22nd JUNE.-DAILY CURRENT AFFAIRS BRIEF

22nd JUNE

 

1.ವಾಣಿಜ್ಯ ಸಮರಕ್ಕೆ ಭಾರತ ಪ್ರವೇಶ

 

ಪ್ರಮುಖ ಸುದ್ದಿ

 

  • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಆಮದು ವಸ್ತುಗಳ ಮೇಲೆ ಸುಂಕ ಹೆಚ್ಚಿಸಿ ವಾಣಿಜ್ಯ ಸಮರ ಆರಂಭಿಸಿರುವ ಬೆನ್ನಲ್ಲೇ ಭಾರತ ಕೂಡ ಅಮೆರಿಕದ ಹಲವು ವಸ್ತುಗಳಿಗೆ ಆಮದು ಸುಂಕವನ್ನು ಹೆಚ್ಚಳ ಮಾಡಿದೆ. ಆಗಸ್ಟ್ 4ರಿಂದ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 

ಮುಖ್ಯ ಅಂಶಗಳು

  • ಕೃಷಿ ಸಂಬಂಧಿತ ಹಲವು ಉತ್ಪನ್ನಗಳನ್ನು ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ. ವಿಶ್ವದ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಗಳ ಪೈಕಿ ಭಾರತವೂ ಒಂದಾಗಿದೆ. ಅಮೆರಿಕದಿಂದ ಆಮದಾಗುವ ಹಲವು ರೀತಿಯ ಹಣ್ಣು, ಧಾನ್ಯ, ಆಹಾರ ಪದಾರ್ಥ ಗಳ ಮೇಲೆ ಭಾರತ ಆಮದು ಸುಂಕವನ್ನು ಏರಿಕೆ ಮಾಡಿದೆ.

 

  • ಅಮೆರಿಕದಿಂದ ಏನೇನು ಆಮದು?: 2016ರಲ್ಲಿ ಭಾರತ ಅಮೆರಿಕದಿಂದ 88 ಸಾವಿರ ಕೋಟಿ ರೂ. ಮೌಲ್ಯದ ಕೃಷಿ ಸಂಬಂಧಿತ ವಿವಿಧ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಸೇಬುಹಣ್ಣು, ಬಾದಾಮಿ, ಟ್ರೀ ನಟ್, ಹತ್ತಿ, ಧಾನ್ಯಗಳು, ತಾಜಾ ಹಣ್ಣು, ಕೆಲ ಬಿತ್ತನೆ ಬೀಜ, ಮಾಂಸ, ಆಹಾರ ಪದಾರ್ಥಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

 

  • ಅಮೆರಿಕದ ಒಟ್ಟು 30 ಉತ್ಪನ್ನಗಳಿಗೆ ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಬಳಿಕ 800 ಸಿಸಿ ಮೇಲ್ಪಟ್ಟ ಬೈಕ್​ಗಳನ್ನು ವ್ಯಾಪ್ತಿಯಿಂದ ಹೊರಗಿಡಲಾಯಿತು. ಪ್ರಸ್ತುತ ಅಮೆರಿಕದ 29 ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ವಿಧಿಸಲಾಗುವುದು.

 

ಈಗ ಯಾವುದಕ್ಕೆ ಸುಂಕ ಏರಿಕೆ?

 

