16th DECEMBER-DAILY CURRENT AFFAIRS BRIEF

16th DECEMBER

 

1.ಸರಕಾರದ ಲೆಟರ್‌ಹೆಡ್‌ನಲ್ಲಿ   ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು  ಅಳವಡಿಸಿಕೊಂಡ ಪ್ರಪ್ರಥಮ ರಾಜ್ಯವಾಗಿ ರಾಜಸ್ತಾನ ಸರಕಾರ

 

ಪ್ರಮುಖ ಸುದ್ದಿ  

 

  • ಸರಕಾರದ ಲೆಟರ್‌ಹೆಡ್‌ನಲ್ಲಿ ಜನಸಂಘದ ಸಂಸ್ಥಾಪಕ ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು ರಾಷ್ಟ್ರಲಾಂಛನದ ಜೊತೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜಸ್ತಾನ ಸರಕಾರ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.
  • ಇದರೊಂದಿಗೆ ಜನಸಂಘದ ಸ್ಥಾಪಕರ ಭಾವಚಿತ್ರವನ್ನು ಸರಕಾರದ ಲೆಟರ್‌ಹೆಡ್‌ನಲ್ಲಿ ಅಳವಡಿಸಿಕೊಂಡ ಪ್ರಪ್ರಥಮ ರಾಜ್ಯವಾಗಿ ರಾಜಸ್ತಾನ ಸರಕಾರ ಗುರುತಿಸಿಕೊಂಡಿದೆ.

 

ಮುಖ್ಯ ಅಂಶಗಳು

 

  • ಎಲ್ಲಾ ಇಲಾಖೆಗಳು, ನಗರಪಾಲಿಕೆ, ನಿಗಮಮಂಡಳಿಗಳು ಹಾಗೂ ಸ್ವಾಯತ್ತ ಇಲಾಖೆಗಳು ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು ಒಳಗೊಂಡಿರುವ ಹೊಸ ಲೆಟರ್‌ಹೆಡ್ ಕಡ್ಡಾಯವಾಗಿ ಬಳಸಬೇಕು .
  • ಅಲ್ಲದೆ ಹೊಸ ಲೆಟರ್‌ಹೆಡ್ ಮುದ್ರಣವಾಗಿ ಬರುವವರೆಗೆ ಈಗಿನ ಲೆಟರ್‌ಹೆಡ್‌ಗೆ ದೀನದಯಾಳ್ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿ ಬಳಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
  • ಈ ಹಿಂದೆ, ಸರಕಾರದ ಜಾಹೀರಾತುಗಳಲ್ಲಿ ದೀನದಯಾಳ್ ಉಪಾಧ್ಯಾಯರ ಲೋಗೋ ಬಳಸುವುದನ್ನು ರಾಜಸ್ತಾನ ಸರಕಾರ ಕಡ್ಡಾಯಗೊಳಿಸಿತ್ತು. ಜೊತೆಗೆ, ಎಲ್ಲಾ ಬಿಜೆಪಿ ಶಾಸಕರೂ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಉಪಾಧ್ಯಾಯರ ಲೋಗೋ ಬಳಸಬೇಕು ಎಂದು ಸರಕಾರ ಸೂಚಿಸಿತ್ತು.
  • ಅಲ್ಲದೆ ಎಲ್ಲಾ ಸರಕಾರಿ ಶಾಲೆಗಳ ಲೈಬ್ರೆರಿಯಲ್ಲಿ ದೀನದಯಾಳ್ ಉಪಾಧ್ಯಾಯರ ಎಲ್ಲಾ ಕೃತಿಗಳು ಹಾಗೂ ಜೀವನಚರಿತ್ರೆಯ ಸಂಪುಟವನ್ನು ಖರೀದಿಸಬೇಕೆಂದು ಸರಕಾರ ಆದೇಶಿಸಿತ್ತು.

 

2.ಸಂಕಲ್ಪ್ ಯೋಜನೆ (SANKALP Project)

 

ಪ್ರಮುಖ ಸುದ್ದಿ

  • ಜೀವನಾಧಾರಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ “ಸ್ಕಿಲ್ ಅಕ್ವಿಸಿಷನ್ ಅಂಡ್ ನಾಲೆಡ್ಜ್ ಅವೇರ್‍ನೆಸ್ ಫಾರ್ ಲೈವ್ಲಿಹುಡ್ ಪ್ರೊಮೋಷನ್” (ಸಂಕಲ್ಪ್) ಯೋಜನೆಗಾಗಿ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್‍ನಿಂದ 250 ದಶಲಕ್ಷ ಡಾಲರ್ ಸಾಲ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

 

  • ವಿಶ್ವಬ್ಯಾಂಕಿನ ನೆರವು ನೀಡುವ ಶಾಖೆಯಾದ ಇಂಟರ್‍ನ್ಯಾಷನಲ್ ಬ್ಯಾಂಕ್ ಫಾರ್ ರಿ ಕನ್‍ಸ್ಟ್ರಕ್ಷನ್ ಅಂಡ್ ಡೆವಲಪ್‍ಮೆಮಟ್ (ಐಬಿಆರ್‍ಡಿ) ಈ ಸಾಲವನ್ನು ನೀಡಲಿದ್ದು, ಈ ಯೋಜನೆ ಪೂರ್ಣಗೊಳ್ಳುವ ದಿನಾಂಕ 2023ರ ಮಾರ್ಚ್ 31 ಆಗಿರುತ್ತದೆ.

