31st JULY MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.Discuss the key principles that grew out of Montagu Chelmsford Report and how those principles impacted our constitution?
(ಮೊಂಟೆಗೋ ಚೆಲ್ಮ್ಸ್ ಫೋರ್ಡ್ ವರದಿಯ ಪ್ರಮುಖ ತತ್ತ್ವಗಳನ್ನು ಚರ್ಚಿಸಿ ಮತ್ತು ಆ ತತ್ವಗಳು ನಮ್ಮ ಸಂವಿಧಾನದ ಮೇಲೆ ಹೇಗೆ ಪ್ರಭಾವಿಸಿದೆ?)
(250 ಪದಗಳು)
ಜುಲೈ ತಿಂಗಳು ಭಾರತೀಯ ಸಾಂವಿಧಾನಿಕ ಸುಧಾರಣಾ ವರದಿ ಕರೆಯಲ್ಪಡುವ ಮಾಂಟೆಗು–ಚೆಲ್ಮ್ಸ್ ಫರ್ಡ್ ವರದಿ (ಎಂಸಿಆರ್)ಯು 100 ನೇ ವರ್ಷವನ್ನು ಪೂರೈಸಿರುವುದು ಸೂಚಿಸುತ್ತದೆ . ಅಂದಿನ ಭಾರತದ ವೈಸ್ರಾ ಯ್ ಆಗಿದ್ದ ಲಾರ್ಡ್ ಚೆಲ್ಮ್ಸ್ ಪರ್ಡ್ ಮತ್ತು ಆಗಿನ ಭಾರತದ ಕಾರ್ಯದರ್ಶಿಯಾಗಿದ್ದ (Secretary of State for India ) ಎಡ್ವಿನ್ ಸ್ಯಾಮ್ಯುಯೆಲ್ ಮೊಂಟಾಗೆ ಅವರ ಹೆಸರಿಂದ ಈ ವರದಿಗೆ ಹೆಸರು ನೀಡಲಾಗಿದೆ.
ಸರ್ಕಾರದ ನೀತಿಯನ್ನು ಒಳಗೊಂಡಿರುವ ಮಾಂಟೆಗು ಹೇಳಿಕೆಯ (ಆಗಸ್ಟ್ 1917ರಲ್ಲಿ ) ಅನುಗುಣವಾಗಿ,ಸರ್ಕಾರವು 1918 ರ ಜುಲೈನಲ್ಲಿ ಮತ್ತಷ್ಟು ಸಾಂವಿಧಾನಿಕ ಸುಧಾರಣೆಗಳೊಂದಿಗೆ ಮಾಂಟೆಗು-ಚೆಲ್ಮ್ಸ್ ಫರ್ಡ್ ಅಥವಾ ಮಾಂಟೆಗು ರಿಫಾರ್ಮ್ಸ್ ಎಂದು ಘೋಷಿಸಿತು.ಏಕೆಂದರೆ ಸ್ವಯಂ-ಆಡಳಿತ ಸಂಸ್ಥೆಗಳಿಗಳನ್ನು ಕ್ರಮೇಣವಾಗಿ ಭಾರತದಲ್ಲಿ ಪರಿಚಯಿಸಲು. 1918 ರಲ್ಲಿ ಸಿದ್ಧಪಡಿಸಲಾದ ಮಾಂಟೆಗು-ಚೆಲ್ಮ್ಸ್ ಫರ್ಡ್ ವರದಿಯಿಂದ ಈ ಸುಧಾರಣೆಗಳು ರೂಪಿಸಲ್ಪಟ್ಟವು ಮತ್ತು ಇದ್ದನ್ನು 1919 ರ ಭಾರತ ಸರ್ಕಾರ ಕಾಯಿದೆ ಆಧಾರದ ಮೇಲೆ ರೂಪಿಸಲಾಯಿತು .
