21st DECEMBER
1.ವಡೋದರದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ರೈಲುಮತ್ತುಸಾರಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟದ ಅನುಮೋದನೆ
ಪ್ರಮುಖಸುದ್ದಿ
- ತಂತ್ರಜ್ಞಾನ ಮತ್ತು ಮೂಲಸೌಕರ್ಯದ ವ್ಯಾಪಕ ಮೇಲ್ದರ್ಜೆ ಮೂಲಕ ಆಧುನೀಕರಣದ ಪಥದಲ್ಲಿ ಭಾರತೀಯ ರೈಲ್ವೆ.ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ನೆರವಾಗುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಮತ್ತು ಕೌಶಲ ಭಾರತಕ್ಕೂ ಕೊಡುಗೆ.
- ನಾವಿನ್ಯಪೂರ್ಣ ಉದ್ಯಮಶೀಲತೆಗೆ ವೇಗ ಮತ್ತು ನವೋದ್ಯಮ ಉಪಕ್ರಮಗಳಿಗೆ ಬೆಂಬಲ.
- ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳ ಬಳಕೆ: ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲು ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳನ್ನು ಬಳಸಿಕೊಳ್ಳುವ ಅತ್ಯುತ್ತಮ-ದರ್ಜೆಯ ಸಂಸ್ಥೆ ಎಂದು ಪರಿಗಣಿಸಲಾಗಿದೆ.
- ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲಪೂರ್ಣ ಮಾನವಶಕ್ತಿಯ ಮೂಲಕ ಸಾಗಣೆಯ ಕ್ಷೇತ್ರದಲ್ಲಿ ವಿಶ್ವದ ನಾಯಕನಾಗಿ ಹೊರ ಹೊಮ್ಮುತ್ತಿರುವ ಭಾರತ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತನ್ನ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವರ್ಧನೆಗಾಗಿ ವಡೋದರದಲ್ಲಿ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ (ಎನ್.ಆರ್.ಟಿ.ಯು) ಸ್ಥಾಪಿಸುವ ರೈಲ್ವೆ ಸಚಿವಾಲಯದ ಪರಿವರ್ತನಾತ್ಮಕ ಉಪಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಈ ನಾವಿನ್ಯಪೂರ್ಣ ಕಲ್ಪನೆಗೆ ಪ್ರಧಾನಮಂತ್ರಿಯವರ ಪ್ರೇರಣೆ ಕಾರಣವಾಗಿದ್ದು, ನವ ಭಾರತಕ್ಕೆ ರೈಲ್ವೆ ಮತ್ತು ಸಾರಿಗೆ ವಲಯವನ್ನು ಪರಿವರ್ತಿಸುವ ವೇಗವರ್ಧಕವಾಗಿದೆ.
ಪ್ರಮುಖಸಂಗತಿಗಳು
- ಯುಜಿಸಿ (ಸ್ವಾಯತ್ತ ವಿಶ್ವವಿದ್ಯಾಲಯಗಳ) ನಿಯಂತ್ರಣ, 2016ರ ಅನ್ವಯ ನವ ಪ್ರವರ್ಗದಡಿಯಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ. 2018ರ ಏಪ್ರಿಲ್ ಒಳಗಾಗಿ ಎಲ್ಲ ಅನುಮೋದನೆಗಳನ್ನೂ ಪಡೆಯಲು ಸರ್ಕಾರ ಕಾರ್ಯೋನ್ಮುಕವಾಗಿದ್ದು, 2018ರ ಜುಲೈನಿಂದ ಪ್ರಥಮ ಶೈಕ್ಷಣಿಕ ಕಾರ್ಯಕ್ರಮ ಆರಂಭವಾಗಲಿದೆ.
- ಕಂಪನಿಗಳ ಕಾಯಿದೆ 2013 ಸೆಕ್ಷನ್ 8ರ ಅಡಿಯಲ್ಲಿ ಲಾಭ ರಹಿತ ಕಂಪನಿಯಾಗಿ ರಚಿಸಲಾಗುವ ಈ ಪ್ರಸ್ತಾವಿತ ವಿಶ್ವವಿದ್ಯಾಲಯಕ್ಕೆ ರೈಲ್ವೆ ಸಚಿವಾಲಯವು ವ್ಯವಸ್ಥಾಪಕ ಕಂಪನಿಯಾಗಿರುತ್ತದೆ.
