂದ ಭರಿಸಬೇಕು.
  • ಪುನರ್ ವಿನ್ಯಾಸ/ಪುನಶ್ಚೇತನ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವ ಸಿಪಿಎಸ್.ಇ.ಗಳಲ್ಲಿ, ಅನುಮೋದಿತ    ಪುನರ್ ವಿನ್ಯಾಸ/ಪುನಶ್ಚೇತನ ಯೋಜನೆಯ ನಿಯಮಾನುಸಾರವಾಗಿ ಮಾತ್ರವೇ ವೇತನ ಪರಿಷ್ಕರಣೆ ಮಾಡಬೇಕು.

 

  • ಆಯಾ ಸಿಪಿಎಸ್.ಇ.ಗಳ ವೇತನ ಶ್ರೇಣಿಯು ಹಾಲಿ ಇರುವ ನಿರ್ವಹಣಾ/ಅಧಿಕಾರಿಗಳ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನಕ್ಕಿಂತ ಹೆಚ್ಚಾಗುವುದಿಲ್ಲ ಎಂಬುದನ್ನು ಸಂಬಂಧಿತ ಸಿಪಿಎಸ್.ಇ.ಗಳ ಆಡಳಿತ ಮಂಡಳಿಗಳು ಖಾತ್ರಿಪಡಿಸಬೇಕು.
  • ಐದು ವರ್ಷಗಳ ಅವಧಿಯನ್ನು ಅನುಸರಿಸುವ ಸಿಪಿಎಸ್.ಇಗಳ ಆಡಳಿತ ಮಂಡಳಿಗಳು ವೇತನ ಶ್ರೇಣಿಯ ಎರಡು ಸತತ ವೇತನ ಪರಿಷ್ಕರಣೆಗಳಲ್ಲಿ ಹತ್ತು ವರ್ಷದ ಅವಧಿಯನ್ನು ಅನುಸರಿಸುವ ಸಿಪಿಎಸ್.ಇ.ಗಳಲ್ಲಿ ಹಾಲಿ ಇರುವ ನಿರ್ವಹಣಾ/ಅಧಿಕಾರಿಗಳ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನಕ್ಕಿಂತ ಹೆಚ್ಚಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು.
  • ನಿರ್ವಹಣಾಧಿಕಾರಿಗಳು/ ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನ ಶ್ರೇಣಿಗೆ ಸಂಬಂಧಿಸಿದಂತೆ ತಮ್ಮ ಕಾರ್ಮಿಕರ ಸಂಘರ್ಷವನ್ನು ತಪ್ಪಿಸಲು, ಸಿಪಿಎಸ್.ಇ.ಗಳು ಗ್ರೇಡ್ ಗಳ ತುಟ್ಟಿಭತ್ಯೆ ತಟಸ್ಥಗೊಳಿಸುವಿಕೆ ಮತ್ತು / ಅಥವಾ ವೇತನ ಸಮಾಲೋಚನೆಯ ಸಮಯದಲ್ಲಿ ಶ್ರೇಣೀಕೃತ ಫಿಟ್ಮೆಂಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಗಣಿಸಬೇಕು.
  • ಮಾತುಕತೆಗಳ ಬಳಿಕ ಹೆಚ್ಚಿಸುವ ವೇತನವು ತಮ್ಮ ಸರಕು ಮತ್ತು ಸೇವೆಗಳ ಪ್ರಮಾಣೀಕೃತ ದರಗಳ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ಸಿಪಿಎಸ್.ಇ.ಗಳು ಖಾತ್ರಿಪಡಿಸಬೇಕು.

 

  • ವೇತನ ಪರಿಷ್ಕರಣೆಯು ಪ್ರತಿ ದೈಹಿಕ ಘಟಕದ ಔಟ್ ಪುಟ್ ಗೆ ಕಾರ್ಮಿಕರ ವೆಚ್ಚ ಹೆಚ್ಚಳವಾಗಬಾರದು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಈಗಾಗಲೇ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಪಿಎಸ್.ಇಗಳ ಅಪರೂಪದ ಪ್ರಕರಣಗಳಲ್ಲಿ,ಸಚಿವಾಲಯ / ಇಲಾಖೆ ಕೈಗಾರಿಕಾ ನಿಯಮಗಳನ್ನು ಪರಿಗಣಿಸಿ ಡಿಪಿಇಯೊಂದಿಗೆ ಸಮಾಲೋಚಿಸಬಹುದು.

 

  • ವೇತನ ಇತ್ಯರ್ಥದ ಸಿಂಧುತ್ವವು ಐದು ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಕನಿಷ್ಠ 5 ವರ್ಷಗಳ ಅವಧಿಯದಾಗಿರುತ್ತದೆ, ಮತ್ತು ಗರಿಷ್ಠ 10 ವರ್ಷ ಅವಧಿ ಆಯ್ಕೆ ಮಾಡಿಕೊಳ್ಳುವವರಿಗೆ ಗರಿಷ್ಠ 10 ವರ್ಷ ಆಗಿರುತ್ತದೆ, ಇದು01.2017ರಿಂದ ಅನ್ವಯವಾಗಲಿದೆ.
  • ಸಿಪಿಎಸ್.ಇ.ಗಳು ಮಾತುಕತೆಯ ಬಳಿಕದ ವೇತನವನ್ನು ತಮ್ಮ ಆಡಳಿತಾತ್ಮಕ ಸಚಿವಾಲಯ/ಇಲಾಖೆ ಅನುಮೋದಿತ ಮಾನದಂಡಗಳನ್ನು ಖಚಿತಪಡಿಸಿದ ತರುವಾಯ ಜಾರಿ ಮಾಡಬೇಕು.

 

ಹಿನ್ನೆಲೆ:

  • ದೇಶದಲ್ಲಿ 320 ಸಿಪಿಎಸ್.ಇಗಳಿದ್ದು, ಇದರಲ್ಲಿ 34 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ ಸುಮಾರು 2.99 ಲಕ್ಷ ನೌಕರರು ಬೋರ್ಡ್ ಮಟ್ಟದಲ್ಲಿ ಮತ್ತು ಬೋರ್ಡ್ ಮಟ್ಟದ ಕೆಳಗಿನ ಕಾರ್ಯ ನಿರ್ವಹಣಾ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳಾಗಿದ್ದಾರೆ. ಉಳಿದ 9.35 ಲಕ್ಷ ಉದ್ಯೋಗಿಗಳು ಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ.
  • ಸಂಘಟಿತ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಮತ್ತು ಸಿಪಿಎಸ್ಇಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಉದ್ದಿಮೆ ಇಲಾಖೆ (ಡಿಪಿಇ) ವೇತನ ಪರಿಷ್ಕರಣೆಗೆ ನೀಡುವ ಮಾರ್ಗಸೂಚಿಯಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತವೆ.

8. ದಿವಾಳಿ ಮಸೂದೆ(ಎನ್​ಪಿಎ) ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಪ್ರಮುಖ ಸುದ್ದಿ

  • ಕೇಂದ್ರ ಸರ್ಕಾರ ಹೊರಡಿಸಿದ್ದ ಪರಿಷ್ಕೃತ ದಿವಾಳಿ ಮತ್ತು ದಿವಾಳಿತನದ ಕಾಯ್ದೆಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದರವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ, ದಿವಾಳಿ ಕಾಯ್ದೆಯ ನಿಯಮಗಳನ್ನು ಬಿಗಿಗೊಳಿಸಿರುವ ಸರ್ಕಾರ, ಉದ್ದೇಶಪೂರ್ವಕ ಸುಸ್ತಿದಾರರು ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್​ಪಿಎ)ಗಳ ಬಿಡ್ಡಿಂಗ್​ನಲ್ಲಿ ಪಾಲ್ಗೊಳ್ಳುವ ಅವಕಾಶಕ್ಕೆ ನಿಷೇಧ ಹೇರಿದಂತಾಗಿದೆ.

ಮುಖ್ಯ ಅಂಶಗಳು

  • ಪರಿಷ್ಕೃತ ಕಾಯ್ದೆಯಲ್ಲಿ ಸೆಕ್ಷನ್ 29ಎ ಸೇರ್ಪಡೆ ಗೊಳಿಸಿರುವ ಸರ್ಕಾರ ಅದರಲ್ಲಿ, ಒಂದು ವರ್ಷ ಮತ್ತು ಮೇಲ್ಪಟ್ಟ ಅವಧಿಗೆ ಬ್ಯಾಂಕ್ ಖಾತೆಗಳು ಅನುತ್ಪಾದಕ ಆಸ್ತಿ ಪಟ್ಟಿಗೆ ಸೇರ್ಪಡೆಗೊಂಡಿರುವ ಉದ್ದೇಶ ಪೂರ್ವಕ ಸುಸ್ತಿದಾರರನ್ನು ಬಿಡ್ಡಿಂಗ್​ನಿಂದ ಅನರ್ಹಗೊಳಿಸುವ ಅಂಶವನ್ನು ಸೇರ್ಪಡೆಗೊಳಿಸಿದೆ.
  • ಇದರಿಂದಾಗಿ ದಿವಾಳಿತನ ಘೋಷಣೆ ಮೂಲಕ -ಠಿ;2.1 ಲಕ್ಷ ಕೋಟಿ ಎನ್​ಪಿಎಗೆ ಕಾರಣವಾಗಿರುವ ಎಸ್ಸಾರ್ ಸ್ಟೀಲ್​ನ ರುಯಾಸ್, ಸಿಂಘಾಲ್ಸ್ ಸೇರಿ 12 ಕಂಪನಿಗಳು, ತಮ್ಮ ಆಸ್ತಿಗಳ ಮರುಖರೀದಿಗೆ ಅವಕಾಶವಿರುವುದಿಲ್ಲ.
  • ಹಾಗೆಯೇ ಉಳಿದ ಎನ್​ಪಿಎಗಳ ಬಿಡ್ಡಿಂಗ್​ನಲ್ಲಿ ಕನಿಷ್ಠ 1ರಿಂದ 5 ವರ್ಷ ಪಾಲ್ಗೊಳ್ಳುವುದಕ್ಕೂ ಅವಕಾಶವಿಲ್ಲ.
  • ಇದರಿಂದಾಗಿ ಸಹಸ್ಪರ್ಧಿಗಳಾದ ಟಾಟಾ ಸ್ಟೀಲ್ಸ್, ಮಿತ್ತಲ್, ನಿಪ್ಪಾನ್ ಕಂಪನಿಗಳು ಬಿಡ್ ಮೊತ್ತದಲ್ಲಿ ಹಠಾತ್ ಏರಿಕೆ ಅಪಾಯದಿಂದ ಪಾರಾದಂತಾಗುತ್ತದೆ ಎಂದು ವಿಶ್ಲೇಷಿಸ ಲಾಗಿದೆ. ನೂತನ ಕಾನೂನು ದಿವಾಳಿತನ ಆರೋಪದಲ್ಲಿ ಅನರ್ಹಗೊಂಡ ನಿರ್ದೇಶಕರು ಮತ್ತು ಕಳಂಕಿತ ಕಂಪನಿ ಮುಖ್ಯಸ್ಥರಿಗೆ ಬಿಡ್​ನಿಂದ ನಿರ್ಬಂಧಿಸಲಾಗಿದೆ.
  • ದಿವಾಳಿ ಮತ್ತು ದಿವಾಳಿತನ ಕಾಯ್ದೆಯಲ್ಲಿ ತಿದ್ದುಪಡಿ ಕಾಣುತ್ತಿರುವ ಸೆಕ್ಷನ್​ಗಳು: 2, 5, 25, 30, 35 ಮತ್ತು ಹೊಸ ಸೆಕ್ಷನ್ 29ಎ, 235ಎ ಸೇರ್ಪಡೆಯಾಗಲಿದೆ.
  • ಬಡ್ಡಿ ಮತ್ತು ಖಾತೆಗೆ ಸಂಬಂಧಿತ ಇತರೆ ದಂಡ ಪಾವತಿ ಬಾಕಿ ಉಳಿಸಿದವರು ಕೂಡ ಬಿಡ್, ಪರಿಹಾರ ಸಭೆಗಳಲ್ಲಿ ಭಾಗವಹಿಸುವಂತಿಲ್ಲ.
  • ಕಾರ್ಪೆರೇಟ್ ವಲಯದ ಸಾಲಗಾರನ ಪರ ಗ್ಯಾರೆಂಟಿಯಾದ ಪ್ರಮೋಟರ್​ಗೂ ಬಿಡ್ಡಿಂಗ್​ನಲ್ಲಿ ಭಾಗವಹಿಸದಂತೆ ನಿಷೇಧ.

 

  • ಕಾಯ್ದೆಯಲ್ಲಿನ ನಿಬಂಧನೆಗಳ ಉಲ್ಲಂಘನೆಗೆ ಕನಿಷ್ಠ -ಠಿ;1 ಲಕ್ಷದಿಂದ 2 ಕೋಟಿವರೆಗೆ ದಂಡ.
  • ಸುಸ್ತಿದಾರರಿಂದ ಮುಟುಗೋಲು ಹಾಕಿಕೊಂಡಿರುವ ಆಸ್ತಿಗಳ ಹರಾಜಿನಲ್ಲಿ ಬ್ಯಾಂಕ್​ಗಳಿಗೆ ಲಾಭ ತಂದುಕೊಡಲು ಖರೀದಿದಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕೇಂದ್ರ ಸರ್ಕಾರಕ್ಕೆ.

 

 

 

 

ಅಂತಾರಾಷ್ಟ್ರೀಯ ಸಂಬಂಧಗಳು INTENATIONAL RELATIONS

 

1. ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಸೇನಾ ಸಮರಾಭ್ಯಾಸ -ಸಂಪ್ರಿತಿ 2017

ಪ್ರಮುಖ ಸುದ್ದಿ

  • ಮಿಜೋರಂನಲ್ಲಿರುವ ವೈರಂಗ್ಟೆಯಲ್ಲಿರುವ ಭಾರತದ ಒಳನುಸುಳುಕೋರರ ನಿಗ್ರಹ ಮತ್ತು ಅರಣ್ಯ ಯುದ್ಧ ಶಾಲೆಯಲ್ಲಿ ನಡೆಯಲಿರುವ ಜಂಟಿ ಸೇನಾ ಸಮರಾಭ್ಯಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನೆಗಳು ಭಾಗಿಯಾಗಲಿವೆ.

ಪ್ರಮುಖ ಸಂಗತಿಗಳು

  • ಇಂದಿನಿಂದ ಇದೇ ತಿಂಗಳು 18ರವರೆಗೆ ಸಂಪ್ರಿತಿ ಸಮರಾಭ್ಯಾಸ ನಡೆಯಲಿದೆ. ಎರಡೂ ದೇಶಗಳ ದ್ವಿಪಕ್ಷೀಯ ಮಿಲಿಟರಿ ಸಂಬಂಧವನ್ನು ಉತ್ತೇಜಿಸುವ ಸಲುವಾಗಿಯಾಗಿ ಈ ಸಮರಾಭ್ಯಾಸವನ್ನು ನಡೆಸಲಾಗುತ್ತಿದ್ದು, ಬಂಡುಕೋರರ ನಿಗ್ರಹ ಮತ್ತು ಭಯೋತ್ಪಾದನೆ ಕಾರ್ಯಚರಣೆಯನ್ನು ನಿಗ್ರಹಿಸಲು ಅರೆ ಪರ್ವತದ ಕಾಡಿನ ಭೂಪ್ರದೇಶದಲ್ಲಿ ಇದು ನಡೆಯಲಿದೆ.
  • ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವೆಂದರೆ ಭಾರತ ಹಾಗೂ ಬಾಂಗ್ಲಾದೇಶದ ಸೇನೆಯ ನಡುವೆ ಪರಸ್ಪರ ಅವಲಂಬನೆ ಮತ್ತು ಸಹಕಾರವನ್ನು ಅಭಿವೃದ್ಧಿಪಡಿಸುವುದು. ಎರಡು ನೆರೆಯ ದೇಶಗಳ ಸೇನೆಗಳ ಮಧ್ಯೆ ಧನಾತ್ಮಕ ಸಂಬಂಧವನ್ನು ಬೆಳೆಸುವುದು ಮತ್ತು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ.

 

  • ವೈರಂಗ್ಟೆಯಲ್ಲಿ ಕ್ಷೇತ್ರ ತರಬೇತಿ, ಮೇಘಾಲಯದ ಉಮ್ರೊಯ್ ಕಂಟೋನ್ ಮೆಂಟ್ ನಲ್ಲಿ ಕಮಾಂಡ್ ಪೋಸ್ಟ್ ತರಬೇತಿಯನ್ನು ಸಂಪ್ರಿತಿ ತರಬೇತಿ ಒಳಗೊಂಡಿದೆ.
  • ಇದರ ಹೊರತಾಗಿ, ಇದೇ 13ರಿಂದ ಡಿಸೆಂಬರ್ 10ರವರೆಗೆ ಬಿಹಾರದ ದಾನಾಪುರ್ ಕಂಟೋನ್ ಮೆಂಟ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ಮಿಲಿಟರಿ ನಡುವೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಕುರಿತು ಜಂಟಿ ತರಬೇತಿ ನಡೆಯಲಿದೆ.
  • ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಜಂಟಿ ಸಮರಾಭ್ಯಾಸ ಮತ್ತು 2015ರಲ್ಲಿ ಪಶ್ಚಿಮ ಬಂಗಾಳದ ಬಿನ್ನಗುರಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆದಿತ್ತು.

MLP ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

what are the  various  Issues between India and Bangladesh relationship.?  Discuss the recent initiatives taken by India and Bangladesh to improve their mutual relationship.

 ( ಭಾರತ ಮತ್ತು ಬಾಂಗ್ಲಾದೇಶ ಸಂಬಂಧದ ನಡುವಿನ ವಿವಿಧ ಸಮಸ್ಯೆಗಳಾವುವು ?    ಪರಸ್ಪರ ಸಂಬಂಧವನ್ನು ಸುಧಾರಿಸಲು  ಇತ್ತೀಚಿಗೆ ಕೈಗೊಂಡಂತಹ  ಕ್ರಮಗಳನ್ನು ಚರ್ಚಿಸಿ.  )

2.   ಚೀನಾ ಹೊಸ ಅಸ್ತ್ರ ಹೈಟೆಕ್ ವಿಮಾನ

ಪ್ರಮುಖ ಸುದ್ದಿ

  • ಅಣ್ವಸ್ತ್ರ ಸಿಡಿತಲೆ ಹೊತ್ತು, ಜಗತ್ತಿನ ಯಾವುದೇ ಭಾಗದ ಮೇಲೆ ಹದಿನಾಲ್ಕೇ ನಿಮಿಷದಲ್ಲಿ ದಾಳಿ ನಡೆಸಬಲ್ಲ ಹೈಪರ್​ಸಾನಿಕ್ ಏರ್​ಕ್ರಾಫ್ಟನ್ನು ಚೀನಾ ಅಭಿವೃದ್ಧಿ ಪಡಿಸುತ್ತಿದೆ .

ಮುಖ್ಯ ಅಂಶಗಳು

  • ಈ ವಿಮಾನದ ವೇಗ ಸೆಕಂಡ್​ಗೆ 12 ಕಿ.ಮೀ. ಆಗಿದ್ದು, ಶಬ್ದದ ವೇಗಕ್ಕಿಂತ 35 ಪಟ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತದೆ. ಈ ವಿಮಾನದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುವುದಕ್ಕಾಗಿ ರಹಸ್ಯ ವಾಯು ಸುರಂಗ(ಹೈಪರ್ ಡ್ರಾ್ಯಗನ್)ವನ್ನು ನಿರ್ವಿುಸಲಾಗುತ್ತಿದೆ.
  • 2020ರ ವೇಳೆಗೆ ಈ ವಿಮಾನ ಸೇನೆ ಸೇರ್ಪಡೆಗೊಳ್ಳಲಿದ್ದು, ಆಗ ಜಗತ್ತಿನ ವೇಗದ ಹೈಪರ್​ಸಾನಿಕ್ ವಿಮಾನ ಹೊಂದಿದ ದೇಶಗಳ ಸಾಲಿಗೆ ಚೀನಾ ಸೇರಲಿದೆ .
  • ಹೈಪರ್​ಸಾನಿಕ್ ವಿಮಾನಗಳನ್ನು ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ಚೀನಾ 2013ರಿಂದ ತೊಡಗಿಕೊಂಡಿದ್ದು, ಇದುವರೆಗೆ ಹೈಪರ್​ಸಾನಿಕ್ ಗ್ಲೆ ಹೈಡರ್ ಡಿಎಫ್-ಝೆಡ್​ಎಫ್​ನ ಏಳು ಪರೀಕ್ಷಾ ಹಾರಾಟಗಳನ್ನು ನಡೆಸಿದೆ. ಅವುಗಳಲ್ಲಿ ಯಶಸ್ಸನ್ನೂ ಕಂಡಿದೆ.
  • ಈ ವಿಮಾನಗಳನ್ನು ಕ್ಷಿಪಣಿ ಉಡಾವಣೆಗೆ, ಜಗತ್ತಿನ ಯಾವುದೇ ಭಾಗಕ್ಕೂ ಕೆಲವೇ ನಿಮಿಷಗಳಲ್ಲಿ ದಾಳಿ ಎಸಗುವುದಕ್ಕಾಗಿ ಅಣ್ವಸ್ತ್ರ ಸಿಡಿತಲೆ ಸಾಗಿಸಲು ಬಳಸಲಾಗುತ್ತದೆ.

ಹೈಪರ್ ಡ್ರ್ಯಾಗನ್ ಬಗ್ಗೆ

  • ಈ ಹೈಪರ್​ಸಾನಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟಕ್ಕೆ ಬಳಸುವ 5 ಮೀಟರ್ ಅಗಲ, 265 ಮೀಟರ್ ಉದ್ದದ ಏರೋಡೈನಾಮಿಕ್ ಸುರಂಗಗಳಿಗೆ ಹೈಪರ್ ಡ್ರಾ್ಯಗನ್ ಎನ್ನುತ್ತಾರೆ.
  • ಅಮೆರಿಕದ ಬಫಲ್ಲೋ, ನ್ಯೂಯಾರ್ಕ್​ಗಳಲ್ಲಿ ಇರುವ ಎಲ್​ಇಎನ್​ಎಕ್ಸ್-ಎಕ್ಸ್ ಸೌಲಭ್ಯದ ಶಕ್ತಿಶಾಲಿ ವಾಯು ಸುರಂಗದಲ್ಲಿ ಗಂಟೆಗೆ 22,000 ಮೈಲಿ ಸಂಚರಿಸುವ ವಿಮಾನಗಳ ಪರೀಕ್ಷಾ ಪ್ರಯೋಗ ಮಾಡಬಹುದು.

3.  ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ – ರಷ್ಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

 

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಸ್ವರೂಪದ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

  • ಈ ಪ್ರಸ್ತಾಪಿತ ಒಪ್ಪಂದಕ್ಕೆ ಗೃಹ ಸಚಿವರ ನೇತೃತ್ವದ ಭಾರತೀಯ ನಿಯೋಗ 2017ರ ನವೆಂಬರ್ 27ರಿಂದ 29ರವರೆಗೆ ಕೈಗೊಳ್ಳಲಿರುವ ರಷ್ಯಾ ಅಧಿಕೃತ ಭೇಟಿಯ ವೇಳೆ ಅಂಕಿತ ಹಾಕಲಾಗುತ್ತದೆ.

 

 

ಹಿನ್ನೆಲೆ:

 

  • ಭಾರತ ಮತ್ತು ರಷ್ಯಾ ದೇಶಗಳು ಪರಸ್ಪರ ಹಿತಾಸಕ್ತಿಯ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಪ್ತ ಸಹಕಾರ ನೀಡುವಲ್ಲಿ ಸುದೀರ್ಘ ಇತಿಹಾಸ ಹೊಂದಿವೆ. ವಿಶ್ವಾದ್ಯಂತ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನಿಗ್ರಹಿಸಲು ದೇಶಗಳು ಒಗ್ಗೂಡಿ ಶ್ರಮಿಸುವ ಅಗತ್ಯವಿದೆ.
  • ಈ ಪ್ರಸ್ತಾಪಿತ ಒಪ್ಪಂದವು 1993ರ ಅಕ್ಟೋಬರ್ ನಲ್ಲಿ ಆಗಿದ್ದ ಒಪ್ಪಂದವನ್ನು ಬದಲಾಯಿಸುತ್ತದೆ ಮತ್ತು ಭದ್ರತೆಯ ಕ್ಷೇತ್ರದಲ್ಲಿನ ಪ್ರಯೋಜನಗಳನ್ನು ಕ್ರೋಢೀಕರಿಸಲು ಮತ್ತು ಹೊಸ ಹಾಗೂ ಹೊರಹೊಮ್ಮುವ ಅಪಾಯಗಳು ಮತ್ತು ಬೆದರಿಕೆಗಳ ವಿರುದ್ಧ ಜಂಟಿಯಾಗಿ ಹೋರಾಡುವ ಪ್ರಯತ್ನದ ಹೆಜ್ಜೆಯಾಗಿದೆ.
  • ಈ ಒಪ್ಪಂದವು ತಜ್ಞತೆ, ಉತ್ತಮ ಪದ್ಧತಿಗಳು ಮತ್ತು ಮಾಹಿತಿಯ ವಿನಿಮಯದ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯವನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಭಯೋತ್ಪಾದನೆ ನಿಗ್ರಹಿಸಲು ಹಾಗೂ ವಲಯದಲ್ಲಿ ಭದ್ರತೆ ಹೆಚ್ಚಿಸಲು ನೆರವಾಗುತ್ತದೆ.

