19th DECEMBER
1.ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್ ವಹಿವಾಟುಗಳ ಮೇಲಿನ ಎಂ.ಡಿ.ಆರ್. ಶುಲ್ಕಕ್ಕೆ ಸಹಾಯಧನ ನೀಡಲು ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಡೆಬಿಟ್ ಕಾರ್ಡ್ /ಭೀಮ್ ಯುಪಿಐ/ ಆಧಾರ್ ಸಂಪರ್ಕಿತ ಪಾವತಿ ವ್ಯವಸ್ಥೆ (ಎಇಪಿಎಸ್)ಗಳ ಮೂಲಕ ನಡೆಸುವ 2000 ರೂ. ಸೇರಿದಂತೆ ಆ ಮೌಲ್ಯದವರೆಗಿನ ವಹಿವಾಟಿನ ಮೇಲೆ ವ್ಯಾಪಾರಿಗಳ ರಿಯಾಯಿತಿ ದರ (ಎಂ.ಡಿ.ಆರ್.) ಶುಲ್ಕ ಅನ್ವಯವಾಗಲಿದ್ದು, ಅದನ್ನು ಬ್ಯಾಂಕ್ ಗಳಿಗೆ ಹಿಂತಿರುಗಿಸುವ ಮೂಲಕ ಜನವರಿ 1 2018ರಿಂದ ಎರಡು ವರ್ಷಗಳ ಅವಧಿಗೆ ಸರ್ಕಾರವೇ ಭರಸಲು ತನ್ನ ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು
- ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್.ಪಿ.ಸಿ.ಐ) ಸಿ.ಇ.ಓ. ಅವರನ್ನು ಒಳಗೊಂಡ ಸಮಿತಿಯು ಮರುಪಾವತಿ ಮಟ್ಟವನ್ನು ನಿರ್ಧರಿಸಲು ಆಧಾರವಾಗಿರುವ ಅಂತಹ ವಹಿವಾಟಿನ ಉದ್ಯಮ ವೆಚ್ಚದ ವಿನ್ಯಾಸವನ್ನು ನೋಡಿಕೊಳ್ಳುತ್ತದೆ.
- ಈ ಅನುಮೋದನೆಯ ಫಲವಾಗಿ, 2000 ರೂ. ಮೌಲ್ಯಕ್ಕಿಂತ ಕಡಿಮೆ ಮೊತ್ತದ ಎಲ್ಲ ವಹಿವಾಟುಗಳಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಎಂ.ಡಿ.ಆರ್. ಸ್ವರೂಪದಲ್ಲಿ ಯಾವುದೇ ಹೆಚ್ಚಿನ ಹೊರೆಯನ್ನು ಅನುಭವಿಸುವುದಿಲ್ಲ, ಇದು ಇಂಥ ವಹಿವಾಟುಗಳಿಗೆ ಡಿಜಿಟಲ್ ಪಾವತಿಯ ಹೆಚ್ಚಿನ ಅಳವಡಿಕೆಗೆ ಇಂಬು ನೀಡುತ್ತದೆ. ಅಂತಹ ವಹಿವಾಟುಗಳ ಗಣನೀಯ ಶೇಕಡಾವಾರು ವಹಿವಾಟು ಪರಿಮಾಣಕ್ಕೆ ಕಾರಣವಾದರೆ, ಇದು ಕಡಿಮೆ ನಗದು ಆರ್ಥಿಕತೆಗೆ ರಾಷ್ಟ್ರ ತೆರಳಲು ಸಹಾಯ ಮಾಡುತ್ತದೆ.
- 2000 ರೂ.ಗಿಂತ ಕಡಿಮೆ ಮೌಲ್ಯದ ವಹಿವಾಟಿಗೆ ಸಂಬಂಧಿಸಿದಂತೆ 2018-19ರ ಹಣಕಾಸು ವರ್ಷದಲ್ಲಿ 1,050 ಕೋಟಿ ರೂಪಾಯಿ ಮತ್ತು 2019-20ರ ಹಣಕಾಸು ವರ್ಷದಲ್ಲಿ 1,462 ಕೋಟಿ ರೂಪಾಯಿಗಳ ಮೊತ್ತದ ಎಂ.ಡಿ.ಆರ್. ಅನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
- ಮರ್ಚೆಂಟ್ ಪಾಯಿಂಟ್ ಆಫ್ ಸೇಲ್ ಮೂಲಕ ಪಾವತಿ ಮಾಡಿದಾಗ, ವ್ಯಾಪಾರಿಗಳು ಬ್ಯಾಂಕ್ ಗಳಿಗೆ ಎಂ.ಡಿ.ಆರ್. ಪಾವತಿಸಬೇಕಾಗುತ್ತದೆ. ಇದರಿಂದಾಗಿ ಅನೇಕರು ಡೆಬಿಟ್ ಕಾರ್ಡ್ ಗಳು ಇದ್ದಾಗ್ಯೂ ನಗದು ಪಾವತಿ ಮಾಡುತ್ತಿದ್ದಾರೆ. ಅದೇ ರೀತಿ, ಭೀಮ್ ಯುಪಿಐ ಮತ್ತು ಎಇಪಿಎಸ್ ಮೂಲಕ ವ್ಯಾಪಾರಿಗಳಿಗೆ ಮಾಡಲಾದ ಪಾವತಿಗೂ ಎಂ.ಡಿ.ಆರ್. ಶುಲ್ಕ ಅನ್ವಯವಾಗುತ್ತಿತ್ತು.
