29th AUGUST-DAILY CURRENT AFFAIRS BRIEF

29th AUGUST

 

 

1.ರಾಜ್ಯ ಗಳಿಗೆ ಇ-ಸಿಗರೆಟ್ ಗಳನ್ನೂ ನಿಷೇಧಿಸುವಂತೆ ಕೇಂದ್ರ ಸೂಚನೆ

SOURCE https://timesofindia.indiatimes.com/india/centre-asks-states-to-ban-e-cigarettes/articleshow/65585399.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್   ಪರೀಕ್ಷೆಗಾಗಿ ಸಿಗರೆಟ್ ಗಳೆಂದರೇನು

ಮುಖ್ಯ  ಪರೀಕ್ಷೆಗಾಗಿ :ಸಿಗರೆಟ್ ಗಳಿಂದ  ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು ? ಅದರ  ನಿಯಂತ್ರಣದ  ಅಗತ್ಯವಿದೆಯೇ ?

ಪ್ರಮುಖ ಸುದ್ದಿ

 

  • ಮಕ್ಕಳ, ಹದಿಹರೆಯದವರ ಮತ್ತು ಮಹಿಳೆಯರ ಆರೋಗ್ಯ ಅಪಾಯಗಳನ್ನು ರಕ್ಷಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಇ-ಸಿಗರೆಟ್ ,ಇ-ಶೀಷಾ, ಇ-ಹುಕ್ಕಾ ಮುಂತಾದ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಅನ್ನು ನಿಷೇಧಿಸುವಂತೆ  ರಾಜ್ಯಗಳಿಗೆ ಸೂಚಿಸಿದೆ.

 

ಮುಖ್ಯ ಅಂಶಗಳು

 

  • ನಿಕೋಟಿನ್ ವಿತರಣೆಯನ್ನು ಸಕ್ರಿಯಗೊಳಿಸುವ ಸಾಧನಗಳನ್ನು (ಆನ್ಲೈನ್ ​​ಮಾರಾಟ ಸೇರಿದಂತೆ) ಮಾರಾಟ ಮಾಡಲಾಗುವುದಿಲ್ಲ, ಉತ್ಪಾದನೆ, ವಿತರಣೆ, ವ್ಯಾಪಾರ, ಆಮದು ಮಾಡಿಕೊಳ್ಳುವ ಮತ್ತು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಾಹೀರಾತು ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗುತ್ತದೆ.

 

ಹಿನ್ನೆಲೆ:

 

  • ದೇಶದಲ್ಲಿ ಇ-ಸಿಗರೆಟ್ ಗಳು ಹೊಸ ಉದಯೋನ್ಮುಖ ಬೆದರಿಕೆ ಯನ್ನು ಸೃಷ್ಟಿಸುತ್ತಿದೆ ಮತ್ತು ಅದನ್ನು ನಿಭಾಯಿಸಲು ನಿಯಂತ್ರಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಸರಕಾರ  ವಿಳಂಬಮಾಡುತ್ತಿದೆ ಎಂದು  ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು.

 

ಏನಿದು  ಸಿಗರೇಟ್ ?

 

  • ಹೊರ ನೋಟಕ್ಕೆ ಸಾಮಾನ್ಯ ಸಿಗರೇಟಿನಂತೆ ಕಂಡರೂ ಅವುಗಳಂತೆ ಹೊಗೆಯಂಥಹದನ್ನು ಹೊರಡಿಸಿದರೂ ಇವು ನಿಕೋಟಿನ್‌ ಆಧಾರಿತ ಹೊಗೆಯಲ್ಲ. ಇದು ಹಬೆ..ಅಂದರೆ ಇದರಲ್ಲಿ ಕ್ಯಾನ್ಸರ್‌ ತರಬಹುದಾದ ತಂಬಾಕಿನ ಅಪಾಯಕರ ಅಂಶ ಇರುವುದಿಲ್ಲ. ಇದು ಒಂದು ಚಾಕೊಲೇಟ್‌ ಪರಿಮಳದ ನಿಕೊಟಿನ್‌ ಹಬೆ. ಇದಕ್ಕೆ ಬೆಂಕಿ ತಗುಲಿಸುವ ಅಗತ್ಯ ಇಲ್ಲ.
  • ಈ ನಿಯಂತ್ರಣದ ಪ್ರತಿಪಾದಕರು ಧೂಮಪಾನವು ಮತ್ತೆ ಹೊಸ ರೂಪದಲ್ಲಿ ಸಾಮಾಜಿಕ ಮನ್ನಣೆ ಗಳಿಸುವತ್ತ ದಾಪುಗಾಲು ಹಾಕುತ್ತಿದೆ ಎನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರು ವಿವಿಧ ಸುವಾಸನೆ ಹೊರ ಹೊಮ್ಮಿಸುವ ಇ-ಸಿಗರೇಟಿನ ಪ್ರಿಯರಾಗುತ್ತಿದ್ದಾರೆ.

