Daily current Affairs 24th August

24th August

 

1.ಒಬಿಸಿ ಕೋಟಾದಲ್ಲಿ ಉಪಪಂಗಡಗಳನ್ನು  ಅಧ್ಯಯನ ಮಾಡಲು ಸಮಿತಿಗೆ ಕ್ಯಾಬಿನೆಟ್ ಅನುಮೋದನೆ

ವಿದ್ಯಾರ್ಥಿಗಳ ಗಮನಕ್ಕೆ

 Mains Paper 2: Governance | Welfare schemes for vulnerable sections of the population by the Centre and States and the performance of these schemes; mechanisms, laws, institutions and Bodies constituted for the protection and betterment of these vulnerable sections.

  UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level): ಮಂಡಲ್ ಆಯೋಗ 

ಮೇನ್ಸ್ ಗಾಗಿ (Mains level): ನಮ್ಮ ರಾಷ್ಟ್ರವನ್ನು ಜಾತ್ಯತೀತ ರಾಷ್ಟ್ರ ಎಂದು ಕರೆಯುವಾಗ ONE TAX-ONE NATION   GST ಯನ್ನುಜಾರಿಗೊಳಿಸಿದಹಾಗೆ ONE MAN-ONE CASTE ಎಂದು ಜಾರಿಗೆ ತರಲು ಸಾಧ್ಯ ವಿಲ್ಲವೇ ?

ಪ್ರಮುಖ ಸುದ್ದಿ

  • ಇತರ ಹಿಂದುಳಿದ ವರ್ಗಗಳ (ಒಬಿಸಿ) ಉಪಪಂಗಡಗಳಲ್ಲಿನ    ಸಮಸ್ಯೆಯನ್ನು ಪರಿಶೀಲಿಸಲು ಸಂವಿಧಾನದ   340 ವಿಧಿಯ  ಅಡಿಯಲ್ಲಿ  ಸಮಿತಿಯನ್ನು  ಸ್ಥಾಪಿಸುವ  ಪ್ರಸ್ತಾಪವನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ.
  • ಆಯೋಗದ ಅಧ್ಯಕ್ಷರ ನೇಮಕಾತಿಯ ದಿನಾಂಕದಿಂದ 12 ವಾರಗಳಲ್ಲಿ ಆಯೋಗ ತನ್ನ ವರದಿಯನ್ನು ಸಲ್ಲಿಸಬೇಕು. ಈ ಆಯೋಗವನ್ನು “ಇತರ ಹಿಂದುಳಿದ ವರ್ಗಗಳಲ್ಲಿ ಉಪ ಪ್ರವರ್ಗಗಳನ್ನು ಪರಿಶೀಲಿಸುವ  ಆಯೋಗಎಂದು ಹೆಸರಿಸಲಾಗಿದೆ.

ಆಯೋಗದಲ್ಲಿ  ಉದ್ದೇಶಿತ ಉಲ್ಲೇಖಗಳ ನಿಯಮಗಳು 

  • ಕೇಂದ್ರ ಪಟ್ಟಿಯಲ್ಲಿ ಸೇರಿಸಲಾಗಿರುವ OBC ಗೆ ಸಂಬಂಧಿಸಿದಂತೆ, ಅದರ ವಿಶಾಲ ವಿಭಾಗದಲ್ಲಿ ಸೇರಿಸಲಾದ ಜಾತಿ / ಸಮುದಾಯಗಳ ನಡುವೆ ಮೀಸಲಾತಿಯ ಪ್ರಯೋಜನಗಳು  ಯಾವ ರೀತಿ  ವಿತರಣೆಯಾಗುತ್ತಿದೆ ಎಂಬುದನ್ನು    ಪರೀಕ್ಷಿಸುವುದು.
  • OBC ಗಳಲ್ಲಿನ ಉಪಪಂಗಡಗಳ ವಿಂಗಡಣೆಗೆ   ಯಾಂತ್ರಿಕ ಮಾನದಂಡಗಳಲ್ಲಿ  ಮತ್ತು ನಿಯತಾಂಕಗಳನ್ನು ವೈಜ್ಞಾನಿಕ ವಿಧಾನದಲ್ಲಿ ಕೆಲಸ ಮಾಡವುದು .
  • ಒಬಿಸಿ ಪಟ್ಟಿಯಲ್ಲಿರುವ ಆಯಾ ಜಾತಿಗಳು / ಸಮುದಾಯಗಳು / ಉಪ-ಜಾತಿಗಳನ್ನು / ಸಮಾನಾರ್ಥಕಗಳನನ್ನಾಗಿ  ಗುರುತಿಸುವ ಮತ್ತು ಅವುಗಳನ್ನು  ಉಪ-ವರ್ಗಗಳಾಗಿ ವರ್ಗೀಕರಿಸುವ೦ತಹ ಕ್ರಮವನ್ನು  ಕೈಗೊಳ್ಳುವುದು.

ಕಾನೂನಿನಡಿಯಲ್ಲಿ ಉಪ-ವರ್ಗೀಕರಣವುಕ್ಕೆ  ಅನುಮತಿ ಇದೆಯೇ?

  • ಹಿಂದುಳಿದ ವರ್ಗಗಳನ್ನು ಹಿಂದುಳಿದ ಅಥವಾ ಹಿಂದುಳಿದ ವರ್ಗಗಳಾಗಿ ವರ್ಗೀಕರಿಸುವ ಯಾವುದೇ ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ನಿಬಂಧನೆ ಇಲ್ಲ ಎಂದು ಇಂದ್ರಾ ಸಾವ್ನಿ (Indra Sawhney)   ಇತರರು ಮತ್ತು   ಭಾರತದ  ಸರ್ಕಾರದ ನಡುವಿನ  ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ ಮತ್ತು ಇಂಥ ಉಪ ವರ್ಗಗಳನ್ನು ಸೃಷ್ಟಿಸುವ ಸಂಬಂಧ ಕಾನೂನನ್ನು ಜಾರಿಗೆ ತರುವುದು ಕೂಡಾ ಸ್ವೀಕಾರಾರ್ಹ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.