ವ್ಯಾಪಾರಿಗಳ ರಿಯಾಯಿತಿ ದರ (ಎಂಡಿಆರ್) ಎಂದರೇನು ?
- ಎಂಡಿಆರ್ ಎನ್ನುವುದು ವ್ಯಾಪಾರಿಗಳ ಮೇಲೆ ಬ್ಯಾಂಕ್ಗಳು ವಿಧಿಸುವ ಶುಲ್ಕವಾಗಿದೆ. ಗ್ರಾಹಕರಿಂದ ಪಾವತಿಗೆ ಪ್ರತಿಯಾಗಿ ಶೇಕಡಾವಾರು ಪ್ರಮಾಣವನ್ನು ಬ್ಯಾಂಕುಗಳು ಶುಲ್ಕವಾಗಿ ವಿಧಿಸುತ್ತದೆ.
- ಗ್ರಾಹಕರು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದಾಗ ಈ ಶುಲ್ಕವನ್ನು ಬ್ಯಾಂಕ್ಗಳು ವಿಧಿಸುತ್ತವೆ. ಎಂಡಿಆರ್ ಶುಲ್ಕವನ್ನು ಸಾಮಾನ್ಯವಾಗಿ ಮೊದಲೇ ಮಾಡಿಕೊಂಡ ಒಪ್ಪಂದದ ಅನ್ವಯ ವಿಧಿಸಲಾಗುತ್ತದೆ.
- ಎಂಡಿಆರ್ ಬ್ಯಾಂಕ್ ವಿತರಿಸುವ ಕಾರ್ಡ್ಗೆ ಪರಿಹಾರ ದೊರಕಿಸಿಕೊಡುತ್ತದೆ. ಸ್ವೈಪಿಂಗ್ ಮಿಷನ್ ಅಳವಡಿಸಿದ ಬ್ಯಾಂಕ್ಗೆ ಈ ಶುಲ್ಕವನ್ನು ಆಕರಿಸಲಾಗುತ್ತದೆ. ಅಂತೆಯೇ ನೆಟ್ವರ್ಕ್ ಸೇವೆ ಒದಗಿಸುವ ಮಾಸ್ಟರ್ಕಾರ್ಡ್ ಅಥವಾ ವೀಸಾದಂಥ ಕಂಪನಿಗಳಿಗೆ ಈ ಸೇವಾ ಶುಲ್ಕ ನೀಡಲಾಗುತ್ತದೆ. ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಗರಿಷ್ಠ ಎಂಡಿಆರ್ ನಿಗದಿಪಡಿಸಿದೆ. ಈ ಮೊತ್ತವನ್ನು ಪ್ರತಿ ವಹಿವಾಟಿನ ಮೇಲೆ ವಿಧಿಸಲು ಅವಕಾಶವಿದೆ.
2.ಭಾರತ- ಮೊರಾಕ್ಕೊ ಒಪ್ಪಂದ
ಪ್ರಮುಖ ಸುದ್ದಿ
- ಭಾರತ- ಮೊರಾಕ್ಕೊ ಆರೋಗ್ಯ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಅಡಿಯಲ್ಲಿ ಉಭಯ ದೇಶಗಳು ಗುರುತಿಸಲಾದ ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ.
- ಇದು ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಇದು ಉಭಯ ದೇಶಗಳಿಗೆ ನೆರವಾಗಲಿವೆ.
ಒಪ್ಪಂದದ ಮುಖ್ಯ ವಲಯಗಳು
- ಉತ್ತಮ ವಿಧಾನಗಳ ವಿನಿಮಯಕ್ಕಾಗಿ ಆಸ್ಪತ್ರೆಗಳ ನಡುವೆ ಸಂಪರ್ಕ ಸಾಧಿಸುವುದು
- ಆರೋಗ್ಯ ಸೇವೆಗಳ ಮತ್ತು ಆಸ್ಪತ್ರೆಗಳ ಆಡಳಿತ ಮತ್ತು ನಿರ್ವಹಣೆಗೆ ಸೂಕ್ತ ತರಬೇತಿ ವ್ಯವಸ್ಥೆಯನ್ನು ರೂಪಿಸುವುದು.
- ಸಾಂಕ್ರಾಮಿಕವಲ್ಲದ ಇತರ ರೋಗಗಳಾದ ಮಕ್ಕಳ ಹೃದಯ ರೋಗ ಮತ್ತು ಕ್ಯಾನ್ಸರ್ ರೋಗಕ್ಕೆ ಹೆಚ್ಚಿನ ಗಮನ ಹರಿಸುವುದು.