  • ಅರ್ಟೆಮಿಯಾ ಎಂದು ಕರೆಯಲಾಗುವ ಉಪು್ಪನೀರಿನ ಸಿಗಡಿಗೆ ವಿಧಿಸಲಾಗಿದ್ದ ಆಮದು ಸುಂಕ ಶೇ. 5ರಿಂದ 15ಕ್ಕೆ ಏರಿಕೆ
  • ಸಂಸ್ಕರಿಸಲಾದ ಬಾದಾಮಿಯ ಆಮದು ಸುಂಕ ಪ್ರತಿ ಕೆಜಿಗೆ -ಠಿ;35 ರಿಂದ -ಠಿ; 42ಕ್ಕೆ ಹೆಚ್ಚಳ
  • ಅಖ್ರೋಟ್(ಆಕ್ರೋಡ್) ಮೇಲಿನ ಸುಂಕ ಶೇ. 30ರಿಂದ 120ಕ್ಕೆ ಏರಿಕೆ
  • ಸೇಬು ಆಮದು ಸುಂಕ ಶೇ. 50ರಿಂದ 75ಕ್ಕೆ ಫಾಸ್ಪರಿಕ್ ಆಮ್ಲದ ಮೇಲಿನ ಆಮದು ಸುಂಕ ಶೇ. 10ರಿಂದ 20ಕ್ಕೆ ಏರಿಕೆ.
  • ಬೋರಿಕ್ ಆಮ್ಲದ ಮೇಲೆ ಶೇ.10 ಇದ್ದ ಸುಂಕ ಶೇ. 5ಕ್ಕೆ ಹೆಚ್ಚಳ
  • ವಿವಿಧ ಡಯಾಗ್ನೋಸಿಸ್ ಪರಿಕರದ ಮೇಲಿನ ಸುಂಕ ಶೇ. 10ರಿಂದ 20ಕ್ಕೆ ಏರಿಕೆ
  • ಕಬ್ಬಿಣ ಹಾಗೂ ಉಕ್ಕಿನ ಉತ್ಪನ್ನ, ಪೈಪ್ ಫಿಟ್ಟಿಂಗ್ಸ್ ಮತ್ತಿತರ ಉತ್ಪನ್ನಗಳ ಮೇಲಿನ ಸುಂಕ ಶೇ. 10-25ರ ವರೆಗೆ ಏರಿಕೆ.

ಏನಿದು  ವಾಣಿಜ್ಯ ಸಮರ?

 

  • ವಿಶ್ವದ ಬೃಹತ್ ಕೈಗಾರಿಕಾ ಉತ್ಪಾದನೆ ರಾಷ್ಟ್ರಗಳು ಸೇರಿ ಎಲ್ಲರ ಕೆಂಗಣ್ಣಿಗೆ ಅಮೆರಿಕ ಗುರಿಯಾಗುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿನ ಅಮೆರಿಕದ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದಿರುವುದೇ ಈ ಬೆಳವಣಿಗೆಗೆ ಕಾರಣ.
  • ವಿಶ್ವ ಮಾರು ಕಟ್ಟೆಯೂ ಅಮೆರಿಕ ಚಕ್ರವ್ಯೂಹದ ಹೊರಗೆ ಬಂದಾಗಿದೆ. ಹೀಗಾಗಿ ತಾನೇ ಆಸಕ್ತಿವಹಿಸಿ ರೂಪಿಸಿದ್ದ ಜಾಗತಿಕ ವ್ಯಾಪಾರ ನೀತಿಗಳು ಈಗ ಅಮೆರಿಕಕ್ಕೆ ತಿರುಗು ಬಾಣವಾಗಿ ಪರಿಣಮಿಸುತ್ತಿವೆ.
  • ಇತರೆ ದೇಶಗಳು ತಮ್ಮ ದೇಶದ ಉದ್ಯಮದ ಹಿತಾಸಕ್ತಿಗಾಗಿ ಹಾಕುತ್ತಿರುವ ತೆರಿಗೆಗಳು ಅಮೆರಿಕದ ಉದ್ಯಮಕ್ಕೆ ತಲೆನೋವಾಗಿ ಪರಿಣಮಿಸಿದೆ. ಟ್ರಂಪ್ ಹೇಳುವ ಪ್ರಕಾರ ಬೇರೆ ದೇಶಗಳ ರೀತಿಯಲ್ಲಿ ಅಮೆರಿಕವು ತೆರಿಗೆ ವಿಧಿಸುತ್ತಿಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷರು ಇಂತಹ ಅಸಮಾನತೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ತನ್ನ ಅವಧಿಯಲ್ಲಿ ಇದು ನಡೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

 

ಐರೋಪ್ಯ ಒಕ್ಕೂಟಗಳ ಸುಂಕ  ಜಾರಿ

 

  • ಅಮೆರಿಕದ ಉತ್ಪನ್ನಗಳಿಗೆ ಐರೋಪ್ಯ ಒಕ್ಕೂಟಗಳು ವಿಧಿಸಿರುವ ಹೆಚ್ಚುವರಿ ಸುಂಕ ಜಾರಿಗೆ ಬರಲಿದೆ. ಒಟ್ಟು 22 ಸಾವಿರ ಕೋಟಿ ರೂಪಾಯಿ ಮೌಲ್ಯದ ನೂರಾರು ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟ ಶೇ. 25 ಆಮದು ಸುಂಕ ವಿಧಿಸಿದೆ. ಅಕ್ಕಿ, ಹಣ್ಣಿನ ರಸ, ಜೇನ್ಸ್ ಬಟ್ಟೆ, ವಿಸ್ಕಿ, ಬೈಕ್ ಹಾಗೂ ಉಕ್ಕಿನ ಪದಾರ್ಥಗಳ ಮೇಲೆ ಸುಂಕ ಹೆಚ್ಚಾಗಲಿದೆ.