- ಕಂಪನಿಯು ಹಣಕಾಸು ಮತ್ತು ಮೂಲಸೌಕರ್ಯದ ಬೆಂಬಲವನ್ನು ವಿಶ್ವವಿದ್ಯಾಲಯಕ್ಕೆ ಒದಗಿಸುತ್ತದೆ ಮತ್ತು ವಿಶ್ವವಿದ್ಯಾಲಯಕ್ಕೆ ಕುಲಪತಿ ಮತ್ತು ಪ್ರೋ ಚಾನ್ಸಲರ್ ಗಳನ್ನು ನೇಮಕ ಮಾಡುತ್ತದೆ. ಆಡಳಿತ ಮಂಡಳಿಯು ಶೈಕ್ಷಣಿಕ ಮತ್ತು ವೃತ್ತಿಪರರನ್ನು ಒಳಗೊಂಡು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿಭಾಯಿಸಲು ಸಂಪೂರ್ಣ ಸ್ವಾಯತ್ತ ಕಂಪನಿಯಾಗಿ ನಿರ್ವಹಣೆ ಮಾಡುತ್ತದೆ.
- ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ ಗುಜರಾತ್ ನ ವಡೋದರದ ಭಾರತೀಯ ರಾಷ್ಟ್ರೀಯ ರೈಲು ಅಕಾಡಮಿ (ಎನ್.ಎ.ಐ.ಆರ್.)ಯಲ್ಲಿರುವ ಹಾಲಿ ಜಮೀನು ಮತ್ತು ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಸೂಕ್ತವಾಗಿ ಪರಿವರ್ತನೆ ಮತ್ತು ಆಧುನೀಕರಣ ಮಾಡಿಕೊಳ್ಳಲಾಗುತ್ತದೆ. ಇದರ ಪೂರ್ಣ ದಾಖಲಾತಿಯಲ್ಲಿ 3 ಸಾವಿರ ಪೂರ್ಣಕಾಲಿಕ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಅಂದಾಜಿದೆ. ಹೊಸ ವಿಶ್ವವಿದ್ಯಾಲಯ/ಸಂಸ್ಥೆಗೆ ರೈಲ್ವೆ ಸಚಿವಾಲಯವು ಸಂಪೂರ್ಣ ಹಣಕಾಸು ಒದಗಿಸುತ್ತದೆ.
- ಈ ವಿಶ್ವವಿದ್ಯಾಲಯವು ಭಾರತೀಯ ರೈಲ್ವೆಯನ್ನು ಆಧುನೀಕರಣದ ಪಥದಲ್ಲಿ ಸಾಗುವಂತೆ ಮಾಡಲಿದೆ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಿ ಭಾರತವನ್ನು ಸಾರಿಗೆ ವಲಯದಲ್ಲಿ ಜಾಗತಿಕ ನಾಯಕನಾಗಿ ಪರಿವರ್ತಿಸುತ್ತದೆ. ಇದು ನುರಿತ ಮಾನವ ಸಂಪನ್ಮೂಲ ಸೃಷ್ಟಿಸುತ್ತದೆ ಮತ್ತು ಭಾರತೀಯ ರೈಲ್ವೆಗೆ ಉತ್ತಮ ಸುರಕ್ಷತೆ, ವೇಗ ಮತ್ತು ಸೇವೆ ಪೂರೈಸಲು ಅತ್ಯಾಧುನಿಕ ತಂತ್ರಜ್ಞಾನ ಒದಗಿಸುತ್ತದೆ.
- ತಂತ್ರಜ್ಞಾನ ಮತ್ತು ಜ್ಞಾನವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಇದು ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಕೌಶಲ ಭಾರತಕ್ಕೆ ಬೆಂಬಲ ನೀಡುತ್ತದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಹಾಗೂ ಉದ್ಯಮಶೀಲತೆಯನ್ನು ತ್ವರಿತಗೊಳಿಸುತ್ತದೆ.