- ಹೆರಿಗೆ, ಮಕ್ಕಳ ಅಭಿವೃದ್ಧಿ ಮತ್ತು ನವಜಾತ ಶಿಶುಗಳ ಆರೋಗ್ಯ
3. 157 ಅನ್ಯ ದಾಳಿಕೋರ ಪ್ರಾಣಿ ಪ್ರಬೇಧಗಳ ಪಟ್ಟಿ (Alien invasive animal species)
ಪ್ರಮುಖ ಸುದ್ದಿ
- ಮೊಟ್ಟಮೊದಲ ಬಾರಿಗೆ 157 ಅನ್ಯ ದಾಳಿಕೋರ ಪ್ರಾಣಿ ಪ್ರಬೇಧವನ್ನು ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ ( ZSI) ಪಟ್ಟಿ ಮಾಡಿದೆ .
- ರಾಷ್ಟ್ರೀಯ ದಾಳಿಕೋರ ಅನ್ಯ ಪ್ರಭೇಧಗಳ ಸಮ್ಮೇಳನದ ವೇಳೆ ಈ ಪಟ್ಟಿಯನ್ನು ಪ್ರಕಟಿಸಲಾಯಿತು.
- ZSI ಹಾಗೂ ಬಟಾನಿಕಲ್ ಸರ್ವೇ ಆಫ್ ಇಂಡಿಯಾ ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸಿದ್ದವು.
- ಝೆಡ್ಎಸ್ಐ ಒಟ್ಟು 157 ಪ್ರಬೇಧಗಳನ್ನು ಪಟ್ಟಿ ಮಾಡಿದ್ದು, ಈ ಪೈಕಿ 58 ನೆಲ ಮತ್ತು ಜಲ ಸಂಪನ್ಮೂಲದಲ್ಲಿ ಇವೆ. 99 ಪ್ರಬೇಧಗಳು ಸಾಗರ ಪರಿಸರದಲ್ಲಿ ಕಂಡುಬರುತ್ತವೆ. 58 ಆಕ್ರಮಣಕಾರಿ ಪ್ರಬೇಧಗಳು ನೆಲ ಮತ್ತು ಸಿಹಿ ನೀರಿನಲ್ಲಿ ಕಂಡುಬರುತ್ತವೆ. ಇದರಲ್ಲಿ 19 ಮೀನು ಪ್ರಬೇಧ, 31 ಆರ್ಥೊಪಾಡ್, 3 ಮೊಲ್ಯುಸೆಸ್ ಹಾಗೂ ಹಕ್ಕಿಗಳು, ಒಂದು ಸರೀಸೃಪ ಹಾಗೂ 2 ಸಸ್ತನಿಗಳು ಸೇರಿವೆ.
ದಾಳಿಕೋರ ಪ್ರಾಣಿ ಪ್ರಬೇಧಗಳು ಎಂದರೇನು ?
- ದಾಳಿಕೋರ ಪ್ರಬೇಧದ ಪ್ರಾಣಿಗಳು ಸಾಮಾನ್ಯವಾಗಿ ಉದ್ದೇಶಪೂರ್ವಕ ಅಥವಾ ಆಕಸ್ಮಿಕವಾಗಿ ತಮ್ಮ ಸಹಜ ಸ್ಥಳಗಳಿಂದ ಹೊರಹಾಕಲ್ಪಟ್ಟಾಗ, ಇವು ಬೇರೆಡೆ ಆಕ್ರಮಣಕಾರಿಯಾಗುತ್ತವೆ ಹಾಗೂ ಇದು ಪರಿಸರ ಸಮತೋಲನಕ್ಕೆ ಧಕ್ಕೆಯಾಗಲು ಕಾರಣವಾಗುತ್ತವೆ. ದಾಳಿಕೋರ ಪ್ರಾಣಿ ಪ್ರಭೇಧಗಳು ಜೀವವೈವಿಧ್ಯ ಹಾಗೂ ಮಾನವ ಕಲ್ಯಾಣಕ್ಕೆ ಅಪಾಯಕಾರಿಯಾಗಿವೆ. ಇವು ಕೃಷಿ ಹಾಗೂ ಜೀವವೈವಿಧ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ.
- ಇಂಥ ದಾಳಿಕೋರ ಪ್ರಬೇಧಗಳ ಸಾಮಾನ್ಯ ಲಕ್ಷಣಗಳೆಂದರೆ ಕ್ಷಿಪ್ರ ಪುನರತ್ಪತ್ತಿ ಮತ್ತು ಅಭಿವೃದ್ಧಿ, ಅತ್ಯಧಿಕ ಖಿನ್ನತೆಯ ಸಾಮಥ್ರ್ಯ, ವಿವಿಧ ಆಹಾರ ವಿಧಾನದಲ್ಲಿ ಉಳಿದುಕೊಳ್ಳುವ ಸಾಮಥ್ರ್ಯ. ಜತೆಗೆಇದು ಹೊಸ ವಾತಾವರಣಕ್ಕೆ ಸುಲಭವಾಗಿ ಒಗ್ಗಿಕೊಳ್ಳುವ ಸಾಮಥ್ರ್ಯ ಹೊಂದಿವೆ.