 

ಸಂಕಲ್ಪ್ ಯೋಜನೆ ಬಗ್ಗೆ

 

ಇದರ ಯೋಜನೆಯ ಉದ್ದೇಶವೇನು  ? (Objective)

  • ಕೌಶಲ ಅಭಿವೃದ್ಧಿಗೆ ಸಾಂಸ್ಥಿಕ ವ್ಯವಸ್ಥೆಯನ್ನು ವಿಸ್ತøತಗೊಳಿಸುವುದು ಮತ್ತು ಗುಣಮಟ್ಟ ಮತ್ತು ಮಾರುಕಟ್ಟೆಗೆ ಪ್ರಸ್ತುತ ಎನಿಸುವ ರೀತಿಯಲ್ಲಿ ಕೆಲಸಗಾರರ ಲಭ್ಯತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ.
  • ಇದರಲ್ಲಿ ಪ್ರಮುಖವಾಗಿ ಸಾಂಸ್ಥಿಕ ಸುಧಾರಣೆಗಳು ಮತ್ತು ಗುಣಮಟ್ಟ ಅಭಿವೃದ್ಧಿ & ಮಾರುಕಟ್ಟೆ ಪ್ರಸ್ತುತತೆಯನ್ನು ಕೌಶಲ ಅಭಿವೃದ್ಧಿ ತರಬೇತಿ ಯೋಜನೆಗಳಲ್ಲಿ ಧೀರ್ಘಾವಧಿ ಹಾಗೂ ಅಲ್ಪಾವಧಿ ವೃತ್ತಿಪರ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತರುವುದು ಇದರ ಉದೇಶ.
  • ಸಮರ್ಪಕ ಶಿಕ್ಷಣ, ಕೌಶಲ ಮತ್ತು ಉದ್ಯೋಗವನ್ನು ಒದಗಿಸುವ ಮೂಲಕ ಯುವಕರಿಗೆ ಶಕ್ತಿ ತುಂಬುವುದು ಯೋಜನೆಯ ಗುರಿಯಾಗಿದೆ. ಈ ಯೋಜನೆಯಡಿ ಯುವಕರಿಗೆ ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾರ್ಹತೆ ಅಧಿಕವಾಗುವಂತೆ ಹಾಗೂ ಗರಿಷ್ಠ ಉದ್ಯೋಗ ಗಳಿಕೆ ಸಾಧ್ಯತೆಗೆ ಅವರನ್ನು ಸಜ್ಜುಗೊಳಿಸಲಾಗುವುದು.

 

ಯೋಜನೆ ಪ್ರಮುಖ ಫಲಿತಾಂಶ ಕ್ಷೇತ್ರಗಳಾವುವು ? (The Key result areas)

 

  • ಸಾಂಸ್ಥಿಕ ಸಬಲೀಕರಣವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಾಡಲಾಗುವುದು. ಇದಕ್ಕಾಗಿ ಕೌಶಲ ಅಭಿವೃದ್ಧಿ ಯೋಜನೆಗಳಿಲ್ಲಿ ಸೂಕ್ತ ಯೋಜನೆ, ಸುಧಾರಿತ ಗುಣಮಟ್ಟ ಮತ್ತು ಮಾರುಕಟ್ಟೆ ಪ್ರಸ್ತುತತೆಯನ್ನು ತರಲಾಗುವುದು. ಉತ್ತಮ ಗುಣಮಟ್ಟದ, ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡಲಾಗುವುದು.

 

  • ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಇತರ ದುರ್ಬಲ ವರ್ಗದವರಿಗೆ ಕೂಡಾ ಕೌಶಲ ಅಭಿವೃದ್ಧಿಯನ್ನು ಲಭ್ಯವಾಗುವಂತೆ ಮಾಡುವುದು ಹಾಗೂ ಇದನ್ನು ಪೂರ್ಣಗೊಳಿಸಲು ಅನುಕೂಲಕರ ವಾತಾವರಣ ಸೃಷ್ಟಿಸುವುದು ಇದರ ಉದ್ದೇಶ. ಇವೆಲ್ಲದರ ಜತೆಗೆ ಖಾಸಗಿ-ಸರ್ಕಾರಿ ಸಹಭಾಗಿತ್ವ ಯೋಜನೆಯ ಮೂಲಕ ಕೌಶಲ ಅಭಿವೃದ್ಧಿಯನ್ನು ವಿಸ್ತರಿಸಲಾಗುವುದು.