ಮಾಂಟೆಗು-ಚೆಲ್ಮ್ಸ್ ಫರ್ಡ್ ಸುಧಾರಣೆ ಯ – ಪ್ರಮುಖ ತತ್ವಗಳು
- ದ್ವಿಸರ್ಕಾರ, ಅಂದರೆ ಇಬ್ಬರ ಆಡಳಿತ – ಕಾರ್ಯನಿರ್ವಾಹಕ ಕೌನ್ಸಿಲರ್ಗಳು ಮತ್ತು ಜನಪ್ರಿಯ ಮಂತ್ರಿಗಳ ಆಳ್ವಿಕೆಯನ್ನು ಪರಿಚಯಿಸಲಾಯಿತು. ಗವರ್ನರ್ ಪ್ರಾಂತ್ಯದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದರು .
- ವಿಷಯಗಳನ್ನು ಎರಡು ಪಟ್ಟಿಗಳಾಗಿ ವಿಂಗಡಿಸಲಾಯಿತು ಅವುಗಳೆಂದರೆ “ಮೀಸಲು ವಿಷಯಗಳು” ಅದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಹಣಕಾಸು, ಭೂ ಆದಾಯ, ನೀರಾವರಿ, ಇತ್ಯಾದಿ ವಿಷಯಗಳನ್ನೂ ಒಳಗೊಂಡಿದ್ದವು.
- “ವರ್ಗಾಯಿಸಿದ ವಿಷಯಗಳು”-ಇದರಲ್ಲಿ ಶಿಕ್ಷಣ, ಆರೋಗ್ಯ, ಸ್ಥಳೀಯ ಸರ್ಕಾರ, ಉದ್ಯಮ, ಕೃಷಿ, ತೂಕ, ಅಳತೆ ಮುಂತಾದ ವಿಷಯಗಳನ್ನು ಒಳಗೊಂಡಿದ್ದವು .
- “ಮೀಸಲಾತಿ ವಿಷಯಗಳನ್ನು ಗವರ್ನರ್ ಕಾರ್ಯನಿರ್ವಾಹಕ ಕೌನ್ಸಿಲ್ ಮೂಲಕ ಆಡಳಿತವನ್ನು ನೀಡೆಸುತ್ತಿದ್ದರು ,ಮತ್ತು “ವರ್ಗಾಯಿಸಿದ ” ವಿಷಯಗಳನ್ನು ಚುನಾಯಿತ ಸದಸ್ಯರಿಂದ ನಾಮನಿರ್ದೇಶನಗೊಂಡ ಮಂತ್ರಿಗಳು ಆಡಳಿತವನ್ನು ನಡೆಸುತ್ತಿದ್ದರು
- ಮಂತ್ರಿಗಳು ಶಾಸಕಾಂಗಕ್ಕೆ ಜವಾಬ್ದಾರರಾಗಿದ್ದರು ಮತ್ತು ಶಾಸಕಾಂಗವು ಅವರ ವಿರುದ್ಧ ಅವಿಶ್ವಾಸದ ನಿರ್ಣಯಕ್ಕೆ ಜಾರಿಗೆ ಬಂದರೆ ರಾಜೀನಾಮೆ ನೀಡಬೇಕಾಗಿತ್ತು, ಆದರೆ ಕಾರ್ಯನಿರ್ವಾಹಕ ಕೌನ್ಸಿಲರ್ಗಳು ಶಾಸಕಾಂಗಕ್ಕೆ ಜವಾಬ್ದಾರರಾಗಿರಲಿಲ್ಲ.
- ಪ್ರಾಂತ್ಯದ ಸಂವಿಧಾನಾತ್ಮಕ ದಲ್ಲಿ ವಿಫಲತಯು ಕಂಡುಬಂದರೆ ಅಂತಹ ಸಂದರ್ಭದಲ್ಲಿ ರಾಜ್ಯಪಾಲರು “ವರ್ಗಾಯಿಸಿದ ” ವಿಷಯಗಳ ಆಡಳಿತವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಿದ್ದರು .