ಕೆಲವು ಉದಾಹರಣೆ ಪ್ರಬೇಧಗಳು
- ಪರಾಕಸೊಸ್ ಮಾರ್ಜಿನಟಸ್ (ಪಪಯಾ ಮೆಲೆ ಬಗ್): ಇದು ಕೇಂದ್ರ ಅಮೆರಿಕದ ಮೆಕ್ಸಿಕೊ ಮೂಲದ ಪ್ರಭೇಧ. ಇದು ಅಸ್ಸಾಂ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪಪ್ಪಾಯಿ ನಾಶಕ್ಕೆ ಕಾರಣವಾಗಿದೆ.
- ಓಎನಾಕೊಕಸ್ ಸೊನೆಲೋಪ್ಸಿಸ್ (ಹತ್ತಿ ಹೇನು): ಇದು ಉತ್ತರ ಅಮೆರಿಕ ಮೂಲದ್ದು. ಇದು ಡೆಕ್ಕನ್ ಪ್ರಾಂತ್ಯದಲ್ಲಿ ಹತ್ತಿ ಬೆಳೆ ನಾಶಕ್ಕೆ ಕಾರಣವಾಗಿದೆ.
- ಫೆರಿಗೊಪಿಲಿಕ್ಟಸ್ ಪರ್ಡಾಲೀಸ್ (ಅಮೆಜಾನ್ ಸೈಲಿಫಿನ್ ಕ್ಯಾಟ್ಫಿಶ್): ಇದು ಕೊಲ್ಕತ್ತಾದ ಜೌಗು ಪ್ರದೇಶದ ಮೀನು ಪ್ರಬೇಧ ನಾಶಕ್ಕೆ ಕಾರಣವಾಗಿದೆ.
- ಅಕಾಟಿನಾ ಫ್ಯುಲಿಕಾ (ಆಫ್ರಿಕಲ್ ಆಪಲ್ ಬಸವನಹುಳು): ಇದು ಅತ್ಯಂತ ಆಕ್ರಮಣಕಾರಿಯಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮೊಟ್ಟಮೊದಲು ಕಾಣಿಸಿಕೊಂಡಿದೆ. ಇದು ದೇಶಾದ್ಯಂತ ಇದ್ದು, ಹಲವು ದೇಶಿ ಪ್ರಬೇಧಗಳ ನಾಶಕ್ಕೆ ಇದು ಕಾರಣವಾಗಿದೆ.
4.ಪಾದರಕ್ಷೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಪ್ಯಾಕೇಜ್ ಗೆ ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚರ್ಮ ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಪ್ಯಾಕೇಜ್ ಗೆ ತನ್ನ ಅನುಮೋದನೆ ನೀಡಿದೆ.
- ಈ ಪ್ಯಾಕೇಜ್ ಕೇಂದ್ರ ವಲಯದ ಯೋಜನೆ ‘ಭಾರತೀಯ ಪಾದರಕ್ಷೆ, ಚರ್ಮ ಮತ್ತು ಪರಿಕರಗಳ ಅಭಿವೃದ್ಧಿ ಕಾರ್ಯಕ್ರಮ’ವನ್ನು 2600 ಕೋಟಿ ರೂಪಾಯಿ ವೆಚ್ಚದಲ್ಲಿ 2017-18ರಿಂದ 2019-20ರ ಅವಧಿಯ ಮೂರು ಹಣಕಾಸು ವರ್ಷದಲ್ಲಿ ಜಾರಿಗೊಳಿಸುವುದನ್ನೂ ಒಳಗೊಂಡಿದೆ.
ಪ್ರಮುಖ ಪರಿಣಾಮಗಳು
- ಈ ಯೋಜನೆಯು ಚರ್ಮ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಇಂಬು ನೀಡುತ್ತದೆ, ಚರ್ಮ ವಲಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಪರಿಸರಾತ್ಮಕ ಕಾಳಜಿಯನ್ನೂ ನಿರ್ವಹಿಸುತ್ತದೆ, ಹೆಚ್ಚುವರಿ ಹೂಡಿಕೆಗೂ ಅವಕಾಶ ಕೊಡುತ್ತದೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದನೆ ಹೆಚ್ಚಿಸುತ್ತದೆ.
- ಹೆಚ್ಚಿಸಲಾದ ತೆರಿಗೆ ಪ್ರೋತ್ಸಾಹಕಗಳು ಈ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ವಲಯದಲ್ಲಿ ಋತುಮಾನದ ಪ್ರಕೃತಿಯ ದೃಷ್ಟಿಯಿಂದ ಕಾರ್ಮಿಕ ಕಾನೂನಿನ ಸುಧಾರಣೆಯು ಆರ್ಥಿಕತೆಯ ಪ್ರಮಾಣವನ್ನು ಬೆಂಬಲಿಸುತ್ತದೆ.
- ಈ ವಿಶೇಷ ಪ್ಯಾಕೇಜ್ 3 ವರ್ಷಗಳಲ್ಲಿ 24 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪಾದರಕ್ಷೆ, ಚರ್ಮ ಮತ್ತು ಪರಿಕರ ವಲಯದಲ್ಲಿ ಸಂಚಿತ ಪರಿಣಾಮದ 2 ಲಕ್ಷ ಉದ್ಯೋಗವನ್ನು ಔಪಚಾರೀಕರಿಸಲು ನೆರವಾಗುತ್ತದೆ.
