Daily Current Affairs 5th September

5th SEPTEMBER

SOURCE-PIB

 

1.’ಕ್ಸಿಯಾಮೆನ್ಘೋಷಣೆ

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಾಗಿ

ಪ್ರಿಲಿಮ್ಸ್ ಗಾಗಿ

  • ಇತ್ತೀಚೆಗೆ ಚೈನಾದ ಶಿಯಾಮೆನ್ ನಲ್ಲಿ ನಡೆದ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರ ಕ್ಸಿಯಾಮೆನ್’ ಘೋಷಣೆಯು ಸದಸ್ಯ ರಾಷ್ಟ್ರಗಳ ಪರಸ್ಪರ ಸಹಕಾರವನ್ನು ಉತ್ತೇಜಿಸಲಿದೆ.
  • ನ್ಯಾಯೋಚಿತ ಅಂತಾರಾಷ್ಟ್ರೀಯ ಆರ್ಥಿಕ ಆದೇಶಗಳನ್ನು ಮತ್ತು ಜಾಗತಿಕ ಆರ್ಥಿಕ ಆಡಳಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂವಹನ ಮತ್ತು ಸಹಕಾರಗಳನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಘೋಷಣೆ ಒಳಗೊಂಡಿದೆ. ಘೋಷಣೆಯು ಆಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಒತ್ತಿಹೇಳುತ್ತದೆ.
  • 2011 ರ ಶೃಂಗಸಭೆಯ ನಂತರ ಚೀನಾವು ಎರಡನೇ ಬಾರಿಗೆ ಶೃಂಗಸಭೆಯನ್ನು ಆಯೋಜಿಸಿತ್ತು .

ಮೇನ್ಸ್ ಪರೀಕ್ಷೆಗಾಗಿ

ಸಭೆಯಲ್ಲಿ ಪ್ರಮುಖವಾಗಿ ಕೈಗೊಂಡ ನಿರ್ಣಯಗಳೇನು ?? ಭಾರತಕ್ಕೆ ಯಾವರೀತಿ ಅನುಕೂಲವಾಗುತ್ತದೆ  ಸಂಕ್ಷಿಪ್ತವಾಗಿ  ವಿಶ್ಲೇಷಿಸಿ??

 

ಬ್ರಿಕ್ಸ್ ನಿರ್ಣಯಗಳು

1 ಒಳ್ಳೆಯದೇ ಆಗಿರಲಿ, ಕೆಟ್ಟದ್ದೇ ಆಗಿರಲಿ ಯಾವ ಭಯೋತ್ಪಾದನೆಗೂ ಸಮರ್ಥನೆ ಇಲ್ಲ

2 ಉಗ್ರವಾದ ನಿಗ್ರಹಕ್ಕೆ ಎಲ್ಲಾ ರಾಷ್ಟ್ರಗಳೂ ಪರಸ್ಪರ ಸಹಕಾರ ನೀತಿಯನ್ನು ಅನುಸರಿಸಬೇಕು

3 ಉಗ್ರ ಸಂಘಟಕರು, ಅವರ ಪೋಷಕರನ್ನು ಹೊಣೆಗಾರ ಮಾಡಬೇಕು

4 ಅಕ್ರಮ ಹಣ ವರ್ಗ, ಉಗ್ರರಿಗೆ ಹಣ ಪೂರೈಕೆ ತಡೆಗೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು

5 ಮತೀಯವಾದ, ಉಗ್ರ ಸಂಘಟನೆಗೆ ಸೇರ್ಪಡೆ, ಶಸ್ತ್ರಾಸ್ತ್ರ ಪೂರೈಕೆ ತಡೆಗೆ ಎಲ್ಲರೂ ನಿ’ರ್ರಿಸಬೇಕು

6 ಪರಸ್ಪರರ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸದಂತೆ ಅಂತಾರಾಷ್ಟ್ರೀಯ ಸಹಕಾರ ಅಗತ್ಯ

