26th SEPTEMBER
1.ಆಧಾರ್ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
SOURCE- https://www.thehindubusinessline.com/news/supreme-court-verdict-on-constitutional-validity-of-aadhaar/article25045458.ece
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಆಧಾರ್ ಕಾರ್ಡ್ ನ ಅವಶ್ಯಕತೆ ಮತ್ತು ಅದರ ಸುತ್ತಲಿನ ವಿವಾದ
ಪ್ರಮುಖ ಸುದ್ದಿ
- ಆಧಾರ್ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಸಮಾಜದ ಕಟ್ಟಡಕಡೆಯ ವರ್ಗದ ಅಭ್ಯುದಯಕ್ಕೆ ಆಧಾರ್ ನೆರವಾಗುತ್ತಿದೆ. ಅವರಿಗೊಂದು ಗುರುತು ನೀಡಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ಅಂಶಗಳು
- ಸಾಂವಿಧಾನಿಕ ಮಾನ್ಯತೆ ಪಡೆದಿರುವ ಆಧಾರ್ನ ದತ್ತಾಂಶಗಳು ಅತ್ಯಂತ ಅಮೂಲ್ಯವಾದದ್ದು. ಅದರ ದತ್ತಾಂಶ ರಕ್ಷಣೆಗೆ ಕೇಂದ್ರ ಸರ್ಕಾರ ಆದಷ್ಟು ಬೇಗ ಸೂಕ್ತ ಕಾನೂನು ರೂಪಿಸಬೇಕು,” ಎಂದೂ ಒತ್ತಿ ಹೇಳಿತು.
- “ಸಮಾಜದ ಕಟ್ಟಕಡೆಯ ಸಮುದಾಯದ ಅಭ್ಯುಧಯಕ್ಕೆ ಆಧಾರ್ ನೆರವಾಗುತ್ತಿದೆ. ಅಲ್ಲದೆ, ಅವರಿಗೊಂದು ಗುರತು ಕಲ್ಪಿಸಿಕೊಟ್ಟಿದೆ. ಇನ್ಯಾವುದೇ ಗುರುತಿನ (ID) ಪ್ರಕಾರಗಳಿಗಿಂತಲೂ ಆಧಾರ್ ಭಿನ್ನವಾಗಿದ್ದು, ಅದನ್ನು ನಕಲು ಮಾಡಲು ಸಾಧ್ಯವಿಲ್ಲ. ಯಾವತ್ತೂ ಕೂಡ ಉತ್ತಮವಾಗಿರುವುದಕ್ಕಿಂತಲೂ ವಿಶಿಷ್ಟವಾಗಿರುವುದು ಉಪಯುಕ್ತ. ಆಧಾರ್ ಒಂದು ವಿಶಿಷ್ಟ ವ್ಯವಸ್ಥೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
- “ಅರ್ಜಿದಾರರ ವಾದ ಅತ್ಯಂತ ಭಿನ್ನವಾದದ್ದು. ಆಧಾರ್ ಕಾರ್ಡ್ ಮತ್ತು ಗುರುತು ವ್ಯವಸ್ಥೆಯ ನಡುವೆ ವ್ಯತ್ಯಾಸಗಳಿವೆ. ಒಂದು ಬಾರಿ ಬಯೋಮೆಟ್ರಿಕ್ ಮೂಲಕ ಸಂಗ್ರಹಿಸಿದ ಮಾಹಿತಿಯು ದತ್ತಾಂಶವಾಗಿ ಸಂಗ್ರಹವಾಗುತ್ತದೆ,”
- ” ಮಾಹಿತಿಯನ್ನು ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಸೆಕ್ಷನ್ 57 ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತು. ಅಲ್ಲದೆ, ಜನರಿಂದ ಸಂಗ್ರಹಿಸುವ ದತ್ತಾಂಶವನ್ನು ಆಧಾರ್ ಪ್ರಧಿಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು,”ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.
ಹಿನ್ನಲೆ
- ಆಧಾರ್ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 2016ರಿಂದ ಈಚೆಗೆ, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್ ಪುಟ್ಟಸ್ವಾಮಿ ಅವರನ್ನೂ ಒಳಗೊಂಡಂತೆ 31 ಮಂದಿ ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಆಧಾರ್ ಎಂಬುದು ಅಸಾಂವಿಧಾನಿಕ.
- ಇದು ಮೂಲಭೂತ ಹಕ್ಕುಗಳಲ್ಲಿ ಒಂದಾದ ಖಾಸಗಿತನದ ಹಕ್ಕನ್ನು ಉಲ್ಲಂಗಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಈ ವರೆಗೆ 38 ದಿನಗಳ ಸುದೀರ್ಘ ವಿಚಾರಣೆ ನಡೆಸಿದೆ. ಕಳೆದ ಮೇ 10ರಂದು ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಯಾವುದಕ್ಕೆ ಕಡ್ಡಾಯ
- ಪಾನ್ಗೆ ಆಧಾರ್ ಅನ್ನು ಲಿಂಕ್ ಮಾಡಲೇ ಬೇಕು.
- ಅದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗಲೂ ಬೇಕು ಆಧಾರ್.
- ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಆಧಾರ್ ನೀಡಲೇಬೇಕು.
ಯಾವುದಕ್ಕೆ ಕಡ್ಡಾಯವಲ್ಲ
- ಯುಜಿಸಿ, ಎನ್ಇಇಟಿ, ಸಿಬಿಎಸ್ಇ ಪರೀಕ್ಷೆ ಆಧಾರ್ ಕೇಳುವಂತಿಲ್ಲ.
- ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಾಗಲೂ ನೀಡುವಂತಿಲ್ಲ.
- ಖಾಸಗಿ ಕಂಪನಿಗಳೂ ವಿಶಿಷ್ಟ ಗುರುತಿನ ಚೀಟಿಯನ್ನು ಕೇಳುವಂತಿಲ್ಲ. ಅಲ್ಲದೆ, ಆಧಾರ್ ಪ್ರಾಧಿಕಾರವೂ ತನ್ನ ಮಾಹಿತಿಯನ್ನು ಖಾಸಗಿಯವರಿಗೆ ನೀಡುವಂತಿಲ್ಲ (ಸೆಕ್ಷನ್ 57 ರದ್ದು)
- ಮೊಬೈಲ್ ಸಿಮ್ ಪಡೆಯುವಾಗಲೂ ಬೇಕಾಗಿಲ್ಲ.
- ಬ್ಯಾಂಕ್ ಖಾತೆ ತೆರಯುವ ಸಂದರ್ಭದಲ್ಲಿಯೂ ಆಧಾರ ಕೊಡಬೇಕಿಲ್ಲ.
- ಡಿಜಿಟಲ್ ವಾಲೆಟ್ಗಳು (ಉದಾ: Paytm, ಅಮೆಜಾನ್ ಪೇ) ವಿಶಿಷ್ಟ ಗುರತಿನ ಸಂಖ್ಯೆ ನೀಡಬೇಕಿಲ್ಲ….CLICK HERE TO READ MORE