 

ಇದರ ಮಹತ್ವವೇನು ? (What it does ? )

 

  • ಈ ಯೋಜನೆಯು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಿಷನ್- 2015ಕ್ಕೆ ಅಗತ್ಯ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಜತೆಗೆ ಇತರ ಹಲವು ಉಪ ಮಿಷನ್‍ಗಳಿಗೆ ಕೂಡಾ ಇದು ನೆರವಾಗಲಿದೆ.
  • ಈ ಯೋಜನೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ವಚ್ಛತಾ ಅಭಿಯಾನಗಳ ಜತೆಯೂ ಜೋಡಿಸಲಾಗಿದ್ದು, ಜಾಗತಿಕಮಟ್ಟದಲ್ಲಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ದೇಶೀಯ ಹಾಗೂ ಸಾಗರೋತ್ತರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವಲ್ಲಿ ಈ ಪ್ರಯತ್ನ ಅತ್ಯಂತ ಮಹತ್ವದ್ದೆನಿಸಲಿದೆ.

 

  • ಎಲ್ಲಕ್ಕಿಂತ ಹಹೆಚ್ಚಾಗಿ, ಇದು ವಿವಿಧ ಕೇಂದ್ರೀಯ, ರಾಜ್ಯ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಮನ್ವಯದಲ್ಲಿ ಕೌಶಲ ಅಭಿವೃದ್ಧಿ ತರಬೇತಿಯನ್ನು ಒದಗಿಸಲಿದೆ. ಇದು ಚಟುವಟಿಕೆಗಳು ಪುನರಾವರ್ತನೆಯಾಗುವುದನ್ನು ತಡೆಯುವ ಜತೆಗೆ, ವೃತ್ತಿಪರ ತರಬೇತಿಯಲ್ಲಿ ಏಕರೂಪತೆಯಲ್ಲಿ ತರುವ ಮೂಲಕ ಒಳ್ಳೆಯ ಫಲಿತಾಂಶವನ್ನು ನೀಡುವ ಗುರಿ ಹೊಂದಿದೆ.

 

  

3.ಚೆಕ್‌ ಅಮಾನ್ಯಕ್ಕೆ ಮಧ್ಯಂತರ ಪರಿಹಾರ?

ಪ್ರಮುಖ ಸುದ್ದಿ

 

  • ಚೆಕ್‌ ಅಮಾನ್ಯಗೊಂಡರೆ ಹಣ ಸಲ್ಲಿಕೆಯಾಗಬೇಕಾದವರಿಗೆ ಮಧ್ಯಂತರ ಪರಿಹಾರ ನೀಡುವ ಅವಕಾಶ ಸೃಷ್ಟಿಗಾಗಿ ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್‌ ಕಾಯ್ದೆ 1881ಕ್ಕೆ ತಿದ್ದುಪಡಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ

 

ಮುಖ್ಯ ಅಂಶಗಳು

 

  • ಚೆಕ್‌ ಅಮಾನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಲು ದೀರ್ಘ ಸಮಯ ಬೇಕು. ಹಾಗಾಗಿ ಮಧ್ಯಂತರ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಚೆಕ್‌ ಮೊತ್ತದ ಸ್ವಲ್ಪ ಭಾಗವನ್ನು ಪರಿಹಾರವಾಗಿ ನೀಡುವುದಕ್ಕೆ ಕಾಯ್ದೆಯ ತಿದ್ದುಪಡಿ ಅವಕಾಶ ಒದಗಿಸಲಿದೆ. ವಿಚಾರಣೆ ಮತ್ತು ಮೇಲ್ಮನವಿ ಹಂತದಲ್ಲಿ ಪರಿಹಾರ ಪಡೆಯಲು ಅವಕಾಶ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

  • ಚೆಕ್‌ ನೀಡಿದವರು ಖುಲಾಸೆಗೊಂಡರೆ, ಮಧ್ಯಂತರ ಪರಿಹಾರದ ಹಣ ಪಡೆದುಕೊಂಡವರು ಆ ಹಣವನ್ನು ಬಡ್ಡಿಸಹಿತ ಹಿಂದಿರುಗಿಸಬೇಕಾಗುತ್ತದೆ. ಹಾಗೆಯೇ, ಮೇಲ್ಮನವಿ ಸಲ್ಲಿಸುವವರು ವಿಚಾರಣಾ ನ್ಯಾಯಾಲಯ ಆದೇಶಿಸಿದ ಮಧ್ಯಂತರ ಪರಿಹಾರದ ಒಂದು ಭಾಗವನ್ನು ಠೇವಣಿ ಇರಿಸುವಂತೆ ಆದೇಶಿಸುವ ಅವಕಾಶವನ್ನು ತಿದ್ದುಪಡಿಯು ಮೇಲ್ಮನವಿ ನ್ಯಾಯಾಲಯಕ್ಕೆ ನೀಡುತ್ತದೆ.