ಭಾರತೀಯ ಪಾದರಕ್ಷೆ, ಚರ್ಮ ಮತ್ತು ಪರಿಕರ ಅಭಿವೃದ್ಧಿ ಕಾರ್ಯಕ್ರಮದ ವಿವರಗಳು
- ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್.ಆರ್.ಡಿ.) ಉಪ ಯೋಜನೆ: ಎಚ್ಆರ್.ಡಿ. ಉಪ ಯೋಜನೆಯು ನಿರುದ್ಯೋಗಿ ಜನರಿಗೆ ಉದ್ಯೋಗಾವಕಾಶ ಸಂಪರ್ಕಿತ ಕೌಶಲ ಅಭಿವೃದ್ಧಿ ತರಬೇತಿಗಾಗಿ ಪ್ರತಿಯೊಬ್ಬರಿಗೆ 15,000 ರೂ. ನಂತೆ, ಉದ್ಯೋಗದಲ್ಲಿರುವ ಕಾರ್ಮಿಕರಿಗೆ ಕೌಶಲ ವರ್ಧನೆ ತರಬೇತಿಗಾಗಿ ತಲಾ 5,000 ರೂ. ಮತ್ತು ತರಬೇತುದಾರರ ತರಬೇತಿಗಾಗಿ ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಒದಗಿಸುವ ಉದ್ದೇಶ ಹೊಂದಿದೆ. ಕೌಶಲ ಅಭಿವೃದ್ಧಿ ತರಬೇತಿ ವರ್ಗದಲ್ಲಿ ನೆರವು ಪಡೆಯಲು ತರಬೇತಿ ಪಡೆದವರಲ್ಲಿ ಶೇ.75ರಷ್ಟು ಉದ್ಯೋಗ ಕೊಡಿಸುವುದು ಕಡ್ಡಾಯವಾಗಿರುತ್ತದೆ. ಈ ಉಪ ಯೋಜನೆ ಪ್ರಸ್ತಾಪದ ಅಡಿಯಲ್ಲಿ 3 ವರ್ಷಗಳ ಅವಧಿಯಲ್ಲಿ 32 ಲಕ್ಷ ನಿರುದ್ಯೋಗಿ ಜನರಿಗೆ ತರಬೇತಿ/ಕೌಶಲ, 75000 ಹಾಲಿ ಉದ್ಯೋಗಿಗಳಿಗೆ ಕೌಶಲ ವರ್ಧನೆ ಮತ್ತು 150 ತರಬೇತುದಾರರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 696 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
- ಚರ್ಮ ವಲಯದ ಸಮಗ್ರ ಅಭಿವೃದ್ಧಿ (ಐಡಿಎಲ್.ಎಸ್.) ಉಪ ಯೋಜನೆ: ಐ.ಡಿ.ಎಲ್.ಎಸ್. ಉಪ ಯೋಜನೆಯು ಉದ್ಯೋಗ ಸೃಷ್ಟಿ ಸೇರಿದಂತೆ ಹೂಡಿಕೆ ಮತ್ತು ಉತ್ಪಾದನೆ ಪ್ರೋತ್ಸಾಹಿಸಲು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಮ್ಎಸ್ಎಮ್ಇ)ಗಳಿಗೆ ಹೊಸ ಘಟಕ ಮತ್ತು ಯಂತ್ರೋಪಕರಣಗಳ ಶೇ.30ರಷ್ಟು ವೆಚ್ಚ ಮತ್ತು ಅಸ್ತಿತ್ವದಲ್ಲಿರುವ ಇತರ ಘಟಕಗಳಲ್ಲಿ ಆಧುನೀಕರಣ / ತಂತ್ರಜ್ಞಾನ ಅಭಿವೃದ್ಧಿಗಾಗಿ ಮತ್ತು ಹೊಸ ಘಟಕ ಸ್ಥಾಪನೆಗೆ ಘಟಕ ಮತ್ತು ಯಂತ್ರೋಪಕರಣಗಳ ಶೇ.20ರಷ್ಟು ವೆಚ್ಚವನ್ನು ಬ್ಯಾಕ್ ಎಂಡ್ ಹೂಡಿಕೆ ಅನುದಾನ/ಸಬ್ಸಿಡಿಯನ್ನು ಒದಗಿಸಲು ಉದ್ದೇಶಿಸಿದೆ. ಈ ಉಪ ಯೋಜನೆಯಡಿಯಲ್ಲಿನ ಪ್ರಸ್ತಾವನೆಯು ಚರ್ಮ, ಪಾದರಕ್ಷೆ ಮತ್ತು ಪೂರಕ ಉಪಕರಣ ಮತ್ತು ಸಲಕರಣೆಗಳ ವಲಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1000 ಘಟಕಗಳನ್ನು 425 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರೋತ್ಸಾಹಿಸಲುದ್ದೇಶಿದೆ.