 

 

4. ಐಸಿಜೆಗೆ     ಭಾರತದ ದಲ್ವೀರ್ ಭಂಡಾರಿ  ಮರುಆಯ್ಕೆ

ಪ್ರಮುಖ ಸುದ್ದಿ

  • ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) 15 ಸದಸ್ಯರ ನ್ಯಾಯಪೀಠದಲ್ಲಿ ಖಾಲಿಯಿದ್ದ 5 ನ್ಯಾಯಮೂರ್ತಿಗಳಿಗಾಗಿ ನಡೆದ ಚುನಾವಣೆಯಲ್ಲಿ ಭಾರತದ ದಲ್ವೀರ್ ಭಂಡಾರಿ ಮರು ಆಯ್ಕೆಯಾಗಿದ್ದಾರೆ.

ಐಸಿಜೆಯಲ್ಲಿ ಭಾರತದ ರಾಜತಾಂತ್ರಿಕ ಜಯವಿಶ್ಲೇಷಣೆ

  • ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಗೆ (ಐಸಿಜೆ) ಭಾರತ ಮೂಲದ ನ್ಯಾ. ದಲ್ವೀರ್ ಭಂಡಾರಿ ಅವರು ಮರು ನೇಮಕಗೊಂಡಿದ್ದಲ್ಲದೆ, ಕೊನೆ ಕ್ಷಣದಲ್ಲಿ ಬ್ರಿಟನ್ ತನ್ನ ಅಭ್ಯರ್ಥಿ ಹೆಸರನ್ನು ಹಿಂತೆಗೆದುಕೊಂಡ ಬೆಳವಣಿಗೆಯನ್ನು ಭಾರತದ ಮಹತ್ವದ ರಾಜತಾಂತ್ರಿಕ ಜಯ ಜಯ ಎಂದೇ ವಿಶ್ಲೇಷಿಸಲಾಗಿದೆ.
  • ವಿಶ್ವ ವ್ಯವಹಾರಗಳಲ್ಲಿ ಭಾರತದ ಪ್ರಭಾವ ಹೆಚ್ಚಿದೆ ಎಂಬುದರ ಸಂಕೇತವೂ ಹೌದು. ಇದು ಭಾರತಕ್ಕೆ ಹೆಮ್ಮೆಯ ಸನ್ನಿವೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಈ ದಿಕ್ಕಿನಲ್ಲಿ ಸುಷ್ಮಾ ಸ್ವರಾಜ್ ಅವರ ಪ್ರಯತ್ನಗಳನ್ನೂ ಶ್ಲಾಘಿಸಿದ್ದಾರೆ. ಈ ಸಾಧನೆಗೆ ಸಯ್ಯದ್ ಅಕ್ಬರುದ್ದಿನ್ ಅವರ ಕೊಡುಗೆಯನ್ನು ಸಚಿವೆ ಸುಷ್ಮಾ ಸ್ವರಾಜ್ ನೆನೆಸಿಕೊಂಡಿದ್ದಾರೆ.
  • ಪಾಲುದಾರ ದೇಶಗಳೊಂದಿಗೆ ಬೆಂಬಲ ಸಾಧಿಸಲು ಅಕ್ಬರುದ್ದಿನ್ ತೆರೆಯ ಹಿಂದೆ ಸಾಕಷ್ಟು ಯತ್ನಿಸಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ. ಭದ್ರತಾ ಸಮಿತಿಯ ಖಾಯಂ ಸದಸ್ಯರಲ್ಲದ ದೇಶಗಳು ಖಾಯಂ ಐದು ದೇಶಗಳ ಸದಸ್ಯನನ್ನು ಸೋಲಿಸಿರುವುದು ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗೆ ಸಾಕ್ಷಿಯಾಗಿದೆ.
  • 1946ರಿಂದ ಬ್ರಿಟನ್ ಐಸಿಜೆಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಆದರೆ ಮೊದಲ ಬಾರಿಗೆ ಐಸಿಜೆಯಲ್ಲಿ ಬ್ರಿಟನ್ ಸದಸ್ಯರು ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಸ್ಪರ್ಧೆ ಭಾರತಕ್ಕೆ ಪ್ರತಿಷ್ಟೆಯ ವಿಷಯವಾಗಿ ಕೂಡ ಪರಿಣಮಿಸಿತ್ತು.
  • ಮತದಾನದಲ್ಲಿ ಭಾರತ ಮುನ್ನಡೆ ಸಾಧಿಸಿದ್ದರಿಂದ ಜಂಟಿ ಸಭೆಯ ಪ್ರಕ್ರಿಯೆಯನ್ನು ಮುಂದಿಡುವ ಕಾರ್ಯತಂತ್ರವನ್ನು ಬ್ರಿಟನ್ ಪ್ರಸ್ತಾಪಿಸಿತು. ಆದರೆ ಇದಕ್ಕೆ ಭಾರತ ವಿರೋಧಿಸಿದ್ದರಿಂದ ಬ್ರಿಟನ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿತು. ಅಂತಿಮವಾಗಿ ನ್ಯಾ. ಭಂಡಾರಿ ಅವರಿಗೆ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ) ಮತ್ತು ಭದ್ರತಾ ಸಮಿತಿಯಲ್ಲಿ ದೊಡ್ಡ ಮಟ್ಟದಲ್ಲಿ ಮತಗಳು ಲಭಿಸಿದವು. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕವೂ ಬ್ರಿಟನ್ ನ ವಿಶ್ವಸಂಸ್ಥೆ ಶಾಶ್ವತ ಪ್ರತಿನಿಧಿ ಮ್ಯಾಥ್ಯೂ ರೈಕ್ರಾಫ್ಟ್ ಅವರು “ಭಾರತ ಮತ್ತು ಬ್ರಿಟನ್ ಆಪ್ತ ಸಂಬಂಧ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ’’ ಎಂದು ಹೇಳಿದ್ದು ಗಮನಸೆಳೆಯಿತು.
  • ಕಳೆದ ಹಲವಾರು ವರ್ಷಗಳಲ್ಲಿ, ಭಾರತದ ಜಾಗತಿಕ ಹೆಜ್ಜೆಗುರುತು ಬೆಳೆದಿದೆ. ವಿಶ್ವ ನಾಯಕರೊಂದಿಗೆ ಪ್ರಧಾನಿ ಮೋದಿ ಅವರ ಹತ್ತಿರದ ಸಂವಾದ-ಸಂಬಂಧಗಳು, ಆಫ್ರಿಕಾ, ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ ದೇಶಗಳೊಂದಿಗೆ ಉತ್ತಮ ಸಂಬಂಧ ಗಟ್ಟಿಯಾಗಿವೆ. ನ್ಯಾಯಮೂರ್ತಿ ಭಂಡಾರಿಯವರ ಗೆಲುವಿನ ಸಲುವಾಗಿ ಅವರಿಗೆ ಸೂಕ್ತ ಬೆಂಬಲ ಸಿಗುವಂತೆ ಮಾಡಿದ ಭಾರತದ ರಾಜತಾಂತ್ರಿಕ ಸಿಬ್ಬಂದಿಯನ್ನು ಕೂಡ ಇಲ್ಲಿ ಶ್ಲಾಘಿಸಬೇಕು. ಇದಲ್ಲದೆ, ಕಾಮನ್ವೆಲ್ತ್ ರಾಷ್ಟ್ರಗಳ ಬೆಂಬಲ ಅಸಾಧಾರಣವಾಗಿತ್ತು.
  • ಕೆಲವು ವರ್ಷಗಳ ಹಿಂದೆಯೇ ಯುಎನ್ ಸೆಕ್ರೆಟರಿ ಜನರಲ್ ಕೋಫಿ ಅನ್ನನ್ ಅವರು “ವಿಶ್ವಸಂಸ್ಥೆಗೆ ಭಾರತ ಸರ್ಕಾರ ತನ್ನ ತಜ್ಞರಿಂದ ನೆರವು, ಸೈನಿಕರು ಮತ್ತು ಅಂತರರಾಷ್ಟ್ರೀಯ ನಾಗರಿಕ ಸೇವೆ ಮೂಲಕ ಅಗಾಧ ಕೊಡುಗೆ ನೀಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಭಿವೃದ್ಧಿಶೀಲ ಜಗತ್ತಿನ ಪರವಾಗಿ ವಿಶ್ವಸಂಸ್ಥೆ ತನ್ನ ಕಾರ್ಯಸೂಚಿಯನ್ನು ರೂಪಿಸಲು ಭಾರತ ತನ್ನದೇ ಆದ ಕೊಡುಗೆ ನೀಡಿದೆ. ಜಾಗತಿಕ ರಾಜಕೀಯ ವ್ಯವಸ್ಥೆಯ ರೂಪಾಂತರಕ್ಕಾಗಿ ಭಾರತವು ತನ್ನ ವಿದೇಶಿ ನೀತಿಯ ಗುರಿಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡಲು ಕ್ರಮ ಕೈಗೊಂಡಿದೆ.
  • ನ್ಯಾಯಮೂರ್ತಿ ಭಂಡಾರಿ ಅವರು ಹೇಗ್ ನಲ್ಲಿರುವ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ನಲ್ಲಿ ಸೇವೆ ಸಲ್ಲಿಸಿದ ನಾಲ್ಕನೇ ಭಾರತೀಯ. 1985ರಿಂದ 1988 ರವರೆಗೆ ಐಸಿಜೆ ಅಧ್ಯಕ್ಷರಾಗಿ ನ್ಯಾಯಮೂರ್ತಿ ನಾಗೇಂದ್ರಸಿಂಗ್, ನ್ಯಾಯಮೂರ್ತಿ ಬಿ.ಎನ್.ರಾವ್ (1952-53) ಮತ್ತು ನ್ಯಾಯಮೂರ್ತಿ ಆರ್.ಎಸ್. ಪಾಠಕ್ (1989-91) ಸೇವೆ ಸಲ್ಲಿಸಿದ್ದರು. ಈ ಶಾಶ್ವತ ನ್ಯಾಯಾಧೀಶರ ಹೊರತಾಗಿ, ಕೆಲವು ಭಾರತೀಯರು ನಿರ್ದಿಷ್ಟ ಬಿಕ್ಕಟ್ಟು ಇತ್ಯರ್ಥ ನ್ಯಾಯಾಲಯಗಳಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ: ಅವರಲ್ಲಿ ಎಂಸಿ ಚಾಗ್ಲಾ (ಪೋರ್ಚುಗಲ್ ವರ್ಸಸ್ ಇಂಡಿಯಾ), ಪಿ.ಎಸ್. ರಾವ್ (ಮಲೇಷಿಯಾ / ಸಿಂಗಾಪುರ್) ಮತ್ತು ಬಿಪಿ ಜೀವನ್ ರೆಡ್ಡಿ(ಪಾಕಿಸ್ತಾನ ಇಂಡಿಯಾ) ಮೊದಲಾದವರು ಇದ್ದಾರೆ.
  • ಐಸಿಜೆ ಸ್ಥಾಪನೆಯಾಗಿದ್ದು 1945ರಲ್ಲಿ. ಇದು ವಿಶ್ವಸಂಸ್ಥೆಯ ಪ್ರಮುಖ ನ್ಯಾಯಾಂಗ ಸಂಸ್ಥೆ. ದೇಶಗಳ ನಡುವಿನ ಬಿಕ್ಕಟ್ಟನ್ನು ಇತ್ಯರ್ಥಪಡಿಸುವುದು, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಕಾನೂನಾತ್ಮಕ ಸಲಹೆಗಳನ್ನು ನೀಡುವುದು ಸೇರಿದಂತೆ ವಿವಿಧ ಸೇವೆಗಳನ್ನು ಐಸಿಜೆ ಒದಗಿಸುತ್ತದೆ. ಒಂದುವೇಳೆ ಐಸಿಜೆ ಬಹಳ ಪರಿಣಾಮಕಾರಿಯಾಗಿಲ್ಲ ಎಂದರೆ ಅದಕ್ಕೆ ಸೀಮಿತ ಜನಾದೇಶ ಪ್ರಮುಖ ಕಾರಣ. ವಿವಾದಗಳನ್ನು ಮುಂದಿಟ್ಟುಕೊಂಡು ಬರುವ ದೇಶಗಳು ಐಸುಇಜೆ ನಿರ್ಣಯಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅದಕ್ಕೆ ಬದ್ಧರಾಗಿರಬೇಕು. ಐಸಿಜೆ ಅಪರಾಧ ಪ್ರಕರಣಗಳ ವಿಚಾರಣೆ ನಡೆಸುವುದಿಲ್ಲ. ದೇಶಗಳ ನಡುವೆ ಬಿಕ್ಕಟ್ಟು ನಿರ್ಮಾಣವಾದ ಸಂದರ್ಭದಲ್ಲಿ ಐಸಿಜೆಯನ್ನು ಸಂಪರ್ಕಿಸಬಹುದು.
  • ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸಾಧನೆಗೆ ಸಿಕ್ಕ ಫಲ ಇದು ಎಂದು ಹೇಳಲಾಗುತ್ತಿದೆ. ಅಭಿವೃದ್ಧಿಶೀಲ ಜಗತ್ತಿನ ಪರವಾಗಿ ವಿಶ್ವಸಂಸ್ಥೆ ತನ್ನ ಅಜೆಂಡಾವನ್ನು ರೂಪಿಸಲು ಸಹಾಯ ಮಾಡಲು ಅತ್ಯಂತ ನಿರರ್ಗಳಪ್ರಸ್ತಾವಗಳನ್ನು ಮುಂದಿಡುತ್ತಿರುವ ಭಾರತ, ವಿಶ್ವಸಂಸ್ಥೆ ಪ್ರಜಾತಂತ್ರ ನಿಧಿ ಮತ್ತು ವಿಶ್ವಸಂಸ್ಥೆ ಪಾಲುದಾರಿಕೆ ನಿಧಿ ಮುಂತಾದ ನಿಧಿಗಳಿಗೆ ಹಣಕಾಸು ಹಂಚಿಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ದಲ್ವೀರ್ ಭಂಡಾರಿರವರ ಬಗ್ಗೆ

  • ಜೋಧಪುರ ವಿವಿಯಿಂದ ಕಾನೂನು ಪದವಿ ಪಡೆದಿರುವ ದಲ್ವೀರ್ ಭಂಡಾರಿ ಅಜ್ಜ ಬಿ.ಸಿ.ಭಂಡಾರಿ ಮತ್ತು ತಂದೆ ಮಹಾವೀರ್ ಚಾಂದ್ ಭಂಡಾರಿ ರಾಜಸ್ಥಾನ ಬಾರ್ ಅಸೋಸಿಯೇಷನ್ ಸದಸ್ಯರಾಗಿ ವಕೀಲ ವೃತ್ತಿಯಲ್ಲಿ ಹೆಸರು ಮಾಡಿದ್ದವರು.
  • 1968-70ರವರೆಗೆ ರಾಜಸ್ಥಾನ ಹೈಕೋರ್ಟ್ ನಲ್ಲಿ ವೃತ್ತಿ ಕೈಗೊಂಡ ಭಂಡಾರಿ ನಂತರ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದರು.
  • ವಿಶ್ವಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಪ್ರಕ್ರಿಯೆ ಹಾಗೂ ಕಾನೂನುಗಳ ಅಧ್ಯಯನ ನಡೆಸಿರುವ ಭಂಡಾರಿ ಬಾಂಬೆ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. 2005ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನಂತರ 2012ರ ಜೂ.19ರಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಸದಸ್ಯರಾಗಿ ನೇಮಕವಾದರು.

5. ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಮ್ಸ್ (ಸೀಮಾ ಸುಂಕ) ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
  • ಈ ಒಪ್ಪಂದವು ಕಸ್ಟಮ್ಸ್ ಅಪರಾಧಗಳ ತಡೆ ಮತ್ತು ತನಿಖೆಗಾಗಿ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಈ ಒಪ್ಪಂದವು ವಾಣಿಜ್ಯಕ್ಕೆ ಅವಕಾಶ ನೀಡುವುದರ ಜೊತೆಗೆ ಎರಡೂ ದೇಶಗಳ ನಡುವೆ ಮಾರಾಟವಾದ ಸರಕುಗಳ ಸಮರ್ಥ ವಿಲೇವಾರಿಯ ಖಾತ್ರಿಯನ್ನೂ ಒದಗಿಸಲಿದೆ.
  • ಎರಡೂ ದೇಶಗಳು ಈ ಒಪ್ಪಂದದ ಜಾರಿಗೆ ಅಗತ್ಯವಿರುವ ರಾಷ್ಟ್ರೀಯ ಕಾನೂನು ಅವಶ್ಯಕತೆಗಳನ್ನು ಪೂರೈಸಿದ ನಂತರ ಈ ಒಪ್ಪಂದ ಜಾರಿಗೆ ಬರಲಿದೆ.

 

ಹಿನ್ನೆಲೆ:

  • ಈ ಒಪ್ಪಂದವು ಎರಡೂ ದೇಶಗಳ ಕಸ್ಟಮ್ಸ್ ಪ್ರಾಧಿಕಾರಗಳಿಗೆ ಬೇಹುಗಾರಿಕೆ ಮತ್ತು ಮಾಹಿತಿಯ ವಿನಿಮಯಕ್ಕೆ ಕಾನೂನಾತ್ಮಕ ಚೌಕಟ್ಟು ಒದಗಿಸುತ್ತದೆ. ಕಸ್ಟಮ್ಸ್ ಅಪರಾಧತಡೆಗಟ್ಟುವಿಕೆ ಮತ್ತು ತನಿಖೆಗೆ ಕಸ್ಟಮ್ಸ್ ಕಾನೂನುಗಳ ಸೂಕ್ತ ಬಳಕೆಗೆ ಮತ್ತು ನ್ಯಾಯಸಮ್ಮತ ಸುಗಮ ವ್ಯಾಪಾರಕ್ಕೆ ನೆರವಾಗುತ್ತದೆ.
  • ಪ್ರಸ್ತಾಪಿತ ಒಪ್ಪಂದದ ಕರಡು ಪಠ್ಯವನ್ನು ಎರಡೂ ದೇಶಗಳ ಕಸ್ಟಮ್ಸ್ ಆಡಳಿತದ ಸಮ್ಮತಿಯೊಂದಿಗೆ ಆಖೈರುಗೊಳಿಸಲಾಗಿದೆ. ಈ ಕರಡು ಒಪ್ಪಂದವು ಭಾರತೀಯ ಕಸ್ಟಮ್ಸ್ ಕಳಕಳಿಗಳನ್ನು ಮತ್ತು ಅಗತ್ಯಗಳನ್ನು ಅದರಲ್ಲೂ ಎರಡೂ ದೇಶಗಳ ನಡುವೆ ವ್ಯಾಪಾರವಾದ ಸರಕಿನ ಮೂಲ ಕುರಿತ ಖಚಿತತೆಯ ಪ್ರಮಾಣ ಪತ್ರ ಮತ್ತು ಸೀಮಾ ಸುಂಕದ ಮೌಲ್ಯ ಘೋಷಣೆ ಕುರಿತ ನಿಖರ ಮಾಹಿತಿಯ ವಿನಿಮಯದ ಕಾಳಜಿ ವಹಿಸುತ್ತದೆ.

6. ಭಾರತಕ್ಕೆ ಆಸಿಯಾನ್‌ ಕೂಟ ಬಲ

ಸನ್ನಿವೇಶ

  • 90ರ ದಶಕದಲ್ಲಿ ಭಾರತ ಆರ್ಥಿಕ ಉದಾರೀಕರಣ ನೀತಿಯನ್ನು ಅಂಗೀಕರಿಸಿತು.ಆ ನಂತರ ವಾಣಿಜ್ಯ ಸಂಬಂಧಗಳ ವಿಸ್ತರಣೆಗೆ ಆದ್ಯತೆ ನೀಡಿತು. ಯುರೋಪ್‌, ಲ್ಯಾಟಿನ್‌ ಅಮೆರಿಕ, ಏಷ್ಯಾ ಹಾಗೂ ಆಗ್ನೇಯ ಏಷ್ಯಾ ವಲಯದಲ್ಲಿ ವ್ಯಾಪರ ಸಂಬಂಧಗಳನ್ನು ವ್ಯಾಪಕವಾಗಿ ಸುಧಾರಿಸಿಕೊಂಡಿತು.

 

ವಿಶ್ಲೇಷಣೆ

  • 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಇತ್ಯಾದಿ ಅಭಿಯಾನಗಳ ಮೂಲಕ ಜಾಗತಿಕ ನಕ್ಷೆಯಲ್ಲಿ ಅತ್ಯಂತ ಹೂಡಿಕೆ ಸ್ನೇಹಿ ದೇಶ ಎನ್ನುವ ಹಿರಿಮೆಗೆ ಪಾತ್ರವಾಗಿದೆ.ಸ್ವತಃ ವರ್ಲ್ಡ್‌ಬ್ಯಾಂಕ್‌ ಈ ಅಂಶವನ್ನು ಎತ್ತಿ ಹಿಡಿದಿದೆ.
  • ಮನಿಲಾದಲ್ಲಿ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದರ ಮೂಲಕ ಪೌರಾತ್ಯ ದೇಶಗಳ ಜತೆಗಿನ ನೀತಿ ಆಧಾರಿತ ಸಂಬಂಧಕ್ಕೆ ಕ್ರಿಯಾಶೀಲ ಆಯಾಮವನ್ನು ನೀಡಿದ್ದಾರೆ. ಭವಿಷ್ಯದಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಜಗತ್ತಿನ ಅಭಿವೃದ್ಧಿಯ ಚಾಲಕ ಶಕ್ತಿಗಳಾಗಲಿವೆ ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
  • ಭಾರತವನ್ನು ಜಾಗತಿಕ ಉತ್ಪಾದನಾಕೇಂದ್ರವಾಗಿಸುವುದು ತಮ್ಮ ಸರಕಾರದ ಗುರಿ. ಇದಕ್ಕಾಗಿ ಲೈಸೆನ್ಸ್‌ ರಾಜ್‌ ನೀತಿಗಳಿಗೆ ತಿಲಾಂಜಲಿ ನೀಡಲಾಗಿದೆ. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂಬುದನ್ನು ಧ್ಯೇಯವಾಗಿಸಿಕೊಳ್ಳಲಾಗಿದೆ.
  • ಮೂರು ವರ್ಷಗಳಲ್ಲಿ 1200 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಆರ್ಥಿಕ ವಲಯದಲ್ಲಿ ಹೊಸ ಸಂಚಲನಗಳುಂಟಾಗಿದೆ.
  • ಭಾರತದ ಈ ಯಶೋಗಾಥೆಯಲ್ಲಿ ಹತ್ತು ಸದಸ್ಯರಾಷ್ಟ್ರಗಳ ಆಸಿಯಾನ್‌ ಕೂಟ ಭಾಗಿಯಾಗಬೇಕು ಎಂದು ಪ್ರತಿಪಾದಿಸುವುದರ ಮೂಲಕ ಭಾರತದ ಪೂರ್ವಾಭಿಮುಖ ನೀತಿಯ ರೂಪುರೇಷೆಗಳನ್ನು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ ಫಿಲಿಪ್ಪೀನ್ಸ್‌ ಜತೆ ನಾಲ್ಕು ಮಹತ್ವದ ಒಪ್ಪಂದಗಳಿಗೆ ಮೋದಿ ಅವರು ಸಹಿ ಹಾಕಿದ್ದು, ರಕ್ಷಣಾ ವಲಯದಲ್ಲಿ ಸಹಕಾರ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
  • ಆಸಿಯಾನ್‌ ಶೃಂಗದ ಒಂದು ಮಹತ್ವದ ಬೆಳವಣಿಗೆಯೆಂದರೆ ಜಪಾನ್‌, ಅಮೆರಿಕ, ಆಸ್ಪ್ರೇಲಿಯಾ ಮತ್ತು ಭಾರತದ ನಡುವೆ ಚತುರ್‌ಪಕ್ಷೀಯ ಸಂಬಂಧಕ್ಕೆ ಹೊಸ ಆಯಾಮ ಸಿಕ್ಕಿದೆ.
  • ಯಾವುದೇ ದೇಶವನ್ನು ವಿರೋಧಿಸದೆ ವಿವಿಧ ವಲಯಗಳಲ್ಲಿ ಸಹಕಾರವನ್ನು ವೃದ್ಧಿಸಿಕೊಳ್ಳುವ ಸಂಕಲ್ಪವನ್ನು ಈ ಶೃಂಗದಲ್ಲಿ ಪಾಲ್ಗೊಂಡಿದ್ದ ಈ ದೇಶಗಳ ನಾಯಕರು ಮಾಡಿದರು. ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಚೀನಾದ ಆರ್ಥಿಕತೆಗಳು ಸಂಪೂರ್ಣ ರೂಪಾಂತರಗೊಂಡಿವೆ.
  • ದೊಡ್ಡ ಆರ್ಥಿಕ ಮತ್ತು ಮಿಲಿಟರಿ ಶಕ್ತಿಗಳಾಗಿವೆ. ಬಲಗೊಳ್ಳುತ್ತಿರುವ ಚತುರ್‌ಪಕ್ಷೀಯ ಕೂಟದಿಂದ ಅಧೀರಗೊಂಡಂತೆ ಕಂಡುಬಂದ ಚೀನಾ ತಮ್ಮ ದೇಶವನ್ನು ಯಾವುದಕ್ಕೂ ಗುರಿಯಾಗಿಸಿಕೊಳ್ಳಬಾರದು. ಯಾವುದೇ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿದ್ದು ಗಮನಾರ್ಹ. ಡೋಕ್ಲಾಮ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ದಿಟ್ಟ ನೀತಿಯಿಂದಾಗಿ ತನ್ನ ಘೋಷಿತ ನಿಲುವಿನಿಂದ ಹಿಂದಡಿ ಇಟ್ಟಿದ್ದ ಚೀನಾಗೆ, ಬಲಾಢ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಭಾರತದ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯಿಂದ ತನ್ನ ನೀತಿಗಳನ್ನು ಎಚ್ಚರಿಕೆಯಿಂದ ಮರುರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
  • ಆಸಿಯಾನ್‌ನಲ್ಲೇ ತನ್ನ ನೀತಿಯಲ್ಲಾಗಿರುವ ಬದಲಾವಣೆಯ ಕುರುಹುಗಳನ್ನು ಆ ದೇಶ ನೀಡಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ಹಲವು ವಿವಾದಿತ ಸಂಗತಿಗಳ ಕುರಿತು ಆಸಿಯಾನ್‌ ಕೂಟದ ಜತೆ ಮಾತುಕತೆಗೆ ತಾನು ಸಿದ್ಧ ಎಂದು ಅದು ಘೋಷಿಸಿದ್ದು ಈ ಶೃಂಗದ ದೊಡ್ಡ ಸಾಧನೆಯಾಗಿದೆ.
  • ಕಳೆದ 15 ವರ್ಷಗಳಲ್ಲಿ ಹತ್ತು ರಾಷ್ಟ್ರಗಳ ಈ ಆಗ್ನೇಯ ಏಷ್ಯಾ ರಾಷ್ಟ್ರಗಳ ಕೂಟ, ತಮ್ಮ ಪ್ರಮುಖ ನೆರೆಹೊರೆ ದೇಶವಾದ ಚೀನಾದ ಜತೆ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮಾತುಕತೆ ಎಂದಿನಿಂದ ಆರಂಭವಾಗುತ್ತದೆ ಎಂಬುದು ಸ್ಪಷ್ಟವಾಗದೇ ಇದ್ದರೂ ಈ ಒಪ್ಪಂದ ಮಹತ್ವದ ಮುನ್ನಡೆ ಎಂದೇ ಹೇಳಬೇಕು.
  • ಆಗ್ನೇಯ ಏಷ್ಯಾ ಭಾಗದಲ್ಲಿ ಆಗುವ ಇಂಥ ಸಕಾರಾತ್ಮಕ ಬೆಳವಣಿಗೆಗಳು ಭಾರತಕ್ಕೆ ಹಿತಕಾರಿ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದರೆ ಆಸಿಯಾನ್‌ ಕೂಟದ ಜತೆ ಭಾರತ ಉತ್ತಮ ನಂಟನ್ನು ಹೊಂದಿದೆ.
  • ಈ ಶೃಂಗದಲ್ಲಿ ಭಾರತದ ಸಂಸ್ಕೃತಿ, ಅದರ ಕನಸು ಮತ್ತು ಕಾರ್ಯಸೂಚಿಯನ್ನು ಮೋದಿ ಅವರು ಸ್ಪಷ್ಟಪಡಿಸುವುದರ ಮೂಲಕ ಭಾರತದ ಮುನ್ನಡೆಯ ಹಾದಿಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ.