 

  • ಇ.ಸಿಗರೇಟುಗಳು ಸಾಧಾರಣವಾಗಿ ಸಿಲಿಂಡರಿನ ಆಕಾರದಲ್ಲಿ ಪೆನ್ನಿನಂತೆ ಇರುವವು. ಆದರೆ ವಿವಿಧ ರೂಪದಲ್ಲೂ ಇರಹುದು. ಬಳಸಿ ಬಿಸಾಕುವ ಇಲ್ಲವೆ ಮರುಪೂರಣ ಮಾಡುವ ಎರಡು ರೀತಿಯ. ಸಿಗರೇಟುಗಳು ಇವೆ.
  • ಇದರಲ್ಲಿ ಮೂರುಭಾಗಗಳು. ಬ್ಯಾಟರಿ, ಆಟೊಮೈಜರ್‌ಮತ್ತು ದ್ರವಪೂರೈಸುವ ಸಾಧನ ಇರುವವು.
  • ಗುಂಡಿ ಅದುಮಿದಾಗ ದ್ರವವು ಕಾದ ತಂತಿಯ ಮೇಲೆ ಹಾಯ್ದು ಅದು ಆವಿಯಾಗಿ ಹೊರಬರುವುದು. ಅದನ್ನು ಸೇವಿಸಿದಾಗ ಧೂಮಪಾನದ ಅನುಭವ ಆಗುವುದು.ಶೀತ ಆದಾಗ ಬಿಸಿನೀರಲ್ಲಿ ಅಮೃತಾಂಜನ ಹಾಕಿ ಹಬೆಯನ್ನು ಸೇವಿಸುವ ಹಾಗೆ, ಅಥವ ಅಸ್ತಮಾದವರು ಇನ್‌ಹೇಲರ್‌ ಬಳಸುವ ಹಾಗೆ. ಇದು ಒಂದು ಹಬೆ ಹೊಮ್ಮಿಸುವ ಎಲೆಕ್ಟ್ರಾನಿಕ್‌ ಸಾಧನ.
  • ಅಟೊಮೈಜರ್‌,ಕಾರ್ಟೊಮೈಜರ್‌, ಕ್ಲಿಯರ್ಟೊ ಮೈಜರ್‌ ಮೊದಲಾದ ಹಲವು ವಿಭಿನ್ನ ತಂತ್ರಜ್ಞಾನ ಬಳಸುವ ಇ. ಸಿಗರೇಟುಗಳಿವೆ.
  • ಇ.ಸಿಗರೇಟು ಸಾಂಪ್ರದಾಯಿಕ ಧೂಮಪಾನದ ಸಂತಸ ( ಸ್ಪರ್ಶ ಮತ್ತು ಅನುಭವ) ನೀಡುವುದು. ಆದರೆ ತಂಬಾಕಿನಲ್ಲಿರುವ ೧೦೦೦ಕ್ಕೂ ಹೆಚ್ಚಿನ ಅಪಾಯಕಾರಿ ರಸಾಯನಿಕಗಳು ಇದರಲ್ಲಿ ಇಲ್ಲ.ಇದಕ್ಕೆ ಬೆಂಕಿ ತಗುಲಿಸ ಬೇಕಿಲ್ಲ…ಶ್ವಾಸಕೋಶಕ್ಕ ಧಕ್ಕೆಬಾರದು ಅನಿಯಂತ್ರಿತ ಕೆಮ್ಮು ಇರದು.

 

  • ಇ.ಸಿಗರೇಟಿನಲ್ಲಿ ಆವಿಯನ್ನು ಉಂಟುಮಾಡುವ ದ್ರವವನ್ನು ಇ-.ಜ್ಯೂಸ್ ಅಥವ ಇ. ದ್ರವ ಎನ್ನವರು.ಅದುಪ್ರೊಪಿಲಿನ್, ಗ್ಲಿಜರಿನ್ ಅಥವ ಪಾಲಿಥಿಲಿನ್‌ ಗ್ಲೈಕಾಲ್‌ ಆಗಿರುವುದು ಜೊತೆಗೆ ಬೇಕಾದ ಪರಿಮಳ ಮತ್ತು ಬೇಕೆಂದರೆ ವಿವಿಧ ಪ್ರಭಲತೆಯ ನಿಕೊಟಿನ್ ಸಾರವೂ ಇರುತ್ತದೆ.
  • ಈ ದ್ರಾವಣವನ್ನು ಶೀಶೆ ಅಥವ ಮೊದಲೇ ಭರ್ತಿ ಮಾಡಿದ ಕ್ಯಾಟ್ರಿಜ್‌ನಲ್ಲಿ ದೊರೆಯುವುದು.ಅದರ ಮೇಲೆ mg/ml ಎಂದು ನಿಕೋಟಿನ್‌ ಪ್ರಮಾಣವನ್ನು ನಮೂದಿಸಿರುವರು.
  • ಇದರಲ್ಲಿ ನೀರು ನಿಕೊಟಿನ್‌ ಮತ್ತು ಪ್ರೊಪಿಲಿನ್‌ ಗ್ಲೈ ಕಾಲ್‌ ( ಜಲಾಧಾರಿತ ಔಷಧಿಗಳಲ್ಲಿ ಬಳಸುವ ಮತ್ತುಆರೋಗ್ಯಕ್ಕೆ ಹಾನಿಮಾಡದ ವಸ್ತು )ಇರುವವು.

 

  • ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಇ-ಸಿಗರೆಟ್ ನಲ್ಲಿ ಅದೇ ರೀತಿಯ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ…..CLICK HERE TO READ MORE

 

Share