ಸಂಕ್ಷಿಪ್ತವಾಗಿ ವಿಶ್ಲೇಷಣೆ 

  • ಡೋಕ್ಲಂ ವಿವಾದ ಕೆದಕಿ ಗಡಿಯಲ್ಲಿ ಕಿಡಿ ಹೊತ್ತಿಸಿದ್ದ ಚೀನಾವನ್ನು ಹಿಮ್ಮೆಟ್ಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ದಿಗ್ವಿಜಯ ಸಾಧಿಸಿದ್ದ ಭಾರತದ ಯಶಸ್ಸಿನ ಅಭಿಯಾನ ಈಗ ಚೀನಾ ನೆಲದಲ್ಲೂ ವಿಸ್ತರಿಸಿದೆ.
  • ಚೀನಾದ ಕ್ಸಿಯಾಮೆನ್​ನಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ  ಪಾಕಿಸ್ತಾನ ಮೂಲದ ಉಗ್ರರು ಸೇರಿದಂತೆ ವಿವಿಧ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಮಹತ್ವದ ನಿರ್ಣಯ ಹೊರಬಿದ್ದಿದೆ.
  • ಬ್ರಿಕ್ಸ್ ನಲ್ಲಿ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಬಾರದೆಂದು ಭಾರತಕ್ಕೆ ಸಲಹೆ ನೀಡಿದ್ದ ಚೀನಾ, ಇದೇ ಶೃಂಗದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತಿದ್ದು ಮತ್ತೊಂದು ಜಗದಚ್ಚರಿ. ಮತ್ತೊಂದೆಡೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಅಡ್ಡಗಾಲು ಹಾಕುತ್ತಿರುವ ಚೀನಾಗೆ ಕಿವಿ ಹಿಂಡಿದ ಭಾರತ, ಭಯೋತ್ಪಾದನೆ ವಿಚಾರದಲ್ಲಿ ದ್ವಿಮುಖ ಧೋರಣೆ ಸಲ್ಲದೆಂದು ವಾಗ್ದಾಳಿ ನಡೆಸಿತು.
  • ಭೌಗೋಳಿಕವಾಗಿ, ಆರ್ಥಿಕವಾಗಿ ಭಾರತದ ಜತೆಗಿನ ಬಾಂಧವ್ಯ ಅನಿವಾರ್ಯವೆಂಬುದನ್ನು ಮನಗಂಡ ಬಳಿಕ ಡೋಕ್ಲಂನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ, ಬ್ರಿಕ್ಸ್ ಸಮಾವೇಶದಲ್ಲೂ ಅಂಥದ್ದೇ ತಂತ್ರಗಾರಿಕೆ ಹಣೆದಿದೆ.
  • ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿಯೇ ಉಗ್ರವಾದದ ವಿಚಾರದಲ್ಲಿ ಒಂದು ಹೆಜ್ಜೆ ಹಿಂದೆ ಇರುತ್ತಿದ್ದ ಚೀನಾ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಬಾಂಧವ್ಯ ಅನಿವಾರ್ಯವೆಂಬುದನ್ನು ಮನಗಂಡು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಜೈಹಾರ ಹಾಕಿದೆ. ಚೀನಾ ಬೆಂಬಲದೊಂದಿಗೆ ಗರ್ವದಿಂದ ಬೀಗುತ್ತಿದ್ದ ಪಾಕಿಸ್ತಾನಕ್ಕೆ ಬ್ರಿಕ್ಸ್ ಶೃಂಗದ ನಿರ್ಣಯ ಮರ್ವಘಾತ ನೀಡಿದೆ.

 ಬ್ರಿಕ್ಸ್ನಲ್ಲಿ ಉಗ್ರ ನಿಗ್ರಹಕ್ಕೆ ಒಗ್ಗಟ್ಟಿನ ಮಂತ್ರ

 

  • ಭಾರತ, ರಷ್ಯಾ, ಬ್ರೆಜಿಲ್, ಚೀನಾ, ದ.ಆಫ್ರಿಕಾವನ್ನು ಒಳಗೊಂಡ ಬ್ರಿಕ್ಸ್ ರಾಷ್ಟ್ರಗಳು ಎಲ್ಲ ಬಗೆಯ ಉಗ್ರವಾದ, ಭಯೋತ್ಪಾದಕ ದಾಳಿಗಳನ್ನು ಕಟುವಾಗಿ ಖಂಡಿಸಿವೆ. ಈ ಕುರಿತು ಜಂಟಿ ಘೋಷಣಾ ಪತ್ರವನ್ನೂ ಬಿಡುಗಡೆ ಮಾಡಲಾಗಿದೆ.
  • ಬ್ರಿಕ್ಸ್ ಕ್ಸಿಯಾಮೆನ್ ಜಂಟಿ ಘೋಷಣಾಪತ್ರದಲ್ಲಿ ಪಾಕಿಸ್ತಾನದ ಹೆಸರು ಹೇಳದೆ, ಅದರ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳಾದ ಹಕ್ಕಾನಿ, ಲಷ್ಕರ್-ಎ-ತಯ್ಯಾಬ, ಜೈಶ್-ಎ- ಮೊಹಮ್ಮದ್, ತಾಲಿಬಾನ್, ಐಎಸ್​ಐಎಲ್/ಡಿಎಐಎಸ್​ಎಚ್ ಮತ್ತು ಆಲ್​ಖೈದಾ ಹೆಸರನ್ನು ಪ್ರಸ್ತಾಪಿಸಿ, ಅದರ ನಿಲುವನ್ನು ಖಂಡಿಸಲಾಗಿದೆ.
  • ಉಗ್ರ ಸಂಘಟನೆಗಳ ಉಪಟಳವನ್ನು ಬುಡ ಮಟ್ಟದಿಂದ ಕಿತ್ತೊಗೆಯಲು ಅಂತಾರಾಷ್ಟ್ರೀಯ ಸಹ ಯೋಗ ಅಗತ್ಯವಾಗಿದೆ. ಇಂತಹ ಸಂಘಟನೆಗಳಿಗೆ ಬೆಂಬಲ, ಪೋಷಣೆ ನೀಡುವ ರಾಷ್ಟ್ರಗಳನ್ನು ಖಂಡಿಸ ಬೇಕಿದೆ ಎಂದು ಹೇಳಲಾಗಿದೆ. ಭಯೋತ್ಪಾದಕ ದಾಳಿ ತಡೆಯುವುದು, ಮೂಲಭೂತ ವಾದ ಮತ್ತು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ಸ್ಥಗಿತ ಗೊಳ್ಳುವಂತೆ ಮಾಡಲು ಸಮಗ್ರ ನೀತಿ ಅಳವಡಿಸಿಕೊಳ್ಳುವಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಸಲಹೆ ನೀಡಲಾಗಿದೆ.
  • ಇದಕ್ಕೂ ಮುನ್ನ ಬ್ರಿಕ್ಸ್ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು , ಪಾಕಿ ಸ್ತಾನದ ಹೆಸರು ಪ್ರಸ್ತಾಪಿಸದೆ, ಭಯೋತ್ಪಾದನೆ ಎಂಬ ಪದ ಬಳಸದೆ, ಶಾಂತಿ ಮತ್ತು ಜಾಗತಿಕ ಸ್ಥಿರತೆ ಸಾಧಿಸಲು ಬ್ರಿಕ್ಸ್ ರಾಷ್ಟ್ರಗಳು ಪರಸ್ಪರ ಸಹಕಾರ ಮನೋಭಾವ ಹೊಂದಬೇಕು ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ, ಉಗ್ರವಾದವನ್ನು ಖಂಡಿಸುವ ಜಂಟಿ ಘೋಷಣಾಪತ್ರ ಹೊರಬಿದ್ದಿತು.