ಪ್ರಸ್ತುತ ಒಬಿಸಿಗೆ ಹೇಗೆ ಮೀಸಲಾತಿ ನೀಡಲಾಗುತ್ತಿದೆ ?

  • ಪ್ರಸ್ತುತ, ಪ್ರತಿ ರಾಜ್ಯದಿಂದ ನಮೂದುಗಳನ್ನು ಹೊಂದಿರುವ ಏಕ ಕೇಂದ್ರೀಯ ಒಬಿಸಿ ಪಟ್ಟಿ ಇದೆ. ಅದರಲ್ಲಿರುವ ಎಲ್ಲಾ ಜಾತಿಗಳಿಗೆ ಸೇರಿದ ಜನರು ಕೇಂದ್ರ ಸರ್ಕಾರಿ ಉದ್ಯೋಗಗಳು ಮತ್ತು ಕೇಂದ್ರ ಶೈಕ್ಷಣಿಕ ಸಂಸ್ಥೆಗಳಿಗಳಲ್ಲಿ   27% ಒಬಿಸಿ   ಮೀಸಲಾತಿಯನ್ನು ಪಡೆಯಬಹುದು.
  • ಒಂಬತ್ತು ರಾಜ್ಯಗಳು ಈಗಾಗಲೇ ಒಬಿಸಿಗಳಲ್ಲಿ ಉಪ-ಪಂಗಡ ಗಳನ್ನೂ ವರ್ಗೀಕರಣ ಮಾಡಿದೆ.  ಅವುಗಳೆಂದರೆ  ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ, ಕರ್ನಾಟಕ, ಹರಿಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ತಮಿಳುನಾಡು. ಮಂಡಲ್ ಕಮೀಶನ್ ವರದಿಯನ್ನು ಅನುಷ್ಠಾನಗೊಳಿಸಿದ ನಂತರ ಓಬಿಸಿ ಮೀಸಲಾತಿ  ವಾಸ್ತವವಾಯಿತು . 
  • ಮಂಡಲ್ ಕಮಿಷನ್ ಅನ್ನು 1979 ರಲ್ಲಿ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಜನತಾ ಪಾರ್ಟಿ ಸರ್ಕಾರವು “ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು”   ಭಾರತೀಯ ಸಂಸತ್ ಸದಸ್ಯ ಬಿ.ಪಿ.ಮಂಡಲ್  ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದರು.

SOURCE-PIB

 

2.ಇಂಡೋನೇಪಾಳ ಗಡಿಯಲ್ಲಿ ಮೆಚಿ ನದಿಗೆ ಹೊಸ ಸೇತುವೆ

ವಿದ್ಯಾರ್ಥಿಗಳ ಗಮನಕ್ಕೆ

 Mains Paper 2 : India and its neighbourhood- relations.

 UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level): ಮೆಚಿ ನದಿಯ ಬಗ್ಗೆ, ಇತರೆ ನೆರೆಯ ದೇಶದೊಂದಿದೆ ಇರುವ ಗಡಿ ನದಿಗಳಬಗ್ಗೆ  

ಮೇನ್ಸ್ ಗಾಗಿ (Mains level): ಭಾರತ ನೇಪಾಳ ಸಂಬಂಧಗಳು

 ಪ್ರಮುಖ ಸುದ್ದಿ

  • ಇಂಡೋ-ನೇಪಾಳ ಗಡಿಯಲ್ಲಿರುವ ಮೆಚಿ ನದಿಯ ಮೇಲೆ ಹೊಸ ಸೇತುವೆಯ ನಿರ್ಮಾಣವನ್ನು ಪ್ರಾರಂಭಿಸಲು ವೆಚ್ಚ ಹಂಚಿಕೆ, ಇತರೆ ವಿವರ ಪಟ್ಟಿ ಮತ್ತು ರಕ್ಷಣೆಗಾಗಿ ಸಮಸ್ಯೆಗಳಿಗೆ ಅನುಷ್ಠಾನ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಭಾರತ ಮತ್ತು ನೇಪಾಳದ ನಡುವೆ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.

ಪ್ರಮುಖ ಸಂಗತಿಗಳು:

  • ಸೇತುವೆಯ ನಿರ್ಮಾಣದ ಅಂದಾಜು ವೆಚ್ಚ ರೂ. 158.65 ಕೋಟಿ ರೂ.ಗಳನ್ನು ಎಡಿಬಿ ಸಾಲದ ಮೂಲಕ ಭಾರತ ಸರ್ಕಾರದಿಂದ ನೀಡಲಾಗುತ್ತದೆ.
  • ಹೊಸ ಸೇತುವೆಯು NH 327B ನಲ್ಲಿ ಬರುವ ಕಾಕರ್ವಿಟ್ಟಾ (ನೇಪಾಳ) ದಿಂದ ಪನಿಟಾಂಕಿ ಬೈಪಾಸ್ (ಭಾರತ) ನ್ನು ಉನ್ನತ ಹಂತಕ್ಕೆ ತಲುಪಿಸುವ ಗುರಿಯಾಗಿದೆ.ಇದು 1500 ಮೀಟರ್ ಉದ್ದವಿದೆ.
  • ಮೀಚಿ ಸೇತುವೆ ಭಾರತದಲ್ಲಿನ ಏಷಿಯಾ ಹೆದ್ದಾರಿ 02 ರ ಅಂತ್ಯದ ಹಂತವಾಗಿದೆ, ಇದು ನೇಪಾಳಕ್ಕೆ ದಾರಿ ಕಲ್ಪಿಸುತ್ತದೆ ಮತ್ತು ನೇಪಾಳಕ್ಕೆ ನಿರ್ಣಾಯಕ ಸಂಪರ್ಕವನ್ನು ಒದಗಿಸುತ್ತದೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್ (NHIDCL) ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.