- ಇದು ಪ್ರಯಾಣಿಕರ ಮತ್ತು ಸರಕಿನ ತ್ವರಿತ ಸಾಗಣೆಗೆ ಅವಕಾಶ ಕಲ್ಪಿಸಿ ರೈಲ್ವೆ ಮತ್ತು ಸಾರಿಗೆ ವಲಯದ ಪರಿವರ್ತನೆಗೆ ಇಂಬು ನೀಡುತ್ತದೆ. ಜಾಗತಿಕ ಪಾಲುದಾರಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ನಿರ್ಧರಣೆ ಮೂಲಕ ಭಾರತವು ತಜ್ಞತೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ.
- ಉದ್ಯೋಗ ಸಾಧನೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ವಿಶ್ವವಿದ್ಯಾಲಯವು ಇತ್ತೀಚಿನ ಶೈಕ್ಷಣಿಕ ಮತ್ತು ತಂತ್ರಜ್ಞಾನದ ಆನ್ವಯಿಕ (ಉಪಗ್ರಹ ಆಧಾರಿತ ಜಾಡೀಕರಣ, ರೇಡಿಯೊ ತರಂಗಾಂತರ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ) ಬಳಕೆ ಮಾಡಿಕೊಳ್ಳಲು ಯೋಜಿಸಿದೆ. ಭಾರತೀಯ ರೈಲ್ವೆಯೊಂದಿಗಿನ ಆಪ್ತ ಸಹಯೋಗವು ಬಾಧ್ಯಸ್ಥರಿಗೆ ರೈಲ್ವೆ ಸೌಲಭ್ಯಗಳು ಲಭಿಸುವುದನ್ನು ಖಾತ್ರಿಪಡಿಸುತ್ತದೆ, ಇದು ಜೀವಂತ ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಇವು ಜೀವನದ ನೈಜ ತೊಂದರೆಗಳನ್ನು ಪರಿಹರಿಸಲು ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ. ಇದು ಉನ್ನತ ದರ್ಜೆಯ, ಅತಿ ವೇಗದ ರೈಲಿನಂಥ ಆಧುನಿಕ ತಂತ್ರಜ್ಞಾನ ಪ್ರದರ್ಶಿಸುವ ತಜ್ಞತೆಯ ಕೇಂದ್ರಗಳನ್ನೂ ಒಳಗೊಂಡಿರುತ್ತದೆ.
ಹಿನ್ನೆಲೆ
- ಭಾರತದ ಸರ್ಕಾರವು ಮುಂದಿನ ಶತಮಾನದದ ಮೇಲೆ ಪರಿಣಾಮ ಬೀರುವಂಥ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ವಡೋದರದಲ್ಲಿ ದೇಶದ ಮೊದಲ ರೈಲ್ವೇ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ತೀರ್ಮಾನಿಸಿದೆ. – 2016 ರ ಅಕ್ಟೋಬರ್ ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ರೈಲ್ವೆ ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡಿದರು.
- ಭಾರತೀಯ ರೈಲ್ವೆ ಮಹತ್ವಾಕಾಂಕ್ಷೆಯ ಯೋಜನೆಗಳಾದ ಅತಿ ವೇಗದ ರೈಲು (ಬುಲೆಟ್ ರೈಲು ಎಂದೇ ಖ್ಯಾತವಾದ)ಗಳು, ಬೃಹತ್ ಮೂಲಸೌಕರ್ಯ ಆಧುನೀಕರಣ, ಸಮರ್ಪಿತ ಸರಕು ಕಾರಿಡಾರ್ ಗಳು (ಡಿಎಫ್.ಸಿ.ಗಳು), ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ಇತ್ಯಾದಿಗಳನ್ನು ಕೈಗೊಳ್ಳಲು ಮುಂದಾಗಿದೆ.