 

ಭಾರತಕ್ಕೆ ರಾಜತಾಂತ್ರಿಕ ಗೆಲುವು:

  • ಬ್ರಿಕ್ಸ್​ನಂತಹ ಮಹತ್ವದ ವೇದಿಕೆಯಲ್ಲಿ ಪಾಕ್ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳ ಹೆಸರನ್ನು ಪ್ರಸ್ತಾಪಿಸಿ, ಅವುಗಳನ್ನು ಮಟ್ಟ ಹಾಕುವ ಬಗ್ಗೆ ತೆಗೆದುಕೊಂಡಿರುವ ನಿರ್ಣಯ ಭಾರತದ ರಾಜತಾಂತ್ರಿಕ ಗೆಲುವು ಎನಿಸಿಕೊಂಡಿದೆ. ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳ ಎಲ್ಲ ನಾಯಕರ ಸಮ್ಮತಿಯ ಮೇರೆಗೆ ಇಂತಹ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ, ಜಾಗತಿಕ ಅನ್ಯ ವೇದಿಕೆಗಳಲ್ಲಿ ಈ ನಿರ್ಣಯ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
  • ಭಾರತ ಮೊದಲಿನಿಂದಲೂ ಪಾಕ್ ನೆಲದಲ್ಲಿ ಉಗ್ರ ಸಂಘಟನೆಗಳಿಗೆ ಹೆಚ್ಚಿನ ನೆರವು, ಪೋಷಣೆ ದೊರೆಯುತ್ತಿದೆ ಎಂದು ಹೇಳುತ್ತಲೇ ಇತ್ತು. ಈಗ ಈ ವಾದಕ್ಕೆ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಭಾರತದ ಹೇಳಿಕೆಗೆ ಹೆಚ್ಚಿನ ಬಲ ದೊರೆಯಲಿದೆ.
  • ಬ್ರಿಕ್ಸ್ ಜಂಟಿ ಘೋಷಣಾಪತ್ರದಲ್ಲಿ ಪಾಕ್ ಮೂಲದ ಉಗ್ರ ಸಂಘಟನೆಗಳ ಹೆಸರು ಪ್ರಸ್ತಾಪ ಮಾಡಿದ ಕ್ರಮವನ್ನು ಚೀನಾ ಸಮರ್ಥಿಸಿಕೊಂಡಿದೆ. ಈ ಸಂಘಟನೆಗಳ ವಿಧ್ವಂಸಕ ಕೃತ್ಯಗಳಿಂದ ಆಫ್ಘಾನಿಸ್ತಾನದ ಆಗುಹೋಗುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ವಿಶ್ವಸಂಸ್ಥೆ ನಿಷೇಧಿಸಿದೆ. ಆದ್ದರಿಂದ, ಬ್ರಿಕ್ಸ್ ಜಂಟಿ ಘೋಷಣಾಪತ್ರದಲ್ಲಿ ಈ ಸಂಘಟನೆಗಳ ಹೆಸರನ್ನು ಪ್ರಸ್ತಾಪಿಸಲು ಚೀನಾ ಸಮ್ಮತಿಸಿತು.
  • ಆದರೆ, ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಎರಡು ವರ್ಷಗಳಿಮದ ಅಡ್ಡಿಪಡಿಸುತ್ತಿರುವ ಬಗ್ಗೆ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು. ಈ ಬಾರಿ ಅದು ಸಲ್ಲಿಸಿರುವ ಆಕ್ಷೇಪದ ಅವಧಿ ನವೆಂಬರ್​ಗೆ ಮುಕ್ತಾಯವಾಗಲಿದೆ. ಆಗ ಅದು ಈ ವಿಷಯದಲ್ಲಿ ಹೇಗೆ ನಡೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

 

 

2.ಮುಂಗಡ ಬೆಲೆ ನಿಗದಿ ಒಪ್ಪಂದಗಳು (APAs)

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಾಗಿ

ಪ್ರಿಲಿಮ್ಸ್ ಗಾಗಿ

  • ಆಗಸ್ಟ್, 2017 ರಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) 4 ಮುಂಗಡ ಬೆಲೆ ನಿಗದಿ ಒಪ್ಪಂದ ವನ್ನು (ಎಪಿಎ) ಮಾಡಿಕೊಂಡಿದೆ . ಈ 4 ಒಪ್ಪಂದಗಳಲ್ಲಿ 3 ಏಕಪಕ್ಷೀಯ ಮತ್ತು 1 ದ್ವಿಪಕ್ಷೀಯ ಒಪ್ಪಂದಗಳಿವೆ.
  • ಈ 4 ಒಪ್ಪಂದಗಳನ್ನು ಸಹಿ ಮಾಡಿದ ನಂತರ, ಸಿಬಿಡಿಟಿಯ ಒಟ್ಟು ಮುಂಗಡ ಬೆಲೆ ನಿಗದಿ ಒಪ್ಪಂದವು   175 ಕ್ಕೆ ತಲುಪಿದೆ. ಇದರಲ್ಲಿ 162 ಏಕಪಕ್ಷೀಯ   ಮತ್ತು 13 ದ್ವಿಪಕ್ಷೀಯ  ಒಪ್ಪಂದಗಳು  ಸೇರಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಒಟ್ಟು 23 ಮುಂಗಡ ಬೆಲೆ ನಿಗದಿ ಒಪ್ಪಂದವನ್ನು   (2 ದ್ವಿಪಕ್ಷೀಯ ಮತ್ತು 21 ಏಕಪಕ್ಷೀಯ)  ಇಲ್ಲಿಯವರೆಗೆ  ಸಹಿ ಮಾಡಲಾಗಿದೆ.
  • ಟೆಲಿಕಾಂ, ಬ್ಯಾಂಕಿಂಗ್, ಉತ್ಪಾದನೆ ಮತ್ತು ಶಿಕ್ಷಣದಂತಹ ಆರ್ಥಿಕತೆಯ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 4 ಮುಂಗಡ ಬೆಲೆ ನಿಗದಿ ಒಪ್ಪಂದಮಾಡಿಕೊಂಡಿದೆ.