 

ಇದರಿಂದ  ಜಾಗತಿಕ ಆರ್ಥಿಕತೆ ಮೇಲೆ ಬೀರುವ ಪರಿಣಾಮವೇನು ?

 

  • ವಿಶ್ವದ ಆರ್ಥಿಕತೆಯು ಅಸ್ಪಷ್ಟ ದಾರಿ ಹಿಡಿದಿದೆ ಎಂದು ಐಎಂಎಫ್(ಇಂಟರ್​ನ್ಯಾಷನಲ್ ಮಾನಿಟರಿ ಫಂಡ್) ಎಚ್ಚರಿಸಿದೆ. ಬೃಹತ್ ಆರ್ಥಿಕ ಶಕ್ತಿಗಳ ನಡುವಿನ ವಾಣಿಜ್ಯ ಸಮರವು ಅನಿಶ್ಚಿತ ವಾತಾವರಣ ಸೃಷ್ಟಿಸಿದೆ.
  • ಈಗಾಗಲೇ ಜರ್ಮನಿ ಹಾಗೂ ಚೀನಾ ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಕಾಣಲಿದೆ ಎಂದು ವರದಿ ಬಂದಿರುವುದು ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
  • 2020ರವರೆಗೂ ಈ ವಾಣಿಜ್ಯ ಸಮರದ ಮುಂದುವರಿದ ಪರಿಣಾಮಗಳಿರಲಿವೆ ಎಂದು ಐಎಂಎಫ್ ಹಾಗೂ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

 

 2.ನ್ಯಾಷನಲ್ ಹೆಲ್ತ್ ರಿಸೋರ್ಸ್ ರೆಪೊಸಿಟರಿ-ಎನ್‌ಎಚ್‌ಆರ್‌ಆರ್

ಪ್ರಮುಖ ಸುದ್ದಿ

 

  • ಭಾರತದ ಆರೋಗ್ಯ ವಲಯಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವರು ನ್ಯಾಷನಲ್ ಹೆಲ್ತ್ ರಿಸೋರ್ಸ್ ರೆಪೊಸಿಟರಿ(ಎನ್‌ಎಚ್‌ಆರ್‌ಆರ್)ಯನ್ನು ಅನಾವರಣಗೊಳಿಸಿದ್ದಾರೆ.

 

ಮುಖ್ಯ ಅಂಶಗಳು

  • ಇದು ಭಾರತದ ಮೊಟ್ಟ ಮೊದಲ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಅಧಿಕೃತ, ಪ್ರಮಾಣೀಕರಿಸಿದ ಮತ್ತು ನವೀಕೃತ ಭೌಗೋಳಿಕ ಮಾಹಿತಿಯನ್ನೊಳಗೊಂಡ ರಾಷ್ಟ್ರೀಯ ಆರೋಗ್ಯ ಸೌಲಭ್ಯವಾಗಿದೆ.

 

  • , ಸೆಂಟ್ರಲ್ ಬ್ಯುರೋ ಆಫ್ ಹೆಲ್ತ್ ಇಂಟೆಲಿಜೆನ್ಸ್ ಸಿದ್ಧಪಡಿಸಿದ ನ್ಯಾಷನಲ್ ಹೆಲ್ತ್ ಪ್ರೊಫೈಲ್ 2018ನ್ನು ಬಿಡುಗಡೆಗೊಳಿಸಿದರು.
  • ಇದು ಜನಸಂಖ್ಯಾ, ಸಾಮಾಜಿಕ-ಆರ್ಥಿಕ, ಆರೋಗ್ಯ ಸ್ಥಾನಮಾನ, ಆರೋಗ್ಯ ಹಣಕಾಸು ಸೂಚಕ, ಆರೋಗ್ಯ ಮೂಲಸೌಕರ್ಯ, ಆರೋಗ್ಯ ವಲಯದ ಮಾನವಸಂಪನ್ಮೂಲಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

