ಈ ವರ್ಷ ಆಯ್ಕೆ ಯಾಗದ UPSC ಅಭ್ಯರ್ಥಿಗಳಿಗೆ ಮತ್ತು ಮುಂದಿನ ವರ್ಷ(2019 ) UPSC ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ನಮ್ಮ ತಂಡ ದಿಂದ ಕೆಲವು ಸಣ್ಣ ಮಾರ್ಗದರ್ಶನ
ಈ ವರ್ಷ ಆಯ್ಕೆ ಯಾಗದ ಅಭ್ಯರ್ಥಿಗಳಿಗೆ ಹೇಳಬಯಸುವುದೆಂದರೆ JUST THINK THAT I AM NOT FAILED MY SUCCESS IS JUST POSTPONED.
ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆಯಾದ UPSC ಪರೀಕ್ಷೆಯನ್ನು ಸಾಧಿಸಲು ಹೊರಡುವಾಗ ನಾವು ಸಾಧಕನಾಗುವ ಕನಸು ಕಾಣುವಾಗ ನಮ್ಮ ಗುರಿ ನಮಗೆ ಆಸಕ್ತಿದಾಯಕವಾದ ವಿಷಯದಲ್ಲೇ ಇರಬೇಕು. ನಮ್ಮ ನಿರ್ಧಾರವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಮರವನ್ನೇರಿದ ಮರ್ಕಟ (ಕೋತಿ)ನಂತೆ ಮನಸ್ಸು ಚಂಚಲವಾಗಿದ್ದರೆ, ಏಕಭಾವ ಇಲ್ಲದೇ ಇದ್ದರೆ ನಮ್ಮ ಸಾಧನೆ ಕನಸಾಗಿಯೇ ಉಳಿಯುತ್ತದೆ..
ನಮ್ಮ ನಿರ್ಧಾರವು ದೃಢವಾಗಿರಬೇಕು. ಎಷ್ಟೇ ಬೃಹತ್ ಪ್ರಮಾಣದ ಬಿರುಗಾಳಿ ಬಂದರೂ ಒಂದಿಂಚೂ ಅಲುಗಾಡದೇ ಇರುವಂತಹ ಮನಸ್ಸು ನಮ್ಮದಾದರೆ ನಮ್ಮ UPSC ಸಾಧನೆ ಸಲೀಸಾಗಿ ನೆರವೇರುವುದು..
UPSC ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ‘ಸಾಧ್ಯವಿಲ್ಲ’ ಎಂಬ ಪದವನ್ನು ನಮ್ಮ ದಿನಚರಿಯಿಂದ ಕಿತ್ತೆಸೆಯಬೇಕು. ಆಗ ಮಾತ್ರ ನಮ್ಮ ಸಾಧನೆಗೆ ಹೊಸ ಹುರುಪು ಬರುವುದು. ‘ನನಗೆ ಇದು ಸಾಧ್ಯವಾಗುತ್ತೋ.. ಏನೋ..’, ‘ ನನಗೆ ಕಷ್ಟ ಆಗ್ತಾ ಇದೆ.’, ‘ಖಂಡಿತ ನಾನು ಸೋಲ್ತೇನೆ..’ ‘ ನನ್ನಿಂದ ಇದು ಆಗಲ್ಲ..’ ಎಂಬಿತ್ಯಾದಿ ಭಾವನೆಗಳು ನಮ್ಮಿಂದ ದೂರವಾಗಬೇಕು. ಮುಂದೆ ಒದಗಿ ಬಂದ ಸಣ್ಣದಾದ ಹಾಗೂ ಎದುರಿಸಲು ಸಾಧ್ಯವಿರುವ ಸೋಲನ್ನೇ ದೊಡ್ಡ ಸವಾಲಂತೆ ಕಂಡು ‘ನಾನು ಮುಂದೆ ಹೋಗುವುದಿಲ್ಲ.’ ಎಂಬ ನಿರ್ಧಾರದೊಂದಿಗೆ ಹಿಂದೆ ಸರಿಯುವುದು ಹೇಡಿತನ. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ನಾವು ಸೋಲನ್ನು ಎದುರಿಸಬೇಕು. ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲೂ ಮತ್ತೂ ಪ್ರಯತ್ನಿಸಬೇಕು. ಅದು ಬಿಟ್ಟು ಸಣ್ಣದಾಗಿ ಎಡವಿದಾಗಲೇ ಬೆವರಿ ಹಿಂದೆ ಓಡುವುದು ನಮ್ಮ ಮೂರ್ಖತನವನ್ನು ಎತ್ತಿ ತೋರಿಸುತ್ತದೆ.
