ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ
ಆದಾಯ ತೆರಿಗೆಗೆ ಹೊಸ ಕಾನೂನು-ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ
(New direct tax law coming)
SOURCE-THE HINDU http://www.thehindu.com/business/new-direct-tax-law-coming/article20664346.ece
ಸನ್ನಿವೇಶ
- ಪ್ರಸ್ತುತ ಜಾರಿಯಲ್ಲಿರುವ 50 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ, ಹೊಸ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಹೊಸ ಕಾಯ್ದೆ ಜಾರಿಗೆ ತರಲು ಕರಡು ರೂಪಿಸಲು ಸಮಿತಿಯೊಂದನ್ನು ರಚಿಸಲಾಗಿದೆ.
- ಈ ಸಮಿತಿ 6 ತಿಂಗಳ ಒಳಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಸಮಿತಿಗೆ ಕೇಂದ್ರ ನೇರ ತೆರಿಗೆ ಮಂಡಳಿ ಸದಸ್ಯ ಅರಬಿಂದ್ ಮೋದಿ ಸಂಚಾಲಕರಾಗಿದ್ದಾರೆ.
ಕಾರಣವೇನು?
- 2009 ರಲ್ಲಿ ಯು.ಪಿ.ಎ. ಸರ್ಕಾರ ನೇರ ತೆರಿಗೆ ಬದಲಾವಣೆಗೆ ಮುಂದಾಗಿ ನಿಯಮಗಳನ್ನು ಸರಳಗೊಳಿಸಲು ಮುಂದಾಗಿತ್ತಾದರೂ, ಕಾರಣಾಂತರದಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರಸ್ತುತ ಆದಾಯ ತೆರಿಗೆ ಮಿತಿ 5 ಲಕ್ಷ ರೂ. ಇದೆ.
- ಒಂದು ದೇಶ-ಒಂದು ತೆರಿಗೆ ಎಂಬ ಧ್ಯೇಯ ಘೋಷದೊಂದಿಗೆ ಜಾರಿಯಾಗಿ ರುವ ಜಿಎಸ್‌ಟಿ ತೆರಿಗೆ ತಾರತಮ್ಯವನ್ನು ನಿವಾರಿಸುವಲ್ಲಿ ಮಹತ್ವದ ಹೆಜ್ಜೆ. ಜಿಎಸ್‌ಟಿಯಡಿಯಲ್ಲೂ ಕೆಲವು ತೆರಿಗೆ ತಾರತಮ್ಯಗಳಿದ್ದರೂ ಕ್ರಮೇಣ ಇವುಗಳು ನಿವಾರಣೆಯಾಗುವ ನಿರೀಕ್ಷೆಯಿದೆ.
- ಜಿಎಸ್‌ಟಿ ಮತ್ತು ನೋಟು ರದ್ದು ಕ್ರಮಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳಾಗಿರುವುದು ಈಗಾಗಲೇ ಅನುಭವಕ್ಕೆ ಬರತೊಡಗಿದೆ. ಕಪ್ಪುಹಣದ ಸೃಷ್ಟಿ ಮತ್ತು ಹರಿವು ಕಡಿಮೆ ಯಾಗಿದೆ ಹಾಗೂ ತೆರಿಗೆ ಪ್ರಾಮಾಣಿಕತೆಯಲ್ಲಿ ಪ್ರಾಮಾಣಿಕತೆ ಬರುತ್ತಿದೆ.
- ಹೀಗೆ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯ ಜಾರಿಯಿಂದ ಪ್ರಾರಂಭವಾಗಿರುವ ಸುಧಾರಣಾ ಪ್ರಕ್ರಿಯೆಯನ್ನು ಆದಾಯ ತೆರಿಗೆಯತ್ತ ವಿಸ್ತರಿಸುವ ಇರಾದೆ ಸರಕಾರಕ್ಕಿದೆ. ಇದಕ್ಕಾಗಿ ಆದಾಯ ತೆರಿಗೆಗೆ ಸಂಬಂಧಿಸಿ ಹೊಸ ಕಾಯಿದೆ ರಚಿಸುವ ಚಿಂತನೆ ನಡೆಸುತ್ತಿದೆ.