 

3.ಪರಿಷ್ಕೃತ ವಲಸೆ ನೀತಿ ಜಾರಿ ಮಡಿದ ಅಮೇರಿಕ

ಪ್ರಮುಖ ಸುದ್ದಿ

 

  • ಅಮೆರಿಕ ಗಡಿಯಲ್ಲಿ ವಲಸಿಗರ ಕುಟುಂಬದ ಮಕ್ಕಳನ್ನು ಪ್ರತ್ಯೇಕಿಸಿ, ಬೇರೆ ಬೇರೆ ಸ್ಥಳಗಳಲ್ಲಿ ಇರಿಸುವ ವಿವಾದಿತ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತ್ಯಗೊಳಿಸಿದ್ದಾರೆ.

 

ಮುಖ್ಯ ಅಂಶಗಳು

  • ವಲಸಿಗರ ಮಕ್ಕಳನ್ನು ಪಂಜರದಲ್ಲಿ ಇರಿಸಲಾಗಿದ್ದ ಫೋಟೋ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿ ಅಮೆರಿಕ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು. ಅಮೆರಿಕದ ಈ ನೀತಿಗೆ ವಿಶ್ವಾದ್ಯಂತ ಭಾರಿ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ವಿವಾದಿತ ನೀತಿಯನ್ನು ರದ್ದುಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ.
  • ಅಕ್ರಮವಾಗಿ ಗಡಿ ದಾಟಿ, ಅಮೆರಿಕದಲ್ಲಿ ಪ್ರಕರಣ ಎದುರಿಸುತ್ತಿರುವ ಕುಟುಂಬವನ್ನು ಪ್ರತ್ಯೇಕಿಸಲಾಗುವುದಿಲ್ಲ. ಆದರೆ ಅಪರಾಧ ಹಿನ್ನೆಲೆ ಹೊಂದಿರುವ ಪಾಲಕರಿಂದ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆ ಯಿದ್ದರೆ, ಅಂಥವರನ್ನು ಪ್ರತ್ಯೇಕಿಸಲು ಅವಕಾಶವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

ಏನಿದು ಪ್ರಕರಣ?:

  • ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಮೆಕ್ಸಿಕೊದಿಂದ ಅಪಾರ ಸಂಖ್ಯೆಯಲ್ಲಿ ವಲಸಿಗರು ಅಮೆರಿಕವನ್ನು ಪ್ರವೇಶಿಸುತ್ತಾರೆ. ಹೀಗೆ ಬಂದಿರುವ ವಲಸಿಗರ ಕುಟುಂಬದ ಸದಸ್ಯರನ್ನು ಪ್ರತ್ಯೇಕಿಸಿ ವಿಚಾರಣೆ ಹಾಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ.
  • ಕೆಲ ವಾರಗಳಲ್ಲಿ 2500 ವಲಸಿಗ ಮಕ್ಕಳನ್ನು ಕುಟುಂಬದಿಂದ ಪ್ರತ್ಯೇಕಿಸಿ, ಬೇರೆ ಸ್ಥಳದಲ್ಲಿ ಇರಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಈ ನೀತಿಗೆ ವಿರೋಧ ವ್ಯಕ್ತವಾಗಿದೆ. ಇದೊಂದು ಅಮಾನವೀಯ ಕಾನೂನು ಎಂದು ಹಲವು ರಾಷ್ಟ್ರಗಳು, ಸಂಘಟನೆಗಳು ಖಂಡಿಸಿವೆ.

 

ಭಾರತ ಮೂಲದವರ ವಿರೋಧ:

  • ಅಮೆರಿಕದಲ್ಲಿನ ಭಾರತೀಯ ಮೂಲದ ಜನಪ್ರತಿನಿಧಿಗಳು ಹೊಸ ನೀತಿಯನ್ನು ವಿರೋಧಿಸಿದ್ದಾರೆ. ವಲಸಿಗರ ಮಕ್ಕಳನ್ನು ಪ್ರತ್ಯೇಕಿಸುವ ಕ್ರಮವನ್ನು ಸ್ಥಗಿತಗೊಳಿಸಲಾಗಿದ್ದರೂ, ಕುಟುಂಬವನ್ನು ತಕ್ಷಣಕ್ಕೆ ಬಂಧಿಸುವ ಅವಕಾಶ ಈ ನೀತಿಯಲ್ಲಿದೆ. ಇದಕ್ಕೆ ತಿದ್ದುಪಡಿ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

 

ಹಿಂದೆ ಹೀಗೂ ಆಗಿತ್ತು..?.