 

ಮೇನ್ಸ್ ಪರೀಕ್ಷೆಗಾಗಿ

ಮುಂಗಡ ಒಪ್ಪಂದ ಗಳೆಂದರೇನು .. ?? ಅದರ ಅವಶ್ಯಕತೆಗಳೇನು..??

ಮುಂಗಡ ಬೆಲೆನಿಗದಿ ಒಪ್ಪಂದವನ್ನು  ಆದಾಯ ತೆರಿಗೆ ಕಾಯ್ದೆ- 2012ರ ಅನ್ವಯ ಪರಿಚಿಸಲಾಗಿದ್ದು  2014ರಲ್ಲಿ  ಇದರ ರೋಲ್‍ಬ್ಯಾಕ್ ಅವಕಾಶವನ್ನು(Rollback” provisions) ಕಲ್ಪಿಸಲಾಗಿದೆ .

  • ತೆರಿಗೆದಾರರಿಗೆ ತಾವು ಪಾವತಿಸಬೇಕಾದ ತೆರಿಗೆಯ ಬಗ್ಗೆ ಮುಂಗಡವಾಗಿಯೇ ನಿರ್ಧರಿಸಲಾಗುತ್ತದೆ. ಇದರ ಜತೆಗೆ ತೆರಿಗೆ ನಿರ್ಧರಿಸುವ ವಿಧಾನಗಳು ಮತ್ತು ಅಂತರರಾಷ್ಟ್ರೀಯ ವಹಿವಾಟಿಗೆ ಮುಂಗಡವಾಗಿಯೇ ತೆರಿಗೆ ನಿರ್ಧರಿಸಲಾಗುತ್ತದೆ.
  • ಎಪಿಎ ಯೋಜನೆಯು ತೆರಿಗೆದಾರರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ ಮತ್ತು ಇಲ್ಲಿಯವರೆಗೆ   ಐದು ವರ್ಷಗಳಲ್ಲಿ   800 ಅರ್ಜಿಗಳನ್ನು (ಏಕಪಕ್ಷೀಯ ಮತ್ತು ದ್ವಿಪಕ್ಷೀಯ) ಸಲ್ಲಿಸಿದ್ದಾರೆ  .

 

 ಇದರ ಮುಖ್ಯ ಅವಶ್ಯಕತೆಗಳು

 

  • ಭಾರತದ ಎಪಿಎ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯವಾಗಿ ಶ್ಲಾಘಿಸಲಾಗಿದೆ.
  • ಸರ್ಕಾರದ ತೆರಿಗೆ ವ್ಯವಸ್ಥೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು.
  • ಇದು ಸಂಕೀರ್ಣವಾದ ವಹಿವಾಟು ಬೆಲೆ ನಿಗದಿ ವ್ಯವಸ್ಥೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.

 

3.’ರಾಷ್ಟ್ರ ನರ್ಮದಾ ಅವತಾರ ನೀರಾವರಿ ಯೋಜನೆ ‘(ಸೌನಿ).

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್   ಪರೀಕ್ಷೆಗಾಗಿ

  • ಭಾರತದ ರಾಷ್ಟ್ರಪತಿ, ಶ್ರೀ ರಾಮ್ ನಾಥ್ ಕೋವಿಂದ್ ಇತ್ತೀಚೆಗೆ ಗುಜರಾತಿನ ರಾಜ್ ಕೋಟ್ ನಲ್ಲಿ ಸೌರಾಷ್ಟ್ರ ನರ್ಮದಾ ಅವತಾರ್  ನೀರಾವರಿ  ಯೋಜನೆ (ಸೌನಿ) ಹಂತ-II  ರ ಅಡಿಪಾಯವನ್ನು ಹಾಕಿದರು.
  • ಸೌರಾಷ್ಟ್ರ ನರ್ಮದಾ ಅವತಾರ್ ನೀರಾವರಿ,ಯೋಜನೆಯನ್ನು ಸೆಪ್ಟೆಂಬರ್ 2012 ರಲ್ಲಿ ಪ್ರಾರಂಬಿಸಿದ್ದರು ದಕ್ಷಿಣ  ಗುಜರಾತ್ ನ  ಸರ್ದಾರ್ ಸರೋವರ್ ಅಣೆಕಟ್ಟಿನಿಂದ ಪ್ರವಾಹದ ಹರಿಯುತ್ತಿರುವ ನೀರನ್ನು  ಶುಷ್ಕವಾದ ಸೌರಾಷ್ಟ್ರದ ಪ್ರದೇಶದ 115 ಪ್ರಮುಖ ಅಣೆಕಟ್ಟುಗಳನ್ನು ತುಂಬಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
  • ಸಾಂಪ್ರದಾಯಿಕ ನೀರಾವರಿ ಯೋಜನೆಗಳಂತಲ್ಲದೆ, ಈ ಯೋಜನೆಯು ತಾಂತ್ರಿಕವಾಗಿ ‘ ನದಿಗಳ ನಡುವೆ ಸಂಪರ್ಕ ಕೊಂಡಿ ಕಲ್ಪಿಸಿಕೊಡುತ್ತದೆ . ಅಲ್ಲಿ ನೀರನ್ನು ಈಗಾಗಲೇ ಕಾಲುವೆ ಜಾಲವನ್ನು  ಹೊಂದಿರುವ ನೀರಾವರಿ ಅಣೆಕಟ್ಟುಗಳಲ್ಲಿ ತುಂಬಿಸಲಾಗುತ್ತದೆ, ಕಾಲುವೆಗಳ ಈ ಜಾಲವು ಚಾನಲ್ ನೀರನ್ನು ಸಾಕಣೆಗೆ ಸಹಾಯ ಮಾಡುತ್ತದೆ.
  • ಅಲ್ಲದೆ, ಈ ಯೋಜನೆಯು ಸಾಂಪ್ರದಾಯಿಕ ತೆರೆದ ಕಾಲುವೆಯ ಬದಲು ಪೈಪ್ ಕಾಲುವೆಗಳನ್ನು  ನಿರ್ಮಿಸುತ್ತದೆ . SAUNI ಯೋಜನೆಯ ಪೈಪ್ ಗಳನ್ನೂ  ಭೂಗತವಾಗಿ ಕಲ್ಪಿಸುತ್ತದೆ. ಅಂದರೆ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಬೇಕಾಗಿಲ್ಲ.

 

 

4.ಭೌಗೋಳಿಕ ವೈಶಿಷ್ಟ್ಯಗಳನ್ನೂ (Geographical Indications) ಉತ್ತೇಜಿಸಲು ಸಾಮಾಜಿಕ ಜಾಲತಾಣ ಅಭಿಯಾನ

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಾಗಿ

ಪ್ರಿಲಿಮ್ಸ್ ಗಾಗಿ

  • ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನೇತೃತ್ವದಲ್ಲಿ ಬರುವ ಐಪಿಆರ್ ಉತ್ತೇಜನ ಹಾಗೂ ನಿರ್ವಹಣೆ ಕೋಶ (ಸಿಐಪಿಎಎಂ) ಹೊಸದಾಗಿ ಭಾರತದ ಭೌಗೋಳಿಕ ವೈಶಿಷ್ಟ್ಯ ಕುರಿತು ಜನಜಾಗೃತಿ ಮೂಡಿಸುವ ಸಾಮಾಜಿಕ ಜಾಲತಾಣ ಅಭಿಯಾನವನ್ನು ಪ್ರಾರಂಭಿಸಿದೆ .
  • ಇದರ ಮುಖ್ಯ ಉದ್ದೇಶವೆಂದರೆ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಜನರಿಗೆ ಅರಿವು ಮೂಡಿಸುವುದು.

 

ಮೇನ್ಸ್ ಪರೀಕ್ಷೆಗಾಗಿ

ಭೌಗೋಳಿಕ ವೈಶಿಷ್ಟ್ಯಗಳೆಂದರೇನು ಮತ್ತು ಅವುಗಳ ಮಹತ್ವವೇನು …??

 

ಭೌಗೋಳಿಕ ವೈಶಿಷ್ಟ್ಯ

  • ಭೌಗೋಳಿಕ ವೈಶಿಷ್ಟ್ಯ ಎನ್ನುವುದು ಆಯಾ ಭೌಗೋಳಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಿಗದಿತ ಉತ್ಪನ್ನಗಳಿಗೆ ನೀಡುವ ಟ್ಯಾಗ್ ಆಯಾ ಪ್ರದೇಶದ ಮೂಲದಿಂದಲೇ ಇದು ವೈಶಿಷ್ಟ್ಯವನ್ನು ಗಳಿಸುವಂತೆ ಉತ್ಪನ್ನಗಳಿಗೆ ಇದು ಸೀಮಿತವಾಗಿರುತ್ತದೆ.
  • ಇಂಥ ಹೆಸರು, ಸಂಕೇತ ಅಥವಾ ಸಂಜ್ಞೆಗಳು ಗುಣಮಟ್ಟ ಹಾಗೂ ವೈಶಿಷ್ಟ್ಯದ ಪ್ರತೀಕವಾಗಿವೆ. ಕೇವಲ ನೋಂದಾಯಿತ, ಅನುಮತಿ ಪಡೆದ ಬಳಕೆದಾರರಷ್ಟೇ ಇದನ್ನು ಬಳಸಲು ಅವಕಾಶವಿರುತ್ತದೆ.
  • ಡಾರ್ಜಿಲಿಂಗ್ ಟೀ, ಮಹಾಬಲೇಶ್ವರ ಸ್ಟ್ರಾಬೆರಿ, , ಬನಾರಾಸಿ ಸೀರೆಗಳು ಮತ್ತು ತಿರುಪತಿ ಲಡ್ದು ಕೆಲವು ಉತ್ತಮ ಉದಾಹರಣೆಗಳು

 

ದೇಶದ ಸಮೃದ್ಧ ಸಂಸ್ಕೃತಿ ಮತ್ತು ಸಾಮೂಹಿಕ ಬೌದ್ಧಿಕ ಪರಂಪರೆಯ ಅವಿಭಾಜ್ಯ ಭಾಗವಾಗಿರುವ ಕಾರಣ GI ಗಳು ದೇಶಕ್ಕೆ ಅತ್ಯಂತ ಮಹತ್ವದ್ದಾಗಿದೆ.