- ಇದರ ಮೊದಲ ಹೆಜ್ಜೆಯಾಗಿ ಈ ಕಾಯಿದೆಯ ಸ್ವರೂಪವನ್ನು ನಿರ್ಧರಿಸುವ ಸಲುವಾಗಿ ಆರು ಮಂದಿ ಸದಸ್ಯರನ್ನು ಹೊಂದಿರುವ ಕಾರ್ಯಪಡೆಯನ್ನು ರಚಿಸಲಾಗಿದೆ. ಮತ್ತು 6 ತಿಂಗಳೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ .
ಆದಾಯ ತೆರಿಗೆ ಎಂದರೇನು ?
- ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಗಳಿಸುವ ಆದಾಯದಲ್ಲಿ ಶೇಖಡಾವಾರು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕು. ಇದನ್ನು ಆದಾಯ ತೆರಿಗೆ ಎನ್ನುತ್ತಾರೆ.
- ಈ ಕರವು ಭಾರತೀಯ ಆದಾಯ ತೆರಿಗೆ, 1961ರ ಪ್ರಕಾರ ಇದು ನಿಯಂತ್ರಣಕ್ಕೊಳಪಟ್ಟಿರುತ್ತದೆ. ಭಾರತೀಯ ಆದಾಯ ತೆರಿಗೆ ಇಲಾಖೆಯು ಕೇಂದ್ರೀಯ ನೇರ ತೆರಿಗೆ ಸಮಿತಿಯ (CBDT) ನಿಯಂತ್ರಣಕ್ಕೊಳಪಟ್ಟಿರುತ್ತದೆ. ಅಲ್ಲದೆ ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ಇಲಾಖೆಯ ಅಧೀನದಲ್ಲಿ ಬರುತ್ತದೆ.
- ವ್ಯಕ್ತಿ ಅಥವಾ ಸಂಸ್ಥೆ ಗಳಿಸಿದ ಆದಾಯದಲ್ಲಿ ನಿಗಧಿಪಡಿಸಿದ ಶೇಖಡಾವಾರು ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಇದನ್ನು ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ವರ್ಷದ ಜುಲೈನಲ್ಲಿ ಮಾಡಬೇಕಾಗುತ್ತದೆ.
- ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಗಳಿಸಿದ ಆದಾಯವನ್ನು ಆದಾಯ ತೆರಿಗೆ ಲೆಕ್ಕ (ಕ್ಯಾಲ್ಯುಕ್ಲೇಟಿಂಗ್ ಇನ್ಕಮ್ ಟ್ಯಾಕ್ಸ್) ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಏಪ್ರಿಲ್ 1, 2015 ರಿಂದ ಮಾರ್ಚ್ 31, 2016 ಒಂದು ಆರ್ಥಿಕ ವರ್ಷ(ಫೈನಾನ್ಷಿಯಲ್ ಇಯರ್), ಇದನ್ನು ಪ್ರೀವಿಯಸ್ ಇಯರ್ ಅಂತಲೂ ಕರೆಯುತ್ತಾರೆ.
- ಮೇಲೆ ತಿಳಿಸಿರುವಂತೆ ಪ್ರೀವಿಯಸ್ ಇಯರ್ ನಂತರ ಬರುವ 12 ತಿಂಗಳುಗಳನ್ನು ಅಸ್ಸೆಸ್ಮೆಂಟ್ ಇಯರ್(ಮೌಲ್ಯಮಾಪನ ವರ್ಷ) ಎಂದು ಕರೆಯುತ್ತಾರೆ. ಈ ಕಾಲಾವಧಿಯಲ್ಲಿ ಹಿಂದಿನ ವರ್ಷದ ಆದಾಯ ತೆರಿಗೆಯನ್ನು ಪಾವತಿಸಬೇಕಿರುತ್ತದೆ.