 

  • ಎರಡನೇ ಮಹಾಯುದ್ಧದ ವೇಳೆ ನಾಝಿ ಸೇನೆ ಪೊಲೆಂಡ್​ನ ಮಕ್ಕಳನ್ನು ಅಪಹರಿಸಿ, ಜರ್ಮನಿಗೆ ರವಾನೆ ಮಾಡುತ್ತಿತ್ತು. ಅಲ್ಲಿ ಅವರನ್ನು ಅಧಿಕೃತವಾಗಿ ಜರ್ಮನ್ನರನ್ನಾಗಿ ಪರಿವರ್ತಿಸಲಾಗುತ್ತಿತ್ತು. ನಾಝಿ ಪಡೆ ಸುಮಾರು 20 ಸಾವಿರ ಮಕ್ಕಳನ್ನು ಅಪಹರಿಸಿತ್ತು ಎನ್ನಲಾಗಿದೆ.

 

  • 1950ರಿಂದ 1975ರ ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್​ನಲ್ಲಿ ಅವಿವಾಹಿತೆಯರು ತಾಯಿಯಾದರೆ ಮಕ್ಕಳನ್ನು ತ್ಯಜಿಸಬೇಕಾಗುತ್ತಿತ್ತು. ಆಸ್ಟ್ರೇಲಿಯಾದಲ್ಲಿ ಸುಮಾರು 5 ಲಕ್ಷ ಹಾಗೂ ಐರ್ಲೆಂಡಲ್ಲಿ 60 ಸಾವಿರ ಮಕ್ಕಳು ಬೇರ್ಪಟ್ಟಿದ್ದರು.

 

  • 1970ರ ವೇಳೆಗೆ ಅರ್ಜೆಂಟೀನಾದಲ್ಲಿದ್ದ ಮಿಲಿಟರಿ ಸರ್ಕಾರ ರಾಜಕೀಯ ನಾಯಕರ ವಿರುದ್ಧ ಬೃಹತ್ ಕಾರ್ಯಾಚರಣೆ ಕೈಗೊಂಡಿತ್ತು. ಸಾವಿರಾರು ಜನರನ್ನು ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಜೈಲಿನಲ್ಲಿ ನೂರಾರು ಮಕ್ಕಳು ಜನಿಸಿದ್ದರು. ಮಿಲಿಟರಿ ಕಾರ್ಯಾಚರಣೆ ಪರಿಣಾಮ ಸಾವಿರಾರು ಮಕ್ಕಳು ಅನಾಥರಾದರು.

 

4.ಮೂರು ವರ್ಷಗಳಲ್ಲಿ ಚೀನಕ್ಕೆ ಆರ್ಥಿಕ ಹಿಂಜರಿತ; ಭಾರತಕ್ಕಿಲ್ಲ ಆತಂಕ

ಪ್ರಮುಖ ಸುದ್ದಿ

 

  • ಮುಂದಿನ ಮೂರು ವರ್ಷಗಳಲ್ಲಿ ಹಾಂಕಾಂಗ್‌ ಮತ್ತು ಚೀನ ಮಾರುಕಟ್ಟೆಗಳು ಆರ್ಥಿಕ ಹಿಂಜರಿತದತ್ತ ಸರಿಯಲಿವೆ. ಏಷ್ಯಾ ದೇಶಗಳಾಗಿರುವ ಭಾರತ ಮತ್ತು ದಕ್ಷಿಣ ಕೊರಿಯಾಗಳಿಗೆ ಈ ಆತಂಕ ಇಲ್ಲ. ಅವುಗಳು ಸುರಕ್ಷಿತವಾಗಿವೆ ಎಂದು ನೊಮುರಾ ಸಿಂಗಾಪುರ್‌ ಲಿಮಿಟೆಡ್‌ ನಡೆಸಿದ ಅಧ್ಯಯನದಲ್ಲಿ ವ್ಯಕ್ತವಾಗಿದೆ.

 

ಮುಖ್ಯ ಅಂಶಗಳು

  • ಸದ್ಯ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳೇ ಅಭಿವೃದ್ಧಿ ಹೊಂದಿದ ದೇಶಗಳ ಮಾರುಕಟ್ಟೆಗಿಂತ ಅಪಾಯದಲ್ಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ‘ಹಾಂಕಾಂಗ್‌ ಮತ್ತು ಚೀನದ ಅರ್ಥ ವ್ಯವಸ್ಥೆ ಮುಂದಿನ 3 ವರ್ಷಗಳಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ.

 

  • ಎರಡೂ ದೇಶಗಳಲ್ಲಿ ದೇಶೀಯವಾಗಿ ಹಲವು ವಸ್ತುಗಳಿಗೆ ಬೇಡಿಕೆ ಕುಸಿಯಲಿದೆ. 1997-98ನೇ ವಿತ್ತೀಯ ವರ್ಷದಲ್ಲಿ ಏಷ್ಯಾದ ಹಣಕಾಸು ವ್ಯವಸ್ಥೆ ಅನುಭವಿಸಿದ್ದ ಪರಿಸ್ಥಿತಿಯನ್ನೇ ಅನುಭವಿಸಲಿದೆ’ ಎಂದು ನೋಮುರಾ ಸಂಸ್ಥೆಯ ಸುಬ್ಬರಾಮನ್‌ ಮತ್ತು ಮೈಕೆಲ್‌ ಲೂ ನಡೆಸಿದ ಅಧ್ಯಯದಲ್ಲಿ ಪ್ರಸ್ತಾವಿಸಿದ್ದಾರೆ.
  • 1990ರ ಬಳಿಕ ಜಗತ್ತಿನ 30 ದೇಶಗಳ ಅರ್ಥ ವ್ಯವಸ್ಥೆ, ಅಭಿವೃದ್ಧಿಯಾಗುತ್ತಿರುವ ಅರ್ಥ ವ್ಯವಸ್ಥೆಗಳನ್ನು ಅಧ್ಯಯನ ನಡೆಸಿದ ಬ್ಯಾಂಕ್‌ ಫಾರ್‌ ಇಂಟರ್‌ನ್ಯಾಶನಲ್‌ ಸೆಟಲ್‌ಮೆಂಟ್ಸ್‌ ನಡೆಸಿದ ಅಧ್ಯಯನವನ್ನು ಆಧರಿಸಿ ನೊಮುರಾದ ಆರ್ಥಿಕ ವಿಶ್ಲೇಷಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
  • ಥಾಯ್ಲೆಂಡ್‌, ಕೊಲಂಬಿಯಾ ಮತ್ತು ಫಿಲಿಪ್ಪೀನ್ಸ್‌ ಕ್ರಮವಾಗಿ 21, 20 ಮತ್ತು 19ನೇ ಸ್ಥಾನಗಳನ್ನು ಹೊಂದಿ ಹಣಕಾಸು ವಹಿವಾಟುಗಳಿಗೆ ತೃಪ್ತಿದಾಯಕ ವಲ್ಲದ ಸ್ಥಾನಗಳನ್ನು ಪಡೆದುಕೊಂಡಿವೆ.

 

5.ಎತ್ತರ ಪ್ರದೇಶದಲ್ಲಿದ್ದರೆ ಮೂಳೆ ಬೆಳವಣಿಗೆ ಕುಂಠಿತ

 

ಪ್ರಮುಖ ಸುದ್ದಿ

 

  • ಎತ್ತರವಾದ ಪ್ರದೇಶಗಳಲ್ಲಿ ವಾಸಿಸುವಿಕೆ ಮೂಳೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ಅಲ್ಲಿನ ಜನರ ಅಂಗಾಂಗಗಳು ಚಿಕ್ಕದಾಗಿರುತ್ತವೆ ಎಂಬ ಅಂಶ ಹಿಮಾಲಯದಲ್ಲಿ ನಡೆದ ಅಧ್ಯಯನ ಒಂದರಿಂದ ಬಹಿರಂಗಗೊಂಡಿದೆ.

