13th SEPTEMBER
1.ರಾಜಕಾರಣಿಗಳ ವಿರುದ್ಧ ಕೇಸ್: ವರದಿ ಕೇಳಿದ ಸುಪ್ರೀಂಕೋರ್ಟ್
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ರಾಜಕೀಯದ ಅಪರಾಧೀಕರಣವು ಒಂದು ರೋಗವಾಗಿದ್ದು ಅದು ನಮ್ಮ ಪ್ರಜಾಪ್ರಭುತ್ವವನ್ನೇ ಮಾರ್ಪಡುವ ಸ್ಥಿತಿಗೆ ತರಬಹುದು. ರಾಜಕೀಯದ ಅಪರಾಧೀಕರಣ ವನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಪರಿಣಾಮಕಾರಿತ್ವ ಕ್ರಮಗಳನ್ನು ಚರ್ಚಿಸಿ
ಪ್ರಮುಖ ಸುದ್ದಿ
- ಶಾಸಕರು ಮತ್ತು ಸಂಸದರ ವಿರುದ್ಧ ಇರುವ ಪ್ರಕರಣಗಳ ಸ್ಥಿತಿಗತಿ ಕುರಿತು ಸಮಗ್ರ ಮತ್ತು ಸಂಪೂರ್ಣ ವರದಿ ಸಲ್ಲಿಸುವಂತೆ 25 ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲಾ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಖ್ಯ ಅಂಶಗಳು
- ಆಯಾ ರಾಜ್ಯಗಳಲ್ಲಿ ರಾಜಕಾರಣಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ನಿಖರ ಸಂಖ್ಯೆ ಒದಗಿಸಬೇಕು. ಜತೆಗೆ ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸ್ಥಾಪಿಸಲಾಗಿರುವ ವಿಶೇಷ ಕೋರ್ಟ್ಗಳಿಗೆ ವರ್ಗಾಯಿಸಲಾದ ಕೇಸ್ಗಳ ಸಂಖ್ಯೆ ಎಷ್ಟೆಂಬುದನ್ನೂ ಖಚಿತ ಅಂಕಿ-ಅಂಶಗಳೊಂದಿಗೆ ತಿಳಿಸಬೇಕು.
- 2017ರ ನ.1ರಂದು ಮತ್ತು ಕಳೆದ ಆಗಸ್ಟರ್ 21ರಂದು ಸುಪ್ರೀಂ ಕೋರ್ಟ್ ತನ್ನ ಅದೇಶದಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದರೂ ಗುಜರಾತ್, ರಾಜಸ್ಥಾನ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಅಸ್ಸಾಂ, ಪಂಜಾಬ್, ಛತ್ತೀಸ್ಗಢ ಸೇರಿದಂತೆ 25 ಸರಕಾರಗಳು ಇದುವರೆಗೂ ಯಾವುದೇ ಸಣ್ಣ ಮಾಹಿತಿಯನ್ನೂ ಸಲ್ಲಿಸದಿರುವ ಬಗ್ಗೆ ನ್ಯಾಯಪೀಠ ಕಿಡಿಕಾರಿದೆ.
- ಯಾವುದೇ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿದ ರಾಜಕಾರಣಿಗಳಿಗೆ ಚುನಾವಣೆ ಸ್ಪರ್ಧೆಯಿಂದ 6 ವರ್ಷ ನಿಷೇಧ ಹೇರುವ ಜನಪ್ರತಿನಿಧಿಗಳ ಕಾಯಿದೆಯ ನಿಯಮಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಿ ರದ್ದುಪಡಿಸುವಂತೆ ಕೋರಿ ಅಶ್ವಿನ್ ಕುಮಾರ್ ಉಪಾಧ್ಯಾಯ್ ಎಂಬುವವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
- ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಸೇರಿದಂತೆ 11 ರಾಜ್ಯಗಳಲ್ಲಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ತಲಾ ಒಂದು ವಿಶೇಷ ಕೋರ್ಟ್ಗಳನ್ನು ಸ್ಥಾಪಿಸಲಾಗಿದೆ. ದಿಲ್ಲಿಯಲ್ಲಿ ಇಂತಹ ಎರಡು ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 65ಕ್ಕಿಂತಲೂ ಕಡಿಮೆ ಇರುವ ರಾಜ್ಯಗಳಲ್ಲಿ ಅಲ್ಲಿನ ಸಾಮಾನ್ಯ ಕೋರ್ಟ್ಗಳಲ್ಲೇ ತುರ್ತು ವಿಚಾರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಇಲಾಖೆಯ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಮಾಹಿತಿ ನೀಡಿದೆ…..CLICK HERE TO READ MORE