  • GI ಗಳ ಪ್ರಚಾರವು ಸರ್ಕಾರದ ಮೇಕ್ ಇನ್ ಇಂಡಿಯಾ ‘ಯಲ್ಲಿ ಬರುತ್ತದೆ. ಇಂಥ ಜಿಐ ಟ್ಯಾಗ್‍ನಿಂದಾಗಿ ಹಲವಾರು ವಿಶಿಷ್ಟ ಕರಕುಶಲ ಹಾಗೂ ವಸ್ತುಗಳು ಮತ್ತು ಉತ್ಪನ್ನಗಳಿಗೆ ವರದಾನವಾಗಲಿದೆ.
  • ಅದರಲ್ಲೂ ಮುಖ್ಯವಾಗಿ ಅನೌಪಚಾರಿಕ ವಲಯದಲ್ಲಿ ಉತ್ಪಾದನೆಯಾಗುವ ಇಂಥ ಉತ್ಪನ್ನಗಳಿಗೆ ಮಾನ್ಯತೆ ಸಿಗಲಿದೆ. ಕೆಲವೊಂದು ಜಿಐ ಉತ್ಪನ್ನಗಳು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳ ಆರ್ಥಿಕತೆಯನ್ನು ಬೆಳೆಸುವಲ್ಲೂ ಸಹಕಾರಿಯಾಗಲಿವೆ.

 

  • ಇದು ಸಾಮಾನ್ಯವಾಗಿ ಕರಕುಶಲ ಕಲಾವಿದರು, ರೈತರು, ನೇಕಾರರು ಮತ್ತಿತರಿಗೆ ಆದಾಯ ಹೆಚ್ಚಿಸಲು ಅನುಕೂಲವಾಗಲಿದೆ. ಅವರ ಕೌಶಲ ಹಾಗೂ ಜ್ಞಾನವನ್ನು, ವಿಧಾನಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುವಲ್ಲೂ ಇದು ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಇದನ್ನು ಸಂರಕ್ಷಿಸಿ ಉತ್ತೇಜಿಸುವ ಅಗತ್ಯವಿದೆ.

 

SOURCE-HINDU AND OTHER NEWS PAPERS

 

5.ಭಾರತನೇಪಾಳ ಸಮರಾಭ್ಯಾಸಸೂರ್ಯ ಕಿರಣ್

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್   ಪರೀಕ್ಷೆಗಾಗಿ

  • ಭಾರತ ಮತ್ತು ನೇಪಾಳ ನಡುವಿನ 12 ನೇ ಮಿಲಿಟರಿ ಸಮರಭ್ಯಾಸ ಸೂರ್ಯ ಕಿರಣ್-XII ಆರಂಭಗೊಂಡಿದೆ. ಉಭಯ ದೇಶಗಳ ಸೇನೆ ನಡುವೆ ಸುಮಾರು ೩೦೦ ಸೈನಿಕರು ಭಾಗವಹಿಸಲಿದ್ದಾರೆ
  • ನೈಸರ್ಗಿಕ ವಿಪತ್ತು ನಿರ್ವಹಣೆ, ಒಳನಸುಳುವಿಕೆಯನ್ನು ತಡೆಯುವುದು ಹಾಗೂ ಅರಣ್ಯ ಸಮರಕ್ಕೆ ಅಗತ್ಯ ಕೌಶಲ್ಯಗಳ ಮೇಲೆ ಸಮರಭ್ಯಾಸದಲ್ಲಿ ಕೇಂದ್ರಿಕರಿಸಲಾಗುವುದು.
  • The 11th edition of the joint exercise was held in Pithoragarh in Uttarakhand.
  • ಸೂರ್ಯ ಕಿರಣ್-XII ಸಮರಭ್ಯಾಸದಲ್ಲಿ ಬಂಡುಕೋರರ ನಿಗ್ರಹ ಕಾರ್ಯಾಚರಣೆ ಬಗ್ಗೆ ವಿವಿಧ ಪ್ರದೇಶಗಳಲ್ಲಿ ಎರಡು ದೇಶದ ಸೇನಾ ಪಡೆಗಳಿಗೆ ತರಭೇತಿಯನ್ನು ನೀಡಲಾಗುವುದು.
  • ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಮಾನವೀಯ ನೆರವು ನೀಡುವುದು ಸೇರಿದಂತೆ ಪರಿಸರ ಸಂರಕ್ಷಣೆಗೂ ಈ ಸಮರಭ್ಯಾಸದಲ್ಲಿ ಒತ್ತು ನೀಡಲಾಗುವುದು.
  • ಈ ಸಮರಭ್ಯಾಸದಲ್ಲಿ ಭಾರತೀಯ ಸೇನಾಪಡೆ ಅಧಿಕಾರಿಗಳು ಹಾಗೂ ಪಂಜಾಬ್ ಸೇನಾತುಕಡಿಯ ಎಕ್ತಾ ಶಕ್ತಿ ಬೆಟಾಲಿಯನ್ ಭಾಗವಹಿಸಲಿವೆ. ಇನ್ನು ನೇಪಾಳದ ಪರವಾಗಿ ದುರ್ಗ ಬಕ್ಷ್ ಬೆಟಾಲಿಯನ್ ಭಾಗವಹಿಸಲಿದೆ.
  • ಸಮರಭ್ಯಾಸದಲ್ಲಿ ಉಭಯ ದೇಶಗಳ ಸೇನಾ ಪಡೆಗಳು ತಮ್ಮ ಅನುಭವ ಹಾಗೂ ಕೌಶಲ್ಯವನ್ನು ಹಂಚಿಕೊಳ್ಳುವ ಮೂಲಕ ಎರಡು ದೇಶಗಳ ನಡುವಿನ ಸ್ನೇಹ ಸಂಬಂದ ಬಲಗೊಳಿಸಲು ನೆರವಾಗಲಿವೆ.

 

 

 6.ಆಲಮಟ್ಟಿ ಆಣೆಕಟ್ಟೆ ಎತ್ತರಕ್ಕೆ ಹಸಿರು ನ್ಯಾಯಾಧಿಕರಣ ತಡೆ

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್   ಪರೀಕ್ಷೆಗಾಗಿ

  • ಉತ್ತರ ಕರ್ನಾಟಕ ಭಾಗದ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸುವ ಕರ್ನಾಟಕ ರಾಜ್ಯ ಸರಕಾರದ ಪ್ರಸ್ತಾವನೆಗೆ ಕೇಂದ್ರ ಹಸಿರು ನ್ಯಾಯಾಧಿಕರಣ ಅನುಮತಿ ಲಭಿಸದೇ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ.
  • ಆಲಮಟ್ಟಿ ಆಣೆಕಟ್ಟೆ ಎತ್ತರಿಸುವ ಕರ್ನಾಟಕದ ಪ್ರಸ್ತಾಪದ ವಿರುದ್ಧ ನೆರೆ ರಾಜ್ಯಗಳು ವಿರೋಧ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಹಸಿರು ಸಮಿತಿ ಸಮ್ಮತಿ ನಿರಾಕರಿಸಿದ್ದು ಈ ವಿಷಯದಲ್ಲಿ ಮೊದಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ದ ಅನುಮತಿ ಪಡೆಯುವಂತೆ ಸೂಚಿಸಿದೆ.
  • ರಾಜ್ಯದ ಪ್ರಸ್ತಾಪ ಕುರಿತು ನದಿ ಕಣಿವೆ ಮತ್ತು ಜಲವಿದ್ಯುತ್‌ ಯೋಜನೆಗಳ ಕುರಿತಾದ ತಜ್ಞರ ಪರಿಶೀಲನಾ ಸಮಿತಿ ಕಳೆದ ತಿಂಗಳು ಕೂಲಂಕಷ ಪರಿಶೀಲನೆ ನಡೆಸಿತ್ತು. ”ಜಲವಿಜ್ಞಾನ ಮತ್ತು ಅಂತರ್‌ರಾಜ್ಯ ಅಂಶಗಳಿಗೆ ಸಂಬಂಧಿಸಿದಂತೆ ಸಿಡಬ್ಲ್ಯುಸಿಯಿಂದ ಅಗತ್ಯ ಪರಿಶೀಲನೆ ನಡೆಸಿ ಸಮ್ಮತಿ ಪಡೆಯದೇ ಅವಸರದಲ್ಲಿ ಆಣೆಕಟ್ಟು ಎತ್ತರಿಸಲು ಕರ್ನಾಟಕ ಮುಂದಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಮಿತಿ ಈ ಕುರಿತ ಅನುಮತಿ ನೀಡಿಕೆ ನಿರ್ಧಾರವನ್ನು ಮುಂದೂಡಿದೆ,”
  • ಸಾಮಾನ್ಯವಾಗಿ ಈ ವಿಷಯದಲ್ಲಿ ತಜ್ಞರ ಪರಿಶೀಲನಾ ಸಮಿತಿ(ಇಎಸಿ)ಯ ಅನುಮತಿ ಆಧರಿಸಿ ಸಚಿವಾಲಯ ಅಂತಿಮ ಮುದ್ರೆ ಹಾಕುತ್ತದೆ.
  • ಆಣೆಕಟ್ಟೆ ಎತ್ತರ ಕುರಿತು ಕರ್ನಾಟಕ ಸರಕಾರ ಮೊದಲು ಸಿಡಬ್ಲ್ಯುಸಿಯಿಂದ ಅಗತ್ಯ ಅನುಮತಿ ಪಡೆಯಲಿ. ಆ ಬಳಿಕ ಮುಂದಿನ ಸಭೆಯಲ್ಲಿ ಈ ಪ್ರಸ್ತಾಪ ಕುರಿತು ಮರುಪರಿಶೀಲನೆ ನಡೆಸಲಾಗುವುದು ಎಂದು ಇಎಸಿ ಸ್ಪಷ್ಟ ಪಡಿಸಿದೆ.

 

  • ಕರ್ನಾಟಕದ ಈ ಪ್ರಸ್ತಾಪದ ವಿರುದ್ಧ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ತಕರಾರು ಎತ್ತಿದ್ದು ಹಲವು ಬಾರಿ ಕೇಂದ್ರದ ಬಳಿಗೆ ನಿಯೋಗ ಹೋಗಿವೆ.

 

  • ಹಾಲಿ ಇರುವ60 ಮೀಟರ್‌ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸುವುದು ಹಾಗೂ ನಾಲ್ಕು ಕಡೆ ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದು ಕರ್ನಾಟಕದ ಉದ್ದೇಶವಾಗಿದ್ದು ಈ ಕುರಿತು ಹಲವು ಬಾರಿ ಕೇಂದ್ರದ ಜತೆ ಸಮಾಲೋಚನೆ ನಡೆಸಿದ್ದಾಗಿದೆ. ಈ ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 5.3 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸಲವತ್ತು ಲಭಿಸಲಿದೆ.

 

7.RTI: ಹಾಗೆಲ್ಲಾ ಬ್ಯಾಂಕ್ ಸಿಬ್ಬಂದಿಯ ಖಾಸಗಿ ಮಾಹಿತಿ ಕೇಳ್ಬೇಡಿ

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್   ಪರೀಕ್ಷೆಗಾಗಿ

 

  • ಮಾಹಿತಿ ಹಕ್ಕು ಕಾಯಿದೆ ಅಸ್ತ್ರ ಝಳಪಿಸಿ ಇಂದು ಯಾವುದೇ ಸಾಮಾನ್ಯನಿಂದ ಹಿಡಿದು ಗಣ್ಯ ವ್ಯಕ್ತಿಯವರೆಗೂ ಮಾಹಿತಿ ಪಡೆಯಲು ಅವಕಾಶವಿದೆ. ಆದರೆ ಬ್ಯಾಂಕ್​ ಸಿಬ್ಬಂದಿಗಳ ಮಾಹಿತಿ ಪಡೆಯಲು ಸ್ವಲ್ಪ ಕಷ್ಟಸಾಧ್ಯವಾಗಬಹುದು.
  • ಸಾರ್ವಜನಿಕ ಹಿತಾಸಕ್ತಿ ಹೊರತುಪಡಿಸಿ ಬ್ಯಾಂಕ್​ ಉದ್ಯೋಗಿಗಳ ಖಾಸಗಿ ಮಾಹಿತಿ ಪಡೆಯಲು RTIನಲ್ಲಿ ಅವಕಾಶವಿಲ್ಲ. ಬ್ಯಾಂಕ್​ ನೌಕರನ ಮಾಹಿತಿ ಸಾರ್ವಜನಿಕವಾಗುವುದಕ್ಕೆ ಆರ್​ಟಿಐ ಅಡಿ ವಿನಾಯಿತಿ ನೀಡಲಾಗಿದೆ.
  • ಅಂದರೆ ಬ್ಯಾಂಕ್​​ನ ಗುಮಾಸ್ತನಿಂದ ಹಿಡಿದು ಉನ್ನತ ಸ್ಥಾನದ ಸಿಬ್ಬಂದಿಯ ಖಾಸಗ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್​​ ಹೇಳಿದೆ.
  • ಮಾಹಿತಿ ಹಕ್ಕು ಕಾಯ್ದೆಯಡಿ ಕೆನರಾ ಬ್ಯಾಂಕ್ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ತನ್ನ 2002 ರಿಂದ 2006ರವರೆಗಿನ ಎಲ್ಲಾ ನೌಕರರ ಮಾಹಿತಿಯನ್ನು ಒದಗಿಸಬೇಕೆಂದು ಕೇರಳ ಹೈಕೋರ್ಟ್​ ನಿರ್ದೇಶನ ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್​​ನಲ್ಲಿ ಪ್ರಶ್ನಿಸಲಾಗಿತ್ತು.

 

8.ಲಾಕಿ ್ಯಾನ್ಸಮ್ವೇರ್ಇರಲಿ ಎಚ್ಚರ-CERT-In

ಪ್ರಾಮುಖ್ಯತೆ(PRIORITY)ಪ್ರಿಲಿಮ್ಸ್   ಪರೀಕ್ಷೆಗಾಗಿ

  • ಲಾಕಿ ರ‍್ಯಾನ್ಸಮ್‌ವೇರ್ ಎನ್ನುವ ಹೊಸ ವೈರಸ್‌ ಬಗ್ಗೆ ಎಚ್ಚರವಿರಲಿ. ಈ ವೈರಸ್ ನಿಮ್ಮ ಕಂಪ್ಯೂಟರ್‌ನ್ನು ಲಾಕ್ ಮಾಡಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಎಚ್ಚರಿಕೆ ನೀಡಿದೆ.
  • ದುಷ್ಕರ್ಮಿಗಳು ದುರುದ್ದೇಶದಿಂದ ಲಾಕಿ ರ‍್ಯಾನ್ಸಮ್‌ವೇರ್ ಹೆಸರಿನ ವೈರಸ್ ಹರಿಬಿಟ್ಟಿದ್ದಾರೆ. ಈ ಭಯಾನಕ ವೈರಸ್ ಅಟ್ಯಾಕ್ ಆಗಿರುವ ಸಿಸ್ಟಮ್‌ಗಳನ್ನು ಅನ್‌ಲಾಕ್ ಮಾಡಲು ಹಣದ ಬೇಡಿಕೆ ಇಡಲಾಗುತ್ತದೆ ಎಂದು ಸೈಬರ್ ಸುರಕ್ಷತಾ ಕೇಂದ್ರ ಎಚ್ಚರಿಸಿದೆ. ಸ್ಪ್ಯಾಮ್ ಮೇಲ್‍‌ಗಳ ಸಾಮಾನ್ಯ ವಿಷಯದ ಜತೆ ಈ ವೈರಸ್‌ ಹರಡುತ್ತದೆ ಎಂದು ತಿಳಿಸಲಾಗಿದೆ.

 

  • ಈ ಕಾರ್ಯಾಚರಣೆ ಕುರಿತು 23 ದಶಲಕ್ಷಕ್ಕೂ ಹೆಚ್ಚಿನ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಗಳು ಸೂಚಿಸುತ್ತಿದೆ. ‘ಪ್ಲೀಸ್ ಪ್ರಿಂಟ್’, ‘ಡಾಕ್ಯುಮೆಂಟ್’, ಫೋಟೋ ಇಮೇಜಸ್ ಸ್ಕ್ಯಾನ್ ಸೇರಿದಂತೆ ಸಾಮಾನ್ಯ ವಿಷಯ ಒಳಗೊಂಡ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ಎಚ್ಚರವಾಗಿರಬೇಕು ಎಂದು CERT-In ಸೂಚಿಸಿದೆ.
Share