1961 ರ ಆದಾಯ ತೆರಿಗೆ ಕಾಯಿದೆಯಲ್ಲೇನಿದೆ ?
- 1961 ರ ಆದಾಯ ತೆರಿಗೆ ಕಾಯ್ದೆಯು ಭಾರತದಲ್ಲಿ ಆದಾಯ ತೆರಿಗೆಯ ದಂಡಮಾನಗಳನ್ನು ನಿರ್ಧರಿಸುವ / ವಿಧಿಸುವ ಕಾಯಿದೆ. ಇದು ಲೆವಿ, ಆಡಳಿತ, ಆದಾಯ ತೆರಿಗೆ ಸಂಗ್ರಹ ಮತ್ತು ಮರುಪಾವತಿಯನ್ನು ಒದಗಿಸುತ್ತದೆ.
- ಭಾರತ ಸರ್ಕಾರವು 1961 ಆದಾಯ ತೆರಿಗೆ ಕಾಯಿದೆ,ಮತ್ತು 1957 ರ ವೆಲ್ತ್ ಟ್ಯಾಕ್ಸ್ ಕಾಯಿದೆಯ ಬದಲಿಗೆ “ನೇರ ತೆರಿಗೆಗಳ ಸ೦ಕೇತ” ಎಂಬ ಕರಡು ಶಾಸನವನ್ನು ತಂದಿತು.
- ಆದಾಯ ತೆರಿಗೆ ಕಾಯ್ದೆಯನ್ನು 1961 ರಲ್ಲಿ ಜಾರಿಗೆ ತರಲಾಯಿತು ಮತ್ತು ತೆರಿಗೆಗೆ ಸಂಬಂಧಿಸಿದ ಕಾನೂನು ಎಲ್ಲವನ್ನೂ ಪಟ್ಟಿ ಮಾಡಲಾಗಿದೆ . ಇದರಲ್ಲಿ ಲೆವಿ, ಸಂಗ್ರಹಣೆ, ಆಡಳಿತ ಮತ್ತು ಆದಾಯ ತೆರಿಗೆಯನ್ನು ಮರುಪಡೆಯುವುದು ಹೇಗೆ ಎಲ್ಲವನ್ನು ಒಳಗೊಂಡಿದೆ
- ಈ ಕಾಯಿದೆ ಎಷ್ಟು ಜಟಿಲವಾಗಿದೆ ಎಂದರೆ ಸಿಎಗಳ ನೆರವಿಲ್ಲದೆ ಇದರ ಒಂದು ವಾಕ್ಯವನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗು ವುದಿಲ್ಲ. ಹೀಗಾಗಿ ಜನರು ಆದಾಯ ತೆರಿಗೆ ಕಟ್ಟುವುದಕ್ಕಿಂತ ಕಟ್ಟದೆ ಇರುವುದಕ್ಕೆ ಇರುವ ಮಾರ್ಗಗಳನ್ನು ಹುಡುಕುತ್ತಾರೆ.
- ಕೃಷಿ ಹೊರತುಪಡಿಸಿ ಮಿಕ್ಕೆಲ್ಲ ಮೂಲಗಳಿಂದ ಬರುವ ಆದಾಯಕ್ಕೆ ತೆರಿಗೆ ಪಾವತಿಸಬೇಕೆನ್ನುವುದು ನಿಯಮ. ಆದರೆ 125 ಕೋಟಿ ಜನರಲ್ಲಿ ಆದಾಯ ತೆರಿಗೆ ಪಾವತಿಸುವವರು ಇರುವುದು ಬರೀ 26 ಕೋಟಿ. ಅಂದರೆ ಜನಸಂಖ್ಯೆಯ ಶೇ. 1.5 ಮಂದಿ ಮಾತ್ರ. ಇಷ್ಟು ಮಂದಿಯಾದರೂ ತೆರಿಗೆ ವ್ಯಾಪ್ತಿಗೆ ಬಂದಿರುವುದು ನೋಟು ರದ್ದು ಕ್ರಮದ ಬಳಿಕ.