ಸೇತುವೆಯ ಪ್ರಾಮುಖ್ಯತೆ:

  • ಸೇತುವೆಯ ನಿರ್ಮಾಣವು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಗಡಿ ವ್ಯಾಪಾರವನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ  ಹಾಗು ಕೈಗಾರಿಕಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಬಲಪಡಿಸುವ ಮೂಲಕ ಸಂಬಂಧಗಳನ್ನು ಭದ್ರಪಡಿಸುತ್ತದೆ.

ಮೆಚಿ ನದಿಯ ಬಗ್ಗೆ:

  • ಮೆಚಿ ನದಿಯು ನೇಪಾಳ ಮತ್ತು ಭಾರತದ ಮೂಲಕ ಹರಿಯುವ ಗಡಿ ಭಾಗದ ನದಿಯಾಗಿದೆ.
  • ಇದು ಮಹಾನಂದ ನದಿಯ ಉಪನದಿಯಾಗಿದೆ.
  • ಮೆಚಿ ನದಿಯು ನೇಪಾಳದ ಮಹಾಭಾರತ ರೇಂಜ್ನಲ್ಲಿ ಹುಟ್ಟುತ್ತದೆ.

SOURCE-HINDU

 

3.ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವಿಕೆ ಕುರಿತು ಭಾರತ ಮತ್ತು ನೇಪಾಳದ ನಡುವಿನ ಒಪ್ಪಂದ

ವಿದ್ಯಾರ್ಥಿಗಳ ಗಮನಕ್ಕೆ

 Mains Paper 2 : India and its neighbourhood- relations.

 UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level): NOT MUCH

ಮೇನ್ಸ್ ಗಾಗಿ (Mains level): ಈ  ಒಪ್ಪಂದದ ಮಹತ್ವವೇನು..? ಜಾಗತಿಕ ವಲಯದಲ್ಲಿ ಯಾವ ರೀತಿ ಪರಣಿಸಬಹುದು

ಪ್ರಮುಖ ಸುದ್ದಿ

  • ಮಾದಕವಸ್ತುಗಳ ಬೇಡಿಕೆ ಕಡಿತಗೊಳಿಸುವ ಹಾಗೂ ನಾರ್ಕೊಟಿಕ್ ಡ್ರಗ್ ಮತ್ತು ಸೈಕೋಟ್ರೋಫಿಕ್ ವಸ್ತುಗಳ ಮತ್ತು ಅಕ್ರಮ ಕಳ್ಳಸಾಗಾಣಿಕೆ ತಡೆಗಟ್ಟುವಿಕೆ ಕುರಿತು ಭಾರತ ಮತ್ತು ನೇಪಾಳದ ನಡುವೆ   ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಕ್ಯಾಬಿನೆಟ್ ತನ್ನ ಅನುಮೋದನೆಯನ್ನು ನೀಡಿದೆ.
  • ಎರಡು ದೇಶಗಳ ನಡುವಿನ ಮಾದಕವಸ್ತುಗಳ ಸಹಕಾರದ ಕುರಿತು  ಒಪ್ಪಂದದಲ್ಲಿ  ಪಟ್ಟಿ ಮಾದಲಾಗಿದೆ . ಇದು ಮಾಹಿತಿಯ ವಿನಿಮಯದ ಕಾರ್ಯವಿಧಾನವನ್ನು ಮತ್ತು ಒಪ್ಪಂದವನ್ನು  ಅನುಷ್ಠಾನಕ್ಕೆ ಮತ್ತು ಇತರೆ  ಯಾವುದೇ ಮಾಹಿತಿಯನ್ನು ವಿನಿಮಯ ಮಾಡುವ ಜವಾಬ್ದಾರಿ ಹೊಂದಿರುವ ಎರಡು ರಾಷ್ಟ್ರಗಳಲ್ಲಿನ ಸಮರ್ಥ ಅಧಿಕಾರಿಗಳನ್ನೂ ಸಹ ಸೂಚಿಸುತ್ತದೆ.

ಒಡಂಬಡಿಕೆಯಲ್ಲಿ ಕಂಡುಬರುವ ಅಂಶಗಳು

  • ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಫಿಕ್ ವಸ್ತುಗಳ ಅಕ್ರಮ ಕಳ್ಳಸಾಗಾಣಿಕೆ ಮತ್ತು ಅವುಗಳ ಮಾರಾಟದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ನಿಟ್ಟಿನಲ್ಲಿ ಪರಸ್ಪರ ಸಹಕರಿಸಿಕೊಳ್ಳಲು ಮತ್ತು ಮಾದಕ ವಸ್ತುಗಳ ಬೇಡಿಕೆಯನ್ನು ಕಡಿತಗೊಳಿಸುವ ಹಿನ್ನೆಲೆಯಲ್ಲಿ ಸಹಕರಿಸಿಕೊಳ್ಳವುದು .
  • ನಾರ್ಕೊಟಿಕ್ ಡ್ರಗ್ ಮತ್ತು ಸೈಕೋಟ್ರೋಫಿಕ್ ವಸ್ತುಗಳ ಪೂರೈಕೆ ತಡೆಗೆ , ಶಿಕ್ಷಣ, ಜಾಗೃತಿ ಮತ್ತು ಸಮುದಾಯ ಆಧರಿತ ಕಾರ್ಯಕ್ರಮಗಳು ನಡೆಸುವುದು .
  • ಮಾದಕವಸ್ತುಗಳ ಕಾರ್ಯಾಚರಣೆ, ತಾಂತ್ರಿಕ ಮತ್ತು ಸಾಮಾನ್ಯ ಸ್ವರೂಪದ ಮಾಹಿತಿಯನ್ನುವಿನಿಮಯಮಾಡಿಕೊಳ್ಳುವುದು .
  • ಇದರ ಜತೆಗೆ ತಮ್ಮ ದೇಶಗಳಲ್ಲಿರುವ ಕಾನೂನುಗಳು, ನಿಯಮಾವಳಿಗಳು, ನಾರ್ಕೊಟಿಕ್ ಡ್ರಗ್ ಮತ್ತು ಸೈಕೋಟ್ರೋಫಿಕ್ ವಸ್ತುಗಳ ನಿಯಂತ್ರಣದಲ್ಲಿ ಉತ್ತಮ ಕ್ರಮಗಳು ಹಾಗೂ ವಿಧಾನಗಳ ಬಗ್ಗೆಯೂ ಮಾಹಿತಿ ನೀಡುವುದು.