 

  • ಖಾತೆಯಲ್ಲಿ ಹಣ ಇಲ್ಲ ಎಂಬ ಕಾರಣಕ್ಕೆ ಚೆಕ್‌ ಅಮಾನ್ಯಗೊಳ್ಳುವುದು ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಸರ್ಕಾರ ನಡೆಸಿದ ಅಧ್ಯಯನವೊಂದು ಹೇಳಿದೆ.

 

  • ಚೆಕ್‌ ಅಮಾನ್ಯ ಪ್ರಕರಣಗಳ ವಿಚಾರಣೆ ದೀರ್ಘ ಕಾಲ ಬಾಕಿಯಾದರೆ ಹಣ ಸಂದಾಯವಾಗಬೇಕಾದವರು ಭಾರಿ ತೊಂದರೆಗೆ ಸಿಲುಕುತ್ತಾರೆ ಎಂದು ಉದ್ಯಮ ಸಮುದಾಯದ ವಿವಿಧ ನಿಯೋಗಗಳು ಹಣಕಾಸು ಸಚಿವಾಲಯಕ್ಕೆ ನೀಡಿದ ಮನವಿಗಳಲ್ಲಿ ಹೇಳಿವೆ.

 

  • ಹಣ ಪಾವತಿಸಲು ಮನಸೇ ಇಲ್ಲದ ಕೆಲವರು ಚೆಕ್ ನೀಡಿ ಅದನ್ನು ಅಮಾನ್ಯಗೊಳಿಸುವುದನ್ನು ಒಂದು ಕಾರ್ಯತಂತ್ರವಾಗಿ ಬಳಸುತ್ತಾರೆ. ಮೇಲ್ಮನವಿ ಸಲ್ಲಿಕೆ ಮತ್ತು ಆದೇಶಗಳಿಗೆ ತಡೆ ಪಡೆದುಕೊಳ್ಳುವ ಮೂಲಕ ಹಣ ಪಾವತಿಸುವುದನ್ನು ವಿಳಂಬ ಮಾಡುವುದು ಅವರ ಕಾರ್ಯತಂತ್ರದ ಭಾಗ. ಹಣ ಪಡೆಯಬೇಕಾದವರು ನ್ಯಾಯಾಲಯಕ್ಕೆ ಹೋಗಿ ಸಾಕಷ್ಟು ಹಣ ಮತ್ತು ಸಮಯ ವ್ಯಯ ಮಾಡಬೇಕಾಗುತ್ತದೆ.

 

  • ನಗದುರಹಿತ ಅರ್ಥವ್ಯವಸ್ಥೆಗೆ ಶಕ್ತಿ ತುಂಬುವ ಯತ್ನ. ಚೆಕ್‌ ಅನ್ನು ಯಾವ ಊರಿನ ಬ್ಯಾಂಕ್‌ನಲ್ಲಿ ಹಾಕಲಾಗಿದೆಯೋ ಅಲ್ಲಿನ ನ್ಯಾಯಾಲಯದಲ್ಲಿಯೇ ದೂರು ದಾಖಲಿಸಲು ಅನುಕೂಲವಾಗುವಂತೆ 2015ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು.

  

4.ಎಟಿಎಲ್ ಸಮುದಾಯ ದಿನ (ATL Community Day )

 

ಪ್ರಮುಖ ಸುದ್ದಿ

  • ನೀತಿ ಆಯೋಗದ ಅಟಲ್ ಇನ್ನೊವೇಶನ್ ಮಿಷನ್ ಹೊಸದಾಗಿ ಅಟಲ್ ಥಿಂಕರಿಂಗ್ ಪ್ರಯೋಗಾಲಯ ಸಮುದಾಯ ದಿನವನ್ನು ನವದೆಹಲಿಯಲ್ಲಿ ಆಯೋಜಿಸಿದೆ.

 

ಪ್ರಮುಖ ಸಂಗತಿಗಳ

 

  • ಈ ದಿನದ ಅಂಗವಾಗಿ ಸಮುದಾಯ ಚಾಲಿತ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಇದರಲ್ಲಿ 25 ಮಂದಿ ಯುವ ಮಾರ್ಗದರ್ಶಕರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ಇದುವರೆಗೆ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸೇರ್ಪಡೆಯಾಗದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭಿಸಲಿದೆ.

 

  • ಈ ಮಾರ್ಗದರ್ಶಕರು ನವದೆಹಲಿಯ ನಾಲ್ಕು ಸ್ಥಳಗಳಿಗೆ ಭೇಟಿ ನೀಡಲಿದ್ದು, ವಿವಿಧ ಸ್ವಯಂಸೇವಾ ಸಂಸ್ಥೆಗಳಿಂದ ಆಗಮಿಸಿದ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಅನುಶೋಧನೆಗಳು ನೆರವಾಗಲಿವೆ ಎನ್ನುವ ಬಗ್ಗೆ ಮಾರ್ಗದರ್ಶನ ನೀಡುವರು.