- ಇದಕ್ಕೂ ಮೊದಲು ತೆರಿಗೆ ಪಾವತಿಸುವವರ ಸಂಖ್ಯೆ ಬರೀ 4 ಕೋಟಿಯಷ್ಟಿತ್ತು. ಆದರೂ ಆದಾಯ ತೆರಿಗೆ ಸರಕಾರದ ವರಮಾನದ ಮೂರನೇ ಮುಖ್ಯ ಮೂಲ. ಪ್ರಸ್ತುತ ವಾರ್ಷಿಕ ಆದಾಯಕ್ಕನುಗುಣವಾಗಿ ಶೇ. 5, ಶೇ. 20 ಮತ್ತು ಶೇ. 30 ಸ್ಲಾಬ್‌ನಲ್ಲಿ ತೆರಿಗೆ ವಸೂಲು ಮಾಡಲಾಗುತ್ತದೆ.
- ಪ್ರತಿ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎನ್ನುವುದೇ ಕುತೂಹಲದ ಅಂಶವಾಗಿರುತ್ತದೆಯೇ. ಬಹುತೇಕ ನೌಕರಶಾಹಿ ಶೇ. 5ರ ಸ್ಲಾಬ್‌ನಲ್ಲಿ ಬರುವುದರಿಂದ ಸರಕಾರಕ್ಕೆ ಅವರ ಮತಗಳನ್ನು ಸೆಳೆಯಲು ಇದೂ ಒಂದು ದಾರಿಯಾಗಿದೆ.
- ಬಜೆಟ್‌ನಲ್ಲಿ ಆದಾಯ ಮಿತಿಯನ್ನು ಹೆಚ್ಚಿಸುತ್ತಾ ಹೋಗಿ ಹೆಚ್ಚೆಚ್ಚು ಮಂದಿಯನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಖುಷಿಪಡಿಸುವ ಪರಂಪರೆಯನ್ನು ಬಹುತೇಕ ಎಲ್ಲ ಸರಕಾರಗಳು ಪಾಲಿಸಿಕೊಂಡು ಬಂದಿವೆ. ಹೊಸ ಕಾಯಿದೆಯಲ್ಲಿ ಇಂತಹ ತಕ್ಷಣದ ಲಾಭದ ಆಸೆಗೆ ವರಾಮ ನೀಡುವ ಅಂಶಗಳಿರಬೇಕು.
ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಕೋಡ್ ಎಂದರೇನು?
- ಭಾರತದಲ್ಲಿ ನೇರ ತೆರಿಗೆ ಕಾನೂನುಗಳ ರಚನೆಯನ್ನು ಸರಳೀಕರಿಸುವುದು, ಪರಿಷ್ಕರಿಸುವುದು ಮತ್ತು ಏಕೀಕರಣ ಮಾಡುವುದು ಇದರ ಮುಖ್ಯ ಗುರಿಯಾಗಿದೆ. ಐದು ದಶಕಗಳ ಹಳೆಯ ಆದಾಯ ತೆರಿಗೆ ಕಾಯಿದೆಯ ಬದಲಿಗೆ ನೇರ ತೆರಿಗೆ ಸಂಹಿತೆಯನ್ನು ರಚಿಸಲಾಗಿದೆ.
- ಇದು ಆರಂಭದಲ್ಲಿ 319 ವಿಭಾಗಗಳು(sections) ಮತ್ತು 22 ವಿವರ ಪಟ್ಟಿಯನ್ನು(schedules) ಹೊಂದಿತ್ತು, ಹಾಗು ಪ್ರಸ್ತುತ ಐಟಿ ಕಾಯ್ದೆ 298 ವಿಭಾಗಗಳು ಮತ್ತು 14 ವಿವರ ಪಟ್ಟಿಯನ್ನು ಹೊಂದಿದೆ.