- ಸಾಂಸ್ಥಿಕ ಸೌಲಭ್ಯ ಸ್ಥಾಪನೆಯ ಉಪ ಯೋಜನೆ:ಈ ಉಪ ಯೋಜನೆಯು ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ (ಎಫ್.ಡಿಡಿಐ)ಗೆ ಎಫ್.ಡಿಡಿಐನ ಹಾಲಿ ಇರುವ ಕೆಲವು ಕ್ಯಾಂಪಸ್ ಗಳನ್ನು “ಉತ್ಕೃಷ್ಟತೆಯ ಕೇಂದ್ರ”ಗಳಾಗಿ ಮೇಲ್ದರ್ಜೆಗೇರಿಸಲು ಮತ್ತು 3 ಹೊಸ ಸಂಪೂರ್ಣ ಸುಸಜ್ಜಿತ ಕೌಶಲ ಕೇಂದ್ರಗಳ ಜೊತೆಗೆ ಮುಂಬರುವ ಬೃಹತ್ ಚರ್ಮ ಘಟಕಕ್ಕಾಗಿ ಯೋಜನಾ ಪ್ರಸ್ತಾವನೆಗನುಗುಣವಾಗಿ 3 ವರ್ಷಗಳಲ್ಲಿ 147 ಕೋಟಿ ರೂಪಾಯಿ ಹಂಚಿಕೆ ಪ್ರಸ್ತಾಪ ಹೊಂದಿದೆ.
- ಬೃಹತ್ ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರಗಳ ಕ್ಲಸ್ಟರ್ (ಎಂ.ಎಲ್.ಎಫ್.ಎ.ಸಿ.) ಉಪ ಯೋಜನೆ:ಎಂ.ಎಲ್.ಎಫ್.ಎ.ಸಿ. ಉಪ ಯೋಜನೆಯು ಬೃಹತ್ ಚರ್ಮ, ಪಾದರಕ್ಷೆ ಮತ್ತು ಅದಕ್ಕೆಪೂರಕ ಪರಿಕರ ಕ್ಲಸ್ಟರ್ ಸ್ಥಾಪಿಸುವ ಮೂಲಕ ಪಾದರಕ್ಷೆ ಮತ್ತು ಅದಕ್ಕೆಪೂರಕ ಪರಿಕರ ವಲಯಕ್ಕೆ ಮೂಲಸೌಕರ್ಯ ಬೆಂಬಲ ನೀಡಲು ಉದ್ದೇಶಿಸಿದೆ. 125 ಕೋಟಿ ರೂಪಾಯಿಗಳ ಸರ್ಕಾರದ ಗರಿಷ್ಠ ನೆರವಿನ ಮಿತಿಯೊಳಗೆ ಭೂಮಿಯ ವೆಚ್ಚ ಹೊರತುಪಡಿಸಿ ಅರ್ಹ ಯೋಜನೆಯ ಶೇ.50ರವರೆಗೆ ಶ್ರೇಯಾಂಕಿತ ನೆರವು ಒದಗಿಸಲು ಉದ್ದೇಶಿಸಲಾಗಿದೆ. ಮೂರು ವರ್ಷಗಳಲ್ಲಿ 3-4 ಹೊಸ ಎಂ.ಎಲ್.ಎಫ್.ಎ.ಸಿ.ಗಳನ್ನು ಬೆಂಬಲಿಸಲು 360 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
- ಚರ್ಮ ತಂತ್ರಜ್ಞಾನ, ನಾವಿನ್ಯ ಮತ್ತು ಪರಿಸರ ವಿಷಯಗಳ ಉಪ ಯೋಜನೆ: ಈ ಉಪ ಯೋಜನೆ ಅಡಿಯಲ್ಲಿ, ಸಾಮಾನ್ಯವಾಗಿ ಹೊರ ಹಾಕಲಾಗುವ ನೀರಿನ ಸಂಸ್ಕರಣೆ ಘಟಕಗಳ (ಸಿಇಟಿಪಿ) ಸ್ಥಾಪನೆ/ಮೇಲ್ದರ್ಜೆಗೇರಿಸಲು ಯೋಜನಾ ವೆಚ್ಚದ ಶೇ.70ರಂತೆ ನೆರವು ನೀಡಲಾಗುತ್ತದೆ. ಈ ಉಪ ಯೋಜನೆಯು ರಾಷ್ಟ್ರೀಯ ಮಟ್ಟದ ವಲಯವಾರು ಕೈಗಾರಿಕೆ ಮಂಡಳಿ/ಸಂಸ್ಥೆಗಳಿಗೆ ಬೆಂಬಲ ನೀಡಲಿದೆ ಮತ್ತು ಚರ್ಮದ ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದ ಮುನ್ನೋಟದ ದಸ್ತಾವೇಜು ತಯಾರಿಕೆಗೆ ಬೆಂಬಲ ನೀಡುತ್ತದೆ. ಈ ಉಪ ಯೋಜನೆಗೆ ಪ್ರಸ್ತಾಪಿತ ಹಣ ಹಂಚಿಕೆ 3 ವರ್ಷಗಳಿಗೆ 782 ಕೋಟಿ ರೂಪಾಯಿಯಾಗಿದೆ.
- ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದಲ್ಲಿ ಭಾರತೀಯ ಬ್ರ್ಯಾಂಡ್ ಉತ್ತೇಜನಕ್ಕೆ ಉಪ ಯೋಜನೆ: ಈ ಯೋಜನೆಯಡಿಯಲ್ಲಿ ಬ್ರ್ಯಾಂಡ್ ಉತ್ತೇಜನಕ್ಕಾಗಿ ಅನುಮೋದನೆಗೊಂಡ ಅರ್ಹ ಘಟಕಗಳಿಗೆ ನೆರವು ನೀಡಲುದ್ದೇಶಿಸಲಾಗಿದೆ. ಸರ್ಕಾರದ ನೆರವು ಒಟ್ಟು ಯೋಜನಾ ವೆಚ್ಚದ ಶೇ.50ರಷ್ಟಾಗಿದ್ದು, ಪ್ರತಿ ಬ್ರ್ಯಾಂಡ್ ಗೆ 3 ವರ್ಷಗಳಿಗೆ ಪ್ರತಿ ವರ್ಷಕ್ಕೆ 3 ಕೋಟಿ ರೂಪಾಯಿಯಾಗಿರುತ್ತದೆ. ಈ ಉಪ ಯೋಜನೆಯಡಿ 10 ಭಾರತೀಯ ಬ್ರ್ಯಾಂಡ್ ಗಳನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತೇಜಿಸಲು ಪ್ರಸ್ತಾಪಿಸಲಾಗಿದೆ.
- ಚರ್ಮ, ಪಾದರಕ್ಷೆ ಮತ್ತು ಪೂರಕ ಉಪಕರಣ ವಲಯದಲ್ಲಿ ಹೆಚ್ಚುವರಿ ಉದ್ಯೋಗ ಉಪಕ್ರಮದ ಉಪ ಯೋಜನೆ: ಈ ಯೋಜನೆಯಡಿ ಇಪಿಎಫ್ಓನಲ್ಲಿ ನೋಂದಣಿಯಾಗುವ ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದಲ್ಲಿನ ಎಲ್ಲ ಹೊಸ ಉದ್ಯೋಗಳಿಗೆ ಅವರ ಮೊದಲ ಮೂರು ವರ್ಷಗಳ ಉದ್ಯೋಗದಲ್ಲಿ ಕಾರ್ಮಿಕರಿಗೆ ಮಾಲೀಕರು ನೀಡುವ ಭವಿಷ್ಯನಿಧಿಯ ಶೇ.67 ದೇಣಿಗೆಯನ್ನು ಒದಗಿಸಲು ಉದ್ದೇಶಿಸಲಾಗಿದೆ.ಈ ಉಪ ಯೋಜನೆಯು 15 ಸಾವಿರ ರೂಪಾಯಿವರೆಗಿನ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರವೇ ಅನ್ವಯಿಸುತ್ತದೆ. ವಲಯದಲ್ಲಿ ಅಂದಾಜು 2 ಲಕ್ಷ ಉದ್ಯೋಗ ರೂಪಿಸಲು ನೆರವಾಗಲು 100 ಕೋಟಿ ರೂಪಾಯಿ ಹಂಚಿಕೆ ಮಾಡಲುದ್ದೇಶಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ಕಾರ್ಮಿಕ ಕಾಯಿದೆಗಳ ಸರಳೀಕರಣ ಕ್ರಮ ಮತ್ತು ಉದ್ಯೋಗ ಸೃಷ್ಟಿಯ ಉಪಕ್ರಮಗಳನ್ನೂ ಒಳಗೊಂಡಿದ್ದು, ಈ ಕೆಳಗಿನಂತಿದೆ:
- ಆದಾಯ ತೆರಿಗೆ ಕಾಯಿದೆ 80 ಜೆಜೆಎಎ ಸೆಕ್ಷನ್ ನ ಹೆಚ್ಚಿನ ವ್ಯಾಪ್ತಿ:ಕಾರ್ಖಾನೆಗಳಲ್ಲಿ ಸರಕುಗಳನ್ನು ತಯಾರಿಕೆಯಲ್ಲಿ ತೊಡಗಿಕೊಂಡಿರುವ ಭಾರತೀಯ ಕಂಪನಿಗಳ ಹೊಸ ಕಾರ್ಮಿಕನಿಗೆ ಮೂರು ವರ್ಷಗಳವರೆಗೆ ನೀಡಲಾಗುವ ಹೆಚ್ಚುವರಿ ವೇತನದ ಮೇಲೆ ಕಡಿತವನ್ನು, ಆದಾಯ ತೆರಿಗೆ ಕಾಯಿದೆಯ ವಿಭಾಗ 80ಜೆಜೆಎಎ ಅಡಿಯಲ್ಲಿ ವರ್ಷದಲ್ಲಿ ಕನಿಷ್ಠ 240 ದಿನಗಳ ಉದ್ಯೋಗದ ನಿಬಂಧನೆಗಳನ್ನು ಮತ್ತಷ್ಟು ಸಡಿಲಿಸಿ ಪಾದರಕ್ಷೆ, ಚರ್ಮ ಮತ್ತು ಪೂರಕ ಪರಿಕರಗಳ ವಲಯಕ್ಕೆ ಈ ದಿನಗಳ ಋತುಮಾನದ ಸ್ವರೂಪವಾಗಿ ಪರಿಗಣಿಸಿ 150 ದಿನಗಳಿಗೆ ನಿಗದಿ ಮಾಡಲಾಗಿದೆ.