 

ಮುಖ್ಯ ಅಂಶಗಳು

  • ಎತ್ತರವಾಗಿರುವ ಪ್ರದೇಶದಲ್ಲಿನ ವಾಸ ದೈಹಿಕವಾಗಿ ಸವಾಲಿನದ್ದಾಗಿರುತ್ತದೆ. ಅಂತಹ ಪ್ರದೇಶದ ಜಮೀನು ಕೂಡ ಫಲವತ್ತಾಗಿ ಇರುವುದಿಲ್ಲ. ಇದರಿಂದ ಆಹಾರದ ಕೊರತೆಯು ಕಾಡುತ್ತಿರುತ್ತದೆ ಎಂಬ ಅಂಶ ಅಧ್ಯಯನದಲ್ಲಿದೆ.

 

  • ಆ ಪ್ರದೇಶಗಳಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆ ಇರುವುದರಿಂದ ವ್ಯಕ್ತಿಯೊಬ್ಬ ಸೇವಿಸಿದ ಆಹಾರ, ಜೀರ್ಣಗೊಂಡು ಶಕ್ತಿಯಾಗಿ ಪರಿವರ್ತನೆಯಾಗುವ ಪೂರಕ ವಾತಾವರಣ ಇರುವುದಿಲ್ಲ.

 

  • ಆಹಾರದಿಂದ ಕಡಿಮೆ ಶಕ್ತಿ ಪೂರಣದಿಂದಾಗಿ ದೊಡ್ಡ ಮೂಳೆಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. ಇದನ್ನು ಇಂಗ್ಲೆಂಡಿನ ರಾಯಲ್‌ ಸೊಸೈಟಿ ಓಪನ್‌ ಸೈನ್ಸ್‌ ಜರ್ನಲ್‌ ಪ್ರಕಟಿಸಿದೆ.

 

  • ಈ ಅಧ್ಯಯನಕ್ಕೆ ಎತ್ತರವಾದ ಮತ್ತು ಸಮತಟ್ಟಾದ ಪ್ರದೇಶಗಳಲ್ಲಿ ವಾಸಿಸುವ ಜನರ ಅಂಗಾಂಗಗಳ ಬೆಳವಣಿಗೆಯನ್ನು ಅಳತೆ ಮಾಡಲಾಗಿದೆ. ಸಮತಟ್ಟಾದ ಪ್ರದೇಶದಲ್ಲಿನ ಜನರಿಗಿಂತ ಚಿಕ್ಕದಾದ ಮುಂಗೈಯನ್ನು ಎತ್ತರದ ಪ್ರದೇಶದ ವಾಸಿಗಳು ಹೊಂದಿರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

  • ಫಲಿತಾಂಶಗಳನ್ನು ಕಂಡುಕೊಳ್ಳಲು ಹಿಮಾಲಯದ 250ಕ್ಕೂ ಹೆಚ್ಚು ಶೆರ್ಫಾ ಜನರನ್ನು ಹಾಗೂ ನೇಪಾಳದ ಸಮತಟ್ಟು ಪ್ರದೇಶದಲ್ಲಿನ ವಾಸಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

 

6.ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಆಧಾರ್‌ ಕೇಂದ್ರ

 

ಪ್ರಮುಖ ಸುದ್ದಿ

 

  • ಬ್ಯಾಂಕ್‌ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ 18,000 ಆಧಾರ್‌ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

 

ಮುಖ್ಯ ಅಂಶಗಳು

  • ಪ್ರಾಧಿಕಾರವು ಕಳೆದ ವರ್ಷದ ಜುಲೈನಲ್ಲಿ 10 ಶಾಖೆಗಳಿಗೆ ತಲಾ ಒಂದು ಆಧಾರ್‌ ಕೇಂದ್ರ ಸ್ಥಾಪಿಸುವಂತೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಕೇಳಿಕೊಂಡಿತ್ತು.
  • ಒಂದೇ ವರ್ಷದಲ್ಲಿ ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆ ತಮ್ಮ ಶಾಖೆಗಳ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯ ಆಧಾರ್‌ ನೋಂದಣಿ ಕೇಂದ್ರ ಮತ್ತು ಬಯೊಮೆಟ್ರಿಕ್‌ ಗುರುತಿನ ಚೀಟಿ ಪರಿಷ್ಕರಣೆಯ ಕೇಂದ್ರಗಳನ್ನು ಆರಂಭಿಸಿವೆ.
  • ಆಧಾರ್‌ ಕೇಂದ್ರಗಳನ್ನು ಆರಂಭಿಸುವ ಗುರಿ ತಲುಪಲು ಕಾಲಮಿತಿ ನೀಡಲಾಗಿತ್ತು ಎನ್ನುವುದನ್ನು ಅಲ್ಲಗಳೆದ ಪಾಂಡೆ, ಬಾಕಿ ಇರುವ ಕೇಂದ್ರಗಳನ್ನು ಆರಂಭಿಸುವ ಪ್ರಕ್ರಿಯೆ ಪ್ರಗತಿಯ ಲ್ಲಿದೆ. ಪ್ರತಿ ದಿನವೂ ಆಧಾರ್‌ ಮತ್ತು ಬಯೊಮೆಟ್ರಿಕ್‌ ಗುರುತಿನ ಚೀಟಿ ಪರಿಷ್ಕರಣೆಗೆ ಸೂಚಿಸಿದೆ

 

7 ಸ್ಮಾರ್ಟ್ ಸಿಟಿ ಪ್ರಶಸ್ತಿ 2018 ಅಡಿಯಲ್ಲಿ ಸಿಟಿ ಅವಾರ್ಡ್ 

 

ಪ್ರಮುಖ ಸುದ್ದಿ

 

  • ವಸತಿ ಮತ್ತು ನಗರ ವ್ಯವಹಾರ (HUA) ಸಚಿವಾಲಯದ ಪ್ರಕಾರ 2018 ರ ‘ಇಂಡಿಯಾ ಸ್ಮಾರ್ಟ್ ಸಿಟೀಸ್ ಅವಾರ್ಡ್’ ಅಡಿಯಲ್ಲಿ, ಸೂರತ್ ನಗರವು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ “ಮಹತ್ತರವಾದ ಆವೇಗ” ವನ್ನು ಪ್ರದರ್ಶಿಸಿದ್ದಕ್ಕಾಗಿ ನೀಡಲಾಗಿದೆ .

 

ಮುಖ್ಯ ಅಂಶಗಳು

 

  • ಭೋಪಾಲ್ ಮತ್ತು ಅಹಮದಾಬಾದ್ಗಳನ್ನು “ಇನ್ನೋವೆಟಿವೇ ಐಡಿಯಾ” ವಿಭಾಗದಲ್ಲಿ ಮತ್ತು “ಸಮರ್ಥನೀಯ ಸಮಗ್ರ ಅಭಿವೃದ್ಧಿಯತ್ತ ಪರಿವರ್ತಿಸುವ ವಿಧಾನ (transformative approach towards sustainable integrated development)” ಕ್ಕೆ ಆಯ್ಕೆ ಮಾಡಲಾಯಿತು.
  • ‘Innovative Idea’ ವಿಭಾಗದಲ್ಲಿ ಜಂಟಿ ವಿಜೇತರು, ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಮತ್ತು ಅಫಮದಾಬಾದ್ಗೆ ಸುರಕ್ಷಿತ ಮತ್ತು ಸುರಕ್ಷಿತ ಅಹಮದಾಬಾದ್ (ಎಸ್ಎಎಸ್ಎ) ಯೋಜನೆಗಾಗಿ ಭೋಪಾಲ್.

ವಿವಿಧ ವರ್ಗಗಳ ಅಡಿಯಲ್ಲಿರುವ ಇತರ ಪ್ರಶಸ್ತಿಗಳು

  • ‘Social Aspects’ ವಿಭಾಗದಲ್ಲಿ- ಎನ್ಡಿಎಂಸಿ (ನವದೆಹಲಿ ಮುನಿಸಿಪಲ್ ಕೌನ್ಸಿಲ್) ಮತ್ತು ಜಬಲ್ಪುರ್ (ಮಧ್ಯಪ್ರದೇಶ) ‘ಸ್ಮಾರ್ಟ್ ಕ್ಲಾಸ್ ರೂಮ್’ ಯೋಜನೆಯ ಅನುಷ್ಠಾನಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
  • ‘urban environment’ ವಿಭಾಗದಲ್ಲಿ- ಭೋಪಾಲ್, ಪುಣೆ ಮತ್ತು ಕೊಯಮತ್ತೂರು ಸಾರ್ವಜನಿಕ ಬೈಕು ಹಂಚಿಕೆ ಯೋಜನೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 

Share