- ಭಾರತೀಯ ರೈಲ್ವೆಗೆ ಉನ್ನತ ದರ್ಜೆಯ ಕೌಶಲ ಮತ್ತು ವೃತ್ತಿಪರತೆಯ ಅಗತ್ಯವಿದೆ. ಜೊತೆಗೆ ಭಾರತದ ಸಾರಿಗೆ ವಲಯದಲ್ಲಿನ ಅಭೂತಪೂರ್ವ ವೃದ್ಧಿಯು, ಅರ್ಹ ಮಾನವ ಶಕ್ತಿಯ ಮತ್ತು ಕೌಶಲ ಮೇಲ್ದರ್ಜೆಗೇರಿಸುವ ಅಗತ್ಯ ಹೆಚ್ಚಿಸಿದೆ ಮತ್ತು ಭಾರತೀಯ ರೈಲ್ವೆಯ ಅಗತ್ಯಕ್ಕೆ ವಿಶ್ವ-ಮಟ್ಟದ ತರಬೇತಿ ಕೇಂದ್ರ ಅನಿವಾರ್ಯವಾಗಿದೆ.
2.ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ಹನ್ನೆರೆಡು ವಾರಗಳ ಕಾಲ ಅಂದರೆ 2018ರ ಏಪ್ರಿಲ್ 2ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.
ಪ್ರಮುಖಅಂಶಗಳು
- ಅವಧಿ ವಿಸ್ತರಣೆಯು ಓಬಿಸಿಗಳ ಉಪ ವರ್ಗೀಕರಣ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಆಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ.
- ಈ ಆಯೋಗವನ್ನು 2017ರ ಅಕ್ಟೋಬರ್ 2ರಂದು ಸಂವಿಧಾನದ 340ನೇ ವಿಧಿಯಡಿಯಲ್ಲಿ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಸ್ಥಾಪಿಸಲಾಗಿತ್ತು ಮತ್ತು ಆಯೋಗದ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ದಿನದಿಂದ 12 ವಾರಗಳ ಒಳಗಾಗಿ ತಮ್ಮ ವರದಿಯನ್ನು ಸಲ್ಲಿಸಲು ನಿರ್ಣಯಿಸಲಾಗಿತ್ತು.
ಹಿನ್ನೆಲೆ:
- ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ಜಿ. ರೋಹಿಣಿ ಅವರ ಅಧ್ಯಕ್ಷತೆಯ ಆಯೋಗವು 2017ರ ಅಕ್ಟೋಬರ್ 11ರಿಂದ ಕಾರ್ಯಾರಂಭ ಮಾಡಿದ್ದು, ಓಬಿಸಿಗಳಿಗೆ ಮೀಸಲು ಇರುವ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮತ್ತು ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳೊಂದಿಗೆ ಮಾತುಕತೆ ನಡೆಸಿದೆ.
- ಇತರ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿಗೆ ಸೇರಿದ ಜಾತಿ / ಸಮುದಾಯಗಳ ನಡುವೆ ಮೀಸಲಾತಿಗಳ ಪ್ರಯೋಜನಗಳ ಅಸಮರ್ಥ ಹಂಚಿಕೆಯನ್ನು ನಿರ್ಧರಿಸುವ ದೃಷ್ಟಿಯಿಂದ ಆಯೋಗವು, ಕಳೆದ ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣ ಕೋರ್ಸ್ ಗಳಲ್ಲಿ ಒಬಿಸಿಗಳ ಪ್ರವೇಶ ಕುರಿತಂತೆ 197 ಉನ್ನತ ಶಿಕ್ಷಣ ಸಂಸ್ಥೆಗಳಿಂದ ಮಾಹಿತಿಯ ದತ್ತಾಂಶ ಕೋರಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಮತ್ತು ಸಿಪಿಎಸ್.ಇ.ಗಳಲ್ಲಿ ಒಬಿಸಿ ವ್ಯಕ್ತಿಗಳ ನೇಮಕಾತಿ ಕುರಿತಂತೆಯೂ ಮಾಹಿತಿಯ ದತ್ತಾಂಶವನ್ನು ಕೇಳಿದೆ,
- ಬೃಹತ್ ಗಾತ್ರದ ದತ್ತಾಂಶ ಮತ್ತು ಅದರ ವಿಶ್ಲೇಷಣೆಗೆ ಮತ್ತು ಸಮಗ್ರ ವರದಿಯನ್ನು ಸಿದ್ಧಪಡಿಸಲು ಸಮಯಾವಕಾಶದ ಅಗತ್ಯವನ್ನು ಮನಗಂಡು, ಆಯೋಗವು ತನ್ನ ಅವಧಿಯನ್ನು 12 ವಾರಗಳ ಕಾಲ ವಿಸ್ತರಣೆ ಮಾಡುವಂತೆ ಕೋರಿತ್ತು.