ಹಿನ್ನೆಲೆ:

  • ಮಾದಕದ್ರವ್ಯದ ಕಳ್ಳಸಾಗಣೆಗೆ ತಡೆಗೆ ಜಾಗತಿಕ ಪ್ರಯತ್ನಗಳನ್ನು ಭಾರತವು ಯಾವಾಗಲೂ ಬೆಂಬಲಿಸಿದೆ. ಈ ಸಂಬಂಧ ವಿಶ್ವಸಂಸ್ಥೆ ಹಮ್ಮಿಕೊಂಡಿರುವ ಹಲವು ಬಹುಪಕ್ಷೀಯ ಹಾಗೂ ದ್ವಿಪಕ್ಷೀಯ ಯೋಜನೆಗಳಿಗೆ ಹಾಗೂ ಒಪ್ಪಂದಗಳಿಗೆ ಭಾರತ ಒಪ್ಪಿಗೆ ಸೂಚಿಸಿದೆ .
  • ವಿಶ್ವಸಂಸ್ಥೆಯ ನಾರ್ಕೊಟಿಕ್ ಡ್ರಗ್ ಮತ್ತು ಸೈಕೋಟ್ರೋಫಿಕ್ ವಸ್ತುಗಳ ತಡೆ ಒಪ್ಪಂದಕ್ಕೆ   ಭಾರತ ಹಲವು ದೇಶಗಳ  ಜತೆ  ಒಪ್ಪಂದವನ್ನು ಮಾಡಿಕೊಂಡಿದೆ.
  • ಹಾಗು  ನೆರೆಯ ದೇಶಗಳ ಜತೆ ಮತ್ತು  ದೇಶಗಳ ಜತೆ ಒಪ್ಪಂದ ಮಾಡಿಕೊಂಡು, ಮಾದಕವಸ್ತು ದಂಧೆಗೆ ಕಡಿವಾಣ ಹಾಕುವ ವಿಚಾರದಲ್ಲಿ ಶ್ರಮ ವಹಿಸುತ್ತಾ ಬಂದಿದೆ. 

SOURCES: PIB

 

4. ಪರ್ಯಾಯ ಯಾಂತ್ರಿಕ ವ್ಯವಸ್ಥೆಯ ಮೂಲಕ  ಸರ್ಕಾರಿ ಸ್ವಾಮ್ಯದ ಇನ್ನಷ್ಟು ಬ್ಯಾಂಕ್ಗಳ ವಿಲೀನ   

  Mains Paper 3: Economy | Mobilization of resources  

UPSC ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level):  SBI ಯೊಂದಿಗೆ ಅಸೋಸಿಯೇಟ್ ಬ್ಯಾಂಕುಗಳ ವಿಲೀನದ ಬಗ್ಗೆ  

ಮೇನ್ಸ್ ಗಾಗಿ (Mains level): ಬ್ಯಾಂಕುಗಳ ವಿಲೀನತೆಯಿಂದ ಆಗುವ  ವಿವಿಧ ಪರಿಣಾಮಗಳು. ಅದರ ಪ್ರಯೋಜನಗಳೇನು ಹಾಗು  ಅನಾನುಕೂಲತೆಗಳೇನು ?? 

ಪ್ರಮುಖ ಸುದ್ದಿ

  ಪರ್ಯಾಯ ವ್ಯವಸ್ಥೆ (Alternative Mechanism (AM)).  ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆಯನ್ನು ನೀಡಿದೆ. ಈ ನಿರ್ಧಾರವು  ರಾಷ್ಟ್ರೀಕೃತ ಬ್ಯಾಂಕುಗಳನ್ನು ಕ್ರೋಢೀಕರಿಸುವ ಮೂಲಕ ಪ್ರಬಲ ಹಾಗೂ ಸ್ಪರ್ಧಾತ್ಮಕ ಬ್ಯಾಂಕುಗಳನ್ನು ಸೃಷ್ಟಿಸಲು ವೇದಿಕೆ ಸೃಷ್ಟಿಸಲು ಸುಗಮವಾಗಲಿದೆ.

 ಸಾರ್ವಜನಿಕ ವಲಯ ಬ್ಯಾಂಕುಗಳ  ವಿಲೀನದ  ಅನುಮೋದನೆಯ   ಪ್ರಮುಖ ಲಕ್ಷಣಗಳು

  ಪ್ರಬಲ ಮತ್ತು ಸ್ಪರ್ಧಾತ್ಮಕ ಬ್ಯಾಂಕುಗಳನ್ನು ರಚಿಸುವ ನಿರ್ಧಾರವು ಕೇವಲ ವಾಣಿಜ್ಯ ಪರಿಗಣನೆಗಳ ಮೇಲೆ ಆಧಾರಿತವಾಗಿರುತ್ತದೆ.