” ಸಣ್ಣ ಮಗುವೊಂದು ನಡೆದಾಡಬೇಕಾದರೆ, ಅದು ಹಲವು ಬಾರಿ ಬೀಳುತ್ತದೆ. ಆದರೆ ಆ ಬೀಳುಗಳೇ ಆ ಮಗುವಿಗೆ ಎದ್ದು ನಿಲ್ಲಲು ಹುರಿದುಂಬಿಸುತ್ತದೆ. ಒಂದು ವೇಳೆ ಅದು ಎಡವಿ ಬೀಳುವೆನು ಎಂಬ ಭಯದಿಂದ ಎದ್ದು ನಿಲ್ಲದೇ ಇದ್ದಲ್ಲಿ ಜೀವನಪರ್ಯಂತ ನೆಲದಲ್ಲೇ ಹೊರಲಾಡಬೇಕಾದೀತು..”
ಇದೇ ರೀತಿ ನಮಗೂ ಆಸಕ್ತಿ ಹಾಗೂ ಹುಮ್ಮಸ್ಸು ಇರಬೇಕು. ಕೇವಲ ಸಾಧನೆಯ ಕನಸು ಕಾಣುತ್ತಾ ಸೊಲು ಬರಲೇಬಾರದು ಅನ್ನುವಂತಿದ್ದರೆ, ಆ ಸಾಧನೆ ಕನಸು ಮಾತ್ರ. ಸೋಲು ಗೆಲುವಿನೆಡೆಗೆ ಇರುವ ಮೊದಲ ಕದ. ಅದನ್ನು ದಾಟದೇ ಗೆಲುವು ಸಾಧಿಸುವುದು ಬಹಳ ಕಷ್ಟದ ವಿಚಾರ.
ನಾವು ಶಾಲಾ-ಕಾಲೇಜುಗಳಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸುತ್ತೇವೆ. ಇವೆಲ್ಲವನ್ನೂ ಸುಗಮವಾಗಿ ದಾಟಿ ಬರಲು ನಾವು ಮಾಡಿದ ಅಭ್ಯಾಸಗಳು ಸಹಕಾರಿಯಾಗುತ್ತದೆ. ಒಂದುವೇಳೆ ಅಲ್ಲಿ ನಮ್ಮ ಕಲಿಯುವಿಕೆ, ಪ್ರಯತ್ನ ಹಾಗೂ ಅಭ್ಯಾಸದಲ್ಲಿ ಕೊರತೆ ಕಂಡರೆ ಪರೀಕ್ಷೆಯಲ್ಲಿ ಅಂಕಗಳಿಗೂ ಕೊರತೆಯುಂಟಾಗುತ್ತದೆ.
ನಮ್ಮ UPSC ಸಾಧನೆಯನ್ನು ಸಾಧನೆಯಂತೆ ಸಾಧಿಸಿ ತೋರಿಸಲು ಸಾಧಕನಾಗ ಬಯಸುವವನು ಸಾಧ್ಯವಾದಷ್ಟು ಅಭ್ಯಾಸಗಳನ್ನು ನಡೆಸಿಕೊಂಡಿರಬೇಕು.
ನಾವು ನಮ್ಮ ಸಾಧನೆಯನ್ನು ಸಾಧಿಸಿ ಕನಸನ್ನು ನನಸಾಗಿಸಲು ನಿದ್ದೆ ಬಿಟ್ಟು ಪ್ರಯತ್ನದಲ್ಲಿರಬೇಕು. ಅಭ್ಯಾಸಗಳು ಅಗಾಧವಾಗಿರಿಸಬೇಕು. ಹಾಗಾಗಿ ನಾವು ಅಭ್ಯಾಸ ವೃದ್ದಿಸಿದಂತೆಯೇ ನಮ್ಮ ಗುರಿ ಅತ್ಯಂತ ವೇಗವಾಗಿ ತಲುಪಿಕೊಳ್ಳಬಹುದು..
PRACTICE MAKES MAN PERFECT ಎಂಬ ಆಂಗ್ಲಪದವು ಉತ್ತಮವಾದ ಸಾಧಬೆಗೆ ಅಭ್ಯಾಸ ಮುಖ್ಯ ಎಂಬುದನ್ನು ವಿವರಿಸುತ್ತದೆ..