- ನಿರ್ದಿಷ್ಠ ಅವಧಿಯ ಉದ್ಯೋಗದ ಪರಿಚಯ:ಜಾಗತಿಕ ಮಟ್ಟದಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಆಕರ್ಷಿಸಲು, ಕಾರ್ಮಿಕರಿಗೆ ಸಂಬಂಧಿಸಿದ ನಿಯಂತ್ರಣ ಚೌಕಟ್ಟಿನ ವಿಷಯಗಳನ್ನು ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರಣ ಕೈಗಾರಿಕೆಯ ಋತುಮಾನದ ಸ್ವರೂಪ ಪರಿಗಣಿಸಿ ಕೈಗಾರಿಕಾ ನೇಮಕಾತಿ (ಸ್ಥಾಯಿ ಆದೇಶ) ಕಾಯಿದೆ 1946ರ ಸೆಕ್ಷನ್ 15 ಸಬ್ ಸೆಕ್ಷನ್ (1)ರಡಿ ನಿರ್ದಿಷ್ಟ ಅವಧಿಯ ಉದ್ಯೋಗದ ಮೂಲಕ ನಿಭಾಯಿಸಲು ಪ್ರಸ್ತಾಪಿಸಲಾಗಿದೆ.
ONLY FOR PRELIMS
5.ಜಾಗತಿಕ ಆವಿಷ್ಕಾರ ಸೂಚ್ಯಂಕ (Global Innovation Index)
- ಈ ಸೂಚ್ಯಂಕವನ್ನು ಕಾರ್ನೆಲ್ S ವಿಶ್ವವಿದ್ಯಾಲಯ , WIPO(World Intellectual Property Organization) ಮತ್ತು INSEAD (ಫ್ರಾನ್ಸ್ ಮೂಲದ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್) ಬಿಡುಗಡೆ ಮಾಡಿದೆ.
- ಇದು 80 ಕ್ಕೂ ಹೆಚ್ಚು ಸೂಚಕಗಳನ್ನು ಬಳಸಿಕೊಂಡು ಅವರ ನಾವೀನ್ಯತೆ ಸಾಮರ್ಥ್ಯಗಳನ್ನು ಆಧರಿಸಿ ಶ್ರೇಣಿಗಳನ್ನು ನೀಡುತ್ತದೆ
- ಭಾರತವು -60 ನೇ ಸ್ಥಾನ(2017), 66 ನೇ ಸ್ಥಾನ (2016 ರಲ್ಲಿ) 81 ನೇ ಸ್ಥಾನ (2015 ರಲ್ಲಿ)
- ಸ್ವೀಡನ್, ನೆದರ್ಲ್ಯಾಂಡ್ಸ್, ಯುಎಸ್ ಮತ್ತು ಯುಕೆ ನಂತರ ಸ್ವಿಟ್ಜರ್ಲೆಂಡ್ ಅತ್ಯಂತ ನವೀನ ರಾಷ್ಟ್ರವಾಗಿದೆ.
- ಚೀನಾ ಮೊದಲ ಮಧ್ಯಮ-ಆದಾಯದ ರಾಷ್ಟ್ರವಾಗಿದ್ದು, ಇದು ಅಗ್ರ 25 ಶ್ರೇಯಾಂಕದಲ್ಲಿದೆ.
6.ಕ್ರಿಯಾತ್ಮಕ ಸಾಮಗ್ರಿಗಳ ಕುರಿತು ಜಾಗತಿಕ ಸಮ್ಮೇಳನ
- ಕ್ರಿಯಾತ್ಮಕ ಸಾಮಗ್ರಿಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನವನ್ನು ತೆಲಂಗಾಣದಲ್ಲಿ ನಡೆಸಲಾಗುತ್ತಿದೆ.
- ಈ ಸಮ್ಮೇಳನವು ಪ್ರಸ್ತುತ ಸಾಮಾಜಿಕ ವೈಜ್ಞಾನಿಕ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಯುವ ಸಂಶೋಧಕರಲ್ಲಿ ವೈಜ್ಞಾನಿಕ ಉದ್ವೇಗವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ .
- ಈ ಸಮ್ಮೇಳನವನ್ನು ರಾಜೀವ್ ಗಾಂಧಿ ಜ್ಞಾನ ತಂತ್ರಜ್ಞಾನ ವಿಶ್ವವಿದ್ಯಾಲಯ (ಆರ್.ಜಿ.ಕೆ.ಕೆ.ಟಿ) ಆಯೋಜಿಸಿದೆ.
- Theme: ‘Applications of smart materials in the areas of nano-science and nano-technology, synthetic chemistry, sensors and computational materials science’.