- “ವರ್ಗಾಯಿಸಿದ ” ವಿಷಯದಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ಗವರ್ನರ್-ಜನರಲ್ ಮಧ್ಯಪ್ರವೇಶಿಸಬಹುದಿತ್ತು. ಆದರೆ “ಮೀಸಲಾತಿ” ವಿಷಯಗಳ ವಿಷಯದಲ್ಲಿ ಅವರ ಹಸ್ತಕ್ಷೇಪದ ವ್ಯಾಪ್ತಿಯನ್ನು ನಿರ್ಬಂಧಿಸಲಾಗಿದೆ.
- ಪ್ರಾಂತೀಯ ಶಾಸಕಾಂಗ ಕೌನ್ಸಿಲ್ಗಳನ್ನು ಮತ್ತಷ್ಟು ವಿಸ್ತರಿಸಲ್ಪಟ್ಟವು-70% ರಷ್ಟು ಸದಸ್ಯರನ್ನು ಚುನಾಯಿಸಲಾಯಿತು..
- ಕೋಮು ಮತ್ತು ವರ್ಗ ಮತದಾರರ ವ್ಯವಸ್ಥೆಯನ್ನು ಮತ್ತಷ್ಟು ಏಕೀಕರಿಸಲಾಯಿತು.
- ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.
- ಶಾಸಕಾಂಗ ಕೌನ್ಸಿಲ್ಗಳು ಬಜೆಟ್ ಅನ್ನು ತಿರಸ್ಕರಿಸಬಹುದು. ಅಗತ್ಯವಿದ್ದರೆ ಗವರ್ನರ್ ಅದನ್ನು ಪುನಃಸ್ಥಾಪಿಸಬಹುದು
- ಶಾಸಕರು ವಾಕ್ ಸ್ವಾತಂತ್ರ್ಯವನ್ನು ಅನುಭವಿಸಿತ್ತಿದ್ದರು .
- ಕೇಂದ್ರ ಸರಕಾರ-ಜವಾಬ್ದಾರಿಯುತವಿಲ್ಲದ ಸರ್ಕಾರ:
- ಗವರ್ನರ್-ಜನರಲ್ ಮುಖ್ಯ ಕಾರ್ಯoಗದ ಅಧಿಕಾರಿಯಾಗಿದ್ದರು.
- ಆಡಳಿತದಲ್ಲಿ ಎರಡು ಪಟ್ಟಿಗಳಿದ್ದವು – ಕೇಂದ್ರ ಪಟ್ಟಿ ಮತ್ತು ಪ್ರಾಂತೀಯ ಪಟ್ಟಿ.
- ವೈಸ್ರಾಯ್ ನ ಕಾರ್ಯಕಾರಿ ಸಮಿತಿಯ 8 ಜನರಲ್ಲಿ ಮೂವರು ಭಾರತೀಯರಿದ್ದರು.
- ಗವರ್ನರ್-ಜನರಲ್ ರವರು ಅನುದಾನದ ಕಡಿತವನ್ನು ಪುನಃಸ್ಥಾಪಿಸಬಹುದ್ದಿತ್ತು , ಕೇಂದ್ರ ಶಾಸಕಾಂಗವು ತಿರಸ್ಕರಿಸಿದ ಮಸೂದೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿದ್ದರು.
- ಕೇಂದ್ರದಲ್ಲಿ ದ್ವಿಸದನ ವ್ಯವಸ್ಥೆಯನ್ನು ಪರಿಚಯಿಸಲಾಯಿತು.ಅವುಗಳೆಂದರೆ ಕೆಳಮನೆ ಅಥವಾ ಕೇಂದ್ರ ಶಾಸನ ಸಭೆ ಅದರಲ್ಲಿ 144 ಸದಸ್ಯರನ್ನು ಒಳಗೊಂಡಿದ್ದರು (41 ನಾಮನಿರ್ದೇಶಿತ ಮತ್ತು 103 ಚುನಾಯಿತ -52 ಜನರಲ್, 30 ಮುಸ್ಲಿಮರು, 2 ಸಿಖ್ಖರು, 20 ಸ್ಪೆಷಲ್) ಮತ್ತು ಮೇಲ್ಮನೆ ಅಥವಾ ಕೌನ್ಸಿಲ್ ಆಫ್ ಸ್ಟೇಟ್ ಅದರಲ್ಲಿ 60 ಸದಸ್ಯರನ್ನು ಇದ್ದರು (26 ನಾಮನಿರ್ದೇಶಿತ ಮತ್ತು 34 ಚುನಾಯಿತ- 20 ಜನರಲ್, 10 ಮುಸ್ಲಿಮರು, 3 ಯುರೋಪಿಯನ್ನರು ಮತ್ತು 1 ಸಿಖ್ಖ್ ರು ).
