11th SEPTEMBER
1.ಈ ಬಾರಿ ಎಲ್ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ (UN sees 70% chance of El Nino event this year)
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಎಲ್ ನಿನೊ ಮತ್ತು ಲಾ ನಿನೊ- ಕಾರಣಗಳು, ಪರಿಣಾಮಗಳು ಮತ್ತು ಜಾಗತಿಕ ಹವಾಮಾನ ಬದಲಾವಣೆ
ಪ್ರಮುಖ ಸುದ್ದಿ
- ಜಾಗತಿಕ ತಾಪಮಾನದ ಮೇಲೆ ಪ್ರಭಾವ ಬೀರುವ ಎಲ್–ನಿನೊ ವಿದ್ಯಮಾನ ಉಂಟಾಗುವ ಸಾಧ್ಯತೆ ಈ ಬಾರಿ ಶೇ 70ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಎಲ್–ನಿನೊ ವಿದ್ಯಮಾನ ಜರುಗುವ ಸಾಧ್ಯತೆಯಿದೆ.
ಮುಖ್ಯ ಅಂಶಗಳು
- ಜಾಗತಿಕ ಹವಾಮಾನ ಮುನ್ಸೂಚನಾ ಸಂಸ್ಥೆ ಪ್ರಕಾರ, ಪೆಸಿಫಿಕ್ ಸಾಗರದ ಪೂರ್ವಭಾಗದಲ್ಲಿ ನಿಯಮಿತವಾಗಿ ಉಷ್ಣಾಂಶ ಹೆಚ್ಚಾಗಿದ್ದು, ಇದು ಎಲ್–ನಿನೊ ಉಂಟಾಗುವಿಕೆಗೆ ಕಾರಣವಾಗಿದೆ. ಇದರ ಪ್ರಭಾವದಿಂದ ಕೆಲವು ಪ್ರದೇಶದಲ್ಲಿ ಬರಪರಿಸ್ಥಿತಿ ತಲೆದೋರಿದರೆ, ಇನ್ನು ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
- 2015–2016ರಲ್ಲಿ ಇದ್ದಷ್ಟು ಪ್ರಭಾವವನ್ನು ಎಲ್–ನಿನೊ ಈ ಬಾರಿ ಹೊಂದಿಲ್ಲ. ಆದರೂ, ಗಮನಾರ್ಹ ಪರಿಣಾಮ ಬೀರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಏಷ್ಯಾ–ಪೆಸಿಫಿಕ್ ಭಾಗ, ಯುರೋಪ್, ಉತ್ತರ ಅಮೆರಿಕ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಕರಾವಳಿ ಭಾಗದ ಮೇಲ್ಮೈನಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಏನಿದು ಎಲ್ ನಿನೋ? ಅದರಿಂದ ಬೀರುವ ಪರಿಣಾಮ
- ಮುಂಗಾರು ಮಾರುತದ ಅಲೆಗಳ ಉದ್ಭವ ಮತ್ತು ಹಿಂದೂಮಹಾಸಾಗರದಿಂದ ಉತ್ತರ ಗೋಳಾರ್ಧದ ಕಡೆಗೆ ಚಲಿಸುವ ವೇಗವು ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರದ ಮೇಲ್ಮೈಗಳ ವಾತಾವರಣ ಒತ್ತಡದ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಪೆಸಿಫಿಕ್ ಮಹಾಸಾಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಉಂಟಾಗುವ ಉಷ್ಣಾಂಶದ ಏರುಪೇರಿನಿಂದ ಅವುಗಳ ವಾತಾವರಣದಲ್ಲಿನ ಒತ್ತಡದ ವ್ಯತ್ಯಾಸದಿಂದ ಎಲ್– ನಿನೊ ಮತ್ತು ಲಾ– ನಿನೊ ಪ್ರಕ್ರಿಯೆಗಳು ಉಂಟಾಗುತ್ತವೆ.
- ಪೆಸಿಫಿಕ್ ಸಾಗರದ ಸಮುದ್ರ ಮೇಲ್ಮೆ„ ಉಷ್ಣಾಂಶ, ಸರಾಸರಿ ತಾಪಮಾನಕ್ಕಿಂತ ಹೆಚ್ಚಾಗಿ ದೀರ್ಘಕಾಲಕ್ಕೆ ಮುಂದುವರೆದರೆ ಅದು ಎಲ್ನಿನೋ. ಪೆಸಿಫಿಕ್ ಸಾಗರದ ಪೂರ್ವ-ಮಧ್ಯದ ನಿರ್ದಿಷ್ಟ ಭಾಗದಲ್ಲಿ ಈ ಸರಾಸರಿ ಉಷ್ಣಾಂಶ 3 ತಿಂಗಳು ಮುಂದುವರೆದರೆ ಅದು ಎಲ್ನಿನೋ ಲಕ್ಷಣ. ಎಲ್ನಿನೋ ಸುಮಾರು 9 ತಿಂಗಳಿಂದ 2 ವರ್ಷಗಳಿಗೆ ಮುಂದುವರೆಯುತ್ತದೆ. 2ರಿಂದ 7 ವರ್ಷಗಳ ಅವಧಿಯಲ್ಲಿ ಸಂಭವಿಸುತ್ತದೆ.
- ಇದರಿಂದ ಭಾರತದ ಮುಂಗಾರು ಮತ್ತು ಚಳಿಗಾಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ತಾಪಮಾನ ಏರುತ್ತದೆ. ಎಲ್ ನಿನೋ ಎಂದರೆ ಬಾಲ ಯೇಸು ಎಂದರ್ಥ. ಕ್ರಿಸ್ಮಸ್ ಸಂದರ್ಭದಲ್ಲಿ ಇದು ಸಾಮಾನ್ಯವಾಗಿ ಸಂಭವಿಸುವ ಕಾರಣ ಇದಕ್ಕೆ ಬಾಲ ಕ್ರಿಸ್ತನ ಹೆಸರಿಡಲಾಗಿದೆ.
ಲಾ– ನಿನೊ ಎಂದರೇನು ?
- ಪೆಸಿಫಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿನ ಮತ್ತು ಹಿಂದೂಮಹಾಸಾಗರ ಪ್ರದೇಶಗಳಲ್ಲಿನ ವಾತಾವರಣದಲ್ಲಿನ ವ್ಯತ್ಯಾಸ ಹಿಂದೂಮಹಾಸಾಗರ ಪ್ರದೇಶಗಳಲ್ಲಿ ಉದ್ಭವವಾಗುವ ಅಲೆಗಳು ಅಥವಾ ಮಾರುತಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹಿಂದೂಮಹಾಸಾಗರ ಪ್ರದೇಶಗಳಲ್ಲಿನ ಒತ್ತಡ ಹೆಚ್ಚಿದ್ದ ವರ್ಷಗಳಲ್ಲಿ ಹೆಚ್ಚು ಹೆಚ್ಚು ಮೋಡಗಳು ಉದ್ಭವವಾಗಿ….CLICK HERE TO READ MORE