3.ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ಎಂ.ಓ.ಯು.ಗೆ. ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
- ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಡಿಸೆಂಬರ್ 6ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳಲ್ಲಿನ ಸಹಕಾರವನ್ನು ಒಳಗೊಂಡಿದೆ:
- ವೈದ್ಯರು, ವೈದ್ಯಾಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರ ವಿನಿಮಯ ಮತ್ತು ತರಬೇತಿ.
- ಆರೋಗ್ಯ ಸೇವೆಗಳು, ಆರೋಗ್ಯ ಸೇವೆಯ ಸೌಲಭ್ಯ ಸ್ಥಾಪನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು.
- ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಅಲ್ಪಾವಧಿ ತರಭೇತಿ.
- ಔಷಧ ಸಂಸ್ಥೆಗಳ, ವೈದ್ಯಕೀಯ ಸಲಕರಣೆಗಳ ನಿಯಂತ್ರಣ ಮತ್ತು ಮಾಹಿತಿಯ ವಿನಿಮಯ.
- ಔಷಧ ವ್ಯಾಪಾರ ಮತ್ತು ಪಕ್ಷಕಾರರು ಗುರುತಿಸುವ ಇತರ ಅವಕಾಶಗಳನ್ನು ಉತ್ತೇಜಿಸುವುದು.
- ಜೆನರಿಕ್ ಮತ್ತು ಅಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಯ ಶೋಧದಲ್ಲಿ ಸಹಕಾರ.
- ಆರೋಗ್ಯ ಸಾಧನಗಳು ಮತ್ತು ಔಷಧ ಉತ್ಪನ್ನಗಳ ದಾಸ್ತಾನು.
- ಪರಸ್ಪರರು ಒಪ್ಪಿಗೆಯಿಂದ ಸಮ್ಮತಿಸುವ ಯಾವುದೇ ಇತರ ಕ್ಷೇತ್ರ.
- ಸಹಕಾರದ ವಿವರಗಳನ್ನು ಹೆಚ್ಚು ವಿಸ್ತೃತಗೊಳಿಸಲು ಮತ್ತು ಎಂ.ಓ.ಯು. ಜಾರಿಯ ಉಸ್ತುವಾರಿಗೆ ಜಂಟಿ ಕಾರ್ಯ ಪಡೆ (ಜೆಡಬ್ಲ್ಯುಜಿ) ಸ್ಥಾಪಿಸಲಾಗುತ್ತದೆ.
4.ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ನವೆಂಬರ್ 29ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.
ಈತಿಳಿವಳಿಕೆಒಪ್ಪಂದವು ಈ ಕೆಳಗಿನ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ:-
- ವೈದ್ಯರು, ವೈದ್ಯಾಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರ ವಿನಿಮಯ ಮತ್ತು ತರಬೇತಿ.
- ಆರೋಗ್ಯ ಸೇವೆಗಳು, ಆರೋಗ್ಯ ರಕ್ಷಣೆಯ ಸೌಲಭ್ಯ ಸ್ಥಾಪನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು.
- ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಅಲ್ಪಾವಧಿ ತರಬೇತಿ.
- ಔಷಧ ಸಂಸ್ಥೆಗಳ, ವೈದ್ಯಕೀಯ ಸಲಕರಣೆಗಳ ಮತ್ತು ಪ್ರಸಾದನಗಳ ನಿಯಂತ್ರಣ ಮತ್ತು ಅದರ ಮೇಲಿನ ಮಾಹಿತಿಯ ವಿನಿಮಯ.
- ಔಷಧ ವ್ಯಾಪಾರ ಅಭಿವೃದ್ಧಿಯ ಅವಕಾಶಗಳ ಉತ್ತೇಜನ.
- ಜೆನರಿಕ್ ಮತ್ತು ಅಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಯ ಶೋಧದಲ್ಲಿ ಸಹಕಾರ.
- ಆರೋಗ್ಯ ಸಾಧನಗಳು ಮತ್ತು ಔಷಧ ಉತ್ಪನ್ನಗಳ ದಾಸ್ತಾನು.
- ಪರಸ್ಪರ ಆಸಕ್ತಿಯ ಎನ್.ಸಿ.ಡಿ.ಗಳ, ಅಂದರೆ ಎಸ್.ಡಿ.ಜಿ3 ಮತ್ತು ಸಂಬಂಧಿತ ಅಂಶಗಳ ಮೇಲೆ ಮಹತ್ವ ಹೊಂದಿರುವ ನ್ಯೂರೋಕಾರ್ಡಿಯೋವಾಸ್ಕ್ಯೂಲರ್ ಕಾಯಿಲೆಗಳು, ಕ್ಯಾನ್ಸರ್, ಸಿಓಪಿಡಿಗಳು, ಮಾನಸಿಕ ಆರೋಗ್ಯ ಮತ್ತು ಬುದ್ಧಿಮಾಂದ್ಯತೆ ತಡೆಗೆ ಸಹಯೋಗ.
- ಸಾಂಕ್ರಾಮಿಕ ರೋಗಗಳು ಮತ್ತು ಗಾಳಿಯಿಂದ ಹರಡುವ ರೋಗಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಕ್ಷೇತ್ರದಲ್ಲಿನ ಸಹಯೋಗ.
- ಸಿಡಿಜಿ2 ಮತ್ತು ಪೌಷ್ಟಿಕತೆ ಸೇವೆಗಳ ಸಂಘಟನೆಯ ನಿಟ್ಟಿನಲ್ಲಿ ಅಪೌಷ್ಟಿಕತೆ ಸೇರಿದಂತೆ (ಹೆಚ್ಚಿನ ಪೌಷ್ಟಿಕತೆ ಮತ್ತು ಕುಪೋಷಣೆ) ಸ್ವೀಕರಿಸುವ ಆಹಾರದ ಪೌಷ್ಟಿಕತೆಯ ಅಂಶಗಳು.
- ಉತ್ಪಾದನೆ, ಪರಿವರ್ತನೆ, ವಿತರಣೆ ಮತ್ತು ಆಹಾರ ಸರಬರಾಜಿನ ಸುರಕ್ಷತೆ.
- ಆಹಾರಕೈಗಾರಿಕೆನಿರ್ವಾಹಕರತರಭೇತಿಮತ್ತುಸಂಶೋಧನೆ.
- ಸ್ವಚ್ಛತೆಮತ್ತುಆಹಾರಸುರಕ್ಷತೆಮತ್ತುಆರೋಗ್ಯಪೂರ್ಣಆಹಾರಸೇವನೆಹವ್ಯಾಸಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂವಹನ; ಹಾಗೂಪರಸ್ಪರರುಒಪ್ಪಿಗೆಯಿಂದಸಮ್ಮತಿಸುವಯಾವುದೇಇತರಕ್ಷೇತ್ರ.
- ಸಹಕಾರದ ವಿವರಗಳನ್ನು ಹೆಚ್ಚು ವಿಸ್ತೃತಗೊಳಿಸಲು ಮತ್ತು ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಜಾರಿಯ ಉಸ್ತುವಾರಿಗೆ ಜಂಟಿ ಕಾರ್ಯ ಪಡೆ (ಜೆಡಬ್ಲ್ಯುಜಿ) ಸ್ಥಾಪಿಸಲಾಗುತ್ತದೆ.
ONLY FOR PRELIMS
5.ಸ್ತ್ರೀವೆ (STRIVE) ಯೋಜನೆ
- Skill Strengthening for Industrial Value Enhancement (STRIVE)
- ಇದನ್ನು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಕೈಗಾರಿಕಾ ಮೌಲ್ಯ ವರ್ಧನೆಗೆ ಬಲಪಡಿಸುವ ಉದ್ದೇಶದಿಂದ ಜಾರಿಗೆ ಗೊಳಿಸಲಾಗದೆ
- ಐಟಿಐಗಳಲ್ಲಿ ಒದಗಿಸಲಾದ ಔದ್ಯೋಗಿಕ ತರಬೇತಿಯ ಗುಣಮಟ್ಟದ ಮತ್ತು ಮಾರುಕಟ್ಟೆ ಪ್ರಸ್ತುತತೆಯನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ.
- ಈ ಯೋಜನೆಯು ಕ್ಲಸ್ಟರ್ ವಿಧಾನದ ಮೂಲಕ ವೃತ್ತಿ ಕಾರ್ಯಕ್ರಮವನ್ನು ಬಲಪಡಿಸುತ್ತದೆ.
- ಇದು ವೊಕೇಶನಲ್ ಎಜುಕೇಶನ್ ಅಂಡ್ ಟ್ರೈನಿಂಗ್ (ವಿಇಟಿ) ಅನ್ನು ಸ್ಥಾಪಿಸುವಲ್ಲಿ ನೆರವಾಗುತ್ತದೆ.
- ವೃತ್ತಿಪರ ಶಿಕ್ಷಣದಲ್ಲಿ ಏಕರೂಪತೆಯನ್ನು ತರಲು ಮತ್ತು ಪ್ರಮಾಣೀಕರಣವನ್ನು ನಿಯಂತ್ರಿಸುವ ವೃತ್ತಿಪರ ಶಿಕ್ಷಣದ ರಾಷ್ಟ್ರೀಯ ಸಂಸ್ಥೆಯಾಗಿದೆ.
- ಇದು ವಿಶ್ವ ಬ್ಯಾಂಕ್ ಸಾಲ ಸಹಾಯದಿಂದ ಬೆಂಬಲಿತವಾಗಿದೆ.
- ಈ ಯೋಜನೆಗೆ USD 125 ದಶಲಕ್ಷದಷ್ಟು ಸಾಲಕ್ಕೆ ಇತ್ತೀಚೆಗೆ ವಿಶ್ವ ಬ್ಯಾಂಕ್ನೊಂದಿಗೆ ಭಾರತ ಸರ್ಕಾರ ಹಣಕಾಸು ಒಪ್ಪಂದಕ್ಕೆ ಸಹಿ ಹಾಕಿದೆ.
6.’ನಸೀಮ್ ಅಲ್ ಬಹರ್ ‘
- ಇದು ಭಾರತೀಯ ನೌಕಾಪಡೆ ಮತ್ತು ಓಮನ್ ನೌಕಾಪಡೆಯ ನಡುವಿನ ದ್ವಿಪಕ್ಷೀಯ ವ್ಯಾಯಾಮವಾಗಿದೆ.
- ಈ ವ್ಯಾಯಾಮವನ್ನು “ಸೀ ಬ್ರೀಜ್” ಎಂದು ಕರೆಯಲಾಗುತ್ತದೆ.
- ಈ ವ್ಯಾಯಾಮದ 11 ನೇ ಆವೃತ್ತಿ ಮಸ್ಕಟ್ನಲ್ಲಿ ನಡೆಯಿತು.
- ಭಾರತವು 4000 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಓಮಾನ್ನೊಂದಿಗಿನ ಪುರಾತನ ಕಡಲ ಸಂಪ್ರದಾಯ ಮತ್ತು ಕಡಲ ಸಂವಹನವನ್ನು ಹೊಂದಿದೆ.
- ಮೆಸೊಪಟಮಿಯಾ , ಬಹ್ರೇನ್, ಮತ್ತು ಒಮಾನ್ ಪ್ರದೇಶಗಳಲ್ಲಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಯು ಸಿಂಧೂ ಕಣಿವೆ ನಾಗರೀಕತೆಯ ಪತ್ತೆಹಚ್ಚುವಿಕೆಯ ಕಲಾಕೃತಿಗಳನ್ನು ಚೇತರಿಸಿಕೊಳ್ಳಲು ಕಾರಣವಾಗಿದೆ.
