17th SEPTEMBER- DAILY CURRENT AFFAIRS BRIEF

17th SEPTEMBER

 

 

1.ಸ್ವಚ್ಛತಾ ಹೀ ಸೇವಾ ಅಭಿಯಾನ

ವಿದ್ಯಾರ್ಥಿಗಳ ಗಮನಕ್ಕೆ

 ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ-ಸ್ವಚ್ಛತಾ ಹೀ ಸೇವಾ ಅಭಿಯಾನದ ಬಗ್ಗೆ  ಮತ್ತು ಸ್ವಚ್ ಭಾರತ್ ಮಿಷನ್ ನ  ಮೂಲಭೂತ ಸಂಗತಿಗಳು, ಪ್ರಾಮುಖ್ಯತೆ ಮತ್ತು ಕಾರ್ಯಕ್ಷಮತೆ, ಅದರಲ್ಲಿನ ನ್ಯೂನತೆಗಳು ಮತ್ತು ಅವುಗಳನ್ನು ಬಗೆಹರಿಸುವ ಮಾರ್ಗಗಳು.

ಪ್ರಮುಖ ಸುದ್ದಿ

 

  • ಸ್ವಚ್ಛತಾ ಹೀ ಸೇವಾ ಅಭಿಯಾನವು ದೇಶದಾದ್ಯಂತ ಸೆಪ್ಟೆಂಬರ್ 15, 2018 ರಂದು ಪ್ರಾರಂಭಿಸಲಾಯಿತು.

ಮುಖ್ಯ ಅಂಶಗಳು

 

  • ಸ್ವಚ್ಛ ಭಾರತವು 2019ರಲ್ಲಿ ನಡೆಯಲಿರುವ ಮಹಾತ್ಮ ಗಾಂಧಿಯವರ 150ನೇ ಜನ್ಮ ಜಯಂತಿಗೆ ದೇಶವು ಸಲ್ಲಿಸಬಹುದಾದ ಅತಿದೊಡ್ಡ ಕೃತಜ್ಞತೆಯಾಗಿರಲಿದೆ ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ.

 

  • ಈ ಸಾಮೂಹಿಕ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಧಾನ ಮಂತ್ರಿಗಳು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕು ಎಂದು ಜನತೆಗೆ ಕರೆ ನೀಡಿದರು. ಖುದ್ದು ಶ್ರೀ ನರೇಂದ್ರ ಮೋದಿಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ, ದೇಶಾದ್ಯಂತ ಸಾಮೂಹಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳು ಖುದ್ದು ಪೊರಕೆ ಹಿಡಿದು ಸ್ವಚ್ಛತೆ ಆರಂಭಿಸಿದ್ದರು. ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಲೂ ಬಾರದು, ಇತರರಿಗೆ ಉಗುಳಲೂ ಬಿಡಬಾರದು . ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲೂ ಬಿಡುವುದಿಲ್ಲ ಎನ್ನುವುದು ಮಂತ್ರವಾಗಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು.

 

  • ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಶ್ರೀ ನರೇಂದ್ರ ಮೋದಿಯವರು 9 ಗಣ್ಯರಿಗೆ ಆಹ್ವಾನವನ್ನೂ ನೀಡಿದ್ದರು. ಅಲ್ಲದೆ ಮತ್ತೆ ತಲಾ 9 ಮಂದಿಗೆ ಆಹ್ವಾನ ನೀಡುವಂತೆ ಆ ಗಣ್ಯರನ್ನು ಕೋರಿದ್ದರು.
  • ಜನರಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡುವ ಮೂಲಕ ಸ್ವಚ್ಛಭಾರತ ಅಭಿಯಾನವನ್ನು ರಾಷ್ಟ್ರೀಯ ಆಂದೋಲನವಾಗಿ ಪರಿವರ್ತಿಸಿದರು. ಸ್ವಚ್ಛ ಭಾರತ ಚಳವಳಿ ಮೂಲಕ ಜನರಲ್ಲಿ ಜವಬ್ದಾರಿಯ ಅರಿವನ್ನು ಮೂಡಿಸಿದರು. ದೇಶದ ಜನರು ಸ್ವ ಇಚ್ಛೆಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಆರಂಭಿಸಿರುವುದರಿಂದ, ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ಈಡೇರುವ ಆಸೆಗಳು ಮೂಡಲಾರಂಭಿಸಿವೆ.

 

  • ಪ್ರಧಾನ ಮಂತ್ರಿಗಳು ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಾರಣಾಸಿಯಲ್ಲೂ ಅವರು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಾರಣಾಸಿಯ ಗಂಗಾ ತಟದಲ್ಲಿನ ಅಸ್ಸಿ ಘಾಟ್ ಸ್ವಚ್ಛತೆಗೆ ಚಾಲನೆ ನೀಡಿದ್ದಾರೆ. ನೈರ್ಮಲೀಕರಣದ ಅನಿವಾರ್ಯತೆಯನ್ನು ಮನಗೊಂಡಿರುವ ಪ್ರಧಾನಿಯವರು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶೌಚಾಲಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದಾರೆ.

 

  • ವಿವಿಧ ಕ್ಷೇತ್ರಗಳ ಜನರು ಸ್ವ-ಇಚ್ಛೆಯಿಂದ ಈ ಸಾಮೂಹಿಕ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ, ಬಾಲಿವುಡ್ ನಟರಿಂದ ಹಿಡಿದು ಕ್ರೀಡಾಪಟುಗಳವರೆಗೆ, ಕೈಗಾರಿಕೋದ್ಯಮಗಳಿಂದ ಆರಂಭಿಸಿ ಆಧ್ಯಾತ್ಮಿಕ ನಾಯಕರವರೆಗೆ, ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಈ ಆಂದೋಲನಕ್ಕೆ ಧುಮುಕುತ್ತಿದ್ದಾರೆ. ಸರಕಾರಿ ಇಲಾಖೆಗಳು, ಎನ್ ಜಿ ಇಗಳು, ಸ್ಥಳೀಯ ಸಮುದಾಯ ಕೇಂದ್ರಗಳು ಭಾರತವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸ್ವಚ ಭಾರತ ಅಭಿಯಾನದ ಬಗ್ಗೆ

  • ಸ್ವಚ ಭಾರತ ಅಭಿಯಾನವು ಒಂದು ಬೃಹತ್ ಸಮೂಹ ಚಳುವಳಿ ಆಗಿದೆ ಇದು ೨೦೧೯ ನೇ ಇಸವಿಯ ಹೊತ್ತಿಗೆ ಭಾರತವನ್ನು ಸ್ವಚ ಭಾರತವನ್ನಾಗಿಸುವ ಗುರಿಹೊಂದಿದೆ.ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚತೆ ಇಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು.
  • ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ೨೦೧೪ ರ ಅಕ್ಟೋಬರ್ ೨ ರಂದು ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು…CLICK HERE TO READ MORE
Share