  ಈ ಪ್ರಸ್ತಾಪವು ಬ್ಯಾಂಕುಗಳ ಮಂಡಳಿಗಳಿಂದ ಆರಂಭವಾಗಬೇಕು.

  ವಿಲೀನದ  ಯೋಜನೆಗಳನ್ನು ರೂಪಿಸಲು ಬ್ಯಾಂಕುಗಳಿಂದ ಪಡೆದ  ತತ್ತ್ವಗಳ  ಅನುಮೋದನೆಗಾಗಿ ಪ್ರಸ್ತಾಪಗಳನ್ನು  ಪರ್ಯಾಯ ವ್ಯವಸ್ಥೆ ಯ  (AM) ಮುಂಚಿತವಾಗಿ ಇರಿಸಲಾಗುತ್ತದೆ.

ತಾತ್ವಿಕ ಅನುಮೋದನೆಯ ನಂತರ, ಬ್ಯಾಂಕುಗಳು ಕಾನೂನು ಮತ್ತು ಸೆಬಿಯ ಅಗತ್ಯತೆಗಳಿಗೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಮಾಲೋಚಿಸಿ ಕೇಂದ್ರ ಸರ್ಕಾರವು ಅಂತಿಮ ಯೋಜನೆಯನ್ನು ಸೂಚಿಸುತ್ತದೆ.

 BACK 2 BASICS

ಹಿನ್ನೆಲೆ:

1991 ರಲ್ಲಿ, ಭಾರತವು  ಬಲವಾದ ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಕಡಿಮೆ  ಸಂಖ್ಯೆಯಲ್ಲಿ ಹೊಂದಿದೆ ಎಂದು ಸೂಚಿಸಲಾಗಿತ್ತು . 

ಆದರೆ, 2016 ರ ಮೇ ತಿಂಗಳಲ್ಲಿ   ಆರು ಬ್ಯಾಂಕುಗಳನ್ನು   ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾಗೆ ಸೇರ್ಪಡೆ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಏಕೀಕರಿಸುವ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲಾಗುಯಿತು . 

ಹಿಂದೆ ವಿಲೀನಗೊಳಿಸಿದ ಸ್ಟೇಟ್ ಬ್ಯಾಂಕ್ ಅಪ್ ಇಂದೋರ್ ಮತ್ತು ಸೌರಾಷ್ಟ್ರ   ಬ್ಯಾಂಕುಗಳಿಗಿಂತ  ಇದು ದಾಖಲೆ ಸಮಯದಲ್ಲಿ ವಿಲೀನವನ್ನು ಪೂರ್ಣಗೊಳಿಸಲಾಯಿತು.  

ಬ್ಯಾಂಕುಗಳ ವಿಲೀನತೆಯಿಂದ ಆಗುವ ಲಾಭಗಳು

  • ದಕ್ಷತೆಯಲ್ಲಿ ಸುಧಾರಣೆ. ಈಗಾಗಲೇ ದಕ್ಷತೆಗೆ ಹೆಸರಾದ, ವೆಚ್ಚಗ್ರಾಹಿ ಬ್ಯಾಂಕಿನೊಂದಿಗೆ ವಿರುದ್ಧ ಮನೋಭಾವದ ಇತರ ಎರಡೋ ಮೂರೋ ಬ್ಯಾಂಕುಗಳನ್ನು ವಿಲೀನ ಮಾಡಿದರೆ ಈ ಬ್ಯಾಂಕುಗಳಿಗೂ ಅದರ ಆಡಳಿತ ನೈಪುಣ್ಯವನ್ನು ವರ್ಗಾಯಿಸಲು ಅನುಕೂಲವಾಗುತ್ತದೆ. ಅದರಿಂದ ಅಧಿಕ ಲಾಭ ಬರುತ್ತದೆ.
  • ಅನಗತ್ಯ ಸ್ಪರ್ಧೆ ನಿಂತು, ಬ್ಯಾಂಕುಗಳನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.
  • ‘ಅಗಾಧತೆಯಿಂದಾಗಿ ವೈಫ‌ಲ್ಯ ಅಸಾಧ್ಯ’ ಎನ್ನಬಹುದಾದ ಸಾಮರ್ಥ್ಯ ಒದಗುತ್ತದೆ. 
  • ಜಾಗತಿಕ ಮಾರುಕಟ್ಟೆಯಲ್ಲಿ ಮಾನ್ಯತೆ ದೊರೆತು, ವ್ಯಾಪಾರವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಿ, ವಿದೇಶಿ ಬ್ಯಾಂಕುಗಳ ಮೇಲೆ ಭಾರತಕ್ಕೆ ಇರುವ ಅನಿವಾರ್ಯ ಅವಲಂಬನೆಯನ್ನು ಕೊನೆಯಾಗಿಸುತ್ತದೆ.
  • ವೀಕ್ಷಣೆ ಮತ್ತು ನಿರ್ವಹಣೆಯಲ್ಲಿ ಅನುಕೂಲತೆ ಹಾಗೂ ಪಾರದರ್ಶಕತೆಯಲ್ಲಿ ಸುಧಾರಣೆ ಮತ್ತು ಸಂಘಟಿತ ಆಡಳಿತ.
  • ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು ಮತ್ತು ಮಾರುಕಟ್ಟೆಯ ಸುಧಾರಿತ ಮತ್ತು ಆದಾಯದಾಯಕ ಉಪಯೋಗ

ಬ್ಯಾಂಕುಗಳ ವಿಲೀನತೆಯಿಂದ ಮುಖ್ಯ ತೊಂದರೆಗಳು

  • ಸಿಬ್ಬಂದಿ ಮತ್ತು ಗ್ರಾಹಕ ವರ್ಗದ ಪ್ರತಿಭಟನೆ, ಹೆಚ್ಚುವ ಲಾಭದಿಂದ ಉತ್ತಮ ಪರಿಹಾರ ದೊರೆಯುವ ಸಾಧ್ಯತೆಯಿದ್ದರೂ, ನೂತನ ವಾತಾವರಣ, ಸಂಸ್ಕೃತಿ ಮತ್ತು ವಿವಿಕ್ತತೆ (individuality)ಯ ಶಂಕೆ, ಈ ಎರಡೂ ವರ್ಗವನ್ನು ಕಾಡಬಹುದು.
  • ಷೇರುದಾರರ ಪ್ರತಿರೋಧ – ತಮ್ಮ ಈಗಿನ ಮಾರುಕಟ್ಟೆಯ ಷೇರುಮೌಲ್ಯದಲ್ಲಿ ಆಗುವ ಏರುಪೇರನ್ನು ಇವರು ಸಹಿಸುವುದು ಅನುಮಾನ.
  • ತಾಂತ್ರಿಕತೆಯ ತೊಂದರೆಗಳು – ಹಲವು ಬ್ಯಾಂಕುಗಳು, ಹಲವು ತರಹದ ತಾಂತ್ರಿಕತೆಯನ್ನು ಉಪಯೋಗಿಸುತ್ತಿರುವುದರಿಂದ ವಲಸೆ ತ್ರಾಸದಾಯಕ.
  • ಆರಂಭಿಕ ವೆಚ್ಚ ಮತ್ತು ವಲಸೆ ಸಮಯದಲ್ಲಿ ವ್ಯಾಪಾರ ನಿರ್ವಹಣೆ.
  • ಸಾವಿರಾರು ಸಿಬ್ಬಂದಿಗೆ ಒಮ್ಮೆಗೇ ತರಬೇತಿ ನೀಡುವ ಮತ್ತು ಅವರನ್ನು ಶಾಂತಿಯುತವಾಗಿ ಸೂಕ್ತ ಸ್ಥಳಕ್ಕೆ ವರ್ಗಾಯಿಸುವ ಸವಾಲು.

ಪರಿಹಾರಗಳು

  • ಆದರೆ, ಇದ್ಯಾವುದೂ ನಿವಾರಿಸಲಾಗದ ತೊಂದರೆಗಳಲ್ಲ. ಸರಕಾರಕ್ಕೆ ಕೆಲವು ಅನಿವಾರ್ಯತೆಗಳೂ ಇವೆ. ಮುಖ್ಯವಾಗಿ ಅದು ಪಾರಂಪರಿಕವಾಗಿ ಈಗಿನ ಎಲ್ಲ ಬ್ಯಾಂಕುಗಳಿಗೆ ನಿರಂತರ ಬಂಡವಾಳ ಹೂಡಿಕೆದಾರನಾಗಿರಲು ಸಾಧ್ಯವಿಲ್ಲ. ಹಾಗೆಯೇ ಜನತೆಯಲ್ಲಿ ಬ್ಯಾಂಕುಗಳ ಘನತೆ, ಸಾರ್ವಜನಿಕರ ಉಳಿತಾಯಗಳ ರಕ್ಷಣೆಯ ಹೊಣೆಯೂ ಅದರ ಮೇಲಿದೆ.
  • ಹಾಗೆಯೇ ತಾನು ಸದಸ್ಯನಾಗಿರುವ ವಿಶ್ವ ವ್ಯಾಪಾರ ಸಂಸ್ಥೆಯ ಸಲಹೆಯನ್ನೂ ಅದು ಪೂರ್ತಿ ಕಡೆಗಣಿಸುವಂತಿಲ್ಲ. ಪ್ರತಿರೋಧಿಸುವ ಸಿಬ್ಬಂದಿಗೆ ಗೋಲ್ಡನ್‌ ಹ್ಯಾಂಡ್‌ ಷೇಕ್‌, ಗ್ರಾಹಕ ಮತ್ತು ಷೇರುದಾರರ ಸಭೆ ನಡೆಸಿ ಸೂಕ್ತ ಆಶ್ವಾಸನೆ ನೀಡಿದರೆ, ಈ ಕಾರ್ಯ ಸುಲಭವಾಗಬಹುದು.
  • ತಾಂತ್ರಿಕತೆಯ ತೊಂದರೆಯನ್ನು ತಜ್ಞರೊಂದಿಗೆ ಆಲೋಚಿಸಿ ಪರಿಹರಿಸಿ ಕೊಳ್ಳಬಹುದು. ಬೇರೆ ಬೇರೆ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ಈಗಾಗಲೇ ವಿಲೀನಗೊಂಡಿರುವ ಬ್ಯಾಂಕುಗಳಿಂದ ಈ ಬಗ್ಗೆ ಸಲಹೆಗಳನ್ನು ಪಡೆಯಬಹುದು.
  • ಮುಖ್ಯವಾಗಿ ಎಲ್ಲ ದುರ್ಬಲ ಬ್ಯಾಂಕುಗಳಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಒಂದು ನಿರ್ದಿಷ್ಟ ಗಡುವನ್ನು ನೀಡಿ ಅವುಗಳ ಜಯ, ಅಪಜಯವನ್ನು ಆಧರಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬಹುದು. 

ಜಾಗತಿಕ  ವಲಯದಲ್ಲಿ ಬ್ಯಾಂಕ್ ಗಳ ವಿಲೀನತೆಯ ಉದಾಹರಣೆಗಳು

ಕ್ರೋಡೀಕರಣದ ಬಗ್ಗೆ ಆಲೋಚಿಸಿದಾಗ ನಮಗೆ ಎದುರಾಗುವ ಮುಖ್ಯ ಉದಾಹರಣೆಗಳು ಇವು.

  • ಕಳೆದ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ನಡೆದ ಖಾಸಗಿ ವಲಯದ ಬ್ಯಾಂಕುಗಳು ವಿಲೀನತೆ. 
  • 1998ರಿಂದ 2004ರ ವರೆಗೆ ಜಪಾನಿನಲ್ಲಿ ಸಂಭವಿಸಿದ ಬ್ಯಾಂಕುಗಳ ವಿಲೀನತೆ. 
  • 2004ರಿಂದ ನೈಜೀರಿಯಾದಲ್ಲಿ ನಡೆದ ಬ್ಯಾಂಕುಗಳ ವಿಲೀನತೆ.
  • 2001ರಿಂದ 2010ರ ವರೆಗೆ ಮಲೇಷಿಯಾದಲ್ಲಿ ನಡೆದ ಬ್ಯಾಂಕುಗಳ ವಿಲೀನತೆ. 
  • ಇದರಲ್ಲಿ, ಮೊದಲ ಉದಾಹರಣೆ ಮುಕ್ತ ಮಾರುಕಟ್ಟೆಯಲ್ಲಿ ನಡೆದಿದ್ದರೆ, ಉಳಿದ ಮೂರು ಸರಕಾರೀ ಪ್ರೇರಿತ ಯೋಜನೆಗಳು. ಈ ಮೂರು ಯೋಜನೆಗಳೂ ವಿಫ‌ಲ ಎಂದು ಹೇಳಲಾಗದಿದ್ದರೂ, ನೈಜೀರಿಯಾದ ಯೋಜನೆಯನ್ನು ಬಿಟ್ಟರೆ ಉಳಿದೆರಡು ಇನ್ನೂ ತಮ್ಮ ಪೂರ್ಣ ಪಲಿತಾಂಶಗಳನ್ನು ನೀಡಲು ಅಸಫ‌ಲವಾಗಿವೆ.
  • ಇದಕ್ಕೆ ಮುಖ್ಯ ಕಾರಣ, ಯೋಜನೆಯನ್ನು ರೂಪಿಸಿದಾಗ ಮುಂದೆ ಬರಬಹುದಾದ ಜಾಗತಿಕ ಆರ್ಥಿಕ ಹಿಂಜರಿತವನ್ನು ಪರಿಗಣಿಸದೆ ಅದಕ್ಕೆ ಬೇಕಾದ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳದ್ದು.
  • ಆದರೆ, ನೈಜೀರಿಯಾದಲ್ಲಿ ಕೇವಲ ಐದು ವರ್ಷಗಳಲ್ಲಿ ಠೇವಣಿ ಮತ್ತು ಸಾಲಗಳು ದ್ವಿಗುಣಿವಾದವು. ಮಾತ್ರವಲ್ಲ, ಅನುತ್ಪಾದಕ ಸಾಲ ಶೇ.23ರಿಂದ ಶೇ.7ಕ್ಕೆ ಇಳಿಯಿತು. ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಯಿತು. 1.5 ಬಿಲಿಯನ್‌ ಅಮೆರಿಕನ್‌ ಡಾಲರು ಹೆಚ್ಚುವರಿ ಹೂಡಿಕೆ ರೂಪದಲ್ಲಿ ಈ ದೇಶಕ್ಕೆ ಹರಿದು ಬಂತು. 2012ರಲ್ಲಿ 12 ನೈಜೀರಿಯನ್‌ ಬ್ಯಾಂಕುಗಳು ಜಗತ್ತಿನ 1,000 ಅಗ್ರ ಬ್ಯಾಂಕುಗಳ ಪಟ್ಟಿಯಲ್ಲಿ ಸೇರಿಕೊಂಡವು. 
  • ಹೀಗೆಂದು, ಈ ಮಾದರಿ ಭಾರತದಲ್ಲೂ ಫ‌ಲಿತವಾಗಬೇಕೆಂದೇನೂ ಇಲ್ಲ. ಇಲ್ಲಿಯ ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ವಾತಾವರಣವೇ ಬೇರೆ. ಜನರೂ ಬೇರೆ. ಆದ್ದರಿಂದ, ಪ್ರತಿಯೊಂದು ಕೋನದಿಂದಲೂ ಎಲ್ಲ ವಿಷಯಗಳನ್ನು ಪರೀಕ್ಷಿಸಿ, ಯೋಜನೆ ರೂಪಿಸಬೇಕಾಗುತ್ತದೆ.

SOURCE- INDIAN EXPRESS

 

5.  “ಪ್ರಧಾನ್ ಮಂತ್ರಿ ಕಿಶನ್ ಸಂಪದ ಯೋಜನ “-  ಕೇಂದ್ರ ಸರ್ಕಾರದ ಹೊಸ ಯೋಜನೆ

 Topic: Food processing and related industries in India- scope and significance, location, upstream and downstream requirements, supply chain management. 

UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level): NOT MUCH

ಮೇನ್ಸ್ ಗಾಗಿ (Mains level): ಈ  ಒಪ್ಪಂದದ ಮಹತ್ವವೇನು..? ಜಾಗತಿಕ ವಲಯದಲ್ಲಿ ಯಾವ ರೀತಿ ಪರಣಿಸಬಹುದು

ಪ್ರಮುಖ ಸುದ್ದಿ

  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಹೊಸ ಕೇಂದ್ರ ಸರ್ಕಾರದ  ಯೋಜನೆ –  ಸಂಪದ (Scheme for Agro-Marine Processing and Development of Agro-Processing Clusters) ಎಂದು ಮರುನಾಮಕರಣಕ್ಕೆ ಅನುಮತಿ ನೀಡಿದೆ. 

  “ಪ್ರಧಾನ್ ಮಂತ್ರಿ ಕಿಶನ್  ಸಂಪದ ಯೋಜನೆ (PMKSY) 2016-20 ರವರಗೆ  14 ನೇ ಹಣಕಾಸು ಆಯೋಗದ ಜೊತೆ  ಸಹಕಾರಿಯಾಗುತ್ತದೆ. ಉದ್ದೇಶ: 

  PMKSY ಯ ಉದ್ದೇಶವೆಂದರೆ

ಕೃಷಿಗೆ ಬೇಕಾಗುವ ಅಗತ್ಯತೆ ಯನ್ನು  ಪೂರೈಸುವುದು, 

ಸಂಸ್ಕರಣೆಯನ್ನು ಆಧುನೀಕರಿಸುವುದು 

ಕೃಷಿ-ವ್ಯರ್ಥವನ್ನು ಕಡಿಮೆ ಮಾಡುವುದುಪರಿಣಾಮಗಳು

PMKSY ನ ಅನುಷ್ಠಾನವು ಕೃಷಿ ಮೂಲದಿಂದ ಚಿಲ್ಲರೆ ಮಾರಾಟಕ್ಕೆ ಸಮರ್ಥ ಪೂರೈಕೆ ಸರಪಳಿ ನಿರ್ವಹಣೆಯೊಂದಿಗೆ ಆಧುನಿಕ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ.

ಇದರಿಂದ  ದೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಬೆಳವಣಿಗೆಗೆ ಒಂದು ದೊಡ್ಡ ಉತ್ತೇಜನವನ್ನು ನೀಡುತ್ತದೆ.

  ಇದು ರೈತರಿಗೆ ಉತ್ತಮ ಬೆಲೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ರೈತರ ಆದಾಯದ ದ್ವಿಗುಣಕ್ಕೆ ದೊಡ್ಡ ಹೆಜ್ಜೆಯಾಗಿದೆ.Ø  ಇದರಿಂದ  ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡಪ್ರಮಾಣದ  ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ

 ಇದು ಕೃಷಿ ಉತ್ಪನ್ನಗಳ ವ್ಯರ್ಥವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸಂಸ್ಕರಣಾ ಮಟ್ಟವನ್ನು ಹೆಚ್ಚಿಸುತ್ತದೆ, ಸುರಕ್ಷಿತ ಮತ್ತು ಅನುಕೂಲಕರ ಸಂಸ್ಕರಿಸಿದ ಆಹಾರಗಳ ಲಭ್ಯತೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮತ್ತು ಸಂಸ್ಕರಿತ ಆಹಾರಗಳ ರಫ್ತು ಹೆಚ್ಚಿಸುತ್ತದೆ. 

ಹಿನ್ನೆಲೆ: 

 PMKSY ಎನ್ನುವುದು ಮೆಗಾ ಫುಡ್ ಪಾರ್ಕ್ಸ್, ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಮತ್ತು ಮೌಲ್ಯ ಸೇರ್ಪಡೆ ಇನ್ಫ್ರಾಸ್ಟ್ರಕ್ಚರ್, ಫುಡ್ ಸೇಫ್ಟಿ ಮತ್ತು ಕ್ವಾಲಿಟಿ ಅಶ್ಯೂರೆನ್ಸ್ ಇನ್ಫ್ರಾಸ್ಟ್ರಕ್ಚರ್ ಮುಂತಾದ ಸಚಿವಾಲಯದಿಂದ  ನಡೆಯುತ್ತಿರುವ ಯೋಜನೆಗಳನ್ನು ಒಳಗೊಂಡಿರುವ ಒಂದು ಯೋಜನೆ.    

ONLY FOR PRELIMS

6.ಒಡಿಶಾ ಸರಕಾರದ ಹೊಸ ಸೌರ ಯೋಜನೆ.

  • ಒಡಿಶಾ ಸರಕಾರವು ಸೌರ ಯೋಜನೆ ಅನ್ನು ರಾಜಧಾನಿ ಭುವನೇಶ್ವರದಲ್ಲಿ ಪ್ರಾರಂಭಿಸಿದೆ.
  • ವಿದ್ಯುತ್ ನಷ್ಟವನ್ನು ಕಡಿಮೆ ಮಾಡಲು ಮತ್ತು ಜನರು ಭಾಗವಹಿಸುವಿಕೆಯ ಮೂಲಕ ನವೀಕರಿಸಬಹುದಾದ ಸೌರಶಕ್ತಿಯನ್ನು ಅಳವಡಿಸಿಕೊಳ್ಳುವಲ್ಲಿ ಈ ಕಾರ್ಯಕ್ರಮದ ಗುರಿ .                                                           
  • ಒಡಿಶಾ ನವೀಕರಿಸಬಹುದಾದ ಶಕ್ತಿ ಅಭಿವೃದ್ಧಿ ಸಂಸ್ಥೆ (OREDA).ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
  • ಈ ಕಾರ್ಯಕ್ರಮದಡಿಯಲ್ಲಿ ರಾಜ್ಯ ಸರ್ಕಾರವು, ವಸತಿ ಮತ್ತು ಸಾಂಸ್ಥಿಕ ವಿಭಾಗಗಳು ಮತ್ತು ನೋಂದಾಯಿತ ಸಂಸ್ಥೆಗೆ  ಸೇರಿದ ಗ್ರಾಹಕರಿಗೆ 30% ರಷ್ಟು ವಿನಾಯಿತಿಯನ್ನು ಒದಗಿಸುತ್ತದೆ.
  • ಇದು ತನ್ನ ಸ್ವಂತ ಸೌರ ಶಕ್ತಿಯನ್ನು ಬಳಸಿಕೊಂಡು, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಗ್ರಾಹಕರಿಗೆ ಸಹಕರಿಸುತ್ತದೆ

 

Share