- ಭಾರತ ಮತ್ತು ಓಮನ್ ರಾಷ್ಟ್ರಗಳ ನಡುವೆ ಮೊದಲ ಬಾರಿಗೆ 1953 ರ ಇಂಡೋ-ಒಮಾನ್ ಒಪ್ಪಂದದ ಸ್ನೇಹ, ಸಂಚಾರ ಮತ್ತು ವಾಣಿಜ್ಯ ಒಪ್ಪಂದಕ್ಕೆ ಭಾರತೀಯ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಔಪಚಾರಿಕವಾಗಿ ಸ್ಥಾಪಿಸಲ್ಪಟ್ಟವು.
- ಕಥನ ಭಾರತಿ ಸೇರಿ ಕನ್ನಡಕ್ಕೆ 2 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿಯ 2017ರ ಸಾಲಿನ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಕನ್ನಡದ ಒಂದು ಕೃತಿ ಹಾಗೂ ಮತ್ತೊಂದು ಅನುವಾದಿತ ಕೃತಿ ಆಯ್ಕೆಯಾಗಿವೆ.
- 2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡದ ಟಿ.ಪಿ. ಅಶೋಕ ಅವರ ಕಥನ ಭಾರತಿ ಕೃತಿ ಆಯ್ಕೆಯಾಗಿದೆ.ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿದೆ.
- 2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದ್ದು, ಕನ್ನಡದ ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- 1 ಮತ್ತು 2 ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ 50 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿ ತಿಳಿಸಿದೆ.
- ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಕಥನ ಭಾರತಿ ಕೃತಿಯ ಕರ್ತೃ ಟಿ.ಪಿ ಅಶೋಕ, ಎರಡು ವರ್ಷಗಳ ಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಈಗ ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಪಕ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
8.’ಬೆಸ್ಕಾಂ ಮಿತ್ರ‘ ಆ್ಯಪ್
- ಬೆಂಗಳೂರು ಹಾಗೂ ಸುತ್ತಮುತ್ತಲ ಗ್ರಾಹಕರಿಗೆ ಅನುಕೂಲವಾಗುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ‘ಬೆಸ್ಕಾಂ ಮಿತ್ರ’ವೇನ್ನುವ ಮೊಬೈಲ್ ಅಪ್ಲಿಕೇಷನ್ ಒಂದನ್ನು ಹೊರತಂದಿದೆ.
- ಬೆಸ್ಕಾಂ ಕುರಿತಂತೆ ಸಂಪೂರ್ಣ ಮಾಹಿತಿ ಈ ಆ್ಯಪ್ನಲ್ಲಿ ಲಭ್ಯವಿದ್ದು ಬೆಸ್ಕಾಂ ಗೆ ಸಂಬಂಧಿಸಿ ನಿಯಮಗಳು, ವಿದ್ಯುತ್ ದರ, ವಿದ್ಯುತ್ ಕಡಿತದ ಕುರಿತ ಮಾಹಿತಿ, ಹಣ ಪಾವತಿಯ ವಿವರ, ಆನ್ ಲೈನ್ ಬಿಲ್ ಪಾವತಿ ಸೌಲಭ್ಯವನ್ನು ಹೊಂದಿದೆ.
- ಇಷ್ಟೇ ಅಲ್ಲದೆ ಬೆಸ್ಕಾಂ ಸಂಬಂಧಿ ದೂರುಗಳನ್ನು ಸಹ ಇದೇ ಆ್ಯಪ್ ಸಹಾಯದಿಂದ ದಾಖಲಿಸಬಹುದು. ಇದಕ್ಕಾಗಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು ಬೆಸ್ಕಾಂ ಸದ್ಯ ಗೂಗಲ್ನ ಪ್ಲೇ ಸ್ಟೋರ್ ಹಾಗೂ ಆ್ಯಪಲ್ನ ಆ್ಯಪ್ ಸ್ಟೋರ್ನಲ್ಲಿ (ಐಒಎಸ್) ಈ ಆ್ಯಪ್ ಡೌನ್ ಲೋಡ್ ಗೆ ಸಿಗುತ್ತಿದೆ.