25th SEPTEMBER- DAILY CURRENT AFFAIRS BRIEF

25th SEPTEMBER

 

 

1.ರಾಜಕಾರಣದಿಂದ ಅಪರಾಧಿಗಳನ್ನು ದೂರ ಇಡಲು ಸಂಸತ್ತು ಕಾನೂನು ಮಾಡಲಿ: ಸುಪ್ರಿಂಕೋರ್ಟ್

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಜನ ಪ್ರತಿನಿಧಿ ಕಾಯಿದೆ ಬಗ್ಗೆ, ರಾಜಕೀಯದ ಅಪರಾಧೀಕರಣ- ಕಾಳಜಿ, ಸವಾಲುಗಳು ಮತ್ತು ಪರಿಹಾರಗಳು.

ಪ್ರಮುಖ ಸುದ್ದಿ

  • ಗಂಭೀರಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಶಾಸನಸಭೆಗಳಿಗೆ ಪ್ರವೇಶಿಸಿ ಕಾನೂನು ರೂಪಿಸುವ ಪ್ರಕ್ರಿಯೆಗಳಿಂದ ದೂರ ಇರಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮುಖ್ಯ ಅಂಶಗಳು

 

  • ಶಾಸಕರು ಹಾಗೂ ಸಂಸದರ ಮೇಲಿನ ಕ್ರಿಮಿನಲ್​ ಆರೋಪಗಳು ಸಾಬೀತಾಗಿ ಶಿಕ್ಷೆಗೊಳಗಾಗುವುದಕ್ಕೂ ಮೊದಲೇ ಅವರನ್ನು ಅನರ್ಹಗೊಳಿಸಬೇಕು. ಈ ಮೂಲಕ ರಾಜಕೀಯ ಕ್ಷೇತ್ರದ ಅಪರಾಧೀಕರಣಕ್ಕೆ ಕಡಿವಾಣ ಹಾಕಬೇಕು.ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್​ ಇಂದು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
  • “ಭ್ರಷ್ಟಾಚಾರ ಮತ್ತು ಅಪರಾಧೀಕರಣ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಬೇರುಗಳ ಮೇಲೆ ದಾಳಿ ನಡೆಸುತ್ತಿದೆ. ಇದನ್ನು ತೊಡೆದು ಹಾಕಲು ಸಂಸತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಕ್ರಿಮಿನಲ್​ ಪ್ರಕರಣಗಳನ್ನು ಎದುರಿಸುತ್ತಿರುವವರು ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ತನಗಿರುವ ಲಕ್ಷ್ಮಣ ರೇಖೆಯನ್ನು ಮೀರುವುದಿಲ್ಲ. ಶಾಸಕಾಂಗದ ಅಧಿಕಾರ ವ್ಯಾಪ್ತಿಗೆ ನ್ಯಾಯಾಂಗ ಪ್ರವೇಶಿಸುವುದಿಲ್ಲ,” ಎಂದು ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್​ ಪೀಠ ಸ್ಪಷ್ಟಪಡಿಸಿದೆ.
  • ಇದರ ಜತೆಗೆ, ” ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್​ ಕೇಸುಗಳ ಪೂರ್ವಾಪರವನ್ನು ತಾವು ಚುನಾವಣೆ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್​ನಲ್ಲಿ ದಪ್ಪ ಅಕ್ಷರಗಳಲ್ಲಿ ಉಲ್ಲೇಖಿಸಬೇಕು. ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್​ ಕೇಸುಗಳ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸ್ಥಳೀಯ ಮಾಧ್ಯಮಗಳಲ್ಲಿ (ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ) ವ್ಯಾಪಕ ಪ್ರಚಾರ ನೀಡಬೇಕು. ಅಲ್ಲದೆ, ಅಭ್ಯರ್ಥಿಗಳ ಪೂರ್ವಾಪರವನ್ನು ಪಕ್ಷಗಳು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು. ಈ ಮೂಲಕ ಮತದಾರರು ಸೂಕ್ತವಾದವರನ್ನು ಆಯ್ಕೆ ಮಾಡಲು ಸಹಕರಿಸಬೇಕು” ಎಂದೂ ಸುಪ್ರೀಂ ಕೋರ್ಟ್​ ಸೂಚಿಸಿದೆ.
  • ಸದ್ಯ ಪ್ರಜಾಪ್ರತಿನಿಧಿ ಕಾಯಿದೆಯ ಪ್ರಕಾರ ಕ್ರಿಮಿನಲ್​ ಅಪರಾಧ ಸಾಬೀತಾಗಿ ಅಪರಾಧಿ ಎಂದು ಘೋಷಣೆಯಾದ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
  • ಪ್ರಕರಣದ ವಿಚಾರಣೆ ವೇಳೆ ಈ ಹಿಂದೆ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದ ಕೇಂದ್ರ ಸರ್ಕಾರ ದೇಶದ ಜನಪ್ರತಿನಿಧಿಗಳ ಪೈಕಿ ಶೇ.36 ಮಂದಿ ಕ್ರಿಮಿನಲ್​ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿತ್ತು.
  • ದೇಶದ ಸಂಸತ್ತು ಮತ್ತು ವಿಧಾನಸಭೆಗಳಲ್ಲಿನ ಒಟ್ಟು 4,896 ಜನಪ್ರತಿನಿಧಿಗಳ ಪೈಕಿ 1,765 ಮಂದಿ ಕ್ರಿಮಿನಲ್​ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ತನ್ನ ಅಫಿಡವಿಟ್​ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು….CLICK HERE TO READ MORE

 

Share