- ಕೌನ್ಸಿಲ್ ಆಫ್ ಸ್ಟೇಟ್ 5 ವರ್ಷದ ಅಧಿಕಾರಾವಧಿಯನ್ನು ಹೊಂದಿದ್ದು ಪುರುಷ ಸದಸ್ಯರನ್ನು ಮಾತ್ರ ಹೊಂದಿತ್ತು, ಆದರೆ ಕೇಂದ್ರ ಶಾಸಕಾಂಗ ಸಭೆಯು 3 ವರ್ಷಗಳ ಅಧಿಕಾರಾವಧಿಯನ್ನು ಹೊಂದಿತ್ತು.
- ಶಾಸಕರು ಪ್ರಶ್ನೆಗಳನ್ನು ಕೇಳಬಹುದ್ದಿತ್ತು ಮತ್ತು ಬಜೆಟ್ ನ ಒಂದು ಭಾಗದಲ್ಲಿ ಮಾತ್ರ ಮತ ಚಲಾಯಿಸುತ್ತಾರೆ, ಆದರೆ ಬಜೆಟ್ ನ 75% ರಷ್ಟು ಇನ್ನೂ ಮತದಾನ ಮಾಡುತ್ತಿರಲಿಲ್ಲ .
- ಕೆಲವು ಭಾರತೀಯರು ಹಣಕಾಸು ಸೇರಿದಂತೆ ಪ್ರಮುಖ ಸಮಿತಿಗಳಿಗೆ ತಮ್ಮ ಮಾರ್ಗವನ್ನು ಕಂಡುಕೊಂಡ್ಡಿದ್ದರು .
- ಪ್ರಮುಖ ಕಾರ್ಯದರ್ಶಿ (ಸೆಕ್ರೆಟರಿ ಆಫ್ ಸ್ಟೇಟ್ ) ಭಾರತ ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದರು
ಭಾರತೀಯ ಸಂವಿಧಾನವನ್ನು ಹೇಗೆ ಪ್ರಭಾವಿಸಿದೆ
- ಮೊಂಟಗು-ಚೆಲ್ಮ್ಸ್ಫೋರ್ಡ್ ವರದಿಯು 10 ವರ್ಷಗಳ ನಂತರ ವಿಮರ್ಶೆಯನ್ನು ಮಾಡಬೇಕು ಎಂದು ಹೇಳಿದೆ.
- ಸರ್ ಜಾನ್ ಸೈಮನ್ ಅವರು ಸಮಿತಿಗೆ (ಸೈಮನ್ ಕಮಿಷನ್) ನೇತೃತ್ವ ವಹಿಸಿ, ಮತ್ತಷ್ಟು ಸಾಂವಿಧಾನಿಕ ಬದಲಾವಣೆಗೆ ಶಿಫಾರಸು ಮಾಡಿದರು.
- 1930, 1931 ಮತ್ತು 1932 ರಲ್ಲಿ ಲಂಡನ್ ನಲ್ಲಿ ಮೂರು ಪ್ರಮುಖ ಸುತ್ತಿನ ಸಮಾವೇಶಗಳು ಪ್ರಮುಖ ಹಿತಾಸಕ್ತಿಗಳ ಪ್ರಾತಿನಿಧ್ಯದೊಂದಿಗೆ ನಡೆಯಿತು. ಬ್ರಿಟಿಷ್ ಸರ್ಕಾರದೊಂದಿಗಿನ ಮಾತುಕತೆಗಳ ನಂತರ 1931 ಸಮಾವೇಶಗಳ…CLICK HERE TO READ MORE