- ಅಕ್ಟೋಬರ್, 2017 ರವರೆಗೆ ನೇರ ತೆರಿಗೆ ಸಂಗ್ರಹಣೆಯ ತಾತ್ಕಾಲಿಕ ಅಂಕಿ ಅಂಶಗಳು ಹೇಳುವಂತೆ ನಿವ್ವಳ ತೆರಿಗೆ ಸಂಗ್ರಹ ರೂ. 39 ಲಕ್ಷ ಕೋಟಿ ರೂ. ಆಗಿದ್ದು ಇದು ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಶೇ. 15.2 ರಷ್ಟು ಹೆಚ್ಚಾಗಿದೆ.
- ನಿವ್ವಳ ನೇರ ತೆರಿಗೆ ಸಂಗ್ರಹಣೆ ಒಟ್ಟು 2017-18ರ ಹಣಕಾಸು ವರ್ಷದ ಬಜೆಟ್ ಅಂದಾಜಿನ 8 ಪ್ರತಿಶತವನ್ನು ಹೊಂದಿದೆ (9.8 ಲಕ್ಷ ಕೋಟಿ ರೂ.) ಮರುಪಾವತಿಗಾಗಿ ತೆಗೆದಿರಿಸಲ್ಪಡುವ ಮೊತ್ತಕ್ಕೆ ಮೊದಲು ಸಮಗ್ರ ಸಂಗ್ರಹಣೆ ಶೇ. 10.7 ರಷ್ಟು ಹೆಚ್ಚಾಗಿದೆ. 2017 ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಒಟ್ಟು 5.28 ಲಕ್ಷ ಕೋಟಿ ರೂ.ಸಂಗ್ರಹವಾಗಿದೆ .
ಹೊಸ ಕಾನೂನನ್ನು ರೂಪಿಸಲು ತೆಗೆದುಕೊಂಡಿರುವ ಹಂತಗಳು ಯಾವುವು?
- ಕಾಯಿದೆಯನ್ನು ಪರಿಶೀಲಿಸಲು ಮತ್ತು ದೇಶದ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಹೊಸ ನೇರ ತೆರಿಗೆ ಕಾನೂನು ಕರಡುಗೊಳಿಸಲು, ಸರ್ಕಾರವು ಕಾರ್ಯಪಡೆಯನ್ನು(ಸಮಿತಿ ) ರಚಿಸಿದೆ
- ಅಂತಾರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳನ್ನು ಸಂಯೋಜಿಸುವುದು ಮತ್ತು ದೇಶದ ಆರ್ಥಿಕ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು . ಇತರ ರಾಷ್ಟ್ರಗಳಲ್ಲಿ ತೆರಿಗೆ ಕಾನೂನುಗಳು ಅನುಗುಣವಾಗಿ ನೇರ ತೆರಿಗೆ ಕಾನೂನುಗಳನ್ನು ಕಾರ್ಯಪಡೆಯು ಸೂಚಿಸುತ್ತದೆ
- ಈ ಕ್ರಮವು ನೇರ ತೆರಿಗೆ ಆದಾಯ ಮತ್ತು ಸಾಂಸ್ಥಿಕ ವನ್ನು ಸರಳವಾಗಿಸುವ ಗುರಿಯನ್ನು ಹೊಂದಿದೆ.
- ಕಾರ್ಯಪಡೆಯು ತನ್ನ ವರದಿಯನ್ನು ಆರು ತಿಂಗಳುಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ.
ಅಸ್ತಿತ್ವದಲ್ಲಿರುವ ಕಾನೂನನ್ನು ಬದಲಾಯಿಸುವ ಅಗತ್ಯವಿದೆಯೇ?
