18th JULY MLP-MODEL ANSWERS

18th  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

 1.According to a survey conducted by the American-based “The Lancet”, about one and a half million foeticide will occur every year in the country. critically examine abortion laws and other matters in different countries around the world, including India

 

(ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಗರ್ಭಪಾತಗಳು ಸಂಭವಿಸುತ್ತವೆ ಎಂಬ   ಅಂಶ ಅಮೆರಿಕ ಮೂಲದ “ದ ಲ್ಯಾನ್ಸೆಟ್‌ಎಂಬ ವೈದ್ಯಕೀಯ ನಿಯತಕಾಲಿಕ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.   ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿರುವ ಗರ್ಭಪಾತ ಕಾನೂನು ಮತ್ತಿತರ ಸಂಗತಿಗಳ ಬಗ್ಗೆ  ವಿಮರ್ಶಾತ್ಮಕವಾಗಿ ಪರೀಕ್ಷಿಸಿ )

250 ಪದಗಳು

 

 

ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಗರ್ಭಪಾತಗಳು ಸಂಭವಿಸುತ್ತವೆ ಎಂಬ  ಅಂಶ ಅಮೆರಿಕ ಮೂಲದ “ದ ಲ್ಯಾನ್ಸೆಟ್‌’ ಎಂಬ ವೈದ್ಯಕೀಯ ನಿಯತಕಾಲಿಕ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.   ಪ್ರತಿ ಮೂವರು ಗರ್ಭಿಣಿಯರ ಪೈಕಿ ಒಬ್ಬರು ಗರ್ಭಪಾತಕ್ಕೆ ಒಳಗಾಗುತ್ತಾರೆ ಎಂದು ಈ ಸಮೀಕ್ಷೆ ತಿಳಿಸುತ್ತದೆ. ಗರ್ಭಪಾತದಲ್ಲಿ ಬಾಂಗ್ಲಾ, ಪಾಕಿಸ್ಥಾನ, ನೇಪಾಳದಂತಹ ದೇಶಗಳ ಸಾಲಿನಲ್ಲೇ ನಾವಿದ್ದೇವೆ ಎನ್ನುವುದು ತಲೆತಗ್ಗಿಸಬೇಕಾದ ವಿಷಯ. ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಮಹಿಳೆಯರಿಗೆ ಸಂಬಂಧಿಸಿದ ಸ್ವಾಸ್ಥ್ಯ ಕಾಳಜಿಯಲ್ಲಿ ದೇಶ ಇನ್ನೂ ಬಹಳಷ್ಟು ಹಿಂದುಳಿದಿದೆ ಎಂಬ ಸತ್ಯಕ್ಕೆ ಲ್ಯಾನ್ಸೆಟ್‌ ವರದಿ ಕೈಗನ್ನಡಿ ಹಿಡಿದಿದೆ.

 

ಗರ್ಭಪಾತವಾಗಲು ಕಾರಣಗಳು

 

  • ಶೇ. 48 ಉದ್ದೇಶಪೂರ್ವಕವಲ್ಲದ ಗರ್ಭಪಾತಗಳು. ಸುಮಾರು 80 ಲಕ್ಷ ಮಹಿಳೆಯರು ಗರ್ಭಪಾತಕ್ಕೆ ಅಸುರಕ್ಷಿತ ವಿಧಾನವನ್ನು ಅನುಸರಿಸಿದ್ದಾರೆ. ಭಾರತದಲ್ಲಿ ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ಸಾವಿಗೆ ಮೂರನೇ ಅತಿ ದೊಡ್ಡ ಕಾರಣ ಸುರಕ್ಷಿತವಲ್ಲದ ಗರ್ಭಪಾತ.
  • ನುರಿತ ವೈದ್ಯರು, ಸಮರ್ಪಕವಾದ ವೈದ್ಯಕೀಯ ತಂತ್ರಜ್ಞಾನ ಮತ್ತು ಔಷಧಿಗಳನ್ನು ಉಪಯೋಗಿಸಿ ಆರೋಗ್ಯಕರ ಪರಿಸ್ಥಿತಿಯಲ್ಲಿ ಗರ್ಭಪಾತ ನಡೆಸಿದರೆ ಅದು ಅತ್ಯಂತ ಸುರಕ್ಷಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
  • ದುರದೃಷ್ಟವಶಾತ್‌ ಈ ಯಾವ ಮಾನದಂಡವೂ ಭಾರತದಲ್ಲಿ ಇಲ್ಲ. ಅಭಿವೃದ್ಧಿ ಹೊಂದಿದ ಶೇ. 80ರಷ್ಟು ದೇಶಗಳಲ್ಲಿ…CLICK HERE TO READ MORE
Share