 

ಅಟಲ್ ಥಿಂಕರಿಂಗ್ ಲ್ಯಾಬ್ ಸಮುದಾಯ ಚಾಲಿತ ಯೋಜನೆ ಬಗ್ಗೆ

 

  • ಈ ವಿನೂತನ ಯೋಜನೆಯ ಮುಖ್ಯ ಉದ್ದೇಶವೆಂದರೆ ಅಟಲ್ ಥಿಂಗರಿಂಗ್ ಲ್ಯಾಬ್‍ನ ಪರಿಣಾಮವನ್ನು ಗರಿಷ್ಠಗೊಳಿಸುವುದು. ಇದಕ್ಕಾಗಿ ಔಪಚಾರಿಕ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿಯಾಗದ ಮಕ್ಕಳಿಗೆ ಅನುಶೋಧನೆಯನ್ನು ಪರಿಚಯಿಸುವುದು.

 

  • ಅಟಲ್ ಥಿಂಕರಿಂಗ್ ಲ್ಯಾಬ್‍ನ ಮಾರ್ಗದರ್ಶನದಲ್ಲಿ ಇಂಥ ಮಕ್ಕಳನ್ನು ಸಮಸ್ಯೆಗಳನ್ನು ನಿವಾರಿಸುವ ವರ್ಗವಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶ. ಈ ಯೋಜನೆಯಡಿ ಪಾಲ್ಗೊಳ್ಳುವ ಸರ್ಕಾರೇತರ ಸಂಸ್ಥೆಗಳಲ್ಲಿ ಮುಖ್ಯವಾಗಿ ಅಂಗವಿಕಲ ಮಕ್ಕಳು, ಬೀದಿ ಬದಿ ಮಕ್ಕಳು, ಕೆಲಸ ಮಾಡುವ ಮಕ್ಕಳು ಮತ್ತು ಸಮಾಜದ ದುರ್ಬಲ ವರ್ಗದ ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡುವ ಸಂಸ್ಥೆಗಳು ಸೇರುತ್ತವೆ.

 

ಅಟಲ್ ಇನ್ನೊವೇಶನ್ ಮಿಷನ್ ಬಗ್ಗೆ

 

  • ನೀತಿ ಆಯೋಗದ ಅಟಲ್ ಇನ್ನೊವೇಶನ್ ಮಿಷನ್, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ದೇಶದಲ್ಲಿ ಉದ್ಯಮಶೀಲತೆ ಮತ್ತು ಅನುಶೋಧನೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

 

  • ಈ ನಿಟ್ಟಿನಲ್ಲಿ ಅಟಲ್ ಥಿಂಕರಿಂಗ್ ಲ್ಯಾಬ್‍ಗಳನ್ನು ದೇಶಾದ್ಯಂತ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ದೇಶದಲ್ಲಿ ಅನುಶೋಧನೆಯ ಪರಿಸರಕ್ಕೆ ಉತ್ತೇಜನ ನೀಡಲು ಪೂರಕವಾಗಿರುತ್ತದೆ. ಜತೆಗೆ ದೇಶದಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಕೂಡಾ ನೆರವಾಗುತ್ತದೆ.

 

  • ಇದರ ಮಮುಖ್ಯವಾದ ಉದ್ದೇಶವೆಂದರೆ ಅನುಶೋಧನೆಯ ವೇದಿಕೆಯನ್ನು ನಿರ್ಮಿಸಿಕೊಡುವುದು. ಇದರಲ್ಲಿ ಶಿಕ್ಷಣತಜ್ಞರು, ಸಂಶೋಧಕರು ಮತ್ತು ಉದ್ಯಮಿಗಳನ್ನು ತೊಡಗಿಸಿಕೊಳ್ಳಲಾಗುತ್ತದೆ.

 

  • ಜತೆಗೆ ಇದಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅನುಭವಗಳನ್ನು ಜೋಡಿಕೊಂಡು, ಭಾರತದಲ್ಲಿ ಸಾಂಸ್ಕೃತಿಕ ಅನುಶೋಧನೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು.

 

  • ಇದು ವಿಶ್ವಾದ್ಯಂತ ಜಾಗತಿಕ ಗುಣಮಟ್ಟದ ಅನುಶೋಧನೆ ಹಬ್‍ಗಳನ್ನು ಉತ್ತೇಜಿಸುವುದು ಮಾತ್ರವಲ್ಲದೇ ವಹಿವಾಟು ಕ್ಷೇತ್ರದ ಸ್ಟಾರ್ಟ್ ಅಪ್ ಉದ್ದಿಮೆಗಳನ್ನು ಮತ್ತು ಇತರ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಅದರಲ್ಲೂ ಮುಖ್ಯವಾಗಿ ತಂತ್ರಜ್ಞಾನ ಆಧರಿತ ವಲಯಕ್ಕೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ.