- ಪ್ರಸ್ತುತ ನಾವು ಆದಾಯ ತೆರಿಗೆ ಪಾವತಿಸುತ್ತಿರುವುದು 1961ರಲ್ಲಿ ರಚನೆಯಾಗಿರುವ ಕಾಯಿದೆಯಡಿಯಲ್ಲಿ. ಕಾಲಕಾಲಕ್ಕೆ ಈ ಕಾಯಿದೆಗೆ ಸಾಕಷ್ಟು ತಿದ್ದುಪಡಿಗಳಾಗಿದ್ದರೂ ಮೂಲ ಸ್ವರೂಪ ಮಾತ್ರ ಅದೇ ರೀತಿ ಇದೆ.
- ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಮತ್ತು ಸ್ವರೂಪ ಈಗ ಬದಲಾಗಿದೆ. ಹೊಸ ರೀತಿಯ ಆದಾಯ ವರ್ಗವೊಂದು ಸೃಷ್ಟಿಯಾಗಿದೆ ಹಾಗೂ ಮಧ್ಯಮ ವರ್ಗದ ಪರಿಕಲ್ಪನೆ ಬದಲಾಗಿದೆ. ಈ ಹೊಸ ಅರ್ಥ ವ್ಯವಸ್ಥೆಗೆ ಹಳೇ ಕಾಯಿದೆ ಸರಿಹೊಂದುತ್ತಿಲ್ಲ ಎನ್ನುವ ದೂರು ಬಹಳ ಸಮಯದಿಂದ ಕೇಳಿ ಬರುತ್ತಿದೆ.
- ಹಿಂದಿನ ಸರಕಾರಗಳು ಕೂಡ ಆದಾಯ ತೆರಿಗೆ ಕಾಯಿದೆಯನ್ನುಬದಲಾಯಿಸಲು ಪ್ರಯತ್ನಗಳನ್ನು ಮಾಡಿದ್ದರೂ ಅದರಲ್ಲಿ ಯಶಸ್ವಿಯಾಗಿರಲಿಲ್ಲ.
- ಈಗಿರುವ ಆದಾಯ ತೆರಿಗೆ ಕಾಯಿದೆ ತೆರಿಗೆ ಕಟ್ಟುವುದಕ್ಕಿಂತಲೂ ತೆರಿಗೆ ತಪ್ಪಿಸುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಉತ್ಪ್ರೇಕ್ಷಿತವಲ್ಲ.
ಮುಂದಿನ ಹಾದಿ
ದೇಶದಲ್ಲಿ ಜಾರಿಯಲ್ಲಿದ್ದ ಹತ್ತಾರು ರೀತಿಯ ತೆರಿಗೆಗಳು ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವುದರೊಂದಿಗೆ ಮರೆಗೆ ಸರಿದಿವೆ. . ಕೆಲ ತಿಂಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಆದಾಯ ತೆರಿಗೆ ಕಾಯಿದೆ ಬದಲಾವಣೆಯಾಗುವ ಸುಳಿವು ನೀಡಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡುತ್ತಾ 50 ವರ್ಷ ಹಿಂದಿನ ಕಾಯಿದೆ ಈಗಿನ ಅರ್ಥ ವ್ಯವಸ್ಥೆಗೆ ಸರಿ ಹೊಂದುತ್ತಿಲ್ಲ. ಅರ್ಥ ವ್ಯವಸ್ಥೆ ಸ್ವತ್ಛವಾಗಲು ಈ ಮಾದರಿಯ ಹಳೇ ಕಾಯಿದೆಗಳಿಗೆ ಕಾಯಕಲ್ಪ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ತನ್ನ ಮಾತನ್ನೀಗ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.
ಅಂತೆಯೇ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಜತೆಗೆ ತೆರಿಗೆ ಕಳ್ಳತನವನ್ನು ತಪ್ಪಿಸಲು ಪರಿಣಾಮಕಾರಿ ನಿಯಮಗಳಿರಬೇಕು. ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ನಿರೀಕ್ಷಿಸುವ ಜನರು ಕಾಲಕಾಲಕ್ಕೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕಾಗಿದೆ.