20th AUGUST
1.ಆರೋಗ್ಯ ನೀತಿಗಳ ಅಡಿಯಲ್ಲಿ ಮಾನಸಿಕ ಅಸ್ವಸ್ಥತೆ
SOURCE-THE HINDU https://www.thehindu.com/business/Industry/cover-mental-illness-irdai-tells-insurers/article24727140.ece
ವಿಧ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ–2017 ರ ಮಾನಸಿಕ ಆರೋಗ್ಯ ರಕ್ಷಣೆ ಕಾಯಿದೆಯ ಪ್ರಮುಖ ಲಕ್ಷಣಗಳು
ಮುಖ್ಯ ಪರೀಕ್ಷೆಗಾಗಿ -ಆರೋಗ್ಯ ನೀತಿಗಳ ಅಡಿಯಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸೇರ್ಪಡೆಗೊಳಿಸುವುದನ್ನು ವಿಶ್ಲೇಷಿಸಿ ಹಾಗು ಮಾನಸಿಕ ಆರೋಗ್ಯಕ್ಕೆ ಸಂಬಂದಿಸಿದ , ಸವಾಲುಗಳು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳೇನು ?
ಪ್ರಮುಖ ಸುದ್ದಿ
- ವಿಮಾ ನಿಯಂತ್ರಕ ಐಆರ್ ಡಿಎಐ ಮಾನಸಿಕ ಅಸ್ವಸ್ಥತೆಯನ್ನು ಅರೋಗ್ಯ ನೀತಿಗಳಲ್ಲಿ ಸೇರ್ಪಡೆಗೊಳಿಸಲು ಒಳಗೊಳ್ಳಲು ನಿರ್ದೇಶನವನ್ನು ಜಾರಿ ಮಾಡಿದೆ. ಮಾನಸಿಕ ಅಸ್ವಸ್ಥತೆ ದೇಶದಲ್ಲಿ ಗಂಭೀರ ಪ್ರಮಾಣದಲ್ಲಿದೆ ಆವರಿಸಿದೆ.
ಮುಖ್ಯ ಅಂಶಗಳು
- ಮೇ 29 ರಿಂದ ಜಾರಿಗೆ ಬಂದ ಮಾನಸಿಕ ಅರೋಗ್ಯ ಕಾಯಿದೆ 2017 – “ದೈಹಿಕ ಅಸ್ವಸ್ಥತೆಯ ಚಿಕಿತ್ಸೆಯಲ್ಲಿ ಲಭ್ಯವಿರುವ ವಿಮೆರೀತಿಯಲ್ಲೇ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ವೈದ್ಯಕೀಯ ವಿಮೆ ಯನ್ನು ಒದಗಿಸುವ ಕಡ್ಡಾಯವಾಗಿದೆ.
- ಆದರೆ ಇಲ್ಲಿಯವರೆಗೆ, ಭಾರತದ 33 ವಿಮೆಗಾರರು ಯಾವುದೇ ಪ್ರದೇಶಗಳಲ್ಲಿ ಅದನ್ನು ಅನುಸರಿಸಿಲ್ಲ.
ಈ ಹಂತದ ಮಹತ್ವ
- ಇದು ಪ್ರಗತಿಪರ ಹೆಜ್ಜೆಯಾಗಿ ಕಂಡುಬರುತ್ತದೆ. ಇದು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಘನತೆಯ ಜೀವನವನ್ನು ನೀಡುತ್ತದೆ. ಇತರ ದೈಹಿಕ ಕಾಯಿಲೆಗಳಂತೆ ಜಾಗೃತಿ, ಸ್ವೀಕಾರಗೊಳಿಸುವುದರಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸೇರಿಸುತ್ತದೆ. ಸಂಯೋಜಿತ ಕಳಂಕವನ್ನು ಕಡಿಮೆ ಮಾಡುವ ಮೂಲಕ ಇದು ರೋಗನಿರ್ಣಯವನ್ನು ‘ಸಾಮಾನ್ಯಗೊಳಿಸುತ್ತದೆ’
- ಆರೋಗ್ಯ ವಿಮಾ ಪಾಲಿಸಿಗಳ ಪಟ್ಟಿಯಲ್ಲಿ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಸೇರಿಲ್ಲ .
ಮಾನಸಿಕ ಅಸ್ವಸ್ಥತೆ ಎಂದರೇನು?
- ಮಾನಸಿಕ ಅಸ್ವಸ್ಥತೆ ಎಂದರೆ, ಯೋಚನೆ, ಮನೋಸ್ಥಿತಿ, ಮನೋಭಾವ, ಕೇಳುವಿಕೆ ಅಥವಾ ಸ್ಮರಣ ಶಕ್ತಿಯಲ್ಲಿ ವ್ಯಾಪಕ ಪ್ರಮಾಣದ ವ್ಯತ್ಯಯ ಇರುವುದು ಅಥವಾ ನಿರ್ಧಾರಗಳನ್ನು ಕೈಗೊಳ್ಳುವ ನಡವಳಿಕೆಯಲ್ಲಿ, ವಾಸ್ತವವನ್ನು ಗುರುತಿಸುವ ಸಾಮರ್ಥ್ಯದ ಕೊರತೆ ಅಥವಾ ಜೀವನಾವಶ್ಯಕವಾದ ಬೇಡಿಕೆಗಳನ್ನು ಪೂರೈಸುವ ಜ್ಞಾನ ತಿಳುವಳಿಕೆ ಇಲ್ಲದಿರುವುದು, ಆಲ್ಕೋಹಾಲ್ ಮತ್ತು ಡ್ರಗ್ಸ್ ಚಟಗಳಿಗೆ ದಾಸರಾಗಿರುವುದು. ಆದರೆ ಕಾಯ್ದೆಯಡಿಯಲ್ಲಿ ಅಪೂರ್ಣ ಮೆದುಳು ಬೆಳವಣಿಗೆ ಅಥವಾ ಮೆದುಳು ಬೆಳವಣಿಗೆ ಸ್ಥಗಿತಗೊಂಡ ಪ್ರಕರಣಗಳು ಸೇರುವುದಿಲ್ಲ.
2017ರ ಮಾನಸಿಕ ಆರೋಗ್ಯ ಕಾಳಜಿ ಮಸೂದೆಯ ಪ್ರಮುಖ ಅಂಶಗಳು:
- ಮಾನಸಿಕ ಆರೋಗ್ಯ ಕಾಳಜಿ ಮಸೂದೆ-201೭, ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಕಾಳಜಿ ಮತ್ತು ಚಿಕಿತ್ಸೆಯನ್ನು ಸರ್ಕಾರಿ ಅನುದಾನಿತ ಮಾನಸಿಕ ಆರೋಗ್ಯ ಸೇವೆಗಳ ಸಂಸ್ಥೆಗಳಿಂದ ಪಡೆಯಲುಬಹುದು.
- ಈ ಆರೋಗ್ಯ ಕೇಂದ್ರಗಳಲ್ಲಿ ಅನುಸೂಚಿತ ಔಷಧಿಗಳನ್ನು ಉಚಿತವಾಗಿ, ಮಾನಸಿಕ ಅಸ್ವಸ್ಥರಿಗೆ ಸರ್ಕಾರದ ಮೂಲಕ ಪೂರೈಸಲಾಗುತ್ತದೆ.
- ಜಿಲ್ಲಾಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎನ್ನುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ.
- ಇದು ಮಾನಸಿಕ ಅಸ್ವಸ್ಥರ ಆತ್ಮಹತ್ಯೆ ಪ್ರಯತ್ನದಂಥ ಪ್ರಕರಣಗಳನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. (ಯಾವುದೇ ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 309ನ್ನು ತೆಗೆದುಹಾಕಲು ಈಗಾಗಲೇ ನಿರ್ಧರಿಸಲಾಗಿದೆ).
ಕಾಯ್ದೆಯಲ್ಲಿ ಏನಿದೆ – ಏನಿಲ್ಲ?
- ಇದರ ಅನ್ವಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ತಮಗೆ ಯಾವ ಬಗೆಯ ಚಿಕಿತ್ಸೆ ಪಡೆಯಬೇಕು ಎನ್ನುವುದನ್ನು ತಾವೇ ನಿರ್ಧರಿಸಿಕೊಳ್ಳಲು ಅವಕಾಶ ಇರುತ್ತದೆ.
- ಇದು ಮಾನಸಿಕ ಅಸ್ವಸ್ಥರನ್ನು ಅಮಾನವೀಯವಾಗಿ ಕಾಣುವುದು ಮತ್ತು ಹಿಂಸೆ ನೀಡುವುದನ್ನು ನಿಷೇಧಿಸುತ್ತದೆ. ಇದರ ಜತೆಗೆ ಮಾನಸಿಕ ಅಸ್ವಸ್ಥತೆ ವಿಷಯವನ್ನು ಸೂಕ್ಷ್ಮ ವಿಷಯವೆಂದು ಪರಿಗಣಿಸಿದ್ದು, ಅತಿ ಒತ್ತಾಯಪೂರ್ವಕವಾಗಿ ಸಾಂಸ್ಥಿಕ ಮಟ್ಟದ ಚಿಕಿತ್ಸೆ ನೀಡುವುದನ್ನೂ ಸಹ ಈ ಕಾಯ್ದೆ ಅಪರಾಧ ಎಂದು ಪರಿಗಣಿಸುತ್ತದೆ.
- ಮಾನಸಿಕ ಅಸ್ವಸ್ಥರಿಗಾಗಿಯೇ ಪ್ರತ್ಯೇಕ ವಿಮಾ ಯೋಜನೆಗಳನ್ನು ಆರಂಭಿಸುವುದನ್ನು ಕಡ್ಡಾಯಗೊಳಿಸುತ್ತದೆ. ದೈಹಿಕ ಕಾಯಿಲೆಗಳಿಗೆ ವಿಮಾ ಯೋಜನೆಗಳನ್ನು ನೀಡುವಂತೆ ಮಾನಸಿಕ ಕಾಯಿಲೆಗಳಿಗೂ ವಿಮಾ ಪಾಲಿಸಿ ನೀಡಬೇಕಾಗುತ್ತದೆ. ಇದರ ಬಗ್ಗೆ ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.
- ಈ ಮಸೂದೆಯು ಮಾನಸಿಕ ಚಿಕಿತ್ಸೆ ನೀಡುವಲ್ಲಿ ಕೇವಲ ಚಿಕಿತ್ಸಕರ ಪಾತ್ರವನ್ನು ಮಾತ್ರ ಗುರುತಿಸಿದೆ. ಆದರೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡದಿಂದ ಬಳಲುತ್ತಿರುವವರಿಗೆ ಸಲಹೆ ನೀಡುವ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಇದರಲ್ಲಿ ಯಾವ ಉಲ್ಲೇಖವೂ ಇಲ್ಲ.
- ಈ ಮಸೂದೆ ಎಲ್ಲ ಮಾನಸಿಕ ಆರೋಗ್ಯ ಕಾಳಜಿ ಸೌಲಭ್ಯದ ಸಮಸ್ಯೆಗಳ ಬಗ್ಗೆ…CLICK HERE TO READ MORE