2nd OCTOBER- DAILY CURRENT AFFAIRS BRIEF

2nd OCTOBER

 

1.ಪೂರ್ವ ವಲಯ ಮಂಡಳಿ (Eastern Zonal Council)

SOURCE-https://economictimes.indiatimes.com/news/politics-and-nation/west-bengal-rajnath-singh-chairs-23rd-meeting-of-eastern-zonal-council/videoshow/66029099.cms

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ವಲಯ ಮಂಡಳಿಗಳ ಬಗ್ಗೆ ಮತ್ತು ಅದರ ಪ್ರಾಮುಖ್ಯತೆ

ಪ್ರಮುಖ ಸುದ್ದಿ

  • ಕೇಂದ್ರ ಗೃಹ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಕೋಲ್ಕತಾದಲ್ಲಿ ಪೂರ್ವ ವಲಯ ಮಂಡಳಿ 23 ನೇ ಸಭೆ ನಡೆಯಿತು. ಈ ಸಭೆಯಲ್ಲಿ   ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್‌ನ ರಘುವರ ದಾಸ್‌, ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ, ಒಡಿಶಾದ ಹಣಕಾಸು ಸಚಿವ ಶಶಿಭೂಷಣ್‌ ಬೆಹರಾ ಭಾಗವಹಿಸಿದ್ದರು.

ಮುಖ್ಯ ಅಂಶಗಳು

  • ಈ ಸಭೆಯಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ನಡುವಿನ 1978 ರ ಒಪ್ಪಂದದಡಿಯಲ್ಲಿ ಫುಲ್ಬರಿ ಅಣೆಕಟ್ಟಿನ ಬಗೆಗಿನ ಕೆಲವೊಂದು ಸಮಸ್ಯೆಗಳನ್ನು ಪರಿಶೀಲಿಸಿದರು .
    ಎಸ್ಸಿ / ಎಸ್ಟಿ / ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಗಳ ಕೇಂದ್ರ ಪಾಲು ಬಿಡುಗಡೆ  ಮಾಡಿರುವ ಬಗ್ಗೆ ಹಾಗು   ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣದ ಬಗ್ಗೆ ಚರ್ಚಿಸಲಾಯಿತು.

ವಲಯ ಮಂಡಳಿಗಳು

  • ವಲಯ ಮಂಡಳಿಗಳನ್ನು ಸಂಸತ್ತಿನಿಂದ ರೂಪಿಸಲಾದ ರಾಜ್ಯ ಪುನರ್ವಿಂಗಡಣಾ ಕಾಯ್ದೆ 1956ರ ಮೂಲಕ ಸ್ಥಾಪಿಸಲಾಗಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ಹಾಗೂ ಅಂತರರಾಜ್ಯ ಸಂಬಂಧಗಳನ್ನು ಸುಧಾರಿಸಲು ಈ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
  • ಪ್ರಸ್ತುತ ಭಾರತವನ್ನು ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ ಉತ್ತರ ವಲಯ ಮಂಡಳಿ, ದಕ್ಷಿಣ ವಲಯ ಮಂಡಳಿ, ಪಶ್ಚಿಮ ವಲಯ ಮಂಡಳಿ, ಪೂರ್ವ ವಲಯ ಮಂಡಳಿ ಮತ್ತು ಕೇಂದ್ರ ವಲಯ ಮಂಡಳಿ.
  • ಉತ್ತರ ವಲಯ ಮಂಡಳಿ – ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶ  ಚಂಡೀಗಢ ರಾಜ್ಯಗಳನ್ನು ಒಳಗೊಂಡಿದೆ.
  • ಕೇಂದ್ರ ವಲಯ ಮಂಡಳಿಯು ಛತ್ತೀಸ್ ಗಡ ,ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ .
  • ಪೂರ್ವ ವಲಯ ಮಂಡಳಿಯು ಬಿಹಾರ, ಜಾರ್ಖಂಡ್, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಒಳಗೊಂಡಿದೆ.
  • ಪಶ್ಚಿಮ ವಲಯ ಮಂಡಳಿಯು ಗೋವಾ , ಗುಜರಾತ್, ಮಹಾರಾಷ್ಟ್ರ ಮತ್ತು ದಮನ್ & ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
  • ದಕ್ಷಿಣ ವಲಯ ಮಂಡಳಿಯು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶವನ್ನು ಹೊಂದಿದೆ.

ಸಂಯೋಜನೆ:

  • ಅಧ್ಯಕ್ಷರು – ಕೇಂದ್ರ ಗೃಹ ಸಚಿವರು ಈ ಪ್ರತಿಯೊಂದು ಮಂಡಳಿಯ ಅಧ್ಯಕ್ಷರಾಗಿದ್ದಾರೆ.
  • ಉಪಾಧ್ಯಕ್ಷರು – ಪ್ರತಿ ವಲಯದ ರಾಜ್ಯಗಳ ಮುಖ್ಯಮಂತ್ರಿಗಳು ಒಂದು ವರ್ಷದ ಅವಧಿಯಲ್ಲಿ ಉಪಾಧ್ಯಕ್ಷರಾಗಿಯಿರುವರು.
  • ಸದಸ್ಯರು– ಪ್ರತಿ ರಾಜ್ಯದಿಂದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಂದ ನಾಮಕರಣಗೊಂಡ    ಇನ್ನಿತರ ಇಬ್ಬರು ಮಂತ್ರಿಗಳು ಮತ್ತು ಆಯಾ   ವಲಯದಲ್ಲಿರುವ ಕೇಂದ್ರಾಡಳಿತ ಪ್ರದೇಶದ ಇಬ್ಬರು ಸದಸ್ಯರನ್ನು  ಒಳಗೊಂಡಿರುತ್ತದೆ.

ವಲಯ ಮಂಡಳಿಗಳ ಉದ್ದೇಶ

  • ರಾಷ್ಟ್ರದ ನೈಸರ್ಗಿಕ ವಿಭಾಗಗಳು, ನದಿ ವ್ಯವಸ್ಥೆಗಳು, ಸಂಪರ್ಕ ವ್ಯವಸ್ಥೆ, ಸಾಂಸ್ಕೃತಿಕ ಮತ್ತು ಭಾಷಾ ಒಲವು, ಆರ್ಥಿಕ ಅಭಿವೃದ್ದಿಯ ಅಗತ್ಯಗತೆಗಳು, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ವಲಯ ಮಂಡಳಿಗಳ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ.
  • ಈ ಮೇಲಿನ ವಲಯ ಮಂಡಳಿಗಳಲ್ಲಿ ಈಶಾನ್ಯ ರಾಜ್ಯಗಳನ್ನು ಸೇರಿಸಲಾಗಿಲ್ಲ. ಬದಲಿಗೆ 1971ರ ಕಾಯ್ದೆಯ ಮೂಲಕ ಈಶಾನ್ಯವಲಯ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ವಲಯ ಆಗಸ್ಟ್ 8, 1972 ರಲ್ಲಿ…CLICK HERE TO READ MORE
Share