‘ಏಳಿ ಎದ್ದೇಳಿ; ಗುರಿ ಮುಟ್ಟುವವರೆಗೆ ಎಚ್ಚರವಾಗಿರಿ’ ಸ್ವಾಮಿ ವಿವೇಕಾನಂದರ ಈ ಮಾತು ಸಾಧಕನಿಗೆ ಧೈರ್ಯ ತುಂಬುತ್ತದೆ. ‘ಗುರಿಯು ನಮ್ಮನ್ನು ಅರಸಿ ಬರಬೇಕಾದರೆ, ನಾವು ಗುರಿಯನ್ನು ಅರಸಿ ನಡೆಯಬೇಕು’. ಸೋಲು ಸವಾಲಾದಾಗ ಎದುರಿಸಲು ನಾನು ಅಶಕ್ತ ಎಂಬ ಮೂರ್ಖ ಭಾವನೆಯೊಂದಿಗೆ ಹೇಡಿಯಾಗಿ ಮರಳಕೂಡದು. ಸಾಧಿಸಲು ಹೊರಟವನಿಗೆ ಸೋಲನ್ನು, ಸವಾಲುಗಳನ್ನು, ಕಷ್ಟಗಳನ್ನು, ನಷ್ಟಗಳನ್ನು, ಸಮಸ್ಯೆಗಳನ್ನು ಎಲ್ಲವನ್ನೂ ಎದುರಿಸಿ, ಪರಿಹರಿಸುವ/ಪರಿಹರಿಸಲು ಸಾಧ್ಯ ಎಂಬ ಮನೋಧೈರ್ಯ ಇರಲೇಬೇಕು. ಇಲ್ಲವಾದಲ್ಲಿ ಆತನ ಪ್ರಯತ್ನ ವ್ಯರ್ಥವಾಗುವುದು.
ಸಾಧನೆಗೆ ಹೊರಟು ನಿಂತು, ಸ್ವಲ್ಪ ಮುಂದೆ ಸಾಗಿ, ಅಲ್ಲಿ ಸೋಲು ಸವಾಲಾದಾಗ ಜವಾಬು ನೀಡಲು ಮನವೊಪ್ಪದೇ ಮರಳಿ ಬಂದು ಇನ್ನೊಂದು ಗುರಿಯನ್ನಿಟ್ಟುಕೊಂಡು ಅದರಲ್ಲಿ ಚಲಿಸುವುದಾದರೆ, ಅಷ್ಟು ಸುಲಭದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಈ ಮೊದಲೇ ಒಂದು ಸೋಲಿಗೆ ಸೋತು ಮನಸ್ಸು ಭಯಭೀತವಾಗಿರುವುದರಿಂದ, ಈ ದಾರಿಯಲ್ಲಿ ಚಲಿಸುವಾಗಲೂ ಆತ್ಮಸಾಕ್ಷಿ ಕೈ ಕೊಡಬಹುದು.
( ಉದಾಹರಣೆಗೆ: ಒಂದು ಬಾವಿ/ಕೊಳವೆಬಾವಿ ತೋಡಿ ಅದರಲ್ಲಿ ನೀರು ಸಿಗದೇ ಹೋದರೆ, ಮತ್ತೆ ಆ ತೋಡುವಿಕೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ.)
ಅದೇರೀತಿ ನಮ್ಮ ಗುರಿಯು ಈ ದಾರಿಯಲ್ಲಾಗಿ ತಲುಪಲು ಸಾಧ್ಯವಿಲ್ಲ ಎಂದು ಸತ್ಯ ಮನವರಿಕೆಯಾದಲ್ಲಿ ಅದನ್ನು ಮುಂದುವರಿಸಕೂಡದು. ಆದರೆ, ಸಣ್ಣ ಸೋಲೇ ದೊಡ್ಡ ಸವಾಲೆಂದು ಭಾವಿಸಿ ಹಿಂದೆ ಸರಿಯುವುದು ಹೇಡಿಯ ಗುಣ ಎಂಬುದರಲ್ಲಿ ಸಂದೇಹವಿಲ್ಲ.
ಸಾಧನೆ ಎಂಬುದು ಸಾಧಕನ ಸೊತ್ತು
ಅದು ಅವನಿಗೆ ಸಿಗೋದು ಸಾದಿಸಿದ ಹೊತ್ತು
ಆತನಿಗೆ ಮಾತ್ರ ಗೊತ್ತು ಆ ಪಟ್ಟದ ಕರಾಮತ್ತು
BEST OF LUCK