 

7. ದ್ವಿಪಕ್ಷೀಯ ಸಂಬಂಧ ದೃಢಗೊಳಿಸಿದ ಫ್ರೆಂಚ್ ವಿದೇಶಾಂಗ ಸಚಿವರ ಭೇಟಿ

 ಪ್ರಮುಖ ಸುದ್ದಿ

  • ಯುರೋಪ್ ಮತ್ತು ವಿದೇಶಾಂಗ ಇಲಾಖೆಯ ಫ್ರಾನ್ಸ್ ನ ಸಚಿವ ಜೀನ್ ಯೂಸ್ ಲಿ ಡ್ರಿಯಾನ್ ಅವರು ಈಚೆಗೆ ಭಾರತ ಭೇಟಿ ಕೈಗೊಂಡಿದ್ದರು. ಭಾರತ ಸರ್ಕಾರದ ನಾಯಕರೊಂದಿಗೆ ವ್ಯೂಹಾತ್ಮಕ ವಿಷಯಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಅವರು ಈ ಪ್ರವಾಸಕೈಗೊಂಡಿದ್ದರು. ಪ್ರಧಾನಿ ಮೋದಿ ಅವರನ್ನು ಲಿ ಡ್ರಿಯಾನ್ ಅವರು ಭೇಟಿ ಮಾಡಿದರು.
  • ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಕೇವಲ ದ್ವಿಪಕ್ಷೀಯ ವಿಚಾರಕ್ಕೆ ಸೀಮಿತವಲ್ಲ. ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಇದು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಬೇಕು ಎಂದುಭೇಟಿ ವೇಳೆ ಅಭಿಪ್ರಾಯಪಟ್ಟಿದ್ದರು.

ಪ್ರಮುಖ ಸಂಗತಿಗಳು

  • ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರನ್ನು ಭೇಟಿ ಮಾಡಿದ ಲಿ ಡ್ರಿಯಾನ್, ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದ್ಯುತ್, ನವೀಕರಿಸಲಾಗುವ ಇಂಧನ ಸಚಿವ ರಾಜ್ ಕುಮಾರ್ ಸಿಂಗ್ ಅವರನ್ನೂ ಫ್ರಾನ್ಸ್ ಸಚಿವರು ಭೇಟಿಮಾಡಿದರು.
  • ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್‍ರನ್ನೂ ಕೂಡ ಅವರು ಭೇಟಿ ಮಾಡಿದರು. ಈ ಭೇಟಿ ವೇಳೆ ಆರ್ಥಿಕ, ಭದ್ರತಾ, ಸುಸ್ಥಿರ ನಗರಾಭಿವೃದ್ಧಿ ಹಾಗೂ ನವೀಕರಿಸಲಾಗುವ ಇಂಧನ, ಶಿಕ್ಷಣ, ಜನ ಸಂಪರ್ಕ, ಸಾಂಸ್ಕøತಿಕ ವ್ಯವಹಾರಗಳ ಬಗ್ಗೆಯೂ ವಿಸ್ತøತಮಾತುಕತೆಗಳು ನಡೆದವು.
  • 2018ರ ಆರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಭಾರತ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ವಿದೇಶಾಂಗ ಸಚಿವ ಲಿ ಡ್ರಿಯಾನ್ ಅದಕ್ಕೆ ಪೂರ್ವಭಾವಿಯಾಗಿ ಭಾರತ ಪ್ರವಾಸ ಕೈಗೊಂಡರು. ಕಳೆದ ತಿಂಗಳು ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿಅವರು ಭೇಟಿ ನೀಡಿದ್ದ ವೇಳೆ ಭಾರತ ಮತ್ತು ಫ್ರಾನ್ಸ್ ರಕ್ಷಣಾ ಸಹಕಾರದ ಬಗ್ಗೆ ಮಾತುಕತೆ ನಡೆದಿದ್ದದ್ದು ಇಲ್ಲಿ ಉಲ್ಲೇಖಾರ್ಹ.

 

  • ಭಾರತವು ಫ್ರಾನ್ಸ್ ದೇಶದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತದೆ ಮತ್ತು ಬಹು-ಧ್ರುವ ನಿಯಮ ಆಧಾರಿತ ವಿಶ್ವ ಕ್ರಮವನ್ನು ಉತ್ತೇಜಿಸುತ್ತದೆ. ನವದೆಹಲಿ ಮತ್ತು ಪ್ಯಾರಿಸ್ ಪರಸ್ಪರ ಶಾಂತಿ ಮತ್ತು ಸಮೃದ್ಧಿ, ಎಲ್ಲರನ್ನೊಳಗೊಳ್ಳುವ ಬೆಳವಣಿಗೆ ಮತ್ತುಸಮರ್ಥನೀಯ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪಾಲುದಾರರಾಗಿದ್ದಾರೆ .

 

  • ಆಗಿಂದಾಗ್ಗೆ ಉನ್ನತ ಮಟ್ಟದ ರಾಜಕೀಯ ಭೇಟಿಗಳು ತಮ್ಮ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಿ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಕೂಡ ಈದೇಶಗಳು ಮುಂದಾಗಿವೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಮೊದಲ ದೇಶ ಫ್ರಾನ್ಸ್ ಎಂಬುದು ಗಮನಾರ್ಹ.

 

  • ರಕ್ಷಣಾ ಸಹಕಾರ, ಬಾಹ್ಯಾಕಾಶ ಸಹಕಾರ ಮತ್ತು ನಾಗರಿಕ ಪರಮಾಣು ಸಹಕಾರವನ್ನು ಭಾರತ-ಫ್ರಾನ್ಸ್ ದೇಶಗಳು ಈ ಸಂಬಂಧದ ಮೂರು ಪ್ರಮುಖ ಅಂಶಗಳೆಂದು ಪರಿಗಣಿಸಿವೆ. ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವು ಉತ್ತಮ ಹಂತದಲ್ಲಿದ್ದು ಜಂಟಿ ಮಿಲಿಟರಿ ಅಭ್ಯಾಸ,ಸ್ವಾಧೀನತೆ, ತರಬೇತಿ ಮತ್ತು ಸಂಶೋಧನೆ, ಅಭಿವೃದ್ಧಿಗಳನ್ನು ಒಳಗೊಂಡಿದೆ. ರಕ್ಷಣಾ ಸಹಕಾರವನ್ನು ಉತ್ತೇಜಿಸಲು ಭಾರತದ “ಮೇಕï ಇನ್ ಇಂಡಿಯಾ” ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಭಾರತ ಮತ್ತು ಫ್ರಾ£್ಸï ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಿದ್ದು,ಬಾಹ್ಯಾಕಾಶ ಸಹಕಾರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿವೆ. ಈ ಎರಡೂ ದೇಶಗಳು ಕಡಲ ಭದ್ರತೆಯ ಪ್ರದೇಶದಲ್ಲಿ ಸಹಕಾರ ಸುಧಾರಣೆ ಕುರಿತು ಚರ್ಚಿಸಿವೆ.

 

  • ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಮಂತ್ರಿ ಲಿ ಡ್ರಿಯಾನ್ ಅವರು “ಅಂತರಾಷ್ಟ್ರೀಯ ಸಮುದಾಯದಲ್ಲಿ ಯಾವುದೇ ವಿಭಜನೆ ಇರಬಾರದು” ಎಂದು ತಿಳಿಸಿದ್ದಾರೆ. ಯುಎನ್‍ಎಸ್ಸಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕಾಗಿ ಫ್ರಾನ್ಸ್ ಭಾರತದ ವಾದವನ್ನು ಸಮರ್ಥಿಸುತ್ತದೆ.ಪರಮಾಣು ಪೂರೈಕೆದಾರರ ಗ್ರೂಪ್, ವಾಸ್ಸೆನ್ನಾರ್ ಅರೇಂಜ್ಮೆಂಟ್ ಮತ್ತು ಆಸ್ಟ್ರೇಲಿಯಾದ ಗ್ರೂಪ್ ಸೇರಿದಂತೆ ಬಹುಪಕ್ಷೀಯ ರಫ್ತು ನಿಯಂತ್ರಣಾ ಆಡಳಿತಗಳ ಸದಸ್ಯತ್ವಕ್ಕಾಗಿ ಭಾರತವನ್ನು ಬೆಂಬಲಿಸುತ್ತಲೇ ಬಂದಿದೆ.

 

  • ಎರಡು ದೇಶಗಳ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು ಡಾಲರï 10.95 ಶತಕೋಟಿಯಷ್ಟು ಎಂದು ಅಂದಾಜಿಸಲಾಗಿದೆ. ಸುಮಾರು 1000 ಫ್ರೆಂಚï ಕಂಪನಿಗಳು ಭಾರತದಲ್ಲಿವೆ. ಭಾರತ-ಫ್ರಾನ್ಸ್ ಯುದ್ಧತಂತ್ರದ ಪಾಲುದಾರಿಕೆ ಜತೆಗೆ ಆರ್ಥಿಕ ಸಂಬಂಧಗಳನ್ನು ಸುಧಾರಿಸಲುಅವಕಾಶಗಳಿವೆ. ‘ಮೇಕ್ ಇನ್ ಇಂಡಿಯಾ’, ಮೂಲಸೌಕರ್ಯ ಅಭಿವೃದ್ಧಿ, ನವೀಕರಿಸಬಹುದಾದ ಶಕ್ತಿ, ನಗರೀಕರಣ ಮತ್ತು ಇತರ ಕಾರ್ಯಕ್ರಮಗಳು ದ್ವಿಪಕ್ಷೀಯ ಆರ್ಥಿಕ ಸಂಬಂಧವನ್ನು ಹೆಚ್ಚಿಸಲಿವೆ. ಫ್ರೆಂಚï ಕಂಪೆನಿಗಳು ಸುಸ್ಥಿರ ನಗರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಶಕ್ತಿಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಾರದ ನಿರೀಕ್ಷೆಗಳನ್ನು ಹೊಂದಿವೆ.

 

  • ಸಾಂಸ್ಕøತಿಕ ಸಂಬಂಧಗಳು ಭಾರತ-ಫ್ರಾನ್ಸ್ ಸಂಬಂಧಗಳ ಮುಖ್ಯ ಅಂಶ. ಫ್ರೆಂಚ್ ವಿದೇಶಾಂಗ ಸಚಿವ ಲಿ ಡ್ರಿಯಾನ್ ಭೇಟಿ ವೇಳೆ ಇಂಡೋ-ಫ್ರೆಂಚ್ ವೇದಿಕೆ ಮೂಲಕ “ಬೋಂಜೋರï ಇಂಡಿಯಾ” ಮೂರನೇ ಆವೃತ್ತಿಯನ್ನು ಜೈಪುರದ ಅಂಬರ್ ಕೋಟೆಯಲ್ಲಿ ನಡೆಸಲಾಯಿತು.

 

  • ಒಟ್ಟಾರೆಯಾಗಿ, ರಾಜಕೀಯ ಪರಸ್ಪರ ವಿಚಾರ ವಿನಿಮಯಗಳು, ರಕ್ಷಣಾ ಸಹಕಾರ, ಆರ್ಥಿಕ ಮತ್ತು ಸಾಂಸ್ಕøತಿಕ ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳು ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಬಹು, ದ್ವಿಪಕ್ಷೀಯ ಮತ್ತು ಜಾಗತಿಕಪ್ರಾಮುಖ್ಯತೆಯ ವಿಷಯಗಳ ಮೇಲೆ ಪರಸ್ಪರ ಹಿತಾಸಕ್ತಿಗಳ ಒಮ್ಮುಖಗಳಿದ್ದು, ಅಂತರಾಷ್ಟ್ರೀಯ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಸವಾಲುಗಳನ್ನು ಉದ್ದೇಶಿತ ಭಾರತ-ಫ್ರಾನ್ಸ್ ಸಹಕಾರ ಅತ್ಯಂತ ಮಹತ್ವದ್ದಾಗಿದೆ.

 

  • ಈ ಯೋಜನೆಗಳು ವ್ಯಾಪಾರ ಮತ್ತು ಹೂಡಿಕೆಗೆ ಅವಕಾಶಗಳನ್ನು ಒದಗಿಸಿವೆ. ಭಾರತದ ಆರ್ಥಿಕ ಪರಿಸರ ಕೂಡ ಸಕಾರಾತ್ಮಕವಾಗಿದೆ.

 

8. ದಕ್ಷಿಣ ಏಷ್ಯಾವನ್ನು ಚಿಂತೆಗೆ ದೂಡಿದ ಲೆಬನಾನ್ ಬಿಕ್ಕಟ್ಟು

ಪ್ರಮುಖ ಸುದ್ದಿ

  • ಲೆಬನಾನ್ ರಾಜಕೀಯದಲ್ಲಿ ಇರಾನ್ ಹಸ್ತಕ್ಷೇಪ ಮಾಡುತ್ತಿದೆ ಮತ್ತು ನನ್ನ ಜೀವಕ್ಕೆ ಬೆದರಿಕೆ ಎಂಬ ಕಾರಣವೊಡ್ಡಿ ಲೆಬನಾನ್ ಪ್ರಧಾನಿ ಸಾದ್ ಹರಿರಿ ರಾಜೀನಾಮೆ ನೀಡಿರುವುದರಿಂದ ಈ ದೇಶ ಹೊಸ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.

 

ಸಂಕ್ಷಿಪ್ತ ವಿಶ್ಲೇಷಣೆ

  • ಸೌದಿ ಅರೇಬಿಯಕ್ಕೆ ಅಧಿಕೃತ ಭೇಟಿ ನೀಡಿದ್ದ ಹರಿರಿ ಅವರು, ರಿಯಾಧ್ ನಲ್ಲಿ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ರಾಜೀನಾಮೆ ನೀಡಿದ ಬಳಿಕ ಮಾತಿಗೆ ಕೂಡ ಅವರು ಸಿಕ್ಕದ ಕಾರಣ ಈ ಬೆಳವಣಿಗೆಗಳ ಬಗ್ಗೆ ಹಲವೆಡೆ ಹಲವು ರೀತಿಯ ಅನುಮಾನಗಳು ವ್ಯಕ್ತವಾದವು. ಲೆಬನಾನ್ ನಾಯಕರು ಸೇರಿದಂತೆ ಹೆಜ್ ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ರಾಷ್ಟ್ರಪತಿ ಮೈಕಲ್ ಔನ್ ಈ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ. ಒತ್ತಡದಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಮತ್ತು ಲೆಬನಾನ್ ನಿಂದ ಹೊರಗಿರುವ ದೇಶದಲ್ಲಿ ಅವರು ಈ ಘೋಷಣೆ ಮಾಡಿರುವುದರಿಂದ ಇದಕ್ಕೆ ಕಾನೂನಾತ್ಮಕ ಸಮ್ಮತಿಯೂ ಇಲ್ಲ ಎಂಬ ಕಾರಣವನ್ನು ಅವರು ನೀಡಿದ್ದಾರೆ. ಹರಿರಿ ಅವರಿಗೆ ರಾಜೀನಾಮೆ ನೀಡುವ ಇರಾದೆಯಿದ್ದರೆ ಅವರು ಮೊದಲು ದೇಶಕ್ಕೆ ವಾಪಸಾಗಬೇಕು ಮತ್ತು ಸಂಸತ್ತಿನಲ್ಲಿ ಜನರನ್ನು ಎದುರಿಸಬೇಕು ಎಂದು ಹೇಳಿದ್ದಾರೆ.

 

  • ಲೆಬನಾನ್ ರಾಜಕೀಯದಲ್ಲಿ ಹೆಜ್ ಬುಲ್ಲಾಗೆ ಪ್ರಮುಖ ಸ್ಥಾನವಿದೆ. ಲೆಬನಾನ್ ಪ್ರಧಾನಿಯನ್ನು ತನ್ನ ವಶಕ್ಕೆ ತೆಗೆದುಕೊಂಡು, ಈ ದೇಶದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದೆ ಎಂದವರು ಆರೋಪಿಸಿದ್ದಾರೆ. ಆದರೆ ತನ್ನ ಪಕ್ಷದ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಹರಿರಿ, ತಮ್ಮ ರಾಜೀನಾಮೆ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದು, ಲೆಬನಾನ್ ನಲ್ಲಿ ಹೆಜ್ ಬುಲ್ಲಾ ಮೂಲಕ ಇರಾನ್ ಹಸ್ತಕ್ಷೇಪದಿಂದಾಗಿ ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಲೆಬನಾನ್ ಗೆ ಬರುವುದಾಗಿ ಹೇಳಿರುವ ಹರಿರಿ, ಚುನಾಯಿತ ಜನಪ್ರತಿನಿಧಿಗಳ ಮುಂದೆ ರಾಜೀನಾಮೆ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.

 

  • ಏತನ್ಮಧ್ಯೆ, ರಾಜೀನಾಮೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ತಿರಸ್ಕರಿಸಿರುವುದರಿಂದ ಲೆಬನಾನ್ ನಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದೆ. ಅಲ್ಲದೆ, ಸರ್ಕಾರದ ಮುಖ್ಯಸ್ಥರು ದೇಶಕ್ಕೆ ವಾಪಸಾಗಬೇಕು ಎಂದು ಪ್ರತಿಭಟನೆಗಳನ್ನೂ ನಡೆಸಲಾಗುತ್ತಿದೆ. ಸೌದಿ ಅರೇಬಿಯದ ಬೆಂಬಲ ಪಡೆದಿರುವ ಸುನ್ನಿ ಸಮುದಾಯಗಳು ಮತ್ತು ಹರಿರಿ ನಾಯಕತ್ವದ ಫ್ಯೂಚರ್ ಮೂವ್ ಮೆಂಟ್ ಕೂಡ ಹೊಸ ಬೆಳವಣಿಗೆಗಳ ಬಗ್ಗೆ ಆತಂಕ ಹೊರಹಾಕಿವೆ.
  • ಹರಿರಿ ರಾಜೀನಾಮೆ ಸನ್ನಿವೇಶ ಮತ್ತು ಸ್ಥಳ ಇಲ್ಲಿ ಮಹತ್ವ ಪಡೆದುಕೊಂಡಿರುವುದು ಸುಳ್ಳಲ್ಲ. ಸೌದಿ ಮತ್ತು ಇರಾನ್ ನಡುವಿನ ಯುದ್ಧದ ಮುಂದುವರಿದ ಭಾಗ ಈ ಬಿಕ್ಕಟ್ಟು ಎಂಬುದನ್ನೇ ಈ ಬೆಳವಣಿಗೆ ಸಾರುತ್ತಿದೆ. ಇರಾನ್ ಮತ್ತು ಸೌದಿ ಅರೇಬಿಯಾದ ಭೌಗೋಳಿಕ‑ರಾಜಕೀಯ ಆಸಕ್ತಿಗಳಿಂದಾಗಿ ಈ ಹಿಂದೆ ಕೂಡ ಲೆಬನಾನ್ ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ.

 

  • ಇರಾನ್ ಬೆಂಬಲಿತ ಹೆಜ್ ಬುಲ್ಲಾ ಅಸಮ್ಮತಿಯಿಂದಾಗಿ ಮೇ 2014ರಿಂದ ಅಕ್ಟೋಬರ್ 2016ರ ತನಕ ಈ ದೇಶಕ್ಕೆ ಪೂರ್ಣಾವಧಿಯ ರಾಷ್ಟ್ರಪತಿ ಕೂಡ ಇರಲಿಲ್ಲ. ಹೀಗಾಗಿ ಸೌದಿ ಬೆಂಬಲಿ ಸುನ್ನಿ ಸಮುದಾಯಗಳು ಮುಖ್ಯವೇದಿಕೆಗೆ ಬರಲೂ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಕಳೆದ ಅಕ್ಟೋಬರ್ ನಲ್ಲಿ ಲೆಬನಾನ್ ಸಂಸತ್ತು ಸಭೆ ನಡೆಸಿ ಮೈಕಲ್ ಔನ್ ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿತು. 1975‑1989ರ ನಡುವಿನ ಲೆಬನೀಸ್ ಸಿವಿಲ್ ಯುದ್ಧದ ಬಳಿಕ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡ ಇರಾನ್ ಬೆಂಬಲಿತ ಉಗ್ರವಾದಿ ಸಂಘಟನೆ ಹೆಜ್ ಬುಲ್ಲಾದಿಂದಾಗಿ ಲೆಬನಾನ್ ನಲ್ಲಿ ಸಮಸ್ಯೆಗಳು ಉದ್ಭವಿಸುತ್ತಿವೆ.

 

  • 2006ರ ಯುದ್ಧದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ ವಿರುದ್ಧ ಹೆಜ್ ಬುಲ್ಲಾ ಯಶಸ್ಸು ಸಾಧಿಸಿದ್ದರಿಂದ ಲೆಬನಾನ್ ನಲ್ಲಿ ಸ್ಥಳೀಯವಾಗಿ ಮತ್ತು ಪ್ರಾದೇಶಿಕವಾಗಿ ಅದು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿತು. ಇದರಿಂದಾಗಿ ಹೆಜ್ ಬುಲ್ಲಾ ಲೆಬನಾನ್ ರಾಜಕೀಯದಲ್ಲೂ ಪ್ರಮುಖ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು.
  • ಲೆಬನೀಸ್ ಸಿವಿಲ್ ಯುದ್ಧ ಅಂತ್ಯಗೊಳ್ಳಲು ಸೌದಿ ಅರೇಬಿಯ ಪ್ರಮುಖ ಕಾರಣ. ಆದರೆ ಹೆಜ್ ಬುಲ್ಲಾ ಪ್ರಾಮುಖ್ಯತೆ ಪಡೆದುಕೊಳ್ಳುವುದು ಸೌದಿಗೆ ಬೇಕಾಗಿಲ್ಲ. ಇದು ಇರಾನ್ ನ ಮತ್ತೊಂದು ಮುಖ ಎಂಬುದೇ ಸೌದಿ ಕೋಪಕ್ಕೆ ಕಾರಣ. ಹೆಜ್ಬುಲ್ಲಾ ಚುನಾವಣಾ ರಾಜಕೀಯದಲ್ಲಿ ಸಫಲವಾಗಿದ್ದರಿಂದ ಲೆಬನಾನ್ ರಾಜಕೀಯವನ್ನು ಕೂಡ ಈ ಉಗ್ರವಾದಿ ಸಂಘಟನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಎಂಬ ಆತಂಕ ಹೆಚ್ಚಿಸಿದೆ. 2016ರ ಡಿಸೆಂಬರ್ ನಲ್ಲಿ ಹರಿರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಲೆಬನಾನ್ ಸ್ವಲ್ಪ ಮಟ್ಟಿಗೆ ಸ್ಥಿರತೆಯತ್ತ ಸಾಗಿತು. ಔನ್ ಅವರು ರಾಷ್ಟ್ರಪತಿಯಾದ ಬಳಿಕ ಲೆಬನಾನ್ ಮೇಲಿನ ರಿಯಾಧ್ ಮತ್ತು ಟೆಹರಾನ್ ಬಿಕ್ಕಟ್ಟು ಕೂಡ ಕಡಿಮೆಯಾಗುತ್ತಿದೆ ಎಂದು ಅನೇಕರು ವಿಶ್ಲೇಷಿಸಿದರು.

 

  • ಸೌದಿಯ ಯುವ ರಾಜ ಮಹಮ್ಮದ್ ಬಿನ್ ಸಲ್ಮಾನ್ ಅವರ ಅಧಿಪತ್ಯ ಶುರುವಾದ ಬಳಿಕ ಎರಡು ಪರ್ಶಿಯನ್ ಗಲ್ಫ್ ದೇಶಗಳ ನಡುವಿನ ವೈಮನಸ್ಯ ಮತ್ತಷ್ಟು ಹೆಚ್ಚಿಸಿದೆ. ಸೌದಿ ಅರೇಬಿಯಾವು ಇರಾನ್ ದೇಶವನ್ನು ಒಂದು ಸ್ಪರ್ಧಿಯನ್ನಾಗಿ ಪರಿಗಣಿಸಿದೆ. ಅರಬ್ ವಸಂತ ಋತು ಆರಂಭವಾದಾಗಿನಿಂದ ಟೆಹರಾನ್ ತನ್ನ ಪ್ರಾದೇಶಿಕ ಪ್ರಭಾವ ವರ್ಧಸುತ್ತಿದೆಯೇ ಎಂಬ ಅನುಮಾನ ಕಾಡಿದೆ. ಅರಬ್ ರಾಷ್ಟ್ರಗಳಲ್ಲಿ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿ ಇರಾನ್ ಪ್ರಾದೇಶಿಕ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದೆ ಎಂದು ರಿಯಾಧ್ ಆರೋಪಿಸಿದೆ. ಬಾಗ್ದಾದ್ ಮತ್ತು ಡಮಾಸ್ಕಸ್ ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಟೆಹ್ರಾನ್ ಬೈರುತ್ ಮತ್ತು ಸನಾ’ಗಳ ಮೇಲೆ ನಿಯಂತ್ರಣ ಸ್ಥಾಪಿಸಲು ಪ್ರಯತ್ನ ಮಾಡುತ್ತಿದೆ ಎಂದು ಸೌದಿ ನಾಯಕತ್ವ ಆತಂಕ ವ್ಯಕ್ತಪಡಿಸಿದೆ. ಇರಾಕಿನಲ್ಲಿನ ಶಿಯಾ ಬಂಡುಕೋರರ ಹೆಚ್ಚಳದಿಂದಾಗಿ ಬಶರ್ ಅಲ್-ಅಸ್ಸಾದ್ ಪರವಾಗಿ ಸಿರಿಯಾದಲ್ಲಿ ನಾಗರಿಕ ಯುದ್ಧವನ್ನು ಉತ್ತೇಜಿಸಲು ಹೆಜ್ಬುಲ್ಲಾ ಪ್ರಮುಖ ಪಾತ್ರ ವಹಿಸಿತ್ತು.

 

  • ಧಾರ್ಮಿಕ ಮೂಲಭೂತವಾದವನ್ನು ಹೆಚ್ಚಿಸಲು ಸೌದಿ ಕಾರಣ ಎಂದು ಇರಾನ್ ಆರೋಪಿಸುತ್ತಿದೆ. ಇದರಿಂದಾಗಿಯೇ ಉಗ್ರಗಾಮಿಗಳನ್ನು ಮುಂದಿಟ್ಟುಕೊಂಡು ಪ್ರಾದೇಶಿಕ ಅಸ್ಥಿರತೆ ಮೂಡಿಸುತ್ತಿದೆ. ಯೆಮೆನ್ ನಲ್ಲಿ ಮತ್ತು ಬೇರೆಡೆಗಳಲ್ಲಿ ಸೌದಿ ಕಾರ್ಯಗಳನ್ನು ಇರಾನ್ ನಾಯಕತ್ವ “ಸಾಹಸವಾದ” ಎಂದು ವ್ಯಾಖ್ಯಾನಿಸಿದೆ.
  • ಏನೇ ಇರಲಿ, ಲೆಬನಾನ್ ನ ಈಚಿನ ಬೆಳವಣಿಗೆಗಳು ಪ್ರಾದೇಶಿಕ ಬಿಕ್ಕಟ್ಟುಗಳನ್ನು ಹೆಚ್ಚಿಸಿರುವ ಜತೆಗೆ ತೆಹ್ರಾನ್ ಮತ್ತು ರಿಯಾಧ್ ನಡುವಿನ ಭೌಗೋಳಿಕ‑ರಾಜಕೀಯ ವೈಮನಸ್ಸನ್ನು ಹಿಗ್ಗಿಸಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನವ ದೆಹಲಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೌದಿ ಮತ್ತು ಇರಾನ್ ಜತೆಗೆ ಭಾರತ ಉತ್ತಮ ಸಂಬಂಧ ಹೊಂದಿರುವುದರಿಂದ ಪ್ರಾದೇಶಿಕ ಮತ್ತು ಸ್ಥಳೀಯ ಸಮಸ್ಯೆಗಳನ್ನು ಶಾಂತಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಆಶಯವಿಟ್ಟುಕೊಂಡಿದೆ.

9. ಚೀನಾ ಜತೆಗಿನ ವಿದ್ಯುತ್ ಯೋಜನೆ ರದ್ದುಗೊಳಿಸಿದ ನೇಪಾಳ

ಪ್ರಮುಖ ಸುದ್ದಿ

  • 1200 ಮೆಗಾವ್ಯಾಟ್ ಸಾಮರ್ಥ್ಯದ ಬುಢೀ ಗಂಡಕಿ ಜಲ ವಿದ್ಯುತ್ ಯೋಜನೆ ಆರಂಭಿಸಲು ಚೀನಾದ ಗೆಜೋಡಾ ಗ್ರೂಪ್ ಕಾರ್ಪೊರೇಷನ್ ಜತೆಗೆ ಕಳೆದ ಜೂನ್ ನಲ್ಲಿ ಸಹಿ ಹಾಕಿದ್ದ ಒಪ್ಪಂದವನ್ನು ನೇಪಾಳ ರದ್ದುಗೊಳಿಸಿದೆ.

ಸಂಕ್ಷಿಪ್ತ ವಿಶ್ಲೇಷಣೆ

  • ಈ ಬೆಳವಣಿಗೆಯಿಂದ ಚೀನಾದ ಬೆಲ್ಟ್ ಅಂಡ್ ರೋಡ್ ಯೋಜನೆಗೆ ಭಾರೀ ಹಿನ್ನಡೆಯಾಗಿದೆ. ಕೃಷಿ ಮತ್ತು ಜಲಸಂಪನ್ಮೂಲ ಹಾಗೂ ಹಣಕಾಸು ವಿಚಾರಗಳ ಸಂಸದೀಯ ಸಮಿತಿಗಳ ಜಂಟಿ ಸಭೆಯ ಶಿಫಾರಸಿನ ಮೇರೆಗೆ ಈ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಮಾವೋಯಿಸ್ಟ್ ಕೇಂದ್ರ ಪಕ್ಷದ ನಾಯಕ ಪುಷ್ಪ ಕುಮಾರ್ ದಹಾಲ್ “ಪ್ರಚಂಡ” ನೇತೃತ್ವದ ಸರ್ಕಾರದ ಕ್ರಮದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದಲ್ಲದೆ, ಯೋಜನೆಯ ಗುತ್ತಿಗೆ ನೀಡುವಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕ ಬಿಡ್ಡಿಂಗ್ ಪಕ್ರಿಯೆಗಳನ್ನು ಅನುಸರಿಸಲಾಗಿಲ್ಲ ಎಂದು ಆರೋಪಿಸಲಾಯಿತು.

 

  • ವಿವಾದಾತ್ಮಕ ಕಂಪನಿಯೊಂದಕ್ಕೆ ಗುತ್ತಿಗೆಯನ್ನು ನೀಡಿದ್ದಕ್ಕೆ ಕೃಷಿ ಮತ್ತು ಜಲ ಸಂಪನ್ಮೂಲ ಸಮಿತಿ ಮುಖ್ಯಸ್ಥ ಮೋಹನ್ ಪ್ರಸಾದ್ ಬರಾಲ್ ಅತೃಪ್ತಿ ಹೊರಹಾಕಿದರು. ನೇಪಾಳದಲ್ಲಿ ಕಿರು ಜಲ ವಿದ್ಯುತ್ ಯೋಜನೆಗಳನ್ನು ಕೈಗೊಂಡಿರುವ ಈ ಕಂಪನಿಯ ಹಿನ್ನೆಲೆ ತೃಪ್ತಿಕರವಾಗಿಲ್ಲ ಎಂಬುದು ಸಭೆಯಲ್ಲಿ ಕೇಳಿಬಂತು.

 

  • ಆಂತರಿಕ ಸಂಪನ್ಮೂಗಳನ್ನು ಒಟ್ಟುಗೂಡಿಸಿ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂಬ ಅಭಿಪ್ರಾಯವನ್ನು ಸಮಿತಿ ನೀಡಿತು. ಉಪ ಪ್ರಧಾನಿ ಮತ್ತು ಇಂಧನ ಸಚಿವ ಕಮಲ್ ಥಾಪಾ ಅವರು, “ಹಿಂದೆಮುಂದೆ ಅಧ್ಯಯನ ನಡೆಸದೆಯೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಯೋಜನೆ ಪೂರ್ಣಗೊಳಿಸುವ ಬಗ್ಗೆ ಶೀಘ್ರದಲ್ಲೇ ನೇಪಾಳ ಕ್ಯಾಬಿನೆಟ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.

 

  • ಎಂಜಿನಿಯರಿಂಗ್, ಹಣಕಾಸು ಸಹಾಯದ ಮೂಲಕ ಗುತ್ತಿಗೆ ಪಡೆಯುವ ಮಾದರಿಯಲ್ಲಿ ಗೆಜೂಬಾ ಗ್ರೂಪ್ ಗೆ ಈ ಗುತ್ತಿಗೆಯನ್ನು ನೇಪಾಳದಲ್ಲಿ ನೀಡಲಾಗಿತ್ತು. ಇದು ನೇಪಾಳದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ ಆರಂಭದಿಂದಲೇ ಇದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿತು. ಈ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿರುವ ಗೋರ್ಖಾ ಪ್ರದೇಶ ಮಾಜಿ ಪ್ರಧಾನಿ ಮತ್ತು ನಯ ಶಕ್ತಿ ಪಾರ್ಟಿ ಮುಖ್ಯಸ್ಥ ಬಾಬುರಾಮ್ ಭಟ್ಟಾರೈ ಅವರ ತವರು ಪ್ರದೇಶವಾಗಿದೆ. ಅವರು ಸೇರಿದಂತೆ ಕೆಲ ರಾಜಕೀಯ ಪಕ್ಷಗಳು ಮತ್ತು ಉದ್ಯಮಿಗಳು ಕೂಡ ಈ ಒಪ್ಪಂದವನ್ನು ವಿರೋಧಿಸಿದರು.

 

  • ಈ ಒಪ್ಪಂದದ ಪ್ರಕಾರ ನೇಪಾಳ ಸರ್ಕಾರಕ್ಕೆ ಒಪ್ಪಿಗೆಯಾಗುವ ಮಾದರಿಯಲ್ಲಿ ಸಾಫ್ಟ್ ಲೋನ್ ಅಥವಾ ವಾಣಿಜ್ಯ ಸಾಲವನ್ನು ಚೀನಾ ಕಂಪನಿ ಪಡೆದುಕೊಳ್ಳಬೇಕಿತ್ತು. ಈ ಯೋಜನೆಯ ಸಮಗ್ರ ವರದಿ ಸಿದ್ಧಪಡಿಸಲು ಕಂಪನಿಗೆ ಒಂದು ವರ್ಷ ಕಾಲವಕಾಶ ನೀಡಲಾಗಿತ್ತು ಮತ್ತು ಇದಕ್ಕೆ ಹಣಕಾಸು ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯ ನೀಡಲಾಗಿತ್ತು.

 

  • ಈ ಬೆಳವಣಿಗೆಗಳು ಇಂಧನ ಕೊರತೆ ಎದುರಿಸುತ್ತಿರುವ ನೇಪಾಳದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತು. ಒಂದು ವರ್ಷದ ದೀರ್ಘಾವಧಿ ಕಾಲವಕಾಶ ನೀಡುವುದು ಸರಿಯಲ್ಲ. ಅದಲ್ಲದೆ ಈ ಖಾಸಗಿ ಕಂಪನಿ ವಿಳಂಬ ಧೋರಣೆ ಅನುಸರಿಸುವುದಕ್ಕೆ ಹೆಸರುವಾಸಿ ಎಂಬ ಆರೋಪಗಳೂ ಕೇಳಿಬಂದವು.

 

  • ಬುಢೀ ಗಂಡಕಿ ಯೋಜನೆಯನ್ನು ನೇಪಾಳ ರದ್ದುಗೊಳಿಸಿರುವುದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಆಗಿರುವ ಬಹುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ನೇಪಾಳ ಕೂಡ ಪಾಲ್ಗೊಂಡಿತ್ತು ಎಂಬುದಿಲ್ಲಿ ಗಮನಾರ್ಹ. ಈ ಪ್ರದೇಶದಲ್ಲಿ ಚೀನಾಕ್ಕೆ ಆಗುತ್ತಿರುವ ಮೂರನೇ ಹಿನ್ನಡೆ ಇದಾಗಿದೆ.

 

  • ಇದಕ್ಕೂ ಮುನ್ನ ಮಯನ್ಮಾರ್ ಮ್ಯಿಟ್ಸೋನ್ ಡ್ಯಾಂ ನಿರ್ಮಾಣ ಯೋಜನೆಯನ್ನು ರದ್ದುಗೊಳಿಸಿತ್ತು. ಅಲ್ಲದೆ ಸಾಲದ ಬಿಕ್ಕಟ್ಟಿನ ಅಪಾಯ ಎದುರಿಸಿದ್ದ ಹಿನ್ನೆಲೆಯಲ್ಲಿ ಹಂಬಂಟೋಟಾ ಬಂದರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಒಪ್ಪಂದದ ನಿಯಮಾವಳಿಗಳಲ್ಲಿ ಶ್ರೀಲಂಕಾ ಒತ್ತಾಯದ ಮೇರೆಗೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು.

 

  • ಈ ಪ್ರದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಪ್ರಭಾವದ ವಿಸ್ತರಣೆ ಮಾಡಬೇಕೆಂಬ ಚೀನಾ ಪ್ರವೃತ್ತಿಯನ್ನು ಪರಿಶೀಲಿಸಲೆಂದೇ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಕೆಲವು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
  • ಫೆಡರಲ್ ಮತ್ತು ಪ್ರಾಂತೀಯ ಚುನಾವಣೆಗಳು ಹತ್ತಿರದಲ್ಲಿರುವ ಸಂದರ್ಭದಲ್ಲೇ ನೇಪಾಳ ಪ್ರಧಾನಿ ಶೇರ್ ಬಹಾದೂರ್ ದೆವುಬಾ ಅವರು ಈ ಕ್ರಮ ಕೈಗೊಂಡಿದ್ದಾಋಎ. ನವೆಂಬರ್ 26 ಮತ್ತು ಡಿಸೆಂಬರ್ 7ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಮಾವೋ ನಾಯಕ ಪುಷ್ಪ ಕುಮಾರ್ ದಹಾಲ್ ಮತ್ತು ಕೆಲ ನಾಯಕರು ದೆವುಬಾ ಕ್ರಮವನ್ನು ಖಂಡಿಸಿದ್ದಾರೆ.
  • ಈಚಿನ ದಿನಗಳಲ್ಲಿ ನೇಪಾಳ ಮತ್ತು ಚೀನಾ ಸ್ಥಿರ ಪ್ರಗತಿಗೆ ಸಾಕ್ಷಿಯಾಗಿರುವುದನ್ನು ಕಾಣುತ್ತಿದ್ದೇವೆ.

 

  • ಮುಖ್ಯವಾಗಿ ಭಾರತದೊಂದಿಗೆ ಗಡಿ ಭಾಗದಲ್ಲಿ ಮಾದೆಸಿಗಳ ದಿಗ್ಭಂಧನದ ಬಳಿಕ ಇದು ಹೆಚ್ಚಾಗಿದೆ. ಹೊಸ ಸಂವಿಧಾನದ ವಿರುದ್ಧ 2015ರಿಂದಲೇ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೃಷಿ, ಆರೋಗ್ಯ, ಪ್ರವಾಸೋದ್ಯ, ಮೂಲಸೌಕರ್ಯ ಅಭಿವೃದ್ಧಿ ವ್ಯಾಪ್ತಿಯಲ್ಲಿ ರಸ್ತೆ, ರೈಲ್ವೆ ಹಾಗೂ ಹೊಸ ವಿಮಾನ ನಿಲ್ದಾಣ ಸೇರಿದಂತೆ ನೇಪಾಳದ ವಿವಿಧ ಕ್ಷೇತ್ರಗಳಲ್ಲಿ ಚೀನಾ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆದರೆ ಬುಢೀ ಗಂಡಕಿ ಯೋಜನೆ ರದ್ದುಗೊಳಿಸುವ ಮೂಲಕ ಚೀನಾದ ವಿವಾದಾತ್ಮಕ ಕಂಪನಿಗಳೊಂದಿಗೆ ವ್ಯವಹಾರಗಳನ್ನು ನಡೆಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಠ್ಮಂಡು ಬೀಜಿಂಗ್ ಗೆ ರವಾನೆ ಮಾಡಿದೆ.

 

  • ನೇಪಾಳ ಸಂಸತ್ತಿನ ಶಿಫಾರಸುಗಳನ್ನೇ ಸರ್ಕಾರ ಜಾರಿಗೊಳಿಸಿದೆ ಎಂಬುದು ನೇಪಾಳ ಸರ್ಕಾರದ ಟೀಕಾಕಾರರು ಮುಖ್ಯವಾಗಿ ಗಮನಿಸಬೇಕು. ಸಂಸತ್ತಿನ ಸಮಿತಿಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರೂ ಇರುತ್ತಾರೆ. ಮೇಲಾಗಿ, ಒಪ್ಪಂದ ರದ್ದುಗೊಳಿಸಿದ ದೆವುಬಾ ಕ್ಯಾಬಿನೆಟ್ ನಲ್ಲಿ ಮಾವೋಯಿಸ್ಟ್ ಸೆಂಟರ್ ಪಕ್ಷದ ಸಚಿವರು ಕೂಡ ಇದ್ದಾರೆ ಎಂಬುದು ಉಲ್ಲೇಖಾರ್ಹ.
  • ವಿದ್ಯುತ್ ಕ್ಷಾಮದಿಂದ ಬಳಲುತ್ತಿರುವ ಜನರ ನೆರವಿಗೆ ಧಾವಿಸಲು ನೇಪಾಳ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಿರೀಕ್ಷೆ ಎಲ್ಲರದ್ದು. ವಿದ್ಯುತ್ ಕೊರತೆ ನೀಗಿಸಲು ಪ್ರಸ್ತುತ ಭಾರತದಿಂದ ವಿದ್ಯುತ್ ನ್ನು ನೇಪಾಳ ಆಮದು ಮಾಡಿಕೊಳ್ಳುತ್ತಿದೆ.

 

 

ವಿಜ್ಞಾನ ಮತ್ತು ತಂತ್ರಜ್ಞಾನSCINECE AND TECHNOLOGY

 1. ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ)

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ “ಎ” ಶ್ರೇಣಿಯ ಅಧಿಕಾರಿಗಳನ್ನು ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆಈ ಕೆಳಗಿನ ವಿವರಗಳ ಆಧಾರದ ಮೇಲೆ ನಿಯೋಜನೆ ಮೇಲೆ ಕಳುಹಿಸಲು ಅನುಮೋದನೆ ನೀಡಿದೆ.
  • ಡಿಪಿಇ ಮಾರ್ಗಸೂಚಿಯಂತೆ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ನ ಮಂಡಳಿಗಿಂತ ಕೆಳ ಮಟ್ಟದ ಒಟ್ಟು ಹುದ್ದೆಯ ಗರಿಷ್ಠ 10ಕ್ಕೆ ಸೀಮಿತವಾಗಿ ಮತ್ತು ತತ್ ಕ್ಷಣದ ಸೇರ್ಪಡೆ ನಿಯಮದ ವಿನಾಯಿತಿಯೊಂದಿಗೆ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್) ಕ್ಕೆ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಹಿನ್ನೆಲೆ ಇರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ ‘ಎ’ಶ್ರೇಣಿಯ ಅಧಿಕಾರಿಗಳ ನಿಯೋಜನೆಯ ಮೂಲಕ ಬಾಕಿ ಇರುವ ಅಂತಹ ಹುದ್ದೆಯನ್ನು ಮಧ್ಯದ ಅವಧಿಯಲ್ಲಿ ಅಂದರೆ 2016 ರಿಂದ ಈ ಪ್ರಸ್ತಾಪದ ಅನುಮೋದನೆಯವರೆಗೆ (ಇದಕ್ಕೂ ಮುನ್ನ ಸಂಪುಟದ ಅನುಮೋದನೆಯು 2016ರವರೆಗೆ ಮಾತ್ರ ಸಿಂಧುವಾಗಿತ್ತು) ಮತ್ತು ಅನುಮೋದನೆ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅರ್ಹವಾಗುವಂತೆ ಭರ್ತಿ ಮಾಡಲು  ಅವಕಾಶ ನೀಡುತ್ತದೆ. ಮತ್ತು

 

  • ಭವಿಷ್ಯದಲ್ಲಿ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್) ದಲ್ಲಿ ಮಂಡಳಿಗಿಂತ ಕೆಳಗಿನ ಮಟ್ಟದ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ವಿನಾಯಿತಿಯನ್ನು, ದಿನಾಂಕ .2005ರ ದಿನಾಂಕದ ಡಿಪಿಇ ಓಎಂ ಸಂಖ್ಯೆ  2001-ಜಿಎಂ-ಜಿಎಲ್-77ರ ನಿಯಮಗಳ ರೀತ್ಯ ನಿರ್ವಹಿಸಲು ಅವಕಾಶ ನೀಡುತ್ತದೆ, ಇದರಿಂದ ಅಂಥ ಪ್ರಸ್ತಾಪಗಳನ್ನು ಸಂಪುಟದ ಮುಂದೆ ತರುವ ಅಗತ್ಯ ಇರುವುದಿಲ್ಲ.

ಹಿನ್ನೆಲೆ:

  • ಟಿಸಿಐಎಲ್, ಐಎಸ್ಓ -9001:2008 ಮತ್ತು ಐಎಸ್ಓ: 2008 ಮತ್ತು 14001 :2004 ಪ್ರಮಾಣಪತ್ರ ಪಡೆದ ಪರಿಶಿಷ್ಟ – ಎ, ಮಿನಿ ರತ್ನ ಪ್ರವರ್ಗ-1ರ ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್.ಯು) ಆಗಿದೆ. ಟಿಸಿಐಎಲ್, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಬಲವಾದ ನೆಲೆಯನ್ನು ಉಳ್ಳ ಒಂದು ಪ್ರಮುಖ ದೂರಸಂಪರ್ಕ ಸಲಹೆ ಮತ್ತು ಎಂಜಿನಿಯರಿಂಗ್ ಕಂಪನಿಯಾಗಿದ್ದು, 1978ರಲ್ಲಿ ಭಾರತ ಸರ್ಕಾರದಿಂದ ಈ ಕೆಳಕಂಡ ಉದ್ದೇಶಗಳೊಂದಿಗೆ ಸ್ಥಾಪನೆಗೊಂಡಿದೆ :-

 

  • ದೂರಸಂಪರ್ಕದ ಎಲ್ಲ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ತಾಂತ್ರಿಜ್ಞಾನ ಮತ್ತು ಭಾರತೀಯ ತಜ್ಞತೆಯನ್ನು ಒದಗಿಸಲು,

 

  • ಸಾಗರೋತ್ತರ/ಭಾರತೀಯ ಮಾರುಕಟ್ಟೆಗಳಲ್ಲಿ ಸೂಕ್ತ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವ ಮೂಲಕಸ್ಥಿರ, ವಿಸ್ತರಣೆ ಮತ್ತು ಸಾಧನೆ ಮಾಡಲು.
    • ನಿರಂತರ ಆಧಾರದ ಮೇಲೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಲು.
  • ಟಿ.ಸಿ.ಐ.ಎಲ್. ಶೇ.100ರಷ್ಟು ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿದ್ದು, 70ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದು ದೂರಸಂಪರ್ಕ, ಐಟಿ ಮತ್ತು ನಾಗರಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಕಾರ್ಯಗತಗೊಳಿಸಲು ಪರಿಕಲ್ಪನೆಯಿಂದ ಹಿಡಿದು ಅದು ಪೂರ್ಣಗೊಳ್ಳುವ ತನಕ ಅನುಷ್ಠಾನ ಸೇವೆ ಒದಗಿಸುತ್ತದೆ ಮತ್ತು ಸಲಹೆ ನೀಡುತ್ತದೆ. ಈ ಕಂಪನಿಯ ಅಧಿಕೃತ ಬಂಡವಾಳವು 2017ರ ಮಾರ್ಚ್ 31ರಲ್ಲಿದ್ದಂತೆ 60 ಕೋಟಿ ರೂಪಾಯಿಗಳಾಗಿದ್ದು, ಇದರ ಪಾವತಿಸಿದ ಬಂಡವಾಳವ 20 ಕೋಟಿ ರೂಪಾಯಿ ಆಗಿದೆ.

 

  • ಟಿಸಿಐಎಲ್ ಅತ್ಯಂತ ಪ್ರತಿಷ್ಠಿತವಾದ ಪ್ಯಾನ್ –ಆಫ್ರಿಕನ್ ಇ-ನೆಟ್ ವರ್ಕ್ ಅನ್ನು 48 ರಾಷ್ಟ್ರಗಳಲ್ಲಿ ಜಾರಿ ಮಾಡಿದೆ, ಇದು ಪ್ರಾಥಮಿಕವಾಗಿ ಟೆಲಿ ಶಿಕ್ಷಣ, ಟೆಲಿ –ವೈದ್ಯಕೀಯ ಮತ್ತು ಡಬ್ಲ್ಯುಐಪಿ ಸಂಪರ್ಕವನ್ನು ಆಫ್ರಿಕಾ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಮತ್ತು ಉಪಗ್ರಹ ಸಂಪರ್ಕದ ಮೂಲಕ 2009ರಿಂದ ಒದಗಿಸುತ್ತಿದೆ. ಈ ಯೋಜನೆಯು ಕಾಲಮಿತಿಯ ಯೋಜನೆಯಾಗಿದೆ ಮತ್ತು 2021ರವರೆಗೆ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ. ಸಾಗರೋತ್ತರ ಯೋಜನೆಗಳ ಜೊತೆಗೆ ಟಿಸಿಐಎಲ್ ಭಾರತದ ವಿವಿಧ ಸ್ಥಳಗಳಲ್ಲಿ ಐಟಿ ಮತ್ತು ದೂರಸಂಪರ್ಕ ಸಂಬಂಧಿತ ಹಲವುಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ.

 

  • ಇವುಗಳಲ್ಲಿ ಪ್ರಮುಖ ಯೋಜನೆಗಳೆಂದರೆ, ರಕ್ಷಣಾ ಇಲಾಖೆ ಮತ್ತು ಭಾರತೀಯ ನೌಕಾ ಪಡೆಯ ಎನ್.ಎಫ್.ಎಸ್. ನೆಟ್ ವರ್ಕ್ ಗೆ ಟರ್ನ್ ಕೀ ಆಧಾರದಲ್ಲಿ, ಜಮ್ಮ ಮತ್ತು ಕಾಶ್ಮೀರದಲ್ಲಿ ಓಪಿಜಿಡಬ್ಲ್ಯು ಯೋಜನೆ, ಡಿಓಪಿ ಗ್ರಾಮೀಣ ಐಸಿಟಿ ಪರಿಹಾರ (ಆರ್.ಎಚ್.) ಯೋಜನೆ, ಒಡಿಶಾದ 500 ಶಾಲೆಗಳಲ್ಲಿ ಮತ್ತು ಯು.ಪಿ.ಯ 1500 ಶಾಲೆಗಳಲ್ಲಿ (ಐಸಿಟಿ) ಯೋಜನೆ, ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿ ವೆಬ್ ಆಧಾರಿತ ಸೇವೆಗಳನ್ನು ಕಾರ್ಯಗತಗೊಳಿಸಲು ದಾಸ್ತಾನು, ಪೂರೈಕೆ, ಕಾಲುವೆ ತೋಡುವುದು, ಸ್ಥಾಪನೆ, ಪರೀಕ್ಷೆ ಮತ್ತು ನಿರ್ವಹಣೆ ಸೇರಿವೆ. ಬಿಬಿಎನ್.ಎಲ್.ಗೆ ಎನ್.ಓ.ಎಫ್.ಎನ್. ಯೋಜನೆ ಇತ್ಯಾದಿಗೆ ಯೋಜನಾ ನಿರ್ವಹಣೆ ಕಾರ್ಯಕ್ಕಾಗಿ ತಂತ್ರಾಂಶ ಮತ್ತು ಯಂತ್ರಾಂಶಗಳ ಪೂರೈಕೆ.
  • ಪ್ರಗತಿಯಲ್ಲಿರುವ ಸಾಗರೋತ್ತರ / ಒಳನಾಡಿನ ಯೋಜನೆಗಳನ್ನು ಕಾರ್ಯಗತಗೊಳಿಸುವುದರ ಜೊತೆಗೆ, ನಿರೀಕ್ಷಿತ ಯೋಜನೆಗಳ ನಿರ್ವಹಣೆಗಾಗಿಮತ್ತು ಕಾಲಕಾಲಕ್ಕೆ ನಿರ್ವಹಿಸುವ ಯೋಜನೆಗಳ ಅವಶ್ಯಕತೆಗಳಿಗನುಗುಣವಾಗಿ ಟಿಸಿಐಎಲ್ ಗೆ ದೂರ ಸಂಪರ್ಕ ಮತ್ತು ಐಟಿ ಹಿನ್ನೆಲೆಯಲ್ಲಿ ಅನುಭವಿ ಮತ್ತು ಪ್ರತಿಭಾನ್ವಿತ ಹಿರಿಯ ಅಧಿಕಾರಿಗಳು ಅಗತ್ಯವಿದೆ.
  • ಟಿಸಿಐಎಲ್ ಗೆ ಮುಕ್ತ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ, ಕಡಿಮೆ ಅವಧಿಯಲ್ಲಿ ನಿಯೋಜನೆಗೆ ಹೋಲಿಸಿದರೆ ತಜ್ಞ ಮಾನವ ಸಂಪನ್ಮೂಲ ದೊರಕುವುದು ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ನಿಯೋಜನೆಯ ಮೇರೆಗೆ ತೆಗೆದುಕೊಳ್ಳುವ ಮೂಲಕ ಟಿಸಿಐಎಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ನೆರವಾಗಲಿದೆ.
  • ಮಿಗಿಲಾಗಿ, ಟಿಸಿಐಎಲ್ ಮಾನವ ಶಕ್ತಿಯನ್ನು ಮುಕ್ತ ಮಾರುಕಟ್ಟೆಯಿಂದ ತೆಗೆದುಕೊಂಡರೆ, ಅದು ಟಿಸಿಐಎಲ್ ಗೆ ಶಾಶ್ವತ ಹೊಣೆಗಾರಿಕೆ ಆಗುತ್ತದೆ, ನಿಯೋಜನೆ ಮೇಲೆ ತೆಗೆದುಕೊಳ್ಳುವವರು ಟಿಸಿಐಎಲ್ ನಲ್ಲಿ ಆ ಯೋಜನೆಯ ಸೇವೆಯ ಅಗತ್ಯದ ಅವಧಿಯವರೆಗೆ ಮಾತ್ರ ಇರುತ್ತಾರೆ.

 

  • ಆ ಪ್ರಕಾರವಾಗಿ, ಸಂಪುಟವು ಟಿಸಿಐಎಲ್ ಗೆ ಅಂಥ ಹುದ್ದೆಗಳನ್ನು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ “ಎ” ಶ್ರೇಣಿಯ ಅಧಿಕಾರಿಗಳನ್ನು ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆ ನಿಯೋಜನೆ ಮೇರೆಗೆ ಮಧ್ಯಂತರ ಅವಧಿಯಾದ ಅಂದರೆ .2016ರಿಂದ ಈ ಪ್ರಸ್ತಾವನೆಯ ಅನುಮೋದನೆಯವರೆಗೆ (ಇದಕ್ಕೂ ಮುನ್ನ ಸಂಪುಟದ ಅನುಮೋದನೆಯು  2016ರವರೆಗೆ ಮಾತ್ರ ಸಿಂಧುವಾಗಿತ್ತು) ಮತ್ತು ಅನುಮೋದನೆ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅರ್ಹವಾಗುವಂತೆ ಡಿಪಿಇ ಮಾರ್ಗಸೂಚಿಯ ಪ್ರಕಾರ ಟಿಸಿಐಎಲ್ ನ ಮಂಡಳಿ ಮಟ್ಟದ ಕೆಳಗಿನ ಹುದ್ದೆಗಳ ಒಟ್ಟು ಸಂಖ್ಯೆಯ ಗರಿಷ್ಠ ಶೇ.10ರಷ್ಟಕ್ಕೆ ಭರ್ತಿ ಮಾಡಿಕೊಳ್ಳಲು  ಅವಕಾಶ ನೀಡುತ್ತದೆ, ಜೊತೆಗೆ ಸಂಪುಟವು ದಿನಾಂಕ.2005ರ ದಿನಾಂಕದ ಡಿಪಿಇ ಓಎಂ ಸಂಖ್ಯೆ 18 (6)/2001-ಜಿಎಂ-ಜಿಎಲ್-77ರ ನಿಯಮಗಳ ರೀತ್ಯ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ನಲ್ಲಿ ಮಂಡಳಿ ಮಟ್ಟದ ಕೆಳಗಿನ ಹುದ್ದೆಗಳಿಗೆ ಭವಿಷ್ಯದಲ್ಲಿ ವಿನಾಯಿತಿ ನೀಡಲೂ ಸಮ್ಮತಿ ಸೂಚಿಸಿದೆ.

2. ಕೈಗಾರಿಕೆಗಳಲ್ಲಿ ಪೆಟ್ರೋಲಿಯಂ ಕೋಕ್ ಮತ್ತು ಕುಲುಮೆ  ಎಣ್ಣೆ ತೈಲದ ಬಳಕೆ ನಿಷೇಧಿಸಲು   ಸುಪ್ರೀಂ ಕೋರ್ಟ್ ನಿರ್ದೇಶನ

ಪ್ರಮುಖ ಸುದ್ದಿ

 

  • ಕೈಗಾರಿಕೆಗಳಲ್ಲಿ ಪೆಟ್ರೋಲಿಯಂ ಕೋಕ್ ಮತ್ತು ಫರ್ನೇಸ್ ತೈಲದ ಬಳಕೆ ನಿಷೇಧಿಸಲು ಸೂಚಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಮುಖ್ಯ ಅಂಶಗಳು

  • ಈ ಇಂಧನಗಳು ದೆಹಲಿ ಮತ್ತು ಎನ್‌ಸಿಆರ್‌ಗೆ ಮಾತ್ರವಲ್ಲದೆ, ಇಡೀ ರಾಷ್ಟ್ರಕ್ಕೆ ಮಾಲಿನ್ಯಕಾರಕವಾಗಿವೆ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿದೆ.
  • ರಸಗೊಬ್ಬರ, ನೈಟ್ರಿಕ್ ಆಸಿಡ್ ಮತ್ತಿತರ ಹಾನಿಕಾರಕ ಉತ್ಪನ್ನಗಳನ್ನು ಉತ್ಪಾದಿಸುವ ಈ ಕೈಗಾರಿಕೆಗಳು ಪೆಟ್ ಕೋಕ್ ಹಾಗೂ ಕುಲುಮೆ ಎಣ್ಣೆಯನ್ನು ಉಪಯೋಗಿಸುವುದರಿಂದ ಪರಿಸರದ ಮೇಲೆ ಪರಿಣಾಮ ಬಿರುವುದರಿಂದ ಈ ರೀತಿಯ ಕ್ರಮ ಕೈಗೊಂಡಿದೆ .
  • ಈಗಾಗಲೇ ನವೆಂಬರ್ ೧ ರಿಂದ ಉತ್ತರ ಪ್ರದೇಶ, ಹರಿಯಾಣ, ದೆಹಲಿ ಮತ್ತು ರಾಜಾಸ್ತಾನ ರಾಜ್ಯಗಳಲ್ಲಿ ಪೆಟ್ರೋಲಿಯಂ ಕೋಕ್ ಮತ್ತು ಫರ್ನೇಸ್ ತೈಲವನ್ನು ನಿಷೇಧಿಸಲಾಗಿದೆ.

3. ಮೂರೇ ದಿನಗಳಲ್ಲಿ ರಾಕೆಟ್-ಇಸ್ರೋ

ಪ್ರಮುಖ ಸುದ್ದಿ

  • ಉಪಗ್ರಹ ಉಡಾವಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಎರಡು ಮೂರು ದಿನಗಳಲ್ಲಿ ಜೋಡಿಸಬಹುದಾದ ಅತ್ಯಂತ ಕಡಿಮೆ ವೆಚ್ಚದ ಸಣ್ಣ ಉಪಗ್ರಹ ಉಡಾವಣಾ ವಾಹನಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸುತ್ತಿದೆ.

ಮುಖ್ಯ ಅಂಶಗಳು

  • 2018ರ ಅಂತ್ಯ ಅಥವಾ 2019ರ ಆರಂಭದಲ್ಲಿ ಸಣ್ಣ ರಾಕೆಟ್ ಸಿದ್ಧವಾಗಲಿದೆ. ಸಾಮಾನ್ಯ ಪಿಎಸ್​ಎಲ್​ವಿಗೆ ತಗುಲುವ ವೆಚ್ಚದಲ್ಲಿನ 1/10ನೇ ಭಾಗ ಮಾತ್ರ ಇದಕ್ಕೆ ಸಾಕು ಎನ್ನಲಾಗಿದ್ದು, ಈ ರಾಕೆಟ್ ಕನಿಷ್ಠ 500ರಿಂದ 700 ಕೆ.ಜಿ. ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ಉಪಗ್ರಹಗಳನ್ನು ಭೂಕಕ್ಷೆವರೆಗೆ ತಲುಪಿಸುವ ಸಾಮರ್ಥ್ಯ ಹೊಂದಿರಲಿದೆ
  • ಸಾಮಾನ್ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್​ಎಲ್​ವಿ) ಜೋಡಿಸಲು ಕನಿಷ್ಠ 30-40 ದಿನಗಳ ಅಗತ್ಯವಿದೆ. ಪಿಎಸ್​ಎಲ್​ವಿ ಉತ್ಪಾದನಾ ವೆಚ್ಚವೂ -ಠಿ;150–ಠಿ;500 ಕೋಟಿ ಇದ್ದು, ಸಣ್ಣ ಉಪಗ್ರಹ ಉಡಾವಣಾ ವಾಹನಕ್ಕೆ ಪಿಎಸ್​ಎಲ್​ವಿಗೆ ವೆಚ್ಚ ಮಾಡಲಾಗುವ 1/10ನೇ ಭಾಗ ಸಾಕು. ಸಾಮಾನ್ಯ ಪಿಎಸ್​ಎಲ್​ವಿಯು 300 ಟನ್ ತೂಕವಿದ್ದು, ಮಿನಿ ಪಿಎಸ್​ಎಲ್​ವಿಯು ಕೇವಲ 100 ಟನ್ ಇರಲಿದೆ

 

ವಿದೇಶಿ ಮಾರುಕಟ್ಟೆ ಮೇಲೆ ಕಣ್ಣು

  • ಸಾಮಾನ್ಯ ಪಿಎಸ್​ಎಲ್​ವಿ ನಿರ್ವಿುಸಲು ಬಳಸುವ ಹಣವನ್ನು ಹಲವು ಮಿನಿ ಪಿಎಸ್​ಎಲ್​ವಿ ಉತ್ಪಾದಿಸಲು ಬಳಸಬಹುದಾಗಿದೆ. ಈ ಮೂಲಕ ಹಲವು ಉಪಗ್ರಹಗಳನ್ನು ಉಡಾವಣೆ ಮಾಡಬಹುದಾಗಿದೆ.
  • ವಿಸ್ತಾರಗೊಳ್ಳುತ್ತಿರುವ ಮಾರುಕಟ್ಟೆಯ ಮೇಲೆ ಗಮನಕೇಂದ್ರೀಕರಿಸಿರುವ ಇಸ್ರೋ, ಸಣ್ಣ ರಾಕೆಟ್ ಉತ್ಪಾದಿಸಲು ಮುಂದಾಗಿದೆ. ವಿದೇಶಗಳು ಹೆಚ್ಚಾಗಿ ನ್ಯಾನೊ ಉಪಗ್ರಹ ಉಡಾಯಿಸುತ್ತಿದ್ದು, ಅವುಗಳನ್ನು ಹೊತ್ತೊಯ್ಯಲು ಸಣ್ಣ ರಾಕೆಟ್ ಸಾಕು. ಇದರ ಪ್ರಯೋಜನ ಪಡೆಯಲು ಇಸ್ರೋ ಮುಂದಾಗಿದೆ.

ವಿದೇಶದಲ್ಲಿ ಬೇಡಿಕೆ

  • ಕಳೆದ ಫೆ.15ರಂದು ಇಸ್ರೋ ನಿರ್ವಿುತ ಪಿಎಸ್​ಎಲ್​ವಿ ಸಿ37 104 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಈ ಪೈಕಿ ವಿದೇಶಿ ಉಪಗ್ರಹಗಳೇ ಹೆಚ್ಚಾಗಿದ್ದವು. ಜೂನ್ 23ರಂದು ಕಾಟೋಸ್ಯಾಟ್-2 ಸೇರಿ ವಿದೇಶಗಳ 30 ಸಣ್ಣ ಉಪಗ್ರಹಗಳನ್ನು ಇಸ್ರೋ ನಭಕ್ಕೆ ತಲುಪಿಸಿತ್ತು.

4.  ವಿಶ್ವದ ಅತ್ಯಂತ ವೇಗದ ಬ್ರಹ್ಮೋಸ್ ಕ್ಷಿಪಣಿ

ಪ್ರಮುಖ ಸುದ್ದಿ

  • ದಿನಕ್ಕೊಂದು ತಂಟೆ, ತಕರಾರುಗಳ ಮೂಲಕ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನ, ಚೀನಾದಂಥ ಮಗ್ಗುಲ ಮುಳ್ಳುಗಳಿಗೆ ಎಚ್ಚರಿಕೆ ನಿಡುವ ಜತೆಗೆ, ಜಾಗತಿಕ ದೇಶಗಳಿಗೆ ಭಾರತದ ಸೈನ್ಯಬಲವನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಭಾರತ ಯಶಸ್ಸು ಕಂಡಿದೆ.
  • ವಿಶ್ವದ ಅತ್ಯಂತ ವೇಗದ ಬ್ರಹ್ಮೋಸ್ ಕ್ಷಿಪಣಿ ಇತಿಹಾಸ ಸೃಷ್ಟಿಸಿದೆ. ಸಮರಭೂಮಿಯ ಮುಂಚೂಣಿ ಯುದ್ಧ ವಿಮಾನವಾದ ಸುಖೋಯ್-30ಎಂಕೆಐ ಮೂಲಕ ಆಗಸದಿಂದ ಭೂಮಿಗೆ ಅಪ್ಪಳಿಸುವ ಸೂಪರ್​ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದೆ.

ಪ್ರಮುಖ ಸಂಗತಿಗಳು

  • 5 ಟನ್ ಭಾರದ ಬ್ರಹ್ಮೋಸ್ ಕ್ಷಿಪಣಿ ಹೊತ್ತ ಸುಖೋಯ್ ಯುದ್ಧ ವಿಮಾನ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಹಾರಾಟ ಕೈಗೊಂಡು ಗುರುತ್ವದಲ್ಲಿ ಕ್ಷಿಪಣಿಯನ್ನು ತೇಲಿ ಬಿಟ್ಟಿತು. ಕೆಲವೇ ಕ್ಷಣಗಳಲ್ಲಿ ಸ್ವಯಂಚಾಲಿತಗೊಂಡ ಕ್ಷಿಪಣಿ, 2.8 ಮ್ಯಾಕ್ ವೇಗದಲ್ಲಿ (ಶಬ್ದ ವೇಗಕ್ಕಿಂತಲೂ ಅಂದಾಜು 3 ಪಟ್ಟು ವೇಗ) ಬಂಗಾಳ ಕೊಲ್ಲಿಯಲ್ಲಿ ನಿಗದಿಪಡಿಸಲಾಗಿದ್ದ ಗುರಿಯತ್ತ ಸಾಗಿ ನಿಖರವಾಗಿ ಅಪ್ಪಳಿಸಿತು ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.
  • ಭೂಮಿಯಿಂದ ಭೂಮಿಗೆ ನೆಗೆಯಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಮೊಬೈಲ್ ಆಟೋನಾಮಸ್ ಲಾಂಚರ್ ಮೂಲಕ ಹಾಗೂ ಯುದ್ಧನೌಕೆಗಳಿಗೆ ಜೋಡಿಸಿ ಉಡಾವಣೆ ಮಾಡಬಹುದಾಗಿದೆ.
  • ಜಲಾಂತರ್ಗಾಮಿಗಳಿಗೆ ಅಳವಡಿಸಿ, 40-50 ಮೀಟರ್ ಆಳಸಮುದ್ರದಿಂದಲೂ ಸಿಡಿಸಬಹುದಾಗಿದೆ. ಅಂದಾಜು 9 ಟನ್ ತೂಕವಿರುವ ಸೂಪರ್​ಸಾನಿಕ್ ಕ್ಷಿಪಣಿಗಳನ್ನುಪದಾತಿ ದಳ ಮತ್ತು ನೌಕಾಪಡೆ ಈಗಾಗಲೆ ಸೇವೆಗೆ ಸೇರ್ಪಡೆಗೊಳಿಸಿಕೊಂಡಿವೆ.
  • ಆದರೆ, 2.9 ಟನ್ ತೂಕದ ಕ್ಷಿಪಣಿಗಳನ್ನು ಯುದ್ಧವಿಮಾನಗಳಿಗೆ ಅಳವಡಿಸುವುದು ಅಸಾಧ್ಯವಾಗಿತ್ತು. ಆದ್ದರಿಂದ, ತೆಳುವಾದ 4 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಇವನ್ನು ಅಳವಡಿಸಲು ಅನುಕೂಲವಾಗುವಂತೆ ಎಚ್​ಎಎಲ್ ಸಂಸ್ಥೆ ಸುಖೋಯ್ ಯುದ್ಧವಿಮಾನಗಳ ಹೊರಕವಚದಲ್ಲಿ ಅಲ್ಪಪ್ರಮಾಣದ ಮಾರ್ಪಾಡು ಮಾಡಿದೆ. ಹೀಗೆ ಮಾರ್ಪಾಡುಗೊಂಡಿರುವ ಸುಖೋಯ್ ಯುದ್ಧವಿಮಾನ ಬುಧವಾರ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿತು.
  • ಈ ಕ್ಷಿಪಣಿಗಳನ್ನು ಇನ್ನಷ್ಟು ತಾಂತ್ರಿಕ ಪರೀಕ್ಷೆಗಳಿಗೆ ಒಳಪಡಿಸುವುದು ಬಾಕಿ ಇದೆ. ಅವು ಮುಗಿದ ಬಳಿಕ ವಾಯುಪಡೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಸೇರ್ಪಡೆಗೊಳಿಸಿಕೊಳ್ಳಲಿದೆ. ಹಾಗೂ ಸದ್ಯ 42 ಸುಖೋಯ್ ಯುದ್ಧವಿಮಾನಗಳಿಗೆ ಇವನ್ನು ಜೋಡಣೆ ಮಾಡಲು ಉದ್ದೇಶಿಸಲಾಗಿದೆ.

 

ಸರ್ಜಿಕಲ್ ದಾಳಿಗೂ ಸೈ

  • ಭಾರತದ ಗಡಿ ಭದ್ರತಾ ಪಡೆ ಯೋಧರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದರು. ಗಡಿಯುದ್ದಕ್ಕೂ ಕಡಿದಾದ ಪ್ರದೇಶಗಳಲ್ಲಿ ಇಂತಹ ಇನ್ನೂ ಹಲವು ಉಗ್ರರ ಶಿಬಿರಗಳಿದ್ದು, ಅಲ್ಲಿಗೆ ಹೋಗಿ ಸರ್ಜಿಕಲ್ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ.
  • ಸುಖೋಯ್ ಯುದ್ಧವಿಮಾನಗಳ ಮೂಲಕ ಇಂತಹ ಸ್ಥಳಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಬಹುದಾಗಿದೆ.
  • ಯುದ್ಧದ ಸಂದರ್ಭದಲ್ಲಿ ಅಗತ್ಯವೆನಿಸಿದಾಗ ಸಮುದ್ರದ ಮೇಲೆ ಗಂಟೆಗೆ 1,500 ಕಿ.ಮೀ ವೇಗದಲ್ಲಿ ಸಾಗುವ ಸುಖೋಯ್ ಯುದ್ಧವಿಮಾನಗಳು ಸಮುದ್ರ ಮಾರ್ಗದಲ್ಲಿ ಚಲಿಸುತ್ತಿರುವ ಶತ್ರು ಯುದ್ಧನೌಕೆಗಳನ್ನೂ ಧ್ವಂಸಗೊಳಿಸಬಲ್ಲದಾಗಿದೆ. ಇದರಿಂದಾಗಿ ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.

ವಿಶ್ವದಾಖಲೆ

  • ರಷ್ಯಾದ ಸಹಭಾಗಿತ್ವದಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬ್ರಹ್ಮೋಸ್ ಕ್ಷಿಪಣಿಯನ್ನು ತಯಾರಿಸಿದೆ.
  • ಈ ಕ್ಷಿಪಣಿಯು ಭೂಮಿಯಿಂದ ಭೂಮಿಗೆ, ಜಲದಿಂದ ಭೂಮಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದ್ದು, ಇದೀಗ ಗಾಳಿಯಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪ್ರಯೋಗ ಯಶಸ್ವಿಯಾಗಿರುವುದು ವಿಶ್ವದಾಖಲೆಯಾಗಿದೆ. ಅಲ್ಲದೆ, ತ್ರಿಲಯ ಸೂಪರ್​ಸಾನಿಕ್ ಕ್ಷಿಪಣಿಯನ್ನು ಹೊಂದಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯೂ ಭಾರತದ ಪಾಲಾಗಿದೆ.

ಸಂಕ್ಷಿಪ್ತ ವಿಶ್ಲೇಷಣೆ   

  • ಭಾರತೀಯ ವಾಯುಪಡೆಯ ಸುಖೋಯ್ -30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ ಖಂಡಿತವಾಗಿಯೂ ಭಾರತೀಯ ಏರ್ ಫೋರ್ಸ್ (ಐಎಎಫ್) ವಾಯು ಯುದ್ಧ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ರಾಷ್ಟ್ರದ ತಡೆ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸಿದೆ. 400 ಕಿಲೋಮೀಟರ್ ಗಳಿಗಿಂತಲೂ ಹೆಚ್ಚು ದೂರದಲ್ಲಿರುವ ಯುದ್ಧನೌಕೆಗಳನ್ನು ಮತ್ತು ನೆಲದ ಗುರಿಗಳನ್ನು ಈಗ ಆದೇಶಿಸಿದ ನಿಮಿಷಗಳೊಳಗೆ ನಿಖರ ದಾಳಿಯ ಮೂಲಕ ಉಡಾಯಿಸಬಹುದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿವೃದ್ಧಿಯ ಹೆಚ್ಚುತ್ತಿರುವ ಸಂಕೀರ್ಣ ವಾಯು ರಕ್ಷಣಾ ವಾತಾವರಣದಲ್ಲಿ ಶತ್ರು ಪ್ರದೇಶದ ಒಳಗಿನ ಗುರಿಗಳನ್ನು ಹೊಡೆಯಲು ಮತ್ತು ತ್ವರಿತವಾಗಿ ಹೊರಬರಲು ಐಎಎಫ್ ಗೆ ದಾರಿ ಮಾಡಿಕೊಡುತ್ತದೆ.

 

  • ವಾಸ್ತವವಾಗಿ, ಈ ಸಾಮರ್ಥ್ಯವು ಭಾರತ ಪರವಾಗಿ ಮಿಲಿಟರಿ ಸಮತೋಲನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ವಿರೋಧಿ ನೆರೆಹೊರೆಯವರ ಆಕ್ರಮಣಕಾರಿ ಸಾಮರ್ಥ್ಯವನ್ನು ತಟಸ್ಥಗೊಳಿಸಲು ಇದು ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ಲೇಷಣಾ ವಿಭಾಗವು ವ್ಯಾಖ್ಯಾನಿಸಿದೆ. ಆದಾಗ್ಯೂ, ಭಾರತವು ಯಾವುದೇ ದೇಶವನ್ನು ಮೊದಲು ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿಲ್ಲ. ಭಾರತವು ತಾನು ಮೊದಲು ಪರಮಾಣು ಶಸ್ತ್ರಾಸ್ತ್ರ ಬಳಸುವುದಿಲ್ಲ ಎಂದು ನಿರ್ಧರಿಸಿದೆ.

 

  • ಯಶಸ್ವಿಯಾದ ಈ ಪರೀಕ್ಷೆಯು ಭಾರತೀಯ ವಾಯುಪಡೆಗೆ ಆನೆ ಬಲ ತುಂಬಿದೆ. ಸು -30 ಮತ್ತು ಬ್ರಹ್ಮೋಸ್ ಪ್ರಬಲ ಸಂಯೋಜನೆಗಳಾಗಿವೆ. ವಿಶ್ವದ ಅತ್ಯಂತ ಸಮರ್ಥವಾದ ನಾಲ್ಕನೇ ಪೀಳಿಗೆಯ ಹೋರಾಟಗಾರ (ಸು -30) ಅನನ್ಯವಾಗಿ ವಿನಾಶಕಾರಿ ಕ್ರೂಸ್ ಕ್ಷಿಪಣಿಯೊಂದಿಗೆ ಶಸ್ತ್ರಸಜ್ಜಿತಗೊಂಡಾಗ, ಅವುಗಳು ನಾಟಕೀಯ ಶಕ್ತಿ ಗುಣಕಗಳಾಗಿ ಮಾರ್ಪಟ್ಟಿವೆ. ಪ್ರತಿ ಗಂಟೆಗೆ 3700 ಕಿ.ಮೀ.ನ ಬ್ರಾಹ್ಮೋಸ್ ನ ಗರಿಷ್ಟ ವೇಗವೆಂದರೆ ಅದು ದೊಡ್ಡ ಪ್ರಮಾಣದಲ್ಲಿ ಚಲನಾ ಶಕ್ತಿಯನ್ನು ಹೊಂದುತ್ತದೆ. ವೀಕ್ಷಕರ ಪ್ರಕಾರ, ಪರೀಕ್ಷೆಗಳಲ್ಲಿ, ಬ್ರಾಹ್ಮೋಸ್ ಅನೇಕ ವೇಳೆ ಅರ್ಧದಷ್ಟು ಯುದ್ಧನೌಕೆಗಳನ್ನು ಕಡಿತಗೊಳಿಸಿದೆ. ಸುಖೋಯ್ ವಿಮಾನಗಳ ವೇಗವು ಕ್ಷಿಪಣಿಗೆ ಹೆಚ್ಚುವರಿ ಉಡಾವಣಾ ವೇಗವನ್ನು ನೀಡಲಿದೆ. ಹಾಗೇ ವಿಮಾನವು ಒಳ ನುಗ್ಗುವ ಸಾಮರ್ಥ್ಯವು ತನ್ನ ಕ್ಷಿಪಣಿಗಳನ್ನು ಅದರ ಉದ್ದೇಶಿತ ಗುರಿಗಳಿಗೆ ತಲುಪಿಸಲು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.

 

  • ಪರೀಕ್ಷೆಯ ಯಶಸ್ಸು ಈ ಪ್ರದೇಶದಲ್ಲಿನ ವಾಯು ಸಾಮರ್ಥ್ಯದಲ್ಲಿನ ಶ್ರೇಷ್ಥತೆಯ ಹೋರಾಟದ ಹೊಸ ಅಧ್ಯಾಯವನ್ನು ತೆರೆದಿರುವುದು ಮಾತ್ರವಲ್ಲದೇ ಇತರ ಯುದ್ಧ ವಿಮಾನಗಳಾದ ರಾಫೆಲ್ ಮತ್ತು ಆಧುನಿಕ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳಿಗೆ ಕ್ಷಿಪಣಿ ಅಭಿವೃದ್ಧಿ ಪಡಿಸುವ ಅವಕಾಶವನ್ನು ನೀಡಿದೆ. ಭಾರತೀಯ ನೌಕಾಪಡೆ ಮತ್ತು ಭಾರತೀಯ ಸೇನೆಯು ಈಗಾಗಲೇ ಕ್ಷಿಪಣಿಯ ವಿಭಿನ್ನ ರೂಪಾಂತರಗಳನ್ನು ನಿರ್ವಹಿಸುತ್ತಿವೆ. ಭಾರತೀಯ ಯುದ್ಧ ನೌಕೆಗಳಲ್ಲಿ ಮತ್ತು ನೆಲದ ಮೇಲೆ ದಾಳಿ ನಡೆಸುವ ಭಾರತೀಯ ಸೇನಾ ಘಟಕಗಳ ಮೇಲೆ ಕ್ಷಿಪಣಿಯನ್ನು ನಿಯೋಜಿಸಲಾಗಿದೆ. ಈ ಯಶಸ್ವೀ ಪರೀಕ್ಷೆಯೊಂದಿಗೆ ಬ್ರಹ್ಮೋಸ್ ಈಗ ಭೂಮಿ, ಸಮುದ್ರ ಮತ್ತು ಗಾಳಿಯಿಂದ ಉಡಾವಣೆಗೊಳ್ಳಲು ಸಮರ್ಥವಾಗಿದೆ, ಭಾರತಕ್ಕಾಗಿ ಯುದ್ಧತಂತ್ರದ ಕ್ರೂಸ್ ಕ್ಷಿಪಣಿ ತ್ರಿವಳಿಗಳನ್ನು ಪೂರ್ಣಗೊಳಿಸುತ್ತದೆ. ಭಾರತೀಯ ವಾಯುಪಡೆಯ ಕ್ಷಿಪಣಿ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ.

 

  • ಗಾತ್ರದಲ್ಲಿ ಗಮನಾರ್ಹವಾಗಿ ದೊಡ್ಡದಾದ ಮತ್ತು 3 ಟನ್ ತೂಕದ ನೌಕಾಪಡೆ ಮತ್ತು ಸೇನಾ ಆವೃತ್ತಿಗಿಂತ ಭಿನ್ನವಾಗಿ, ಐಎಎಫ್ ಆವೃತ್ತಿಯು 5 ಟನ್ ತೂಗುತ್ತದೆ ಮತ್ತು ಸು -30 ಎಮ್ಕೆಐ ಫೈಟರ್ಗಾಗಿ ವಿಶೇಷವಾಗಿ ಅಳವಡಿಸಲಾಗಿದೆ. ಕ್ಷಿಪಣಿಯ ಗಣನೀಯ ತೂಕವನ್ನು ನೀಡಿದರೆ, ಸು -30 ಯು ಒಂದು ಕ್ಷಿಪಣಿ ಮಾತ್ರ ಸಾಗಿಸಬಲ್ಲದು. ಮ್ಯಾಕ್ 2.8 ರ ವೇಗ ಹೊಂದಿರುವ ಬ್ರಹ್ಮೋಸ್ ಅನ್ನು ಉಡಾವಣೆಗೊಂಡ ಬಳಿಕ ತಡೆಯುವುದು ಕಷ್ಟ.

 

  • ಬ್ರಹ್ಮೋಸ್ ನ ವಿನ್ಯಾಸ ಮತ್ತು ಅಭಿವೃದ್ಧಿ ಸಮಕಾಲೀನ ಯುಗದಲ್ಲಿ ಮಿಲಿಟರಿ ಕ್ಷೇತ್ರದಲ್ಲಿ ಇಂಡೋ-ರಷ್ಯನ್ ಸಹಕಾರವನ್ನು ನಿರೂಪಿಸಿದೆ, ರಶಿಯಾವು ನಿಯಂತ್ರಣ ನೀಡಿದರೆ ಭಾರತ ಮಾರ್ಗದರ್ಶನ ಒದಗಿಸಿದೆ. ಏವಿಯೊನಿಕ್ಸ್ ಮತ್ತು ಮಾರ್ಗದರ್ಶನ ಅಲ್ಗಾರಿದಮ್ ನಲ್ಲಿನ ಭಾರತದ ಪ್ರಗತಿಗಳು, ವಿವಿಧ ಕ್ಷಿಪಣಿ ಯೋಜನೆಗಳಲ್ಲಿ ಸಾಬೀತಾಗಿದೆ. ಹೊಸ ಕ್ಷಿಪಣಿಗಳ ಅಭಿವೃದ್ಧಿಗೆ

5. ಇನ್ನು ಬಿದಿರು ಕಾಡಿನಲ್ಲಿ ಮಾತ್ರ ಮರ, ನಾಡಿನಲ್ಲಿ ಅಲ್ಲ

ಪ್ರಮುಖ ಸುದ್ದಿ

 

  • ದೇಶದಲ್ಲಿ ಬಿದಿರು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ‘ಭಾರತೀಯ ಅರಣ್ಯ ಕಾಯ್ದೆ–1927’ಕ್ಕೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.

 

ಮುಖ್ಯ ಅಂಶಗಳು

  • ‘ಈಗ ಕಾಯ್ದೆಯ ಅನ್ವಯ ಬಿದಿರನ್ನು ಮರ ಎಂದು ಪರಿಗಣಿಸಲಾಗುತ್ತದೆ. ರೈತರು ತಾವೇ ಬೆಳೆದ ಮತ್ತು ಅವರ ಹೊಲದಲ್ಲಿ ಬೆಳೆದ ಬಿದಿರನ್ನು ಕಡಿಯಲು ಅನುಮತಿ ಹಾಗೂ ಸಾಗಾಟಕ್ಕೆ ಪರವಾನಗಿ ಪಡೆದುಕೊಳ್ಳಬೇಕು. 2011ರಲ್ಲಿ ಕೆಲವು ರಾಜ್ಯಗಳು ಬಿದಿರನ್ನು ‘ಅರಣ್ಯ ಲಘು ಉತ್ಪನ್ನ’ ಎಂದು ಘೋಷಿಸಿವೆ.
  • ಇದರಿಂದ ಆಯಾ ರಾಜ್ಯಗಳ ಒಳಗೆ ಬಿದಿರನ್ನು ಸಾಗಿಸಲು ಹೆಚ್ಚು ಅಡೆತಡೆ ಇಲ್ಲ. ಆದರೆ ಅಂತರರಾಜ್ಯ ಸಾಗಾಟಕ್ಕೆ ಹಲವು ಇಲಾಖೆಗಳಿಂದ ಅನುಮತಿ ಮತ್ತು ಪರವಾನಗಿ ಪಡೆದುಕೊಳ್ಳಬೇಕಿದೆ. ಹೀಗಾಗಿ ಬಿದಿರು ಕೃಷಿ ಭಾರತದಲ್ಲಿ ಇನ್ನೂ ವಾಣಿಜ್ಯ ಸ್ವರೂಪ ಪಡೆದಿಲ್ಲ’ ಎಂದು ಮೂಲಗಳು ಹೇಳಿವೆ.
  • ‘ಬಿದಿರನ್ನು ಕಡಿಯಲು ಮತ್ತು ಸಾಗಾಟ ಮಾಡಲು ಈ ತಿದ್ದುಪಡಿ ಕಾಯ್ದೆಯು ಅನುವು ಮಾಡಿಕೊಡುತ್ತದೆ. ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿದ ನಂತರ ಈ ನಿರ್ಬಂಧಗಳು ಸಡಿಲವಾಗಲಿವೆ.
  • ಇದರಿಂದ ರೈತರು ಬಿದಿರನ್ನು ಮುಖ್ಯಬೆಳೆಯಾಗಿ ಮತ್ತು ಉಪಬೆಳೆಯಾಗಿಯೂ ಬೆಳೆಯಬಹುದು. ಇದರಿಂದ ರೈತರ ಆದಾಯ ಹೆಚ್ಚುತ್ತದೆ’ ಎಂದು ಮೂಲಗಳು ವಿವರಿಸಿವೆ.
  • ‘ಬಿದಿರಿನ ಇಳುವರಿ ಹೆಚ್ಚಿದರೆ, ಅದನ್ನು ಕಚ್ಚಾವಸ್ತುವಾಗಿ ಬಳಸುವ ಗುಡಿ ಕೈಗಾರಿಕೆಗಳು ಹೆಚ್ಚಾಗಲಿವೆ. ಬಿದಿರಿನ ಪೀಠೋಪಕರಣ, ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಒಟ್ಟಾರೆ ಇದು ಉದ್ಯೋಗಾವಕಾಶ ಮತ್ತು ರೈತರ ಆದಾಯವನ್ನು ಹೆಚ್ಚಿಸಲಿದೆ’ ಎಂದು ಮೂಲಗಳು ಹೇಳಿವೆ.

ಲಾಭ ಏನು ?

  • ಬಿದಿರು ಕೃಷಿಗೆ ಉತ್ತೇಜನ, ವಾಣಿಜ್ಯ ರೂಪ ನೀಡಲು ಕ್ರಮ.
  • ಕಟಾವು ಮತ್ತು ಸಾಗಾಟಕ್ಕೆ ಅನುಮತಿ ಮತ್ತು ಪರವಾನಗಿ ಬೇಕಾಗುವುದಿಲ್ಲ.
  • ಗುಡಿ ಕೈಗಾರಿಕೆಗಳಿಂದ ಉದ್ಯೋಗಾವಕಾಶ ಹೆಚ್ಚಳ.
  • ದೇಶದಲ್ಲಿ ಬಿದಿರು ಪ್ಲಾಂಟೇಶನ್‌ಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೇಂದ್ರ ಸರಕಾರದ ಯೋಜನೆಗಳಲ್ಲಿ ಬಿದಿರು ಅಭಿವೃದ್ಧಿಯೂ ಒಂದು ಪ್ರಮುಖಾಂಶವಾಗಿದೆ.

6. ಭಾರತ್ ಸ್ಟೇಜ್- VI ಗೆ  ಹೆಜ್ಜೆ ಹಾಕಿದ  ದೆಹಲಿ

ಸನ್ನಿವೇಶ

  • ವಾಯುಮಾಲಿನ್ಯದ ಸುಳಿಗೆ ಸಿಲುಕಿರುವ ರಾಷ್ಟ್ರರಾಜಧಾನಿಯನ್ನು ಪಾರು ಮಾಡುವ ಸಲುವಾಗಿ ಇದೀಗ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ವತ್ಛ ಇಂಧನದ ಮೊರೆ ಹೋಗಿದೆ.
  • ಮುಂದಿನ ವರ್ಷದ ಏಪ್ರಿಲ್‌ನಿಂದಲೇ ಜಾರಿ ಯಾಗುವಂತೆ ದೆಹಲಿಯಲ್ಲಿ ಎಲ್ಲ ವಾಹನಗಳೂ ಬಿಎಸ್‌- 6 ಇಂಗಾಲ ಹೊರಸೂಸುವಿಕೆ ಗುಣ ಮಟ್ಟ ಹೊಂದಿರಬೇಕಾದ್ದು ಕಡ್ಡಾಯ ಎಂದು ಘೋಷಿಸಿದೆ.

 

ಪ್ರಸ್ತುತ  ಇರುವ ಸನ್ನಿವೇಶವೇನು ?

 

  • ಈಗಿರುವ ಭಾರತ್‌ ಸ್ಟೇಜ್‌ -4 ಗ್ರೇಡ್‌ನಿಂದ ಬಿಎಸ್‌-6ಗೆ ಏರಲು 2020ರ ಏಪ್ರಿಲ್‌ನ ಗಡುವನ್ನು ಈ ಹಿಂದೆ ಅಂದರೆ 2015ರಲ್ಲೇ ಸರ್ಕಾರ ವಿಧಿಸಿಕೊಂಡಿತ್ತು. ಅದರಂತೆ, ದೇಶಾದ್ಯಂತ ಇನ್ನೆರಡು ವರ್ಷಗಳ ಬಳಿಕ ಬಿಎಸ್‌-6 ಗ್ರೇಡ್‌ ಜಾರಿಗೆ ಬರಬೇಕಿತ್ತು.
  • ಆದರೆ, ದೆಹಲಿ ವಾಯುಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು 2 ವರ್ಷ ಮುಂಚಿತವಾಗಿಯೇ ಅಂದರೆ 2018ರ ಏಪ್ರಿಲ್‌ನಿಂದಲೇ ಜಾರಿಯಾಗುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶಿಸಿದೆ.

 ಭಾರತ್‌  ಸ್ಟೇಜ್‌ ಎಂದರೇನು ?

  • ವಾಹನಗಳಲ್ಲಿನ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆ. ಕೇಂದ್ರ ಸರ್ಕಾರ ಈ ಭಾರತ್‌ ಸ್ಟೇಜ್‌ (ಬಿಎಸ್‌) ಮಾದರಿಯನ್ನು ಹೊರತಂದಿದೆ.
  • ವಾಹನಗಳ ಎಂಜಿನ್‌ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸಬೇಕು ಎಂಬುದನ್ನು ಈ ಮೂಲಕ ನಿಗದಿಪಡಿಸಲಾಗುತ್ತದೆ.
  • ಜಗತ್ತಿನಾದ್ಯಂತ ಹೆಚ್ಚುತ್ತಿರುವ ತಾಪಮಾನ, ಮಾಲಿನ್ಯವನ್ನು ತಡೆವ ನಿಟ್ಟಿನಲ್ಲಿ ಐರೋಪ್ಯ ದೇಶಗಳಲ್ಲಿ ಯುರೋಪಿಯನ್‌ ಮಾಲಿನ್ಯ ಮಟ್ಟ (ಯೂರೋ ನಾಮ್ಸ್‌) ಹೊರತಂದಂತೆಯೇ ಭಾರತದಲ್ಲೂ ಭಾರತ್‌ ಸ್ಟೇಜ್‌ ಅನ್ನು ತರಲಾಗಿದೆ.
  • ಸದ್ಯ ಐರೋಪ್ಯ ದೇಶಗಳಲ್ಲಿ ಯೂರೋ 6 ಮಾಲಿನ್ಯ ಮಟ್ಟ ನಿಗದಿಯಾಗಿದ್ದರೆ, ಭಾರತ ಅದಕ್ಕಿಂತ ಸುಮಾರು 5 ವರ್ಷ ಹಿಂದಿದ್ದು,

ಭಾರತ್‌ ಸ್ಟೇಜ್‌ ಹಿನ್ನಲೆ ಏನು?

  • ಭಾರತ ಮೊದಲ ಬಾರಿಗೆ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆಯನ್ನು ಆರಂಭಮಾಡಿದ್ದು 1991ರಲ್ಲಿ. 1996ರಲ್ಲಿ ಇದನ್ನು ಬಿಗುಗೊಳಿಸಿತ್ತು. ಆದರೆ ಭಾರತದಲ್ಲಿ ಸುಧಾರಿತ ಇಂಧನದ ಲಭ್ಯತೆ, ವಾಹನಗಳ ಹೊಗೆ ನಳಿಕೆಗಳಲ್ಲಿ ಸುಧಾರಣೆಗೆ ಕಂಪನಿಗಳು ನೆಪವೊಡ್ಡಿದ್ದರಿಂದ ಅದು ಅಷ್ಟಾಗಿ ಜಾರಿಗೆ ಬಂದಿರಲಿಲ್ಲ.
  • ಬಳಿಕ 2000ರಿಂದ ಭಾರತ್‌ ಸ್ಟೇಜ್‌ 1 (ಬಿಐಎಸ್‌ 2000)ರನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 1999 ಏಪ್ರಿಲ್‌ನಲ್ಲಿ ಇದರ ಘೋಷಣೆಯಾಗಿತ್ತು. ಭಾರತ್‌ ಸ್ಟೇಜ್‌ 1 ಮತ್ತು ಭಾರತ್‌ ಸ್ಟೇಜ್‌ 2 ಯೂರೋ 1 ಮತ್ತು ಯೂರೋ 2 ಮಾಲಿನ್ಯ ಮಟ್ಟ ನಿಗದಿಗೆ ಸಮಾನಾಂತರವಾಗಿತ್ತು.
  • ಆರಂಭದಲ್ಲಿ ಬಿಎಸ್‌ 2 ಅನ್ನು ರಾಜಧಾನಿ ದೆಹಲಿ ಮತ್ತು ಇತರ ಮೆಟ್ರೋಗಳಲ್ಲಿ ಹಾಗೂ ಬಿಎಸ್‌1 ಅನ್ನು ದೇಶದ ಇತರೆಡೆಗಳಲ್ಲಿ ಕಡ್ಡಾಯ ಮಾಡಲಾಗಿತ್ತು.

ಬಿಎಸ್-3 ನಿಷೇದ ಮಾಡಲು ಕಾರಣವೇನು ?

1 ಬಿಎಸ್‌3 ಎಂಜಿನ್‌ ವಾಹನಗಳಿಗೆ ಹೋಲಿಸಲಿದೆ ಬಿಎಸ್‌ 4 ವಾಹನಗಳು ಉಗುಳುವ ಹೊಗೆಯಲ್ಲಿ ಮಾಲಿನ್ಯಕಾರಕ ಅಂಶಗಳ ಪ್ರಮಾಣ ತೀರಾ ಕಡಿಮೆ.

  1. ಬಿಡುಗಡೆಗೊಳ್ಳಲಿರುವ ಬಿಎಸ್ 3 ವಾಹನಗಳನ್ನು ನಿಷೇಧಿಸುವುದರಿಂದ ವಾಯುಮಾಲಿನ್ಯ ನಿಯಂತ್ರಿಸಬಹುದಾಗಿದ್ದು,,

3 ಬಿಎಸ್‌ 4 ಇಂಧನ ಉತ್ಪಾದನೆ ಸಲುವಾಗಿ, ಶುದ್ಧೀಕರಣ ಘಟಕಗಳನ್ನು ಮಾರ್ಪಡಿಸಲು ತೈಲ ಕಂಪೆನಿಗಳು ಸುಮಾರು  30 ಸಾವಿರ ಕೋಟಿ ವೆಚ್ಚ ಮಾಡಿವೆ.

 

 

ಬಿಎಸ್‌-4  

  • 2003ರಲ್ಲಿ ವಾಹನ ಇಂಧನ ನೀತಿ ಬಂದಿದ್ದು ಅದರಂತೆ 2005 ಏಪ್ರಿಲ್‌ನಲ್ಲಿ ಬಿಎಸ್‌ 3 ಜಾರಿಗೆ ತರಲಾಗಿತ್ತು. 13 ಪ್ರಮುಖ ನಗರಗಳಲ್ಲಿ ಇದನ್ನು ಮೊದಲು ಜಾರಿ ಮಾಡಿ ಬಳಿಕ ದೇಶದ ಇತರೆಡೆಗಳಲ್ಲಿ ಜಾರಿ ಮಾಡಲಾಗಿತ್ತು.
  • 2010ರಿಂದ ಬಿಎಸ್‌4 ಅನ್ನು ದೇಶದ ಪ್ರಮುಖ ನಗರಗಳಲ್ಲಿ ಜಾರಿ ಮಾಡಲಾಗಿತ್ತು. ಇದೀಗ ದೇಶಾದ್ಯಂತ ಬಿಎಸ್‌4 ಅನ್ನು ಕಡ್ಡಾಯ ಮಾಡಲಾಗಿದೆ.

ಯಾವ ಕಂಪನಿ ಬಿಎಸ್-4 ವಾಹನಗಳನ್ನು ಹೊಂದಿದೆ ?

  • ಸುಜುಕಿ, ಹುಂಡೈ, ಬಜಾಜ್ ಮೊದಲಾದ ಕಂಪೆನಿಗಳು ಈಗಾಗಲೇ ಬಿಎಸ್ 4ಗೆ ವರ್ಗಾಯಿಸಿಕೊಂಡಿದ್ದಾರೆ. ಉಳಿದ ಕಂಪೆನಿಗಳು ಸಂಶೋಧನೆ, ಅಭಿವೃದ್ಧಿ ಮತ್ತು ಬದಲಾವಣೆಯ ಹಂತದಲ್ಲಿವೆ.

 ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

 

  • ಬಿಎಸ್-3 ಎಂಜಿನ್ ಹೊಂದಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಇಲ್ಲುವುದಿಲ್ಲ.

 

  • ಬಿಎಸ್-3 ಎಂಜಿನ್ ಹೊಂದಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಎಂಜಿನ್ ಚಲನೆಯ ಸ್ಥಿತಿಯಲ್ಲಿ ನಿಲುಗಡೆ ಮಾಡಿದ ವೇಳೆಯಲ್ಲಿ ವಾಹನದಿಂದ ಇಂಧನ ಆವಿಯಾಗುವ ಪ್ರಮಾಣ ಕಡಿಮೆ ಇರುತ್ತದೆ.
  • ಬಿಎಸ್-3 ವಾಹನಗಳಿಗೆ ಹೋಲಿಸಿದರೆ ಹೊಸ ತಂತ್ರಜ್ಞಾನ ಪಡೆಯುವ ಬಿಎಸ್-4 ಎಂಜಿನ್ ವಾಹನ ಅತಿ ದುಬಾರಿಯಾಗಲಿದೆ.
  • ಬಿಎಸ್-3 ಎಂಜಿನ್ನಿನಲ್ಲಿ ಪೂರ್ತಿಯಾಗಿ ಉರಿಯದೆ ಇರುವಂತಹ ಹೈಡ್ರೋಕಾರ್ಬೊನ್ಸ್ ಮತ್ತು NOx ಹೊರಸೂಸುವಿಕೆಯ ಅಂಶ ಬಿಡುಗಡೆಗೊಳ್ಳುವುದರಿಂದ ಈ ವಿಷಕಾರಿ ಅಂಶ ಗಾಳಿಗೆ ಸೇರಿ ಬಹಳಷ್ಟು ಮಾಲಿನ್ಯ ಮಾಡುತ್ತದೆ.

 

  • ಬಿಎಸ್4 ಎಂಜಿನ್ ಹೊಸ ತಂತ್ರಜ್ಞಾನದ ಕಾರ್ಬನ್ ಸಣ್ಣ ಡಬ್ಬಿ, ಆಕ್ಸಿಜನ್ ಸೆನ್ಸರ್, ಮೂರು ಹಾದಿ ಹೊಂದಿರುವ ಕ್ಯಾಟಲಿಸ್ಟ್ ಸಿಸ್ಟಮ್ ಎಂಬ ಸಾಧನೆಗಳನ್ನು ಹೊಂದಿರಲಿದ್ದು, ಇದರಿಂದಾಗಿ ಗಾಳಿಗೆ ಸೇರ್ಪಡೆಯಾಗಲಿರುವ ಹೈಡ್ರೋಕಾರ್ಬೊನ್ಸ್ ವಿಷಕಾರಿ ಅಂಶ ಮತ್ತು NOx ಹೊರಸೂಸುವಿಕೆಯ ಅಂಶ ತಡೆಯಬಹುದಾಗಿದೆ. ವಾಯು ಮಾಲಿನ ಮಾಡುವ ಅನೇಕ ವಿಷಕಾರಿ ಅಂಶಗಳಲ್ಲಿ CO (ಇಂಗಾಲದ ಮಾನಾಕ್ಸೈಡ್), HC (ಹೈಡ್ರೋಕಾರ್ಬೊನ್ಸ್), NOx (ನೈಟ್ರಸ್ ಆಕ್ಸೈಡ್), ಎಂಬ ಅಂಶಗಳು ಪ್ರಮುಖವಾಗಿದ್ದು, ಇವುಗಳು ಪರಿಸರಕ್ಕೆ ಬಿಡುಗಡೆಯಾಗುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಬಿಎಸ್-4 ಎಂಜಿನ್ ಅಳವಡಿಸಿತ್ತು

 

ನೇರ ಬಿಎಸ್‌6 ಗುರಿ ಯಾಕೆ ?

  • ಯೂರೋ ಮಾನದಂಡಕ್ಕಿಂತ ಭಾರತದ ಮಾಲಿನ್ಯ ಮಟ್ಟ 5 ವರ್ಷ ಹಿಂದಿರುವ ಹಿನ್ನೆಲೆಯಲ್ಲಿ 2019ಕ್ಕೆ ಬಿಎಸ್‌6 ಅನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು .
  • ಈ ಮೊದಲು 2022ಕ್ಕೆ ಬಿಎಸ್‌5 ಮತ್ತು 2024ಕ್ಕೆ ಬಿಎಸ್‌6 ಅನ್ನು ಜಾರಿಗೆ ಯೋಜಿಸಲಾಗಿತ್ತು. ಆದರೆ 2015ರಲ್ಲಿ ಬಿಎಸ್‌5 ಮಾಲಿನ್ಯಮಟ್ಟ ಜಾರಿಗೆ ತರದೇ ನೇರ ಬಿಎಸ್‌6 ಜಾರಿಗೆ ಯೋಜಿಸಲಾಗಿದೆ.
  • ಇದರಿಂದ ಅಂತಾರಾಷ್ಟ್ರೀಯ ಮಾಲಿನ್ಯ ಮಟ್ಟಕ್ಕೆ ಭಾರತದ ಮಾಲಿನ್ಯ ಮಟ್ಟವನ್ನೂ ಸರಿಗಟ್ಟಲ ಸಾಧ್ಯವಾಗುತ್ತದೆ.
  • 2015ರ ಪ್ಯಾರಿಸ್‌ ಹವಾಮಾನ ಬದಲಾವಣೆ ಶೃಂಗದಲ್ಲಿ ಮಾಲಿನ್ಯ ಕಡಿಮೆಗೊಳಿಸುವ ಕುರಿತಾಗಿ ಭಾರತ ಕೆಲವೊಂದು ಘೋಷಣೆಗಳನ್ನು ಮಾಡಿತ್ತು. ಆ ಹಿನ್ನೆಲೆಯಲ್ಲಿ ನೇರ ಬಿಎಸ್‌6 ಜಾರಿಗೆ ಮುಂದಾಗಲಾಗಿದೆ.

ಇದರಲ್ಲಿರುವ ಸವಾಲುಗಳೇನು?

  • ಭಾರತ್‌ ಸ್ಟೇಜ್‌ ಮಾಲಿನ್ಯ ಮಟ್ಟವನ್ನು ಏರಿಸುವುದರಲ್ಲಿ ಅನೇಕ ಸವಾಲುಗಳಿವೆ. ಭಾರತದಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದು ದೊಡ್ಡ ಸವಾಲು ಕೂಡ ಹೌದು.
  • ಮಾಲಿನ್ಯ ಮಟ್ಟ ಸುಧಾರಣೆಗೆ ಭಾರೀ ಪ್ರಮಾಣದ ಹೂಡಿಕೆ, ತಾಂತ್ರಿಕತೆ ಮತ್ತು ಶುದ್ಧ ಇಂಧನದ ಅಗತ್ಯವಿದೆ. ಅವುಗಳೆಂದರೆ
  • ತಾಂತ್ರಿಕ ಸವಾಲು: ಭಾರತ್‌ ಸ್ಟೇಜ್‌ ಸುಧಾರಣೆಗೆ ಎಂಜಿನ್‌ ಸುಧಾರಣೆ ಆಗಬೇಕಿರುತ್ತದೆ. ಅರ್ಥಾತ್‌ ವಾಹನ ಕಂಪನಿಗಳು ಹೊಸ ತಂತ್ರಜ್ಞಾನವನ್ನು ಎಂಜಿನ್‌ ಮತ್ತು ಸೈಲೆನ್ಸರ್‌ಗಳಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಎಲೆಕ್ಟ್ರಾನಿಕ್‌ ಕಂಟ್ರೋಲ್‌, ಸೈಲೆನ್ಸರ್‌ಗಳಲ್ಲಿ μಲ್ಟರ್‌ಗಳು, ಕಡಿಮೆ ಇಂಧನ ದಹನ ಮತ್ತು ಹೆಚ್ಚು ಸಾಮರ್ಥ್ಯದ ಎಂಜಿನ್‌ಗಳು ಇತ್ಯಾದಿಗಳು ಆಗಬೇಕಿರುತ್ತದೆ.

 

  • ಬಂಡವಾಳ: ತಾಂತ್ರಿಕ ಗುಣಮಟ್ಟಗಳನ್ನು ಏರಿಸುವುದಕ್ಕೆ ಸಹಜವಾಗಿ ಭಾರೀ ಬಂಡವಾಳ ಬೇಕಾಗುತ್ತದೆ. ಬಿಎಸ್‌4 ರಿಂದ ಬಿಎಸ್‌5ಕ್ಕೆ ಮಾಲಿನ್ಯಮಟ್ಟ ಏರಿಸಲು ಸುಮಾರು 50 ಸಾವಿರ ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿತ್ತು. ಇದರೊಂದಿಗೆ ಭಾರತದ ರಸ್ತೆ ಗುಣಮಟ್ಟಕ್ಕೆ ತಕ್ಕಂತೆ ಎಂಜಿನ್‌ ಸುಧಾರಣೆ ಮಾಡಬೇಕಿರುತ್ತದೆ. ಅಲ್ಲದೇ ಮಾಲಿನ್ಯ ತಗ್ಗಿಸಬೇಕಾದರೆ, ರಸ್ತೆಗಳನ್ನೂ ಸರ್ಕಾರ ಸುಧಾರಣೆ ಮಾಡಬೇಕಿರುತ್ತದೆ.
  • ಶುದ್ಧ ಇಂಧನ: ಮಾಲಿನ್ಯ ಮಟ್ಟ ಸುಧಾರಣೆಗೆ ತಾಂತ್ರಿಕತೆ, ಬಂಡವಾಳ ಮಾತ್ರ ಸಾಕಾಗುವುದಿಲ್ಲ. ಶುದ್ಧ ಇಂಧನದ ಅಗತ್ಯವೂ ಇದೆ. ಇದಕ್ಕಾಗಿ ಇಂಧನ ಶುದ್ಧೀಕರಣ ಘಟಕಗಳು ಸುಧಾರಿತ ಶುದ್ಧೀಕರಣ ಮಾದರಿಗಳನ್ನು ಅನುಸರಿಸಬೇಕಾಗುತ್ತದೆ. ಜೊತೆಗೆ ಶುದ್ಧೀಕರಣ ಘಟಕಗಳಲ್ಲಿ ತಾಂತ್ರಿಕ ಬದಲಾವಣೆಯೂ ಆಗಬೇಕಿರುತ್ತದೆ. ಶುದ್ಧ ಇಂಧನದಿಂದ ಮಾಲಿನ್ಯ ಕಡಿಮೆಯಾದ್ದರಿಂದ ಇದು ಅಗತ್ಯ.

7. ಮೀನುಗಾರಿಕೆಗೆ ಸಿಎಂಎಫ್‌ಆರ್‌ಐ-ಇಸ್ರೊ ನೆರವು

ಪ್ರಮುಖ ಸುದ್ದಿ

  • ಸಮಯ ಹಾಗೂ ಇಂಧನ ವ್ಯರ್ಥ ಮಾಡದೆ ಮೀನುಗಾರರಿಗೆ ಸುಲಭದಲ್ಲಿ ಮೀನು ಹಿಡಿಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಳ ಸಮುದ್ರದಲ್ಲಿ ಮೀನುಗಳು ಹೇರಳವಾಗಿ ಕಾಣಸಿಗುವ ವಲಯಗಳನ್ನು ಪತ್ತೆ ಹಚ್ಚಲು ಇದೀಗ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜತೆ ಸಿಎಂಎಫ್‌ಆರ್‌ಐ (ದಿ ಸೆಂಟ್ರಲ್‌ ಮೆರೈನ್‌ ಫಿಶರೀಸ್‌ ರೀಸರ್ಚ್‌ ಆರ್ಗನೈಸೇಷನ್‌) ಕೈಜೋಡಿಸಿದೆ.

ಮುಖ್ಯ ಅಂಶಗಳು

  • ಈ ಯೋಜನೆಯ ಮೊದಲ ಹಂತವಾಗಿ ತಮಿಳುನಾಡಿನಲ್ಲಿ ಕಾರ್ಯಾಚರಣೆಗೆ ನಡೆಯಲಿದೆ. ಸಮಗ್ರ ಮೀನುಗಾರಿಕಾ ವಲಯಗಳನ್ನು ಗುರುತಿಸಿ, ಯೋಜನೆ ಸಿದ್ಧಪಡಿಸಿ, ಉಸ್ತುವಾರಿ ನೋಡಿಕೊಳ್ಳುವುದಕ್ಕಾಗಿ ಸಿಎಂಎಫ್‌ಆರ್‌ಐ ಹಾಗೂ ಬಾಹ್ಯಾಕಾಶ ಸಂಸ್ಥೆಯ ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ (ಎಸ್‌ಎಸಿ) ಜಂಟಿ ಸಾರಥ್ಯದಲ್ಲಿ ‘ರೀಸರ್ಚ್‌ ಪ್ರಾಜೆಕ್ಟ್ ಸಮುದ್ರ’ ಎಂಬ ನೂತನ ಯೋಜನೆ ಅಸ್ತಿತ್ವಕ್ಕೆ ಬಂದಿದೆ.

 

 

  • ‘ಸಮುದ್ರ ಪ್ರಾಜೆಕ್ಟ್’ನ ಪ್ರಧಾನ ಸಂಶೋಧಕರಾಗಿ ಸಿಎಂಎಫ್‌ಆರ್‌ಐನ ಚೆನ್ನೈ ರೀಸರ್ಚ್‌ ಸೆಂಟರ್‌ನ ವಿಜ್ಞಾನಿ ಡಾ.ಶೋಭಾ ಜೋ ಕಿಝಾಕುಡನ್‌ ನೇಮಕಗೊಂಡಿದ್ದಾರೆ.
  • ಸೆಟಲೈಟ್‌ ಆಧಾರಿತ ‘ಸಮುದ್ರ ಮುನ್ಸೂಚನೆ ಮಾದರಿ’ಯನ್ನು ಅಭಿವೃದ್ಧಿಪಡಿಸಿ ಅದರಂತೆ ಕಾರ್ಯಾಚರಣೆ ನಡೆಸುವುದಕ್ಕೆ ಸಮುದ್ರ ಪ್ರಾಜೆಕ್ಟ್ ಆದ್ಯತೆ ನೀಡಲಿದೆ.
  • ಸಿಎಂಎಫ್‌ಆರ್‌ಐ ಅಂದಾಜಿನ ಪ್ರಕಾರ, 2016ರಲ್ಲಿ ಸಮುದ್ರದ ನೀರಿನಲ್ಲಿ 63 ಟನ್‌ಗಳಷ್ಟು ಮೀನುಗಾರಿಕೆ ಮಾಡಲಾಗಿದ್ದು, ಆ ಪಟ್ಟಿಯಲ್ಲಿ ಗುಜರಾತ್‌ ಸತತ ನಾಲ್ಕನೇ ಬಾರಿಗೆ ಮೊದಲ ಸ್ಥಾನ ಗಳಿಸಿದೆ. ತಮಿಳುನಾಡಿಗೆ 2ನೇ ಸ್ಥಾನ.
  • ವಿಸ್ತಾರ ಕರಾವಳಿ ಹೊಂದಿರುವ ಹೊರತಾಗಿಯೂ ಕೇರಳ ಅದೇ ಮೊದಲ ಬಾರಿಗೆ 3ರ ಪಟ್ಟಿಯಿಂದ ಹೊರಬಿದ್ದಿದೆ. 3ನೇ ಸ್ಥಾನ ಕರ್ನಾಟಕಕ್ಕೆ ದಕ್ಕಿದರೆ, ಕೇರಳ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

8. ಬ್ಲೂವೇಲ್ ಗೇಮ್‌ ನಿಷೇಧ ಮಾಡಲು ಸಾಧ್ಯವಿಲ್ಲ: ಕೇಂದ್ರ ಸರಕಾರ

ಪ್ರಮುಖ ಸುದ್ದಿ

  • ಬ್ಲೂವೇಲ್ ಗೇಮ್‌ನಂತಹ ಅತ್ಯಂತ ಅಪಾಯಕಾರಿ ಆನ್‌ಲೈನ್ ಆಟಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಇವು ಆ್ಯಪ್‌ ಆಧಾರಿತ ಗೇಮ್‌ಗಳಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

 

 

ಪ್ರಮುಖ ಸಂಗತಿಗಳು

  • ಬ್ಲೂ ವೇಲ್‌ ಗೇಮ್‌ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಚಾರಣಾ ಪೀಠ, ಈ ಕುರಿತು ಜಾಗೃತಿ ಮೂಡಿಸಲು ಎಲ್ಲ ರಾಜ್ಯ ಸರಕಾರ ಸೂಚನೆ ನೀಡಿದೆ.
  • ಬ್ಲೂವೇಲ್ ಗೇಮ್‌ನಂತಹ ಅತ್ಯಂತ ಅಪಾಯಕಾರಿ ಆನ್‌ಲೈನ್ ಆಟಗಳ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳು ಶಾಲಾ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು, ಈ ಸಂಬಂಧ ಅವು ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೂಡಲೇ ಸೂಚನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
  • ಈ ಸಂಬಂಧ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಚಾರಣಾ ಪೀಠ, ಶಾಲಾ ಮಕ್ಕಳಿಗೆ ಬದುಕಿನ ಸೌಂದರ್ಯದ ಬಗ್ಗೆ ಮನದಟ್ಟಾಗುವಂತೆ ಹೇಳುವುದರ ಜೊತೆಗೆ ಆನ್‌ಲೈನ್ ಆಟಗಳ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದಿದೆ.

9. 20 ವರ್ಷಗಳಲ್ಲಿ ಭೂಮಿ ಹೇಗೆಲ್ಲ ಬದಲಾಗಿದೆ- ಅಮೆರಿಕದ ನಾಸಾ

ಪ್ರಮುಖ ಸುದ್ದಿ

  • ಸಾಗರಗಳು, ಹಿಮಾವೃತ ಧ್ರುವ ಪ್ರದೇಶಗಳು ಸೇರಿದಂತೆ ಇಡೀ ಭೂಮಿಯಲ್ಲಿ ಕಳೆದ 20 ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ತೆರೆದಿಡುವ ವಿಶಿಷ್ಟ ವಿಡಿಯೊವನ್ನು ಅಮೆರಿಕದ ನಾಸಾ ಬಿಡುಗಡೆ ಮಾಡಿದೆ.

ಮುಖ್ಯ ಅಂಶಗಳು

  • 1997ರಲ್ಲಿ ನಾಸಾ ಹಾರಿ ಬಿಟ್ಟ ಸಾಗರ ದರ್ಶಿನಿ ಉಪಗ್ರಹ (ಸೀ ವಿಫ್ಸ್‌) ಕಳೆದ 20 ವರ್ಷಗಳಲ್ಲಿ ತೆಗೆದ ಚಿತ್ರಗಳು, ವಿಡಿಯೊ ಮಾತ್ರವಲ್ಲದೆ ಇತರ ಮಾಹಿತಿಗಳನ್ನು ಒಳಗೊಳಿಸಿ ನೆಲ ಮತ್ತು ಜಲ ಪರಿಸ್ಥಿತಿಯನ್ನು ವಿವರಿಸುವ ವಿಡಿಯೊವನ್ನು ಬಿಡುಗಡೆಗೊಳಿಸಲಾಗಿದೆ. ಕೇವಲ ಐದು ನಿಮಿಷದ ವಿಡಿಯೊದಲ್ಲಿ 20 ವರ್ಷಗಳ ಬದಲಾವಣೆಗಳನ್ನು ಸೂಕ್ಷ್ಮವಾಗಿ ದಾಖಲಿಸಲಾಗಿದೆ.
  • ಉತ್ತರ ಗೋಲಾರ್ಧದಲ್ಲಿ ಹೆಚ್ಚಿದ ಹಸಿರು: ವಿಡಿಯೊ ಪ್ರಕಾರ, ಉತ್ತರ ಗೋಲಾರ್ಧದಲ್ಲಿ ಸಾಗರದ ಮೇಲ್ಮೈಯಲ್ಲಿ ಹಸಿರಿನ ಪ್ರಮಾಣ ಜಾಸ್ತಿಯಾಗಿದ್ದು, ಇಂಗಾಲದ ಡೈ ಆಕ್ಸೈಡನ್ನು ಸೆಳೆದುಕೊಳ್ಳುವ ಬಿಲಿಯಾಂತರ ಸೂಕ್ಷ್ಮ ಸಸ್ಯಗಳು ಬೆಳೆಯುತ್ತಿವೆ.
  • ”ಭೂಮಿ ಪ್ರತಿ ದಿನವೂ ಉಸಿರಾಡುತ್ತಿದೆ. ಪ್ರತಿಯೊಂದು ಋುತುಮಾನದಲ್ಲೂ ಬದಲಾಗುತ್ತಿದೆ. ಸೂರ್ಯನ ಚಲನೆ, ಬದಲಾಗುವ ಗಾಳಿ, ಸಮುದ್ರ ಪ್ರವಾಹ ಮತ್ತು ಉಷ್ಣತಾಮಾನಕ್ಕೆ ಅನುಗುಣವಾಗಿ ವ್ಯತ್ಯಾಸಗಳು ನಡೆಯುತ್ತಿವೆ,” ಎಂದು ಅಮೆರಿಕದಲ್ಲಿರುವ ನಾಸಾದ ಗೊಡ್ಡಾರ್ಡ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಜೀನ್‌ ಕಾರ್ಲ್‌ ಫೆಲ್ಡ್‌ಮ್ಯಾನ್‌ ಹೇಳಿದ್ದಾರೆ.
  • 20 ವರ್ಷಗಳ ದಾಖಲೆಯು ವಿಜ್ಞಾನಿಗಳಿಗೆ ಹಲವು ಅಧ್ಯಯನ ಅವಕಾಶಗಳನ್ನು ಒದಗಿಸಿದೆ. ಸಾಗರದಲ್ಲಿ ಹೆಚ್ಚುತ್ತಿರುವ ಸಸ್ಯಸಂಕುಲ, ಉತ್ತರ ಅಮೆರಿಕ ಭಾಗದ ಆರ್ಕ್‌ಟಿಕ್‌ ಸಾಗರದಲ್ಲಿನ ಬದಲಾವಣೆಗಳು, ಬೆಳೆಗಳ ಫಲವತ್ತತೆ ಸೇರಿದಂತೆ ಹಲವು ವಿಷಯಗಳ ಅಧ್ಯಯನ ಮಾಡಬಹುದಾಗಿದೆ.

ನಾಸಾ ಕಂಡ ಪ್ರಮುಖಾಂಶಗಳು

  • ಆರ್ಕ್‌ಟಿಕ್‌ ಧ್ರುವ ಪ್ರವೇಶದಲ್ಲಿ ಹಸಿರು ಹೆಚ್ಚುತ್ತಿದೆ. ಇದು ಅಲ್ಲಿ ಉಷ್ಣತಾಮಾನ ಏರಿಕೆಯಿಂದ ಮಂಜು ಕರಗುತ್ತಿರುವುದಕ್ಕೆ ನಿದರ್ಶನ.
  • ಐದು ಮಹಾಸಾಗರಗಳಲ್ಲಿ ಆಗುತ್ತಿರುವ ಸಸ್ಯ ಸಂಕುಲದ ಬದಲಾವಣೆ. ಜೈವಿಕ ಮರುಭೂಮಿಗಳ ಸೃಷ್ಟಿಯ ವಿವರ.
  • ಭೂಮಿಯ ವಾತಾವರಣದಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚಳ.
  • ಧ್ರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ನೀಲಿ, ಹಸಿರು, ಕೆಂಪು ಮತ್ತು ತಿಳಿನೇರಳೆ ಬಣ್ಣದ ಸಾಗರ ಮಂಜು ಕರಗಿದ್ದರ ಸೂಚನೆ.

 

 

 

10. ಗ್ಲೋಬಲ್‌ ಕಾನ್ಫರೆನ್ಸ್‌ ಆನ್‌ ಸೈಬರ್‌ ಸ್ಪೇಸ್‌

ಪ್ರಮುಖ ಸುದ್ದಿ

 

  • ಅಂತರ್ಜಾಲವು ವಿವಿಧ ಬಳಕೆದಾರರಿಗೆ ನೀಡುವ ಮುಕ್ತ ಪ್ರವೇಶದ ದುರ್ಬಳಕೆ ಹೆಚ್ಚಾಗುತ್ತಿದ್ದು ಇದರಿಂದಾಗುವ ದುಷ್ಪರಿಣಾಮಗಳನ್ನು ಹತ್ತಿಕ್ಕಲು ವಿಶ್ವದ ನಾನಾ ದೇಶಗಳ ಸೈಬರ್‌ ರಕ್ಷಣಾ ಸಿಬ್ಬಂದಿಯನ್ನು ಅತ್ಯಾಧುನಿಕವಾಗಿ ಸಜ್ಜು ಗೊಳಿಸಬೇಕಿದೆ ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ.

ಮುಖ್ಯ ಅಂಶಗಳು

  • “ಗ್ಲೋಬಲ್‌ ಕಾನ್ಫರೆನ್ಸ್‌ ಆನ್‌ ಸೈಬರ್‌ ಸ್ಪೇಸ್‌’ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಜಿಟಲ್‌ ವಲಯ ಉಗ್ರರ ಆಟದ ಮೈದಾನವಾಗುತ್ತಿದೆ. ಅಂತರ್ಜಾಲದಲ್ಲಿ ಹೆಚ್ಚುತ್ತಿರುವ ವೆಬ್‌ಸೈಟ್‌ ಹ್ಯಾಕಿಂಗ್‌, ವೈರಸ್‌ ಸಹಿತ ನಾನಾ ವಿಧದ ಸೈಬರ್‌ ದಾಳಿಗಳು ಹಾಗೂ ಇಂಟರ್ನೆಟ್‌ ಮೂಲಕ ಭಯೋತ್ಪಾದನೆ, ಮೂಲಭೂತ ವಾದವನ್ನು ಹರಡುತ್ತಿರುವರಿಗೆ ಕಡಿವಾಣ ಹಾಕಬೇಕು.
  • ಸೈಬರ್‌ ಸುರಕ್ಷೆ ಎಂಬುದು ನಮ್ಮ ಇಂದಿನ ಡಿಜಿಟಲ್‌ ಜೀವನದ ಅವಿಭಾಜ್ಯ ಭಾಗವಾಗಬೇಕಿದೆ. ಸೈಬರ್‌ ಕ್ರಿಮಿನಲ್‌ಗ‌ಳು ಇತ್ತೀಚೆಗೆ ಹೆಚ್ಚಿನ ಜಾಣ್ಮೆಯುಳ್ಳ ಕಿರಾತಕ ಬುದ್ಧಿ ತೋರುತ್ತಿದ್ದು, ಇಂಥವರ ಆಟಕ್ಕೆ ಕಡಿವಾಣ ಹಾಕಲು ನಾವು ನಮ್ಮ ಸೈಬರ್‌ ಸೈನಿಕರನ್ನು ಅತ್ಯಂತ ಉಚ್ಛಾಯ ಮಟ್ಟದಲ್ಲಿ ಹುರಿಗೊಳಿಸಬೇಕಿದೆ ಎಂದರು.

 

  • ಡಿಜಿಟಲೀಕರಣದ ಹೆಗ್ಗಳಿಕೆ: ಡಿಜಿಟಲೀಕ ರಣದಿಂದ ಪಾರದರ್ಶಕತೆ ಸಾಧ್ಯ ಎಂದ ಪ್ರಧಾನಿ, ಇದಕ್ಕೆ ಉದಾಹರಣೆಯಾಗಿ, ತಮ್ಮ ಸರಕಾರದ ಜನಧನ ಬ್ಯಾಂಕ್‌ ಖಾತೆಗೆ ಫ‌ಲಾನುಭವಿಗಳ ಮೊಬೈಲ್‌ ಸಂಖ್ಯೆ, ಆಧಾರ್‌ ಜೋಡಿಸುವ ಮೂಲಕ ಸಬ್ಸಿಡಿ ಮೊತ್ತವನ್ನು ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಸುಮಾರು 10 ಬಿಲಿಯನ್‌ ಡಾಲರ್‌ಗಳಷ್ಟು ಸಬ್ಸಿಡಿ ಉಳಿತಾಯವಾಗಿದೆ ಎಂದು ತಿಳಿಸಿದರು.

11. ಉಮಂಗ್‌ (UMANG –Unified Mobile Application for New-age Governance) ಲೋಕಾರ್ಪಣೆ

 

ಪ್ರಮುಖ ಸುದ್ದಿ

  • ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿಸುವ ಸೇವೆಗಳನ್ನು ಉತ್ತಮಗೊಳಿಸುವಲ್ಲಿ ಡಿಜಿಟಲ್‌ ಇಂಡಿಯಾ ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆಯಾಗಿದೆ ಎಂದ ಪ್ರಧಾನಿ ಮೋದಿ ‘ಉಮಂಗ್’ ಆ್ಯಪ್‌ ಬಿಡುಗಡೆ ಮಾಡಿದರು.

ಪ್ರಮುಖ ಸಂಗತಿಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಉಮಂಗ್ (UMANG –Unified Mobile Application for New-age Governance) ಒಂದೇ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ. ಭಾರತದಲ್ಲಿ ಮೊಬೈಲ್‌ ಆಡಳಿತ ಹಾಗೂ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮ ಪ್ರಚುರ ಪಡಿಸುವ ಉದ್ದೇಶದೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಇ–ಆಡಳಿತ ವಿಭಾಗದಿಂದ ಈ ಹೊಸ ಆ್ಯಪ್‌ ಅಭಿವೃದ್ಧಿಯಾಗಿದೆ.
  • ಬಿಲ್‌ ಪಾವತಿ, ಡಿಜಿ ಲಾಕರ್‌, ಆದಾಯ ತೆರಿಗೆ ಸಲ್ಲಿಕೆ, ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಲು, ಪಿಎಫ್‌ ಮಾಹಿತಿ ಹಾಗೂ ಆಧಾರ್‌ ಸಂಪರ್ಕಿತ ಸೇವೆಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇ–ಸೇವೆಗಳನ್ನು ಇದೊಂದೇ ಆ್ಯಪ್‌ನಿಂದ ಪಡೆಯಬಹುದು.
  • ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೂ ಗ್ರಾಹಕರ ಅನುಮಾನಗಳನ್ನು ಬಗೆಹರಿಸಲು ಸಹಾಯವೂ ಸಿಗಲಿದೆ. ಪ್ಲೇ ಸ್ಟೋರ್ ಅಥವಾ ಆ್ಯಪ್‌ ಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • ಮೊಬೈಲ್‌, ಟ್ಯಾಬ್‌ ಅಥವಾ ಕಂಪ್ಯೂಟರ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿದ ನಂತರ ಮೊಬೈಲ್‌ ಸಂಖ್ಯೆ ಮತ್ತು ಪಿನ್‌ ನೀಡಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಲಾಗಿನ್‌ ಆಗಬಹುದು.
  • ಸದ್ಯಕ್ಕೆ 33 ಇಲಾಖೆಗಳ 162 ಸೇವೆಗಳನ್ನು ಮಾತ್ರ ಆ್ಯಪ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.13 ಭಾರತೀಯ ಭಾಷೆಗಳಲ್ಲಿ ಉಮಂಗ್‌ ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ಯುಎಸ್‌ಎಸ್‌ಡಿ ಮೂಲಕ ಅಂತರ್ಜಾಲ ಸೇವೆಯನ್ನಾಗಿಯೂ ಪರಿವರ್ತಿಸಲಾಗುತ್ತದೆ.

ಇತರೆ ವಿಷಯಗಳು OTHRES

 1. ಮಾನುಷಿ ಛಿಲ್ಲರ್ ವಿಶ್ವಸುಂದರಿ-2017

ಪ್ರಮುಖ ಸುದ್ದಿ

  • ಚೀನಾದಲ್ಲಿ ನಡೆದ 2017ರ ವಿಶ್ವಸುಂದರಿ ಸ್ಪರ್ಧೆಯಲ್ಲಿ 108 ಸ್ಪರ್ಧಿಗಳನ್ನು ಹಿಂದಿಕ್ಕಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿ-2017 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೈದ್ಯ ದಂಪತಿಯ ಪುತ್ರಿಯಾದ 21 ವರ್ಷದ ಮಾನುಷಿ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದರು.

 

  • 2016ರ ವಿಶ್ವ ಸುಂದರಿ ಸ್ಟೇಫಾನಿ ಡೆಲ್ ವ್ಯಾಲೆ ಮಾನುಷಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು.
  • 16 ವರ್ಷದ ಬಳಿಕ ವಿಶ್ವಸುಂದರಿ ಕಿರೀಟ ಧರಿಸಿದ 6ನೇ ಮಹಿಳೆಯಾಗಿ ಮಾನುಷಿ ಹೊಮ್ಮಿದ್ದಾರೆ.
  • 2000ದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಈ ಕೀರ್ತಿಗೆ ಪಾತ್ರರಾಗಿದ್ದರು.
  • 2017ರ ಜೂನ್ 25ರಂದು ಫೆಮಿನಾ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಮಾನುಷಿ ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಅವರಿಗೆ ‘ಮಿಸ್ ಫೋಟೋಜೆನಿಕ್’ ಕಿರೀಟ ದಕ್ಕಿದ್ದರ ಜತೆಗೆ ಸ್ಪರ್ಧೆಯಲ್ಲೂ ಗೆಲುವಿನ ನಗೆ ಬೀರಿದರು.

 

ಮಿಸ್​ವರ್ಲ್ಡ್ ಗೆದ್ದ ಭಾರತ ನಾರಿಯರು

  • 1966 – ರೀತಾ ಫರಿಯಾ

 

  • 1994 – ಐಶ್ವರ್ಯಾ ರೈ

 

  • 1997 – ಡಯಾನಾ ಹೇಡನ್

 

  • 1999 – ಯುಕ್ತಾ ಮುಖಿ

 

  • 2000 – ಪ್ರಿಯಾಂಕಾ ಚೋಪ್ರಾ

 

  • 2017 – ಮಾನುಷಿ ಛಿಲ್ಲರ್

 

2. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ

ಪ್ರಮುಖ ಸುದ್ದಿ

  • ಹೆಚ್ಚೂಕಡಿಮೆ ಮೂರೂವರೆ ದಶಕಗಳ ಕಾಲ ಜಿಂಬಾಬ್ವೆಯ ಸರ್ವಾಧಿಕಾರಿಯಾಗಿ ಮೆರೆದ 93 ವರ್ಷ ಪ್ರಾಯದ ರಾಬರ್ಟ್‌ ಮೊಗಾಬೆ ಕೊನೆಗೂ ಅಧಿಕಾರ ತೊರೆದಿದ್ದಾರೆ.

ಮುಖ್ಯ ಸಂಗತಿಗಳು

  • ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವಂತೆ ಕಳೆದೊಂದು ವಾರದಿಂದ ನಿರಂತರವಾಗಿ ಕೇಳಿಬರುತ್ತಿದ್ದ ಒತ್ತಡಗಳಿಗೆ ಕೊನೆಗೂ ಮುಗಾಬೆ ಮಣಿದಿದ್ದಾರೆ. ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ.
  • ಕಳೆದ ವಾರ ಸೇನೆ ಅಧಿಕಾರ ವಹಿಸಿಕೊಂಡಂದಿನಿಂದ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು. ಆದರೂ, ಅಧ್ಯಕ್ಷ ಪಟ್ಟ ತೊರೆಯಲು ಅವರು ಸಿದ್ಧರಿರಲಿಲ್ಲ.
  • ತಮ್ಮದೇ ಪಕ್ಷ ‘ಝಾನು-ಪಿಎಫ್‌’ ಕೋರಿಕೆಗೂ ಮುಗಾಬೆ ಮನ್ನಣೆ ನೀಡಿರಲಿಲ್ಲ. ಹೀಗಾಗಿ ಕಳೆದೆರಡು ದಿನಗಳಿಂದ ಅವರನ್ನು ಪಕ್ಷ ಹಾಗೂ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸುವುದಕ್ಕೆ ತಯಾರಿ ನಡೆದಿದ್ದವು. ಇದನ್ನರಿತ ಸರ್ವಾಧಿಕಾರಿ ಇದೀಗ ತಾವಾಗಿಯೇ ಅಧ್ಯಕ್ಷ ಸ್ಥಾನ ತೊರೆದಿದ್ದಾರೆ.
  • ತಮ್ಮ ಭದ್ರತೆ ಬಗ್ಗೆ ಹಾಗೂ ತಮ್ಮನ್ನು ಬಂಧಿಸುವುದಿಲ್ಲ ಎಂದು ಖಾತರಿ ನೀಡಿದ್ದೇ ಆದಲ್ಲಿ ತಾವು ಜಿಂಬಾಬ್ವೆಗೆ ಮರಳುವುದಾಗಿ ಸದ್ಯ ವಿದೇಶದಲ್ಲಿ ನೆಲೆ ಕಂಡುಕೊಂಡಿರುವ ಮಂಗಾಗ್ವ ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ಅಧ್ಯಕ್ಷ ಮುಗಾಬೆ ಅವರಿಂದ ಉಚ್ಚಾಟಿಸಲ್ಪಟ್ಟಿದ್ದರಿಂದ ಮಂಗಾಗ್ವ ದೇಶ ತೊರೆದಿದ್ದರು.

3.  ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲಟ್‌ ನೇಮಕ

ಪ್ರಮುಖ ಸುದ್ದಿ

  • ಭಾರತೀಯ ನೌಕಾಪಡೆಯ ಶಸ್ತ್ರಾಸ್ತ್ರ ಪರಿಶೀಲನಾ ವಿಭಾಗಕ್ಕೆ ಮಹಿಳಾ ಪೈಲಟ್‌ಗಳನ್ನು ನೇಮಿಸಲಾಗಿದೆ.

 

  • ನೌಕಾಪಡೆಗೆ ಇದು ಐತಿಹಾಸಿಕ ವಿಷಯ. ಇದೇ ಮೊದಲ ಬಾರಿಗೆ ಮಹಿಳೆಯರನ್ನು ಪೈಲಟ್‌ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
  • ಮಹಿಳಾ ನೌಕಾ ಪೈಲಟ್‌ ಹಾಗೂ ಅಧಿಕಾರಿಗಳ ಹುದ್ದೆಗೆ ಮೂವರು ಮಹಿಳೆಯರನ್ನು ನೇಮಕ ಮಾಡಿ ರಕ್ಷಣಾ ಇಲಾಖೆ ಆದೇರ ಹೊರಡಿಸಿದೆ.
  • ಉತ್ತರ ಪ್ರದೇಶದ ಬರೇಲಿ ಮೂಲದ ಶುಭಾಂಗಿ ಸ್ವರೂಪ್‌ ಮೊದಲ ಮಹಿಳಾ ಪೈಲಟ್‌ ಆಗಿದ್ದಾರೆ. ಹೊಸದಿಲ್ಲಿಯ ಆಸ್ತಾ ಸೆಹಗಲ್‌, ಪುದುಚೇರಿಯ ರೂಪಾ ಎ. ಕೇರಳದ ಶಕ್ತಿ ಮಾಯಾ ನೇಮಕಗೊಂಡಿರುವವರು.

4. ದೇಶದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿ

ಪ್ರಮುಖ ಸುದ್ದಿ

  • 19ನೇ ಶತಮಾನದಲ್ಲಿ ಬ್ರಿಟೀಷರ ಮತ್ತು ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ ಹಾಗೂ ಅಂದಿನ ಕಾಲದಲ್ಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಿಗಿಸಿಕೊಂಡು ಬಡವರ ಪರ ನಿಂತಿದ್ದ ಡಾ.ರುಕ್ಮಾಬಾಯಿಗೆ ಗೂಗಲ್‌ ಡೂಡಲ್‌ ಶುಭಾಶಯ ಕೋರಿದೆ.

 

ರುಕ್ಮಾಬಾಯಿ ಬಗ್ಗೆ

  • ಹಿರಿಯರು 11ನೇ ವಯಸ್ಸಿಗೆ ಮದುವೆ ಮಾಡಿಸಿದ ಬಳಿಕ, ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆ ಈ ರುಖ್ಮಾಬಾಯಿ, ನುರಿತ ವೈದ್ಯೆ ಮತ್ತು ತಮ್ಮ ರೋಗಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ವೈದ್ಯೆಯಾಗಿದ್ದಾರೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.
  • ಆದರೆ ಇದಕ್ಕೂ ಮಿಗಿಲಾಗಿ 11ನೇ ವಯಸ್ಸಿಗೆ ತನ್ನಿಚ್ಛೆಗೆ ವಿರುದ್ಧವಾಗಿ ಪೋಷಕರು ಮದುವೆ ಮಾಡಿದರೂ ಆತನೊಂದಿಗೆ ಬದುಕಲು ಇಷ್ಟವಿರದೇ ರುಕ್ಮಾಬಾಯಿ ಅಂದಿನ ಕಾಲದಲ್ಲಿಯೇ ಪುರುಷ ಪ್ರಧಾನ ಸಮಾಜದ ವಿರುದ್ಧ ಸಿಡಿದೆದ್ದು, ತನ್ನಿಷ್ಟದಂತೆ ಬದುಕುತ್ತೇನೆ ಎಂದು ಸಾಧಿಸಿದ ಮಹಿಳೆ.
  • 1975ರ ವೇಳೆ ದಾದಾಜಿ ಭಿಕಾಜಿಯೊಂದಿಗೆ ರುಕ್ಮಾಬಾಯಿಗೆ ಪೋಷಕರು ಮದುವೆ ಮಾಡಿದರು. ಇದಾದ ಬಳಿಕ ಇವರು ತಮ್ಮ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ವಾಸಿಸುತ್ತಿದ್ದರು. ಇವರ ತಾಯಿ ಡಾ. ಸುಖರಾಮ್‌ ಅರ್ಜುನ್‌ ಎಂಬವರೊಂದಿಗೆ ಮರುಮದುವೆ ಮಾಡಿಕೊಂಡರೂ ರುಖ್ಮಾಬಾಯಿ ಮಾತ್ರ ತಾಯಿಯೊಂದಿಗೇ ನಿಂತು ವಿದ್ಯಾಭ್ಯಾಸ ಮುಂದುವರಿಸುತ್ತಿದ್ದರು.
  • ಆದರೆ ಅವರ ಗಂಡ ದಾದಾಜಿಗೆ ಇದು ಹಿಡಿಸಲಿಲ್ಲ, ಮನೆಗೆ ಬಂದು ತನ್ನೊಂದಿಗೆ ಜೀವನ ಮಾಡು ಎಂದು ಆಗ್ರಹಿಸಿದ ದಾದಾಜಿ ವಿರುದ್ಧವೇ ನಿಂತರು. ಹೀಗಾಗಿ ದಾದಾಜಿ ನ್ಯಾಯಾಲಯದ ಮೆಟ್ಟಿಲೇರಿದ್ದ. ಆದರೆ ಇದಕ್ಕೆ ರುಕ್ಮಾಬಾಯಿ ಮಾತ್ರಾ ಬಗ್ಗಲಿಲ್ಲ. ಯಾರೇ ಹೆಣ್ಣು ಮಕ್ಕಳಿಗೆ ತನಗಿಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಜೀವಿಸುವ ಹಕ್ಕು ಇಲ್ಲ, ಅಲ್ಲದೇ ಇವರನ್ನು ತಡೆಯುವ ಹಕ್ಕೂ ಯಾರಿಗೂ ಇಲ್ಲ ಎಂದು ವಾದಿಸಿದರು. ರುಕ್ಮಾಬಾಯಿಗೆ ಅವರ ಮಲತಂದೆ ಕೂಡಾ ಬೆಂಬಲ ನೀಡಿದ್ದರು.
  • ಸುಮಾರು ಮೂರು ವರ್ಷಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ತೀರ್ಪನ್ನು ದಾದಾಜಿ ಪರ ನೀಡಿತ್ತು. ಒಂದು ವೇಳೆ ಇದನ್ನು ಪಾಲಿಸದಿದ್ದರೆ ಜೈಲು ಸೇರಬೇಕಾಗುತ್ತದೆ ಎಂದು ಆದೇಶಿಸಿತ್ತು. ಆದರೆ ಇದ್ಯಾವುದಕ್ಕೂ ಹೆದರದ ರುಕ್ಮಾಬಾಯಿ ಜೈಲು ಸೇರುತ್ತೇನೆ ಆದರೆ ಗಂಡನ ಮನೆಗೆ ತೆರಳುವುದಿಲ್ಲ ಎಂದು ಹೇಳಿದರು. ಈ ಪ್ರಕರಣ ಅದಾಗಲೇ ರಾಷ್ಟ್ರಾದ್ಯಂತ ಹಬ್ಬಿತ್ತು, ಕೇವಲ ಭಾರತ ಮಾತ್ರವಲ್ಲದೇ ಈ ಪ್ರಕರಣ ಇಂಗ್ಲೆಂಡ್‌ಗೂ ಹಬ್ಬಿತ್ತು.
  • ಹೀಗಾಗಿ ರಾಣಿ ವಿಕ್ಟೋರಿಯಾ ಸ್ವತಃ ಈ ಪ್ರಕರಣದ ವಿಚಾರಣೆಗೆ ಮುಂದಾಗಿ ಅಂತಿಮವಾಗಿ ನ್ಯಾಯಾಲಯದ ತೀರ್ಪನ್ನೇ ಬದಲಾಯಸಿದರು. ಅಲ್ಲದೇ ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ1891 ’ (Age of Consent Act) ಕೂಡಾ ಜಾರಿಗೆ ತಂದರು.

 

5. 48ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಪ್ರಮುಖ ಸುದ್ದಿ

  • ಗೋವಾ ರಾಜಧಾನಿ ಪಣಜಿ ಯ ಬ್ಯಾಂಬೋಲಿಮ್‌ನಲ್ಲಿರುವ ಡಾ.ಶ್ಯಾಮ ಪ್ರಸಾದ್‌ ಮುಖರ್ಜಿ ಸ್ಟೇಡಿಯಮ್‌ನಲ್ಲಿ ಸೋಮವಾರ ಭಾರತೀಯ 48ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ದೊರೆತಿದೆ .
  • ಪ್ರತಿಷ್ಠಿತ ಸಮಾರಂಭದಲ್ಲಿ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರಿಗೆ ವರ್ಷದ ‘ಇಂಡಿಯನ್‌ ಫಿಲ್ಮ್‌ ಪರ್ಸನ್ಯಾಲಿಟಿ’ ಪ್ರಶಸ್ತಿ ಹಾಗೂ ಕೆನಡಾ ದೇಶದ ನಿರ್ದೇಶಕ ಆಟಂ ಇಗೊಯಾನ್‌ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
  • ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ 48ನೇ ಆವೃತ್ತಿಯು ‘ಜೇಮ್ಸ್‌ ಬಾಂಡ್‌’ನ 50ನೇ ವರ್ಷಾಚರಣೆಗೆ ವೇದಿಕೆಯಾಗಲಿದ್ದು, ದಿಗ್ಗಜ ಬ್ರಿಟಿಷ್‌ ಪತ್ತೆದಾರನಿಗೆ ವಿಶೇಷ ವಿಭಾಗ ಮೀಸಲಿಡಲಾಗಿದೆ ಎಂದು ಚಿತ್ರೋತ್ಸವದ ನಿರ್ದೇಶಕ ಸುನಿತ್‌ ಟಂಡನ್‌ ತಿಳಿಸಿದ್ದಾರೆ.
  • ಜೇಮ್ಸ್‌ ಬಾಂಡ್‌ಗೆ ಸೇರಿದ 9 ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

 

 

 

Share