 

5.ಹೊಸ ಖಾತೆಗೆ ಆಧಾರ್‌ ನೋಂದಣಿ ಚುರುಕುಗೊಳಿಸಿ: ಬ್ಯಾಂಕುಗಳಿಗೆ ಯುಐಡಿಎಐ ನಿರ್ದೇಶನ

 

ಪ್ರಮುಖ ಸುದ್ದಿ

  • ಸರಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಆಧಾರ್‌ ಜೋಡಣೆಗೆ ತಡೆಯೊಡ್ಡಲು ನಿರಾಕರಿಸಿತು.
  • ಅದೇ ವೇಳೆ, ಆಧಾರ್‌ ಲಿಂಕ್‌ ಗಡುವನ್ನು ಮುಂದಿನ ವರ್ಷ ಮಾರ್ಚ್‌ 31ಕ್ಕೆ ವಿಸ್ತರಿಸಿ ಮಧ್ಯಾಂತರ ಆದೇಶ ಹೊರಡಿಸಿದೆ. ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆ ಜೋಡಿಸಲು ಇದಕ್ಕೂ ಮೊದಲು 2018ರ ಫೆಬ್ರವರಿ 6ಕ್ಕೆ ಅಂತಿಮ ಗಡುವು ವಿಧಿಸಲಾಗಿತ್ತು.

 

ಮುಖ್ಯ ಅಂಶಗಳು

 

  • ಹೊಸದಾಗಿ ಖಾತೆ ತೆರೆಯಬಯಸುವ ಗ್ರಾಹಕರಿಗಾಗಿ ಆಧಾರ್‌ ನೋಂದಣಿ ಚುರುಕುಗೊಳಿಸುವ ನಿಟ್ಟಿನಲ್ಲಿ ತಮ್ಮ ಶಾಖೆಗಳ ಪೈಕಿ ಶೇಕಡ 10ರಷ್ಟು ಶಾಖೆಗಳಲ್ಲಿ ಬೆರಳ ಗುರುತು ಹಾಗೂ (ಕಣ್ಣಿನ) ಪಾಪೆ ಪೊರೆ ಸ್ಕ್ಯಾ‌ನರ್‌ಗಳನ್ನು ಅಳವಡಿಸುವಂತೆ ಬ್ಯಾಂಕುಗಳಿಗೆ ಭಾರತೀಯ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನಿರ್ದೇಶನ ನೀಡಿದೆ.

 

  • ಗ್ರಾಹಕರು ಆಧಾರ್‌ ಇಲ್ಲದೆಯೂ ಹೊಸ ಬ್ಯಾಂಕ್‌ ಖಾತೆಗಳನ್ನು ತೆರೆಯಬಹುದು. ಆದರೆ, 12 ಅಂಕಿಗಳ ಗುರುತಿನ ಸಂಖ್ಯೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತೆದಾರ ಪುರಾವೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.
  • ದೇಶಾದ್ಯಂತ ಬ್ಯಾಂಕ್‌ ಶಾಖೆಗಳಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅವರು (ಬ್ಯಾಂಕ್‌ನವರು) ಒಟ್ಟಾರೆ 14 ಸಾವಿರ ಬ್ಯಾಂಕ್‌ ಶಾಖೆಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಬೇಕಿದೆ.

 

 

6.ಹೊಳೆಯುವ ಗಿಡ ಸೃಷ್ಟಿ (Plants that can glow)

 

ಪ್ರಮುಖ ಸುದ್ದಿ

  • ಎಂಐಟಿ ವಿಜ್ಞಾನಿಗಳು ವಿನೂತನವಾದ ಗಿಡವೊಂದನ್ನು ಸೃಷ್ಟಿಸಿದ್ದು, ಇದು ಮಬ್ಬು ಬೆಳಕಿನಲ್ಲಿ ಮತ್ತು ಕತ್ತಲೆಯಲ್ಲಿ ಕೂಡಾ ಹೊಳೆಯುವ ವಿಶಿಷ್ಟ ಗುಣಲಕ್ಷಣವನ್ನು ಹೊಂದಿದೆ. ಇದರ ಎಲೆಗಳಿಗೆ ನ್ಯಾನೊ ಕಣಗಳನ್ನು ಜೋಡಿಸಿರುವುದರಿಂದ ಈ ಗಿಡ ರಾತ್ರಿಯ ವೇಳೆಯಲ್ಲಿ ಹೊಳೆಯುತ್ತದೆ.

 

ಮುಖ್ಯ ಸಂಗತಿಗಳು

  • ಈ ಪ್ರಯೋಗದ ಮುಖ್ಯ ಉದ್ದೇಶವೆಂದರೆ, ಗಿಡಗಳನ್ನು ಡೆಸ್ಕ್ ಲ್ಯಾಂಪ್ ಆಗಿ ಬಳಸುವುದಾಗಿದೆ.
  • ಇದಕ್ಕೆ ಗಿಡದ ಜೀರ್ಣಾಂಗ ವ್ಯವಸ್ಥೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗಿದ್ದು, ಇ
  • ದಕ್ಕೆ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯ ಇರುವುದಿಲ್ಲ.
  • ಈ ಹೊಳೆಯುವ ಗಿಡಗಳನ್ನು ಸೃಷ್ಟಿಸಲು ವಿಜ್ಞಾನಿಗಳು ಲುಸಿಫೆರೆಸ್ (luciferase)ಎಂಬ ವಿಶಿಷ್ಟ ಎಂಝಿಮ್‍ಗಳನ್ನು ಬಳಸಿದ್ದು, ಇದು ಅಗತ್ಯ ಹೊಳೆಯುವ ಅಂಶವನ್ನು ಒದಗಿಸುತ್ತದೆ.
  • ಲೂಸಿಫೆರೆಸ್ ಲ್ಯೂಸಿಫೆರಿನ್ ಎಂಬ ಕಣವಾಗಿ ಕಾರ್ಯ ನಿರ್ವಹಿಸಲಿದ್ದು, ಇದು ಬೆಳಕಿನ ವಿಕಿರಣದ ಸಾಮಥ್ರ್ಯ ಹೊಂದಿರುತ್ತದೆ. ಇದರ ಜತೆಗೆ ಇದು ಕೋ ಎಂಝಿಮ್ ಎಂಬ ಇನ್ನೊಂದು ಕಣವನ್ನೂ ಬಳಸಿಕೊಳ್ಳಲಿದ್ದು, ಉತ ಉತ್ಪನ್ನಗಳ ರಾಸಾಯನಿಕ ಕ್ರಿಯೆಯನ್ನು ಇದು ತಡೆಯುತ್ತದೆ.

 

  • ಈ ಮೂರು ವಿಶೇಷ ಅಂಶಗಳನ್ನು ಪ್ಯಾಕೇಜ್ ರೂಪದಲ್ಲಿ ಸಿಲಿಕಾ ನ್ಯಾನೊಕಣಗಳಲ್ಲಿ ಅಳವಡಿಸಿ ನೀಡಲಾಗುತ್ತದೆ. 10 ನ್ಯಾನೊಮೀಟರ್ ವ್ಯಾಸದ ಈ ಕಣ ಲ್ಯೂಸಿಫೆರೆಸ್‍ಗಳನ್ನು ಹಿಡಿದಿಡುತ್ತದೆ. ಇವು ಸ್ವಲ್ಪ ದೊಡ್ಡದಾದ ಪಿಎಲ್‍ಜಿಎ ಪಾಲಿಮರ್ ಕಣಗಳನ್ನು ಕೂಡಾ ಬಳಸಿಕೊಳ್ಳಲಿದ್ದು, ಲ್ಯೂಸಿಫೆರಿನ್ ಮತ್ತು ಸಹ ಎಂಝೋಮ್ ಎ ಕಣಗಳನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ.

 

  • ಗಿಡದ ಎಲೆಗಳಿಗೆ ನ್ಯಾನೊ ಕಣಗಳನ್ನು ಪಡೆಯುವ ಸಲುವಾಗಿ ವಿಜ್ಞಾನಿಗಳು ಮೊದಲು ಅಮಾನತುಗೊಂಡ ಕಣಗಳ ಮಿಶ್ರಣವನ್ನು ತಯಾರಿಸುತ್ತಾರೆ. ಬಳಿಕ ಎಲೆಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ, ಬಳಿಕ ಅಧಿಕ ಒತ್ತಡಕ್ಕೆ ಇದನ್ನು ತೆರೆಯಲಾಗುತ್ತದೆ. ಇದರಿಂದಾಗಿ ಕಣಗಳು ಎಲೆಗಳ ಒಳಗೆ ಸ್ಟೊಮಾಟಾ ಎಂಬ ಸಣ್ಣ ರಂಧ್ರಗಳ ಮೂಲಕ ಪ್ರವೇಶಿಸುತ್ತವೆ.

 

  • ಈ ಕಣಗಳು ಲ್ಯೂಸಿಫೆರೆನ್ ಮತ್ತು ಸಹ ಎಂಝೀಮ್‍ಗಳನ್ನು ಬಿಡುಗಡೆ ಮಾಡುತ್ತದೆ. ಎಲೆಯ ಒಳಪದರದಲ್ಲಿ, ಸಣ್ಣ ಕಣಗಳು ಬೆಳಕನ್ನು ಸೂಸುತ್ತವೆ. ಪಿಎಲ್‍ಜಿಎ ಕಣಗಳು ನಿಧಾನವಾಗಿ ಲ್ಯೂಸಿಫೆರೆನ್‍ಗಳನ್ನು ಬಿಡುಗಡೆ ಮಾಡುತ್ತವೆ. ಇವು ಗಿಡಗಳ ಕೋಶಗಳನ್ನು ಪ್ರವೇಶಿಸುತ್ತವೆ. ಲ್ಯೂಸಿಫೆರೆಸ್ ರಾಸಾಯನಿಕ ಕ್ರಿಯೆಗಳನ್ನು ನಡೆಸಿ, ಹೊಳೆಯುವಂತೆ ಮಾಡುತ್ತದೆ. ಈ ಪ್ರಯೊಘದಲ್ಲಿ ಲ್‍ಯೂಸಿಫೆರೆನ್‍ಯುಕ್ತ ಗಿಡಗಳು ಸುಮಾರು 45 ನಿಮಿಷಗಳ ಕಾಲ ಹೊಳೆಯುತ್ತವೆ.

 

  • ಕೆಲಸದ ಸ್ಥಳಗಳಲ್ಲಿ ಗಿಡಗಳನ್ನು ಹೊಳೆಯುವಂತೆ ಮಾಡಿ ಬೆಳಕಿನ ಮೂಲವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈ ತಂತ್ರಜ್ಞಾನದ ಆಧಾರದಲ್ಲಿ ಕಡಿಮೆ ತೀವ್ರತೆಯ ಕೊಠಡಿಯೊಳಗಿನ ಬೆಳಕಿನ ವ್ಯವಸ್ಥೆ ಅಥವಾ ಮರಗಳನ್ನೇ ಬೀದಿದೀಪವಾಗಿ ಬಳಸುವ ಸಾಧ್ಯತೆಯನ್ನು ತೆರೆದುಕೊಟ್ಟಿದೆ.

 

 

ONLY FOR PRELIMS

 

7.ರೈಲ್ವೆ ಸಚಿವಾಲಯವು ಪ್ರಾರಂಭಿಸಿರುವ ಮುಖ್ಯ ಉಪಕ್ರಮಗಳು (Initiatives)

 

  • ಸ್ರೇಸ್ತ (SRESTHA) – ಎದು ರೈಲ್ವೆಯಲ್ಲಿ ಭವಿಷ್ಯದ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಲು ಹೊಸ ಆರ್ & ಡಿ ಸಂಸ್ಥೆ.
  • ಸುತ್ರ (SUTRA) – ಸಾರಿಗೆ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ವಿಶೇಷ ಘಟಕ. ಇದರಲ್ಲಿನ ತಂಡವು ವಿಶ್ವ ದರ್ಜೆಯ ಡಾಟಾ ಅನಾಲಿಟಿಕ್ಸ್, ಸಿಮ್ಯುಲೇಶನ್ ಸಾಫ್ಟ್ ವೇರ್ ಗಳು , ನೆಟ್ವರ್ಕ್ ಆಪ್ಟಿಮೈಸೇಶನ್ ವ್ಯವಸ್ಥೆಗಳಲ್ಲಿ ತೊಡಗಿಸಿಕೊಳ್ಳುತ್ತದೆ.
  • ನಿವಾರಾನ್ (NIVARAN) – ಎದು ಸೇವೆ ಸಲ್ಲಿಸುತ್ತಿರುವ ಮತ್ತು ಮಾಜಿ ರೈಲ್ವೆಯ ನೌಕರರ ಬಗೆಗಿನ ಅಸಮಾಧಾನವನ್ನು ಬಗೆಹರಿಸಲು ಹಾಗು ಪರಿಹಾರ ದೂರುಗಳ ಪೋರ್ಟಲ್ ಮತ್ತು  ರೈಲ್ವೆ ಇಲಾಖೆಯ  ಮೊದಲ ಐಟಿ ಅಪ್ಲಿಕೇಶನ್.

 

 8.ತುಯಿರಿಯಾಲ್‌ ಜಲವಿದ್ಯುತ್‌ ಯೋಜನೆ

 

  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿಜೊರಾಂನಲ್ಲಿ ತುಯಿರಿಯಾಲ್‌ ಜಲವಿದ್ಯುತ್‌ ಯೋಜನೆಯನ್ನು ಉದ್ಘಾಟಿಸಿದರು.
  • ಸಿಕ್ಕಿಂ, ತ್ರಿಪುರ ರಾಜ್ಯಗಳ ಬಳಿಕ ಇದೀಗ ಮಿಜೋರಾಂ ಜಲವಿದ್ಯುತ್‌ ಯೋಜನೆಯನ್ನು ಹೊಂದಿದ ಈಶಾನ್ಯದ ಮೂರನೇ ಹೆಚ್ಚುವರಿ ರಾಜ್ಯವಾಯಿತು.
  • ಪ್ರತಿವರ್ಷ 251 ದಶಲಕ್ಷ ಯೂನಿಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ .
  • 1998ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಘೋಷಿಸಿತ್ತು. ಇದು ಮೀಜೋರಾಂನಲ್ಲಿ ಆರಂಭವಾದ ಕೇಂದ್ರದ ಮಹತ್ವದ ಯೋಜನೆಯಾಗಿದೆ.
Share